ವಿಭಾಗಗಳು

ಸುದ್ದಿಪತ್ರ


 

ಮಹಾರಾಷ್ಟ್ರದ ಗತಿ ನಮಗೂ ಬರದಿರಲಿ!

ಅಧಿಕಾರಕ್ಕೆ ಬಂದೊಡನೆ ಶಿವಸೇನೆ ವಂದೇಮಾತರಂ ಅನ್ನು ವಿಧಾನಸಭೆಯಿಂದ ಕೈಬಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಅದೂ ಸರಿಯೇ. ವಂದೇಮಾತರಂ ಅನ್ನು ವಿರೋಧಿಸುತ್ತಲೇ ಮುಸಲ್ಮಾನರ ನಡುವೆ ತಮ್ಮ ಬೇಳೆ ಬೇಯಿಸಿಕೊಂಡು ಬಂದ ಕಾಂಗ್ರೆಸ್ಸಿಗರೊಂದಿಗೆ ಸೇರಿ ಸಕರ್ಾರ ರಚಿಸಿದ ಮೇಲೆ ಶಿವಸೇನೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಲೇಬೇಕಲ್ಲ.

ಆರು ವರ್ಷಗಳಲ್ಲಿ ಮೋದಿ ಮಾಡಿದ ಮಹಾಕಾರ್ಯವನ್ನೆಲ್ಲಾ ಆರೇ ತಿಂಗಳಲ್ಲಿ ತೊಳೆದು ಹಾಕಿಬಿಡುವ ಸಾಮಥ್ರ್ಯ ಕೆಲವರಿಗಿದೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ, ಶಿವಸೇನಾ, ಕಾಂಗ್ರೆಸ್ ಸಕರ್ಾರ ರಚನೆಯಾದೊಡನೆ ನಡೆಯುತ್ತಿರುವ ಬೆಳವಣಿಗೆಗಳು ಇದನ್ನು ಸಾಬೀತುಪಡಿಸಿವೆ. ಶಿವಸೇನೆಯೊಂದಿಗೆ ಬಿಜೆಪಿಯ ಮೈತ್ರಿ ಮುರಿದು ಸಕರ್ಾರ ಅಲ್ಲೋಲ-ಕಲ್ಲೋಲವಾಯ್ತಲ್ಲಾ, ಆಗ ಅನೇಕರು ಬಗೆ-ಬಗೆಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು. ಮುಂದೆ ಅಜಿತ್ ಪವಾರ್ ಬಿಜೆಪಿಗೆ ಬೆಂಬಲಿಸುವ ಮಾತುಗಳನ್ನಾಡಿದ್ದಾಗಲೂ ಅನೈತಿಕ ಸಂಬಂಧಗಳೆಂಬ ಕೂಗಾಟವೂ ಕೇಳಿಬಂದಿತ್ತು. ಈ ಅವಕಾಶವನ್ನು ಬಳಸಿಕೊಂಡ ಎನ್ಸಿಪಿ ತನ್ನೆಲ್ಲಾ ಪ್ರಯತ್ನವನ್ನು ಹಾಕಿ ಹುಲಿಯಂತಿದ್ದ ಶಿವಸೇನೆಯ ಮುಖ್ಯಸ್ಥನನ್ನು ಬೆಕ್ಕಿನ ಮರಿಗಿಂತಲೂ ಕಡೆಯಾಗಿಸಿ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದರು. ಮಹಾರಾಷ್ಟ್ರ ಖುಷಿಪಟ್ಟಿತೋ ಬೇಸರಿಸಿಕೊಂಡಿತೋ ಎಂಬುದು ಅವತ್ತಿಗಂತೂ ಅರ್ಥವಾಗುವಂತಿರಲಿಲ್ಲ. ಬಹುಶಃ ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ಸಮಾಜದ ಗೌರವಕ್ಕೆ ಪಾತ್ರವಾಗಿದ್ದು ದೇವೇಂದ್ರ ಫಡ್ನವೀಸ್. ಆತ ಮತ್ತೈದು ವರ್ಷಕ್ಕೆ ಮುಖ್ಯಮಂತ್ರಿಯಾಗಿಯೇ ಮುಂದುವರೆದಿದ್ದರೆ ಅಲ್ಲಿನ ಅನೇಕ ವಿಕಾಸದ ಯೋಜನೆಗಳು ಸಂಪೂರ್ಣಗೊಂಡುಬಿಡುತ್ತಿದ್ದವು. ಎಡವಟ್ಟು ಮಾಡಿಕೊಂಡಿದ್ದು ಶಿವಸೇನೆಯನ್ನು ನಂಬಿದ ಬಿಜೆಪಿಯೋ ಅಥವಾ ಬಿಜೆಪಿಯ ಮೇಲೆ ಅದಮ್ಯ ವಿಶ್ವಾಸವಿರಿಸಿದ ಜನರೋ. ಸದ್ಯಕ್ಕಂತೂ ಹೇಳಲಾರದು. ಬಹುಶಃ ಇನ್ನೊಂದಿಪ್ಪತ್ತು ಸ್ಥಾನಗಳನ್ನು ಬಿಜೆಪಿ ಗೆದ್ದುಬಿಟ್ಟಿದ್ದಿದ್ದರೆ ಮಹಾರಾಷ್ಟ್ರದ ಕಥೆ ಬೇರೆಯೇ ಆಗಿರುತ್ತಿತ್ತು!

2

ಅಧಿಕಾರಕ್ಕೆ ಬಂದೊಡನೆ ಶಿವಸೇನೆ ವಂದೇಮಾತರಂ ಅನ್ನು ವಿಧಾನಸಭೆಯಿಂದ ಕೈಬಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಅದೂ ಸರಿಯೇ. ವಂದೇಮಾತರಂ ಅನ್ನು ವಿರೋಧಿಸುತ್ತಲೇ ಮುಸಲ್ಮಾನರ ನಡುವೆ ತಮ್ಮ ಬೇಳೆ ಬೇಯಿಸಿಕೊಂಡು ಬಂದ ಕಾಂಗ್ರೆಸ್ಸಿಗರೊಂದಿಗೆ ಸೇರಿ ಸಕರ್ಾರ ರಚಿಸಿದ ಮೇಲೆ ಶಿವಸೇನೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಲೇಬೇಕಲ್ಲ. ಇಲ್ಲಿಗೇ ಮುಗಿಯಲಿಲ್ಲ. ಅನೇಕ ಹುದ್ದೆಗಳಿಗೆ ಯಾವ ಆನ್ಲೈನ್ ನೇಮಕಾತಿಯ ನಿಷ್ಪಕ್ಷಪಾತ ವಿಧಾನವನ್ನು ಫಡ್ನವೀಸ್ ಜಾರಿಗೆ ತಂದಿದ್ದರೋ ಅದನ್ನು ತೆಗೆದು ಹಳೆಯ ಮಾದರಿಯ ಭ್ರಷ್ಟಾಚಾರಕ್ಕೆ ಪ್ರೇರಕವಾಗುವ ವ್ಯವಸ್ಥೆಯನ್ನೇ ತರಬೇಕೆಂದು ಪವಾರ್ರ ಮಗಳು ಸುಪ್ರಿಯಾ ಹೇಳಿರುವುದನ್ನು ಶಿವಸೇನೆ ಕೇಳುವ ಲಕ್ಷಣಗಳು ಗೋಚರವಾಗುತ್ತಿವೆ. ಅಂದರೆ ಐದು ವರ್ಷಗಳಲ್ಲಿ ದೇಶದಲ್ಲಿ ಮೋದಿ ತರಲು ಬಯಸಿದ ಬದಲಾವಣೆಯನ್ನು ಅಧಿಕಾರಕ್ಕೆ ಬಂದ ಐದು ದಿನಗಳಲ್ಲೇ ವಿರೋಧಿಗಳು ಮಟ್ಟಸ ಮಾಡಿಬಿಟ್ಟರು! ಈ ಅಪದ್ಧ ಇಲ್ಲಿಗೇ ನಿಲ್ಲಲಿಲ್ಲ. ಪ್ರಮಾಣವಚನ ಸ್ವೀಕಾರದ ಹಿಂದು-ಹಿಂದೆಯೇ ಮೋದಿಯ ಮಹತ್ವಾಕಾಂಕ್ಷೆಯ ಬುಲೆಟ್ಟ್ರೈನಿನ ಯೋಜನೆಯನ್ನು ಶಿವಸೇನೆ ಕೈಬಿಟ್ಟಿತು. ಈ ಯೋಜನೆ ಅದೆಷ್ಟು ವಿಶಿಷ್ಟವಾಗಿತ್ತೆಂದರೆ ಒಟ್ಟಾರೆ 1.1 ಲಕ್ಷಕೋಟಿ ರೂಪಾಯಿಯ ಯೋಜನಾ ವೆಚ್ಚದಲ್ಲಿ ಕೇಂದ್ರದ ಕೊಡುಗೆ 10 ಸಾವಿರಕೋಟಿಯಾದರೆ ಗುಜರಾತ್ ಮತ್ತು ಮಹಾರಾಷ್ಟ್ರ ಸಕರ್ಾರಗಳು ಐದೈದು ಸಾವಿರ ಕೋಟಿಯನ್ನು ಕೊಟ್ಟರೆ ಸಾಕಾಗಿತ್ತು. ಉಳಿದ 81 ಪ್ರತಿಶತ ಹಣವನ್ನು ಸಾಲದ ರೂಪದಲ್ಲಿ ಜಪಾನ್ ಕೊಡಲೊಪ್ಪಿಕೊಂಡಿತ್ತು. ಅದು ಶೇಕಡಾ 0.1ರ ಬಡ್ಡಿದರದಲ್ಲಿ 50 ವರ್ಷಗಳ ಅವಧಿಗೆ ವಿಸ್ತರಿಸಿಕೊಡಬೇಕೆಂಬ ಒಪ್ಪಂದವಾಗಿತ್ತು. ಭಾರತ ಮತ್ತು ಜಪಾನಿನ ನಡುವೆ ಸಂಬಂಧ ವೃದ್ಧಿಗೆ ಮೋದಿ ಮಾಡಿದ ಪ್ರಯತ್ನದ ಪ್ರತಿಫಲ ಅದಾಗಿತ್ತು. ಮಹಾರಾಷ್ಟ್ರದ ಸಿಂಹ ಉದ್ಧವ್ ಠಾಕ್ರೆ ಈಗ ಆ ಯೋಜನೆಯನ್ನು ತಡೆದು ಪುನರ್ಪರಿಶೀಲಿಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಅದರರ್ಥ ಈ ಯೋಜನೆಯಿಂದ ಎಲ್ಲಾದರೂ ಹಣ ಪೀಕಲು ಸಾಧ್ಯವೇ ಎಂದು ಹುಡುಕಾಡುವುದಷ್ಟೇ. ಭ್ರಷ್ಟಾಚಾರ ಮುಕ್ತ ರಾಜ್ಯಕಟ್ಟುವ ಫಡ್ನವೀಸರ ಪ್ರಯತ್ನ ಮೊದಲ ದಿನವೇ ನೀರಲ್ಲಿ ಹೋಮ. ಇಷ್ಟಕ್ಕೂ ಈ ಯೋಜನೆಗೆ ಅಂಕಿತ ಹಾಕುವಾಗ ಉದ್ಧವ್ಠಾಕ್ರೆಯ ಶಿವಸೇನಾ ಸಕರ್ಾರದಲ್ಲಿತ್ತು ಎಂಬುದನ್ನು ಮರೆಯುವಂತಿಲ್ಲ! ಆದರೂ ಯೋಜನೆಯನ್ನು ಪುನರ್ಪರಿಶೀಲಿಸುವ ಮಾತನಾಡುತ್ತಿದ್ದಾರೆಂದರೆ ಪಸರ್ೆಂಟೇಜ್ ಕೇಳುವ ತಯಾರಿ ಎಂಬುದು ಎಂಥವನಿಗೂ ಗೊತ್ತಾಗುತ್ತದೆ. ಇಷ್ಟಕ್ಕೇ ಮುಗಿಯಲಿಲ್ಲ. ಮೂರನೇ ಭಾಗವಾಗಿ ವಿಸ್ತರಿಸಲ್ಪಡಬೇಕಾಗಿದ್ದ ಮುಂಬೈ ಮೆಟ್ರೋ 30ಸಾವಿರ ಕೋಟಿರೂಪಾಯಿ ಯೋಜನೆಯಾಗಿದ್ದು ಅದನ್ನೂ ಸ್ಥಗಿತಗೊಳಿಸಲಾಗಿದೆ. 45 ಸಾವಿರಕೋಟಿಯ ಸಮೃದ್ಧಿ ಮಹಾಮಾರ್ಗ ಯೋಜನೆ ಹಳ್ಳ ಹಿಡಿದಿದೆ. ಆರಾಮ್ಕೊ ರಿಫೈನರಿಯ 3ಲಕ್ಷ ಕೋಟಿರೂಪಾಯಿ ಯೋಜನೆಯೂ ಕೂಡ ನನೆಗುದಿಗೆ ಬಿದ್ದಿದೆ. ಮಹಾರಾಷ್ಟ್ರಕ್ಕೆ ಅಭಿನಂದನೆಯನ್ನು ಹೇಳದೇ ಬೇರೆ ವಿಧಿಯೇ ಇಲ್ಲ!

ಕೆಲವು ದಿನಗಳ ಹಿಂದೆ ಬುದ್ಧಿಜೀವಿಗಳು, ಜೆಎನ್ಯು ಪ್ರಭಾವಕ್ಕೊಳಗಾದವರೆಲ್ಲಾ ಆರೆ ಫಾರೆಸ್ಟ್ ಹೋರಾಟ ನಡೆಸಿದ್ದು ನಿಮಗೆ ನೆನಪಿರಬಹುದು. ಅದಕ್ಕೆ ಸೊಪ್ಪು ಹಾಕದೇ ಮುಂಬೈನ ಅಭಿವೃದ್ಧಿಗೆ ಆಗಲೇಬೇಕಾದ ಕೆಲಸಕ್ಕೆ ಸುಪ್ರೀಂಕೋಟರ್ಿನಿಂದಲೂ ಮಾರ್ಗದರ್ಶನ ಪಡೆದುಕೊಂಡು ಬಂದ ಫಡ್ನವೀಸ್ ಕೆಲಸ ಆರಂಭಿಸಿಯೇ ಬಿಟ್ಟಿದ್ದರು. ಉದ್ಧವ್ ಮೆಟ್ರೋ ವಿಸ್ತರಣೆಯ ಈ ಕಾಮಗಾರಿಯನ್ನು ತಡೆದು ಮಹಾರಾಷ್ಟ್ರ ಅತ್ಯಂತ ಕೊಳಕು ಸ್ಥಿತಿಯಲ್ಲೇ ಇರಲೆಂಬ ಸಂದೇಶವನ್ನೂ ಕೊಟ್ಟಿದ್ದಾರೆ. ವಿಕಾಸದ ಪಥದಲ್ಲಿ ಭಾರತ ಓಡುವಂತೆ ಮಾಡಬೇಕೆಂದು ನರೇಂದ್ರಮೋದಿ ಕಟ್ಟಿದ ಕನಸು ಈಗ ನುಚ್ಚುನೂರು.

3

ಚುನಾವಣೆಗಳು ಕನರ್ಾಟಕದಲ್ಲೂ ನಡೆಯುತ್ತಿವೆ. ಇಡಿಯ ದೇಶ ಬದಲಾವಣೆಯ ಪಥದಲ್ಲಿ ಓಡುತ್ತಿರುವಾಗಲೂ ಕನರ್ಾಟಕ ಉಚಿತ ಸವಲತ್ತುಗಳ ಕಥೆ ಹೇಳಿಕೊಂಡೇ ಆರೂವರೆ ವರ್ಷ ಕಾಲ ತಳ್ಳಿದ್ದನ್ನು ನೀವು ನೋಡಿಯೇ ಇದ್ದೀರಿ. ಇಲ್ಲಿನ ಅನೇಕ ಸ್ಮಾಟರ್್ಸಿಟಿಗಳ ಹಣ ಉಪಯೋಗವಾಗದೇ ಹಾಗೇ ಉಳಿದದ್ದನ್ನೂ ಕಂಡಿದ್ದೀರಿ. ಕಳೆದ ಒಂದೂವರೆ ವರ್ಷವಂತೂ ಒಂದೆಡೆ ಕಣ್ಣೀರು ಮತ್ತೊಂದೆಡೆ ರೆಸಾಟರ್ು ಬಿಟ್ಟರೆ ಕನರ್ಾಟಕಕ್ಕೆ ಬೆಳವಣಿಗೆ ಎಂಬ ಪದದ ಅರ್ಥವೂ ಗೊತ್ತಾಗಲಿಲ್ಲ! ಮೋದಿಯವರ ಕನಸಿಗೆ ಪೂರಕವಾಗಿ ನಡೆದುಕೊಂಡು ಹೊಸರಾಜ್ಯ ನಿಮರ್ಾಣ ಮಾಡುವ ಅವಕಾಶ ಮತ್ತೊಮ್ಮೆ ಒದಗಿದೆ. ತಪ್ಪು ಮಾಡಿದರೆ ಮಹಾರಾಷ್ಟ್ರದಂತೆ ನಮ್ಮ ಕಥೆಯೂ ಆಗಿಬಿಟ್ಟೀತು. ಅದಕ್ಕೆ ಮತದಾನಕ್ಕೆ ಹೋಗುವಾಗ ಎಚ್ಚರಿಕೆಯಿರಲಿ. ಸುಭದ್ರವಾದ, ಬೆಳವಣಿಗೆಗೆ ಪೂರಕವಾದ ಸಕರ್ಾರದ ಕಡೆಗೆ ನಾವು ಹೊರಳೋಣ. ಎಲ್ಲಕ್ಕೂ ಮಿಗಿಲಾಗಿ ಮೋದಿಯವರ ರಾಷ್ಟ್ರದ ಕನಸನ್ನು ಸಾಕಾರಗೊಳಿಸಬಲ್ಲ ವ್ಯಕ್ತಿ ನಮಗಿಲ್ಲಿ ದೊರೆತರೆ ಸಾಕು. ಮತ ಹಾಕುವಾಗ ಇವೆಲ್ಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡು, ಮತಹಾಕಿ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ಗೆಲ್ಲಲಿ, ವಿಕಾಸ ತನ್ನ ಪಥ ಬೆಳಗಲಿ!

Comments are closed.