ವಿಭಾಗಗಳು

ಸುದ್ದಿಪತ್ರ


 

ಮೋದಿಯ ಮೋಜಿನ ವಿದೇಶ ಪ್ರವಾಸ!!

ಹಾಗೆ ಸುಮ್ಮನೆ ಮೋದಿ ಮತ್ತು ಮನಮೋಹನ್ರ ವಿದೇಶ ಪ್ರವಾಸದ ತುಲನೆ ಮಾಡಿ ನೋಡಿ. ಮನಮೋಹನರು 2008 ರಲ್ಲಿ 4 ದಿನಗಳ ಕಾಲ ಚೀನಾ ಪ್ರವಾಸದಲ್ಲಿದ್ದಾಗ 10 ಸಭೆಗಳಲ್ಲಿ ಭಾಗವಹಿಸಿದ್ದರು. ಆದರೆ ಮೋದಿ ತಮ್ಮ ಮೊದಲ ಮೂರು ದಿನಗಳ ಪ್ರವಾಸದಲ್ಲೇ 25 ಸಭೆಗಳನ್ನು ನಡೆಸಿದ್ದರು. 2009 ರಲ್ಲಿ ಮನಮೋಹನರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ನಗರಕ್ಕೆ ಭೇಟಿ ಕೊಟ್ಟಿದ್ದರು ಮತ್ತು 15 ಸಭೆಗಳಲ್ಲಿ ಭಾಗವಹಿಸಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ತಮ್ಮ ಮೊದಲ ಅಮೇರಿಕಾ ಭೇಟಿಯಲ್ಲಿ ಎರಡು ನಗರಗಳನ್ನು ಸಂದಶರ್ಿಸಿ 33 ಸಭೆಗಳಲ್ಲಿ ಭಾಗವಹಿಸಿದ್ದರು.

ಬಹುಶಃ ಕಳೆದ ನಾಲ್ಕೂವರೆ ವರ್ಷಗಳ ನರೇಂದ್ರಮೋದಿಯವರ ಆಡಳಿತಾವಧಿಯಲ್ಲಿ ಅವರ ವಿದೇಶ ಪ್ರವಾಸದ ಕುರಿತಂತೆ ಎದ್ದ ಪ್ರಶ್ನೆಗಳಷ್ಟು ಮತ್ಯಾವುದನ್ನೂ ವಿರೋಧಿಗಳು ಕೇಳಿಲ್ಲ. ಬಹುಶಃ ಹೀಗೆ ಜನರ ಮನಸ್ಸಿನಲ್ಲಿ ಉಂಟಾಗಿರುವ ಪ್ರಶ್ನೆಗಳೇ ನರೇಂದ್ರಮೋದಿಯವರು ಅನ್ಯ ರಾಷ್ಟ್ರಗಳೊಂದಿಗೆ ಭಾರತವನ್ನು ಬೆಸೆಯುತ್ತಿರುವ ರೀತಿಯನ್ನು ಬಲವಾಗಿ ಬಿಂಬಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ದಾಖಲೆಯ ಪ್ರಕಾರ ಮನಮೋಹನ್ ಸಿಂಗರು ತಮ್ಮ ಎರಡನೇ ಅವಧಿಯಲ್ಲಿ ಮೊದಲ ನಾಲ್ಕು ವರ್ಷಗಳಲ್ಲಿ 131 ದಿನ ವಿದೇಶದಲ್ಲಿ ಕಳೆದಿದ್ದರು. ಒಟ್ಟು 38 ಪ್ರವಾಸಗಳನ್ನು ಮಾಡಿ 386.50 ಕೋಟಿ ರೂಪಾಯಿಯನ್ನು ಖಚರ್ು ಮಾಡಿದರು. ನರೇಂದ್ರಮೋದಿ ಇದೇ ನಾಲ್ಕು ವರ್ಷಗಳ ಅವಧಿಯಲ್ಲಿ 155 ದಿನಗಳನ್ನು ವಿದೇಶದಲ್ಲಿ ಕಳೆದಿದ್ದು 43 ಪ್ರವಾಸಗಳಿಗೆ 387 ಕೋಟಿ ರೂಪಾಯಿ ಖಚರ್ು ಮಾಡಿದ್ದಾರೆ. ಎರಡೂ ಪ್ರಧಾನಿಗಳ ಪ್ರವಾಸದ ಖಚರ್ಿನ ನಡುವೆ ಮತ್ತು ವಿದೇಶದಲ್ಲಿ ಉಳಿದುಕೊಂಡ ದಿನಗಳ ನಡುವೆ ಭಾರಿ ವ್ಯತ್ಯಾಸವೇನು ಇಲ್ಲ. ಆದರೆ ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿರುವಾಗ ನರೇಂದ್ರಮೋದಿಯವರ ಪ್ರವಾಸದ ವೆಚ್ಚ ಮಾತ್ರ ಮನಮೋಹನ್ ಸಿಂಗರಷ್ಟೇ ಇರಲು ಕಾರಣವೇನು? ಇದು ಪ್ರತಿಯೊಬ್ಬರೂ ಕೇಳಿಕೊಳ್ಳಲೇಬೇಕಾದ ಪ್ರಶ್ನೆ.

2

ಯಾವುದೇ ಪ್ರಧಾನಿ ವಿದೇಶಕ್ಕೆ ಹೋಗುವಾಗ ತಾವೊಬ್ಬರೇ ಹೋಗುವುದಿಲ್ಲ. ತಮ್ಮೊಡನೆ ಅಧಿಕಾರಿಗಳನ್ನು, ಕೆಲವು ರಾಜಕಾರಣಿಗಳನ್ನು, ವಿಶೇಷವಾಗಿ ದೊಡ್ಡ ಸಂಖ್ಯೆಯಲ್ಲಿ ಪತ್ರಕರ್ತರನ್ನು ಒಯ್ಯುತ್ತಾರೆ. ಪ್ರಧಾನಮಂತ್ರಿಗೆ ಆಯಾ ದೇಶಗಳು ಎಲ್ಲ ವ್ಯವಸ್ಥೆ ಮಾಡುತ್ತವೆ ಸರಿ. ಆದರೆ ಅವರೊಂದಿಗೆ ಹೋದ ಇತರೆ ಸಿಬ್ಬಂದಿಯ ಖಚರ್ು ವೆಚ್ಚವನ್ನು ಭಾರತವೇ ನೋಡಿಕೊಳ್ಳಬೇಕು. ಹೀಗಾಗಿಯೇ ಅವರ ಹೊಟೆಲ್ಲು, ಪ್ರವಾಸ ಇವೆಲ್ಲದರ ಖಚರ್ು ವೆಚ್ಚವು ಇದರೊಟ್ಟಿಗೆ ಸೇರಿಕೊಳ್ಳುತ್ತಾ ಹೋಗುತ್ತದೆ. ಹಿಂದಿನ ಎಲ್ಲ ಪ್ರಧಾನಮಂತ್ರಿಗಳು ತಮ್ಮೊಡನೆ ಹೆಚ್ಚ-ಹೆಚ್ಚು ಪತ್ರಕರ್ತರನ್ನು ಒಯ್ಯುತ್ತಿದ್ದರೆ ನರೇಂದ್ರಮೋದಿ ಆ ಪರಿಪಾಠವನ್ನೇ ಇಟ್ಟುಕೊಂಡಿಲ್ಲ. ತಮ್ಮ ಮೊದಲ ವಿದೇಶ ಪ್ರವಾಸದಿಂದಲೇ ಅವರು ಆಕಾಶವಾಣಿ ಮತ್ತು ದೂರದರ್ಶನದ ವರದಿಗಾರರನ್ನಷ್ಟೇ ಒಯ್ಯುವುದೆಂದು ನಿಶ್ಚಯಿಸಿಬಿಟ್ಟಿದ್ದರು! ಹೀಗಾಗಿಯೇ ಬಲು ದೊಡ್ಡ ಹೊರೆಯೊಂದನ್ನು ಅವರು ರಾಷ್ಟ್ರದ ಮೇಲಿಂದ ಕಳಚಿ ಬಿಸಾಡಿದ್ದರು. ಈ ಹಿಂದಿನ ಪ್ರಧಾನಮಂತ್ರಿಗಳು ತಮ್ಮೊಡನೆ ಒಯ್ದ ಅಧಿಕಾರಿಗಳಿಗೆ ತಿರುಗಾಡಲು, ವಿದೇಶದ ಯಾತ್ರೆಯನ್ನು ಅನುಭವಿಸಲು ಸಾಕಷ್ಟು ಸಮಯ ಕೊಡುತ್ತಿದ್ದರು. ಆದರೆ ನರೇಂದ್ರಮೋದಿ ಹಾಗಲ್ಲ. ಅವರು ವಿದೇಶದಲ್ಲಿದ್ದ ಅವಧಿಯಲ್ಲಿ ಅದೆಷ್ಟು ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳುತ್ತಾರೆಂದರೆ ಯಾರೊಬ್ಬರಿಗೂ ಪುರಸೊತ್ತಾಗಲೀ, ವಿಶ್ರಾಂತಿಯಾಗಲೀ ದೊರೆಯುವುದಿಲ್ಲ. ಮನಮೋಹನ ಸಿಂಗರ ಅವಧಿಯಲ್ಲಿ ಒಂದಷ್ಟು ಅಧಿಕಾರಿಗಳು ಟೋಕಿಯೋದ ನೈಟ್ ಕ್ಲಬ್ಗಳಲ್ಲಿ ಕಾಣಿಸಿಕೊಂಡು ರಾಷ್ಟ್ರದ ಮಾನವನ್ನು ಹರಾಜು ಹಾಕಿದ್ದರು. ರಾಜೀವಗಾಂಧಿಯವರ ಕಾಲದಲ್ಲಿ ಪ್ರವಾಸದ ರೂಪುರೇಷೆಗಳಲ್ಲಿಯೇ ಏರುಪೇರಾಗಿ ಗೊಂದಲವುಂಟಾಗಿತ್ತು. ಮೋದಿ ಅಫ್ಘಾನಿಸ್ತಾನ್, ಕತಾರ್, ಸ್ವಿಟ್ಝರ್ಲ್ಯಾಂಡ್, ಅಮೇರಿಕಾ ಮತ್ತು ಮೆಕ್ಸಿಕೋಗಳ ಪ್ರವಾಸವನ್ನು ಒಂದೇ ಉಸಿರಿನಲ್ಲಿ ಮುಗಿಸಿದರಲ್ಲ ಒಂದಾದರೂ ಅಪವಾದ ಬಂದಿತ್ತಾ? ಇಡಿಯ ದಿನ ಒಂದರ ಹಿಂದೆ ಸಭೆ ನಡೆಸುತ್ತ, ರಾತ್ರಿಯಾದೊಡನೆ ಪ್ರವಾಸ ಆರಂಭಿಸುವ ಮೋದಿ ಒಮ್ಮೆಯೂ ಜೆಟ್ ಲ್ಯಾಗ್ನಿಂದ ಬಳಲಿಲ್ಲ; ಪ್ರವಾಸದಿಂದ ಮರಳಿ ಬಂದಾಗ ರಜೆ ಪಡೆದು ವಿಶ್ರಾಂತಿಗೆ ತೆರಳಲಿಲ್ಲ. ಈ ಮನುಷ್ಯನೊಳಗೆ ಅಕ್ಷರಶಃ ವಿಚಿತ್ರವಾದ, ಊಹೆಗೆ ನಿಲುಕದ ಶಕ್ತಿಯೊಂದು ಹರಿಯುತ್ತಿದೆ.

ಹಾಗೆ ಸುಮ್ಮನೆ ಮೋದಿ ಮತ್ತು ಮನಮೋಹನ್ರ ವಿದೇಶ ಪ್ರವಾಸದ ತುಲನೆ ಮಾಡಿ ನೋಡಿ. ಮನಮೋಹನರು 2008 ರಲ್ಲಿ 4 ದಿನಗಳ ಕಾಲ ಚೀನಾ ಪ್ರವಾಸದಲ್ಲಿದ್ದಾಗ 10 ಸಭೆಗಳಲ್ಲಿ ಭಾಗವಹಿಸಿದ್ದರು. ಆದರೆ ಮೋದಿ ತಮ್ಮ ಮೊದಲ ಮೂರು ದಿನಗಳ ಪ್ರವಾಸದಲ್ಲೇ 25 ಸಭೆಗಳನ್ನು ನಡೆಸಿದ್ದರು. 2009 ರಲ್ಲಿ ಮನಮೋಹನರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ನಗರಕ್ಕೆ ಭೇಟಿ ಕೊಟ್ಟಿದ್ದರು ಮತ್ತು 15 ಸಭೆಗಳಲ್ಲಿ ಭಾಗವಹಿಸಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ತಮ್ಮ ಮೊದಲ ಅಮೇರಿಕಾ ಭೇಟಿಯಲ್ಲಿ ಎರಡು ನಗರಗಳನ್ನು ಸಂದಶರ್ಿಸಿ 33 ಸಭೆಗಳಲ್ಲಿ ಭಾಗವಹಿಸಿದ್ದರು. ಮನಮೋಹನರು ಸಣ್ಣ ರಾಷ್ಟ್ರಗಳಿಗೆ ಬಿಡಿ ಅಮೇರಿಕಾದಂತ ಬೃಹತ್ ರಾಷ್ಟ್ರಗಳಿಗೆ ಹೋಗಿಬಂದರೂ ಅಲ್ಲಿನ ಪತ್ರಿಕೆಯಲ್ಲೂ ಇಲ್ಲಿನ ಪತ್ರಿಗಕೆಗಳಲ್ಲೂ ಚಚರ್ೆಯಾಗುತ್ತಿರಲಿಲ್ಲ. ಆದರೆ ಮೋದಿ ಭೂತಾನ್ಗೆ ಹೋಗಲಿ, ದೂರದ ಫಿಜಿ ದ್ವೀಪಕ್ಕೆ ಹೋಗಲಿ ಭಾರತದ ಮಾಧ್ಯಮಗಳು ಅವರ ಭಾಷಣಗಳನ್ನು, ವರದಿಗಳನ್ನು ನೇರ ಪ್ರಸಾರದಲ್ಲಿ ತೋರಿಸುತ್ತವಷ್ಟೇ ಅಲ್ಲದೇ ಆಯಾ ದೇಶದ ಮಾಧ್ಯಮಗಳು ಮೋದಿಯವರ ಆಗಮನವನ್ನು ಸಂಭ್ರಮಿಸುತ್ತವೆ. ಭಾರತವನ್ನು ಜಗತ್ತಿನ ಜನ ಮೂಸಿಯೂ ನೋಡುವುದಿಲ್ಲ ಎಂಬ ಭಾವನೆ ಇದ್ದ ಕಾಲಕ್ಕೆ ನರೇಂದ್ರಮೋದಿ ತಮ್ಮ ಚರಿಷ್ಮಾ ಬಳಸಿಕೊಂಡು ಭಾರತದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಏರಿಸಿಬಿಟ್ಟರು. ಎಲ್ಲ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಅವರು ಮತ್ತೊಮ್ಮೆ ಸಂಘಟಿಸಿ ಆಯಾ ರಾಷ್ಟ್ರದ ನಿಮರ್ಾಣದಲ್ಲಿ ಭಾರತೀಯರ ಪಾತ್ರ ಏನೆಂಬುದನ್ನು ಅಲ್ಲಿನ ನಾಯಕರಿಗೆ ಮನವರಿಕೆ ಮಾಡಿಸಿಕೊಟ್ಟ ರೀತಿಯಂತೂ ಪರಮಾದ್ಭುತ! ಅಮೇರಿಕಾ, ಇಂಗ್ಲೆಂಡು ಬಿಡಿ ಚೀನಾದಲ್ಲೂ ಭಾರತೀಯರನ್ನು ಭೇಟಿ ಮಾಡುವ ನರೇಂದ್ರಮೋದಿಯವರ ಕಾರ್ಯಕ್ರಮದ ವರದಿ, ಚಿತ್ರಣಗಳು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದ್ದವು. ಆಸ್ಟ್ರೇಲಿಯಾ, ಇಂಗ್ಲೆಂಡು, ಮಧ್ಯ ಏಷ್ಯಾದ ಮುಸಲ್ಮಾನ ರಾಷ್ಟ್ರಗಳಲ್ಲೆಲ್ಲಾ ಭಾರತೀಯರ ಸಂಖ್ಯೆ ಹೆಚ್ಚಿರುವುದರಿಂದ ತಮ್ಮ ಪ್ರಧಾನಿಯ ಆಗಮನವನ್ನು ಅವರೆಲ್ಲ ಹಬ್ಬವಾಗಿ ಸಂಭ್ರಮಿಸುವುದಕ್ಕೆ ನರೇಂದ್ರಮೋದಿ ಅವಕಾಶ ಮಾಡಿಕೊಟ್ಟರಲ್ಲದೇ ಇದರಿಂದ ಗಳಿಸಿದ ಖ್ಯಾತಿಯನ್ನು ಆಯಾ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧವನ್ನು ಗಟ್ಟಿ ಮಾಡಲೆಂದೇ ಬಳಸಿಕೊಂಡರು.

Chinese Prez in Ahmedabad

ನರೇಂದ್ರಮೋದಿಯವರು ವಿದೇಶಾಂಗ ನೀತಿಯ ನಿರ್ವಹಿಸುವ ರೀತಿಯೇ ವಿಶಿಷ್ಟವಾದ್ದು. ಅವರು ತಮ್ಮ ವೈಯಕ್ತಿಕವಾದ ಸಂಬಂಧವನ್ನು ಆಯಾ ರಾಷ್ಟ್ರಗಳ ನಾಯಕರೊಂದಿಗೆ ಸಮರ್ಥವಾಗಿ ಬೆಸೆಯುತ್ತಲೇ ರಾಷ್ಟ್ರದ ಅಭಿವೃದ್ಧಿಗೆ ಬೇಕಾಗಿರುವ ಅಡಿಪಾಯವನ್ನು ಬಲಗೊಳಿಸುತ್ತಾರೆ. ಗುಜರಾತಿನಲ್ಲಿರುವಾಗಿನಿಂದಲೂ ಜಪಾನಿನ ಅಧ್ಯಕ್ಷರೊಂದಿಗೆ ಅವರಿಗೆ ಬಲವಾದ ಸ್ನೇಹ. ಅಧಿಕಾರಕ್ಕೆ ಬಂದೊಡನೆ ಈ ಸ್ನೇಹದ ಲಾಭವನ್ನು ಅವರು ಪಡೆಯದೇ ಬಿಡಲಿಲ್ಲ. ಏಷ್ಯಾದಲ್ಲಿ ಚೀನಾಕ್ಕೆದುರಾಗಿ ಸದೃಢವಾಗಿ ಬೆಳೆಯಬೇಕೆಂದರೆ ಜಪಾನ್ನಂತಹ ರಾಷ್ಟ್ರಗಳೊಂದಿಗೆ ಸುಮಧುರ ಬಾಂಧವ್ಯವನ್ನು ಹೊಂದಬೇಕೆಂಬ ಅರಿವಿದ್ದ ಮೋದಿ ತಮ್ಮ ಹಳೆಯ ಸ್ನೇಹವನ್ನು ಮತ್ತೂ ಬಲಗೊಳಿಸಿದರು. ತಾವು ಜಪಾನಿಗೆ ಹೋಗಿಬಂದದ್ದಲ್ಲದೇ ಜಪಾನಿನ ಪ್ರಧಾನಿ ಭಾರತಕ್ಕೆ ಬಂದಾಗ ಅವರನ್ನು ಗಂಗಾರತಿಗೆ ಕರೆದೊಯ್ದು ಮೋದಿಯವರು ಕೊಟ್ಟ ಆತಿಥ್ಯವನ್ನು ಬಹುಶಃ ಜಪಾನು ಸುದೀರ್ಘ ಕಾಲ ಮರೆಯಲಾರದು. ಚೀನಾದ ಅಧ್ಯಕ್ಷರನ್ನು ಗುಜರಾತಿನ ಸಬರಮತಿ ನದೀ ತೀರಕ್ಕೊಯ್ದು ವಿಶೇಷವಾದ ವಾತಾವರಣದಲ್ಲಿ ಅವರೊಂದಿಗೆ ಮಾತನಾಡುವ ವ್ಯವಸ್ಥೆಯನ್ನು ರೂಪಿಸಿದ್ದು ನರೇಂದ್ರಮೋದಿಯವರೇ. ತಾವು ವಿದೇಶಕ್ಕೆ ಹೋದಾಗಲೂ ಅಷ್ಟೇ. ಅಲ್ಲಿನ ನಾಯಕರುಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುವ ಅವಕಾಶವನ್ನು ಅವರೆಂದಿಗೂ ಕಳೆದುಕೊಳ್ಳಲಾರರು. ಇಸ್ರೇಲಿನ ಪ್ರಧಾನಿಯೊಂದಿಗೆ ಸಮುದ್ರ ತೀರದಲ್ಲಿ ಅಡ್ಡಾಡುತ್ತ ಅವರು ನಡೆಸಿದ ವಾತರ್ಾಲಾಪವಿರಬಹುದು, ರಷ್ಯಾದ ಅಧ್ಯಕ್ಷರೊಂದಿಗೆ ಸೋಚಿಯಲ್ಲಿ ನಡೆಸಿದ ಸಂಭಾಷಣೆಯಿರಬಹುದು, ಚೀನಾದ ಅಧ್ಯಕ್ಷರೊಂದಿಗಿನ ವಸ್ತು ಸಂಗ್ರಹಾಲಯದ ತಿರುಗಾಟವೂ ಅಷ್ಟೇ. ಎಲ್ಲವೂ ವಿಶಿಷ್ಟವಾದ್ದೇ. ಮೋದಿ ಹೊರದೇಶಗಳ ನಾಯಕರನ್ನು ತಮ್ಮ ಮಿತ್ರನಾಗಿಸಿಕೊಂಡುಬಿಡುವಷ್ಟು ಹತ್ತಿರವಾಗುತ್ತಾರೆ. ಅದೇ ಸಲುಗೆಯಿಂದ ವ್ಯವಹರಿಸುತ್ತಲೇ ತಮ್ಮ ಕೆಲಸವನ್ನೂ ಮಾಡಿಸಿಕೊಳ್ಳುತ್ತಾರೆ. ಹೀಗಾಗಿಯೇ ಸೌದಿ ಅರೇಬಿಯಾದೊಂದಿಗೆ, ಇರಾನ್ನೊಂದಿಗೆ ಮತ್ತು ಇಸ್ರೇಲ್, ಪ್ಯಾಲೆಸ್ತೇನ್ನೊಂದಿಗೆ ಏಕಕಾಲದಲ್ಲಿ ಸುಮಧುರ ಬಾಂಧವ್ಯವನ್ನು ಹೊಂದುವುದು ನರೇಂದ್ರಮೋದಿಯವರಿಗೆ ಸಾಧ್ಯವಾಗಿದೆ.

4

ಮುಸ್ಲೀಂ ವಿರೋಧಿಯೆಂದು ಕಾಂಗ್ರೆಸ್ಸಿನಿಂದ ಬಿಂಬಿಸಲ್ಪಡುತ್ತಿರುವ ನರೇಂದ್ರಮೋದಿಯವರನ್ನು ಅರಬ್ ರಾಷ್ಟ್ರಗಳು ನೋಡುತ್ತಿರುವ ರೀತಿ ಎಂಥದ್ದು ಗೊತ್ತೇನು? ಅವರು ಯುಎಇಗೆ ಹೋಗಿದ್ದಾಗ ಅಬುದಾಬಿಯ ನಾಯಕ ಶೇಕ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಹ್ಯಾನ್ ತನ್ನ ಐದು ಸಹೋದರರೊಂದಿಗೆ ವಿಮಾನ ನಿಲ್ದಾಣಕ್ಕೇ ಹೋಗಿ ಪ್ರಧಾನಿಯವರನ್ನು ಸ್ವಾಗತಿಸಿದರು. ಈ ರೀತಿಯ ಸ್ವಾಗತ ಬಹುಶಃ ಜಗತ್ತಿನ ಯಾವ ನಾಯಕನಿಗೂ ಅಲ್ಲಿ ಸಿಕ್ಕಿರಲಿಕ್ಕಿಲ್ಲ! ಈ ಶೇಕ್ ಸಹೋದರರು ನರೇಂದ್ರಮೋದಿಯವರೊಂದಿಗೆ ಸೆಲ್ಫಿಗೂ ಪೋಸು ಕೊಟ್ಟು ಸಂಭ್ರಮಿಸಿದ್ದನ್ನು ನೋಡಿದರೆ ಎಂಥವನಿಗೂ ಅಚ್ಚರಿಯಾದೀತು. ದುಬೈನಲ್ಲಿ ಮೋದಿಯವರ ಭಾಷಣ ನಡೆದ ಕ್ರಿಕೆಟ್ ಸ್ಟೇಡಿಯಂನ ಸಾಮಥ್ರ್ಯವೇ ನಲವತ್ತು ಸಾವಿರ. ಹೀಗಿದ್ದಾಗ್ಯೂ ಆಡಳಿತವೇ ವಿಶೇಷ ಆಸ್ಥೆ ತೆಗೆದುಕೊಂಡು 50,000 ಜನರಿಗೆ ವ್ಯವಸ್ಥೆ ಮಾಡಿದ್ದು ಇಂದಿಗೂ ಅನೇಕರಿಗೆ ಅಚ್ಚರಿ. ಒಮನ್ನ ದೊರೆಗಂತೂ ಮೋದಿಯವರ ಮೇಲೆ ಅದೆಷ್ಟು ಅಭಿಮಾನವೆಂದರೆ ಅವರು ಭಾಷಣ ಮಾಡಲೆಂದು ತಾನೇ ಮಾತನಾಡುವ ಕ್ಯಾಬಿನ್ನನ್ನು ಕ್ರೀಡಾಂಗಣದಲ್ಲಿ ಅವರಿಗೋಸ್ಕರ ಬಿಟ್ಟುಕೊಟಿದ್ದನ್ನು ಇಂದಿಗೂ ಅಲ್ಲಿನ ಭಾರತೀಯರು ನೆನಪಿಸಿಕೊಳ್ಳುತ್ತಾರೆ. ನರೇಂದ್ರಮೋದಿಯವರ ಸೆಲ್ಫಿಯ ಹುಚ್ಚನ್ನು ನಮ್ಮಲ್ಲನೇಕರು ಆಡಿಕೊಳ್ಳುತ್ತಾರಲ್ಲಾ ಆಯಾ ದೇಶದ ನಾಯಕರೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೋದಿ ಆ ದೇಶದ ಜನರಲ್ಲೂ ಭಾರತದ ಕುರಿತಂತೆ ಸದ್ಭಾವನೆಯನ್ನು ತುಂಬುವುದರಲ್ಲಿ ಯಶಸ್ವಿಯಾಗಿಬಿಡುತ್ತಾರೆ. ಮೋದಿ ಪ್ಯಾಲೆಸ್ತೇನಿಗೆ ಹೋಗುತ್ತಾರೆಂದರೆ ಜೋಡರ್ಾನಿನ ದೊರೆಯೇ ಖುದ್ದು ಹೆಲಿಕಾಪ್ಟರು ಕಳಿಸಿಕೊಡುತ್ತಾನೆ. ಪ್ಯಾಲೆಸ್ತೇನಿನ ಆ ಭೇಟಿಯೇ ಅತಿ ವಿಶಿಷ್ಟವಾದ್ದು. ಅಲ್ಲಿನ ರಾಮಲ್ಲಾಹ್ಕ್ಕೆ ಭೇಟಿ ನೀಡಿದ ಇದುವರೆಗಿನ ಎಲ್ಲ ಪ್ರಧಾನಮಂತ್ರಿಗಳೂ ಇಸ್ರೇಲಿನ ಮೂಲಕವೇ ಹೋಗಿದ್ದವರು. ಆದರೆ ಮೋದಿ ಜೋಡರ್ಾನ್ ಸಕರ್ಾರದ ಹೆಲಿಕಾಪ್ಟರ್ ಅನ್ನು ಬಳಸಿ ಬೆಂಗಾವಲಾಗಿ ಪ್ಯಾಲಿಸ್ತೇನಿನ ಬದ್ಧ ವೈರಿ ಇಸ್ರೇಲಿನ ವಾಯುಸೇನೆಯ ವಿಮಾನಗಳ ಸಹಕಾರದೊಂದಿಗೆ ರಾಮಲ್ಲಾಹ್ದಲ್ಲಿ ನೇರವಾಗಿ ಇಳಿದಿದ್ದು ಜಾಗತಿಕ ಅದ್ಭುತಗಳಲ್ಲೊಂದು. ತನ್ನ ಪ್ರವಾಸದ ನೆಪದಲ್ಲಿ ಶತ್ರು ರಾಷ್ಟ್ರಗಳೆರಡನ್ನೂ ಬೆಸೆಯುವ ಅತಿ ವಿಶಿಷ್ಟ ಪ್ರಯತ್ನವನ್ನು ಮೋದಿ ಮಾಡಿಬಿಟ್ಟಿದ್ದರು. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಇಂದು ಟ್ರಂಪ್, ಪುತಿನ್ ಮತ್ತು ಜಿನ್ಪಿಂಗ್ ಇವರೆಲ್ಲಾ ಮಿಲಿಟರಿ ಬಲದಿಂದ ಒತ್ತಾಯದ ಗೌರವ ಪಡೆದಿರಬಹುದು. ಮೋದಿ ಮಾತ್ರ ತಮ್ಮ ವ್ಯಕ್ತಿತ್ವದ ಬಲದಿಂದಲೇ ಜಗತ್ತಿನ ಕಣ್ಮಣಿಯಾಗಿಬಿಟ್ಟಿದ್ದಾರೆ. ಹಾಗಂತ ಇದನ್ನೇ ಸಾಧನೆಯೆಂದುಕೊಳ್ಳುವ ಅಗತ್ಯವೇನಿಲ್ಲ. ಮೋದಿ ಭಾರತಕ್ಕೆ ಆಗಬೇಕಾಗಿರುವ ಎಲ್ಲ ಸಹಕಾರಗಳನ್ನು ಜಗತ್ತಿನ ರಾಷ್ಟ್ರಗಳಿಂದ ಪಡೆದುಕೊಂಡೇ ಬಂದಿದ್ದಾರೆ.

5

ಅಮೇರಿಕಾದೊಂದಿಗೆ ಭಾರತದ ಬಾಂಧವ್ಯವನ್ನು ಹಿಂದೆಂದಿಗಿಂತಲೂ ಬಲಗೊಳಿಸಿರುವ ಮೋದಿ ರಕ್ಷಣಾ ವಿಚಾರದಲ್ಲಿ ಸಾಕಷ್ಟು ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಭಾರತವನ್ನು ಮಿಲಿಟರಿ ಸೂಪರ್ ಪವರ್ ಮಾಡುವುದಕ್ಕೆ ಬೇಕಾಗಿರುವ ಎಲ್ಲ ಪ್ರಯತ್ನವನ್ನೂ ಮಾಡಿದ್ದಾರೆ. ಹೀಗಾಗಿಯೇ ಮಿಸೈಲ್ ತಂತ್ರಜ್ಞಾನವನ್ನು ವಗರ್ಾಯಿಸುವ ವಿಚಾರದಲ್ಲಿ ನಿಯಂತ್ರಣ ಹೊಂದುವ ಎಮ್ಟಿಸಿಆರ್ ಸಂಘಟನೆಯ ಸದಸ್ಯ ರಾಷ್ಟ್ರವಾಗಲು ನಮಗೆ ಸಾಧ್ಯವಾಗಿದ್ದು. ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಅಮೇರಿಕಾ ಮಾಡುತ್ತಿದ್ದ ಸಹಕಾರ ಈಗ ಸಂಪೂರ್ಣ ನಿಂತೇ ಹೋಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇದುವರೆಗೂ ಪಾಕಿಸ್ತಾನಕ್ಕೆ ಕೊಟ್ಟ ಸಾಲವನ್ನು ಅಮೇರಿಕಾ ಈಗ ಮರಳಿ ಬಯಸುತ್ತಿದೆ. ಚೀನಾವನ್ನು ಜಾಗತಿಕ ಪರಿಪ್ರೇಕ್ಷ್ಯದಲ್ಲಿ ಮೆತ್ತಗೆ ಮಾಡಲು ಅಮೇರಿಕಾಕ್ಕೆ ಭಾರತ ಅಗತ್ಯವಾಗಿ ಬೇಕೆಂಬುದನ್ನು ಅರಿತ ಮೋದಿ ಒಬಾಮಾನೊಂದಿಗೂ ಆನಂತರ ಟ್ರಂಪ್ನೊಂದಿಗೂ ಘನಿಷ್ಠ ಬಾಂಧವ್ಯವನ್ನೇ ಹೊಂದಿದ್ದಾರೆ. ಇಂಗ್ಲೆಂಡಿನೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿರುವ ಭಾರತ ಆ ರಾಷ್ಟ್ರದಲ್ಲಿ ಮೂರನೇ ದೊಡ್ಡ ಹೂಡಿಕೆದಾರವಾಗಿ ಬೆಳೆದಿದೆ. ಅಷ್ಟೇ ಅಲ್ಲದೇ ಗಂಗಾ ಸ್ವಚ್ಛತೆಯಲ್ಲಿ, ಕೌಶಲ್ಯ ಅಭಿವೃದ್ಧಿಯಲ್ಲಿ, ಶಕ್ತಿ ಮತ್ತು ಕೈಗಾರಿಕೆಯ ಬೆಳವಣಿಗೆಯ ವಿಚಾರದಲ್ಲಿ ಅನೇಕ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅಮೇರಿಕಾದೊಂದಿಗೆ ಚೆನ್ನಾಗಿದ್ದೇವೆಂಬ ಮಾತ್ರಕ್ಕೆ ಭಾರತವೀಗ ರಷ್ಯಾದಿಂದ ದೂರವಿಲ್ಲ. ಪುತಿನ್ರೊಂದಿಗೆ ಅಗತ್ಯವೆನಿಸಿದಾಗಲೆಲ್ಲ ಫೋನಿನಲ್ಲಿ ಮಾತನಾಡುವಷ್ಟು ಸಲಿಗೆ ಬೆಳೆಸಿಕೊಂಡಿರುವ ಮೋದಿ ರಷ್ಯಾಕ್ಕೆ ಹೋದಾಗ ರಾಜಧಾನಿಯ ಹೊರಗೆ ಸೋಚಿಯಲ್ಲಿ ಅವರೊಡನೆ ನಡೆಸಿದ ಅನೌಪಚಾರಿಕ ಸಂಭಾಷಣೆ ಜಾಗತಿಕ ವಲಯದಲ್ಲಿ ಚಚರ್ಿತ ವಿಷಯ. ಜರ್ಮನಿಗೆ ನಾಲ್ಕು ಬಾರಿ ಭೇಟಿ ಕೊಟ್ಟ ಮೋದಿ ಯುರೋಪಿಯನ್ ಯೂನಿಯನ್ನೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಕೊಳಿಸಿಕೊಳ್ಳುವ ದೃಷ್ಟಿ ಇಟ್ಟವರೇ. ಇನ್ನು ಭಾರತ-ಫ್ರಾನ್ಸಿನ ಸಂಬಂಧ ಮೋದಿಯವರ ಕಾಲದಲ್ಲಿ ಅದೆಷ್ಟು ಬಲವಾಗಿದೆಯೆಂದರೆ ನನೆಗುದಿಗೆ ಬಿದ್ದಿದ್ದ 36 ರಫೆಲ್ ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಮತ್ತೆ ಚಾಲನೆ ಕೊಟ್ಟು ಕಾಂಗ್ರೆಸ್ಸು ಮಾಡಿಕೊಂಡ ಒಪ್ಪಂದಕ್ಕಿಂತ ಕಡಿಮೆ ಬೆಲೆಯಲ್ಲಿ ಅವುಗಳನ್ನು ಖರೀದಿ ಮಾಡುವಷ್ಟು ಚೌಕಶಿ ಮಾಡಿದರು.

ಲೇಖನದ ವ್ಯಾಪ್ತಿ ಮುಗಿಯಬಹುದು ಆದರೆ ಮೋದಿಯವರ ವಿದೇಶ ಯಾತ್ರೆಯ ಸಾಹಸ ಇಲ್ಲಿಗೇ ನಿಲ್ಲುವುದಿಲ್ಲ. ಹಾಗೆಂದೇ ಮುಂದಿನ ವಾರ ಮತ್ತೆ ವಿಸ್ತಾರವಾಗಿ ಹಂಚಿಕೊಳ್ಳುತ್ತೇನೆ.

Comments are closed.