ವಿಭಾಗಗಳು

ಸುದ್ದಿಪತ್ರ


 

ಮಿಶೆಲ್ ಬಂದಾಯ್ತು ಇನ್ನೀಗ ವಿಜಯಮಲ್ಯ!

ಈ ಲೇಖನ ಓದುವ ವೇಳೆಗಾಗಲೇ ವಿಜಯಮಲ್ಯ ಪ್ರಕರಣ ಏನಾಯಿತೆಂಬುದು ಒಂದು ಹಂತಕ್ಕೆ ನಿಮಗೆಲ್ಲರಿಗೂ ಗೊತ್ತಾಗಿರುತ್ತದೆ. ಲಂಡನ್ನಿನಲ್ಲಿ ಅಡಗಿರುವ ವಿಜಯಮಲ್ಯ ಬ್ಯಾಂಕುಗಳಿಗೆ ದುಡ್ಡು ಕಟ್ಟದೇ ಅಲೆದಾಡುತ್ತಿದ್ದಾನೆ. ಅವನನ್ನು ಮೋದಿಯೇ ಓಡಿಸಿದ್ದಾರೆಂಬುದು ಕಾಂಗ್ರೆಸ್ಸಿಗರ ವಾದ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಮಲ್ಯನಿಗೆ ಸಾಲ ಕೊಟ್ಟಿದ್ದೇ ಕಾಂಗ್ರೆಸ್ಸು ಸಕರ್ಾರ. ಆತನನ್ನು ಹಿಡಿದು ತರಲೆಂದು ಇಂಗ್ಲೆಂಡಿನ ಪ್ರಧಾನಿ ತೆರೆಸಾಮೇಯೊಂದಿಗೆ ಕಿತ್ತಾಡುತ್ತಿರುವುದು ಈಗಿನ ಸಕರ್ಾರ! ಹೇಗಾದರೂ ಮಾಡಿ ವಿಜಯಮಲ್ಯನಿಂದ ಲೂಟಿಗೈದ ಹಣವನ್ನು ಕಕ್ಕಿಸಿ ಭ್ರಷ್ಟಾಚಾರಕ್ಕೆ ತಮ್ಮದು ಜೀರೋ ಟಾಲರೆನ್ಸ್ ಎಂದು ತೋರಿಸುವ ಹಠಕ್ಕೆ ಮೋದಿ ಬಿದ್ದಿದ್ದಾರೆ. ಹೀಗಾಗಿಯೇ ಅದಕ್ಕೆ ಪೂರ್ವಭಾವಿಯಾಗಿ ಅಗಸ್ತಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ನ ಮಧ್ಯವತರ್ಿ ಕ್ರಿಶ್ಚಿಯನ್ ಮಿಶೆಲ್ನನ್ನು ಭಾರತಕ್ಕೆಳೆದು ತಂದಿದ್ದಾರೆ. ಗಲ್ಫ್ ರಾಷ್ಟ್ರಗಳಿಂದ ಹೀಗೆ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವುದು ಸುಲಭದ ಮಾತಲ್ಲ. ಮೋದಿ ರಾಜತಾಂತ್ರಿಕ ನೈಪುಣ್ಯದಿಂದ ಅದನ್ನು ಸಾಧಿಸಿಬಿಟ್ಟಿದ್ದಾರೆ.

5

ಅಗಸ್ತಾವೆಸ್ಟ್ಲ್ಯಾಂಡಿನ ಹಗರಣ ಅನೇಕ ರಾಷ್ಟ್ರಗಳನ್ನು ಒಳಗೊಳ್ಳುವಂಥದ್ದು. ಅವರ ಇಡಿಯ ಪ್ರಕರಣಗಳು ಭ್ರಷ್ಟಾಚಾರದಿಂದ ಮುಕ್ತವಾದ ಉದಾಹರಣೆಯೇ ಇಲ್ಲ. ದಕ್ಷಿಣಕೊರಿಯಾಕ್ಕೆ ಅಗಸ್ತಾವೆಸ್ಟ್ಲ್ಯಾಂಡ್ ಕಾಪ್ಟರ್ಗಳನ್ನು ಮಾರುವುದರ ಹಿಂದೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸುದ್ದಿಯಾಗಿತ್ತು. ಟೆಂಡರ್ಗಳನ್ನು ಮನಸೋ ಇಚ್ಛೆ ಬದಲಾಯಿಸಿ ತಮ್ಮ ಬಳಿಯಿರುವ ಕಾಪ್ಟರ್ಗಳನ್ನು ಮಾರುವುದಕ್ಕೆ ಪೂರಕವಾಗಿ ರೂಪಿಸಿಕೊಳ್ಳಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದೊಡನೆ ಇದರಲ್ಲಿ ಭಾಗಿಯಾಗಿದ್ದ ದಕ್ಷಿಣಕೊರಿಯಾದ ಸೈನ್ಯಾಧಿಕಾರಿಗಳು, ಮಧ್ಯವತರ್ಿಗಳನ್ನು ಅಲ್ಲಿನ ಸಕರ್ಾರ ಶಿಕ್ಷಿಸಿತ್ತು. ಪನಾಮಾದಲ್ಲೂ ಈ ಹೆಲಿಕಾಪ್ಟರ್ಗಳನ್ನು ಮಾರುವಾಗ ನೇರ ಅಧ್ಯಕ್ಷರೊಂದಿಗೆ ಡೀಲು ಕುದುರಿಸಿದ್ದಾರೆಂಬ ಆರೋಪಗಳು ಕೇಳಿ ಬಂದೊಡನೆ ಇಡಿಯ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು. ಇದೇ ಹೆಲಿಕಾಪ್ಟರ್ಗಳನ್ನು ಭಾರತ ಕೊಳ್ಳಬೇಕೆಂದು ನಿರ್ಧರಿಸಿದ್ದು ವಿಪಯರ್ಾಸದ ಸಂಗತಿ! ಏಕೆಂದರೆ 6000 ಮೀಟರ್ ಎತ್ತರದಲ್ಲಿ ಹಾರಾಡುವ ಹೆಲಿಕಾಪ್ಟರ್ಗಳು ಸೈನ್ಯಕ್ಕೆ ಅಗತ್ಯವಿತ್ತು. ಇದನ್ನು ವಿವಿಐಪಿಗಳನ್ನು ಹೊತ್ತೊಯ್ಯಲು ಬಳಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅಗಸ್ತಾ ಕಾಪ್ಟರ್ಗಳು ಇಷ್ಟು ಎತ್ತರಕ್ಕೆ ಹಾರಾಡದು ಎಂದು ಅರಿವಾದೊಡನೆ ಸೈನ್ಯ ನಾಲ್ಕುವರೆ ಸಾವಿರ ಎತ್ತರಕ್ಕೆ ಹಾರಾಡುವ ಕಾಪ್ಟರ್ಗಳು ಸಿಕ್ಕರೆ ಸಾಕೆಂದು ತಮ್ಮ ಅಗತ್ಯವನ್ನೇ ಮಾರ್ಪಡಿಸಿಬಿಟ್ಟಿದ್ದವು. ಏರ್ಚೀಫ್ ಮಾರ್ಶಲ್ ಎಸ್.ಪಿ ತ್ಯಾಗಿಗೆ ಅವರ ಸೋದರಿ ಜ್ಯೂಲಿ ತ್ಯಾಗಿಯ ಮೂಲಕ ಹಣ ಸಂದಾಯವಾಗಿತ್ತೆಂಬ ಆರೋಪ ಕೇಳಿಬಂತು. ಈ ಇಡಿಯ ಪ್ರಕರಣದಲ್ಲಿ ಕ್ರಿಶ್ಚಿಯನ್ ಮಿಶೆಲ್ ಸೇರಿಕೊಂಡಿದ್ದು ವಿಶೇಷ. ಆತ ದುಬೈ ನಿವಾಸಿ. ಹೀಗಾಗಿ ಎಲ್ಲಿ ಯಾವ ಪ್ರಕರಣ ನಡೆದರೂ ಯಾವ ರಾಷ್ಟ್ರದ ಸಕರ್ಾರವೂ ಆತನನ್ನು ಬಂಧಿಸುವಂತಿರಲಿಲ್ಲ. ಅನೇಕ ಬಾರಿ ದುಬೈನಲ್ಲೂ ಕೂಡ ಸ್ಥಳೀಯ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸಿ ಆತ ಓಡಾಡಿಕೊಂಡಿದ್ದ ಎನ್ನಲಾಗುತ್ತದೆ! ಇಂತಹ ಹೊತ್ತಿನಲ್ಲಿ ಮೋದಿ ಸಕರ್ಾರ ಬಂದೊಡನೆ ಇವರನ್ನೆಲ್ಲಾ ಎಳೆದು ತರಬೇಕೆಂದು ಸಂಕಲ್ಪಿಸಲಾಯ್ತು. ಸತತವಾಗಿ ಅಂತರರಾಷ್ಟ್ರೀಯ ಮಟ್ಟದ ಸಂಬಂಧಗಳನ್ನು ಬಲಪಡಿಸಿಕೊಳ್ಳುತ್ತಾ, ಗಲ್ಫ್ ರಾಷ್ಟ್ರಗಳೊಂದಿಗಿನ ತಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಚುರುಕುಗೊಳಿಸಿ ಭಾರತ ಈ ರಾಷ್ಟ್ರಗಳ ಅಭಿವೃದ್ಧಿಗೆ ಅನಿವಾರ್ಯವೆಂಬುದನ್ನು ಮನದಟ್ಟು ಮಾಡಿಸಿದ ಮೋದಿ ಈ ಸಂಬಂಧವನ್ನು ಉಳಿಸಿಕೊಳ್ಳಲು ಮಿಶೆಲ್ನನ್ನು ಹೊರದಬ್ಬಲೇಬೇಕೆಂಬ ಮನದಿಂಗಿತ ವ್ಯಕ್ತಪಡಿಸಿದರು. ಒಬ್ಬ ಮಿಶೆಲ್ನಿಗಾಗಿ ಭಾರತದಂತಹ ರಾಷ್ಟ್ರವನ್ನು ಕಳೆದುಕೊಳ್ಳಲು ಗಲ್ಫ್ ರಾಷ್ಟ್ರಗಳು ಸಿದ್ಧವಿರಲಿಲ್ಲ. ಆದರೆ ಈತ ಕೈಗೇ ಸಿಗುತ್ತಿಲ್ಲವಲ್ಲ. ಈ ಹೊತ್ತಿನಲ್ಲಿಯೇ ಮಧ್ಯ ಪ್ರವೇಶಿಸಿದ್ದು ಅಜಿತ್ ದೋವೆಲ್. ಮಿಶೆಲ್ ಯಾವ ವಿಮಾನದಿಂದ ಯಾವ ನಿಲ್ದಾಣಕ್ಕೆ ಯಾವ ದಿನ ಬರುತ್ತಿದ್ದಾನೆಂಬ ಗುಪ್ತಮಾಹಿತಿಯನ್ನು ಅಲ್ಲಿನ ಪೊಲೀಸರೊಂದಿಗೆ ಹಂಚಿಕೊಂಡರು. ಆ ಪೊಲಿಸರು ಅವನನ್ನು ಬಂಧಿಸಲು ವಿಫಲವಾದರೆ ಮುಂದೇನು ಮಾಡಬೇಕೆಂಬ ಯೋಜನೆಯನ್ನೂ ಸಿದ್ಧವಾಗಿರಿಸಿಕೊಂಡರು. ಬೇಬಿ ಚಲನಚಿತ್ರದಂತೆ ಅವನನ್ನು ಅಲ್ಲಿಂದ ಹೊತ್ತುಕೊಂಡು ಬಂದಿದ್ದರೂ ಅಚ್ಚರಿ ಪಡಬೇಕಿರಲಿಲ್ಲವೇನೋ! ಆದರೆ, ದುಬೈ ಪೊಲೀಸರು ಪೂರ್ಣ ಸಹಕಾರ ನೀಡಿದ್ದಲ್ಲದೇ ಮಿಶೆಲ್ನನ್ನು ಬಂಧಿಸಿ ಕೋಟರ್ಿನ ಮುಂದೆ ಹಾಜರುಪಡಿಸಿದರು. ಭಾರತ ತನ್ನನ್ನು ಹಿಡಿದುಕೊಂಡು ಹೋಗಲಾರದು ಎಂಬ ಅಸೀಮ ಧೈರ್ಯ ಹೊಂದಿದ್ದ ಮಿಶೆಲ್ನಿಗೆ ಇದು ಅಚ್ಚರಿ ತರಿಸಿತ್ತು. ಆದರೆ ವಿಚಾರಣೆ ನಡೆಸಿ ಅವನನ್ನು ಕೋಟರ್ು ಮುಕ್ತಗೊಳಿಸಿತಲ್ಲದೇ ಸ್ಥಳೀಯ ಸಕರ್ಾರದ ನಿಧರ್ಾರಕ್ಕೆಂದು ಕಾದುಕುಳಿತಿತ್ತು. ಈ ಹೊತ್ತಿನಲ್ಲಿಯೇ ಭಾರತದ ಇಂಗ್ಲೀಷ್ ಮಾಧ್ಯಮಗಳು ಸಿಬಿಐ ಮಿಶೆಲ್ನ ವಿರುದ್ಧ ಯಾವ ಸಾಕ್ಷ್ಯವನ್ನೂ ಪೂರೈಸುವುದರಲ್ಲಿ ಸೋತುಹೋಗಿರುವುದರಿಂದ ಆತನನ್ನು ಭಾರತಕ್ಕೆ ಒಪ್ಪಿಸುವುದರಲ್ಲಿ ದುಬೈ ನಿರಾಕರಿಸಿದೆ ಎಂಬ ಸುಳ್ಳುಸುದ್ದಿಯನ್ನು ಪ್ರಕಟಿಸಿ ಸೊನಿಯಾ ಎದುರಿಗೆ ಸಾಷ್ಟಾಂಗ ಪ್ರಣಾಮ ಮಾಡಿದವು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಒಟ್ಟಾರೆ ಒಪ್ಪಂದಕ್ಕೆ ಸಂಬಂಧಿಸಿದ ಲಕ್ಷಾಂತರ ಪುಟಗಳನ್ನು ಓದಿ ಅದರೊಳಗಿಂದ ಸಮರ್ಥ ಸಾಕ್ಷ್ಯವನ್ನು ಸಂಗ್ರಹಿಸಿ ದುಬೈನ ಮುಂದೆ ಪ್ರಸ್ತುತ ಪಡಿಸುವಲ್ಲಿ ಭಾರತ ಯಶಸ್ವಿಯಾಯ್ತು. ಜೊತೆಗೆ ಸುಷ್ಮಾಸ್ವರಾಜರ ರಾಜತಾಂತ್ರಿಕ ನಡೆಯ ಪ್ರಯತ್ನವೂ ಕೆಲಸ ಮಾಡಿ ಇಡಿಯ ಪ್ರಕರಣವನ್ನು ಸ್ಥಳೀಯ ಸಕರ್ಾರ ಕೋಟರ್ಿನ ವಶಕ್ಕೆ ಬಿಟ್ಟುಬಿಟ್ಟಿತು. ಮಿಶೆಲ್ನನ್ನು ಭಾರತಕ್ಕೆ ವಗರ್ಾಯಿಸುವುದರಲ್ಲಿ ತನ್ನ ಅಭ್ಯಂತರವಿಲ್ಲವೆಂದೂ ಹೇಳಿತು. ಇದು ಮಿಶೆಲ್ನಿಗಷ್ಟೇ ಅಲ್ಲ ಭಾರತದಲ್ಲಿದ್ದ ಅನೇಕ ಕಾಂಗ್ರೆಸ್ಸಿನ ನಾಯಕರಿಗೂ ನುಂಗಲಾರದ ತುತ್ತಾಗಿಬಿಟ್ಟಿತು. ಕೋಟರ್ು ತೀರ್ಪನ್ನು ಭಾರತದ ಪರವಾಗಿ ಕೊಟ್ಟು ಮಿಶೆಲ್ನನ್ನು ನಮ್ಮ ಸುಪದರ್ಿಗೆ ಒಪ್ಪಿಸುವ ನಿರ್ಣಯ ಕೈಗೊಂಡೊಡನೆ ಅವನನ್ನು ಹೊತ್ತುಕೊಂಡು ಬರಲು ಸಿದ್ಧವಾಗಿದ್ದ ವಿಮಾನದಲ್ಲಿ ಅವನನ್ನು ಕೂರಿಸಿ ಭಾರತಕ್ಕೆ ಎಳೆತರಲಾಯ್ತು! ಮಿಶೆಲ್ ದಾರಿಯುದ್ದಕ್ಕೂ ಕೂಗಾಡುತ್ತಲಿದ್ದ. ಭಾರತದ ಪೊಲೀಸರನ್ನು ಕೆಲಸಕ್ಕೆ ಬಾರದವರೆಂದು, ಅವರಿಗೆ ಹೆದರಬೇಕಿಲ್ಲವೆಂದು ಪದೇ-ಪದೇ ಮೂದಲಿಸುತ್ತಿದ್ದ ಮಿಶೆಲ್ ಈಗ ಅದೇ ಪೊಲೀಸರ ಅತಿಥಿಯಾಗಲು ಹೊರಟಿದ್ದ.

6

ಈ ಅಯೋಗ್ಯರಿಗೆಲ್ಲಾ ಇನ್ನೊಂದಾರು ತಿಂಗಳು ಹೇಗಾದರೂ ತಳ್ಳಿದರೆ ಸಾಕಿತ್ತು. ಚುನಾವಣೆಗಳು ಬರುತ್ತವೆ, ಹೊಸ ಸಕರ್ಾರ ರಚನೆಯಾಗುತ್ತದೆ. ಆಗ ತನ್ನನ್ನು ಭಾರತ ಹಿಡಿಯಲಾರದು ಎಂದು ಆತ ನಿಶ್ಚಯಿಸಿದ್ದ. ಮೋದಿ ಅವನನ್ನು ಎಳೆದುತಂದು ದೊಡ್ಡ ಬದಲಾವಣೆಯೊಂದಕ್ಕೆ ನಾಂದಿ ಹಾಡಿದರು. ಆದರೆ ಮಿಶೆಲ್ನನ್ನು ಎಳೆದು ತಂದದ್ದು ಇಂಗ್ಲೆಂಡಿಗೆ ಎಂತಹ ಒತ್ತಡವನ್ನುಂಟು ಮಾಡಿದೆ ಎಂದರೆ ಮಲ್ಯನನ್ನು ಅವರಿಗೆ ಒಪ್ಪಿಸಲಿಲ್ಲವೆಂದರೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ. ಆರು ತಿಂಗಳು ಕಾಯುವಷ್ಟು ಪರಿಸ್ಥಿತಿ ತೆರೆಸಾಮೇಗಂತೂ ಇಲ್ಲ. ಏಕೆಂದರೆ ಬ್ರೆಕ್ಸಿಟ್ನ ವಿಚಾರದಲ್ಲಿ ಆಕೆ ಅದಾಗಲೇ ಇಂಗ್ಲೆಂಡಿನಲ್ಲಿ ಸಾಕಷ್ಟು ಅವಮಾನ ಎದುರಿಸಿಯಾಗಿದೆ. ಪ್ರತಿರೋಧವೂ ವ್ಯಕ್ತವಾಗುತ್ತಿದೆ. ಇನ್ನು ಭಾರತದೊಂದಿಗಿನ ಸಂಬಂಧ ಹದಗೆಡಿಸಿಕೊಂಡರೆ ಕಥೆ ಮುಗಿದಂತೆ. ಇವೆಲ್ಲವನ್ನೂ ಗಮನಿಸಿಯೇ ಮಲ್ಯ ಹಣ ಮರಳಿಸಿಬಿಡುತ್ತೇನೆಂದು ಗೋಗರೆಯುತ್ತಿರುವುದು. ಆತನ ಆ ಮಾತಿಗೆ ಮೋದಿ ಒಂದಿನಿತೂ ಸೊಪ್ಪು ಹಾಕಲಿಲ್ಲವೇಕೆಂದರೆ ಇದು ಕಾಲ ತಳ್ಳಲು ಅವನ ಮತ್ತೊಂದು ನಾಟಕವೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಎಲ್ಲಾ ರಾಜತಾಂತ್ರಿಕ ಉಪಾಯಗಳನ್ನು ಬಳಸಿಕೊಂಡು ಅವನನ್ನು ಎಳೆದು ತಂದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಕಾಲ ಪಕ್ವವಾಗಿದೆ ಅಥವಾ ಭಾರತದ ಕಾಲ ಈಗ ಶುರುವಾಗಿದೆ!

Comments are closed.