ವಿಭಾಗಗಳು

ಸುದ್ದಿಪತ್ರ


 

ಮತದಾನಕ್ಕೆ ಮುನ್ನ #ಜಸ್ಟ್ ಆಸ್ಕಿಂಗ್!

ತಾವು ದುಬಾರಿ ವಾಚು ಕಟ್ಟುವ ಮುಖ್ಯಮಂತ್ರಿಗಳು ರಾಜ್ಯವನ್ನು ಮಾತ್ರ ಸಾಲದ ಕೂಪಕ್ಕೆ ತಳ್ಳಿಬಿಟ್ಟರು. ಬಜೆಟ್ನ ವರದಿಯ ಪ್ರಕಾರವೇ ಇದುವರೆಗಿನ ಸಾಲ ಎರಡೂವರೆ ಲಕ್ಷಕೋಟಿಯಾಗಿದ್ದು ಈ ಬಜೆಟ್ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ವೇಳೆಗೆ ಸಾಲದ ಮೊತ್ತ ಸುಮಾರು ಮೂರುಲಕ್ಷಕೋಟಿಗೆ ಹತ್ತಿರವಾಗಿಬಿಟ್ಟಿರುತ್ತದೆ. ಇಷ್ಟೂ ಸಾಲದ ಹೊರೆ 6 ಕೋಟಿ ಕನ್ನಡಿಗರ ಮೇಲೆ ಎಂಬುದನ್ನು ಮರೆತರೂ ನೆನಪಿಟ್ಟುಕೊಂಡರೂ ಸಾಲ ತೀರಿಸಬೇಕಾದವರು ಮಾತ್ರ ನಾವೇ.

ಪ್ರಜಾಪ್ರಭುತ್ವದ ದೊಡ್ಡ ದೋಷ ಜನ ಸಾಮಾನ್ಯರ ಮರೆವು. ಮಾಡಿದ ಒಳ್ಳೆಯ ಕೆಲಸವನ್ನು ಜನ ಹೇಗೆ ಮರೆತು ಬಿಡುವರೋ ಹಾಗೆಯೇ ಸಕರ್ಾರವೊಂದು ಮಾಡಿದ ಕೆಟ್ಟ ಕೆಲಸವನ್ನು ಜನ ಮರೆತುಬಿಡುತ್ತಾರೆ. ಮತದಾನಕ್ಕೆ ಮುನ್ನ ಹಿಂದಿನದ್ದೆಲ್ಲವನ್ನೂ ಒಮ್ಮೆ ನೆನಪಿಸಿಕೊಂಡು ಮತಗಟ್ಟೆಗೆ ಹೋಗುವುದೊಳಿತು. ನಾವು ಮರೆತುಬಿಡುತ್ತೇವೆ ಎನ್ನುವ ಭರವಸೆಯ ಮೇಲೆಯೇ ಎಲ್ಲಾ ಸಕರ್ಾರಗಳೂ ಚುನಾವಣೆಗೆ 6 ತಿಂಗಳ ಮುನ್ನ ರಸ್ತೆಯ ಕೆಲಸ, ಚರಂಡಿ ಕಾಮಗಾರಿ, ಬಜೆಟ್ನಲ್ಲಿ ಜನಪ್ರಿಯವಾಗಬಲ್ಲಂಥ ಸ್ಕೀಮುಗಳ ಘೋಷಣೆ ಮಾಡಿಬಿಡುತ್ತಾರೆ. ಅದರ ಆಧಾರದ ಮೇಲೆಯೇ ಚುನಾವಣೆಗೆ ಹೋಗುವ ಧೈರ್ಯ ಅವರದ್ದು. ಆದರೆ ಪ್ರಜ್ಞಾವಂತ ಮತದಾರ ವೋಟು ಮಾಡುವುದು ಆರು ತಿಂಗಳ ಸಕರ್ಾರಕ್ಕಲ್ಲ, 5 ವರ್ಷಗಳ ಆಡಳಿತದ ವೈಖರಿಗೆ ಎನ್ನುವುದನ್ನು ಮರೆಯದಿರೋಣ. ಹೀಗಾಗಿಯೇ 5 ವರ್ಷಗಳ ಅವಧಿಯ ಕನರ್ಾಟಕ ಸಕರ್ಾರದ ಆಡಳಿತವನ್ನು ಒಮ್ಮೆ ನೆನಪಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಮತ ಹಾಕುವ ಮುನ್ನ ಒಮ್ಮೆ ಗಮನಿಸಿಬಿಡಿ.

1. ಕಳೆದೈದು ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರಿಗಳು ಪ್ರಾಮಾಣಿಕರಾಗಿರುವುದೇ ಅಪರಾಧವೆಂಬಂತಾಗಿತ್ತು. ಅನುಪಮಾ ಶೆಣೈ ಹುದ್ದೆಗೆ ರಾಜಿನಾಮೆ ಕೊಟ್ಟು ಚುನಾವಣೆಗೆ ಸ್ಪಧರ್ಿಸಬೇಕಾಗಿ ಬಂತು. ಸಕರ್ಾರವೇ ಪ್ರಾಯೋಜನೆ ಮಾಡಿ ಮೈಸೂರಿನ ಐಎಎಸ್ ಅಧಿಕಾರಿ ರಶ್ಮಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿಸಿತು. ಡಿ.ಸಿ ಶಿಖಾ ಮುಖ್ಯಮಂತ್ರಿಗಳ ಆಪ್ತನಾಗಿದ್ದ ಮರಿಗೌಡನಿಂದ ಹಲ್ಲೆಗೊಳಗಾದರು. ಈ ಮರಿಗೌಡ ಪೊಲೀಸರಿಂದ ತಪ್ಪಿಸಿಕೊಂಡು ಮುಖ್ಯಮಂತ್ರಿ ಕಛೇರಿಯಲ್ಲೇ ಅಡಗಿ ಕುಳಿತಿದ್ದ ಎಂದು ಅನೇಕ ಪತ್ರಿಕೆಗಳು ವರದಿ ಮಾಡಿದ್ದವು.

2. ಐಪಿಎಸ್ ಅಧಿಕಾರಿ ರೂಪಾ ಜೈಲಿನಲ್ಲಿ ತಮಿಳುನಾಡಿನ ಶಶಿಕಲಾಗೆ ವಿಶೇಷ ಸವಲತ್ತು ನೀಡಲಾಗುತ್ತಿದೆ ಎಂದು ಆರೋಪ ಮಾಡಿದರು. ಇದಕ್ಕಾಗಿ ಸಕರ್ಾರದ ಪ್ರಮುಖರೊಬ್ಬರು 2 ಕೋಟಿ ರೂಪಾಯಿ ಪಡೆದಿದ್ದಾರೆಂಬ ಆರೋಪವೂ ಕೇಳಿಬಂತು. ಶಶಿಕಲಾರಿಗೆ ವಿಶೇಷ ಸವಲತ್ತು ಕೊಡುತ್ತಿರುವ ಸಿಸಿಟಿವಿ ವಿಡಿಯೋ ಸಿಕ್ಕ ನಂತರವೂ ಸಕರ್ಾರ ತಲೆಕೆಡಿಸಿಕೊಳ್ಳದೇ ಆರೋಪ ಮಾಡಿದ ರೂಪಾರನ್ನೇ ಎತ್ತಂಗಡಿ ಮಾಡಿಬಿಟ್ಟಿತು.

3. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕದ ನೆಪದಲ್ಲಿ ಮಹಾ ಅವ್ಯವಹಾರಕ್ಕೆ  ಕೈತೊಳೆದುಕೊಂಡು ಸಿದ್ದವಾಗಿದ್ದ ಸಕರ್ಾರಕ್ಕೆ ಅಡ್ಡಗಾಲಾಗಿ ನಿಂತಿದ್ದ ರೋಹಿಣಿ ಸಿಂಧೂರಿಯನ್ನು ಸ್ವತಃ ಮುಖ್ಯಮಂತ್ರಿ ಆಸ್ಥೆ ವಹಿಸಿ ಎತ್ತಂಗಡಿ ಮಾಡಿದ್ದು ಮರೆಯುವುದು ಹೇಗೆ? ಗಟ್ಟಿಗಿತ್ತಿ ರೋಹಿಣಿ ಸಿಂಧೂರಿ ಸಕರ್ಾರವನ್ನೇ ಎದುರು ಹಾಕಿಕೊಂಡು ಮರಳಿ ಅದೇ ಜಾಗಕ್ಕೆ ಬಂದಿದ್ದು ಸಕರ್ಾರಕ್ಕೆ ಬಲುದೊಡ್ಡ ತಪರಾಕಿಯೇ! ಸೋನಿಯಾ ನಾರಂಗ್ರನ್ನು ಎತ್ತಂಗಡಿ ಮಾಡಿದ್ದರ ಹಿಂದೆ ಇಂಥದ್ದೇ ಒಂದು ದೊಡ್ಡ ಕಾರಣವಿದೆ ಎನ್ನುವುದನ್ನು ಮೇ 12 ರವರೆಗಾದರೂ ಮರೆಯಬೇಡಿ.

4. ಕೆಲವರು ಈ ಸವಾಲುಗಳನ್ನು ಎದುರಿಸಿ ಬಲವಾಗಿ ನಿಂತುಬಿಟ್ಟರು. ಇನ್ನೂ ಕೆಲವರು ತಾಳಲಾಗದೇ ಆತ್ಮಹತ್ಯೆಯನ್ನೇ ಮಾಡಿಕೊಂಡರು. ಡಿವೈಎಸ್ಪಿ ಗಣಪತಿ ಸ್ವತಃ ಸಚಿವ ಜಾಜರ್್ರೇ ಕಿರಿ ಕಿರಿ ಮಾಡುತ್ತಿದ್ದಾರೆಂದು ಕ್ಯಾಮೆರಾದ ಮುಂದೆ ಹೇಳಿಕೆಯನ್ನು ದಾಖಲಿಸಿಯೇ ಆತ್ಮಹತ್ಯೆ ಮಾಡಿಕೊಂಡರು. ಮುಖ್ಯಮಂತ್ರಿಗಳು ನಿಷ್ಪಕ್ಷಪಾತವಾದ ತನಿಖೆಯನ್ನು ಮಾಡಿಸುವುದಿರಲಿ ಸಚಿವರಿಗೆ ಕ್ಲೀನ್ಚಿಟ್ ಕೊಟ್ಟು ಮೃತರ ಕುಟುಂಬಕ್ಕೆ ಅವಮಾನ ಮಾಡಿದರು.

5. ವೇತನದ ಕುರಿತಂತೆ ಮತ್ತು ಹಿರಿಯ ಅಧಿಕಾರಿಗಳು ನಡೆಸಿಕೊಳ್ಳುವ ರೀತಿಯ ಕುರಿತಂತೆ ನೊಂದು  ಈ 5 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಜನ ಪೊಲೀಸರು ಆತ್ಮಹತ್ಯೆ ಮಾಡಿಕೊಂಡರು. ಇದನ್ನು ಪ್ರತಿಭಟಿಸಿ ಪೊಲೀಸರ ನೇತೃತ್ವ ವಹಿಸಿದ್ದ ಶಶಿಧರ್ ಪರಪ್ಪನ ಅಗ್ರಹಾರದಲ್ಲಿ ಕಡು ಕಷ್ಟದ ದಿನಗಳನ್ನು ಕಳೆಯಬೇಕಾಗಿ ಬಂತು. ಒಂದು ಹಂತದಲ್ಲಂತೂ ಅವರನ್ನು ನಿಮ್ಹಾನ್ಸ್ಗೆ ದಾಖಲಿಸಿತ್ತು ಸಕರ್ಾರ!

1

6. ಜನಸ್ನೇಹಿ ಡಿಸಿಯಾಗಿದ್ದ ಡಿ.ಕೆ ರವಿಯವರದ್ದು ಆತ್ಮಹತ್ಯೆಯೆಂದು ಸಾಬೀತು ಪಡಿಸಲು ಸಕರ್ಾರ ಹೆಣಗಾಡಿಬಿಟ್ಟಿತ್ತು. ಅದು ಒತ್ತಟ್ಟಿಗಿರಲಿ. ಡಿ.ಕೆ ರವಿಯವರ ತಾಯಿ ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋದಾಗ ಭೇಟಿಗೂ ಅವಕಾಶ ಕೊಡದೇ ಅವಮಾನ ಮಾಡಿ ಕಳಿಸಿಬಿಟ್ಟರಲ್ಲ. ಮರೆತರೆ ದ್ರೋಹವಲ್ಲವೇನು?

7. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪೂರ್ಣ ಹದಗೆಟ್ಟುಹೋಗಿದ್ದು ಶಾಸಕರ ಮಗ ನಲಪಾಡ್ ವಿದ್ವತ್ ಎಂಬ ತರುಣನಿಗೆ ಮನಸೋ ಇಚ್ಛೆ ಬಾರಿಸಿ ರಾಜ್ಯ ಸಕರ್ಾರ ತಮ್ಮದೆಂಬ ದುರಹಂಕಾರ ಪ್ರದಶರ್ಿಸಿದ್ದು ಜನಮಾನಸದಲ್ಲಿ ಇನ್ನೂ ಹಚ್ಚ ಹಸಿರಾಗಿದೆ.

8. ಕಳೆದ 5 ವರ್ಷದಲ್ಲಿ 871 ಅಪಹರಣ, 462 ಲೈಂಗಿಕ ಹಲ್ಲೆ ಅತ್ಯಾಚಾರಗಳ ಮೂಲಕ ಕನರ್ಾಟಕವನ್ನು ಎನ್ಸಿಆರ್ಬಿ ವರದಿಯಲ್ಲಿ ಅಗ್ರಣಿಯಾಗಿಸಿದ್ದು ಇದೇ ಸಕರ್ಾರ.

9. 2012 ರಲ್ಲಿ 3 ಲಕ್ಷದಷ್ಟಿದ್ದ ಕ್ರೈಂ ವರದಿ 2017 ರ ವೇಳೆಗೆ 11 ಲಕ್ಷಕ್ಕೇರಿತು. ಇದೇ ಅವಧಿಯಲ್ಲಿ ಬೆಂಗಳೂರು ದೇಶದ ಎರಡನೇ ದೊಡ್ಡ ಕ್ರೈಂ ಸಿಟಿಯಾಗಿ ಹೆಸರು ಪಡೆಯಿತು.

10. ಈ 5 ವರ್ಷಗಳ ಅವಧಿಯಲ್ಲೇ ಕನರ್ಾಟಕ ಪ್ರತಿಭಟನೆಗಳ ಸರಮಾಲೆಯನ್ನು ಕಂಡಿದ್ದು. ಸಕರ್ಾರಿ ನೌಕರರು ರಾಷ್ಟ್ರೀಯ ಪೆನ್ಷನ್ ಸ್ಕೀಮಿನ ವಿರುದ್ಧವಾಗಿ ಬೀದಿಗಿಳಿದರು, ವೈದ್ಯರು ಸಕರ್ಾರ ತಂದ ಕಾನೂನನ್ನು ತಮ್ಮ ವಿರುದ್ಧದ ಮರಣ ಶಾಸನವೆಂದೇ ಬಣ್ಣಿಸಿ ಬೀದಿಗಿಳಿದರು. ಅಂಗನವಾಡಿ ಕಾರ್ಯಕತರ್ೆಯರು ವಿಧಾನಸೌಧದೆದುರು ಬೀಡುಬಿಟ್ಟಿದ್ದನ್ನು ಮರೆಯುವಂತೆಯೇ ಇಲ್ಲ. ಆಗೆಲ್ಲಾ ಮುಖ್ಯಮಂತ್ರಿ ಪದವಿಯಲ್ಲಿ ಕುಳಿತು ಸಿದ್ದರಾಮಯ್ಯನವರು ತೋರಿದ ದರ್ಪ, ಮಾತನಾಡಿದ ಶೈಲಿ ಈಗಲೂ ಕಣ್ಣಿಗೆ ರಾಚುವಂತಿದೆ.

3

11. ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ ಟಿವಿ9 ತನ್ನ ವಿರುದ್ಧ ವರದಿಯನ್ನು ಪ್ರಕಟಿಸಿತೆಂಬ ಕಾರಣಕ್ಕೆ ತನ್ನ ಬೆಂಬಲಿಗರನ್ನು ಕಳಿಸಿ ಮಾಧ್ಯಮ ಕಛೇರಿಯನ್ನು ಧ್ವಂಸಗೊಳಿಸಿದ್ದು ಇದೇ ಅವಧಿಯಲ್ಲಿ. ಈಗಲೂ ಆತನ ವಿರುದ್ಧ ಯಾವ ವರದಿ ಬಂದರೂ ಅಂದಿನ ದಿನ ಕನಕಪುರದಲ್ಲಿ ಕರೆಂಟ್ ಇರುವುದಿಲ್ಲವೆಂದು ಜನ ಮಾತನಾಡಿಕೊಳ್ಳುತ್ತಾರೆ.

12. ಜಾಜರ್್ ಸೇರಿದಂತೆ ಈ ಅವಧಿಯ ಅನೇಕ ಮಂತ್ರಿಗಳು ಅಧಿಕಾರ ಮದದಿಂದಲೇ ಆಳ್ವಿಕೆ ನಡೆಸಿ ಜನ ಸಾಮಾನ್ಯರ ಬದುಕು ಅಸಹನೀಯಗೊಳಿಸಿದವರು. ಸ್ವತಃ ಮುಖ್ಯಮಂತ್ರಿಯ ಮೇಲೆ ಹತ್ತಾರು ಭ್ರಷ್ಟಾಚಾರದ ಪ್ರಕರಣಗಳಿದ್ದು ಅವುಗಳಲ್ಲಿ ಅತ್ಯಂತ ಗಂಭೀರವಾದ ಏಳೆಂಟು ಪ್ರಕರಣಗಳಿವೆ. ಅದರ ಅರಿವಿದ್ದೇ ರಾಜ್ಯದಲ್ಲಿದ್ದ ಲೋಕಾಯುಕ್ತವನ್ನು ತೆಗೆದು ಎಸಿಬಿ ಶುರುಮಾಡಿದ್ದು ಮುಖ್ಯಮಂತ್ರಿಗಳು.

13. ಮುಖ್ಯಮಂತ್ರಿಗಳ ಕೈಲಿದ್ದ ವಾಚು ಈ ಅವಧಿಯಲ್ಲಿ ಬಲುದೊಡ್ಡ ಸುದ್ದಿ ಮಾಡಿತ್ತು. ಬಡವರ ಬಂಧು ದಲಿತರ ಆಶಾಕಿರಣ ಸಿದ್ದರಾಮಯ್ಯನವರು ಕೈಗೆ ಕಟ್ಟುವ ವಾಚು 70 ಲಕ್ಷದ್ದೆಂಬುದೇ ಅನೇಕರಿಗೆ ಜೀರ್ಣವಾಗದ ಸಂಗತಿ. ವಿದೇಶದ ತನ್ನ ಮಿತ್ರ ಕೊಡುಗೆಯಾಗಿ ಕೊಟ್ಟದ್ದೆಂದು ಮುಖ್ಯಮಂತ್ರಿಗಳು ಹೇಳಿದ್ದು ಅಪಹಾಸ್ಯಕ್ಕೆ ಕಾರಣವಾಗಿತ್ತು. ಇಂಥ ಮಿತ್ರರು ತಮಗೆಲ್ಲ ಇರಬಾರದಾ ಎಂದು ಪಾಪ ಪ್ರತಿಯೊಬ್ಬ ಕನ್ನಡಿಗ ಇಂದಿಗೂ ಯೋಚಿಸುತ್ತಿದ್ದಾನೆ.

14. ತಾವು ದುಬಾರಿ ವಾಚು ಕಟ್ಟುವ ಮುಖ್ಯಮಂತ್ರಿಗಳು ರಾಜ್ಯವನ್ನು ಮಾತ್ರ ಸಾಲದ ಕೂಪಕ್ಕೆ ತಳ್ಳಿಬಿಟ್ಟರು. ಬಜೆಟ್ನ ವರದಿಯ ಪ್ರಕಾರವೇ ಇದುವರೆಗಿನ ಸಾಲ ಎರಡೂವರೆ ಲಕ್ಷಕೋಟಿಯಾಗಿದ್ದು ಈ ಬಜೆಟ್ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ವೇಳೆಗೆ ಸಾಲದ ಮೊತ್ತ ಸುಮಾರು ಮೂರುಲಕ್ಷಕೋಟಿಗೆ ಹತ್ತಿರವಾಗಿಬಿಟ್ಟಿರುತ್ತದೆ. ಇಷ್ಟೂ ಸಾಲದ ಹೊರೆ 6 ಕೋಟಿ ಕನ್ನಡಿಗರ ಮೇಲೆ ಎಂಬುದನ್ನು ಮರೆತರೂ ನೆನಪಿಟ್ಟುಕೊಂಡರೂ ಸಾಲ ತೀರಿಸಬೇಕಾದವರು ಮಾತ್ರ ನಾವೇ.

15. ಮುಖ್ಯಮಂತ್ರಿಗಳ ಮಗನೂ ಈ 5 ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪದಿಂದ ಹೊರಗಿರಲಿಲ್ಲ. ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಮೂಲಕ ಎಂಆರ್ಐ ಮತ್ತು ಸಿಟಿ ಸ್ಕ್ಯಾನರ್ಗಳ ಗುತ್ತಿಗೆ ಪಡೆಯುವಲ್ಲಿ ಬಲುದೊಡ್ಡ ಅವ್ಯವಹಾರ ನಡೆಸಿದ್ದಾರೆ ಎಂದು ಸಿಡಿದ ಸುದ್ದಿ  ಅಷ್ಟೇ ಬೇಗನೇ ಆರಿಹೋಯ್ತು. ಮುಖ್ಯಮಂತ್ರಿಗಳ ಚಾಕಚಕ್ಯತೆ ಮೆಚ್ಚಬೇಕಾದ್ದೆ.

16. ವಿಧಾನಸೌಧಕ್ಕೆ 60 ವರ್ಷವಾದಾಗ ಸಂಭ್ರಮಾಚರಣೆ ಮಾಡಬೇಕೆಂದು ನಿರ್ಧರಿಸಿದ ಈ ಸಕರ್ಾರ ಪ್ರತಿಯೊಬ್ಬ ಶಾಸಕರಿಗೆ ಚಿನ್ನದ ಉಡುಗೊರೆ, ಅಲ್ಲಿನ ಕಾಮರ್ಿಕರಿಗೆ ಬೆಳ್ಳಿಯ ಉಡುಗೊರೆ ಕೊಡಬೇಕೆಂದು ನಿಶ್ಚಯಿಸಿ ಬೊಕ್ಕಸದ ಮೇಲೆ ಕೋಟ್ಯಂತರ ರೂಪಾಯಿ ಹೊರೆ ಹೇರಬೇಕೆಂದು ಉಪಾಯ ಮಾಡಿತ್ತು. ಒಂದಷ್ಟು ಬುದ್ಧಿವಂತರು ಉಗಿದ ನಂತರ ಸಮಾಜವಾದಿ ಮುಖ್ಯಮಂತ್ರಿ ತಣ್ಣಗಾದರು.

17. ದೇಶವೆಲ್ಲಾ ನರೇಂದ್ರಮೋದಿಯವರ ನೇತೃತ್ವದಲ್ಲಿ ವಿದ್ಯುತ್ ವಿಚಾರದಲ್ಲಿ ಸ್ವಾವಲಂಬಿಯಾದರೆ ಕರ್ನಟಕದಲ್ಲಿ ಮಾತ್ರ ಪವರ್ ಕಟ್ ಇಂದಿಗೂ ನಿಂತಿಲ್ಲ. ವಿದ್ಯುತ್ ಖರೀದಿಯಲ್ಲಿ ದೊಡ್ಡ ಮೊತ್ತದ ಕಿಕ್ಬ್ಯಾಕ್ ಸಂದಾಯವಾಗುತ್ತಿದೆ ಎಂಬ ಆರೋಪಕ್ಕೆ ಸಕರ್ಾರ ಎಂದಿಗೂ ಉತ್ತರವೇ ಕೊಡಲಿಲ್ಲ. ದೇಶದ ಐಟಿ ಸಿಟಿ ಬೆಂಗಳೂರು ಕೂಡ ಪವರ್ ಕಟ್ ಭಾಗ್ಯದಿಂದ ನರಳುತ್ತಲೇ ಇದೆ.

3

18. ಬೆಂಗಳೂರಿನ ರಸ್ತೆಯಲ್ಲಿ 15,000 ಕ್ಕೂ ಹೆಚ್ಚು ಹೊಂಡಗಳಿವೆ ಎಂದು ಪಾಲಿಕೆಯೇ ಒಪ್ಪಿಕೊಂಡಿತಲ್ಲದೇ ಆ ನೆಪದಲ್ಲಿ ವೈಟ್ ಟಾಪಿಂಗ್ಸ್ ಮಾಡುವ ಯೋಜನೆ ಮುಂದಿಟ್ಟು ಹತ್ತಾರು ಕೋಟಿ ರೂಪಾಯಿಯನ್ನು ನುಂಗಿಹಾಕಲಾಯ್ತು.

19. ಬೆಂಗಳೂರು ನಾಗರೀಕರ ಪ್ರತಿಭಟನೆ ಇಲ್ಲದೇ ಹೋಗಿದ್ದರೆ ಅನಗತ್ಯವಾದ ಸ್ಟೀಲ್ ಬ್ರಿಡ್ಜ್ ನಿಮರ್ಾಣಗೊಂಡು ಕೋಟ್ಯಂತರ ರೂಪಾಯಿ ಕಿಕ್ಬ್ಯಾಕ್ ಮಂತ್ರಿಗಳ ಕಿಸೆ ಸೇರಿರುತ್ತಿತ್ತು.

20. ಎತ್ತಿನಹೊಳೆಯೊಂದು ಇದೇ ಬಗೆಯ ಭಾರಿ ದೊಡ್ಡ ಯೋಜನೆ. 13 ಸಾವಿರ ಕೋಟಿ ರೂಪಾಯಿಯ ಯೋಜನೆಗೆ ತೋಡಿದ ಹಳ್ಳ, ಹಾಸಿದ ಪೈಪುಗಳು ಈ ಮಳೆಗಾಲದ ವೇಳೆಗೆ ಖಂಡಿತ ವ್ಯರ್ಥವಾಗಲಿವೆ. ಈ ಯೋಜನೆ ಬಲುದೊಡ್ಡ ಕಿಕ್ಬ್ಯಾಕ್ನ ಒಂದು ಭಾಗ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.

21. ಕಿಕ್ಬ್ಯಾಕ್ಗಳ ಭರಾಟೆ ಎಷ್ಟಿದೆಯೆಂದರೆ ಮಂತ್ರಿ ಜಾಜರ್್ರ ಆಸ್ತಿ 5 ವರ್ಷಗಳಲ್ಲಿ 158%, ಡಿಕೇಶಿಯವರ ಆಸ್ತಿ ಸುಮಾರು 300 ಪ್ರತಿಶತ ಹೆಚ್ಚಾಗಿದ್ದು ಸಮೃದ್ಧ ಸಕರ್ಾರದ ನಿಶಾನಿಯಾಗಿತ್ತು. ಸಿದ್ದರಾಮಯ್ಯನವರ ಆಪ್ತ ಚಿಕ್ಕರಾಯಪ್ಪನವರ ಬಳಿ ಸುಮಾರು 5 ಕೋಟಿ ರೂಪಾಯಿಯಷ್ಟು 2000 ರೂ ನೋಟುಗಳ ಕಂತೆ ಇದ್ದದ್ದು ಎಲ್ಲರ ಹುಬ್ಬು ಮೇಲೇರುವಂತೆ ಮಾಡಿತ್ತು!

22. ಕೆಟ್ಟ ಆಥರ್ಿಕ ನೀತಿ ಮತ್ತು ಭ್ರಷ್ಟಾಚಾರದ ಕಾರಣದಿಂದಾಗಿಯೇ ಫ್ಲಿಪ್ಕಾಟರ್್ ಮತ್ತು ಹೀರೋ ಮೋಟಾರ್ಸ್ನಂತಹ ಕಂಪನಿಗಳು ರಾಜ್ಯವನ್ನು ಬಿಟ್ಟು ಹೊರಟುಬಿಟ್ಟವು.

23. ನೀರಿನ ವಿಚಾರದಲ್ಲಿ ಈ 5 ವರ್ಷ ಅತ್ಯಂತ ಕೆಟ್ಟ ಆಡಳಿತ. ಮಹಾದಾಯಿ ಗಲಾಟೆ ರಾಜ್ಯಕ್ಕೆಲ್ಲಾ ಬೆಂಕಿ ಹಚ್ಚಿತೇ ಹೊರತು ಅದನ್ನು ಪರಿಹರಿಸುವ ದಿಸೆಯಲ್ಲಿ ಮುಖ್ಯಮಂತ್ರಿಗಳು ಗೋವಾದೊಂದಿಗೆ ಒಂದಿನಿತೂ ಪ್ರಯತ್ನ ಮಾಡಲಿಲ್ಲ. ಕಾವೇರಿಯ ಕುರಿತಂತೆ ಜನಮಾನಸದಲ್ಲಿ ಕಾವೇರಿಸಿದ್ದು ಬಿಟ್ಟರೆ ಕಾವೇರಿಯ ರಕ್ಷಣೆಗಾಗಿ ಈ 5 ವರ್ಷಗಳಲ್ಲಿ ಸಕರ್ಾರ ಮಾಡಿದ ಕೆಲಸ ಶೂನ್ಯವೇ. ಕೆರೆಗಳ ಹೂಳೆತ್ತುವ ನಿಟ್ಟಿನಲ್ಲಿ ಚಿತ್ರ ನಟ ಯಶ್ ಮಾಡಿದ್ದಷ್ಟನ್ನೂ ಸಕರ್ಾರ ಮಾಡಲಿಲ್ಲವೆಂಬುದು ಸಕರ್ಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.

24. ಕೇಂದ್ರ ಸಕರ್ಾರ ಬರ ನಿರ್ವಹಣೆಗೆಂದು 1685 ಕೋಟಿ ಕೊಟ್ಟರೂ ಅದರಲ್ಲಿ ಅರ್ಧದಷ್ಟನ್ನೂ ಬಳಸಿಕೊಳ್ಳಲಾಗದ ಸಾಧನೆ ಸಿದ್ದರಾಮಯ್ಯನವರದ್ದು. ಹೀಗಾಗಿಯೇ ಕಳೆದ 5 ವರ್ಷಗಳಲ್ಲಿ 3515 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಯಮನೂರಿನಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿ ಚಾಜರ್್ ಮಾಡಿಸಿದ್ದನ್ನು ಮರೆತರೆ ಅಪರಾಧವಾದೀತು.

25. ಶಾಂತವಾಗಿದ್ದ ಕನರ್ಾಟಕದಲ್ಲಿ ಅನವಶ್ಯಕವಾಗಿ ಟಿಪ್ಪು ಜಯಂತಿಯನ್ನು ಆರಂಭಿಸಿ ಹಿಂದೂ-ಮುಸ್ಲೀಂ ಕಂದಕ ವೃದ್ಧಿಯಾಗುವಂತೆ ಮಾಡಿದ್ದು ಇದೇ ಅವಧಿಯಲ್ಲಿ. ಜಾತಿ ಗಣತಿ ನಡೆಸಿ ನೆಮ್ಮದಿಯಿಂದ ಬದುಕಿದ್ದ ಜನರ ನಡುವೆ ಹುಳಿಹಿಂಡಿದ್ದು ಸಿದ್ದು ಯುಗವೇ!

4

26. ಹಿಂದೂಧರ್ಮವನ್ನು ಶತ್ರುವೆಂಬಂತೆ ಕಂಡು ಪದೇ ಪದೇ ಅನುಯಾಯಿಗಳನ್ನು ಅವಮಾನಿಸಿ ಅವರ ಆಸ್ಥೆಗಳನ್ನು ಅಗೌರವದಿಂದ ಕಂಡು ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದು ಸಿದ್ದರಾಮಯ್ಯನವರ 5 ವರ್ಷದ ಸಾಧನೆ. ಕಲ್ಲಡ್ಕದ ಶ್ರೀರಾಮ ಶಾಲೆಗೆ ಊಟ ನಿಲ್ಲಿಸಿದ್ದು, ಗೋಕಳ್ಳರನ್ನು ಮನೆಗೆ ಹೋಗಿ ಸನ್ಮಾನಿಸಿದ್ದು, ಗೋಹಂತಕರಿಗೆ ಬಹುಮಾನ ಕೊಟ್ಟಿದ್ದು, ಮಾಂಸ ಸೇವಿಸಿ ಮಂದಿರಕ್ಕೆ ಹೋಗಿದ್ದು ಇವೆಲ್ಲವೂ ಇದೇ ಅವಧಿಯಲ್ಲಿ.

27. 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆದಾಗಲೂ ಅದನ್ನು ನಡೆಸಿದ ಮುಸ್ಲಿಂ ಉಗ್ರ ಸಂಘಟನೆ ಪಿಎಫ್ಐ ಮೇಲಿದ್ದ ಎಲ್ಲ ಕೇಸುಗಳನ್ನು ಹಿಂಪಡೆದಿದ್ದಷ್ಟೇ ಅಲ್ಲದೇ ಕೊಂದಿದ್ದು ಸ್ಕ್ರೂಡ್ರೈವರ್, ಕೈತಪ್ಪಿಯಾದ ಹತ್ಯೆ ಎಂದೆಲ್ಲಾ ಗೃಹ ಸಚಿವರ ಕೈಲೇ ಹೇಳಿಕೆ ಕೊಡಿಸಿದ್ದು ಚುನಾವಣೆ ಮುಗಿದ ನಂತರವೂ ನೆನಪಿನಲ್ಲುಳಿಯುವಂಥದ್ದು.
ಕೇಳಲು ನನಗೆ ಇನ್ನೂ ಸಾಕಷ್ಟು ಪ್ರಶ್ನೆಗಳಿವೆ. ಆದರೆ ಲೇಖನದ ಮಿತಿ ಇಷ್ಟೇ ಇರುವುದರಿಂದ ಇಷ್ಟಕ್ಕೇ ಸುಮ್ಮನಾಗುತ್ತಿದ್ದೇನೆ. ಮತದಾನಕ್ಕೆ ಮುನ್ನ ಆ ಉಳಿದ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ, ಸರಿಯಾದ ಸಕರ್ಾರವನ್ನು ಆರಿಸಿ. ಹಳೆಯದ್ದನ್ನು ನೆನಪಿಸಿಕೊಡುವುದಷ್ಟೇ ನನ್ನ ಜವಾಬ್ದಾರಿ. ಉಳಿದದ್ದು ನಿಮಗೆ ಬಿಟ್ಟದ್ದು!

Comments are closed.