ವಿಭಾಗಗಳು

ಸುದ್ದಿಪತ್ರ


 

ಮಾತಾಡಿ ಮರ್ಯಾದೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ಸಿಗರು!

ಮೋದಿಯನ್ನೆದುರಿಸಲು ರಾಹುಲನಷ್ಟೇ ಅಲ್ಲ ಪ್ರತಿಪಕ್ಷದ ಎಲ್ಲ ನಾಯಕರುಗಳೂ ಇನ್ನೂ ಗಟ್ಟಿಯಾಗಬೇಕಿದೆ. ಕಾಂಗ್ರೆಸ್ಸಿನ ಅಧ್ಯಕ್ಷಗಾದಿಯನ್ನು ಹೊತ್ತು ಅದರೊಟ್ಟಿಗೆ ಮಹಾಘಟಬಂಧನದ ಪ್ರಧಾನಿ ಅಭ್ಯಥರ್ಿಯಾಗಿ ಓಟದಲ್ಲಿರುವ ರಾಹುಲ್ ಒಂದೇ ಭಾಷಣವನ್ನು ಮತ್ತೆ-ಮತ್ತೆ ಓದುತ್ತಾ ಕ್ಲೀಷೆ ಎನಿಸಿಬಿಟ್ಟಿದ್ದಾರೆ.

ಐದು ರಾಜ್ಯಗಳ ಚುನಾವಣಾ ಕಾವು ಈಗ ಒಂದು ಹದಕ್ಕೆ ಬರುತ್ತಿದೆ. ಮೋದಿ ರ್ಯಾಲಿಗಳಿಗೆ ಬರುವ ಮುನ್ನ ಚುನಾವಣೆ ನಡೆಯುತ್ತಿದೆ ಎಂಬ ವಾತಾವರಣವೂ ನಿಮರ್ಾಣವಾಗಿರುವುದಿಲ್ಲ. ಅವರ ಪ್ರಚಾರ ಶುರುವಾದ ನಂತರವೇ ಜನ ಮೈಚಳಿ ಬಿಟ್ಟು ಹೊರಗೆ ಬರಲಾರಂಭಿಸುವುದು. ಬಹುಶಃ ಈಚಿನ ದಿನಗಳಲ್ಲಿ ಮೋದಿಯನ್ನು ಬಿಟ್ಟರೆ ಮತ್ಯಾವ ರಾಜಕೀಯ ನಾಯಕರಿಗೂ ಹಣ ಕೊಡದೇ ಜನ ಬರುವುದು ಅಸಾಧ್ಯವೇ ಏನೋ! ಮಧ್ಯಪ್ರದೇಶದಲ್ಲಿ ರಾಹುಲನ ರ್ಯಾಲಿಯೊಂದಕ್ಕೆ ಬಂದ ತರುಣನೊಬ್ಬ ‘ಆತ ಮಾತನಾಡುವುದನ್ನು ಆಡಿಕೊಂಡು ನಗಲು ಚೆನ್ನಾಗಿರುತ್ತದೆ ಎಂದೇ ನಾನು ಬಂದಿದ್ದೇನೆ’ ಎಂದು ಮಾಧ್ಯಮಗಳಿಗೆ ನೇರವಾಗಿ ಹೇಳಿಕೆ ಕೊಟ್ಟಿದ್ದ. ಇತರೆ ನಾಯಕರುಗಳೆಲ್ಲಾ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಮಾತನಾಡಲು ಸೀಮಿತವಾಗುವ ಹಂತಕ್ಕೆ ಬಂದುಬಿಟ್ಟಿದ್ದಾರೆ. ಅಷ್ಟು ಜನರ ನಡುವೆ ಮಾತನಾಡುವಾಗಲೇ ಸ್ತಿಮಿತ ಕಳೆದುಕೊಂಡು ಬಾಯಿಗೆ ಬಂದದ್ದನ್ನು ಮಾತನಾಡಿ ಒಂದೋ ಪಕ್ಷವನ್ನು ಗೊಂದಲಕ್ಕೆ ಸಿಲುಕಿಸುತ್ತಾರೆ ಇಲ್ಲವೇ ನರೇಂದ್ರಮೋದಿಯವರ ಕೈಯಲ್ಲಿ ಪ್ರಬಲ ಅಸ್ತ್ರವನ್ನು ಕೊಟ್ಟು ಹೊಡೆಸಿಕೊಳ್ಳುತ್ತಾರೆ. ಇತ್ತೀಚೆಗೆ ಕಾಂಗ್ರೆಸ್ನ ನಾಯಕನೊಬ್ಬ ಮೋದಿಯವರ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ. ಆದರೆ ರಾಷ್ಟ್ರವನ್ನು ಆಳಿದ ರಾಹುಲನ ನಾಲ್ಕೈದು ಪೀಳಿಗೆಯ ಪರಿಚಯ ಇದೆ ಎಂದು ಮೋದಿಯವರನ್ನು ಕಾಲೆಳೆಯಲು ಹೋಗಿ ತಾನೇ ಖೆಡ್ಡಾಕ್ಕೆ ಬಿದ್ದು ಒದ್ದಾಡಿದ್ದ. ಇಂತಹ ಅವಕಾಶವನ್ನು ಎಂದೂ ಬಿಟ್ಟುಕೊಡದ ಮೋದಿ ಮಧ್ಯಪ್ರದೇಶದ ರ್ಯಾಲಿಯಲ್ಲಿ ಮಾತನಾಡುತ್ತಾ ತನ್ನ ಬಡ ತಂದೆ-ತಾಯಿಯರ ಹೃದಯ ವಿದ್ರಾವಕ ಘಟನೆಗಳನ್ನು ಜನರ ಕಣ್ಮುಂದೆ ಬಿಚ್ಚಿಟ್ಟು ದೇಶವನ್ನು ಆಳಿದ್ದಕ್ಕೆ ಲೆಕ್ಕ ಕೊಡದೇ ಹೋಗುವ ರಾಹುಲನ ಪೀಳಿಗೆಯವರನ್ನು ಚೆನ್ನಾಗಿಯೇ ಜಾಡಿಸಿದರು. ನೆರೆದಿದ್ದ ಜನರ ಮನಸಿನಲ್ಲಿ ಇದು ಅಚ್ಚಳಿಯದ ಪರಿಣಾಮ ಉಂಟು ಮಾಡದೇ ಇರಲು ಸಾಧ್ಯವೇ ಇಲ್ಲ. ಅಚ್ಚರಿ ಎಂದರೆ ಇದೇ ಚುನಾವಣಾ ರ್ಯಾಲಿಯಲ್ಲಿ ಮೋದಿ ಮಾತನಾಡುತ್ತಾ ಸವರ್ೋಚ್ಚ ನ್ಯಾಯಾಲಯದ ನ್ಯಾಯಾಧೀಶರು ರಾಮಜನ್ಮಭೂಮಿಯ ಕುರಿತಂತೆ ಹಿಂದೂಗಳ ಪರವಾಗಿ ತೀಪರ್ು ಕೊಡದಂತೆ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಮಾತನಾಡಿದ್ದಾರೆ. ಇದರರ್ಥ ಕಾಂಗ್ರೆಸ್ಸಿನ ಕಪಿಲ್ ಸಿಬಲ್ ನ್ಯಾಯಾಧೀಶರನ್ನು ಪ್ರಭಾವಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಕ್ತಪಡಿಸಿದಂತಾಯ್ತು. ಅದರೊಟ್ಟಿಗೆ ಮಂದಿರ ವಿರೋಧಿ ಕಾಂಗ್ರೆಸ್ ಎಂಬುದನ್ನು ಜನರ ಮುಂದೆ ಅವರೀಗ ತೆರೆದಿಟ್ಟಿದ್ದಾರೆ. ಅಷ್ಟೇ ಅಲ್ಲ, ನ್ಯಾಯಾಲಯವೂ ಕೂಡ ಕಾಂಗ್ರೆಸ್ಸಿನ ಪ್ರಮುಖರ ಹಿತಾಸಕ್ತಿಗಳಿಗೆ ತಕ್ಕಂತೆ ಕುಣಿದಾಡುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿ ಒಂದೇ ಕಲ್ಲಿಗೆ ಎರಡು ಹಕ್ಕಿ ಉರುಳಿಸಿದ್ದಾರೆ.

2

ಮೋದಿಯನ್ನೆದುರಿಸಲು ರಾಹುಲನಷ್ಟೇ ಅಲ್ಲ ಪ್ರತಿಪಕ್ಷದ ಎಲ್ಲ ನಾಯಕರುಗಳೂ ಇನ್ನೂ ಗಟ್ಟಿಯಾಗಬೇಕಿದೆ. ಕಾಂಗ್ರೆಸ್ಸಿನ ಅಧ್ಯಕ್ಷಗಾದಿಯನ್ನು ಹೊತ್ತು ಅದರೊಟ್ಟಿಗೆ ಮಹಾಘಟಬಂಧನದ ಪ್ರಧಾನಿ ಅಭ್ಯಥರ್ಿಯಾಗಿ ಓಟದಲ್ಲಿರುವ ರಾಹುಲ್ ಒಂದೇ ಭಾಷಣವನ್ನು ಮತ್ತೆ-ಮತ್ತೆ ಓದುತ್ತಾ ಕ್ಲೀಷೆ ಎನಿಸಿಬಿಟ್ಟಿದ್ದಾರೆ. ಯಾವ ಊರಿಗೆ ಹೋಗುತ್ತಾರೋ ಆ ಊರಿನಲ್ಲೊಂದು ಮೊಬೈಲ್ ಫ್ಯಾಕ್ಟರಿ ಹಾಕಬೇಕೆಂದು ಅವರು ಹೇಳಿಕೆ ಕೊಡುವುದಂತೂ ಬಾಲಿಶ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಮಾತನಡುತ್ತಾ ನರೇಂದ್ರಮೋದಿಯವರು ಬಲು ಸ್ಪಷ್ಟ ದನಿಯಲ್ಲಿ ಹೇಳಿದ್ದಾರೆ. ಭಾರತವಿಂದು ಮೊಬೈಲ್ಗಳ ಆಮದು ರಾಷ್ಟ್ರವಲ್ಲ, ಬದಲಿಗೆ ನಾವು ಮೊಬೈಲ್ಗಳನ್ನು ಇಂದು ರಫ್ತು ಮಾಡುತ್ತಿದ್ದೇವೆ. ಇಂದು ನಮ್ಮ ಬಳಿ ಮೊಬೈಲ್ ನಿಮರ್ಿಸುವ 268 ಕ್ಕೂ ಹೆಚ್ಚು ಘಟಕಗಳಿವೆ. ಸುಮಾರು 7 ಲಕ್ಷ ಉದ್ಯೋಗಗಳನ್ನು ಈ ಘಟಕಗಳ ಮೂಲಕ ಸೃಷ್ಟಿಸಿದ್ದೇವೆ. ಇಂತಹ ಎಲ್ಲ ದಾಖಲೆಗಳನ್ನು ಕಣ್ಮುಂದೆ ಇಟ್ಟುಕೊಳ್ಳದೇ ರಾಹುಲ್ ಬಾಬಾ ಮನಸೋ ಇಚ್ಛೆ ಮಾತನಾಡುತ್ತಾ ಅಪಹಾಸ್ಯಕ್ಕೊಳಗಾಗುತ್ತಿದ್ದಾರೆ. ಇಂಥವನನ್ನು ಪ್ರಧಾನಿಯಾಗಿ ಮಾಡಲು ಹಗಲು-ರಾತ್ರಿ ದೇವೇಗೌಡರಂತಹ ದಿಗ್ಗಜರು ಶ್ರಮಿಸುತ್ತಿದ್ದಾರೆ ಎನ್ನುವುದೇ ಹಾಸ್ಯಾಸ್ಪದ ವಿಚಾರ!

3

ಕಾಂಗ್ರೆಸ್ಸಿನ ಕಂಟಕಗಳು ಇನ್ನೂ ಮುಗಿದಿಲ್ಲ. 2019ರ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಸನ್ನು ಮುಳುಗಿಸಲು ರಫೆಲ್ ಒಂದೇ ಸಾಕು. ಅದಾಗಲೇ ಅಮಿತ್ಷಾ ರಫೆಲ್ನ ವಿಚಾರವಾಗಿ ಇಷ್ಟೆಲ್ಲಾ ಮಾತನಾಡುತ್ತಿರುವ ಕಾಂಗ್ರೆಸ್ಸಿಗೆ ಮಾಹಿತಿ ಎಲ್ಲಿಂದ ಸಿಗುತ್ತದೆ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಆಗ್ರಹ ಪಡಿಸಿದ್ದಾರೆ. ಬಹುಶಃ ಕಾಂಗ್ರೆಸ್ಸಿಗೂ ಯುರೋಪ್-ಚೀನಾದ ಭಾರತ ವಿರೋಧಿ ಶಕ್ತಿಗಳಿಗೂ ವಿಶೇಷ ನಂಟಿರಬೇಕು. ಅಮಿತ್ಷಾ ರ ಈ ಪ್ರಶ್ನೆಗೆ ರಾಹುಲ್ ಖಂಡಿತ ಉತ್ತರಿಸಲಾರ. ಪ್ರಶ್ನೆ ಇಲ್ಲಿಗೇ ನಿಲ್ಲುವುದಿಲ್ಲ. ಓಪಿಂಡಿಯಾ ವರದಿಂನ್ನು ಒಪ್ಪುವುದಾದರೆ ಫ್ರಾನ್ಸಿನಲ್ಲಿ ರಫೆಲ್ ಡೀಲ್ನ ವಿರುದ್ಧ ದೂರು ಕೊಟ್ಟಿರುವ ಶೇರ್ಪಾ ಎನ್ನುವ ಸಂಸ್ಥೆ ಒಳ್ಳೆಯ ಹೆಸರನ್ನೇನೂ ಹೊಂದಿಲ್ಲ. ಇದರ ಮುಖ್ಯಸ್ಥ ವಿಲಿಯಂ ಬೋಡರ್ಾನ್ ಆಫ್ರಿಕಾದಂತಹ ರಾಷ್ಟ್ರಗಳ ಆಂತರ್ಯದ ವಿಚಾರದಲ್ಲಿ ಮೂಗು ತೂರಿಸಿದ್ದಲ್ಲದೇ ಮಾರಿಷಸ್ನ ಅಧ್ಯಕ್ಷನ ರಾಜಕೀಯ ವಿರೋಧಿಯ ಸಂಪರ್ಕ ಸಾಧಿಸಿ ಅಲ್ಲಿಯೂ ಸಾಕಷ್ಟು ಕಿರಿಕಿರಿ ಉಂಟು ಮಾಡಿದ್ದರು. ಈ ಸಂಸ್ಥೆ ಗ್ರೀನ್ಪೀಸ್, ಓಪನ್ ಸೊಸೈಟಿ ಫೌಂಡೇಶನ್, ಮಿಸೇರಿಯಾರ್, ಆಖ್ಸ್ಫಾಮ್ ಮುಂತಾದ ಸಂಘಟನೆಯೊಂದಿಗೆ ಸಹಯೋಗ ಹೊಂದಿದೆ. ಗ್ರೀನ್ಪೀಸ್ ಅನ್ನು ದೇಶವಿರೋಧಿ ಚಟುವಟಿಕೆಯ ಕಾರಣಕ್ಕಾಗಿ ನಿಷೇಧಿಸಬೇಕೆಂದು ಹಿಂದಿನ ಸಕರ್ಾರಗಳು ಆಲೋಚಿಸಿತ್ತೆಂಬುದು ಗಮನಾರ್ಹ! ಇನ್ನು ಮಿಸೇರಿಯಾರ್ ಒಂದು ಕ್ರಿಶ್ಚಿಯನ್ ಸಂಸ್ಥೆಯಾಗಿದ್ದು ಈ ಹಿಂದೆ ಇದು ಕಶ್ಮೀರಿ ಪ್ರತ್ಯೇಕತಾವಾದಿಗಳ ಗುಂಪಿನೊಂದಿಗೆ ಸೇರಿಕೊಂಡು ಅಮರನಾಥ ಯಾತ್ರೆಯನ್ನು ವಿರೋಧಿಸಿತ್ತು. ಮಿಸೇರಿಯಾರ್ ದೇಶದ ಅನೇಕ ಕ್ರಿಶ್ಚಿಯನ್ ಮಿಷನರಿಗಳಿಗೂ ಧನಸಹಾಯ ಒದಗಿಸುತ್ತದೆ. ಇನ್ನು ಓಪನ್ ಸೊಸೈಟಿ ಇನ್ಸ್ಟಿಟ್ಯೂಶನ್ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ತನ್ನದ್ದೇ ಆದ ರೀತಿಯಲ್ಲಿ ವಿಚ್ಛಿದ್ರ ಶಕ್ತಿಯಾಗಿ ಸಾಬೀತಾಗಿದೆ. ಹಂಗೇರಿಯಲ್ಲಿ ಈ ಸಂಸ್ಥೆ ಮಾಡಿರುವ ಸಮಸ್ಯೆಗಳಿಂದಾಗಿ ಅಲ್ಲಿನ ಸಕರ್ಾರ ಇದರಿಂದ ಕೈತೊಳೆದುಕೊಳ್ಳಲು ಸಾಕಷ್ಟು ಯತ್ನಿಸುತ್ತಿದೆ. ರಷ್ಯಾ ಈ ಸಂಘಟನೆಯನ್ನು ನಿಷೇಧಿಸಿ ಇದು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದೂ ಹೇಳಿತ್ತು. ಇನ್ನು ಆಕ್ಸ್ಫಾಮ್ನ ಸದಸ್ಯೆಯರು ಸೇರಿಕೊಂಡು ಹಿಂದೂವಿರೋಧಿ ಬಿಲ್ಲೊಂದನ್ನು ರೂಪಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಇದೇ ಆಕ್ಸ್ಫಾಮ್ ಅನೇಕ ಬಗೆಯ ಫೇಕ್ ಸವರ್ೇಗಳನ್ನು ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಅನೇಕ ಬಾರಿ ಬೆಳಕಿಗೆ ಬಂದಿದೆ. ಇವರೆಲ್ಲರ ಸಹಕಾರದ ಆಧಾರದ ಮೇಲೆಯೇ ಕಾಂಗ್ರೆಸ್ಸು ಬೀದಿಗೆ ಬಂದು ನಿಂತಿರೋದು. ಈಗ ಅಮಿತ್ಷಾ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಬೇಕೆಂದರೆ ಕಾಂಗ್ರೆಸ್ಸು ಇವೆಲ್ಲವನ್ನೂ ಒಪ್ಪಿಕೊಳ್ಳಲೇಬೇಕು. ತಾವೇ ತೋಡಿಕೊಂಡ ಹಳ್ಳದಲ್ಲಿ ತಾವೇ ಬಿದ್ದು ಮೈಮೇಲೆ ಮಣ್ಣೆಳೆದುಕೊಂಡು ಸಮಾಧಿಯಾಗುವುದೆಂದರೆ ಹೀಗೇ ಇರಬೇಕೇನೋ. 2019ರಲ್ಲಿ ಕಾಂಗ್ರೆಸ್ಸಿಗೆ ಮಣ್ಣು ಮುಕ್ಕಿಸಲು ಬಹುಶಃ ರಫೆಲ್ ಡೀಲ್ ಒಂದೇ ಸಾಕಾಗಬಹುದನೋ! ದಿನೇ-ದಿನೇ ಕಾಂಗ್ರೆಸ್ಸು ಅಷ್ಟು ತಪ್ಪುಗಳನ್ನು ಮಾಡುತ್ತಿದೆ. ಮೋದಿ ಮುಲಾಜಿಲ್ಲದೇ, ಅನುಕಂಪವೂ ಇಲ್ಲದೇ ಈ ಅವಕಾಶಗಳನ್ನು ಭರ್ಜರಿಯಾಗಿ ಬಳಸಿಕೊಳ್ಳುತ್ತಿದ್ದಾರೆ!

Comments are closed.