ವಿಭಾಗಗಳು

ಸುದ್ದಿಪತ್ರ


 

ಮೋದಿಯ ವಿರುದ್ಧ ಆರೋಪವೇ ಇಲ್ಲದ ಚುನಾವಣೆ 2019!

ಇಂಗ್ಲೆಂಡು ಕೂಡ ಹಿಂದೆಂದಿಗಿಂತಲೂ ಹೆಚ್ಚು ಭಾರತದ ಮಾತನ್ನು ಕೇಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ವಿಜಯಮಲ್ಯಾ ಭಾರತದ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿಯನ್ನು ವಂಚಿಸಿ ಇಂಗ್ಲೆಂಡಿಗೆ ಓಡಿ ಹೋಗಿ ಸೇರಿಕೊಂಡೊಡನೆ ಬಚಾವಾಗಿ ಬಿಡಬಹುದೆಂದು ಭಾವಿಸಿದ್ದ. ಆದರೆ ನರೇಂದ್ರಮೋದಿಯ ಸಕರ್ಾರ ಹಿಂದಿನ ಸಕರ್ಾರಗಳಂತಲ್ಲ. ಇದು ತನ್ನೆಲ್ಲ ಪ್ರಭಾವಗಳನ್ನು ಬಳಸಿ ಅಗತ್ಯ ಬಿದ್ದರೆ ಹೆಡೆಮುರಿ ಕಟ್ಟಿ ಯಾರನ್ನಾದರೂ ಬಗ್ಗಿಸಿಬಿಡುತ್ತದೆ.

ದೇಶದಿಂದ ಹೊರಗೆ ಹೋದ ಭಾರತೀಯರ ಕುರಿತಂತೆ ಪಲಾಯನ ಮಾಡಿದವರು, ದೇಶ ಬಿಟ್ಟು ಓಡಿದವರು, ದೇಶಕ್ಕೆ ಉಪಯೋಗವಾಗದವರು ಎಂದೆಲ್ಲ ಬೈದುಕೊಳ್ಳುತ್ತಿದ್ದೆವಲ್ಲಾ; ನರೇಂದ್ರಮೋದಿ ಅಧಿಕಾರಕ್ಕೆ ಬಂದಮೇಲೆ ಇವರೆಲ್ಲರೂ ಭಾರತ ವಿದೇಶದಲ್ಲಿ ಹೂಡಿಕೆ ಮಾಡಿಟ್ಟಿರುವ ಆಸ್ತಿ ಎಂಬುದು ಸಾಬೀತಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಭಾರತೀಯರು ಇಂದು ಗಣಿಸಲ್ಪಡಬಹುದಾದಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮೊದಲೂ ಇದ್ದರು. ಆದರೆ ಈ ಹಿಂದಿನ ಪ್ರಧಾನಿಗಳ್ಯಾರೂ ಈ ವಿದೇಶೀ ನೆಲದ ಭಾರತೀಯರನ್ನು ಮಾತನಾಡಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಮೋದಿ ಆಯಾ ನೆಲದಲ್ಲಿ ಅವರನ್ನು ಸಂಧಿಸಿ ಅವರನ್ನು ಮಾತನಾಡಿಸಿ ಬರುವುದು ಮೇಲ್ನೋಟಕ್ಕೆ ದೊಡ್ಡ ಕಾರ್ಯಕ್ರಮವಷ್ಟೇ ಎನಿಸುತ್ತದೆ. ಆದರೆ ವಾಸ್ತವವಾಗಿ ವಿದೇಶದ ನೆಲದಲ್ಲಿ ಭಾರತದ ಸಂಖ್ಯಾ ಪ್ರದರ್ಶನ ಅದು. ಇದರ ಲಾಭ ಏನೆಂಬುದು ಇತ್ತೀಚೆಗೆ ಮಲೇಷಿಯಾದಲ್ಲಿ ಸಾಬೀತಾಗಿದೆ. ಕೆಲವಾರು ದಿನಗಳ ಹಿಂದೆ ಮಲೇಷಿಯಾದ ಚುನಾವಣೆಗೂ ಮುನ್ನ ಅಲ್ಲಿನ ಪ್ರಧಾನಮಂತ್ರಿ ನಜೀಬ್ ರಜಾಕ್ ಭಾರತಕ್ಕೆ ಬಂದಿದ್ದು ನಿಮಗೆಲ್ಲ ನೆನಪಿರಬೇಕು. ಮೇಲ್ನೋಟಕ್ಕೆ ಇದು ಭಾರತ-ಮಲೇಷಿಯಾಗಳ ಸಂಬಂಧ ವೃದ್ಧಿ ಎಂದೆನಿಸಿದರೂ ಆಂತರ್ಯದಲ್ಲಿ ಮಲೇಷಿಯಾದಲ್ಲಿದ್ದ ಭಾರತೀಯರನ್ನು ಒಲಿಸಿಕೊಳ್ಳುವುದೇ ಮೂಲ ಉದ್ದೇಶವಾಗಿತ್ತು. ನರೇಂದ್ರಮೋದಿ ಉತ್ತರ ಭಾರತದ ಹಿಂದಿ ಭಾಷಿಕರನ್ನು ಪ್ರಭಾವಿಸಬಲ್ಲರೆಂದು ಅರಿವಿದ್ದ ನಜೀಬ್ ಅಷ್ಟಕ್ಕೇ ಸುಮ್ಮನಾಗದೇ ದಕ್ಷಿಣದ ಪ್ರಭಾವಿ ನಾಯಕರನ್ನು ಭೇಟಿ ಮಾಡಿದ. ಅವರೂ ಕೂಡ ಮಲೇಷಿಯಾದಲ್ಲಿದ್ದ ದಕ್ಷಿಣ ಭಾರತೀಯರನ್ನು ತನ್ನ ಪರವಾಗಿ ಮತ ಚಲಾಯಿಸಲು ಪ್ರೇರೇಪಿಸಬಲ್ಲರೆಂಬುದು ನಜೀಬನ ಊಹೆಯಾಗಿತ್ತು.

ನಜೀಬ್ ರಜಾಕ್ ಅಲ್ಲಿನ ಬಾರಿಸಾನ್ ನ್ಯಾಷನಲ್ ಪಕ್ಷದ ಪ್ರಮುಖ ಮತ್ತು ಕಳೆದ 15 ವರ್ಷಗಳಿಂದ ಮಲೇಷಿಯಾದ ಆಳ್ವಿಕೆ ನಡೆಸುತ್ತಿರುವಾತ. ಇದಕ್ಕೆದುರಾಗಿ ಪಕತಾನ್-ಹರಪಾನ್ ಎಂಬ ಪಕ್ಷದ ಪ್ರಮುಖರಾಗಿ ಮೊಹತೀರ್ ಬಲವಾದ ಎದುರಾಳಿಯಾಗಿದ್ದರು. ದೇಶದ ಒಟ್ಟಾರೆ ಜನಸಂಖ್ಯೆ 32 ಲಕ್ಷದಲ್ಲಿ 7 ಪ್ರತಿಶತದಷ್ಟು ಜನ ಭಾರತೀಯರೇ ಇದ್ದಾರೆ. ಚೀನಿಯನ್ನರ ವೋಟು ಮೊಹತೀರ್ ಜೊತೆಗೆ ಇರುವುದರಿಂದ ಭಾರತೀಯರ ವೋಟನ್ನು ತನ್ನತ್ತ ಸೆಳೆಯಲೇಬೇಕೆಂಬ ಹಠ ನಜೀಬನಿಗಿತ್ತು. ಹಾಗಂತ ನಜೀಬ್ ಚುನಾವಣೆಗೂ ಮುನ್ನ ಭಾರತದ ಪರವಾಗಿದ್ದವನೇನಲ್ಲ. ಇಸ್ಲಾಮಿ ಭಯೋತ್ಪಾದನೆಯ ಬೀಜವಾಗಿದ್ದ ಜಾಕಿರ್ ನಾಯ್ಕನನ್ನು ಭಾರತ ಹುಡುಕಾಡುತ್ತಿದೆಯೆಂದು ಗೊತ್ತಿದ್ದಾಗಲೂ, ಕೆನಡಾ, ಇಗ್ಲೆಂಡ್ ಮತ್ತು ಬಾಂಗ್ಲಾಗಳಲ್ಲಿ ಆತನಿಗೆ ನಿಷೇಧವಿದೆ ಎಂದು ಗೊತ್ತಿದ್ದಾಗಲೂ ಆತನಿಗೆ ಮಲೇಷಿಯಾದಲ್ಲಿ ಆಶ್ರಯ ನೀಡಿದ್ದ. ಭಾರತದ ಕೋರಿಕೆಯನ್ನು ಅರಿವಿದ್ದೇ ತಿರಸ್ಕರಿಸುತ್ತಿದ್ದ ಮಲೇಷಿಯಾ ಜಾಕಿರ್ ನಾಯಕ್ನನ್ನು ರಕ್ಷಿಸಿಕೊಳ್ಳಲು ಹರಸಾಹಸವನ್ನೇ ಮಾಡಿತು. ಭಾರತದ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ರೆಡ್ ನೋಟೀಸನ್ನು ಹೊರಡಿಸಿದರೆ ಮಲೇಷಿಯಾ ಅವನನ್ನು ಬಂಧಿಸುವುದೇ ಎಂದು ಕೇಳಿದ್ದಕ್ಕೆ ಅಲ್ಲಿನ ಅಧಿಕಾರಿಗಳು ಕೊಟ್ಟ ಉತ್ತರ ಋಣಾತ್ಮಕವೇ ಆಗಿತ್ತು.

18

ನಜೀಬ್ ತನ್ನ ಇಸ್ಲಾಂ ಮೂಲದಿಂದಾಗಿ ಸಹಜವಾಗಿಯೇ ಭಾರತ ವಿರೋಧೀ ಚಿಂತನೆಗಳನ್ನಿಟ್ಟುಕೊಂಡವನು. ಆತನ ಚೀನಾದ ಪರ ಒಲವು ಜೋರಾಗಿಯೇ ಇತ್ತು. ಚುನಾವಣೆಯಲ್ಲಿ ಆತ ಸೋತು ಪಕ್ಕಕ್ಕೆ ಸರಿಯುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಹೀಗಾಗಿ 15 ವರ್ಷಗಳ ಈ ಆಡಳಿತ ಕೊನೆಗಾಣುವ ಅಗತ್ಯ ಏಷ್ಯಾದ ದೃಷ್ಟಿಯಿಂದ ಇತ್ತು. ಚುನಾವಣೆ ನಡೆದು ಫಲಿತಾಂಶ ಬಂದಾಗ ಅಂದುಕೊಂಡಂತೆ ಆಯ್ತು. ನಜೀಬ್ ಸೋತು ಮೊಹಾತೀರ್ ಗೆದ್ದಿದ್ದರು. 15 ವರ್ಷಗಳ ನಂತರ ಬದಲಾದ ಈ ಆಡಳಿತ ಹೊಸ ಚಿಂತನೆಗಳನ್ನು ಹೊತ್ತು ತಂದಿತ್ತು. ಮಲೇಷಿಯಾದ ನೂತನ ಪ್ರಧಾನಮಂತ್ರಿ ನಜೀಬ್ ರಜಾಕ್ರನ್ನು ಒಂದು ದಶಲಕ್ಷ ಬಿಲಿಯನ್ ಡಾಲರ್ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆಧಾರದ ಮೇಲೆ ಹೈ ಕೋಟರ್ಿನಲ್ಲಿ ವಿಚಾರಣೆಗೆ ಒಳಪಡಿಸಲಾಯ್ತು. ಮಲೇಷಿಯಾದಲ್ಲಿ ಈ ಬಗೆಯ ಅಪರಾಧಕ್ಕೆ 20 ವರ್ಷಗಳ ಶಿಕ್ಷೆಯಿದೆ. ಅತ್ತ ನಜೀಬ್ನ ಗೋಣು ಮುರಿಯುತ್ತಿದ್ದಂತೆ ಇತ್ತ ಹೊಸ ಪ್ರಧಾನಿ ಭಾರತದೊಂದಿಗೆ ತಮ್ಮ ಸ್ನೇಹವನ್ನು ಬಲಗೊಳಿಸಿಕೊಂಡಿದ್ದಾರೆ. ಜಾಕಿರ್ನಾಯಕ್ನನ್ನು ಭಾರತದ ವಶಕ್ಕೊಪ್ಪಿಸುವ ಭರವಸೆ ನೀಡಿದ್ದಲ್ಲದೇ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚೀನಾದೊಂದಿಗೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಡಿಯಲ್ಲಿ ಈ ಹಿಂದಿನ ಸಕರ್ಾರ ಮಾಡಿಕೊಂಡಿದ್ದ 20 ಬಿಲಿಯನ್ ಡಾಲರ್ಗಳ ರೈಲು ರಸ್ತೆಯ ಯೋಜನೆಯನ್ನು ರದ್ದು ಮಾಡಲಾಗಿದೆ. ಹೊಸದಾಗಿ ನಿಮರ್ಾಣಗೊಂಡಿರುವ ಮಲೇಷಿಯಾ ಸಕರ್ಾರ ಹಳೆಯ ಸಕರ್ಾರಗಳ ಎಲ್ಲ ಒಪ್ಪಂದಗಳನ್ನು ಭ್ರಷ್ಟಾಚಾರದ ಕಾರಣ ಕೊಟ್ಟು ರದ್ದು ಮಾಡಿಬಿಟ್ಟಿದೆ. ಇದು ಚೀನಾಕ್ಕೆ ಬಲು ದೊಡ್ಡ ಆಘಾತ. ಮಲೇಷಿಯಾದ ಹಣಕಾಸು ಮಂತ್ರಿ ಲಿಮ್ ಗ್ವಾನ್ ಎಂಗ್ ಚೀನಾದೊಂದಿಗೆ ಈ ಒಪ್ಪಂದಕ್ಕೆ ಮತ್ತೊಮ್ಮೆ ಚಚರ್ೆಗೆ ಕೂರಲಾಗುವುದು ಎಂದು ಭರವಸೆ ನೀಡಿದ್ದರೂ ಈಗ ಇಟ್ಟ ಹೆಜ್ಜೆ ಬಲು ಗಂಭೀರವಾದದು ಎಂಬುದಂತೂ ಎಲ್ಲರಿಗೂ ಅರಿವಾಗುತ್ತಿದೆ. ಚೀನಾ ಸಣ್ಣ-ಪುಟ್ಟ ರಾಷ್ಟ್ರಗಳಿಗೆ ದೊಡ್ಡ ಮೊತ್ತದ ಸಾಲವನ್ನು ಕೊಟ್ಟು ಅವರು ಅದನ್ನು ತೀರಿಸಲಾಗದೆ ಹೋದಾಗ ಅವರ ಆಯಾಕಟ್ಟಿನ ಸ್ಥಳಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಅದಾಗಲೇ ಶ್ರೀಲಂಕಾದ ಹಂಬನ್ ತೋಟಾ ಬಂದರು ಇದೇ ದಿಸೆಯಲ್ಲಿ ಚೀನಾದ ಪಾಲಾಗಿಬಿಟ್ಟಿದೆ. ಪಾಕಿಸ್ತಾನವಂತೂ ಅನಿವಾರ್ಯವಾಗಿ ಚೀನಾದ ಬೆರಳ ತುದಿಯಲ್ಲಿ ಕುಣಿಯಬೇಕಾದ ಪರಿಸ್ಥಿತಿ ತಂದುಕೊಂಡಿದೆ. ಒನ್ ಬೆಲ್ಟ್ ಒನ್ ರೋಡ್ನ ಮುಖಾಂತರ ಪಾಕಿಸ್ತಾನಕ್ಕೆ ಮುಂದೆಂದೋ ಸಿಗಲಿರುವ ಉಡುಗೊರೆಯ ಆಮಿಶಗಳನ್ನು ಒಡ್ಡಿ ಇಂದು ಅಪಾರವಾಗಿ ಲೂಟಿಗೈಯ್ಯಲಾಗುತ್ತಿದೆ. ಬಲೂಚಿಸ್ತಾನದ ಜನತೆ ಕೆಡುಕನ್ನು ಈಗಲೂ ಅನುಭವಿಸುತ್ತಿದ್ದಾರೆ. ತನ್ನ ಅರಿವಿಗೇ ಬಾರದಂತೆ ಪಾಕಿಸ್ತಾನ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಚೀನಾ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದ ಪರಿಸ್ಥಿತಿಗೆ ತಲುಪಿಬಿಟ್ಟಿದೆ. ಚೀನಾದ ವ್ಯಾಪ್ತಿಗೆ ದಕ್ಕದೇ ಏಷ್ಯಾದ ದೇಶಗಳನ್ನು ತನ್ನ ಪ್ರಭಾವಲಯಕ್ಕೆ ಸೆಳೆದುಕೊಳ್ಳುತ್ತಿರುವ ಭಾರತ ಪ್ರಬಲವಾಗಿ, ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದೆ.

ಇಂಗ್ಲೆಂಡು ಕೂಡ ಹಿಂದೆಂದಿಗಿಂತಲೂ ಹೆಚ್ಚು ಭಾರತದ ಮಾತನ್ನು ಕೇಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ವಿಜಯಮಲ್ಯಾ ಭಾರತದ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿಯನ್ನು ವಂಚಿಸಿ ಇಂಗ್ಲೆಂಡಿಗೆ ಓಡಿ ಹೋಗಿ ಸೇರಿಕೊಂಡೊಡನೆ ಬಚಾವಾಗಿ ಬಿಡಬಹುದೆಂದು ಭಾವಿಸಿದ್ದ. ಆದರೆ ನರೇಂದ್ರಮೋದಿಯ ಸಕರ್ಾರ ಹಿಂದಿನ ಸಕರ್ಾರಗಳಂತಲ್ಲ. ಇದು ತನ್ನೆಲ್ಲ ಪ್ರಭಾವಗಳನ್ನು ಬಳಸಿ ಅಗತ್ಯ ಬಿದ್ದರೆ ಹೆಡೆಮುರಿ ಕಟ್ಟಿ ಯಾರನ್ನಾದರೂ ಬಗ್ಗಿಸಿಬಿಡುತ್ತದೆ. ತಮ್ಮ ಕಳೆದಪ್ರವಾಸದಲ್ಲಿ ಇಂಗ್ಲೆಂಡಿನ ಪ್ರಧಾನಮಂತ್ರಿ ತೆರೆಸಾ ಮೇ ಜೊತೆ ಮಾತನಾಡುತ್ತಾ ಮೋದಿ ಭಾರತಕ್ಕೆ ಬೇಕಾಗಿರುವ ತಪ್ಪಿತಸ್ಥರನ್ನು ಇಂಗ್ಲೆಂಡು ಮರಳಿಸಲೇಬೇಕೆಂಬ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಡಿಯಿಟ್ಟರು. ಆಕೆ ಸ್ವಲ್ಪ ಮಿಸುಕಾಡಿದಾಗ ಮುಲಾಜಿಲ್ಲದೇ ಬ್ರೆಕ್ಸಿಟ್ನ ನಂತರ ಭಾರತದ ಸಹಕಾರ ಎಷ್ಟು ಬೇಕಾಗಬಹುದೆಂಬುದನ್ನು ನೆನಪಿಸಿಕೊಟ್ಟು ಇನ್ನೊಂದೂ ಮಾತನಾಡದೇ ಎದ್ದು ಬಂದರು. ನರೇಂದ್ರಮೋದಿಯವರ ಇಂದಿನ ಕತರ್ೃತ್ವ ಶಕ್ತಿ ಮತ್ತು 2019 ರಲ್ಲೂ ಅವರೇ ಮರು ಆಯ್ಕೆಯಾಗುವುದನ್ನು ಊಹಿಸಿದ ತೆರೆಸಾ ಮೇ ಅನಿವಾರ್ಯವಾಗಿ ತಲೆಬಾಗಲೇಬೇಕಾಯ್ತು. ಈಗ ಅತ್ಯಂತ ನಿಧಾನವೆಂದು ಜರಿಯಲ್ಪಡುತ್ತಿದ್ದ ಅಲ್ಲಿನ ಕೋಟರ್ು ಮಲ್ಯರ ವಿರುದ್ಧ ಮತ್ತು 13 ಭಾರತೀಯ ಬ್ಯಾಂಕುಗಳ ಪರವಾಗಿ ತನ್ನ ನಿರ್ಣಯವನ್ನು ಕೊಟ್ಟಿದೆ. ಯುಕೆಯ ಉಚ್ಚ ನ್ಯಾಯಾಲಯ ಲಂಡನ್ನ ಬಳಿಯಿರುವ ಹೆಟರ್್ ಫೋಡರ್್ ಶೈರ್, ಲೇಡಿ ವಾಕ್, ಟೆವಿನ್, ವೆಲ್ವಿನ್ ಮುಂತಾದ ಸ್ಥಳಗಳಲ್ಲಿ ಮಲ್ಯನಿಗೆ ಸಂಬಂಧಪಟ್ಟ ಆಸ್ತಿಯಿರುವೆಡೆಯಲ್ಲಿ ಭಾರತದ ಅಧಿಕಾರಿಗಳು ಒಳಹೊಕ್ಕು ಅವುಗಳನ್ನು ವಶಪಡಿಸಿಕೊಳ್ಳಲು ಬೇಕಾದ ಅನುಮತಿಯನ್ನು ಕೊಟ್ಟಿದೆ. ಈ ಮೂಲಕ ಸುಮಾರು 1.145 ಬಿಲಿಯನ್ ಪೌಂಡುಗಳಷ್ಟು ಹಣವನ್ನು ಭಾರತ ಇಂಗ್ಲೆಂಡಿನಿಂದ ಮರುಪಾವತಿಸಿಕೊಳ್ಳಬಹುದಾಗಿದೆ.

19

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ಗೆ ಇದ್ದ ಆಸರೆ ಇದೊಂದೆ. ಆದರೆ ಆಶ್ಚರ್ಯಕರವಾದ ಸಂಗತಿ ಏನು ಗೊತ್ತೇ? ಮಲ್ಯನಿಗೆ ಸಾಲವನ್ನು ಕೊಟ್ಟ ಪಕ್ಷ ಕಾಂಗ್ರೆಸ್ಸು. ಮಲ್ಯನಿಂದ ಏರ್ಟಿಕೆಟ್ ಪಡೆದು ತಾನು ಮೊದಲ ವಿದೇಶ ಪ್ರಯಾಣ ಮಾಡಿದೆ ಎಂದು ಹೇಳುವ ರಮ್ಯಾ ಕಾಂಗ್ರೆಸ್ಸಿನ ಬಲು ಮಹತ್ವ ಸ್ಥಾನದಲ್ಲಿದ್ದಾರೆ. ನರೇಂದ್ರಮೋದಿಯವರ ಸಾಧನೆಯನ್ನು ಟೀಕಿಸಿ ರಾಹುಲ್ ಟ್ವೀಟ್ ಮಾಡಿದರೆ ಮಲ್ಯ ಅದನ್ನು ರಿಟ್ವೀಟ್ ಮಾಡುತ್ತಾರೆ. ಆದರೆ ಈ ಬಗೆಯ ದೊಡ್ಡ ಮೊತ್ತದ ಸಾಲವನ್ನು ಪಡೆದವರ ಮೇಲೆ ಕಣ್ಣಿಟ್ಟು ಅವರಿಂದ ಬಡವರ ಹಣವನ್ನು ಮರಳಿ ಪಡೆಯುವ ಪ್ರಯತ್ನವನ್ನು ನರೇಂದ್ರಮೋದಿ ಮಾಡಿದ್ದಕ್ಕೆ ಇವರೆಲ್ಲ ದೇಶ ಬಿಟ್ಟು ಓಡಿ ಹೋದರಲ್ಲ ಅದರ ಹೊಣೆಯನ್ನು ಮಾತ್ರ ನರೇಂದ್ರಮೋದಿಯೇ ಹೊರಬೇಕು. ಇಷ್ಟಕ್ಕೂ ಮಲ್ಯ ನೀರವ್ ಬಗ್ಗೆ ಮಾತನಾಡುವ ಕಾಂಗ್ರೆಸ್ಸು ಎಂದಾದರೂ ತಪ್ಪಿತಸ್ಥನೆಂದು ಸಾಬೀತಾಗಿ ಮಲೇಷಿಯಾದಲ್ಲಿ ಅಡಗಿ ಕುಳಿತಿರುವ ಜಾಕಿರ್ ನಾಯಕ್ನ ಕುರಿತಂತೆ ಮಾತನಾಡಿದ್ದು ಕೇಳಿದ್ದೀರಾ? ಭಯೋತ್ಪಾದಕರ ಫ್ಯಾಕ್ಟರಿ ನಡೆಸುತ್ತಿದ್ದ ಆತನ ಕುರಿತು ಮಾತನಾಡಿದರೆ ಮುಸಲ್ಮಾನರ ವೋಟು ಕಳೆದು ಹೋದೀತೆಂಬ ಭಯ ಅದಕ್ಕೆ. ಕಾಂಗ್ರೆಸ್ಸು ನಿರ್ಲಜ್ಜತೆಯ ಎಲ್ಲ ಹಂತವನ್ನೂ ಮೀರಿಬಿಟ್ಟಿದೆ. ಮಹಾತ್ಮ ಗಾಂಧೀಜಿಗೆ ಹೇಳಿದಂತೆ ನೇಪಥ್ಯಕ್ಕೆ ಸರಿಯುವ ಹೊತ್ತು ಕಾಂಗ್ರೆಸ್ಸಿಗೆ ಬಂದಾಗಿದೆ.

ನರೇಂದ್ರಮೋದಿಯವರೂ ಕೂಡ ಮಲ್ಯ, ನೀರವ್ ಅಷ್ಟೇ ಅಲ್ಲದೇ ಜಾಕಿರ್ ನಾಯಕ್ನನ್ನು ಎಳೆದುತಂದು ಭಾರತದ ಕಟಕಟೆಯಲ್ಲಿ ನಿಲ್ಲಿಸುವ ಯಾವ ಪ್ರಯತ್ನವನ್ನೂ ಬಿಡುತ್ತಿಲ್ಲ. ಹಾಗೇನಾದರೂ ಅವರು ಸಫಲರಾದರೆ 2019 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಳಿ ಕೇಂದ್ರ ಸಕರ್ಾರದ ಆಳುವ ಪಕ್ಷದ ವಿರುದ್ಧ ಒಂದೇ ಒಂದು ಬಲವಾದ ಆರೋಪವಿರಲಾರದು. ಸ್ವಾತಂತ್ರ್ಯಾನಂತರ ಇಂತಹುದೊಂದು ಪರಿಸ್ಥಿತಿ ನಿಮರ್ಾಣವಾಗುತ್ತಿರುವುದು ಇದೇ ಮೊದಲು. ನರೇಂದ್ರಮೋದಿಯವರಿಗೆ ಅದೆಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ.

 

 

Comments are closed.