ವಿಭಾಗಗಳು

ಸುದ್ದಿಪತ್ರ


 

ಮೋದಿಯ ಆಟ ಬಲ್ಲವರಾರು?!

ಮೊನ್ನೆ ಹಿಂದೂ ಪತ್ರಿಕೆ ರಫೇಲ್ನ ಕುರಿತಂತೆ ತನಗೆ ಬಲವಾದ ಸುಳಿವು ಸಿಕ್ಕಿದೆ ಎಂದು ಪ್ರಕಟಿಸಿದ ಪತ್ರವೊಂದನ್ನು ಹಿಡಿದು ರಾಹುಲ್ ಧಾವಂತದಿಂದ ಪತ್ರಿಕಾಗೋಷ್ಠಿ ಕರೆದಿದ್ದರಲ್ಲಾ ಅದಾದ ಕೆಲವೇ ನಿಮಿಷಗಳಲ್ಲಿ ಆ ಪತ್ರವೇ ಅಪೂರ್ಣವಾದುದು ಮತ್ತು ಅದರ ಪೂರ್ಣ ಪಾಠದಲ್ಲಿ ರಾಹುಲ್ ಎತ್ತಿರುವ ಪ್ರಶ್ನೆಗಳಿಗೆ ಉತ್ತರವಿದೆ ಎಂದು ಸಕರ್ಾರ ಪೂರ್ಣ ಪತ್ರವನ್ನು ಮುಂದಿರಿಸಿದಾಗ ಇಂಗು ತಿಂದ ಮಂಗನಂತಾಗದೇ ರಾಹುಲ್ಗೆ ಬೇರೆ ವಿಧಿಯಿರಲಿಲ್ಲ.

ಇಡಿಯ ಕಾಂಗ್ರೆಸ್ಸು ರಫೇಲ್ನ ಹಿಂದೆ ಮುಕರ್ೊಂಡು ಬಿದ್ದಿದೆ. ಹೇಗಾದರೂ ಮಾಡಿ ಮೋದಿಯವರನ್ನು ಭ್ರಷ್ಟರೆಂದು ಬಿಂಬಿಸಿಬಿಡಬೇಕೆಂದು ಅವರು ಹಾತೊರೆಯುತ್ತಿದ್ದಾರೆ. ದಿನ ಬೆಳಗಾದರೆ ರಫೇಲ್ನ ಕುರಿತಂತೆ ಹೊಸ ವಿಚಾರ ತೆಗೆದುಕೊಂಡು ಬರುವ ರಾಹುಲ್ ಮರುಕ್ಷಣವೇ ಅದಕ್ಕೆ ಸಕರ್ಾರ ಕೊಡುವ ಸಮರ್ಥ ಉತ್ತರದಿಂದ ಕಂಗಾಲಾಗಿ ಹೋಗುತ್ತಿದ್ದಾನೆ. ಒಂದೊಂದು ಕ್ಷಣ ಕಾಂಗ್ರೆಸ್ಸು ಪೂರ್ಣ ಖೆಡ್ಡಾಗೆ ಬೀಳುತ್ತಿದೆಯೇನೋ ಎಂದೆನಿಸುತ್ತಿದೆ. ಮಹಾಘಟಬಂಧನದ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳು ಅದೆಷ್ಟು ತೀವ್ರವಾಗಿದೆಯೆಂದರೆ ಚಿಕ್ಕ ಮಕ್ಕಳೂ ಕೈ-ಕೈ ಹಿಡಿದುಕೊಂಡಿರುವ ಈ ನಾಯಕರುಗಳನ್ನು ನೊಡಿದಾಗ ಸಮರ್ಥನನ್ನೆದುರಿಸಲು ಪಟ್ಟಾಗಿರುವ ಕಳ್ಳರೆಂದೇ ಸಂಬೋಧಿಸುತ್ತಾರೆ. ಇದಕ್ಕೆದುರಾಗಿ ನರೇಂದ್ರಮೋದಿಯವರನ್ನೂ ಕಳ್ಳರೆಂದು ಸಾಬೀತುಪಡಿಸಿಬಿಟ್ಟರೆ ತಮ್ಮ ಕೆಲಸ ಸಲೀಸೆಂಬುದು ಕಾಂಗ್ರೆಸ್ಸಿನ ಅನಿಸಿಕೆ. ಆದರೆ ಪ್ರತೀ ಬಾರಿ ಈ ವಿಷಯದಲ್ಲಿ ಬಲವಾದ ಹೆಜ್ಜೆ ಇಡಲು ಹೊರಟಂತೆ ರಾಹುಲ್ ಮುಗ್ಗರಿಸಿ ಬಿದ್ದು ಅವಹೇಳನಕ್ಕೀಡಾಗುತ್ತಿದ್ದಾರೆ. ಕಾಂಗ್ರೆಸ್ಸಿನ ಪ್ರಬಲ ಸಮರ್ಥಕರು ರಫೇಲ್ ವಿಚಾರದಲ್ಲಿ ರಾಹುಲ್ ಮಾತುಗಳನ್ನು ನಂಬಲು ಈಗ ಸಿದ್ಧರಿಲ್ಲ!

2

ಮೊನ್ನೆ ಹಿಂದೂ ಪತ್ರಿಕೆ ರಫೇಲ್ನ ಕುರಿತಂತೆ ತನಗೆ ಬಲವಾದ ಸುಳಿವು ಸಿಕ್ಕಿದೆ ಎಂದು ಪ್ರಕಟಿಸಿದ ಪತ್ರವೊಂದನ್ನು ಹಿಡಿದು ರಾಹುಲ್ ಧಾವಂತದಿಂದ ಪತ್ರಿಕಾಗೋಷ್ಠಿ ಕರೆದಿದ್ದರಲ್ಲಾ ಅದಾದ ಕೆಲವೇ ನಿಮಿಷಗಳಲ್ಲಿ ಆ ಪತ್ರವೇ ಅಪೂರ್ಣವಾದುದು ಮತ್ತು ಅದರ ಪೂರ್ಣ ಪಾಠದಲ್ಲಿ ರಾಹುಲ್ ಎತ್ತಿರುವ ಪ್ರಶ್ನೆಗಳಿಗೆ ಉತ್ತರವಿದೆ ಎಂದು ಸಕರ್ಾರ ಪೂರ್ಣ ಪತ್ರವನ್ನು ಮುಂದಿರಿಸಿದಾಗ ಇಂಗು ತಿಂದ ಮಂಗನಂತಾಗದೇ ರಾಹುಲ್ಗೆ ಬೇರೆ ವಿಧಿಯಿರಲಿಲ್ಲ. ಅನೇಕರು ಸಕರ್ಾರವೇ ಅರ್ಧಂಬರ್ಧ ಪತ್ರವನ್ನು ಹಿಂದೂ ಪತ್ರಿಕೆಗೆ ಬಿಡುಗಡೆ ಮಾಡಿ ಇಡಿಯ ಕಾಂಗ್ರೆಸ್ಸನ್ನು ಮಂಗ ಮಾಡಿತೆಂದು ಆಡಿಕೊಳ್ಳುತ್ತಾರೆ. ಹಾಗಂತ ಹಿಂದೂ ಪತ್ರಿಕೆ ಈ ಅವಮಾನವನ್ನು ಸಹಿಸಿಕೊಳ್ಳಲು ಸಿದ್ಧವಿರಲಿಲ್ಲ. ಅದು ಹೊಸದೊಂದು ಆರೋಪವನ್ನು ಹೊತ್ತು ತಂದಿತು. ಫ್ರಾನ್ಸ್ ಸಕರ್ಾರದ ಭರವಸೆಯೇ ಇಲ್ಲದೇ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಮತ್ತು ಒಪ್ಪಂದದೊಳಗಿದ್ದ ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ತೆಗೆದುಹಾಕಿ ಬಲುದೊಡ್ಡ ಹಗರಣಕ್ಕೆ ದಾರಿಮಾಡಿಕೊಟ್ಟಿದೆ ಎಂಬ ಹೊಸ ಆರೋಪವನ್ನು ಮಾಡಿತು. ಇದನ್ನು ಕಾಂಗ್ರೆಸ್ಸು ಹೊತ್ತು ಮೆರೆಸುವಾಗಲೇ ಕಾಂಗ್ರೆಸ್ಸಿನ ಒಪ್ಪಂದಗಳು ಶಸ್ತ್ರಾಸ್ತ್ರ ಉತ್ಪಾದನಾ ಕಂಪೆನಿಗಳೊಂದಿಗೆ ನಡೆಯುತ್ತಿದುದರಿಂದ ಈ ಕಾಯ್ದೆಯ ಅಗತ್ಯವಿತ್ತು. ಸಕರ್ಾರ-ಸಕರ್ಾರಗಳ ನಡುವೆ ನಡೆಯುವಾಗ ಇದರ ಅಗತ್ಯವಿಲ್ಲ ಎಂಬುದು ಕಾಂಗ್ರೆಸ್ಸನ್ನು ಮತ್ತೂ ಬೆತ್ತಲಾಗಿಸಿತು. ಒಟ್ಟಾರೆ ಕಾಂಗ್ರೆಸ್ಸಿಗೆ ಭವಿಷ್ಯ ಕತ್ತಲೆನಿಸುತ್ತಿದೆ. ಅಷ್ಟೇ ಅಲ್ಲದೇ ಗೋಜಲು ಗೋಜಲಾಗಿಯೂ ಇದೆ!

ಕಾಂಗ್ರೆಸ್ಸನ್ನೇ ನಂಬಿಕೊಂಡು ಕೈ-ಕೈ ಹಿಡಿದುಕೊಂಡು ಬೀದಿಗಿಳಿದ ಮಹಾಘಟಬಂಧನ್ ಮೋದಿಯವರ ಪ್ರಹಾರಕ್ಕೆ ಸಿಲುಕಿ ಪತರಗುಟ್ಟುತ್ತಿದೆ. ಮೋದಿ ಸಾಮಾನ್ಯರಲ್ಲ. ಮಮತಾ ಬ್ಯಾನಜರ್ಿ ತನ್ನ ತಾನೇ ಪ್ರಧಾನಮಂತ್ರಿ ಅಭ್ಯಥರ್ಿ ಎಂದುಕೊಂಡಿದ್ದಳು. ಅವರದ್ದೇ ನೆಲಕ್ಕೆ ನುಗ್ಗಿದ ಮೋದಿಜೀಗೆ ಸಿಕ್ಕ ಅಪಾರವಾದ ಬೆಂಬಲವನ್ನು ಕಂಡು ಆಕೆ ಎಷ್ಟರಮಟ್ಟಿಗೆ ಕಂಗಾಲಾಗಿದ್ದಾಳೆಂದರೆ ದೇಶದಲ್ಲಿ ಛಾಪು ಮೂಡಿಸುವುದಿರಲಿ ತನ್ನ ರಾಜ್ಯವನ್ನುಳಿಸಿಕೊಂಡರೆ ಸಾಕೆಂದೆನಿಸಿದೆ. ಇತ್ತ ಆಂಧ್ರದಲ್ಲಿ ಚಂದ್ರಬಾಬುನಾಯ್ಡು ಅವರನ್ನು ಅವರದ್ದೇ ನೆಲದಲ್ಲಿ ಮೋದಿ ಬಡಿದು ಬಿಸಾಡಿದುದರ ಪರಿ ಎಂಥವರಲ್ಲೂ ಗಾಬರಿ ಹುಟ್ಟಿಸುವಂಥದ್ದು. ಬೇರೆ-ಬೇರೆ ರಾಜ್ಯಗಳಲ್ಲಿ ಮಹಾಘಟಬಂಧನದ ಸಂಘಟನೆಯಲ್ಲಿ ನಿರತರಾಗಬೇಕಿದ್ದ ನಾಯ್ಡು ತನ್ನದ್ದೇ ನಾಡಿನಲ್ಲಿ ಈಗ ಉಪವಾಸ ಸತ್ಯಾಗ್ರಹಕ್ಕೆ ಕೂರಬೇಕಾದ ಸ್ಥಿತಿ ಬಂತಲ್ಲ, ಅದು ಮೋದಿಯವರ ಸಾಧನೆ. ಇತ್ತ ಕುಮಾರಸ್ವಾಮಿಯವರ ಸಕರ್ಾರವೂ ಅದೆಷ್ಟು ಗೊಂದಲದಲ್ಲಿದೆ ಎಂದರೆ ಚುನಾವಣೆಯವರೆಗೂ ಸಕರ್ಾರವನ್ನುಳಿಸುವುದೇ ಹರಸಾಹಸವಾಗಿರುವುದರಿಂದ ದೇವೇಗೌಡರು ಕನರ್ಾಟಕ ಬಿಟ್ಟು ಕದಲುವ ಸ್ಥಿತಿಯಲ್ಲಿಲ್ಲ. ಮಾಯಾವತಿ ಅಖಿಲೇಶರು ತಾವು ತೋಡಿದ ಹಳ್ಳದಲ್ಲಿ ತಾವೇ ಸಿಕ್ಕುಹಾಕಿಕೊಂಡು ಒದ್ದಾಡುತ್ತಿದ್ದಾರೆ. ಮೋದಿ ರಾಜ್ಯದಿಂದ ರಾಜ್ಯಕ್ಕೆ ಸುತ್ತಾಡುತ್ತಾ ಲಕ್ಷಾಂತರ ಜನರೊಡನೆ ನೇರವಾಗಿ ಸಂಭಾಷಿಸುತ್ತಿದ್ದಾರೆ. ಮೊದಲೆಲ್ಲಾ ಮೋದಿ ವಿದೇಶಕ್ಕೆ ಬಹಳ ಬಾರಿ ಹೋಗುತ್ತಾರೆ ಎಂದು ಆರೋಪಿಸುತ್ತಿದ್ದ ಪ್ರತಿಪಕ್ಷಗಳು ಮೋದಿ ಈಗ ರಾಜ್ಯಗಳಿಗೆ ಹೆಚ್ಚು ತಿರುಗಾಡುತ್ತಿದ್ದಾರೆ ಎಂಬ ಆರೋಪ ಮಾಡಿದರೆ ಅಚ್ಚರಿ ಪೆಡಬೇಡಿ! ಜನರ ಪ್ರತಿಸ್ಪಂದನೆಯಂತೂ ಅದೆಷ್ಟು ಅದ್ಭುತವಾಗಿದೆಯೆಂದರೆ ಮೋದಿಯವರ ಆಯ್ಕೆ ನಿಸ್ಸಂಶಯವೆಂಬುದರಲ್ಲಿ ಬಿಜೆಪಿಗರಿಗಾದರೂ ಅನುಮಾನ ಕಾಡಬಹುದೇನೋ ಪ್ರತಿಪಕ್ಷಗಳಿಗಂತೂ ಅಲ್ಲ.

4

ಹಾಗಂತ ಮೋದಿ ಪ್ರಚಾರವನ್ನಷ್ಟೇ ಮಾಡುತಿದ್ದಾರೆಂದು ಭಾವಿಸಿಕೊಳ್ಳಬೇಡಿ. ಪ್ರತಿಪಕ್ಷಗಳವರನ್ನೆಲ್ಲಾ ಚುನಾವಣೆ, ಆರೋಪ, ಪ್ರತ್ಯಾರೋಪಗಳಲ್ಲಿ ವ್ಯಸ್ತವಾಗಿರುವಂತೆ ಮಾಡಿ ತಾವು ನಿಶ್ಶಬ್ದವಾಗಿ ನಾವು ಊಹಿಸಲಾಗದ ಕೆಲಸಗಳನ್ನು ಮಾಡುತ್ತಿದ್ದಾರೆ. ಹಳೆಯದಾಗಿದ್ದ ಇನ್ಸಾಸ್ ರೈಫಲ್ಗಳನ್ನು ಬದಲಿಸಿ ಅಮೇರಿಕಾದಿಂದ ಹೊಸ ರೈಫಲ್ಲುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಅರುಣಾಚಲಪ್ರದೇಶಕ್ಕೆ ಹೋಗಿ ಚೀನಾಕ್ಕೆ ಗುಟುರು ಹೊಡೆದಿದ್ದಲ್ಲದೇ ಇದು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ತಂಟೆ ಮಾಡಿದ ಚೀನಾಗೆ ಪುನರುಚ್ಚರಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಲಡಾಖ್ ಅನ್ನು ಜಮ್ಮು-ಕಾಶ್ಮೀರದಿಂದ ಮುಕ್ತಗೊಳಿಸಿ ಪ್ರತ್ಯೇಕವಾಗಿಸುವ ಮೊದಲ ಹಂತವನ್ನು ಸಾಧಿಸಿಯೂಬಿಟ್ಟಿದ್ದಾರೆ. ಲಡಾಖ್ ಈಗ ಕಾಶ್ಮೀರದ ಅಡಿಯಲ್ಲಿಲ್ಲ. ಕಶ್ಮೀರದ ಕಮೀಷನರ್ ಲಡಾಖ್ ಅನ್ನು ನಿಯಂತ್ರಿಸುವಂತಿಲ್ಲ. ಪ್ರತ್ಯೇಕವಾದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಲಡಾಖ್ಗೆ ಸಿಗಲಿದ್ದಾರೆ. ಮುಸಲ್ಮಾನರದ್ದೇ ಪ್ರಾಬಲ್ಯ ಹೊಂದಿದ್ದ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಈಗ ಬೌದ್ಧಾನುಯಾಯಿಗಳಿಗೂ ಬೆಲೆ ಬಂದಿದೆ. 1947ರಲ್ಲೇ ಲಡಾಖ್ ಕಶ್ಮೀರದಿಂದ ಪ್ರತ್ಯೇಕವಾಗಬೇಕೆಂದು ಬಯಸಿತ್ತು. ಆದರೆ ನೆಹರೂ ದೂರದೃಷ್ಟಿಯ ಕೊರತೆಯಿಂದಾಗಿ ಅಲ್ಲಿನ ಜನ ಇಷ್ಟು ದೀರ್ಘಕಾಲ ಕಣ್ಣೀರಿಡಬೇಕಾಗಿ ಬಂತು. ಆದರಿನ್ನು ಹಾಗಾಗಲಾರದು. ಪ್ರತ್ಯೇಕತಾವಾದಿಗಳು ಮತ್ತು ಅವರ ಸಮರ್ಥಕರು ಈ ಕುರಿತಂತೆ ಸಾಕಷ್ಟು ಕೂಗಾಡಿದರು. ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿಯಂತೂ ಸರಿ ಬಿಜೆಪಿಯ ಸಮರ್ಥಕನಾಗಿ ಗುರುತಿಸಿಕೊಂಡ ಸಜ್ಜಾದ್ ಲೋನ್ ಕೂಡ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಆದರೆ ಪ್ರತಿಪಕ್ಷಗಳೆಲ್ಲಾ ಮಹಾಘಟಬಂಧನವನ್ನು ಬಲಿಷ್ಠಗೊಳಿಸುವ ಧಾವಂತದಲ್ಲಿದ್ದುದರಿಂದ ಈ ವಿಚಾರವಾಗಿ ಯೋಚಿಸುವ ಗೊಡವೆಗೇ ಹೋಗಲಿಲ್ಲ. ಪ್ರತ್ಯೇಕತಾವಾದಿಗಳ ಕೂಗು ಅರಣ್ಯ ರೋದನವಾಯ್ತು. ಕಶ್ಮೀರದವರ ಧಿಮಾಕನ್ನು ಕಡಿಮೆಗೊಳಿಸಬೇಕೆಂಬ ಭಾರತೀಯರ ಅನೇಕ ದಶಕಗಳ ಇಚ್ಛೆ ಸಫಲವಾಯ್ತು.

ಮೋದಿಯನ್ನು ಚಾಣಾಕ್ಷನೆಂದು ಸುಮ್ಮ-ಸುಮ್ಮನೆ ಕರಿಯುವುದಿಲ್ಲ. ಅವರು ಚುನಾವಣೆ ಗೆಲ್ಲುವುದಂತೂ ಖಾತ್ರಿಯೇ. ಅದರೊಳಗೆ ರಾಷ್ಟ್ರಕ್ಕೆ ಬೇಕಾದ ಅನೇಕ ಕೆಲಸಗಳನ್ನೂ ಮಾಡಿಕೊಂಡುಬಿಡುತ್ತಾರೆ. ಖಂಡಿತ ಸುಮ್ಮನಿರುವ ಜೀವ ಅದಲ್ಲ!!

Comments are closed.