ವಿಭಾಗಗಳು

ಸುದ್ದಿಪತ್ರ


 

ಮತಾಂಧತೆ, ಕೋಮುವಾದ; ನಿಜ ಅರ್ಥ ಅರಿವಾಗುತ್ತಿದೆ!

ಮತಾಂಧತೆ ಇಣುಕಿದ ಕೆಲವು ಜನಾಂಗಗಳ ನಡುವೆ ಹೊಕ್ಕು ನೋಡಿದರೆ ನೀವು ಗಾಬರಿಯಾಗಿಬಿಡುತ್ತೀರಿ. ಇಸ್ರೇಲ್ನಲ್ಲಿ ಪರಮ ಸಂಪ್ರದಾಯಸ್ಥ ಯಹೂದಿಗಳು ಆ ದೇಶದ ಶೇಕಡಾ 12ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೀನಾ ಕೊರೋನಾ ವೈರಸ್ನ ರೋಗಿಗಳಲ್ಲಿ ಶೇಕಡಾ 60ರಷ್ಟು ಅವರೇ ಇದ್ದಾರೆ. ಹೀಗಾಗಿ ಸಕರ್ಾರ ಅವರ ಮೇಲೆ ಕಣ್ಣಿಡಲೇಬೇಕಾದಂತಹ ಪರಿಸ್ಥಿತಿಗೆ ಬಂದಿದೆ.

ಮತಾಂಧತೆ, ಕೋಮುವಾದ ಇವೆಲ್ಲವುಗಳ ಅರ್ಥ ಈಗ ತಿಳಿಯುತ್ತಿದೆ. ಈಗಲೂ ಅರ್ಥ ಮಾಡಿಕೊಳ್ಳದವನು ಮೂರ್ಖ ಮಾತ್ರ. ಬಹಳ ಹಿಂದೆಯೇ ಜಾಗತಿಕ ಮಟ್ಟದ ತಜ್ಞರ ತಂಡವೊಂದು ಸ್ಪಷ್ಟವಾಗಿ ಹೇಳಿತ್ತು ‘ಒಂದು ಗ್ರಂಥ, ಒಬ್ಬ ವ್ಯಕ್ತಿ ಮಾತ್ರ ಸತ್ಯ. ಉಳಿದುದೆಲ್ಲವೂ ಮಿಥ್ಯವೆಂದು ಯಾರು ನಂಬಿಕೊಂಡು ಅದರಂತೆ ಬದುಕು ನಡೆಸುತ್ತಾರೋ ಅಂಥವರೇ ಮತಾಂಧತೆಗೆ ಒಳಗಾದವರು’ ಅಂತ. ಆ ನಿಟ್ಟಿನಲ್ಲಿ ನಾವೆಲ್ಲಾ ಅನುಸರಿಸುತ್ತಿರುವ ಹಿಂದೂಧರ್ಮಕ್ಕೆ ಮತಾಂಧತೆಯ ಸೋಂಕು ತಾಕಲೂ ಸಾಧ್ಯವಿಲ್ಲ. ಎಷ್ಟಾದರೂ ಶ್ರೀಕೃಷ್ಣನೇ ಹೇಳಿಬಿಟ್ಟಿದ್ದಾನಲ್ಲಾ, ಯೇ ಯಥಾ ಮಾಂ ಪ್ರಪದ್ಯಂತೇ ತಾಮ್ ತಥೈವ ಭಜಾಮ್ಯಹಂ ಅಂತ. ಭಿನ್ನ-ಭಿನ್ನ ದಿಕ್ಕುಗಳಿಂದ ಬಂದವರು ಸೇರುವುದು ಒಬ್ಬೇ ಪರಮಾತ್ಮನನ್ನು ಎಂದು ಒಪ್ಪಿದವರಷ್ಟೇ ಅಲ್ಲ, ಬದುಕಿದವರೂ ಕೂಡ. ಹೀಗಾಗಿ ಕೊರೋನಾದಂತಹ ವೈರಸ್ಗಳು ಹಿಂದೆಯೂ ನಮ್ಮಲ್ಲಿ ಸಹಜವಾಗಿ ಮತ್ತು ಷಡ್ಯಂತ್ರದ ಭಾಗವಾಗಿಯೂ ಹರಡಿದಾಗ ನಾವು ತುಂಬಾ ಗಲಿಬಿಲಿಗೊಳಗಾದವರಲ್ಲ. ಕೆಲವು ಬಾರಿಯಂತೂ ಆಯಾ ರೋಗಗಳನ್ನು ಓಡಿಸಬಲ್ಲ ದೇವಿಯ ಹೊಸ ಮಂದಿರವನ್ನು ಕಟ್ಟಿ ಅಸುರರ ನಾಶಕ್ಕೆ ಬಂದ ಮಹಾತಾಯಿಯಂತೆ ಆರಾಧಿಸಿದ್ದೂ ಇದೆ! ಪ್ಲೇಗಮ್ಮ ಅಂಥದ್ದೇ ಒಂದು ಅವತಾರ. ಇಂದಿನ ವಿಜ್ಞಾನ ಯುಗದಲ್ಲಿ ನಿಂತು ಅದು ಮೂರ್ಖತನ ಎಂದು ಅನೇಕರಿಗೆ ಅನಿಸಬಹುದು. ಆದರೆ ದೇವಿಯ ಮೂಲಕ ರೋಗ ಹರಡದಂತಿರಲು ತೆಗೆದುಕೊಳ್ಳಬೇಕಾಗಿರುವ ಎಲ್ಲಾ ನಿಯಮಗಳನ್ನು ಹೇಳಿಸಿ ಅದರಂತೆ ನಡೆಯುವ ಪ್ರಕ್ರಿಯೆಯೇ ಬಲು ವಿಶಿಷ್ಟ. ಇಲ್ಲಿ ಮತಾಂಧತೆಯ ಸುಳಿವೇ ಇಲ್ಲ. ನಿಯಮಗಳನ್ನು ಧಿಕ್ಕರಿಸುವ ಸಂಪ್ರದಾಯವೂ ಇಲ್ಲ. ನಮ್ಮ ದೇವರೇ ಶ್ರೇಷ್ಠವೆಂಬ ಭಾವನೆ ಯಾವಾಗಲೂ ಇಲ್ಲದಿರುವುದರಿಂದ ಅಷ್ಟೇ ಸಹಜವಾಗಿ ಜನ ಪ್ಲೇಗಮ್ಮನನ್ನು ಆರಾಧಿಸುತ್ತಾರೆ. ಎಷ್ಟು ವಿಚಿತ್ರ ಅಲ್ಲವೇ?!

2

ಆದರೆ ಮತಾಂಧತೆ ಇಣುಕಿದ ಕೆಲವು ಜನಾಂಗಗಳ ನಡುವೆ ಹೊಕ್ಕು ನೋಡಿದರೆ ನೀವು ಗಾಬರಿಯಾಗಿಬಿಡುತ್ತೀರಿ. ಇಸ್ರೇಲ್ನಲ್ಲಿ ಪರಮ ಸಂಪ್ರದಾಯಸ್ಥ ಯಹೂದಿಗಳು ಆ ದೇಶದ ಶೇಕಡಾ 12ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೀನಾ ಕೊರೋನಾ ವೈರಸ್ನ ರೋಗಿಗಳಲ್ಲಿ ಶೇಕಡಾ 60ರಷ್ಟು ಅವರೇ ಇದ್ದಾರೆ. ಹೀಗಾಗಿ ಸಕರ್ಾರ ಅವರ ಮೇಲೆ ಕಣ್ಣಿಡಲೇಬೇಕಾದಂತಹ ಪರಿಸ್ಥಿತಿಗೆ ಬಂದಿದೆ. ಅದೇ ರೀತಿಯ ಪರಿಸ್ಥಿತಿ ಇರಾನ್ನಲ್ಲೂ ಕೂಡ. ಇರಾನ್ನಲ್ಲಿ ರೋಗ ಹರಡಲು ಶುರುವಾಗಿದ್ದು ಕೋಮ್ನಲ್ಲಿ. ಈ ನಗರಕ್ಕೆ ಪ್ರತೀವರ್ಷ 2ಕೋಟಿಯಷ್ಟು ಯಾತ್ರಿಕರು ಬರುತ್ತಾರೆ. ಇದರ ಮುಖ್ಯಸ್ಥರಾಗಿರುವ ಆಯತ್-ಉಲ್ಲಾ ಕೊರೋನಾದ ಹರಡುವಿಕೆಯನ್ನು ನಿರ್ಲಕ್ಷಿಸಿ ಯಾತ್ರೆಯನ್ನು ಮುಂದುವರೆಸಲು ಅನುಮತಿ ಕೊಟ್ಟರು. ಇಲ್ಲಿನ ಮಸೀದಿಯೊಂದರ ಮುಖ್ಯಸ್ಥರಾದ ಮೊಹಮ್ಮದ್ ಸಯೀದಿಯಂತೂ ‘ಈ ಪವಿತ್ರಸ್ಥಳ ದೈಹಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳಿಗೆ ಪರಿಹಾರ ಕೊಡುವಂಥದ್ದು. ಹೀಗಾಗಿ ಎಲ್ಲರೂ ಇಲ್ಲಿಗೆ ಬರಬೇಕು’ ಎಂಬ ಮುಕ್ತ ಹೇಳಿಕೆಯನ್ನು ಕೊಟ್ಟರು. ಜನ ಮುಲಾಜಿಲ್ಲದೇ ಅಲ್ಲಿಗೆ ಹೋದದ್ದರ ಪರಿಣಾಮವನ್ನು ಈಗ ಇರಾನ್ ಉಣ್ಣುತ್ತಿದೆ. ಭಾರತದ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವೇನಲ್ಲ. ಇಲ್ಲಿನ ತಬ್ಲೀಘಿಗಳು ಏಪ್ರಿಲ್ 1ರ ನಂತರ ಚೀನಾವೈರಸ್ ಸೋಂಕಿಗೆ ತುತ್ತಾದ ಒಟ್ಟು ರೋಗಿಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚಿದ್ದಾರೆ. ಅನೇಕರಿಗೆ ಈ ತಬ್ಲೀಘಿಗಳನ್ನು ಮುಸಲ್ಮಾನರು ಎಂದು ಕರೆದರೆ ಕೋಪ ಬರುತ್ತದೆ. ಮುಸಲ್ಮಾನರಲ್ಲೇ ಅದು ಭಿನ್ನವಾದ ಪಂಗಡ. ಒಟ್ಟಾರೆ ಮುಸಲ್ಮಾನರ ನಡುವೆ ಅವರನ್ನು ಗಣಿಸಬಾರದು ಎಂದೆಲ್ಲಾ ವಾದಿಸುತ್ತಾರೆ. ಚುನಾವಣೆ ಬಂದಾಗ ಮಾತ್ರ ಹಿಂದೂಗಳ ಸಂಖ್ಯೆಯನ್ನು ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಎಂದೆಲ್ಲಾ ವಿಂಗಡಿಸಿ ಬರೆದು ಮುಸಲ್ಮಾನರನ್ನು ಮಾತ್ರ ಒಂದೇ ಸ್ತಂಭದಲ್ಲಿ ತೋರಿಸುತ್ತಾರೆ. ಅಂದರೆ ಸಂಕಟ ಬಂದಾಗ ಮುಸಲ್ಮಾನರ ಪಂಗಡಗಳು ಭಿನ್ನ-ಭಿನ್ನ. ಚುನಾವಣೆ ಬಂದಾಗ ಮಾತ್ರ ಅವರೆಲ್ಲರೂ ಒಂದೇ. ಹಿಂದೂಗಳ ಪರಿಸ್ಥಿತಿ ಇದಕ್ಕೆ ವಿಪರೀತ. ಚುನಾವಣೆಯ ಹೊತ್ತಲ್ಲಿ ಅವರು ಚೂರು-ಚೂರು. ಇಡಿಯ ದೇಶದಲ್ಲಿ ಎಲ್ಲಿಯಾದರೂ ಒಂದು ಕೊಲೆ, ಅತ್ಯಾಚಾರ, ಸಾಧುಗಳ ಮೋಸ ನಡೆದಾಗಲೆಲ್ಲಾ ಹಿಂದೂಗಳೆಲ್ಲಾ ಒಂದೇ! ಆಗ ಇಡಿಯ ಹಿಂದೂ ಸಮಾಜವನ್ನು ಹೀಗಳೆಯುವುದನ್ನು ಯಾರು ವಿರೋಧಿಸುವುದೇ ಇಲ್ಲ. ಆದರೂ ಮುಖ್ಯಮಂತ್ರಿಗಳ ಸಮಾಧಾನಕ್ಕೆಂದು ಮುಸಲ್ಮಾನರೆನ್ನದೇ ತಬ್ಲೀಘಿಗಳು ಎಂದಷ್ಟೇ ಉದ್ದಕ್ಕೂ ಹೇಳುತ್ತೇನೆ. ವಾಸ್ತವವಾಗಿ ಈ ತಬ್ಲೀಘಿಗಳು ಜಾಗತಿಕ ಮಟ್ಟದಲ್ಲಿ ಸುಮಾರು 8 ಕೋಟಿಯಷ್ಟು ಜನರಿದ್ದಾರಂತೆ. ಇವರ ಮೂಲ ನೆಲೆ ಭಾರತವೇ. ಮೌಲಾನಾ ಮೊಹಮ್ಮದ್ ಇಲಿಯಾಸ್ ಕಂಧ್ಲಾವಿ ಇದರ ಮೂಲಪುರುಷ. ಹಳ್ಳಿ-ಹಳ್ಳಿಗೆ ಹೋಗಿ ಜನರಿಗೆ ಇಸ್ಲಾಂನ ಕುರಿತಂತೆ ಪ್ರಚಾರ ಮಾಡುವುದು ಇವರ ಮೂಲ ಉದ್ದೇಶ. ಅದರಲ್ಲೂ ಮೊಹಮ್ಮದ್ ಪೈಗಂಬರರ ಕಾಲದ ಬಟ್ಟೆ-ಬರೆ, ನಡೆ-ನುಡಿಗಳನ್ನು ಮತ್ತೊಮ್ಮೆ ಸಮಾಜದಲ್ಲಿ ತರುವುದು ಇವರ ಗುರಿ. ಒಟ್ಟಾರೆ ಇವರು ಮತ್ತು ವಹಾಬಿಗಳು ಜೊತೆಯಾಗಿಬಿಟ್ಟರೆ ಜಗತ್ತನ್ನು ಟೈಮ್ ಮಿಷನ್ ಇಲ್ಲದೆಯೇ ನೂರಾರು ವರ್ಷಗಳಷ್ಟು ಹಿಂದೆ ಕರೆದುಕೊಂಡು ಹೋಗಬಲ್ಲ ಸಾಮಥ್ರ್ಯ ಇವರಿಗಿದೆ. ಒಂದಂತೂ ಒಪ್ಪಿಕೊಳ್ಳಲೇಬೇಕಾದ ಸತ್ಯವಿದೆ. ಈ ಜಮಾತ್ ತಾನೇ ನೇರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಜಿಹಾದ್ನ ಕುರಿತಂತೆ ತರುಣರೊಳಗೆ ವಿಷಬೀಜವನ್ನು ಬಿತ್ತಿ, ಅವರು ಮುಂದೆ ಸೇರಿಕೊಳ್ಳಬಹುದಾದ ಸಂಘಟನೆಗಳಿಗೆ ರಾಜಮಾರ್ಗ ನಿಮರ್ಾಣಮಾಡಿಕೊಡುತ್ತದೆ. ಅಲ್ಖೈದಾ, ತಾಲಿಬಾನ್ಗಳಿಂದ ಹಿಡಿದು ಹರ್ಕತ್-ಉಲ್-ಮುಜಾಹಿದ್ದೀನ್, ಹರ್ಕತ್-ಉಲ್-ಜಿಹಾದಿ ಇಸ್ಲಾಮಿಯಂತಹ ಉಗ್ರ ಸಂಘಟನೆಗಳಿಗೂ ಇಲ್ಲಿ ತರಬೇತಾದ ಅನೇಕರು ಸೇರಿಕೊಂಡ ಉದಾಹರಣೆಗಳಿವೆ. ಹರ್ಕತ್-ಉಲ್-ಜಿಹಾದಿ ಇಸ್ಲಾಮಿ ಜಮ್ಮು-ಕಾಶ್ಮೀರದಲ್ಲಿ ಸೈನ್ಯಕ್ಕೆ ದೊಡ್ಡ ತಲೆನೋವಾಗಿದೆಯಲ್ಲದೇ ಗುಜರಾತ್ನಲ್ಲಿ ಸಂಭಾವಿತ ಮುಸಲ್ಮಾನರು ನಡೆಸುತ್ತಿದ್ದ ಅನೇಕ ಮಸೀದಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುಬಿಟ್ಟಿದೆ. ಅಮೇರಿಕಾದ ಭಯೋತ್ಪಾದನಾ ನಿಗ್ರಹದಳದ ತಜ್ಞ ಅಲೆಕ್ಸ್ ಅಲೆಕ್ಸೀಫ್ ತಬ್ಲೀಘಿ ಜಮಾತನ್ನು ಕುರಿಯ ಚರ್ಮದಲ್ಲಿರುವ ತೋಳ ಎಂದು ಬಣ್ಣಿಸಿರುವುದು ಈ ಕಾರಣಕ್ಕೇ! ಆರಂಭದಲ್ಲಿ ಒಂದೇ ತಬ್ಲೀಘಿ ಸಂಸ್ಥೆ ಇಡಿಯ ಜಗತ್ತನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿತ್ತು. ಆದರೆ ವ್ಯಾಪ್ತಿ ಬೆಳೆಯುತ್ತಿದ್ದಂತೆ ಒಳಗೊಳಗೇ ಕಿತ್ತಾಟಗಳು ಶುರುವಾಗಿಬಿಟ್ಟವು. ಬಾಂಗ್ಲಾ, ಪಾಕಿಸ್ತಾನ್ ಮತ್ತು ಬ್ರಿಟನ್ನಿನ ತಬ್ಲೀಘ್ ಸಂಘಟನೆಗಳು ದೆಹಲಿಯ ನಿಜಾಮುದ್ದೀನ್ನಲ್ಲಿ ಕುಳಿತಿರುವ ಮೌಲಾನಾ ಸಾದ್ರ ನೇತೃತ್ವವನ್ನು ಕಂಠಮಟ್ಟ ವಿರೋಧಿಸಿದವು. ಈ ಒಳಜಗಳ ಎಲ್ಲಿಯವರೆಗೂ ಹೋಯ್ತೆಂದರೆ ಭಿನ್ನ-ಭಿನ್ನ ಗುಂಪುಗಳು ಕಾದಾಡಿಕೊಂಡು ಅನೇಕರು ತೀರಿಕೊಂಡರೂ ಕೂಡ. ಬಾಂಗ್ಲಾದೇಶದಲ್ಲಂತೂ ದಿನ ಬೆಳಗಾದರೆ ಈ ಗಲಾಟೆಗಳು ನೋಡ ಸಿಗುತ್ತವೆ. ಅಲ್ಲಿನ ತಬ್ಲೀಘ್ ಪ್ರತೀ ವರ್ಷ ವಿಶ್ವ ಧಾಮರ್ಿಕ ಸಮ್ಮೇಳನ ನಡೆಸುತ್ತದೆ. ಒಂದು ನಿಟ್ಟಿನಿಂದ ನೋಡುವುದಾದರೆ ಹಜ್ನ ಬಳಿಕ ಅತ್ಯಂತ ದೊಡ್ಡ ಮುಸಲ್ಮಾನ ಸಮಾವೇಶ ಇದೇ ಎಂದು ಹೇಳಲಾಗುತ್ತದೆ. ಮೌಲಾನಾ ಸಾದ್ರನ್ನು ವಿರೋಧಿಸುವ ಹಿಫಾಜತ್-ಎ-ಇಸ್ಲಾಂ ಕಳೆದ ವರ್ಷ ಮೌಲಾನಾರಿಗೆ ಎಷ್ಟು ಪ್ರಬಲವಾದ ವಿರೋಧವನ್ನೊಡ್ಡಿತೆಂದರೆ ಅವರು ಸಭೆಯಲ್ಲಿ ಭಾಗವಹಿಸದೇ ದೆಹಲಿಗೆ ಮರಳುವ ಸ್ಥಿತಿ ನಿಮರ್ಾಣವಾಗಿತ್ತು. ಈಗಂತೂ ಇಡಿ ಜಗತ್ತು ಭಾರತ ಮತ್ತು ಪಾಕಿಸ್ತಾನಗಳ ತಬ್ಲೀಘಿಗಳೊಂದಿಗೆ ಹಂಚಲ್ಪಟ್ಟಿದೆ. ಇಂಡೋನೇಷಿಯಾ, ಮಲೇಷಿಯಾ, ಫಿಲಿಪೈನ್ಸ್ ಆದಿಯಾಗಿ ಪೂರ್ವದ ರಾಷ್ಟ್ರಗಳನ್ನು ಮೌಲಾನಾ ಸಾದ್ ನೋಡಿಕೊಂಡರೆ, ಪಶ್ಚಿಮದ ರಾಷ್ಟ್ರಗಳನ್ನು ಪಾಕಿಸ್ತಾನದ ತಬ್ಲೀಘಿಗಳು ನಿರ್ವಹಿಸುತ್ತಾರೆ. ಪಾಕಿಸ್ತಾನದಲ್ಲಿರುವ ಈ ತಬ್ಲೀಘಿ ಜಮಾತ್ನ ಪ್ರಮುಖರು ನೇರವಾಗಿ ಅಲ್ಲಿನ ಸೇನೆಯ ಸಂಪರ್ಕದಲ್ಲಿದ್ದು ಭಾರತದಲ್ಲೂ ಅವರ ವಿಸ್ತಾರವಾಗುವಂತೆ ಪ್ರಯತ್ನಿಸುತ್ತಿದ್ದಾರೆ. ಸೌದಿ ಅರೇಬಿಯಾ ತನ್ನ ದೇಶದಲ್ಲಿ ತಬ್ಲೀಘಿಗಳಿಗೆ ಅವಕಾಶವನ್ನು ಕೊಡದಿರುವುದಕ್ಕೆ ಪಾಕಿಸ್ತಾನದ ಸೇನೆಯ ನಿಯಂತ್ರಣ ಅವರ ಮೇಲಿದೆ ಎನ್ನುವುದೂ ಒಂದು ಕಾರಣ ಎಂದು ಹೇಳಲಾಗುತ್ತದೆ!

3

ಈಗ ವಿಷಯಕ್ಕೆ ಬರೋಣ. ತಬ್ಲೀಘಿನ ಎರಡು ಭಾಗಗಳು ಮತಾಂಧತೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವಂಥವು. ಮೌಲಾನಾ ಸಾದ್ರು ‘ನಮಾಜ್ ಮಾಡುವವರಿಗೆ ರೋಗಗಳು ಬರುವುದಿಲ್ಲ. ಹಾಗೆ ರೋಗದಿಂದ ಸಾಯುವುದೇ ಆದರೆ ಮಸೀದಿಗಿಂತ ಒಳ್ಳೆಯ ಜಾಗ ಯಾವುದು’ ಎಂದು ಜನರನ್ನು ಪ್ರಶ್ನಿಸಿದ ವಿಡಿಯೊ ವೈರಲ್ ಆದರೆ, ಅತ್ತ ಪಾಕಿಸ್ತಾನದ ಮುಫ್ತಿ ತಾಕಿ ಉಸ್ಮಾನಿ ತನ್ನ ಅನುಯಾಯಿಗಳಿಗೆ ‘ಪ್ರವಾದಿ ಮೊಹಮ್ಮದರು ಕನಸಿನಲ್ಲಿ ಬಂದು ಕುರಾನಿನ ಆಯತ್ ಒಂದನ್ನು ಹೇಳಿಕೊಂಡರೆ ಕೊರೋನಾ ಬರುವುದಿಲ್ಲವೆಂದು ಹೇಳಿದ್ದಾರೆ’ ಎಂದ ವಿಡಿಯೊ ವೈರಲ್ ಆಯ್ತು. ಇವರ್ಯಾರೂ ಚೀನಾದಲ್ಲಿ ನಡೆದ ಕೊರೋನಾ ರುದ್ರನರ್ತನವನ್ನು ಬಲು ಆಸ್ಥೆಯಿಂದ ಗಮನಿಸಲೇ ಇಲ್ಲ. ಶಕ್ತಿ ಪ್ರದರ್ಶನವೇ ಇವರಿಬ್ಬರಿಗೂ ಮುಖ್ಯವಾಗಿತ್ತು. ಸ್ವತಃ ಸೌದಿ ಅರೇಬಿಯಾ ಧಾಮರ್ಿಕ ಯಾತ್ರೆಯನ್ನು ನಿಷೇಧಿಸಿದಾಗ, ಇರಾನ್ ಶಿಯಾ ಪಂಗಡದವರ ಪವಿತ್ರಸ್ಥಳಗಳಿಗೆ ಬೀಗ ಹಾಕಿದಾಗ, ಜೋಡರ್ಾನ್, ಟಕರ್ಿ, ದುಬೈ, ಲೆಬನಾನ್ ಮೊದಲಾದ ದೇಶಗಳ ಮಸೀದಿಗಳಿಗೆ ಬೀಗ ಹಾಕಿದಾಗ, ಸ್ವತಃ ಮೆಕ್ಕಾ ಮದೀನ ಯಾತ್ರಿಕರಿಗೆ ನಿರಾಕರಿಸಲ್ಪಟ್ಟಾಗ, ತಬ್ಲೀಘ್ ಮಾತ್ರ ಹಠಕ್ಕೆ ಬಿದ್ದು ಧಾಮರ್ಿಕ ಸಭೆಗಳನ್ನು ನಡೆಸಲಾರಂಭಿಸಿತ್ತು! ಫೆಬ್ರವರಿ 27ರಿಂದ ಮಾಚರ್್ 1ರವರೆಗೂ ಕೌಲಾಲಂಪುರದ ಮಸೀದಿಯಲ್ಲಿ ನಡೆದ ಧಾಮರ್ಿಕ ಸಭೆಯಲ್ಲಿ ಭಾಗವಹಿಸಿದ 16,000 ಜನ ಬ್ರುನೆ, ಕಂಬೋಡಿಯಾ, ಮಲೇಷಿಯಾ, ಸಿಂಗಾಪೂರ್, ಥಾಯ್ಲ್ಯಾಂಡ್, ವಿಯೆಟ್ನಾಂಗಳಿಗೆ ಕೊರೋನಾ ವೈರಸ್ ಅನ್ನು ಹಬ್ಬಿಸಿದರು. ಮಲೇಷಿಯಾದಲ್ಲಿ ಸಿಕ್ಕಿರುವ ಬಹುತೇಕ ರೋಗಪೀಡಿತರು ಈ ಧಾಮರ್ಿಕ ಸಭೆಗೆ ಸಂಬಂಧಪಟ್ಟವರೇ. ಪಾಕಿಸ್ತಾನದ ರಾಯ್ವಿಂಡ್ನಲ್ಲಿ ನಡೆದ ಸುಮಾರು ಎರಡೂವರೆ ಲಕ್ಷ ಜನ ಭಾಗವಹಿಸಿದ್ದ ಸಭೆ ಆಫ್ರಿಕಾಕ್ಕೂ ಕೂಡ ರೋಗಿಗಳನ್ನು ಹಬ್ಬಿಸುವಲ್ಲಿ ಯಶಸ್ವಿಯಾಯ್ತು. ಅದರ ಹಿಂದು-ಹಿಂದೆಯೇ ದೆಹಲಿಯಲ್ಲಿ ಧಾಮರ್ಿಕಸಭೆ ನಡೆದು ಇಡಿಯ ಭಾರತ ಅದರ ಸಂಕಟವನ್ನು ಅನುಭವಿಸುವಂತಾಯ್ತು. ಏಪ್ರಿಲ್ 1ರ ನಂತರ ಭಾರತದಲ್ಲಿ ಕಂಡು ಬರುತ್ತಿರುವ ಶೇಕಡಾ 60ಕ್ಕೂ ಹೆಚ್ಚು ಕೊರೋನಾ ಪೀಡಿತರು ಈ ತಬ್ಲೀಘಿಗಳ ಕೃಪೆ. ಈ ಹೊತ್ತಿನಲ್ಲೇ ಇಂಡೋನೇಷ್ಯಾದಲ್ಲಿ ನಡೆಯಬೇಕಿದ್ದ ಧಾಮರ್ಿಕಸಭೆಯನ್ನು ಅಲ್ಲಿನ ಸಕರ್ಾರ ಮುಂದೂಡಿತು. ಆರಂಭದಲ್ಲಿ ತಬ್ಲೀಘಿಗಳು ಇದನ್ನು ಪ್ರತಿಭಟಿಸಿದರೂ ಸಕರ್ಾರ ಮುಲಾಜಿಲ್ಲದೇ ಈ ನಿಯಮಕ್ಕೆ ಬದ್ಧವಾಗಬೇಕೆಂದು ಆದೇಶಿಸಿತು. ದೆಹಲಿಯಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿಯನ್ನು ಕೊಟ್ಟಿದ್ದೇ ದೊಡ್ಡ ತಪ್ಪೆಂದು ಈಗ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ವೇಳೆಗೆ ಮಹಾರಾಷ್ಟ್ರ ಸಕರ್ಾರ ವಸೈಯಲ್ಲಿ ನಡೆಯಬೇಕಾಗಿದ್ದ ಧಾಮರ್ಿಕಸಭೆಯನ್ನು ರದ್ದುಗೊಳಿಸಿ ಸಾಧ್ಯವಾದಷ್ಟೂ ತನ್ನನ್ನು ಉಳಿಸಿಕೊಂಡಿತು. ಸಭೆ ನಡೆದದ್ದು, ಅದಕ್ಕೆ ಅನುಮತಿ ಕೊಟ್ಟದ್ದು ಇವೆಲ್ಲವೂ ಮೊದಲ ಹಂತದ ತಪ್ಪಾದರೆ ಮತಾಂಧತೆಯನ್ನು ಕಂಠಮಟ್ಟ ತುಂಬಿಕೊಂಡು ದ್ವೇಷವನ್ನೇ ಉಸಿರಾಡುವ ಜನಾಂಗವಾಗಿ ಬೆಳೆದು ನಿಂತಿದ್ದು ಎರಡನೇ ತಪ್ಪು. ತಮಗೆ ಕೊರೋನಾ ಹರಡಿರಬಹುದು ಎಂಬ ಮಾಹಿತಿ ಗೊತ್ತಿದ್ದಾಗ್ಯೂ ಅಡಗಿ ಕೂರುವುದು ಅಕ್ಷಮ್ಯ. ಇನ್ನು ಆರೋಗ್ಯವನ್ನು ಸುಧಾರಿಸಲೆಂದು ತಮ್ಮ ಜೀವವನ್ನೇ ಪಣಕ್ಕೊಡ್ಡಿರುವ ಆಶಾ ಕಾರ್ಯಕತರ್ೆಯರು, ವೈದ್ಯರು, ಪೊಲೀಸರುಗಳ ಮೇಲೆಲ್ಲಾ ಹಲ್ಲೆ ಮಾಡುವುದು, ಉಗಿಯುವುದು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ!

ದೇಶವನ್ನು ಮತಾಂಧತೆ ಕಿತ್ತು ತಿನ್ನುತ್ತಿದೆ. ಮಾನವೀಯತೆಯ ಪಾಠ ಹೇಳುವವರೆಲ್ಲಾ ಜೀವಪರ ಕಾಳಜಿಯನ್ನು ಈಗ ತೋರಬೇಕಾದ ಅಗತ್ಯವಿದೆ. ಲಿಂಚಿಂಗ್ನ ಸುಳ್ಳು ಸುದ್ದಿ ಹಬ್ಬಿದಾಗ ಟೌನ್ಹಾಲ್ ಮುಂದೆ ಎದೆ ಬಡಿದುಕೊಳ್ಳುತ್ತಾ ನಿಂತಿದ್ದವರೆಲ್ಲಾ ಭಾರತದಲ್ಲಿ ನೂರಾರು ಜನರ ಸಾವಿಗೆ ಕಾರಣರಾದವರ ಕುರಿತಂತೆ ಬೀದಿಗೆ ಬಂದು ಮಾತನಾಡಬೇಕಿದೆ. ಇದು ಖಂಡಿತವಾಗಿಯೂ ಜನಾಂಗದ ಕದನಕ್ಕಾಗಿ ಅಲ್ಲ, ಮತಾಂಧತೆಯನ್ನೇ ಉಸಿರಾಡುತ್ತಿರುವ ಜನಾಂಗವೊಂದರ ಬದಲಾವಣೆಗಾಗಿ ಎಲ್ಲರೂ ಒಗ್ಗೂಡಬೇಕಿದೆ!

4

ಈ ಎಲ್ಲದರ ನಡುವೆ ಯಾರೂ ಗಮನಿಸದ ಅವಘಡವೊಂದು ನಡೆದು ಹೋಗಿದೆ. ಭಾರತದಲ್ಲಿ ಮೌಲಾನಾ ಸಾದ್ ನೇತೃತ್ವದ ತಬ್ಲೀಘಿಗಳ ವಿರುದ್ಧ ಇತರೆ ಮುಸಲ್ಮಾನರದ್ದೊಂದು ಕೂಗು ಏಳುತ್ತಿದೆ. ಇದೇನು ಒಳಿತಿಗೆ ಎಂದೂ ಭಾವಿಸಬೇಕಿಲ್ಲ. ಮೌಲಾನಾ ಸಾದ್ರ ನೇತೃತ್ವವನ್ನು ಕಿತ್ತೊಗೆದು ಪಾಕಿಸ್ತಾನದ ತಬ್ಲೀಘಿಗಳೊಂದಿಗೆ ಇದನ್ನು ಬೆಸೆದುಬಿಡುವ ಪ್ರಯತ್ನವೂ ಸದ್ದಿಲ್ಲದೇ ನಡೆಯುತ್ತಿದೆ. ಹಾಗಾದರೆ ಅದು ಭಾರತದ ಸುರಕ್ಷತೆಗೆ ಇನ್ನೂ ದೊಡ್ಡ ಅಪಾಯ. ರಾಷ್ಟ್ರವನ್ನಾಳುವ ನಾಯಕರಿಗೆ ಇವೆಲ್ಲದರ ಅರಿವಿರುವುದರಿಂದಲೇ ಸರಿದೂಗಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಮಗೂ ಅಷ್ಟೇ ದೊಡ್ಡ ಜವಾಬ್ದಾರಿ ಇದೆ. ನೆನಪಿಟ್ಟುಕೊಂಡು ಹೆಜ್ಜೆ ಇಡೋಣ. ಏಕೆಂದರೆ ಈಗ ಸಂಕಟದಲ್ಲಿ ಇರುವುದು ಹಿಂದೂ-ಮುಸಲ್ಮಾನ್ ಅಲ್ಲ, ಭಾರತ-ಪಾಕಿಸ್ತಾನ ಅಲ್ಲ, ಇಡಿಯ ವಿಶ್ವವೇ ಬಡಿದಾಡುತ್ತಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡೋಣ!

Comments are closed.