ವಿಭಾಗಗಳು

ಸುದ್ದಿಪತ್ರ


 

ಮೋಜಿಗಾಗಿ ಮೋದಿಯ ವಿದೇಶ ಪ್ರವಾಸ?!

ನರೇಂದ್ರಮೋದಿಯವರು ತಮ್ಮ ಪ್ರವಾಸವನ್ನು ಅವರೇ ಹೇಳಿದಂತೆ ‘ಸಿಂಗಲ್ ಟಿಕೆಟ್, ಡಬಲ್ ಜನರ್ಿ’ ಎಂಬಂತೆ ಮಾಡುತ್ತಾರೆ. ಒಮ್ಮೆ ಅವರು ಯಾತ್ರೆಗೆ ಹೊರಟರೆ ಐದಾರು ರಾಷ್ಟ್ರವನ್ನು ಸುತ್ತಾಡಿ ಬಂದುಬಿಡುತ್ತಾರೆ. ಅವರು ಒಂದೇ ರಾಷ್ಟ್ರಕ್ಕೆಂದು ಹೋಗಿದ್ದು ಬಲು ಅಪರೂಪ.

ನರೇಂದ್ರಮೋದಿಯವರ ವಿದೇಶಪ್ರವಾಸದ ಒಟ್ಟಾರೆ ವರದಿ ಬಂದಿದೆ. ಐದು ವರ್ಷಗಳಲ್ಲಿ 44 ರಾಷ್ಟ್ರಗಳನ್ನು ನರೇಂದ್ರಮೋದಿ ಸಂದಶರ್ಿಸಿದರೆ ಎರಡನೇ ಅವಧಿಯ ಯುಪಿಎ ಕಾಲಘಟ್ಟದಲ್ಲಿ ಮನಮೋಹನ್ ಸಿಂಗರು 38 ರಾಷ್ಟ್ರಗಳನ್ನು ಸುತ್ತಾಡಿ ಬಂದಿದ್ದರು. ಖಚರ್ು ವೆಚ್ಚಗಳ ವ್ಯತ್ಯಾಸ 50 ಕೋಟಿಗಿಂತ ಹೆಚ್ಚಿಲ್ಲ. ವಾಸ್ತವವಾಗಿ ನರೇಂದ್ರಮೋದಿಯವರು ಏರ್ ಇಂಡಿಯಾದ ಮೂಲಕ ಪ್ರಯಾಣಿಸುತ್ತಾರೆ. ಪ್ರತಿ ಪ್ರಯಾಣದ ನಂತರ ಏರ್ ಇಂಡಿಯಾ ಪ್ರವಾಸದ ವೆಚ್ಚವನ್ನು ಪ್ರಧಾನಮಂತ್ರಿ ಕಛೇರಿಗೆ ಕಳಿಸುತ್ತದೆ. ಆನಂತರ ಸಕರ್ಾರದ ಬೊಕ್ಕಸದಿಂದ ಅದನ್ನು ಭರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಛೇರಿಗೆ ಕೇಳಲಾದ ಪ್ರಶ್ನೆಯಿಂದ ಈ ಮಾಹಿತಿ ಹೊರಬಂದಿದೆ. ಐದು ವರ್ಷಗಳ ನಂತರ ಎಲ್ಲದರ ಬೆಲೆಯೂ ಏರಿಕೆಯಾಗಬೇಕಿರುವಾಗ ನರೇಂದ್ರಮೊದಿಯವರ ಪ್ರವಾಸದ ವೆಚ್ಚ ಮಾತ್ರ ಏರಿಕೆಯಾಗಲಿಲ್ಲವೇಕೆ ಎಂಬುದಕ್ಕೆ ಅನೇಕ ಬಗೆಯ ಚಚರ್ೆಗಳು ಮುಂದಿಡಲ್ಪಡುತ್ತಿವೆ.

2
ನರೇಂದ್ರಮೋದಿಯವರು ತಮ್ಮ ಪ್ರವಾಸವನ್ನು ಅವರೇ ಹೇಳಿದಂತೆ ‘ಸಿಂಗಲ್ ಟಿಕೆಟ್, ಡಬಲ್ ಜನರ್ಿ’ ಎಂಬಂತೆ ಮಾಡುತ್ತಾರೆ. ಒಮ್ಮೆ ಅವರು ಯಾತ್ರೆಗೆ ಹೊರಟರೆ ಐದಾರು ರಾಷ್ಟ್ರವನ್ನು ಸುತ್ತಾಡಿ ಬಂದುಬಿಡುತ್ತಾರೆ. ಅವರು ಒಂದೇ ರಾಷ್ಟ್ರಕ್ಕೆಂದು ಹೋಗಿದ್ದು ಬಲು ಅಪರೂಪ. ರಾತ್ರಿಗಳನ್ನು ವಿಮಾನದಲ್ಲೇ ಕಳೆದು ಬೆಳಿಗ್ಗೆ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುವ ಜಾಯಮಾನ ಅವರದ್ದು. ಮನಮೋಹನ ಸಿಂಗರಿದ್ದಾಗ ಹೆಚ್ಚೆಂದರೆ ಎರಡು ದೇಶಗಳನ್ನು ಅವರು ಭೇಟಿ ಮಾಡುತ್ತಿದ್ದರು. ನರೇಂದ್ರಮೋದಿ 2015ರಲ್ಲಿ ಒಮ್ಮೆಯಂತೂ ಉಜ್ಬೇಕಿಸ್ತಾನ, ಖಜಕಿಸ್ತಾನ, ರಷ್ಯಾ, ತುಕರ್್ಮೆನಿಸ್ತಾನ್, ಕಿಗರ್ಿಸ್ತಾನ್ ಮತ್ತು ತಜಕಿಸ್ತಾನ ಆರೂ ರಾಷ್ಟ್ರಗಳನ್ನು ಒಂದೇ ಉಸಿರಿನಲ್ಲಿ ಭೇಟಿ ಮಾಡಿ ಬಂದಿದ್ದರು! ಹೀಗೆ ಭೇಟಿ ಮಾಡುವುದರಿಂದ ಅನೇಕ ಬಾರಿ ದೊಡ್ಡ ರಾಷ್ಟ್ರಗಳ ನಡುವೆ ಸಣ್ಣ ರಾಷ್ಟ್ರಗಳ ಭೇಟಿ ಸಾಧ್ಯವಾಗಿಬಿಡುತ್ತದೆ. ಆ ಸಣ್ಣ ರಾಷ್ಟ್ರಗಳನ್ನೇ ಭೇಟಿ ಮಾಡಲು ವೆಚ್ಚ ಹೆಚ್ಚಾಗುತ್ತಿದ್ದುದನ್ನು ತಪ್ಪಿಸಲು ಇದು ಸಮರ್ಥ ಮಾರ್ಗ. ಅನೇಕ ದಶಕಗಳಿಂದ ಭಾರತ ಭೇಟಿಯೇ ಮಾಡಿರದಿದ್ದ ಅನೇಕ ರಾಷ್ಟ್ರಗಳನ್ನು ಮೋದಿ ಭೇಟಿ ಮಾಡಿದ ರೀತಿಯೇ ಇದು.

3

ನರೇಂದ್ರಮೋದಿಯವರು ಪ್ರವಾಸಕ್ಕೆ ಹೋಗುವಾಗ ತಮ್ಮೊಂದಿಗೆ ಅನವಶ್ಯಕವಾಗಿ ಜನರನ್ನೊಯ್ಯುವುದಿಲ್ಲ ಎನ್ನುವುದೂ ಮೆಚ್ಚಲೇಬೇಕಾದ ಮತ್ತೊಂದು ಮಾತು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರಮೋದಿಯವರ ಪ್ರವಾಸದ ಕುರಿತಂತೆ ಪತ್ರಕರ್ತರೊಬ್ಬರು ಆಡಿದ ಮಾತು ವೈರಲ್ ಆಯ್ತು. ಅಟಲ್ಜಿ ಮನಮೋಹನ್ ಸಿಂಗರು ಇರುವಾಗ ಪತ್ರಕರ್ತರಿಗೆ ವಿದೇಶ ಪ್ರವಾಸವೆಂದರೆ ಮೋಜಿನ ಯಾತ್ರೆಯಾಗಿರುತ್ತಿತ್ತು. ವಿಮಾನಗಳಲ್ಲಿ ಅವರಿಗೆ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿತ್ತು. ವಿದೇಶೀ ಬ್ರ್ಯಾಂಡುಗಳ ಹೆಂಡ-ಸಾರಾಯಿ ಸರಬರಾಜು ಇರುತ್ತಿತ್ತು. ವರದಿ ಮಾಡಲು ಹೊರಟ ಕಡೆ ಜಾಗತಿಕ ಮಟ್ಟದ ತಿಂಡಿ, ತೀರ್ಥಗಳನ್ನು (ಅಕ್ಷರಶಃ ತೀರ್ಥವನ್ನು) ಸರಬರಾಜು ಮಾಡಲಾಗುತ್ತಿತ್ತು. ಅನೇಕ ಪತ್ರಕರ್ತರು ಮರಳಿ ಕೋಣೆಗೆ ಬರುವಾಗ ಅಲ್ಲಿಟ್ಟಿದ್ದ ಹೆಂಡದ ನಾಲ್ಕಾರು ಬಾಟಲುಗಳನ್ನು ಕೈಯಲ್ಲಿ ಹಿಡಿಯಲಾಗದೇ ಹಿಡಿದುಕೊಂಡು ಬರುತ್ತಿದ್ದರಂತೆ. ಈಗ ಎಲ್ಲವೂ ಬದಲಾಗಿದೆ. ದಾರಿಯುದ್ದಕ್ಕೂ ಹೆಂಡದ ಸರಬರಾಜಿಲ್ಲ. ಸಭೆ-ಸಮಾರಂಭಗಳಲ್ಲಿ ವರದಿ ಮಾಡಲು ಬೇಕಾಗಿರುವ ಅತ್ಯಾಧುನಿಕ ವ್ಯವಸ್ಥೆ ಇರುವುದೇನೋ ನಿಜ, ಆದರೆ ತಿನ್ನಲು ಬಿಸ್ಕತ್ತು ಮತ್ತು ಕುಡಿಯಲು ಚಹಾ ಬಿಟ್ಟರೆ ಮತ್ತೇನೂ ಇಲ್ಲ. ಇಷ್ಟೇ ಅಲ್ಲ, ಹಿಂದಿನ ಪ್ರಧಾನಿಗಳು ವಿದೇಶಕ್ಕೆ ಹೋದಾಗ ವಿಶ್ರಾಂತಿಗೆ ಸಾಕಷ್ಟು ಸಮಯವನ್ನು ಕೊಡುತ್ತಿದ್ದರಂತೆ. ಅಟಲ್ಜಿ ಒಂದಿಡೀ ದಿನ ಕೆಲಸ ಹೆಚ್ಚಾಯ್ತೆನಿಸಿದರೆ ವಿಶ್ರಾಂತಿ ತೆಗೆದುಕೊಂಡುಬಿಡುತ್ತಿದ್ದರಂತೆ. ಮನಮೋಹನ್ ಸಿಂಗರು ಇಡಿಯ ದಿನದಲ್ಲಿ ಬೆಳಗ್ಗೆ ಅಥವಾ ಸಂಜೆ ಒಂದೇ ಕಾರ್ಯಕ್ರಮವನ್ನು ಜೋಡಿಸಿಕೊಳ್ಳುತ್ತಿದ್ದರಂತೆ. ಹೀಗಾಗಿ ಉಳಿದ ಸಮಯದಲ್ಲಿ ಪತ್ರಕರ್ತರಿಗೆ ಆಯಾ ದೇಶಗಳನ್ನು ತಿರುಗಾಡಲು ಸಾಕಷ್ಟು ಸಮಯವಿರುತ್ತಿತ್ತು. ನಮ್ಮ ತೆರಿಗೆಯ ಹಣದಲ್ಲಿ ದೆಹಲಿಯ ಪತ್ರಕರ್ತರು ಮಜಾ ಉಡಾಯಿಸುತ್ತಿದ್ದುದು ಹೀಗೆ! ಮೋದಿಯ ಕಾಲದಲ್ಲಿ ಹೀಗೆಲ್ಲಾ ಇಲ್ಲ. ಬೆಳಿಗ್ಗೆ 9 ಗಂಟೆಗೆ ಅವರ ಸಭೆಗಳು ಆರಂಭಗೊಂಡರೆ ರಾತ್ರಿ 9ರವರೆಗೂ ಪುರಸೊತ್ತಿಲ್ಲದಂತೆ ಕೆಲಸಗಳು ನಡೆಯುತ್ತಿದ್ದವಂತೆ. ಎಲ್ಲವನ್ನೂ ಮುಗಿಸಿ ರಾತ್ರಿ ಪ್ರಯಾಣಕ್ಕೆ ಅಣಿಯಾಗುತ್ತಿದ್ದ ಮೋದಿ ಮರುದಿನವೇ ಮತ್ತೊಂದು ರಾಷ್ಟ್ರದಲ್ಲಿ ಹಾಜರು. ಪತ್ರಕರ್ತರು ಹೈರಾಣಾಗಿ ಬಸವಳಿದು ಬೆನ್ನತ್ತಿ ಓಡಬೇಕಾಗುತ್ತಿತ್ತಂತೆ. ಚಹಾ ಮತ್ತು ಬಿಸ್ಕತ್ತನ್ನು ಕೊಟ್ಟು ಮೋದಿ ಪತ್ರಕರ್ತರನ್ನು ದುಡಿಸಿಕೊಳ್ಳುತ್ತಿದ್ದ ರೀತಿ ಎಂಥವನನ್ನೂ ಸುಸ್ತುಗೊಳಿಸುವಂಥದ್ದು. ಹೀಗಾಗಿಯೇ ಅನೇಕ ಪತ್ರಕರ್ತರಿಗೆ ಮೋದಿಯನ್ನು ಕಂಡರೆ ಅಷ್ಟಕ್ಕಷ್ಟೇ. ರಾಷ್ಟ್ರದ ಔನ್ನತ್ಯವನ್ನು ಕಾಣುವ ಬಯಕೆಯಿರುವ ಪತ್ರಕರ್ತರಿಗೆ ಮಾತ್ರ ಮೋದಿಯವರ ಈ ಓಟ ಸಾಹಸಮಯವಾದ್ದು ಎನಿಸುತ್ತದೆ.

4

ಈಗ ಮುಖ್ಯ ಪ್ರಶ್ನೆ. ನರೇಂದ್ರಮೋದಿಯ ವಿದೇಶ ಪ್ರವಾಸ ಮೋಜಿನದ್ದಾಗಿತ್ತೆಂದು ಕಾಂಗ್ರೆಸ್ಸು ಹೇಳುತ್ತದಲ್ಲ ಹಾಗೆ ಅವರು ಮೋಜಿಗಾಗಿ ತಿರುಗಾಡುವ ಪರಿಸ್ಥಿತಿ ಇದ್ದರೆ ಹೀಗೆ ಧಾವಂತದಿಂದ ಎಲ್ಲಾ ರಾಷ್ಟ್ರಗಳನ್ನೂ ಭೇಟಿ ಮಾಡುವ ಅಗತ್ಯವಿರಲಿಲ್ಲ. ಅವರಿಗೆ ಭಾರತದ ಕಳೆದುಹೋದ ಜಾಗತಿಕ ಸಂಪರ್ಕವನ್ನು ಮತ್ತೊಮ್ಮೆ ಬೆಸೆಯುವ ಹುಚ್ಚು ತಲೆಗೇರಿತು. ವಿದೇಶಾಂಗ ಇಲಾಖೆಯ ನೊಗ ಹೊತ್ತ ಸುಷ್ಮಾಸ್ವರಾಜರು ಇದಕ್ಕೆ ಪೂರಕವಾಗಿ ನಡೆದುಕೊಂಡು ಭಾರತದ ಇಚ್ಛಾಶಕ್ತಿ ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿತವಾಗುವಂತೆ ಮಾಡಿದರಲ್ಲ. ಹೀಗಾಗಿಯೇ ಪಾಕಿಸ್ತಾನದ ಮೇಲೆ ನಾವು ಏರಿ ಹೋದಾಗಲೂ ಜಗತ್ತಿನ ಯಾವ ರಾಷ್ಟ್ರಗಳಿಂದಲೂ ನಮ್ಮ ವಿರುದ್ಧ ಇಂದು ಗಲಾಟೆಯಿಲ್ಲ. ಆಗಸದಲ್ಲಿರುವ ಉಪಗ್ರಹವನ್ನು ನಾವು ಹೊಡೆದು ಬಿಸಾಡಿದಾಗಲೂ ಜಗತ್ತು ನಮ್ಮ ವಿರುದ್ಧ ಮಾತನಾಡುತ್ತಿಲ್ಲ. ಏಕೆಂದರೆ ಮೋದಿ ತಮ್ಮ ವಿದೇಶಪ್ರವಾಸದ ಹೊತ್ತಲ್ಲಿ ತೋರಿರುವ ರಾಷ್ಟ್ರನಿಷ್ಠೆ ಪ್ರತಿಯೊಂದು ರಾಷ್ಟ್ರವನ್ನೂ ಬೆರಗುಗೊಳ್ಳುವಂತೆ ಮಾಡಿದೆ. ಹೀಗಾಗಿಯೇ ಮೋದಿಯ ವಿದೇಶ ಪ್ರವಾಸದ ಬಗ್ಗೆ ಆಡಿಕೊಳ್ಳುತ್ತಿದ್ದ ಕಾಂಗ್ರೆಸ್ಸಿಗೆ ಇಂದು ಮಾತನಾಡಲು ಏನೂ ಬಾಕಿ ಉಳಿದಿಲ್ಲ. ಮೋದಿ ಮನಮೋಹನ ಸಿಂಗರಿಗಿಂತ ಹೆಚ್ಚು ರಾಷ್ಟ್ರ ತಿರುಗಾಡಿದ್ದು ನಿಜ. ಆದರೆ ಅವರಿಗಿಂತ ನೂರು ಪಟ್ಟು ಹೆಚ್ಚು ಕೆಲಸ ಮಾಡಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ. ಭಾರತ ಇಂದು ವಿಶ್ವಗುರುತ್ವದ ಪಥದತ್ತ ಬಲವಾದ ಹೆಜ್ಜೆ ಊರುತ್ತಿದೆ ಎಂದರೆ ಅದಕ್ಕೆ ಕಾರಣ ಮೋದಿ ಎನ್ನುವುದು ನಿಸ್ಸಂಶಯ. ಪ್ರತಿಪಕ್ಷಗಳು ಎಷ್ಟೇ ಬಾಯಿ ಬಡೆದುಕೊಂಡರೂ ಭಾರತದ ಕುರಿತಂತೆ ಜಗತ್ತಿನ ಭಾವನೆಗಳು ಅದನ್ನು ಸಾರಿ ಹೇಳುತ್ತಿವೆ!

Comments are closed.