ವಿಭಾಗಗಳು

ಸುದ್ದಿಪತ್ರ


 

ಮತಾಂತರದ ಹೊಸವಿಧಾನಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಬೇಕಿದೆ!

ಕಳೆದ ನಾಲ್ಕಾರು ವರ್ಷಗಳಿಂದ ಸೌದಿಯಿಂದ ಅಪಾರ ಪ್ರಮಾಣದ ಹಣ ಮತ್ತು ಕಾರ್ಯಶೈಲಿಯನ್ನು ಆಮದು ಮಾಡಿಕೊಂಡ ಸಲಫಿ ಮುಸಲ್ಮಾನರು ಮತಾಂತರದ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ.. ಇದನ್ನು ಇಂಟಲೆಕ್ಚುಯಲ್ ಜಿಹಾದ್ ಅಂತ ಕರೆಯಬಹುದು. ಈ ಪ್ರಕ್ರಿಯೆ ಅದೆಷ್ಟು ವ್ಯಾಪಕವಾಗಿ ನಡೆದಿದೆಯೆಂದರೆ ನಮಗೇ ಅರಿವಿಲ್ಲದಂತೆ ನಮ್ಮ-ನಮ್ಮ ಮನೆಗಳು ಇದಕ್ಕೆ ಆಹುತಿಯಾಗುತ್ತಿವೆ. ಲವ್ ಜಿಹಾದ್ ಶೇಕಡಾ ಹತ್ತರಷ್ಟು ಮತಾಂತರಕ್ಕೆ ಕಾರಣವಾದರೆ ದೊಡ್ಡ ಪ್ರಮಾಣದಲ್ಲಿ ಬೌದ್ಧಿಕ ಜಿಹಾದ್ಗೇ ಬಲಿಯಾಗುತ್ತಿರೋದು ನಮ್ಮ ಜನ.

ಲವ್ ಜಿಹಾದ್ನ ಕುರಿತಂತೆ ಚಚರ್ೆಗಳು ಸಾಕಷ್ಟಾಗಿವೆ. ಹಿಂದೂ ಹೆಣ್ಣುಮಗಳೊಬ್ಬಳು ಮುಸಲ್ಮಾನನನ್ನು ಪ್ರೀತಿಸಿ ಓಡಿಹೋಗುವುದರ ಕುರಿತಂತೆ ಗಲಾಟೆಯೂ ಮಾಡಿಯಾಗಿದೆ. ಆದರೆ ಕಳೆದ ನಾಲ್ಕಾರು ವರ್ಷಗಳಿಂದ ಸೌದಿಯಿಂದ ಅಪಾರ ಪ್ರಮಾಣದ ಹಣ ಮತ್ತು ಕಾರ್ಯಶೈಲಿಯನ್ನು ಆಮದು ಮಾಡಿಕೊಂಡ ಸಲಫಿ ಮುಸಲ್ಮಾನರು ಮತಾಂತರದ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ.. ಇದನ್ನು ಇಂಟಲೆಕ್ಚುಯಲ್ ಜಿಹಾದ್ ಅಂತ ಕರೆಯಬಹುದು. ಈ ಪ್ರಕ್ರಿಯೆ ಅದೆಷ್ಟು ವ್ಯಾಪಕವಾಗಿ ನಡೆದಿದೆಯೆಂದರೆ ನಮಗೇ ಅರಿವಿಲ್ಲದಂತೆ ನಮ್ಮ-ನಮ್ಮ ಮನೆಗಳು ಇದಕ್ಕೆ ಆಹುತಿಯಾಗುತ್ತಿವೆ. ಲವ್ ಜಿಹಾದ್ ಶೇಕಡಾ ಹತ್ತರಷ್ಟು ಮತಾಂತರಕ್ಕೆ ಕಾರಣವಾದರೆ ದೊಡ್ಡ ಪ್ರಮಾಣದಲ್ಲಿ ಬೌದ್ಧಿಕ ಜಿಹಾದ್ಗೇ ಬಲಿಯಾಗುತ್ತಿರೋದು ನಮ್ಮ ಜನ. ನೆನಪಿಡಿ. ಪ್ರೇಮದ ಪಾಶಕ್ಕೆ ಸಿಲುಕಿಸಿ, ನಾಲ್ಕಾರು ವರ್ಷ ಕಾದು, ಕೊನೆಗೆ ಎಲ್ಲರೊಡನೆ ಕಾದಾಡಿ ಮದುವೆಯಾಗಿ ಆ ಹುಡುಗಿಯನ್ನು ಸಂಭಾಳಿಸುವ ವೇಳೆಗೆ ಹುಡುಗ ಹೈರಾಣು. ಸ್ವಲ್ಪ ಎಡವಟ್ಟಾದರೂ ಜೀವಕ್ಕೆ ಕುತ್ತು. ಆ ಹೆಣ್ಣುಮಗಳು ಮರಳಿ ಬಂದುಬಿಟ್ಟರಂತೂ ಶತ್ರುಗಳಿಗೆ ಬಲವಾದ ಅಸ್ತ್ರವಾಗಿಬಿಡುತ್ತಾಳೆ. ಇವೆಲ್ಲವನ್ನೂ ಅವಲೋಕಿಸಿಯೇ ಹೊಸದೊಂದು ಮಾರ್ಗ ಮುಸಲ್ಮಾನ ಕಟ್ಟರ್ ಪಂಥೀಯರು ಹುಟ್ಟುಹಾಕಿರೋದು. ಬೌದ್ಧಿಕ ಜಿಹಾದ್. ‘ಖಚರ್ು ಕಡಿಮೆ, ಇಳುವರಿ ಹೆಚ್ಚು!!’

ಇತ್ತೀಚೆಗೆ ಫೇಸ್ ಬುಕ್ನಲ್ಲಿ ನನಗೆ ಕೆಲವರ ಮೊಬೈಲಿನ ಸ್ಕ್ರೀನ್ ಶಾಟ್ಗಳು ಬಂದವು. ನಿಮಗೆ ಇಸ್ಲಾಂನ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ಪ್ರತಿಕ್ರಿಯಿಸಿ ಅಂತ ಟೋಲ್ ಫ್ರೀ ಸಂಖ್ಯೆಗಳು ನಮೂದಾಗಿದ್ದ ಸಂದೇಶ ಅದು. ದಿನಕ್ಕೆರಡಾದರೂ ಆ ಬಗೆಯ ಸ್ಕ್ರೀನ್ ಶಾಟ್ಗಳು ಬರಲಾರಂಭಿಸಿದ ಮೇಲೆ ತಲೆಕೆಡಲಾರಂಭಿಸಿತು. ಸ್ವಲ್ಪ ಹುಡುಕಾಟ ನಡೆಸಿದ ಮೇಲೆ ಗೊತ್ತಾಯ್ತು, ಆನ್ಲೈನ್ ಸವರ್ೆಗಳಲ್ಲಿ ಪಡೆದುಕೊಂಡ ಮೊಬೈಲ್ ಸಂಖ್ಯೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಅವುಗಳಿಗೆ ಪದೇ ಪದೇ ಈ ಸಂದೇಶಗಳನ್ನು ಕಳಿಸಲಾಗುತ್ತದೆ. ಒಮ್ಮೆಗೆ ಒಂದು ಲಕ್ಷ ಜನರಿಗೆ ಸಂದೇಶ ಹೋದರೆ ಅದರಲ್ಲಿ ಶೇಕಡಾ ಹತ್ತರಷ್ಟು ಜನ ಆಸಕ್ತಿ ತೋರಿ ಕರೆ ಮಾಡಿದರೆ, ವೆಬ್ ಸೈಟ್ಗೆ ಭೇಟಿ ಕೊಟ್ಟರೆ ಅದೇ ಹತ್ತು ಸಾವಿರವಾಯ್ತು. ಅದರಲ್ಲಿ ಶೇಕಡಾ ಹತ್ತರಷ್ಟು ಜನ ಗೊಂದಲಕ್ಕೊಳಗಾದರೆ ಒಂದು ಸಾವಿರ ಜನರ ತಲೆ ಕೆಡಿಸಲು ಯಶಸ್ಸು ಪಡೆದಂತಾಯ್ತು. ಕೊನೆಗೆ ಮದರಸಾದ ಮೌಲ್ವಿಗಳೊಂದಿಗೆ ನೂರೇ ಜನ ಚಚರ್ೆಗೆ ಕುಳಿತರೂ ಸಾಕು, ಲವ್ ಜಿಹಾದಿಗಿಂತ ಸುಲಭವಾಗಿ ಕದನವಿಲ್ಲದೇ ಮತಾಂತರ ಮಾಡಿಬಿಡಬಹುದು.

2

ಇತ್ತೀಚೆಗೆ ಮದುವೆಯಾಗಿ ಮುದ್ದಾದ ಮಗುವೊಂದನ್ನು ಹೊಂದಿರುವ ತಾಯಿಯೊಬ್ಬಳು ಚಿತ್ರದುರ್ಗದ ತನ್ನ ತವರು ಮನೆಗೆ ಬಂದಿದ್ದಾಗ ಇದೇ ರೀತಿಯ ಸಂದೇಶವೊಂದನ್ನು ಅನುಸರಿಸಿ ಇಂಟನರ್ೆಟ್ ಜಾಲಾಡಿದಳು. ಅಷ್ಟೇ ಅಲ್ಲ. ಅಲ್ಲಿನ ವಿವರಣೆಗಳಿಗೆ ಅಚ್ಚರಿಪಡುತ್ತ ತಾನು ಅನುಸರಿಸುವ ಪಂಥಕ್ಕಿಂತ ಇದೇ ವಾಸಿ ಎಂದು ಭಾವಿಸಿ ಅತ್ತ ವಾಲಿಕೊಂಡಳು. ಮಾವನ ಮನೆಗೆ ಹೋಗಲು ನಿರಾಕರಿಸಿದಳು. ಮದರಸಾಕ್ಕೇ ಹೋಗಿ ನೆಲೆಸಲಾರಂಭಿಸಿದಳು. ಮೈತುಂಬಾ ಬುಖರ್ಾ, ಬಾಯ್ತೆರೆದರೆ ‘ಇನ್ಶಾ ಅಲ್ಲಾಹ್’ ಗಂಡನಾದರೂ ಹೇಗೆ ಸಹಿಸಿಕೊಂಡಾನು ಹೇಳಿ. ಆತ ಹೆಂಡತಿಯನ್ನು ಬಿಡುವ ಮಾತಾಡಿದಗಲೂ ಆಕೆ ವಿಚಲಿತಳಾಗಲಿಲ್ಲ. ಮಗುವನ್ನು ಬಿಡಲೂ ಸಿದ್ಧವಾದಳು. ಇಸ್ಲಾಂಗಾಗಿಯೇ ಪರಿವಾರ ತ್ಯಜಿಸಿದವಳೆಂಬ ಕೀತರ್ಿ ಆಕೆಗೆ ಮದರಸಾದಲ್ಲಿ. ಹೊಗಳಿ ಹೊಗಳಿಯೇ ಆಕೆಯನ್ನು ಅಟ್ಟಕ್ಕೇರಿಸಿಬಿಟ್ಟರು ಅಲ್ಲಿ. ಯಾವುದಕ್ಕೂ ಹೆದರದಿರುವಂತೆ ನೈತಿಕ ಬೆಂಬಲ ಕೂಡ ದೊರೆಯಿತು. ಆಕೆಗೆ ಆಗಾಗ ಕರೆ ಮಾಡಿ ಅತೀವ ಪ್ರೀತಿಯಿಂದ ಮಾತನಾಡುವ ಅವರ ಮಂದಿ. ಇತ್ತ ಆಕೆಗೆ ಹೊಡೆಯುವ, ಬಡಿಯುವ, ಕೊಲ್ಲುವ ಮಾತುಗಳನ್ನಾಡುವ ಮನೆಯ ಜನ. ಕೇಸರೀ ಶಾಲು ಸುತ್ತಿಕೊಂಡು ಬಂದವರೊಂದಷ್ಟು ಜನರಂತೂ ಆಕೆಯನ್ನು ಮದರಸಾದಿಂದ ಎಳತಂದು ರಸ್ತೆಯಲ್ಲಿಯೇ ಕೊಚ್ಚಿಬಿಡುತ್ತೇವೆಂದು ಬೆದರಿಸಿದಾಗ ಆಕೆಗೆ ಅಸಹ್ಯವಾಗಿತ್ತೇ ಹೊರತು ಹೆದರಿಕೆಯಲ್ಲ. ಆಕೆ ಮನೆಯವರಿಂದಲೂ ದೂರವಾದಳು. ಅವಳೀಗ ದುರ್ಗದಿಂದ ಬೆಂಗಳೂರಿಗೆ ವಗರ್ಾಯಿಸಲ್ಪಟ್ಟಿದ್ದಾಳೆ. ಅವಳೀಗ ಅರಾಬಿಕ್ ಕಲಿತು ಕುರಾನ್ನ್ನು ಅದೇ ಭಾಷೆಯಲ್ಲಿ ಅಧ್ಯಯನಕ್ಕೆ ಸಜ್ಜಾಗಿದ್ದಾಳೆ. ತನ್ನ ತಂದೆ ತಾಯಿಯರು ತನ್ನ ಹಾದಿಯಲ್ಲಿರುವರಲ್ಲ ಅನ್ನೋದು ಅವಳ ಕೊರಗಂತೆ. ಇಲ್ಲಿ ಆಕೆ ಲವ್ ಜೀಹಾದ್ಗೆ ಬಲಿಯಾಗಿ ಪ್ರೀತಿಯನ್ನು ಅರಸಿ ಹೋದದ್ದಲ್ಲ; ಸತ್ಯದ ಹುಡುಕಾಟಕ್ಕೆ. ಹೌದು. ಅವಳಿಗೆ ಹಿಂದೂ ಧರ್ಮದಲ್ಲಿನ ಸತ್ಯ ಕಾಣಲಿಲ್ಲ. ಅಥವಾ ಅದನ್ನು ತೋರಿಸುವ ನಮ್ಮ ವ್ಯವಸ್ಥೆಯಲ್ಲಿ ಕೊರತೆ ಇದೆ.

ಭಾರತದಲ್ಲಿ ಸಲಫಿಗಳು ಅಥವಾ ವಹಾಬಿಗಳು ಅದೆಷ್ಟು ಕ್ರಿಯಾಶೀಲರಾಗಿದ್ದಾರೆಂದರೆ ಲಕ್ಷಾಂತರ ರೂಪಾಯಿ ಖಚರ್ು ಮಾಡಿ ‘ದಾವಾ’ ನಡೆಸುತ್ತಾರೆ. ಸಂವಿಧಾನದಲ್ಲಿರುವ ಮತ ಪ್ರಚಾರದ ಹಕ್ಕನ್ನು ಮುಂದಿಟ್ಟುಕೊಂಡೇ ತಮ್ಮ ಮತವನ್ನು ಸಾರುವ ಕ್ರಿಯೆ ಅದು. ರಂಗು ರಂಗಿನ ಜಾಹೀರಾತುಗಳ ಮೂಲಕ ಅದಕ್ಕೆ ಪ್ರಚಾರ ಕೊಟ್ಟು ಎಲ್ಲರನ್ನೂ ಆಕಷರ್ಿಸುತ್ತಾರೆ. ನೆನಪಿಡಿ. ಈ ಮಹಾ ಸಭೆಗಳಿಗೆ ಹಿಂದೂ-ಕ್ರಿಶ್ಚಿಯನ್ನರಷ್ಟೇ ಅಲ್ಲದೇ ಸಲಫಿಗಳಲ್ಲದ ಮುಸಲ್ಮಾನರೂ ಸೆಳೆಯಲ್ಪಡುತ್ತಾರೆ. ಅಲ್ಲಿ ಭಿನ್ನ ಭಿನ್ನ ಸ್ಥಳಗಳಲ್ಲಿ ಆಯಾ ಮತೀಯರನ್ನೇ ಮಾತನಾಡಿಸುವ ವ್ಯವಸ್ಥೆ ಇರುತ್ತದೆ. ಅತ್ಯಂತ ಸುಲಭ ಪ್ರಶ್ನೆಗಳ ಮೂಲಕ ಬಂದವರನ್ನು ಗೊಂದಲಕ್ಕೊಳಪಡಿಸುವ ಪ್ರಕ್ರಿಯೆ ಶುರುವಾಗುತ್ತದೆ. ‘ಸ್ವಂತ ಮಗನ ತಲೆಯನ್ನೇ ಕತ್ತರಿಸುವ ತಂದೆ ದೇವರಾಗಲು ಹೇಗೆ ಸಾಧ್ಯ?’ ಎಂದು ಶಿವನ ಕುರಿತಂತೆ ಕೇಳಿದರೆ ನಮ್ಮವರಲ್ಲಿ ಉತ್ತರವಿಲ್ಲ. ‘ಛೇ! ಆತ ತನ್ನ ಮಗನೆಂದು ಅವನಿಗೆ ಗೊತ್ತೇ ಇರಲಿಲ್ಲ’ ಅಂತ ನೀವು ಸಮಥರ್ಿಸಿಕೊಂಡರೆ ಮುಗಿದೇ ಹೋಯ್ತು. ‘ಕೊಲೆಗಡುಕನಾದವ ದೇವರಾಗಬಹುದೇ?’ ಅಂತ ಮರು ಪ್ರಶ್ನಿಸುತ್ತಾರೆ. ನೀವು ತಡಬಡಾಯಿಸಿದೊಡನೆ ನಿಮ್ಮನ್ನು ಆಕ್ರಮಿಸಿಕೊಳ್ಳಲಾರಂಭಿಸುತ್ತಾರೆ. ಇಸ್ಲಾಂನ್ನೇ ನಿಮ್ಮೆದುರು ತೆರೆದಿಡುತ್ತಾರೆ. ನೀವು ನಿಮಗೇ ಅರಿವಿಲ್ಲದಂತೆ ಸೆಳೆತಕ್ಕೆ ಒಳಗಾಗುತ್ತೀರಿ. ನಿಮ್ಮೊಡನೆ ಮಾತನಾಡಿದವ ನಿಮ್ಮ ಬಳಿ ಬಂದು ‘ಈ ಹಿಂದೆ ನಾನೂ ಹಿಂದುವಾಗಿದ್ದೆ. ಈಗ ಈ ಮತಕ್ಕೆ ಬಂದು ಸತ್ಯ ಅನುಭವಿಸುತ್ತಿದ್ದೇನೆ’ ಎನ್ನುತ್ತಾನೆ. ಅಲ್ಲಿಗೆ ನಿಮ್ಮ ಮತಾಂತರದ ಒಂದು ಹಂತ ಮುಗಿಯಿತು.

 

ಇದನ್ನು ತೀವ್ರವಾಗಿ ಎದುರಿಸಬೇಕಾದ ತುತರ್ಿನಲ್ಲಿದ್ದೇವೆ ನಾವು. ಈ ಹೋರಾಟದಲ್ಲಿ ಎದುರಾಳಿಗಳೊಂದಿಗೆ ಕಾದಾಡುವುದಕ್ಕಿಂತ ನಮ್ಮ ಧರ್ಮದ ಕುರಿತಂತೆ ಜ್ಞಾನ ಹೆಚ್ಚಿಸುವ ಅಗತ್ಯವಿದೆ. ಬೌದ್ಧಿಕ ಚಚರ್ೆಗಳಿಗೆ ಸಿದ್ಧರಾಗಿ ಇಸ್ಲಾಂ-ಕ್ರಿಶ್ಚಿಯಾನಿಟಿಗಳನ್ನು ಅವುಗಳಲ್ಲಿರುವ ಮೂಲ ದೋಷಗಳೊಂದಿಗೆ ಬಯಲಿಗೆಳೆಯಬೇಕಾದ ಜರೂರತ್ತಿದೆ. ಹಿಂದೊಮ್ಮೆ ದಯಾನಂದ ಸರಸ್ವತಿಯವರು ತಮ್ಮ ಬಲವಾದ ಗದಾ ಪ್ರಹಾರದ ಮೂಲಕ ಎದುರಾಳಿಗಳ ಹುಟ್ಟಡಗಿಸಿದ್ದರಲ್ಲ ಹಾಗೆಯೇ ಪ್ರಹಾರ ಮಾಡಬೇಕಾದ ಸಮಯ ಬಂದಿದೆ. ಈಗಿನ ಹೋರಾಟ ರಕ್ತ ಹರಿಸುವಂಥದಲ್ಲ ಬದಲಿಗೆ ಶಾಂತವಾಗಿ, ಸಮಾಧಾನ ಚಿತ್ತದಿಂದ ಮಾಡಬೇಕಾದಂಥದ್ದು. ಈಗಿನ ಕದನ ಕೂಗಾಡಿ ರಂಪಾಟ ಮಾಡಿ ಮಾಡುವಂಥದ್ದಲ್ಲ ಬದಲಿಗೆ ವ್ಯೂಹಾತ್ಮಕವಾಗಿ ಆಲೋಚಿಸಬೇಕಾದಂಥದ್ದು. ನಾವು ಇತಿಹಾಸದುದ್ದಕ್ಕೂ ಸೋತಿರುವುದೇ ಇಲ್ಲಿ. ಚಾಣಕ್ಯರ ರಾಜನೈತಿಕ ಪ್ರಜ್ಞೆ ನಮಗೆ ಬರಲೇ ಇಲ್ಲ; ಶಂಕರರ ಧಾಮರ್ಿಕ ರಾಜನೀತಿ ನಮಗೆ ತಿಳಿಯಲಾಗಲಿಲ್ಲ. ನಮ್ಮಲ್ಲಿ ಒಗ್ಗಟ್ಟಾಗುವ ಮುನ್ನವೇ ಒಡೆಯುವ ಶಕ್ತಿಗಳು ಬಲವಾಗುತ್ತಿವೆ. ಲಿಂಗಾಯತ ಧರ್ಮವೆಂಬ ಚಚರ್ೆಗಳೆಲ್ಲ ಇದೇ ಷಡ್ಯಂತ್ರದ ಮುಂದುವರಿದ ಭಾಗಗಳಷ್ಟೇ. ಧರ್ಮ ರಕ್ಷಣೆಗೆ ನಿಲ್ಲಬೇಕಾದ ಮಠಾಧೀಶರಿಗೂ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ವ್ಯಕ್ತಿಗಳು ಧರ್ಮಕ್ಕಿಂತ ದೊಡ್ಡವಾಗಿಬಿಡುತ್ತವೆ. ಅವರ ಪರವಾಗಿ, ವಿರೋಧವಾಗಿ ಮಾತನಾಡುತ್ತಾ ಧರ್ಮವನ್ನು ಹಿಂದಿನ ಸಾಲಿನಲ್ಲಿ ಕುಳ್ಳಿರಿಸಿಬಿಡುತ್ತಾರೆ.

3

ನಮ್ಮ ನಡುವೆ ಈ ಬಗೆಯ ಕದನಗಳಾಗುವಂತೆ ಮಾಡುವಲ್ಲಿ ಹೊರಗಿನ ಶಕ್ತಿಗಳ ಕೈವಾಡವೂ ಇದೆ. ಗೋಹತ್ಯೆಯ ಕುರಿತಂತೆ ವಿಚಾರ ಇದ್ದಕ್ಕಿದ್ದಂತೆ ಮುಖ್ಯ ಚಚರ್ೆಗೆ ಬಂದು ಕುಳಿತುಬಿಟ್ಟರೆ. ಯಾರು ಹೇಗೆ ಸತ್ತರೂ ಗೋರಕ್ಷಕರು ಮಾಡಿದ ಕೃತ್ಯವೆಂಬಂತೆ ಬಿಂಬಿಸಲಾಗುತ್ತಿದೆ. ಇದು ಮೋದಿ ನಂತರ ಭಾರತದಲ್ಲಿ ಆಗುತ್ತಿರುವ ಅತ್ಯಾಚಾರವೆಂದು ಜಗತ್ತಿನೆದುರು ಮಂಡಿಸಿ ಅಪಾರ ಪ್ರಮಾಣದ ಹಣವನ್ನು ಭಾರತದಲ್ಲಿ ಭಯೋತ್ಪಾದನೆಗೆ ಸೆಳೆಯಲಾಗುತ್ತಿದೆ. ಇತ್ತೀಚೆಗೆ ಇರಾನಿನ ಷಿಯಾ ಮುಖ್ಯಸ್ಥರಾದ ಆಯತುಲ್ಲಾ ಖೋಮೇನಿಯವರು ಕಾಶ್ಮೀರದ ಹೋರಾಟದ ಕುರಿತಂತೆ ಭಾರತಕ್ಕೆ ಕೊಟ್ಟ ಎಚ್ಚರಿಕೆಯನ್ನು ಈ ನಿಟ್ಟಿನಲ್ಲಿಯೇ ಗಮನಿಸಬೇಕಾದ್ದು ಅಗತ್ಯ. ಚೀನಾದೊಂದಿಗೆ ಭಾರತ ಗಡಿಯಲ್ಲಿ ಕದನಕ್ಕೆ ಸಿಲುಕಿದಾಗ ಇಲ್ಲಿ ಗೋವಿನ ವಿಚಾರಕ್ಕೆ ಗಲ್ಲಿ-ಗಲ್ಲಿಯಲ್ಲಿ ಗಲಾಟೆಯೆಬ್ಬಿಸುವಂತೆ ಮಾಡಿ ಆಂತರಿಕ ಸಂಘರ್ಷವಾಗುವಂತೆ ಪ್ರೇರೇಪಣೆ ಕೊಡಲಾಗುತ್ತಿದೆ. ನೆನಪಿಡಿ. ಯುದ್ಧದ ಹೊತ್ತಲ್ಲಿ ಹಿಂದೂ-ಮುಸ್ಲೀಂ ಜಗಳಗಳು ತೀವ್ರಗೊಂಡರೆ ಗಡಿಯಲ್ಲಿ ಹೋರಾಟ ಸಲೀಸಲ್ಲ. ಅದಕ್ಕೆಂದೇ ಪ್ರಧಾನ ಮಂತ್ರಿಗಳು ಪದೇ ಪದೇ ನಕಲಿ ಗೋ ರಕ್ಷಕರ ಕುರಿತಂತೆ ಆಕ್ರೋಶ ವ್ಯಕ್ತಪಡಿಸುತ್ತಿರೋದು. ನಿದರ್ಾಕ್ಷಿಣ್ಯವಾಗಿ ಅಂಥವರನ್ನು ಹತ್ತಿಕ್ಕಲಾಗುವುದು ಎಂದಿರೋದು. ಈ ಸಂದೇಶ ಗೋ ರಕ್ಷಕ ದಳಕ್ಕಲ್ಲ ಆ ಹೆಸರಿನಲ್ಲಿ ಬರಲಿರುವ ದಿನಗಳಲ್ಲಿ ಭಾರತದಲ್ಲಿ ಅಂತಯರ್ುದ್ಧಕ್ಕೆ ಯೋಜನೆ ಹಾಕಿರುವ ರಾಷ್ಟ್ರವಿರೋಧಿ ಶಕ್ತಿಗಳಿಗೆ.

ಹೇಳಿದೆನಲ್ಲ. ಈಗ ಎಚ್ಚರಿಕೆಯ ಹೆಜ್ಜೆ ಇಡಬೇಕು. ಈ ಬಾರಿಯದ್ದು ಮಹತ್ವದ ಹೋರಾಟ. ನಾವದಕ್ಕೆ ಸಜ್ಜಾಗಬೇಕು. ಬೌದ್ಧಿಕ ಜಿಹಾದ್ಗೆ ವ್ಯೂಹಾತ್ಮಕವಾದ ಉತ್ತರ ಕೊಡಬೇಕು.

Comments are closed.