ವಿಭಾಗಗಳು

ಸುದ್ದಿಪತ್ರ


 

ಮದ್ದೇ ಇಲ್ಲದ ರೋಗಕ್ಕೆ ಹೆದರದೇ ಇರುವುದು ಹೇಗೆ?

ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್. ಆ ರೋಗಕ್ಕೆ ಔಷಧಿಯೇ ಇಲ್ಲ. ಈ ರೋಗದಿಂದಾಗಿ ನರಕೋಶಗಳು ನಿಧಾನವಾಗಿ ಸಾಯುತ್ತವೆ. ಆ ಮೂಲಕ ಸ್ನಾಯುಗಳನ್ನು ನಿಯಂತ್ರಿಸಬಲ್ಲ ಮೆದುಳಿನ ಶಕ್ತಿ ಕ್ಷೀಣವಾಗುತ್ತದೆ. ಆರಂಭದಲ್ಲಿ ಕೈಯ ಶಕ್ತಿ ಕುಂಠಿತವಾಗುತ್ತದೆ. ಮಾತು ತೊದಲುತ್ತದೆ. ನರಕೋಶಗಳು ಸಾಯಲಾರಂಭಿಸಿದಂತೆಯೇ ದೇಹದ ಒಂದೊಂದೇ ಅಂಗ ನಿಯಂತ್ರಣ ಕಳೆದುಕೊಳ್ಳುತ್ತದೆ.

ಸ್ಟೀಫನ್ ಹಾಕಿಂಗನ್ನು ಇಡೀ ಜಗತ್ತು ಅಚ್ಚರಿಯ ಮೆದುಳು ಎನ್ನುವುದೇನೋ ನಿಜ. ಹಾಗಂತ ಕಾಲೇಜಿನ ದಿನಗಳಲ್ಲಿ ಹಾಕಿಂಗ್ ದಿನಗಟ್ಟಲೇ ಪುಸ್ತಕದ ಮುಂದೆ ಕುಳಿತಿರುತ್ತಿದ್ದ ಎಂದೇನಲ್ಲ, ಬರೀ ಪುಸ್ತಕದಲ್ಲಿರುವುದನ್ನೇ ಓದಿ ತಲೆಗೆ ತುಂಬಿಕೊಂಡವ ಹೊಸತರ ಆಲೋಚನೆಯನ್ನೇ ಮಾಡಲಾರ. ಅವನು ರ್ಯಾಂಕ್ ಪಡೆದು ಕಂಪನಿಯೊಂದರ ನೌಕರನಾಗಬಲ್ಲ. ಆದರೆ ವಿಜ್ಞಾನಿಯಾಗಲಾರ.

ಆಕ್ಸ್ಫಡರ್್ನ ಭೌತಶಾಸ್ತ್ರ ವಿಭಾಗದ ಶಿಕ್ಷಣ ಹೇಗಿತ್ತೆಂದರೆ, ಮೂರು ವರ್ಷದ ಶಿಕ್ಷಣದ ಕೊನೆಯಲ್ಲಿ ಪರೀಕ್ಷೆ. ಹೀಗಾಗಿ ಹೆಚ್ಚು ಅಧ್ಯಯನದ, ನಿರಂತರ ಅಧ್ಯಯನದ ಜರೂರತ್ತಿರಲಿಲ್ಲ. ಈ ವೇಳೆಯಲ್ಲಿ ಹಾಕಿಂಗ್ ಓದಿಗಿಂತ ಹರಟೆಯಲ್ಲಿ ಕಾಲ ಕಳೆದದ್ದೇ ಹೆಚ್ಚು. ದಿನಕ್ಕೊಂದು ಗಂಟೆ ಓದಿದರೆ ಅದು ಅಧ್ಯಾಪಕರ ಪುಣ್ಯ.

ಈ ವೇಳೆಗೆ ಆತನಲ್ಲಿ ಬೋಟಿಂಗ್ನ ಆಸಕ್ತಿ ತೀವ್ರಗೊಂಡಿದ್ದು, ಆಕ್ಸ್ಫಡರ್ಿನ ಅತಿ ಪ್ರಮುಖ ಆಟ ಅದು. ಸ್ಟೀಫನ್ ಕಾಲೇಜಿನ ಬೋಟಿಂಗ್ ತಂಡದ ಸದಸ್ಯನಾದ. ಹಗಲು-ರಾತ್ರಿ, ಮಂಜು-ಬಿಸಿಲು ಯಾವುದನ್ನೂ ಲೆಕ್ಕಿಸದೆ ಅಭ್ಯಾಸ ನಡೆಸಿದ. ಅಂತರಕಾಲೇಜು ಮಟ್ಟದ ಸ್ಪಧರ್ೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ. ಅಲ್ಲಿಯವರೆಗೂ ಯಾರ ಕಣ್ಣಿಗೂ ಬೀಳದಂತಿದ್ದ ಸ್ಟೀಫನ್, ಈಗ ಕಾಲೇಜಿನ ಕಣ್ಮಣಿಯಾಗಿದ್ದ. ಪರೀಕ್ಷೆಗಳು ಹತ್ತಿರ ಬಂದವು. ಆತ ವಿಶ್ವದ ಉಗಮದ ಅಧ್ಯಯನ ನಡೆಸಬೇಕೆಂದುಕೊಂಡು ಕೇಂಬ್ರಿಡ್ಜ್ಗೆ ಪಿ.ಎಚ್.ಡಿ ಪದವಿಗೆ ಅಜರ್ಿ ಹಾಕಿದ. ಆಕ್ಸ್ಫಡರ್ಿನಲ್ಲಿ ಮೊದಲ ದಜರ್ೆಯಲ್ಲಿ ಪಾಸಾದರೆ ಮಾತ್ರ ಅವಕಾಶ ಎಂಬುದು ಖಚಿತವಾಯ್ತು.

ಸ್ಟೀಫನ್ಗೆ ಯಾವಾಗಲೂ ಒಂದು ಮಣ ಧೈರ್ಯ ಹೆಚ್ಚು. ತನಗೆ ಗೊತ್ತಿರುವ ಮಾಮೂಲಿ ಭೌತಶಾಸ್ತ್ರದ ಥಿಯರಿಗಳನ್ನು ಬರೆದರೂ ಫಸ್ಟ್ಕ್ಲಾಸ್ ಕಟ್ಟಿಟ್ಟ ಬುತ್ತಿ ಎಂಬ ಗ್ಯಾರಂಟಿ ಇತ್ತು. ಎಂದಿನಂತೆ ಓದು ಮಾತ್ರ ಇರಲಿಲ್ಲ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಅವನ ಧೈರ್ಯವೆಲ್ಲ ಮಾಯವಾಗಿ ಹೋಯಿತು. ಪರೀಕ್ಷೆಯ ಮುಂಚಿನ ದಿನವಂತೂ ಆತ ಹೆದರಿಕೆಯಿಂದ ಬೆವತು ನಿದ್ದೆ ಮಾಡಿರಲಿಲ್ಲ. ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ಸ್ಟೀಫನ್ ಕೆಲವೇ ಅಂಕಗಳಿಂದ ಮೊದಲ ದಜರ್ೆ ತಪ್ಪಿಸಿಕೊಂಡಿದ್ದ.

ಸರಿ ಕೇಂಬ್ರಿಡ್ಜ್ ಅಧ್ಯಾಪಕ ವರ್ಗ ಅವನನ್ನು ಕರೆಸಿ ಮೌಖಿಕ ಸಂದರ್ಶನ ನಡೆಸಿತು. ಭೌತಶಾಸ್ತ್ರದಲ್ಲಿನ ಅವನ ಆಸಕ್ತಿ-ಪಾಂಡಿತ್ಯ ಕಂಡು ಬೆರಗಾಯಿತು. ಅದರಲ್ಲೂ ಅವನ ‘ಅವಕಾಶ ಸಿಕ್ಕರೆ ಕೇಂಬ್ರಿಡ್ಜ್ನಲ್ಲಿ, ಇಲ್ಲವಾದರೆ ಆಕ್ಸ್ಫಡರ್್ನಲ್ಲಿ’ ಎಂಬ ಮಾತಂತೂ ಎಲ್ಲರ ಮನಸ್ಸಿಗೂ ನಾಟಿತು. ಅವನಿಗೆ ಕೇಂಬ್ರಿಡ್ಜ್ನಲ್ಲಿ ಕಲಿಯುವ ಅವಕಾಶ ಪ್ರಾಪ್ತವಾಯಿತು. ಮುಂದೆ ಅದೇ ಸಂದರ್ಶನದಲ್ಲಿ ಸಂದರ್ಶಕರಾಗಿದ್ದ ಅಧ್ಯಾಪಕಿಯೊಬ್ಬರು ‘ಈ ಹುಡುಗ ನಮ್ಮೆಲ್ಲರಿಗಿಂತಲೂ ಬುದ್ಧಿವಂತ ಎಂಬುದು ನಮಗೆಲ್ಲರಿಗೂ ಗೊತ್ತಿತ್ತು’ ಎಂದಿದ್ದರು.

ಕೇಂಬ್ರಿಡ್ಜ್ನಲ್ಲಿ ಸ್ಟೀಫನ್ ಅರಸಿ ಬಂದಿದ್ದ ಅಧ್ಯಾಪಕರು ಸಿಗಲಿಲ್ಲ. ಯಾರ ಹೆಸರು ಕೇಳಿಯೇ ಇರಲಿಲ್ಲವೋ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಶುರುವಾಯಿತು. ಹೀಗಾಗಿಯೇ ಆತ ಓದಿದ್ದಕ್ಕಿಂತ ಕಿರಿಕಿರಿ ಅನುಭವಿಸಿದ್ದೇ ಹೆಚ್ಚು. ಮೊದಲ ವರ್ಷ ಕಳೆಯುವುದರೊಳಗಾಗಿಯೇ ಸ್ಟೀಫನ್ಗೆ ದೈಹಿಕ ಸಮಸ್ಯೆಗಳು ಕಂಡು ಬರಲಾರಂಭಿಸಿದವು. ತನ್ನ ಶೂ ಲೇಸನ್ನು ತಾನೇ ಕಟ್ಟಿಕೊಳ್ಳಲಾಗುತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ಬಿದ್ದುಬಿಡುತ್ತಿದ್ದ. ಕೆಲವೊಮ್ಮೆ ಮಾತನಾಡುವಾಗ ತೀವ್ರ ಸಮಸ್ಯೆ ಎದುರಿಸುತ್ತಿದ್ದ. ಇವೆಲ್ಲವನ್ನೂ ಗಮನಿಸಿದ ತಂದೆ ಅವನನ್ನು ಆಸ್ಪತ್ರೆಗೆ ಒಯ್ದರು.

ವೈದ್ಯರು ಅವನ ತೋಳುಗಳಿಂದ ಮಸಲ್ ಟಿಶ್ಯೂಗಳ ಸ್ಯಾಂಪಲ್ ತೆಗೆದುಕೊಂಡರು. ಬೆನ್ನ ಹುರಿಯೊಳಕ್ಕೆ ಪಾರದರ್ಶಕ ಧ್ರವ ಸುರಿದು ಕ್ಷ-ಕಿರಣಗಳ ಮೂಲಕ ಅದು ಸಾಗುವ ಹಾದಿಯನ್ನು ಅಧ್ಯಯನ ಮಾಡತೊಡಗಿದರು. ಸ್ಟೀಫನ್ ಆಗತಾನೇ 21 ರ ಹುಟ್ಟಿದ ಹಬ್ಬದಂದು 21 ಮೇಣದ ಬತ್ತಿಗಳನ್ನು ಆರಿಸಿ ಬಂದಿದ್ದ.

1

ಹಾಗೆ ಮೇಣದ ಬತ್ತಿ ಆರಿಸುವ ಮೂಲಕ ಜೀವನವನ್ನು ಕತ್ತಲೆಡೆಗೆ ನೂಕುವ ಸಂಕೇತ ವಿಧಿ ನೀಡುತ್ತದೆ ಎಂಬುದು ಅವನಿಗೆ ತಿಳಿದಿರಲಿಲ್ಲ. ಎರಡು ವಾರಗಳ ಕಾಲ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಸ್ಟೀಫನ್ ಏಳುವ ವೇಳೆಗೆ ವೈದ್ಯರು ಮೈದಡವಿದ್ದರು. ‘ಯೋಚನೆ ಮಾಡಬೇಡ, ಏನೂ ಆಗಿಲ್ಲ’ ಎಂದಿದ್ದರು. ವಾಸ್ತವವಾಗಿ ಆ ಎರಡು ವಾರಗಳಲ್ಲಿ ವೈದ್ಯರೇ ಹೆದರಿ ಹೋಗುವಂತಹ ವರದಿ ಬಂದಿತ್ತು. ಸ್ಟೀಫನ್ ಲಕ್ಷಕ್ಕೊಬ್ಬರಿಗೆ ಕಂಡು ಬರುವಂತಹ ಅಪರೂಪದ ರೋಗದಿಂದ ಬಳಲುತ್ತಿದ್ದ!

ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್. ಆ ರೋಗಕ್ಕೆ ಔಷಧಿಯೇ ಇಲ್ಲ. ಈ ರೋಗದಿಂದಾಗಿ ನರಕೋಶಗಳು ನಿಧಾನವಾಗಿ ಸಾಯುತ್ತವೆ. ಆ ಮೂಲಕ ಸ್ನಾಯುಗಳನ್ನು ನಿಯಂತ್ರಿಸಬಲ್ಲ ಮೆದುಳಿನ ಶಕ್ತಿ ಕ್ಷೀಣವಾಗುತ್ತದೆ. ಆರಂಭದಲ್ಲಿ ಕೈಯ ಶಕ್ತಿ ಕುಂಠಿತವಾಗುತ್ತದೆ. ಮಾತು ತೊದಲುತ್ತದೆ. ನರಕೋಶಗಳು ಸಾಯಲಾರಂಭಿಸಿದಂತೆಯೇ ದೇಹದ ಒಂದೊಂದೇ ಅಂಗ ನಿಯಂತ್ರಣ ಕಳೆದುಕೊಳ್ಳುತ್ತದೆ. ಅಲ್ಲಿಯವರೆಗೆ ದೇಹಕ್ಕೆ ಕಸುವು ತುಂಬಿದ್ದ ಅಂಗಗಳು ನಿಯಂತ್ರಣವೇ ಇಲ್ಲದಂತಾದಾಗ ಅಕ್ಷರಶಃ ದೇಹಕ್ಕೆ ಭಾರ ಎನಿಸಲಾರಂಭಿಸುತ್ತದೆ. ಸಂಪರ್ಕ ಸಾಧಿಸಬಲ್ಲ ಎಲ್ಲ ಅಂಗಾಂಗಗಳೂ ವ್ಯರ್ಥವಾಗುತ್ತವೆ. ಶ್ವಾಸಕೋಶದ ಸ್ನಾಯುಗಳು ನಿಯಂತ್ರಣ ಕಳೆದುಕೊಂಡರಂತೂ ಮುಗಿದೇ ಹೋಯಿತು. ರೋಗಿ ಸಾಯಲೇಬೇಕು!

ಸತ್ತರೆ ಸರಿ. ಆದರೆ ಸಾಯುವುದಿಲ್ಲವಲ್ಲ. ರೋಗ ಶುರುವಾಗಿ ನಾಲ್ಕು ವರ್ಷವಾದರೂ ರೋಗಿ ನರಳಲೇಬೇಕು. ದೇಹದ ಎಲ್ಲ ಅಂಗಗಳೂ ನಿಯಂತ್ರಣವಿಲ್ಲದಂತಾದಾಗಲೂ ಮೆದುಳು ಮಾತ್ರ ಸರಿಯಾಗಿಯೇ ಇರುತ್ತೆ. ಅತೀ ಭಯಂಕರ, ಮಾತು ಬಾರದ, ಕೈಯಾಡದ, ನಡೆಯಲಾಗದ ಒಂದೊಂದು ರೋಗವೂ ರೋಗಿಯ ಅರಿವಿಗೆ ಬಂದೇ ಬರುತ್ತದೆ. ಹಾಗಾಗಿಯೇ ನಿತ್ಯ ಮಾಫರ್ೈನ್ ಎಂಬ ಔಷಧಿ ಕೊಡಲೇಬೇಕು. ಬೇರೆಯವರಿಗಾದರೆ ಇದು ನೋವು ನಿರೋಧಕ. ಈ ರೋಗಿಗಳಿಗೆ ಮಾತ್ರ ಇದು ಚಿಂತೆಯ ನಿವಾರಣೆಗೆ ಬಳಕೆಯಾಗುತ್ತದೆ. ರೋಗಿ ಆ ಪರಿ ಖಿನ್ನನಾಗುತ್ತಾನೆ.

Comments are closed.