ವಿಭಾಗಗಳು

ಸುದ್ದಿಪತ್ರ


 

ಮಾತುಕತೆಗೆ ಗೋಗರೆಯುತ್ತಿದೆ ಪಾಕಿಸ್ತಾನ!!

ಪಾಕಿಸ್ತಾನ ಕಾಲುಕೆರೆದು ಜಗಳಕ್ಕೆ ಬಂದು ಭಯೋತ್ಪಾದನಾ ಕೃತ್ಯ ನಡೆಸಿ ಕಾಣೆಯಾಗಿಬಿಡುತ್ತಿತ್ತು. ಆದರೀಗ ಕಾಲಿಗೆ ಬಿದ್ದಾದರೂ ಮಾತುಕತೆ ನಡೆಸಲು ಕೇಳಿಕೊಳ್ಳುವ ಹಂತಕ್ಕೆ ಬಂದುಬಿಟ್ಟಿದೆ. ನರೇಂದ್ರಮೋದಿಯವರ ರಾಜತಾಂತ್ರಿಕ ನಡೆಯಿಂದಾಗಿ ಪಾಕಿಸ್ತಾನಕ್ಕೆ ಸಾಲಕೊಡಲು ಮುಂದೆ ಬಂದಿದ್ದ ಐಎಮ್ಎಫ್ ಈಗ ಅಪಾರ ನಿಯಮಗಳನ್ನು ಹೇರುತ್ತಿದೆ.

303 ಸೀಟುಗಳು ಮೋದಿಯವರನ್ನು ದೇಶದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಬಲಾಢ್ಯಗೊಳಿಸಿಬಿಟ್ಟಿವೆ. ಚೀನಾ, ರಷ್ಯಾ, ಭಾರತದ ತ್ರಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಚೀನಾದೊಂದಿಗೆ ಮೋದಿ ಮಾತನಾಡಿದ ಶೈಲಿ ಅದನ್ನೇ ಪ್ರತಿಬಿಂಬಿಸುವಂತಿತ್ತು. ಪಾಕಿಸ್ತಾನದ ಪ್ರಧಾನಮಂತ್ರಿ ಭಾರತದೊಂದಿಗಿನ ಮಾತುಕತೆಗೆ ಭೂಮಿಕೆ ಸಿದ್ಧಪಡಿಸಲು ಹವಣಿಸುತ್ತಿದ್ದರೆ ಮೋದಿ ಎಲ್ಲ ಮಾತುಕತೆಗಳನ್ನು ಮುಲಾಜಿಲ್ಲದೇ ನಿರಾಕರಿಸಿಬಿಟ್ಟರು. ಪುಲ್ವಾಮಾ ದಾಳಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲಿಕ್ಕೆ ಭಾರತಕ್ಕೆ ಸಿಕ್ಕ ದೊಡ್ಡ ಅಸ್ತ್ರ. ಅದನ್ನು ಮುಲಾಜಿಲ್ಲದೇ ಬಳಸಿದ ಮೋದಿ ಟೆರರಿಸ್ತಾನ್ ಮೇಲೆ ಪಾಕಿಸ್ತಾನ ಸೂಕ್ತಕ್ರಮ ಕೈಗೊಳ್ಳದ ಹೊರತು ಮಾತುಕತೆ ಸುತರಾಂ ಇಲ್ಲ ಎಂದೇ ಹೇಳಿರುವುದು ಪಾಕಿಸ್ತಾನದ ನಿದ್ದೆಗೆಡಿಸಿದೆ! ಭಾರತ ಹೀಗೊಂದು ಪ್ರತಿಕ್ರಿಯೆ ನೀಡುವಾಗ ಜಗತ್ತಿನ ಯಾವ ರಾಷ್ಟ್ರವೂ ಶಾಂತಿ ಮಾತುಕತೆಯನ್ನು ಮುನ್ನಡೆಸಲು ಭಾರತ ಬಾಗಲೇಬೇಕು ಎಂದು ಹೇಳಲೂ ಇಲ್ಲ. ಏಕೆಂದರೆ ಮೋದಿ 130 ಕೋಟಿ ಜನರ ಪ್ರತಿನಿಧಿ. ಅವರ ವಿರುದ್ಧ ಹೋಗುವುದೆಂದರೆ ಜಗತ್ತಿನ ಜನಸಂಖ್ಯೆಯ ಕಾಲುಭಾಗದಷ್ಟಾದರೂ ಜನರನ್ನು ಎದುರು ಹಾಕಿಕೊಂಡಂತೆಯೇ. ಮತ್ತು ಕಳೆದೈದು ವರ್ಷಗಳಲ್ಲಿ ಭಾರತ ಬೆಳೆದಿರುವ ಪರಿ ಎಲ್ಲರನ್ನೂ ಬೆರಗುಗೊಳಿಸಿಬಿಟ್ಟಿದೆ. ಚೀನಾವನ್ನು ಎದುರುಹಾಕಿಕೊಳ್ಳುವ ಸಾಮಥ್ರ್ಯವುಳ್ಳ ರಾಷ್ಟ್ರವಾಗಿ ಭಾರತವನ್ನು ಮೋದಿ ರೂಪಿಸಿದ್ದರಿಂದ ಸಹಜವಾಗಿಯೇ ಏಷ್ಯಾದಲ್ಲಿ ಭಾರತದ ಪ್ರಭಾವ ಜೋರಾಗಿಬಿಟ್ಟಿದೆ. ಜಪಾನ್, ಅಫ್ಘಾನಿಸ್ತಾನ, ಇರಾನ್, ಶ್ರೀಲಂಕಾಗಳು ಬಿಡಿ ಚೀನಾದ ಅಪಾರ ಪ್ರಭಾವ ಹೊಂದಿದ್ದ ಮಾಲ್ಡೀವ್ಸ್ ಕೂಡ ಮೋದಿಯವರನ್ನು ಗೌರವಿಸಿದ ರೀತಿ ನೋಡಿದರೆ ಪರಿಸ್ಥಿತಿ ವಿಶೇಷವಾಗಿದೆ. ಏಷ್ಯಾದಲ್ಲಿ ಚೀನಾದ ಪ್ರಭಾವ ಕುಗ್ಗಿಸಲು ಭಾರತ ಬಲಾಢ್ಯವಾಗುವುದು ಪಶ್ಚಿಮ ರಾಷ್ಟ್ರಗಳಿಗೂ ಬೇಕಿರುವುದರಿಂದ ಮೋದಿ ಬಲವಾದ ಶಕ್ತಿಯಾಗಿ ನಿಂತುಬಿಟ್ಟಿದ್ದಾರೆ.

2

ಪಾಕಿಸ್ತಾನ ಕಾಲುಕೆರೆದು ಜಗಳಕ್ಕೆ ಬಂದು ಭಯೋತ್ಪಾದನಾ ಕೃತ್ಯ ನಡೆಸಿ ಕಾಣೆಯಾಗಿಬಿಡುತ್ತಿತ್ತು. ಆದರೀಗ ಕಾಲಿಗೆ ಬಿದ್ದಾದರೂ ಮಾತುಕತೆ ನಡೆಸಲು ಕೇಳಿಕೊಳ್ಳುವ ಹಂತಕ್ಕೆ ಬಂದುಬಿಟ್ಟಿದೆ. ನರೇಂದ್ರಮೋದಿಯವರ ರಾಜತಾಂತ್ರಿಕ ನಡೆಯಿಂದಾಗಿ ಪಾಕಿಸ್ತಾನಕ್ಕೆ ಸಾಲಕೊಡಲು ಮುಂದೆ ಬಂದಿದ್ದ ಐಎಮ್ಎಫ್ ಈಗ ಅಪಾರ ನಿಯಮಗಳನ್ನು ಹೇರುತ್ತಿದೆ. ಪಾಕಿಸ್ತಾನಕ್ಕೆ ಸಾಲಕೊಡಬಹುದಾಗಿದ್ದ ಅನೇಕ ರಾಷ್ಟ್ರಗಳು ಭಾರತದೊಂದಿಗೆ ವಿರೋಧ ಕಟ್ಟಿಕೊಳ್ಳಲಾಗದೇ ಶಾಂತವಾಗಿ ಹಿಂದೆ ಸರಿದುಬಿಟ್ಟಿವೆ. ಐಎಮ್ಎಫ್ ವಿಧಿಸಿರುವ ನಿಯಮಗಳನ್ನೇನಾದರೂ ಸಮರ್ಥವಾಗಿ ಜಾರಿಗೆ ತಂದರೆ ಪಾಕಿಸ್ತಾನದ ಜನ ಅಕ್ಷರಶಃ ಭಿಕ್ಷಾ ಪಾತ್ರೆ ಕೈಲಿ ಹಿಡಿದು ನಿಲ್ಲುತ್ತಾರೆ. ಈಗಾಗಲೇ ಡಾಲರ್ ಎದುರು ಪಾಕಿಸ್ತಾನದ ರುಪಯ್ಯಾ 160ರ ಹತ್ತಿರಕ್ಕೆ ಬಂದು ನಿಂತಿದೆ. ನೆನಪಿಡಿ, ಭಾರತದ ರೂಪಾಯಿ ಐದು ವರ್ಷಗಳಲ್ಲಿ ಬದಲಾಗದೇ 67ರಲ್ಲೇ ಇದೆ. ಅಂದರೆ ಪಾಕಿಸ್ತಾನದೊಂದಿಗೆ ನಾವು ತುಲನೆಯೂ ಮಾಡಲಾಗದಷ್ಟು ಬಲಾಢ್ಯವಾಗಿ ಇಂದಿಗೂ ಉಳಿದಿದ್ದೇವೆ. ಪಾಕಿಸ್ತಾನ ಒಂದು ರೀತಿ ತಾನೇ ನೇಯ್ದ ಬಲೆಯಲ್ಲಿ ಸಿಲುಕಿಕೊಂಡು ಪರಿತಪಿಸುತ್ತಿದೆ. ಅಲ್ಲಿನ ಭಯೋತ್ಪಾದಕ ತಾಣಗಳನ್ನು ಮುಚ್ಚಬೇಕೆಂದು ಐಎಮ್ಎಫ್ ತಾಕೀತು ಮಾಡಿದ ನಂತರ ಪಾಕಿಸ್ತಾನ ಬಾಗಿ ಅಂತಹ 13 ತಾಣಗಳನ್ನು ಮುಚ್ಚಿದ್ದೇವೆ ಎಂಬ ಹೇಳಿಕೆ ಕೊಟ್ಟಿತು. ಪಾಕಿಸ್ತಾನ ಈ ಮಾತುಗಳನ್ನು ಹಿಂದೆಯೂ ಹೇಳುತ್ತಾ ಬಂದಿದೆಯಾದರೂ ಎಂದಿಗೂ ಭಯೋತ್ಪಾದಕ ಕೇಂದ್ರಗಳನ್ನು ಅವರು ಮುಚ್ಚಿದ ದಾಖಲೆಯಂತೂ ಇಲ್ಲ! ಆದರೆ, ಈ ಬಾರಿ ಹಾಗೆ ಹೇಳಿಕೊಳ್ಳುವ ಮೂಲಕ ತಮ್ಮಲ್ಲಿ ಇಂತಹ ಕೇಂದ್ರಗಳಿದ್ದಿದ್ದು ನಿಜವೆಂದು ಅವರು ಒಪ್ಪಿಕೊಂಡಂತಾಗಿದೆ. ಇದು ಜಾಗತಿಕವಾಗಿ ಭಾರತ ಮಂಡಿಸುತ್ತಿದ್ದ ಪಾಕಿಸ್ತಾನ ವಿರೋಧಿ ಸಂಗತಿಗಳಿಗೆ ಬಲ ತುಂಬಿದಂತೆಯೇ. ಐಎಮ್ಎಫ್ನಿಂದ ಸಾಲ ಪಡೆಯುವ ಭರದಲ್ಲಿ ಪಾಕ್ ತನಗೆ ತಾನೇ ಉರುಳು ಹಾಕಿಕೊಳ್ಳುತ್ತಿದೆ.

3

ಹಾಗಂತ ಪಾಕಿಸ್ತಾನದ ವಿಷಮ ಪರಿಸ್ಥಿತಿ ಇಲ್ಲಿಗೇ ನಿಂತಿಲ್ಲ. ಅನೇಕ ರಾಷ್ಟ್ರಗಳು ಪಾಕಿಸ್ತಾನಕ್ಕೆ ಹಣ ಕೊಡುತ್ತಿದ್ದುದೇ ಭಾರತವನ್ನು ಅಸ್ಥಿರಗೊಳಿಸಿ ಇಡಬೇಕೆಂಬ ಸಂಕಲ್ಪದ ಕಾರಣಕ್ಕಾಗಿ. ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತ ಅಸ್ಥಿರಗೊಳ್ಳುವುದಿರಲಿ ಮೊದಲಿಗಿಂತಲೂ ಹೆಚ್ಚು ಬಲವಾಗಿ ಸುತ್ತಮುತ್ತಲ ಜನರ ಕಣ್ಣು ಕುಕ್ಕುವಂತೆ ಬೆಳೆದು ನಿಂತಿದೆ. ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಜಿಲ್ಲೆಯನ್ನು ಭಯೋತ್ಪಾದಕ ಮುಕ್ತವೆಂದು ರೂಪಿಸಿ ಇನ್ನುಳಿದ ನಾಲ್ಕು ಜಿಲ್ಲೆಯನ್ನು ಅದೇ ದಿಕ್ಕಿನತ್ತ ಕೊಂಡೊಯ್ಯುವ ಭರವಸೆಯ ಮಾತುಗಳನ್ನು ಅವರಾಡುತ್ತಿದ್ದಂತೆ ಪಾಕಿಸ್ತಾನದ ಜಂಘಾಬಲವೇ ಉಡುಗಿಹೋಗಿತ್ತು. ನೋಟು ಅಮಾನ್ಯೀಕರಣದಿಂದ ಆದ ಆಘಾತಕ್ಕೆ ಇದು ಇನ್ನಷ್ಟು ಸೇರಿಸಿತ್ತು. ಪುಲ್ವಾಮಾ ದಾಳಿಯ ಮೂಲಕ ಮೋದಿಯವರ ಸಾಮಥ್ರ್ಯದ ಪ್ರಶ್ನೆಯನ್ನು ಜನ ಕೇಳುವಂತೆ ಮಾಡುವ ಪ್ರಯತ್ನ ಮಾಡಿ ಪಾಕಿಸ್ತಾನ ಮತ್ತೆ ಸೋತುಹೋಯ್ತು. ಮೋದಿ ಈ ಅವಕಾಶವನ್ನು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಉದ್ದೇಶವನ್ನು ಬಿಂಬಿಸುವ ಪ್ರಯತ್ನಕ್ಕೆ ಬಳಸಿಕೊಂಡುಬಿಟ್ಟರು. ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಈ ಕಾರಣಕ್ಕಾಗಿ ಚೀನಾ ಕೂಡ ಮುಖಭಂಗ ಎದುರಿಸಬಹುದಾದ ಪರಿಸ್ಥಿತಿ ನಿಮರ್ಾಣವಾದಮೇಲಂತೂ ಚೀನಾ ಪಾಕಿಸ್ತಾನಕ್ಕೆ ಮುಕ್ತ ಸಹಕಾರ ಕೊಡುವುದನ್ನೂ ನಿಲ್ಲಿಸಬೇಕಾಗಿ ಬಂತು. ಈಗಂತೂ ಅಮಿತ್ಶಾ ಕಾಶ್ಮೀರದ ಚಿತ್ರಣವನ್ನೇ ಬದಲಾಯಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 370ನೇ ವಿಧಿಯನ್ನು ಸಂವಿಧಾನದಿಂದ ಕಿತ್ತು ಬಿಸಾಡಿದರೆ ಕಾಶ್ಮೀರದ ಕೋಡು ಮುರಿದಂತೆ. ಕ್ಷೇತ್ರ ಮರುವಿಂಗಡಣೆಯಾದರಂತೂ ಕಾಶ್ಮೀರದ ಜನರ ಧಿಮಾಕೇ ಸತ್ತಂತೆ. ಅಲ್ಲಿಗೆ ಪಾಕಿಸ್ತಾನದೊಂದಿಗಿನ ಸಂಬಂಧಗಳು ಕಡಿಯುವ ಹೊತ್ತು ಹತ್ತಿರವಿದೆ ಎಂದಾಯ್ತು. ಅದಾಗಲೇ ಹುರಿಯತ್ ಕಾನ್ಫರೆನ್ಸು ಕೇಂದ್ರಸಕರ್ಾರಕ್ಕೆ ಪ್ರತಿಕ್ರಿಯಿಸಿರುವ ರೀತಿಯನ್ನು ನೋಡಿದರೆ ಮತ್ತು ದೇಶಕ್ಕೆ ಮೋಸ ಮಾಡಿದ ಕಾಶ್ಮೀರದ ನಾಯಕರನ್ನು, ಅಧಿಕಾರಿ ವರ್ಗದವರನ್ನು ಮುಲಾಜಿಲ್ಲದೇ ಒಳಕ್ಕೆ ತಳ್ಳಿ ಆಸ್ತಿಯನ್ನು ವಶಪಡಿಸಿಕೊಳ್ಳುತ್ತಿರುವ ಭಾರತದ ಕಾರ್ಯಪ್ರನಾಳಿಯ ವೈಖರಿಯನ್ನು ನೋಡಿದರೆ ಕಾಶ್ಮೀರಕ್ಕೆ ಅಚ್ಛೇದಿನ್ ಬಲುದೂರವಿಲ್ಲ. ಅಂದಹಾಗೆ ಇತ್ತೀಚೆಗೆ ಸಿಕ್ಕಿಬಿದ್ದ ಕೆಲವು ಮಾವೋವಾದಿಗಳ ಕೈಲಿ ಅತ್ಯಾಧುನಿಕವಾದ ಪಾಕಿಸ್ತಾನದ ಹೆಕ್ಲರ್ ಮತ್ತು ಕೋಚ್ ಜಿ3 ರೈಫಲ್ಲುಗಳು ಸಿಕ್ಕಿದ್ದು ಭಾರತವನ್ನು ಅಸ್ಥಿರಗೊಳಿಸುವ ಪಾಕಿಸ್ತಾನದ ಪ್ರಯತ್ನ ಭಿನ್ನ-ಭಿನ್ನ ಮಾರ್ಗಗಳ ಮೂಲಕ ನಡೆಯುತ್ತಲೇ ಇದೆ ಎಂಬುದು ಸಾಬೀತುಪಡಿಸಲು ಸಾಕಷ್ಟಾಯ್ತು!

ಇದು ಸಮಸ್ಯೆಯನ್ನು ಪರಿಹರಿಸುವ ಹೊತ್ತು. ಇನ್ನು ದೀರ್ಘಕಾಲ ಪಾಕಿಸ್ತಾನ ಸಮಸ್ಯೆಯಾಗಿ ಉಳಿಯಬಾರದು. ಅದನ್ನು ನಾಲ್ಕುಚೂರು ಮಾಡಿಯಾದರೂ ಪರಿಹಾರ ಹುಡುಕಲೇಬೇಕು!

Comments are closed.