ವಿಭಾಗಗಳು

ಸುದ್ದಿಪತ್ರ


 

ಭಾರತೀಯ ಇತಿಹಾಸದ ಹಿಂದಿರುವ ರಾಜಕಾರಣ..

ಅಶೋಕನಂತೆ ಇತಿಹಾಸದಲ್ಲಿ ಹೆಸರು ಗಳಿಸಿದ ಮತ್ತೊಬ್ಬ ರಾಜ ಕುಶಾನರ ದೊರೆ ಕನಿಷ್ಕ. ಇವರಿಬ್ಬರ ಬದುಕಿನಲ್ಲೂ ಇತಿಹಾಸಕಾರ ಮ್ಯಾಕ್ಸ್ ಡೀಗ್ ಸಾಮ್ಯತೆ ಗುರುತಿಸುತ್ತಾರೆ. . ಅಶೋಕ ಮೂರನೇ ಸಂಘ ಸಭೆಯನ್ನು ಪಾಟಲಿಪುತ್ರದಲ್ಲಿ ನಡೆಸಿದರೆ ಕನಿಷ್ಕ ನಾಲ್ಕನೆಯದನ್ನು ಕಾಶ್ಮೀರದಲ್ಲಿ ಆಯೋಜಿಸಿದ್ದ. ಅಶೋಕ ಶ್ರೀಲಂಕಾಕ್ಕೆ ಬೌದ್ಧ ಮತ ವಿಸ್ತರಿಸಿದರೆ, ಚೀನಾದಲ್ಲಿ ಬುದ್ಧನ ಚಿಂತನೆಗಳು ಹರಡಲು ಕನಿಷ್ಕ ಕಾರಣನಾದ. ಅನೇಕ ಸ್ತೂಪ-ವಿಹಾರಗಳನ್ನೂ ನಿಮರ್ಿಸಿದ. ಅಷ್ಟಾದರೂ ಬ್ರಿಟೀಷರಿಗೆ ಮತ್ತು ಭಾರತದ ಎಡಪಂಥೀಯ ಇತಿಹಾಸಕಾರರಿಗೆ ಕನಿಷ್ಕ ಪ್ರಿಯವೆನಿಸಲಿಲ್ಲ ಏಕೆ? ಉತ್ತರ ಕಠಿಣವಲ್ಲ. ಆತ ಸಂಘಕ್ಕೆ ಶರಣು ಹೋದ ನಂತರವೂ ಕನಿಷ್ಕ ತನ್ನ ಸೈನ್ಯ ಕಾಯರ್ಾಚರಣೆಯನ್ನು ಎಂದಿಗೂ ನಿಲ್ಲಿಸಲಿಲ್ಲ. ಬುದ್ಧನನ್ನು ಧ್ಯಾನಿಸುತ್ತಲೇ ತನ್ನ ಗಡಿ ವಿಸ್ತರಣೆಯ ಚಟುವಟಿಕೆಯನ್ನೂ ಮುಂದುವರಿಸಿಯೇ ಇದ್ದ. ಹೀಗಾಗಿಯೇ ಬೌದ್ಧ ಸಾಹಿತ್ಯಗಳು ಕನಿಷ್ಕ ತನ್ನ ಸಾವಿನ ನಂತರದ ಬದುಕಲ್ಲಿ ದುಃಖ ಅನುಭವಿಸಬೇಕಾಯ್ತೆಂದು ಉಲ್ಲೇಖಿಸಿರುವುದನ್ನು ಡೀಗ್ ನೆನಪಿಸುತ್ತಾರೆ. ಬಹುಶಃ ಇತಿಹಾಸದ ಹಿಂದಿರುವ ರಾಜಕಾರಣ ಈಗ ಅರ್ಥವಾಗಿರಬೇಕು.

2

‘ನಾವು ಓದಿರೋದೇ ಬೇರೆ, ನೀವು ಹೇಳ್ತಿರೋದೇ ಬೇರೆ’ ಹಾಗಂತ ಅನೇಕರು ಭಾರತೀಯ ಇತಿಹಾಸದ ನೈಜ ಚಿತ್ರಣ ಕೇಳಿ ಪ್ರತಿಕ್ರಿಯಿಸೋದನ್ನು ನೋಡಿದ್ದೇನೆ. ಭಾರತದ ಇತಿಹಾಸವನ್ನು ತಮಗೆ ಬೇಕಾದಂತೆ ರಚಿಸಿ ಪ್ರಸ್ತುತ ಪಡಿಸಿದ ಎಡಪಂಥೀಯರ ಕುಕರ್ಮ ಅದು. ಹೊಸ-ಹೊಸ ಸಂಶೋಧನೆಗಳಾಗುತ್ತಿದ್ದಂತೆ ಅವರ ವರಸೆಗಳೇ ಬದಲಾಗುತ್ತಿವೆ. ಕಳೆದ ವರ್ಷ ಸಭೆಯೊಂದರಲ್ಲಿ ಮಾತನಾಡುತ್ತ ರೋಮಿಲಾ ಥಾಪರ್ ‘ಆರ್ಯರು ಭಾರತೀಯರೋ, ಹೊರಗಿನವರೋ ಎಂಬುದು ಈಗ ಚಚರ್ೆಯಾಗಬೇಕಾದ ವಿಷಯವೇ ಅಲ್ಲ’ ಎಂದು ಗುಡುಗಿದ್ದರು. ದಶಕಗಟ್ಟಲೆ ಅಂತಹುದೊಂದು ಸಿದ್ಧಾಂತ ಸುಳ್ಳೆಂದು ಗೊತ್ತಿದ್ದರೂ ಅದಕ್ಕೆ ಜೋತಾಡಿಕೊಂಡಿದ್ದ ಆಕೆ ಜಾಗತಿಕವಾಗಿ ಈ ಸಿದ್ಧಾಂತ ಧಿಕ್ಕರಿಸಲ್ಪಟ್ಟನಂತರ ತನ್ನ ದಿಕ್ಕನ್ನೇ ಬದಲಾಯಿಸಿಬಿಟ್ಟಿದ್ದಾರೆ. ಗೋಸುಂಬೆಗಳೂ ಇವರನ್ನು ಕಂಡು ನಾಚಬೇಕು. ಇವರ ವಾದಗಳು ಹೇಗಿರುತ್ತವೆ ನೋಡಿ. ಮೊದಲೆಲ್ಲ ಬಲಿಕೊಡುವ ನೆಪದಲ್ಲಿ ಮಾಂಸ ಭಕ್ಷಣೆ ಮಾಡುತ್ತಿದ್ದ ಬ್ರಾಹ್ಮಣರನ್ನು ಬುದ್ಧ ವಿರೋಧಿಸಿದನಂತೆ. ಬ್ರಾಹ್ಮಣರ ವಿರೋಧ ಕಟ್ಟಿಕೊಂಡ ಅವನ ಅನುಯಾಯಿಗಳು ಮುಂದೆ ದೇಶ ಬಿಟ್ಟು ಓಡಿಹೋಗಬೇಕಾಯ್ತಂತೆ. ಆನಂತರ ಆದ ಬದಲಾವಣೆ ಏನು ಗೊತ್ತೇ? ಬ್ರಾಹ್ಮಣರು ಬುದ್ಧನ ಅನುಯಾಯಿಗಳಂತೆ ಪೂರ್ಣ ಸಸ್ಯಾಹಾರಿಗಳಾದರಂತೆ ಅತ್ತ ಬುದ್ಧನ ಅನುಯಾಯಿಗಳ ಪಾಲಿಗೆ ಮಾಂಸ ತಿನ್ನುವುದು ಆಹಾರದ ಸಂಸ್ಕೃತಿಯಾಯ್ತಂತೆ! ಹೇಗಿದೆ ಈ ವಾದಗಳು? ತಮಗೆ ಬೇಕಾದಾಗ, ಬೇಕಾದ್ದನ್ನು ಬಳಸಿ ಬಿಸಾಡುವ ಕಲೆ ಇವರಿಗೆ ಕರತಲಾಮಲಕ. ಅಶೋಕನನ್ನೂ ಇವರುಗಳು ಹೀಗೆಯೇ ಬಳಸಿಕೊಂಡಿದ್ದು. ಅವನ ಕ್ರೌರ್ಯವನ್ನು ಅಗತ್ಯ ಮೀರಿ ಹಿಗ್ಗಿಸಿದರು, ಬುದ್ಧನ ಮೂಲಕ ಅವನನ್ನು ಬಗ್ಗಿಸಿದರು. ಕೊನೆಗೆ ಯುದ್ಧ ಮಾಡದಿರುವ ನಿರ್ಣಯ ಕೈಗೊಂಡ ಅವನನ್ನು ಅಂಬಾರಿಯ ಮೇಲಿಟ್ಟು ಮೆರವಣಿಗೆ ಮಾಡಿಸಿದರು. ಬುದ್ಧನ ಶಾಂತಿ-ಅಹಿಂಸೆಗಳನ್ನು ಭಾರತೀಯರು ಆವಾಹಿಸಿಕೊಳ್ಳುವಂತೆ ಮಾಡಿದರೆ ತಾವು ಸುರಕ್ಷಿತವಾಗಿರಬಹುದೆಂಬ ಭರವಸೆ ಬ್ರಿಟೀಷರಿಗಿತ್ತು. ಒಟ್ಟಾರೆ 30 ಕೋಟಿ ಭಾರತೀಯರನ್ನು ಆಳುತ್ತಿದ್ದವರು 30 ಲಕ್ಷ ಬ್ರಿಟೀಷರಲ್ಲವೇ? ರೊಚ್ಚಿಗೇಳದ ಭಾರತೀಯರನ್ನು ನಿಮರ್ಾಣ ಮಾಡಿದರೆ ಶಾಶ್ವತ ಆಳ್ವಿಕೆಯ ಖಾತ್ರಿ ಅವರಿಗಿತ್ತು.
ಅವರು ಅಂದುಕೊಂಡಂತೆ ಆಯ್ತು. ಕಾಲಕ್ರಮದಲ್ಲಿ ಭಾರತದಲ್ಲಿ ಅಶೋಕನ ಕಥೆ ಎಲ್ಲೆಡೆಯೂ ಹರಿದಾಡಿದವು. ಯುದ್ಧ ಬೇಡ, ರಕ್ತ ಹರಿಸುವುದು ಬೇಡವೆಂದ ಅಶೋಕ ಆದರ್ಶವಾಗುವಂತೆ ಬಿಳಿಯರು ನೋಡಿಕೊಂಡರು. ಯಾವ ದೇಶ ತನ್ನ ಕ್ಷಾತ್ರ ಬಲದಿಂದಲೇ ಗಡಿಯ ರೇಖೆಗಳನ್ನು ವಿಸ್ತಾರ ಮಾಡಿತ್ತೋ ಆ ದೇಶಕ್ಕೆ ತಾನು ಮತ್ತೊಬ್ಬರ ಮೇಲೆ ದಾಳಿಗೈಯ್ಯಲಿಲ್ಲ ಎಂದು ಹೇಳಿಕೊಳ್ಳುವುದೇ ಆನಂದವಾಯ್ತು. ಮಹಾಭಾರತದ ಯುದ್ಧಗಳು, ಕೃಷ್ಣ ನಡೆಸಿದ ಸಂಹಾರಗಳು ಅದಕ್ಕೂ ಮುನ್ನ ಲಂಕೆಯವರೆಗೂ ಸಾಗಿ ರಾವಣನ ಸೇನೆಗೆ ಮಣ್ಣು ಮುಕ್ಕಿಸಿದ ರಾಮ ಇವೆಲ್ಲ ನಮ್ಮದೇ ಇತಿಹಾಸವಾಗಿರಲಿಲ್ಲವೇನು? ಎಲ್ಲ ಬಿಡಿ. ವಿಶ್ವಾಮಿತ್ರರೊಂದಿಗೆ ಕಾಡಿನಲ್ಲಿ ಸಾಗುವಾಗ ತಾಟಕೆಯ ಸಂಹಾರದ ಕಾಲಕ್ಕೆ ಗೊಂದಲಕ್ಕೊಳಗಾದ ರಾಮನಿಗೆ ಆತತಾಯಿಗಳು ಸ್ತ್ರೀಯರಾದರೂ ಸರಿ, ಸಂಹರಿಸಲೇಬೇಕು ಎಂಬ ವಿಶ್ವಾಮಿತ್ರರ ಮನೋಜ್ಞ ಮಾತುಗಳು ಮರೆಯುವಂತೆ ಮಾಡಿತಲ್ಲ ಬಿಳಿಯರ ಪಡೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿಯೇ ಗಾಂಧೀಜಿ ಶಾಂತಿ-ಅಹಿಂಸೆಯ ಮಾತಾಡಿದಾಗ ಇಡಿಯ ದೇಶ ಅಂತಹದೊಂದು ಕೂಗಿಗೆ ಒಕ್ಕೊರಲ ದನಿಗೂಡಿಸಿತು. ಮುಂದೆ ನೆಹರೂ ದೇಶದ ಪ್ರಧಾನಿಯಾದ ಮೇಲೆ ಪಂಚಶೀಲದ ಕಲ್ಪನೆ ತರಲಿಕ್ಕೂ ಅಶೋಕನ ಭ್ರಮಗಳೇ ಕಾರಣ. ನೆಹರೂ ಇಂದಿರಾಗಾಂಧಿಗೆ ಬರೆದ ಪತ್ರದಲ್ಲಿ ಅಶೋಕನ ಗುಣಗಾನ ಮನಬಿಚ್ಚಿ ಮಾಡಿರುವುದೇ ಇದಕ್ಕೆ ಸಾಕ್ಷಿ. ರೀನ್ಕೋಟರ್್ ತನ್ನ ಕೃತಿಯಲ್ಲಿ ‘ಭಾರತ ಜವಾಹರ್ಲಾಲ್ ನೆಹರೂರಲ್ಲಿ ಚಕ್ರವತರ್ಿ ಅಶೋಕನ ಮರು ಜನ್ಮವನ್ನು ಕಂಡಿತ್ತು’ ಎಂದು ಉದ್ಗರಿಸಿದ್ದೂ ಅದಕ್ಕೇ.

4

ಜವಹರ್ಲಾಲ್ ನೆಹರೂ ಅಶೋಕನಿಂದ ಬಹುವಾಗಿ ಪ್ರಭಾವಕ್ಕೆ ಒಳಗಾಗಿದ್ದರು. ಭಾರತದ ಸಾಂಸ್ಕೃತಿಕ ಪರಂಪರೆಯ ನಿರಂತರತೆಗೆ ಅಶೋಕನ ಆಳ್ವಿಕೆಯೇ ಕಾರಣವೆಂದು ಅವರು ಬಲವಾಗಿ ನಂಬಿದ್ದರು. ಅಶೋಕನ ಯುದ್ಧ ಮಾಡದಿರುವ ನೀತಿ ಅವರನ್ನು ಬಹುವಾಗಿ ಆಕಷರ್ಿಸಿತ್ತು. ಭಾರತ ಮತ್ತೆ ಅದೇ ದಾರಿಯಲ್ಲಿ ಹೆಜ್ಜೆ ಇಡಬೇಕೆಂದು ಅವರ ಅಭಿಮತವಾಗಿತ್ತು. ಭಾರತವಷ್ಟೇ ಅಲ್ಲ ಸಮಸ್ತ ಏಷಿಯಾ, ಸಾಧ್ಯವಾದರೆ ಸಮಗ್ರ ಜಗತ್ತು! ಮಾಚರ್್ 1947 ರಲ್ಲಿ ದೆಹಲಿಯಲ್ಲಿ ಸಭೆ ಸೇರಿದ್ದ ‘ಏಷಿಯನ್ ರಿಲೇಷನ್ ಕಾನ್ಫರೆನ್ಸ್’ನಲ್ಲಿ ನೆಹರೂ ‘ಅಣುಶಕ್ತಿಯ ಯುಗದಲ್ಲಿ ಏಷಿಯ ಶಾಂತಿಯತ್ತ ಹೆಜ್ಜೆ ಇಡಬೇಕಿದೆ. ಏಷಿಯಾ ತನ್ನ ಕರ್ತವ್ಯ ನಿಭಾಯಿಸದಿದ್ದರೆ ಶಾಂತಿ ಮರೀಚಿಕೆ. ತನ್ನೊಳಗೆ ಸಾಕಷ್ಟು ಸಮಸ್ಯೆಗಳಲ್ಲಿ ಸಿಲುಕಿದ್ದರೂ ಏಷಿಯಾದ ರಾಷ್ಟ್ರಗಳು ಸಾಕಷ್ಟು ಶಾಂತಿಯಿಂದಿವೆ. ಜಾಗತಿಕ ಶಾಂತಿಗೆ ಏಷಿಯಾ ಈಗ ಶ್ರಮಿಸಬೇಕಿದೆ’ ಎಂದೆಲ್ಲ ಭಾಷಣ ಮಾಡಿದರು. ಆಗಲೇ ಅವರ ತಲೆಯಲ್ಲಿ ಪಂಚಶೀಲದ ತತ್ತ್ವ ಮೊಳಕೆಯೊಡೆದಿತ್ತು. ಮುಂದೆ ಅದು ವಿಶಾಲ ವೃಕ್ಷವಾಗಿ ಅಲಿಪ್ತ ನೀತಿಗೆ ಭಾರತ ಮುನ್ನುಡಿ ಬರೆಯಿತು. ಕೊನೆಗೆ ಯುದ್ಧ ಮಾಡದ ಚಿಂತನೆಯೇ ಅವರನ್ನು ಪಾಕೀಸ್ತಾನದೊಂದಿಗೆ ಮತ್ತು ಚೀನಾದೆದುರಿಗೆ ಒಂದೊಂದು ಯುದ್ಧ ಮಾಡುವ ಅನಿವಾರ್ಯತೆ ಸೃಷ್ಟಿಸಿತು. ಚೀನಾದೊಂದಿಗೆ ಹೀನಾಯವಾಗಿ ಯುದ್ಧ ಸೋಲುವಲ್ಲಿ ನೆಹರೂರವರ ಭ್ರಮೆಗಳೇ ಕಾರಣವಾಗಿದ್ದವು. ಆ ಭ್ರಮೆ ಅಶೋಕನಿಗಿದ್ದಂಥವೇ ಆಗಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ!
ಅಶೋಕ ತನ್ನ ಪೂರ್ವಜರ ಆಶಯಕ್ಕೆ ತಕ್ಕಂತೆ ಬದುಕಲೇ ಇಲ್ಲ. ಅವನಿಗೆ ಯುದ್ಧ ಬೇಡವೆನಿಸಿತ್ತು. ಪ್ರೀತಿಯಿಂದ ಎಲ್ಲರನ್ನೂ ಗೆದ್ದರೆ ಸಾಕೆಂಬ ನಿರ್ಣಯಕ್ಕೆ ಬಂದಿದ್ದ. ಬುದ್ಧ ಪ್ರೀತಿಯಿಂದ ಜಗತ್ತನ್ನು ಗೆಲ್ಲುವ ಮುನ್ನ ಸಿಂಹಾಸನ ತ್ಯಾಗ ಮಾಡಿದ್ದನ್ನು ಅವನು ಮರೆತಂತಿತ್ತು. ಚಂದ್ರಗುಪ್ತ ವಿಸ್ತಾರವಾದ ಸಾಮ್ರಾಜ್ಯ ಕಟ್ಟಿದನಲ್ಲ ಅವನ ಬಳಿ ನಂದರಿಗಿಂತಲೂ ಅಗಾಧವಾದ ಸೇನೆ ಇತ್ತು. ನಂದರ ಬಳಿ 2 ಲಕ್ಷ ಸೈನಿಕರಿದ್ದರೆ, ಚಂದ್ರಗುಪ್ತನ ಬಳಿ ಕನಿಷ್ಠ 6 ಲಕ್ಷ ಸೈನಿಕರಿದ್ದರು. 30 ಸಾವಿರದಷ್ಟು ಅಶ್ವದಳ, 9 ಸಾವಿರದಷ್ಟು ಆನೆಗಳಿದ್ದವು. ಚಾಣಕ್ಯನ ನೀತಿಯಂತೆಯೇ ಸದಾ ಯುದ್ಧ ಸನ್ನದ್ಧವಾಗಿರುತ್ತಿದ್ದ ಈ ಪಡೆ ರಥ, ಆನೆ, ಕುದುರೆ, ಕಾಲಾಳುಗಳ ಚದುರಂಗ ಬಲದೊಂದಿಗೆ, ಸಾಗಾಣಿಕೆಯ ಜನರು, ನೌಕಾಸೇನೆ, ಬೇಹುಗಾರ ಪಡೆ, ಮತ್ತು ದೇಶಿಕಾ ಎನ್ನಲ್ಪಡುವ ಸ್ಥಳೀಯ ಜನರ ತುಕಡಿಯೊಂದಿಗೆ ಆಧುನಿಕ ರೂಪ ಪಡೆದಿತ್ತು. ಸಶಕ್ತವಾಗಿದ್ದ ಈ ಬಗೆಯ ಸೇನೆಯ ಕಾರಣದಿಂದಾಗಿಯೇ ಮೌರ್ಯ ಸಾಮ್ರಾಜ್ಯ ಅಭೇದ್ಯವಾಗಿ ನಿಂತಿತ್ತು. ಬಿಂದುಸಾರ ಇದನ್ನು ಮತ್ತೂ ಗಟ್ಟಿಗೊಳಿಸಿದ್ದ. ಆದರೆ ಅಶೋಕ ಎಲ್ಲವನ್ನೂ ಮಣ್ಣುಗೂಡಿಸಿದ. ಶಸ್ತ್ರ ಮತ್ತು ಶಾಸ್ತ್ರಗಳನ್ನು ಸರಿದೂಗಿಸುವಲ್ಲಿ ಆತ ಸೋತುಹೋಗಿದ್ದ. ಸ್ವತಃ ಚಂದ್ರಗುಪ್ತ ವೈದಿಕ ಚಾಣಕ್ಯನ ಶಿಷ್ಯನಾಗಿದ್ದರೂ ಕೊನೆಗಾಲದಲ್ಲಿ ಜೈನಮತ ಸ್ವೀಕಾರ ಮಾಡಿದ ಎನ್ನಲಾಗುತ್ತದೆ. ಆದರೆ ಜೈನ ಮತಕ್ಕೆ ತಕ್ಕಂತೆ ಬದುಕುವ ನಿಶ್ಚಯ ಮಾಡಿದೊಡನೆ ಆತ ತನ್ನೆಲ್ಲಾ ಹೊಣೆಗಾರಿಕೆಯನ್ನು ಮಗನ ಹೆಗಲಿಗೆ ಹೊರಿಸಿ ತಾನು ಸಲ್ಲೇಖನ ವ್ರತಕ್ಕೆಂದು ಹೊರಟೇಬಿಟ್ಟ. ಸಾಮ್ರಾಜ್ಯ ಉಳಿಯಿತು.

3

ಇತಿಹಾಸಜ್ಞ ರಾಯಚೌಧರಿ ತಮ್ಮ ಕೃತಿಯಲ್ಲಿ ಅಶೋಕನ ಅಹಿಂಸಾ ತತ್ತ್ವದ ಅನುಸರಣೆಯಿಂದಾಗಿಯೇ ಭಾರತೀಯ ಸೇನೆ ತನ್ನ ಕಸುವನ್ನು ಕಳೆದುಕೊಂಡಿತೆಂದು ಆರೋಪಿಸುತ್ತಾರೆ. ಅಷ್ಟೇ ಅಲ್ಲ ಈ ಕಾರಣದಿಂದಾಗಿಯೇ ಮುಂದೆ ಗ್ರೀಕರ ಆಕ್ರಮಣವನ್ನು ಎದುರಿಸುವಲ್ಲಿ ಭಾರತ ಸೋತಿತೆಂದೂ ಹೇಳುತ್ತಾರೆ. ಅಶೋಕ ತನ್ನ ಮಕ್ಕಳಿಗೂ ಇದೇ ಚಿಂತನೆಯನ್ನುಣಿಸಿ ಬೆಳೆಸಿಬಿಟ್ಟಿದ್ದ. ಹೀಗಾಗಿ ಬಾಲ್ಯದಿಂದಲೇ ಕ್ಷಾತ್ರತೇಜದಿಂದ ದೂರವುಳಿದಿದ್ದ ಇವರು ಮುಂದೆ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸೋತು ಹೋದರು. ಅಶೋಕ ತೀರಿಕೊಂಡ ಕೆಲವು ದಶಕಗಳಲ್ಲಿಯೇ ಮೌರ್ಯ ಸಾಮ್ರಾಜ್ಯ ನಾಶವಾಗಿ ಹೋಗಲೂ ಇದೇ ಒಂದು ಮಹತ್ವದ ಕಾರಣವೆಂಬುದನ್ನು ಒಪ್ಪಲೇಬೇಕು. ಅಶೋಕ ಬದುಕಿದ್ದಾಗಲೇ ರಾಜ್ಯದ ಮೇಲಿನ ತನ್ನ ಹಿಡಿತ ಕಳಕೊಂಡುಬಿಟ್ಟಿದ್ದ. ಅನೇಕ ಕಡೆ ದಂಗೆಗಳೂ ಆಗಿದ್ದವು. ಅಶೋಕನ ಗಮನವೆಲ್ಲ ಧರ್ಮವಿಜಯದತ್ತಲೇ ಕೇಂದ್ರೀಕೃತವಾಗಿದ್ದರಿಂದ ಮಂತ್ರಿಗಳು ತಮಗಿಚ್ಛೆಬಂದಂತೆ ಆಡಳಿತ ನಡೆಸುತ್ತಿದ್ದರು. ಅವರ ದರ್ಪದ ನಡವಳಿಕೆ ಸಹಿಸದೇ ತಕ್ಷಶಿಲಾ ತಿರುಗಿಬಿದ್ದಿತ್ತು. ಅಶೋಕನ ಕಾಲಕ್ಕೆ ತೆರಿಗೆಯೂ ಸಾಕಷ್ಟು ಹೇರಲಾಗಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಮೊದಲೆಲ್ಲ ಯುದ್ಧಾನಂತರ ಸೋತ ರಾಜರು ಅಪರ್ಿಸುತ್ತಿದ್ದ ಕಾಣಿಕೆಯಿಂದ ಬೊಕ್ಕಸ ತುಂಬುತ್ತಿತ್ತು. ಯುದ್ಧಗಳೇ ನಿಂತು ಹೋದ ಮೇಲೆ ಜನರ ಮೇಲೆ ಹೆಚ್ಚು ಹೆಚ್ಚು ತೆರಿಗೆ ಹೇರಲೇಬೇಕಾಯ್ತು. ಅರ್ಥಶಾಸ್ತ್ರವೇ ಎಲ್ಲದರ ಮೇಲೂ ತೆರಿಗೆ ಹಾಕುವ ಪರವಾನಗಿ ಕೊಟ್ಟದ್ದರಿಂದ ಅಶೋಕ ಎಲ್ಲೆಡೆಯಿಂದಲೂ ಬೊಕ್ಕಸ ತುಂಬಿಸುವ ಪ್ರಯತ್ನ ಮಾಡಿದ. ಹಾಗಂತ ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಿಲ್ಲ, ಬೌದ್ಧ ಭಿಕ್ಷುಗಳಿಗೆ, ವಿಹಾರಗಳಿಗೆ ಧರ್ಮದಾನ ನೀಡಲು ಬಳಸಿಕೊಂಡ. ಬರುಬರುತ್ತ ಅಶೋಕನ ಕಾಲದ ನಾಣ್ಯಗಳಿಗೆ ಮೌಲ್ಯವೇ ಉಳಿದಿರಲಿಲ್ಲ ಎನ್ನುತ್ತಾರೆ. ಉತ್ಖನನದ ವೇಳೆ ಸಿಕ್ಕ ನಾಣ್ಯಗಳಲ್ಲಿದ್ದ ಬೆಳ್ಳಿಯ ಅಂಶಗಳನ್ನು ಪರೀಕ್ಷಿಸಿದ ತಜ್ಞರಂತೂ ಆಡಳಿತ ದೃಢವಾಗಿರಲಿಲ್ಲವಾದ್ದರಿಂದ ಅವರವರೇ ಟಂಕಿಸಿ ಚಲಾವಣೆಗೆ ಬಳಸುತ್ತಿದ್ದರೆಂದೂ ಅಭಿಪ್ರಾಯ ಪಡುತ್ತಾರೆ!
ಬಲು ದೊಡ್ಡ ಸಮಸ್ಯೆ ಅಶೋಕನ ಕಡೆಯಿಂದ ಆದದ್ದೆಂದರೆ ಧಾಮರ್ಿಕ ಚಟುವಟಿಕೆಗಳ ನಿಯಂತ್ರಣಕ್ಕೆಂದು ಮಹಾಮಾತ್ಯರನ್ನು ನೇಮಿಸಿದ್ದು. ಇವರು ಎಲ್ಲಾ ವಿಧಿ-ವಿಧಾನಗಳಲ್ಲಿ ಮೂಗು ತೂರಿಸಿ ಜನ ಬೌದ್ಧ ಮತಕ್ಕೆ ಪರಿವರ್ತನೆಗೊಳ್ಳುವಂತೆ ಪ್ರಭಾವ ಬೀರುತ್ತಿದ್ದರು. ಭಾರತದಲ್ಲಿ ಎಂದಿಗೂ ಜನಸಾಮಾನ್ಯರ ಮೇಲೆ ಧಾಮರ್ಿಕ ಭಾವನೆಗಳ ಹೇರಿಕೆ ನಡೆದಿಲ್ಲ. ಹಾಗೆ ಧಮರ್ಾಂತರದ ಪ್ರಯತ್ನ ನಡೆದಾಗಲೆಲ್ಲ ರಾಜ ಪ್ರಭುತ್ವಗಳು ತರಗಲೆಗಳಂತೆ ಉದುರಿವೆ. ಮೊಘಲರ ಕಾಲಕ್ಕೆ, ಬ್ರಿಟೀಷರ ಕಾಲಕ್ಕೆ ನಡೆದ ಘಟನಾವಳಿಗಳನ್ನು ಒಮ್ಮೆ ಮೆಲುಕು ಹಾಕಿ. ನಿಮಗೇ ಅರಿವಾದೀತು. ಅಶೋಕ ಜನರ ದೇವರ ಕೋಣೆಗೆ ಕೈ ಹಾಕಿದ್ದ. ಅತ್ತ ಅಶೋಕನ ನಂತರ ಬಂದ ರಾಜರುಗಳಂತೂ ಅಶೋಕನ ಬೌದ್ಧ ಪ್ರೇಮವನ್ನು ಅಥರ್ೈಸಿಕೊಳ್ಳುವಲ್ಲಿ ಸೋತರಷ್ಟೇ ಅಲ್ಲ, ಆಡಳಿತ ನಿರ್ವಹಣೆಯನ್ನೂ ಅರಿಯಲಿಲ್ಲ. ಎಲ್ಲ ನಿರ್ಣಯಗಳೂ ಈಗ ರಾಜನಲ್ಲಿ ಕೇಂದ್ರೀಕೃತಗೊಂಡವು. ಆತನೇ ತನಗೆ ಬೇಕಾದವರನ್ನು ಆಯ್ದುಕೊಳ್ಳುತ್ತಿದ್ದ. ಹೀಗಾಗಿ ಪ್ರಜೆಗಳ ಪ್ರೀತಿಯನ್ನು ಗಳಿಸಬಲ್ಲ ಅಧಿಕಾರಿ ವರ್ಗಕ್ಕಿಂತ ರಾಜನನ್ನು ಮೆಚ್ಚಿಸುವ ಅಧಿಕಾರಿಗಳೇ ತುಂಬಿಹೋದರು. ಬರು ಬರುತ್ತ ರಾಜ ಜನರಿಂದ ದೂರವಾದ. ಅಶೋಕ ಜನರಿಗೆ ಹತ್ತಿರವಾಗಿರುವ ಆಡಳಿತದ ಬಗ್ಗೆ ತುಂಬಾ ಮಾತಾಡಿದ ನಿಜ ಆದರೆ ಅವನ ನಂತರದ ರಾಜರಿಗೆ ಅದನ್ನು ತಿಳಿಸಿ ಹೇಳುವಲ್ಲಿ ಆತ ಸೋತ. ಹೀಗಾಗಿಯೇ ಮೌರ್ಯ ರಾಜರು ಜನರಿಂದ ದೂರವಾದರು. ಹಂತ ಹಂತವಾಗಿ ಕುಸಿಯುತ್ತ ಬಂದ ಸಾಮ್ರಾಜ್ಯ ಕೊನೆಗೊಮ್ಮೆ ಪುಷ್ಯಮಿತ್ರನ ಸವಾಲನ್ನು ಎದುರಿಸಲಾಗದೇ ಅಂತ್ಯ ಕಂಡಿತು!
ಅಶೋಕನಂತೆ ಇತಿಹಾಸದಲ್ಲಿ ಹೆಸರು ಗಳಿಸಿದ ಮತ್ತೊಬ್ಬ ರಾಜ ಕುಶಾನರ ದೊರೆ ಕನಿಷ್ಕ. ಇವರಿಬ್ಬರ ಬದುಕಿನಲ್ಲೂ ಇತಿಹಾಸಕಾರ ಮ್ಯಾಕ್ಸ್ ಡೀಗ್ ಸಾಮ್ಯತೆ ಗುರುತಿಸುತ್ತಾರೆ. . ಅಶೋಕ ಮೂರನೇ ಸಂಘ ಸಭೆಯನ್ನು ಪಾಟಲಿಪುತ್ರದಲ್ಲಿ ನಡೆಸಿದರೆ ಕನಿಷ್ಕ ನಾಲ್ಕನೆಯದನ್ನು ಕಾಶ್ಮೀರದಲ್ಲಿ ಆಯೋಜಿಸಿದ್ದ. ಅಶೋಕ ಶ್ರೀಲಂಕಾಕ್ಕೆ ಬೌದ್ಧ ಮತ ವಿಸ್ತರಿಸಿದರೆ, ಚೀನಾದಲ್ಲಿ ಬುದ್ಧನ ಚಿಂತನೆಗಳು ಹರಡಲು ಕನಿಷ್ಕ ಕಾರಣನಾದ. ಅನೇಕ ಸ್ತೂಪ-ವಿಹಾರಗಳನ್ನೂ ನಿಮರ್ಿಸಿದ. ಅಷ್ಟಾದರೂ ಬ್ರಿಟೀಷರಿಗೆ ಮತ್ತು ಭಾರತದ ಎಡಪಂಥೀಯ ಇತಿಹಾಸಕಾರರಿಗೆ ಕನಿಷ್ಕ ಪ್ರಿಯವೆನಿಸಲಿಲ್ಲ ಏಕೆ? ಉತ್ತರ ಕಠಿಣವಲ್ಲ. ಆತ ಸಂಘಕ್ಕೆ ಶರಣು ಹೋದ ನಂತರವೂ ಕನಿಷ್ಕ ತನ್ನ ಸೈನ್ಯ ಕಾಯರ್ಾಚರಣೆಯನ್ನು ಎಂದಿಗೂ ನಿಲ್ಲಿಸಲಿಲ್ಲ. ಬುದ್ಧನನ್ನು ಧ್ಯಾನಿಸುತ್ತಲೇ ತನ್ನ ಗಡಿ ವಿಸ್ತರಣೆಯ ಚಟುವಟಿಕೆಯನ್ನೂ ಮುಂದುವರಿಸಿಯೇ ಇದ್ದ. ಹೀಗಾಗಿಯೇ ಬೌದ್ಧ ಸಾಹಿತ್ಯಗಳು ಕನಿಷ್ಕ ತನ್ನ ಸಾವಿನ ನಂತರದ ಬದುಕಲ್ಲಿ ದುಃಖ ಅನುಭವಿಸಬೇಕಾಯ್ತೆಂದು ಉಲ್ಲೇಖಿಸಿರುವುದನ್ನು ಡೀಗ್ ನೆನಪಿಸುತ್ತಾರೆ. ಬಹುಶಃ ಇತಿಹಾಸದ ಹಿಂದಿರುವ ರಾಜಕಾರಣ ಈಗ ಅರ್ಥವಾಗಿರಬೇಕು.
ಒಟ್ಟಾರೆ ಒಂದನ್ನಂತೂ ಬಲು ಸ್ಪಷ್ಟವಾಗಿ ವಾದಿಸಬಹುದು. ಕಳಿಂಗ ಯುದ್ಧದ ನಂತರ ಅಶೋಕ ಧರ್ಮ ವಿಜಯದ ಭ್ರಮೆಯಲ್ಲಿ ಕ್ಷಾತ್ರ ತೇಜದಿಂದ ದೂರವಾದ. ಸೈನ್ಯ, ಸೈನಿಕ, ಕದನ, ಶಕ್ತಿ ಇವೆಲ್ಲವೂ ದೂಷಿಸಲ್ಪಡಬೇಕಾದ ಸಂಗತಿಗಳಂತಾಗಿಬಿಟ್ಟವು. ಧರ್ಮದ ಹೆಸರಲ್ಲಿ ಕರ್ಮ ಮಾರ್ಗದಿಂದ ದೂರವಾದ ಆಲಸಿಗಳ ಸಂಖ್ಯೆ ಬೆಳೆಯಿತು. ಸ್ವತಃ ಅಶೋಕನೂ ಅಂಥವರ ವಿರುದ್ಧ ಗುಡುಗಿದ ಶಾಸನವೇ ಇದೆ! ಎಲ್ಲಕ್ಕೂ ಮಿಗಿಲಾಗಿ ಅಶೋಕನ ಈ ಯುದ್ಧ ಬೇಡವೆಂಬ ನೀತಿ ಅವನ ಮುಂದಿನ ಪೀಳಿಗೆಗೆ ಹರಡಿ ಮೌರ್ಯ ಸಾಮ್ರಾಜ್ಯ ಶಕ್ತಿ ಹೀನವಾಯ್ತು. ಅಲ್ಲಿಂದಾಚೆಗೆ ಭಾರತೀಯರೊಳಗೆ ಹುದುಗಿ ಹೋದ ಹೇಡಿತನದ, ಆಲಸ್ಯದ, ಗೋಣು ಬಗ್ಗಿಸಿ ಸಹಿಸುವ ಮನೋವೃತ್ತಿಯನ್ನೂ ಬಡಿದಟ್ಟಲು ಶತ-ಶತಮಾನಗಳ ಕಾಲ ಕಾದಾಡಬೇಕಾಯ್ತು. ಸ್ವಾತಂತ್ರ್ಯ ಬಂದ ಮೇಲೂ ‘ಪಂಚಶೀಲ’ದ ಹೆಸರಲಿ ್ಲ ಅದು ನಮ್ಮನ್ನು ಕಾಡಿತು! ಚೀನಾದೆದುರಿಗೆ ದೇಶ ಮಂಡಿಯೂರಿತು.

Comments are closed.