ವಿಭಾಗಗಳು

ಸುದ್ದಿಪತ್ರ


 

ಮೋದಿಯ ಅಲೆಯನ್ನು ಮತವಾಗಿ ಪರಿವರ್ತಿಸದಿದ್ದರೆ ಬಲು ಕಷ್ಟ!!

ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಮುಸಲ್ಮಾನರ ತುಷ್ಟೀಕರಣ ನೀತಿಯಿಂದಾಗಿ ಅವರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ. ವಾಸ್ತವವಾಗಿ ಕಳೆದ ಸಕರ್ಾರದ ಯಾವ ಯೋಜನೆಗಳೂ ದೂರದೃಷ್ಟಿಯ ನೀತಿಯನ್ನು ಹೊಂದಿರುವುದಲ್ಲ. ಮುಸಲ್ಮಾನರನ್ನು ಬಲಾಢ್ಯಗೊಳಿಸಬಲ್ಲ ಯಾವ ಅಂಶಗಳೂ ಅದರಲ್ಲಿರಲಿಲ್ಲ.

ಚುನಾವಣೆಯ ಸದ್ದು ಹೊರಗೆಲ್ಲೂ ಕಾಣುತ್ತಲೇ ಇಲ್ಲ. ಬಹುಶಃ ಬಿಸಿಲ ಝಳಕ್ಕೆ ಅಭ್ಯಥರ್ಿಗಳು, ಅವರ ಅನುಯಾಯಿಗಳು ತತ್ತರಿಸಿ ಹೋಗಿರಬೇಕು. ಐದ್ಹತ್ತು ವರ್ಷಗಳ ಹಿಂದೆ ಚುನಾವಣೆಯೆಂದರೆ ಊರ ತುಂಬಾ ಬ್ಯಾನರುಗಳು, ಪೋಸ್ಟರುಗಳು ರಾರಾಜಿಸುತ್ತಿದ್ದ ಕಾಲವಿತ್ತು. ಇಂದು ಮೊಬೈಲುಗಳಲ್ಲೆಲ್ಲಾ ಪಕ್ಷದ, ಪ್ರಧಾನಿಯ, ವ್ಯಕ್ತಿಗಳ ಆರ್ಭಟ. ಯಾರ ವಾಟ್ಸಪ್ಪು ಪ್ರಚಾರಕ್ಕೆ ಹೊರತಾಗಿಲ್ಲ. ಯಾರ ಫೇಸ್ಬುಕ್ ಪೇಜೂ ಮತದಾನದ ಬಗ್ಗೆ ಮಾತನಾಡದೇ ಮುಗುಮ್ಮಾಗಿ ಉಳಿದಿಲ್ಲ. ಚುನಾವಣೆ ಈ ರೂಪ ತಾಳಬಹುದೆಂದು ಹತ್ತು ವರ್ಷಗಳ ಹಿಂದೆ ಯಾರು ಊಹಿಸಿಯೂ ಇರಲಿಲ್ಲ. ಹಾಗಂತ ಕನರ್ಾಟಕದ ಚುನಾವಣೆಯನ್ನು ಸಲೀಸೆಂದು ಭಾವಿಸಿಬಿಡಬೇಡಿ. ಬಿಜೆಪಿಗೆ ಮೋದಿಯೇ ಆಸರೆ. ಊರ ತುಂಬಾ ಸ್ಟಾರ್ ಕ್ಯಾಂಪೇನರುಗಳು ಇದ್ದಾಗಲೂ ಬಿಜೆಪಿಯ ಪಾಲಿಗೆ ಸ್ಟಾರ್ ನರೇಂದ್ರಮೋದಿಯೇ. ಇಪ್ಪತೆಂ್ತಟೂ ಅಭ್ಯಥರ್ಿಗಳು ಅವರ ಹೆಸರು ಹೇಳಿಯೇ ಮತ ಕೇಳುತ್ತಾರೆ. ರಾಷ್ಟ್ರೀಯ ಸುರಕ್ಷತೆ, ದೇಶದ ಅಖಂಡತೆ ಎಂದೆಲ್ಲಾ ಮಾತನಾಡತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳಿಗೆ ಬಂದರೆ ಇವರ ಸಾಧನೆ ಹೇಳಿಕೊಳ್ಳಬೇಕಾಗುತ್ತದಲ್ಲ ಎಂಬ ಹೆದರಿಕೆಯೂ ಅವರಿಗಿದೆ. ಜನರಲ್ಲೂ ಮೋದಿಯವರ ಕುರಿತಂತೆ ಸದಭಿಮಾನ ಇರುವುದರಿಂದ ಭಾಜಪ ಅದನ್ನು ಮತವಾಗಿ ಪರಿವತರ್ಿಸಿಕೊಳ್ಳುವ ವಿಶ್ವಾಸದಲ್ಲಿದೆ. ಕಾಂಗ್ರೆಸ್ಸಿಗೆ ಈ ಭಾಗ್ಯವಿಲ್ಲ. ಅವರ ರಾಷ್ಟ್ರೀಯ ನಾಯಕ ರಾಹುಲ್ನನ್ನು ಅವರೇ ಆಡಿಕೊಳ್ಳುತ್ತಾರೆ. ಆತನ ಯಾವ ಮಾತುಗಳನ್ನೂ ಸಮಥರ್ಿಸಿಕೊಳ್ಳುವಂತೆ ಇರುವುದೇ ಇಲ್ಲ. ಜೊತೆಗೆ ಆತನ ಬರುವಿಕೆಯಿಂದ ಅಕ್ಕಪಕ್ಕದ ಕ್ಷೇತ್ರಗಳೂ ಕಳೆದುಹೋಗುತ್ತವೆಂಬ ಹಳೆಯ ರೆಕಾಡರ್ು ಬೇರೆ. ಹೀಗಾಗಿಯೇ ಬಿಜೆಪಿಗರೂ ಎಷ್ಟು ವಿಶ್ವಾಸದಿಂದ ಶಾಂತರಾಗಿದ್ದಾರೋ ಕಾಂಗ್ರೆಸ್ಸಿಗರೂ ಅಷ್ಟೇ ವಿಶ್ವಾಸ ಕಳೆದುಕೊಂಡು ಶಾಂತರಾಗಿದ್ದಾರೆ!

2

2004ರಲ್ಲೂ ಹೀಗೆಯೇ ಆಗಿತ್ತು. ಅಟಲ್ಜಿಯವರ ಮೇಲೆ ಭರವಸೆಯ ನಿಧಿಯನ್ನು ಪೇರಿಸಿಟ್ಟಿದ್ದ ಬಿಜೆಪಿ ಗೆಲ್ಲುವುದು ಖಾತ್ರಿ ಎಂದು ಮೈಮರೆತು ಕುಳಿತಿತ್ತು. ಇತ್ತ ಕಾಂಗ್ರೆಸ್ಸು ತುಂಬಾ ಪ್ರಚಾರಕ್ಕಿಳಿಯದೇ ತನ್ನ ಸಾಂಪ್ರದಾಯಿಕ ಶೈಲಿಯ ಜಾತಿ ಲೆಕ್ಕಾಚಾರದ ಮೂಲಕ ಕೊನೆಯ ಪ್ರಯತ್ನಕ್ಕೆ ಕೈ ಹಾಕಿತ್ತು. ಮತ್ತು ಫಲಿತಾಂಶ ಬಂದಾಗ ಯಶಸ್ವಿಯೂ ಆಗಿತ್ತು. ಈ ಬಾರಿಯ ಚುನಾವಣೆಗಳನ್ನು ನೋಡಿದಾಗಲೂ ಕಾಂಗ್ರೆಸ್ಸು ಇದೇ ಲೆಕ್ಕಾಚಾರದಲ್ಲಿದೆ ಎನಿಸುತ್ತದೆ. ಟಿಕೆಟ್ ಹಂಚಿಕೆಯನ್ನು ಗಮನಿಸಿದಾಗಲಂತೂ ಶಾಂತವಾಗಿಯೇ ಈ ವಿಚಾರದಲ್ಲಿ ಕಾಂಗ್ರೆಸ್ಸಿನ ಕೈ ಮೇಲಾಗಿದೆ ಎಂದೆನಿಸುತ್ತಿದೆ. ಹಳೆಯ ಮುಖಗಳಿಗೆ ಮತ್ತೆ ಟಿಕೆಟ್ ಕೊಡಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿರುವುದರಿಂದ ಆಡಳಿತ ವಿರೋಧಿ ಅಲೆಯ ಬಿಸಿ ನಿಸ್ಸಂಶಯವಾಗಿ ಇದೆ. ಜೊತೆಗೆ ಎದುರಾಳಿಗಳ ಹೊಸ ಜಾತಿ ಸಮೀಕರಣಗಳು ಬೇರೆ! ಸಿದ್ದರಾಮಯ್ಯನನ್ನು ಸಲೀಸಾಗಿ ತೆಗೆದುಕೊಳ್ಳುವಂತಿಲ್ಲ. ಉತ್ತರಕನರ್ಾಟಕದಲ್ಲಿ ಅಭ್ಯಥರ್ಿಗಳನ್ನು ಕಣಕ್ಕಿಳಿಸಿರುವ ರೀತಿ ನೋಡಿದರೆ ಅವರ ಚಾಕಚಕ್ಯತೆ ಅರಿವಿಗೆ ಬರುತ್ತದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ಸಿನ ಅಭ್ಯಥರ್ಿ ಜಿಲ್ಲಾ ಪಂಚಾಯಿತಿಯ ತನ್ನ ಸಾಧನೆಯನ್ನು ಹಿಡಿದುಕೊಂಡೇ ಬೀದಿಗಿಳಿದಿರುವ ಪರಿ ಸಾಮಾನ್ಯವಾದುದಲ್ಲ. ಕೊಪ್ಪಳದಲ್ಲಿ ಭಾಜಪದ ಗಲಾಟೆಗಳು ಇನ್ನೂ ತೀರಿಲ್ಲ. ಹಾವೇರಿಯಲ್ಲಿ ಸದಾ ಮುಸಲ್ಮಾನ ಅಭ್ಯಥರ್ಿಯನ್ನು ಮುಂದಿಟ್ಟುಕೊಂಡು ಸೋಲುತ್ತಿದ್ದ ಕಾಂಗ್ರೆಸ್ಸು ಈ ಬಾರಿ ವರಸೆ ಬದಲಿಸಿದೆ. ಅಲ್ಲಿಯೂ ಕದನ ಜೋರಾಗಿರುವುದು ನಿಶ್ಚಿತ. ಇನ್ನು ಹುಬ್ಬಳ್ಳಿಯಲ್ಲಿ ವಿನಯ್ ಕುಲ್ಕಣರ್ಿಯವರಿಗೆ ಸೀಟು ಕೊಟ್ಟಿರುವುದು ನಿಸ್ಸಂಶಯವಾಗಿ ಪ್ರಹ್ಲಾದ್ ಜೋಷಿಯವರ ನಿದ್ದೆಕೆಡಿಸಲಿದೆ. ಕಾಂಗ್ರೆಸ್ಸಿನ ಲೆಕ್ಕಾಚಾರ ಬಲು ಸರಳ. ಪ್ರಬಲವಾಗಿರುವ ಒಂದು ಜಾತಿಯ ವೋಟು ಅದರೊಟ್ಟಿಗೆ ಎಲ್ಲೆಡೆ ಮುಸಲ್ಮಾನರ ವೋಟನ್ನು ಸೆಳೆದುಕೊಂಡುಬಿಟ್ಟರೆ ಅಷ್ಟೇ ಸಾಕು. ಈಗಾಗಲೇ ಕುರುಬ ಸಮಾಜ ಸಿದ್ದರಾಮಯ್ಯನವರೊಂದಿಗೆ ಬಲವಾಗಿ ಆತುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ದಲಿತವರ್ಗವು ನಿಧಾನವಾಗಿ ಕಾಂಗ್ರೆಸ್ಸಿನತ್ತ ಸರಿಯುತ್ತಿದೆ. ಹಿಂದುಳಿದ ವರ್ಗಗಳನ್ನು ಸಿದ್ದರಾಮಯ್ಯ ಸದ್ದಿಲ್ಲದೇ ತನ್ನತ್ತ ಸೆಳೆದುಕೊಂಡಿದ್ದಾರೆ. ಭಾಜಪದ ಒಬ್ಬ ದಲಿತ ಅಥವಾ ಹಿಂದುಳಿದ ವರ್ಗಗಳ ನಾಯಕನು ತನ್ನ ಸಮಾಜವನ್ನು ಪ್ರತಿನಿಧಿಸಬಲ್ಲ ಸಾಮಥ್ರ್ಯ ಹೊಂದಿಲ್ಲದಿರುವುದರಿಂದ ನಿಸ್ಸಂಶಯವಾಗಿ ಇದು ಚುನಾವಣೆಯಲ್ಲಿ ಪ್ರಭಾವ ಬೀರಬಲ್ಲುದು. ಮುಸಲ್ಮಾನರಂತೂ ಬಹುತೇಕ ಮೈತ್ರಿಗೇ ವೋಟು ಹಾಕಬೇಕೆಂದು ನಿರ್ಧರಿಸಿಬಿಟ್ಟಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ದಳಕ್ಕೆ ಮುಸಲ್ಮಾನರ ವೋಟು ದೊರೆಯದೇ ಆದ ಸಮಸ್ಯೆಯಿಂದ ಪಾರುಗಾಣಲೆಂದೇ ಈ ಬಾರಿ ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದು. ಇಲ್ಲವಾದರೆ ದೇವೇಗೌಡರಿಗೆ ಕಾಂಗ್ರೆಸ್ಸಿನೊಂದಿಗಿನ ಸಖ್ಯ ಎಂದಿದ್ದರೂ ಭಾರಿಯಾದುದೇ.

3

ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಮುಸಲ್ಮಾನರ ತುಷ್ಟೀಕರಣ ನೀತಿಯಿಂದಾಗಿ ಅವರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ. ವಾಸ್ತವವಾಗಿ ಕಳೆದ ಸಕರ್ಾರದ ಯಾವ ಯೋಜನೆಗಳೂ ದೂರದೃಷ್ಟಿಯ ನೀತಿಯನ್ನು ಹೊಂದಿರುವುದಲ್ಲ. ಮುಸಲ್ಮಾನರನ್ನು ಬಲಾಢ್ಯಗೊಳಿಸಬಲ್ಲ ಯಾವ ಅಂಶಗಳೂ ಅದರಲ್ಲಿರಲಿಲ್ಲ. ಟಿಪ್ಪು ಜಯಂತಿ ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಒಗ್ಗೂಡಿಸಿತಷ್ಟೇ, ಸಮಾಜಕ್ಕೆ ಶಾಶ್ವತ ಲಾಭವಾಗಲಿಲ್ಲ. ಶಾದಿಭಾಗ್ಯ ಮೇಲ್ನೋಟಕ್ಕೆ ಲಾಭವೆಂಬಂತೆ ಕಂಡಿತಷ್ಟೇ ಫಲಾನುಭವಿಗಳು ಬೆಳಕಿಗೆ ಬರಲೇ ಇಲ್ಲ. ಸಿದ್ದರಾಮಯ್ಯನವರ ಈ ಅವಧಿಯಲ್ಲಿ ಮುಸಲ್ಮಾನರು ಇತರೆ ಸಮಾಜದವರ ಪಾಲಿಗೆ ಆತಂಕವಾದಿಗಳಾಗಿ ಕಂಡರೇ ಹೊರತು ಸಾಮರಸ್ಯದ ವಾತಾವರಣ ಮೂಡಿಸುವ ಯಾವ ಪ್ರಯತ್ನವನ್ನೂ ಅವರು ಮಾಡಲೇ ಇಲ್ಲ. ಅದಕ್ಕೆ ಪೂರಕವಾಗಿ ಜೈಲಿನಲ್ಲಿದ್ದ ಮುಸಲ್ಮಾನರನ್ನು ಕೇಸು ವಾಪಸ್ಸು ಪಡೆದು ಬಿಡಿಸಿಕೊಂಡಿತು ಅಂದಿನ ಸಕರ್ಾರ. ಇದು ತಾತ್ಕಾಲಿಕವಾಗಿ ಹಿಂದುತ್ವದ ಚಿಂತನೆ ಜೋರಾಗಿದ್ದ ಕರಾವಳಿಯ ಭಾಗದ ಜನರನ್ನು ಒಗ್ಗೂಡಿಸಿದ್ದು ನಿಜವಾದರೂ ಒಟ್ಟಾರೆ ರಾಜ್ಯದಲ್ಲಿ ಮುಸಲ್ಮಾನರು ಸಿದ್ದರಾಮಯ್ಯನಿಗೇ ಜೋತುಕೊಳ್ಳುವಂತೆ ಮಾಡಿಬಿಟ್ಟಿತು. ಇತ್ತೀಚೆಗೆ ಕೆಲವು ಬುದ್ಧಿವಂತ ಮುಸಲ್ಮಾನರು ಇವನ್ನೆಲ್ಲಾ ಅಥರ್ೈಸಿಕೊಂಡು ಆಚೆ ಬರಲು ತಯಾರಿ ನಡೆಸುತ್ತಿದ್ದಾರೆ. ಆದರೆ ಅವರಿಗೂ ವೇದಿಕೆಯಾಗಬಲ್ಲ ಸಮರ್ಥ ನಾಯಕರ ಕೊರತೆ ಭಾಜಪದಲ್ಲಿ ಇದ್ದೇ ಇದೆ. ಮುಸಲ್ಮಾನರ ವೋಟುಗಳೇ ಬೇಡವೆನ್ನುವ ಅನಂತ್ಕುಮಾರ್ ಹೆಗಡೆ ಮತ್ತು ಹಿಂದುತ್ವದ ಅಮಲೇರಿಸಿಕೊಂಡಂತೆ ಮಾತನಾಡುವ ಈಶ್ವರಪ್ಪ ಒಳಬರಬೇಕೆನ್ನುವ ಮುಸಲ್ಮಾನರಿಗೆ ದ್ವಾರಪಾಲಕರಾಗಿ ನಿಂತು ತಳ್ಳಿಬಿಡಬಲ್ಲರು!

4

ಚುನಾವಣೆ ಎನ್ನುವುದು ಒಂದು ವ್ಯವಸ್ಥಿತ ರಣತಂತ್ರ. ನೀವು ಮಾಡುವುದು ಏನೆಂದು ಯಾರಿಗೂ ಅರಿವಾಗಬಾರದು. ಆದರೆ ಕೆಲಸ ಮಾತ್ರ ನಿಲ್ಲಬಾರದು. ಮೋದಿಯ ಅಲೆ ಇರುವುದು ಸತ್ಯ ಹೌದು, ಆದರೆ ಪ್ರತ್ಯಕ್ಷ ನೆಲದ ಮೇಲೆ ಅನೇಕ ಬೇರೆ ಸಂಗತಿಗಳು ಕೆಲಸ ಮಾಡುತ್ತವೆ. ಜಾತಿ-ಮತ-ಪಂಥಗಳು, ಭಾಷೆ-ಸಂಸ್ಕೃತಿಗಳು ಇವೆಲ್ಲವೂ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮವನ್ನು ಖಂಡಿತ ಬೀರುತ್ತವೆ. ಮೋದಿಯವರ ಕುರಿತಂತಹ ಅಭಿಮಾನವನ್ನು ಜಾತಿ-ಮತ-ಪಂಥಗಳನ್ನು ಮೀರಿ ವೋಟು ಹಾಕುವಂತೆ ಮಾಡಲು ಬಳಸಿಕೊಳ್ಳುವ ಚಾಕಚಕ್ಯತೆಯನ್ನು ಸ್ಥಳೀಯ ನಾಯಕರು ತೋರಬೇಕು. ಹಾಗೊಂದು ವ್ಯಾಪಕವಾದ ಪ್ರಯತ್ನ ಉತ್ತರಪ್ರದೇಶ, ಮಹಾರಾಷ್ಟ್ರಗಳಲ್ಲಿ ಕಂಡು ಬರುತ್ತಿದೆ. ಸ್ವತಃ ದೇವೇಂದ್ರ ಫಡ್ನವೀಸ್ ವ್ಯವಸ್ಥಿತವಾದ ಕಾರ್ಯಯೋಜನೆಯನ್ನು ರೂಪಿಸಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಮೋದಿ-ಅಮಿತ್ಷಾ ಜೋಡಿಯೇ ಅಚ್ಚರಿಯ ಫಲಿತಾಂಶಕ್ಕೆ ಪ್ರಯತ್ನ ಹಾಕುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಮೋದಿಯವರ ರ್ಯಾಲಿಗೆ ಬರುವ ಜನ ಕಡಿಮೆ ಎನಿಸಿದರೂ ಮೋದಿ ರ್ಯಾಲಿ ನಿಲ್ಲಿಸಿಲ್ಲ. ಬದಲಿಗೆ ಎಲ್ಲೆಡೆಗಿಂತಲೂ ಹೆಚ್ಚು ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ. ಗುಜರಾತ್ ಏಕಪಕ್ಷೀಯ ವಾತಾವರಣವನ್ನು ರೂಪಿಸಿಬಿಟ್ಟಿದೆ. ಅಲ್ಲಿನ ಕಾಂಗ್ರೆಸ್ ನಾಯಕರುಗಳೆಲ್ಲ ಬಿಜೆಪಿಗೆ ವಲಸೆ ಬರುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದ ನಾಯಕರು ಮತ್ತು ಪರಿವಾರವೆಲ್ಲ ಭಾಜಪಕ್ಕೆ ಸೇರಿಕೊಂಡುಬಿಟ್ಟಿವೆ. ದೆಹಲಿಯಲ್ಲಿ ಕಾಂಗ್ರೆಸ್ ಆಮ್ ಆದ್ಮಿ ಪಾಟರ್ಿಗಳ ಘಟಬಂಧನ ಮುರಿದುಬಿದ್ದಿದೆ. ಉತ್ತರಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ಗಳ ನಡುವಿನ ಗೊಂದಲ ತೀರಿಲ್ಲ. ಸ್ವತಃ ಅಮೇಥಿಯ ಮೇಲೆ ರಾಹುಲ್ಗೆ ಭರವಸೆ ಉಳಿದಿಲ್ಲ. ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿಯೂ ಅಮೇಥಿಯಲ್ಲಿ ಬಿಜೆಪಿಯನ್ನು ಸೋಲಿಸಲಾಗದೆಂದರೆ ಅಲ್ಲಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಬಹುದು. ಎಲ್ಲ ಪಂಡಿತರ ಲೆಕ್ಕಾಚಾರದಂತೆ ಉತ್ತರಪ್ರದೇಶದಲ್ಲಿ ನಲವತ್ತೇ ಸೀಟು ಸಿಕ್ಕರೂ ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಕೇರಳಗಳಿಂದ ಉಳಿದಿದ್ದನ್ನು ಸರಿದೂಗಿಸಿಕೊಳ್ಳಬಹುದೆಂಬ ವಿಶ್ವಾಸ ಮೋದಿಯವರದ್ದು. ಸದ್ಯಕ್ಕೆ ಸಮಸ್ಯೆ ಕನರ್ಾಟಕದ್ದೇ. ಇಲ್ಲಿ ಇದುವರೆಗೂ ರಾಜ್ಯ ನಾಯಕರುಗಳು ವ್ಯಾಪಕ ಪ್ರಚಾರ ಮಾಡಿದ ಉದಾಹರಣೆಯೇ ಇಲ್ಲ. ವಿಧಾನಸಭಾ ಚುನಾವಣೆಯ ವೇಳೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದ್ದ ಯಡಿಯೂರಪ್ಪ ಈಗ ಶಾಂತರಾಗಿದ್ದಾರೆ. ವಯಸ್ಸಿನ ಕಾರಣವೂ ಇರಬಹುದೇನೋ. ಆದರೆ ಬೇರೆಯವರನ್ನಾದರೂ ಓಡಾಡಿಸಬೇಕಿತ್ತಲ್ಲ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸಲು ಇವೆಲ್ಲವೂ ಸಹಕಾರ ಮಾಡುತ್ತವೆ. ಭಾಜಪ ಮೋದಿಯನ್ನೇ ನೆಚ್ಚಿಕೊಂಡು ಕೂರುವುದು ಖಂಡಿತ ಒಳ್ಳೆಯದಲ್ಲ. ನೆಲಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಮಂಡ್ಯದಲ್ಲಿ ಕಾಂಗ್ರೆಸ್ಸು ತನಗಿರುವ ಸಮಸ್ಯೆಯನ್ನು ದೂರಮಾಡಿಕೊಂಡು ನಿಖಿಲ್ನ ಪರ ಪ್ರಚಾರಕ್ಕಿಳಿದರೆ ಅನೇಕ ಕಡೆಗಳಲ್ಲಿ ಬಿಜೆಪಿಗೆ ಸಂಕಟ ಎದುರಾಗಬಹುದು. ಸದ್ಯದ ಮಟ್ಟಿಗೆ ಮೈತ್ರಿಯಲ್ಲಿರುವ ಗೊಂದಲವೇ ಬಿಜೆಪಿಗೆ ವರದಾನ. ಆದರೆ ಕೆಲಸ ಮಾಡದೇ ಸುಮ್ಮನಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗಬಹುದು.

Comments are closed.