ವಿಭಾಗಗಳು

ಸುದ್ದಿಪತ್ರ


 

ಮತಕೊಟ್ಟದ್ದಾಯ್ತು, ಕೆಲಸ ಮಾಡಿಸಿಕೊಳ್ಳುವುದೂ ನಮ್ಮದೇ ಹೊಣೆ!

ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ. ಮೋದಿಯೊಬ್ಬರಿಲ್ಲದೇ ಹೋಗಿದ್ದರೆ ಕನರ್ಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾಜರ್ುನ ಖಗರ್ೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ.

ಮೋದಿಯ ಹೆಸರಲ್ಲಿ ಚುನಾವಣೆ ಗೆದ್ದ ಎಲ್ಲಾ ಸಂಸದರೂ ಆರಂಭದಲ್ಲಿ ಬೀಗಿದ್ದಂತೂ ನಿಜವೇ. 25 ಸೀಟುಗಳನ್ನು ಜನ ಭಾಜಪಕ್ಕೆ ಕೊಟ್ಟಿದ್ದು ಮೋದಿಯವರ ಹೆಸರು ಹೇಳಿ ಎಂಬುದರಲ್ಲಿ ಅನುಮಾನ ಜನರಿಗಲ್ಲ, ಆಯ್ಕೆಯಾದವರಿಗೂ ಇಲ್ಲ. ಆಡಳಿತ ವಿರೋಧಿ ಅಲೆ ಬಹುತೇಕ ಕನರ್ಾಟಕದ ಎಲ್ಲಾ ಅಭ್ಯಥರ್ಿಗಳಿಗೂ ಇತ್ತು. ಕಳೆದ ಬಾರಿ 17 ಸೀಟುಗಳನ್ನು ಗೆದ್ದುಕೊಂಡ ಭಾಜಪಕ್ಕೆ ಹದಿನೇಳೂ ತಲೆನೋವಿನ ಕ್ಷೇತ್ರವೇ ಆಗಿತ್ತು. ಉಡುಪಿಯಲ್ಲಿ ಶೋಭಾ ಕರಂದ್ಲಾಜೆ, ಮಂಗಳೂರಿನಲ್ಲಿ ನಳಿನ್ಕುಮಾರ್, ಉತ್ತರ ಕನ್ನಡದಲ್ಲಿ ಅನಂತ್ಕುಮಾರ್ ಹೆಗ್ಡೆ, ಬೆಂಗಳೂರು ಉತ್ತರದ ಸದಾನಂದಗೌಡ. ಇನ್ನು ಉತ್ತರಭಾಗದಲ್ಲಿ ಕಾಲಿಟ್ಟರೆ ಕೊಪ್ಪಳ ಕ್ಷೇತ್ರದಲ್ಲೂ ಭಾಜಪ ವಿರೋಧಿ ಅಲೆ ಜೋರಾಗಿಯೇ ಇತ್ತು. ಪ್ರತಾಪ್ಸಿಂಹನ ಗೆಲುವೂ ಕೂಡ ಸುಲಭ ಸಾಧ್ಯವಾದುದೇನಾಗಿರಲಿಲ್ಲ. ಜೊತೆಗೆ ಘಟಬಂಧನ್ ಮಾಡಿಕೊಂಡು ಒಟ್ಟಾದ ಕಾಂಗ್ರೆಸ್ ದಳಗಳ ಬಿಜೆಪಿ ಸೋಲಿಸುವ ಪಿತೂರಿ ರಾಜಕಾರಣ ಬೇರೆ!

9

ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ. ಮೋದಿಯೊಬ್ಬರಿಲ್ಲದೇ ಹೋಗಿದ್ದರೆ ಕನರ್ಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾಜರ್ುನ ಖಗರ್ೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಸೋಲು ಹೀನಾಯವಾಗಿರುತ್ತಿತ್ತು. ಹಾಗಂತ ಗೆಲುವು ಮೋದಿಯವರ ಹೆಸರಿಗಷ್ಟೇ ಅಲ್ಲ. ಅದು ಅವರು ಮಾಡಿದ ಕೆಲಸಕ್ಕೆ, ತೆಗೆದುಕೊಂಡ ನಿರ್ಣಯಗಳಿಗೆ, ರಾಷ್ಟ್ರಹಿತಕ್ಕೆ ಬದ್ಧವಾದ ಅವರ ಬದುಕಿನ ರೀತಿ-ನೀತಿಗಳಿಗೆ. ಕನರ್ಾಟಕದ ಸಂಸದರಿಗೆ ಈಗಿರುವ ದೊಡ್ಡ ಸವಾಲು ಇದೇ. ತಮ್ಮದಲ್ಲದ ಗೆಲುವನ್ನು ಅವರು ಧಿಮಾಕಿನಿಂದ ಸಂಭ್ರಮಿಸುವಂತೆಯೇ ಇಲ್ಲ. ಸದಾ ವಿನೀತರಾಗಿ ತಮ್ಮ ಗೆಲುವನ್ನು ಭಾಜಪದ ರಾಷ್ಟ್ರಮಟ್ಟದ ಸಾಧನೆಗಳಿಗೆ ಮತ್ತು ಜನಸಾಮಾನ್ಯರ ರಾಷ್ಟ್ರಭಕ್ತಿಯ ಪದತಲಕ್ಕೆ ಸಮಪರ್ಿಸಿ ಮುಂದಿನ ಐದು ವರ್ಷ ಅವಡುಗಚ್ಚಿ ಕೆಲಸ ಮಾಡಿದರುಂಟು. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಕೇಳುವ ಚುಚ್ಚುನುಡಿಯನ್ನು ಸಹಿಸಿಕೊಳ್ಳುವುದು ಅಸಾಧ್ಯವೇ ಸರಿ. ಅಂಥದ್ದರಲ್ಲೂ ಭಾಜಪದ ಸಂಸದರ ಧಿಮಾಕನ್ನು ಮೆಚ್ಚಲೇಬೇಕು. ಉಡುಪಿಯಲ್ಲಿ ತನ್ನ ಗೆಲುವು ಸ್ವಯಂ ವರ್ಚಸ್ಸಿನದ್ದೆಂದು ಯಡಿಯೂರಪ್ಪ ಅವರೇ ಹೇಳಿದರೂ ಶೋಭಾ ಕರಂದ್ಲಾಜೆ ಅಲ್ಲಗಳೆಯಲೇಬೇಕು. ಏಕೆಂದರೆ ಆಕೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡುವುದಿಲ್ಲವೆಂದು ಕಾರ್ಯಕರ್ತರು ಹೇಳಿಯಾಗಿತ್ತು. ಮಂಗಳೂರು ಗೆಲ್ಲುವುದು ಕಷ್ಟವಲ್ಲ, ಉಡುಪಿ ಸಾಧ್ಯವಿಲ್ಲ ಎಂಬುದು ಭಾಜಪ ಕಾರ್ಯಕರ್ತರ ಹೇಳಿಕೆಯಾಗಿಬಿಟ್ಟಿತ್ತು. ಬೆಂಗಳೂರು ಉತ್ತರದ ಪರಿಸ್ಥಿತಿ ಏನು ಭಿನ್ನವಲ್ಲ. ಬಿಜೆಪಿಯ ಆಂತರಿಕ ಸವರ್ೇ 22 ಸೀಟು ಗೆಲ್ಲುತ್ತೇವೆ ಎಂದು ಪದೇ ಪದೇ ಹೇಳುತ್ತಿತ್ತಲ್ಲ, ಅದರಲ್ಲಿ ಗುಲ್ಬಗರ್ಾ, ತುಮಕೂರು, ಕೋಲಾರಗಳಿದ್ದವು. ಬೆಂಗಳೂರು ಉತ್ತರವೇ ಇರಲಿಲ್ಲ. ಸದಾನಂದಗೌಡರು ಈ ಹಿಂದಿನ ಐದು ವರ್ಷಗಳಲ್ಲಿ ಮಾಡಿದ್ದಕ್ಕಿಂತ ಮಾಡದೇ ಉಳಿದದ್ದೇ ಹೆಚ್ಚು. ಅನಂತ್ಕುಮಾರ್ರವರನ್ನು ನೇಪಥ್ಯಕ್ಕೆ ಸರಿಸಲೆಂದೇ ಕೇಂದ್ರಸಕರ್ಾರದಲ್ಲಿ ಕೊಟ್ಟ ಮಹತ್ವದ ರೈಲ್ವೇ ಇಲಾಖೆಯನ್ನು ಅವರಿಂದ ಉಳಿಸಿಕೊಳ್ಳಲಾಗಲಿಲ್ಲ. ರೈಲ್ವೇಯ ಊಟೋಪಚಾರದ ವಿಚಾರದಲ್ಲಿ ಒಂದಷ್ಟು ಅನವಶ್ಯಕ ಒಪ್ಪಂದಗಳಲ್ಲಿ ಮೂಗುತೂರಿಸುತ್ತಿದ್ದಾರೆಂದು ಗೊತ್ತಾದೊಡನೆ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಅತ್ಯಂತ ಪ್ರಮುಖವಾದ ರೈಲ್ವೇ ಇಲಾಖೆಯಿಂದ ಅವರನ್ನು ಎತ್ತಂಗಡಿ ಮಾಡಿ ಕಳಿಸಿದ್ದು ಯಾವ ಇಲಾಖೆಗೆಂದು ಇಂದು ಅವರಿಗೂ ನೆನಪಿರಲಿಕ್ಕಿಲ್ಲ. ಇತ್ತ ಎತ್ತಿನಹೊಳೆ ವಿಚಾರದಲ್ಲಿ ಮೂಗುತೂರಿಸಿ ತನಗೆ ಜೀವನಕೊಟ್ಟ ದಕ್ಷಿಣ ಕನ್ನಡಕ್ಕೆ ಹೋಗಲಾರದ ಸ್ಥಿತಿಗೆ ತಲುಪಿಬಿಟ್ಟರು. ಇದಕ್ಕೂ ಮುನ್ನ ಯಡ್ಯೂರಪ್ಪನವರ ಕೃಪಾ ಕಟಾಕ್ಷದಿಂದ ಸಿಎಮ್ ಹುದ್ದೆ ಪಡೆದು ಅಲ್ಲಿ ನಡೆಸಿದ ಹಿಮ್ಮೇಳದ ಕಾರಣದಿಂದಾಗಿ ಅಧಿಕಾರವನ್ನೂ ಕಳೆದುಕೊಂಡರು. ಎಲ್ಲಿಯವರೆಗೂ ಈ ಸ್ಥಿತಿ ಮುಂದುವರೆದಿತ್ತೆಂದರೆ ಈ ಬಾರಿ ಅವರಿಗೆ ಸೀಟು ಸಿಗುವುದೇ ಅನುಮಾನವಾಗಿತ್ತು. ಕೊನೆಗೂ ಮೋದಿಯ ಹೆಸರಲ್ಲಿ ಗೆದ್ದು ಈಗ ಅವರು ಹೇಳುತ್ತಿರುವುದೇನು ಗೊತ್ತೇ? ಹೆಸರಿನ ಮುಂದೆ ಇದ್ದ ಜಾತಿ ಸೂಚಕ ಪದದ ಕಾರಣದಿಂದಾಗಿಯೇ ತಾನು ಮಂತ್ರಿಯಾಗಲು ಸಾಧ್ಯವಾಗಿದ್ದು ಅಂತ. ಇದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ಬಲು ಅಸಹ್ಯಕರವಾದ ಸಂಗತಿ. ಸದಾನಂದಗೌಡರ ರಾಜಕೀಯ ಇತಿಹಾಸ ನೋಡಿದವರಿಗೆ ಈ ಹೇಳಿಕೆ ಅಚ್ಚರಿಯದ್ದೇನೂ ಅನಿಸುವುದಿಲ್ಲ. ಆದರೆ ಒಟ್ಟಾರೆ ನರೇಂದ್ರಮೋದಿಯವರನ್ನು ಮುಂದಿಟ್ಟುಕೊಂಡು ಗಮನಿಸುವವರಿಗೆ ಈ ಹೇಳಿಕೆ ಗಾಬರಿ ಹುಟ್ಟಿಸುವಂಥದ್ದೇ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಮತ್ತದೇ ಕಿಚ್ಚುಮಾತುಗಳದ್ದು. ಮೋದಿಯ ಹೆಸರಿನಿಂದ ಗೆದ್ದು ಮಂತ್ರಿಯಾಗಿ ಬೀಗಬೇಡಿ ಎಂಬುದು ಎಲ್ಲಾ ದಿಕ್ಕಿನಿಂದಲೂ ಕೇಳಿಬಂತು. ತಕ್ಷಣಕ್ಕೆ ಸದಾನಂದಗೌಡರು ಕ್ಷಮೆ ಕೇಳಿ ಬಚಾವಾಗಿಬಿಟ್ಟರು. ಇಲ್ಲವಾದಲ್ಲಿ ಅವರ ಈ ಹೇಳಿಕೆ ಧರ್ಮದ ಸಮಗ್ರತೆ ಮತ್ತು ಅಖಂಡತೆಗಳಿಗೆ ಬಲುದೊಡ್ಡ ಹೊಡೆತ ತರಬಲ್ಲುದಾಗಿತ್ತು!

10

ಇತ್ತ ಎಮಜರ್ೆನ್ಸಿ ಆಸ್ಪತ್ರೆಗಾಗಿ ಉತ್ತರಕನ್ನಡದ ಜನ ಹೋರಾಟ ನಡೆಸುತ್ತಿದ್ದು ಸಂಸದ ಅನಂತ್ಕುಮಾರ್ ಹೆಗ್ಡೆಯವರನ್ನು ಭೇಟಿ ಮಾಡಿದರೆ, ರಾಜ್ಯಕ್ಕೆ ಸೇರಿದ ಕೆಲಸ ತಾನು ಮಾಡಲಾರೆ ರಾಜ್ಯ ನನ್ನ ಬಳಿಗೆ ಬಂದರೆ ಕೇಂದ್ರಸಕರ್ಾರದ ಸಹಾಯ ಕೊಡಿಸಬಲ್ಲೆ ಎಂದು ಹೇಳಿ ಮನವಿಪತ್ರ ಕೊಡಲು ಬಂದ ಯುವಕರ ಮುಂದೆ ತಮ್ಮ ಹುಲಿ ರೂಪವನ್ನು ತೋರಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದ ತಾಕಲಾಟಗಳ ನಡುವೆ ಉತ್ತರಕನ್ನಡ ಬಡವಾಗುತ್ತಿದೆಯಲ್ಲಾ ಇದನ್ನು ಸರಿಪಡಿಸುವುದು ಯಾರು? ಒಬ್ಬ ಸಂಸದನಾಗಿ ಆರಾರು ಬಾರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವವ ರಾಜ್ಯ ಸಕರ್ಾರಕ್ಕೆ ಕೇಳಲಾಗದಷ್ಟು ದೈನೇಸಿ ಸ್ಥಿತಿಯಲ್ಲಿರುತ್ತಾನಾ? ಇದು ನನ್ನ ಪಾಲಿಗೆ ಬಲುದೊಡ್ಡ ಪ್ರಶ್ನೆ. ಈ ಕುರಿತಂತೆ ಪ್ರಶ್ನಿಸಿದ ಪತ್ರಕರ್ತರ ಮೇಲೆ ಸಂಸದರು ಹರಿಹಾಯ್ದಿರುವುದು ನೋಡಿದರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಇವರೆಲ್ಲರಿಗೂ ಗೆದ್ದು ಕೂತುತಿಂದು ಅಭ್ಯಾಸವಾಗಿ ಹೋಗಿದೆ. ವೋಟು ಹಾಕಿದ ಮತದಾರ ಪ್ರಭು ಇವರೆಲ್ಲರನ್ನೂ ಮೈಬಗ್ಗಿಸಿ ದುಡಿಯುವಂತೆ ಮಾಡುವ ಸಮಯ ಈಗ ಬಂದಿದೆ. ಮೋದಿಯವರು ಹಗಲೂ-ರಾತ್ರಿ ಕೆಲಸ ಮಾಡುತ್ತಾ ಇವರು ಮಾತ್ರ ಉಂಡು ಕೊಬ್ಬಿ ಏನೂ ಕೆಲಸ ಮಾಡದೇ ಮತ್ತೊಮ್ಮೆ ಮೋದಿಯವರ ಹೆಸರು ಹೇಳಿ ಗೆಲ್ಲುವುದಕ್ಕೆ ಪ್ರಜೆಗಳಾಗಿ ನಾವು ಬಿಡಬಾರದು. ರಾಷ್ಟ್ರನಿಮರ್ಾಣದ ಕೆಲಸದಲ್ಲಿ ನಾವು ಭಾಗಿಯಾಗಬೇಕು, ಇವರೂ ಭಾಗಿಯಾಗುವಂತೆ ಮಾಡಬೇಕು. ಆಗಲೇ ಹೊಸಭಾರತ ನಿಮರ್ಾಣವಾಗೋದು!

Comments are closed.