ವಿಭಾಗಗಳು

ಸುದ್ದಿಪತ್ರ


 

ಮೋದಿ ಕೊಟ್ಟಿದ್ದು ಬರಿ ಹಣವಲ್ಲ, ಅದಕ್ಕಿಂತ ಹೆಚ್ಚು!

ಭಾರತಕ್ಕೆ ಅಪರೂಪದ ಅಂತಃಶಕ್ತಿಯೊಂದಿದೆ. ಕರೋನಾ ಅದನ್ನೀಗ ಬಡಿದೆಬ್ಬಿಸಿಬಿಟ್ಟಿದೆ. ಹೀಗೆಂದು ಮೋದಿ ಹೇಳುವಾಗ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು! ಅವರು ಸುಮ್ಮನೆ ಪ್ರೇರಣೆ ಕೊಡಲಿಲ್ಲ. ಸಮರ್ಥ ರಾಜಮಾರ್ಗವನ್ನೂ ಮುಂದಿಟ್ಟಿದ್ದಾರೆ. ನಾವೀಗ ಭಾರತದ ಆಥರ್ಿಕತೆ ಬಲುದೊಡ್ಡ ನೆಗೆತ ಕಾಣುವಂತೆ ರೂಪಿಸಬೇಕಿದೆ.

ಮೊನ್ನೆ ರಾತ್ರಿ ಪ್ರಧಾನಮಂತ್ರಿ ನರೇಂದ್ರಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಎಲ್ಲೆಡೆ ಕೊನೆಯ ಹತ್ತು ನಿಮಿಷಗಳಲ್ಲಿ ಅವರು ಘೋಷಿಸಿದ ಪ್ಯಾಕೇಜ್ನ ಚಚರ್ೆಯಾಗುತ್ತಿದೆಯೇ ಹೊರತು ಅದಕ್ಕೂ ಮುಂಚೆ ಸುಮಾರು 20 ನಿಮಿಷಗಳ ಕಾಲ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಅವರು ಅನಾವರಣಗೊಳಿಸಿದ್ದರ ಕುರಿತಂತೆ ಯಾರೂ ಮಾತನಾಡುತ್ತಲೇ ಇಲ್ಲ. ವಾಸ್ತವವಾಗಿ 20ಲಕ್ಷದ ಪ್ಯಾಕೇಜು ಅತ್ಯಂತ ಗೌಣವಾದ ವಿಷಯ. ನಿಜವಾಗಿಯೂ ಮೋದಿ ತಮ್ಮ ಮಾತಿನ ಮೂಲಕ ಮಾಡಿದ್ದು ಮಲಗಿರುವ ಭಾರತದ ಆತ್ಮವನ್ನು ಜಾಗೃತಗೊಳಿಸುವ ಪ್ರಯತ್ನ. ಬಹುತೇಕ ಅವರ ಈ ಮಾತುಗಳು ಪಶ್ಚಿಮದ ಪ್ರವಾಸದಿಂದ ಮರಳಿ ಬಂದ ಸ್ವಾಮಿ ವಿವೇಕಾನಂದರು ಆಡಿದಂತೆಯೇ ಇತ್ತು. ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಪಶ್ಚಿಮದ ಜಗತ್ತನ್ನು ಸ್ವಾಮೀಜಿ ಅರ್ಥಮಾಡಿಕೊಂಡರಲ್ಲ, ಆನಂತರ ಭಾರತದ ಕುರಿತಂತೆ ಅವರ ದೃಷ್ಟಿಕೋನವೇ ಬದಲಾಯ್ತು. ಅದನ್ನವರು ಹೇಳಿಕೊಂಡಿದ್ದಾರೆ ಕೂಡ. ಅವರ ಮಾತಿನಲ್ಲಿ ಕೃತಿಯಲ್ಲೆಲ್ಲಾ ನಿಧಾನವಾಗಿ ಅದು ವ್ಯಕ್ತಗೊಳ್ಳಲಾರಂಭಿಸಿತು. ಭಾರತಕ್ಕೆ ಆತ್ಮವಿಸ್ಮೃತಿಯಾಗಿದೆ. ಅದು ಮರಳಿ ತನ್ನ ವೈಭವವನ್ನು ಪಡೆದುಕೊಳ್ಳಬೇಕಾಗಿದೆ ಎಂಬ ಅವರ ಮಾತುಗಳು ಖಂಡಿತ ಪ್ರತಿಧ್ವನಿಯಾದಂತೆಯೇ ಇದ್ದವು!

2

ಭಾರತ ಚಿನ್ನದ ಹಕ್ಕಿ ಎಂದೇ ಕರೆಯಲ್ಪಡುತ್ತಿತ್ತು. ಸರಿಯಾದ ದೃಷ್ಟಿಕೋನ ಇಟ್ಟುಕೊಂಡು ಇತಿಹಾಸ ಓದಿದ ಪ್ರತಿಯೊಬ್ಬನಿಗೂ ಇದರಲ್ಲಿ ಅಚ್ಚರಿಯೇನೂ ಕಾಣುವುದಿಲ್ಲ. ಜಗತ್ತೆಲ್ಲಾ ಕಣ್ಬಿಡುವ ಮೊದಲೇ ವೇದ-ಉಪನಿಷತ್ತುಗಳ ಶ್ರೇಷ್ಠ ಕಾಲಘಟ್ಟವನ್ನು ನೋಡಿದ್ದ ಭಾರತಕ್ಕೆ ಆಧ್ಯಾತ್ಮಿಕ ಪರಂಪರೆಯಂತೂ ಜೋರಾಗಿಯೇ ಇತ್ತು. ಹಾಗಂತ ಇದು ಕಣ್ಮುಚ್ಚಿಕೊಂಡು ಸದಾ ತಪಸ್ಸು ಮಾಡುತ್ತಾ ಕೂರುವ ನಿಷ್ಕ್ರಿಯ ಆಧ್ಯಾತ್ಮವಾಗಿರಲಿಲ್ಲ. ಅಲ್ಲಿ ಚುರುಕುತನದಿಂದ ಕೂಡಿದ, ಬದುಕನ್ನು ಪ್ರೀತಿಸುವ ಉತ್ಸಾಹದ ಚಿಲುಮೆಯಿತ್ತು. ಹೀಗಾಗಿಯೇ ಸಾಹಿತ್ಯ, ಕಲೆಗಳಲ್ಲದೇ ಆಥರ್ಿಕ ದೃಷ್ಟಿಯಿಂದಲೂ ಭಾರತ ಅಗಾಧವಾಗಿ ಬೆಳೆದಿತ್ತು. ಒಂದು ಹಂತದಲ್ಲಂತೂ ನಮ್ಮನ್ನು ಮಣಿಸುವ ಜನರೇ ಇಲ್ಲ ಎಂಬಷ್ಟು ನಾವು ಮೈಮರೆತು ಕುಳಿತುಬಿಟ್ಟಿದ್ದೆವು. ಆಗಲೇ ಗ್ರೀಕರು, ಶಕರು, ಹೂಣರ ಆಕ್ರಮಣವಾದದ್ದು. ಆರಂಭಿಕ ಸೋಲು ಉಂಡಿದ್ದು ನಿಜವಾದರೂ ಸೋಲನ್ನೇ ಮಣಿಸಿ ಗೆಲುವನ್ನು ದಕ್ಕಿಸಿಕೊಂಡು ರಾಷ್ಟ್ರದ ಆತ್ಮಜಾಗೃತಿ ಮಾಡಲು ಭಾರತಕ್ಕೆ ತಡವಾಗಲಿಲ್ಲ. ಇದಕ್ಕೆ ವಿಪರೀತವಾಗಿ ವಾಯುವ್ಯ ಭಾಗದಿಂದ ಮುಸಲರ ದಾಳಿಯಾದಾಗ ಆರಂಭದಲ್ಲಿ ಅವರನ್ನು ಸೋಲಿಸಿ ಆನಂತರ ನಮ್ಮದ್ದೇ ತಪ್ಪಿನಿಂದಾಗಿ ನಾವು ತಲೆಬಾಗಬೇಕಾಗಿ ಬಂತು. ಹಾಗಂತ ಅದು ಏನು ಶಾಶ್ವತವಾಗಿ ಉಳಿಯಲಿಲ್ಲ. ಕಾಲಿಟ್ಟೆಡೆಯಲ್ಲೆಲ್ಲಾ ಇಸ್ಲಾಮಿನ ಧ್ವಜ ಮೆರೆಸಿ ಬಂದ ಧೂರ್ತ ಪಠಾಣ, ತುರ್ಕ, ಅಫ್ಘನ್, ಅರಬ್, ಮೊಘಲ್ ಪಡೆಗಳು ಇಲ್ಲಿ ಮಣ್ಣುಮುಕ್ಕಿದವು. ಭಾರತ ಮಾತ್ರ ಎದೆಸೆಟೆಸಿ ನಿಂತು ಅವರನ್ನು ಪೂರ್ಣವಾಗಿ ಜೀಣರ್ಿಸಿಕೊಂಡುಬಿಟ್ಟಿತು. ಬಹುಶಃ ಆ ಕಾಲಘಟ್ಟದಲ್ಲಿ ಮುಸಲರ ಆಕ್ರಮಣವಾಗದೇ ಹೋಗಿದ್ದರೆ ನಮ್ಮ ಆತ್ಮಜಾಗೃತಿ ಆಗಿಯೇ ಇರುತ್ತಿರಲಿಲ್ಲ!

3

ಆನಂತರ ಕ್ರಿಶ್ಚಿಯನ್ನರ ಆಕ್ರಮಣ. ಮತ, ಕತ್ತಿ ಮತ್ತು ತಕ್ಕಡಿ ಎಲ್ಲವನ್ನೂ ಜೊತೆಯಲ್ಲೇ ಹಿಡಿದುಕೊಂಡು ಬಂದ ಈ ಕ್ರಿಶ್ಚಿಯನ್ನರು ಮೋಸದಿಂದ ನಮ್ಮನ್ನು ಇರಿದರು. ನಮ್ಮೆಲ್ಲ ಉದ್ಯೋಗಗಳನ್ನೂ ನಾಶಗೈದರು. ಭಾರತವನ್ನು ಕನಿಷ್ಠಪ್ರಜ್ಞೆಯ ರಾಷ್ಟ್ರ ಎಂದು ಜಗತ್ತಿನ ಮುಂದೆ ಬಿಂಬಿಸುತ್ತಲೇ ನಮ್ಮ ಅನಾಗರಿಕತೆಯನ್ನು ತೊಡೆದು ಇಲ್ಲಿನ ಜನರನ್ನು ಏಸುಪ್ರವಾಹದಲ್ಲಿ ಮೀಯಿಸಲು ತಮ್ಮ ಜನರ ಸಹಕಾರ ಪಡೆದುಕೊಂಡೇ ಆಳ್ವಿಕೆಗೆ ನಿಂತರು. ಅವರ ಆಳ್ವಿಕೆಯ ಎರಡೂವರೆ ಮೂರು ಶತಮಾನಗಳು ಭಾರತದ ಪಾಲಿಗೆ ಕರಾಳ ದಿನಗಳು. ಸುಮ್ಮನೆ ಉದಾಹರಣೆ ಕೊಡಬೇಕೆಂದರೆ 17-18ನೇ ಶತಮಾನದ ವೇಳೆಗೆ ಬಂಗಾಳದ ಬಟ್ಟೆ ಈಜಿಪ್ಟ್, ಟಕರ್ಿಯಾ, ಪಷರ್ಿಯಾಗಳಲ್ಲದೇ ಜಾವಾ, ಚೀನಾ, ಜಪಾನ್ಗಳಿಗೂ ರಫ್ತಾಗುತ್ತಿದ್ದವು. ನಮ್ಮ ಪೂರೈಕೆ ಸರಪಣಿ ಎಷ್ಟು ಚೆನ್ನಾಗಿತ್ತೆಂದರೆ ಬಂಗಾಳವೊಂದೇ ಅಂದಿನ ದಿನಗಳಲ್ಲಿ ಪ್ರತಿವರ್ಷ ಒಂದೂವರೆ ಕೋಟಿ ರೂಪಾಯಿಗಳಷ್ಟು ವಾಷರ್ಿಕ ವಹಿವಾಟು ನಡೆಸುತ್ತಿತ್ತು. ಯುರೋಪ್ ಒಂದಕ್ಕೆ ಸುಮಾರು 60ಲಕ್ಷ ರೂಪಾಯಿಗಳಷ್ಟು ಬಟ್ಟೆ ನಾವು ಕಳಿಸುತ್ತಿದ್ದೆವು. ಬ್ರಿಟೀಷರು ಬರಿಯ ವ್ಯಾಪಾರಿಗಳಷ್ಟೇ ಆಗಿರುವಾಗ ಬಂಗಾಳದ ಸಿಲ್ಕ್ ಉತ್ಪಾದನೆ ಜಗತ್ತಿನ ಶೇಕಡಾ 33ರಷ್ಟಿತ್ತು! ಬ್ರಿಟೀಷರು ಇಲ್ಲಿನ ರಾಜರಾಗುತ್ತಿದ್ದಂತೆ ಇದು ಕುಸಿಯಲಾರಂಭಿಸಿತು. ಬಂಗಾಳದ ಬಟ್ಟೆಯನ್ನು ಪೌಂಡ್ಗಳ ಬದಲು ರೂಪಾಯಿಗಳಲ್ಲೇ ಕೊಳ್ಳಲಾರಂಭಿಸಿದರು. ವಿದೇಶದಿಂದ ಯಾರೂ ಕೊಳ್ಳದಂತೆ ಪ್ರತಿಬಂಧ ಹಾಕಿದರು. ಭಾರತದಲ್ಲೂ ಯಾರೂ ಪ್ರತಿಸ್ಪಧರ್ಿಗಳು ಹುಟ್ಟದಂತೆ ನೋಡಿಕೊಂಡರು. ಕೊನೆಗೆ ಇಲ್ಲಿಂದ ಕಚ್ಚಾಮಾಲು ತಮ್ಮ ದೇಶಕ್ಕೆ ಒಯ್ದು ಸಿದ್ಧವಸ್ತುಗಳನ್ನು ಅತಿ ಹೆಚ್ಚಿನ ಬೆಲೆಯಲ್ಲಿ ನಮಗೆ ಮಾರಿದರು. ನೋಡ-ನೋಡುತ್ತಲೇ ಭಾರತದ ನೇಕಾರರು ಭಿಕಾರಿಗಳಾಗಿಹೋದರು. ನೇಯ್ಗೆಯ ಕಾಖರ್ಾನೆಗಳು ಮುಚ್ಚಿಹೋದವು. ಬಹುಶಃ ಕಾಖರ್ಾನೆಗಳನ್ನು ನಾಶಮಾಡುವ ಮೊದಲ ಅಭಿಯಾನ ಶುರುವಾಗಿದ್ದು ಅಲ್ಲಿಂದಲೇ. ಒಂದೊಂದಾಗಿ ಕಾಖರ್ಾನೆಗಳು ಮುಚ್ಚಿದವಲ್ಲದೇ ಅದಕ್ಕೆ ಕಚ್ಚಾವಸ್ತುಗಳನ್ನು ಪೂರೈಸುತ್ತಿದ್ದ ಕೃಷಿ ಪೂತರ್ಿ ನಾಶವಾಯ್ತು. ಜೊತೆಗೆ ನಮ್ಮಿಂದ ಅಪಾರ ಪ್ರಮಾಣದ ತೆರಿಗೆಯನ್ನು ಬ್ರಿಟೀಷರು ಲೂಟಿಮಾಡಲಾರಂಭಿಸಿದರು. ಚಿನ್ನದ ಹಕ್ಕಿ ಭಾರತ ಈಗ ದರಿದ್ರ ಭಾರತವೆಂಬ ಶಾಪಕ್ಕೆ ಗುರಿಯಾಯ್ತು!

4

ಇನ್ನು ಭಾರತ ಮೇಲೇಳುವುದು ಸಾಧ್ಯವೇ ಇಲ್ಲ ಎಂದಾಗ ಇದನ್ನು ಮರುನಿಮರ್ಾಣ ಮಾಡಲು ಸಾಧ್ಯವಾಗಿದ್ದು ಹೇಗೆ ಗೊತ್ತಾ? ದಾದಾಭಾಯ್ ನವರೋಜಿ, ಗೋಖಲೆ, ರಾನಡೆ, ತಿಲಕ್ ಮೊದಲಾದವರ ಕಲ್ಪನೆಯ ಮೂಸೆಯಿಂದ ಅರಳಿಬಂದ ಸ್ವದೇಶಿ ಚಳುವಳಿಯಿಂದ. ದಾದಾಭಾಯ್ ನವರೋಜಿ ಬ್ರಿಟೀಷರು ಭಾರತದಿಂದ ಲೂಟಿ ಮಾಡಿರಬಹುದಾದ ಹಣದ ಕುರಿತಂತೆ ಡ್ರೈನ್ ಥಿಯರಿ ಮುಂದಿಟ್ಟ ಮೇಲಂತೂ ಪ್ರತಿಯೊಬ್ಬರೂ ಉತ್ಸಾಹಿತರಾಗಿ ಈ ಚಳುವಳಿಯಲ್ಲಿ ಭಾಗವಹಿಸಿದರು. 1905ರಲ್ಲಿ ಬಂಗಾಳದ ವಿಭಜನೆಯಾದಾಗ ಸ್ವದೇಶಿ ಚಳುವಳಿಯ ಕೂಗು ಮುಗಿಲುಮುಟ್ಟಿತು. ಬ್ರಿಟೀಷರಿಗೆ ಇದು ಯಾವ ಪರಿ ಹೊಡೆತ ಕೊಟ್ಟಿತೆಂದರೆ 1911ರಲ್ಲಿ ಅವರು ಬಂಗಾಳದ ವಿಭಜನೆಯನ್ನು ಮರಳಿ ಪಡೆಯಬೇಕಾಯ್ತು. ಗಾಂಧೀಜಿ ಈ ಸ್ವದೇಶಿ ಚಳುವಳಿಯಿಂದ ಸಾಕಷ್ಟು ಪಾಠವನ್ನು ಕಲಿತು ಅದನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಂಡರು. ಇಲ್ಲಿ ಸ್ವದೇಶಿ ಚಳುವಳಿ ಜೋರಾಗಿ ನಡೆಯುತ್ತಿದ್ದಾಗ ಇಂಗ್ಲೆಂಡಿನ ಮ್ಯಾಂಚೆಸ್ಟರ್ನಲ್ಲಿರುವ ಬಟ್ಟೆ ತಯಾರಿಕೆಯ ಕಂಪೆನಿಗಳು ಮುಚ್ಚಿಹೋಗಿದ್ದವು ಎಂಬುದು ಇಂದಿಗೂ ಅಚ್ಚರಿಯ ಸಂಗತಿ! ಗಾಂಧೀಜಿ ದುಂಡುಮೇಜಿನ ಸಭೆಗೆ ಹೋಗಿದ್ದಾಗ ಆ ಗಿರಣಿಗಳ ಕಾಮರ್ಿಕರು ದಯವಿಟ್ಟು ಆಂದೋಲನ ಮರಳಿ ಪಡೆಯಿರಿ ಎಂದು ಗೋಗರೆದಿದ್ದರಂತೆ. ಇಂಗ್ಲೆಂಡ್ ಬಂದೂಕಿನಿಂದ ನಮ್ಮನ್ನು ಆಳುತ್ತಿತ್ತು ನಿಜ, ಆದರೆ ಗಾಂಧೀಜಿ ಚರಕ ಹಿಡಿದು ಸ್ವದೇಶಿಮಂತ್ರ ಜಪಿಸುತ್ತಲೇ ಇಂಗ್ಲೆಂಡಿಗರನ್ನು ಕಾಲಬುಡಕ್ಕೆ ಕೆಡವಿಕೊಂಡಿದ್ದರು. ಭಾರತ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಸಂದರ್ಭ ಬರುವವರೆಗೂ ತನ್ನ ಪೂರ್ಣಶಕ್ತಿಯನ್ನು ಹೊರಹಾಕುವುದಿಲ್ಲ. ಇದನ್ನೇ ವಿವೇಕಾನಂದರು ಆತ್ಮವಿಸ್ಮೃತಿ ಎಂದು ಜರಿದಿದ್ದು. ಈಗ ಕರೋನಾ ಮಹಾಮಾರಿ ಅಂಥದ್ದೊಂದು ಸ್ಥಿತಿಯನ್ನು ನಮ್ಮೆದುರಿಗೆ ತಂದಿದೆ. ಅದೃಷ್ಟವಶಾತ್ ಮೋದಿಯಂತಹ ಸಮರ್ಥ ನಾಯಕರು ದೇಶವನ್ನು ಆಳುತ್ತಿದ್ದಾರೆ. ಯುರೋಪಿನ ಅನೇಕ ರಾಷ್ಟ್ರಗಳು ಅದಾಗಲೇ ಈ ಮಹಾಮಾರಿಯನ್ನು ಎದುರಿಸಲಾಗದೇ ಕೈಚೆಲ್ಲಿ ಕುಳಿತುಬಿಟ್ಟಿವೆ. ಅಮೇರಿಕಾ ತನ್ನ ದೊಡ್ಡಣ್ಣನೆಂಬ ಅಭಿದಾನ ಉಳಿಸಿಕೊಳ್ಳಲಿಕ್ಕಾಗಿ ಮನಸ್ಸಿಗೆ ತೋಚಿದ್ದನ್ನೆಲ್ಲಾ ಮಾಡುತ್ತಿದೆ. ಚೀನಾ ಈಗ ಬಾಗಿದರೆ ಗುದ್ದಿಯೇ ಬಿಡುತ್ತಾರೆ ಎಂಬ ಹೆದರಿಕೆಯಿಂದ ತಪ್ಪು-ತಪ್ಪು ಹೆಜ್ಜೆಗಳನ್ನು ಇಡಲಾರಂಭಿಸಿಬಿಟ್ಟಿದೆ. ಇಂತಹ ಹೊತ್ತಿನಲ್ಲಿ ಸಮರ್ಥ ನಿರ್ಣಯಗಳನ್ನು ಕೈಗೊಳ್ಳುವುದು ನಿಜಕ್ಕೂ ಅಗತ್ಯವಾಗಿತ್ತು. ವ್ಯಕ್ತಿಯೊಬ್ಬ ಸ್ವಾವಲಂಬಿಯಾಗದೇ ಹೋದರೆ ಅವನಿಗೆ ಕಿಮ್ಮತ್ತಿಲ್ಲ. ‘ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀ – ಉದ್ಯೋಗಿಯಾದ ಪುರುಷಸಿಂಹನನ್ನೇ ಲಕ್ಷ್ಮಿಯೂ ಆಲಿಂಗಿಸುವುದು ಎಂಬ ಮಾತನ್ನು ಆ ಕಾರಣಕ್ಕೇ ಹೇಳಿರೋದು. ಆತ್ಮಬಲವನ್ನು ಗುರುತಿಸಿಕೊಂಡು ಆತ್ಮವಿಶ್ವಾಸದಿಂದ ಆತ್ಮನಿರ್ಭರತೆಯತ್ತ ಹೆಜ್ಜೆ ಇಡುವುದು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಸಾರ್ಥಕತೆ. ಇನ್ನು ಇಂತಹ ವ್ಯಕ್ತಿಗಳ ಒಟ್ಟು ಸಂಕಲಿತ ಮೊತ್ತವಾದ ರಾಷ್ಟ್ರದ ಕಥೆಯೇನು ಹೇಳಿ? ಅದೂ ಕೂಡ ಸ್ವಾವಲಂಬಿಯಾಗಿ ಇತರರ ಮೇಲೆ ಅವಲಂಬಿತವಾಗದ ಶ್ರೇಷ್ಠ ಬದುಕನ್ನು ತನ್ನದಾಗಿಸಿಕೊಳ್ಳಬೇಕು. ಆದರೆ ಇದು ಸ್ವಾರ್ಥ ಕೇಂದ್ರಿತವಾಗಿರಬಾರದು ಎಂಬುದನ್ನು ಮರೆಯುವಂತಿಲ್ಲ. ಚೀನಾ ಆತ್ಮನಿರ್ಭರವೇ. ಆದರೆ ಜಗತ್ತೆಲ್ಲಾ ಕಣ್ಣೀರಿನಲ್ಲಿ ಕೈತೊಳೆಯಲಿ ಎಂದು ಭಾವಿಸುವ ಆ ರಾಷ್ಟ್ರದ ಕಲ್ಪನೆಯನ್ನು ಯಾರೂ ಸಮಥರ್ಿಸಲಾರರು. ಆದರೆ ನಾವು ಹಾಗಲ್ಲ. ಜಗತ್ತಿನ ಸುಖ-ಶಾಂತಿಯನ್ನು ಬಯಸಿ ಸದಾ ಸಹಯೋಗಕ್ಕೆ ಕೈಚಾಚುತ್ತೇವೆ. ಅದು ವೈ2ಕೆ ಹೊತ್ತಿನಲ್ಲಿ ಜಗತ್ತಿಗೆ ಹೆಗಲಾದದ್ದರಿಂದ ಹಿಡಿದು ಭೂತಾಪಮಾನ ಹೆಚ್ಚಳವನ್ನು ನಿಯಂತ್ರಿಸುವಲ್ಲಿ ನೇತೃತ್ವ ವಹಿಸಿದುದರವರೆಗೂ ನಾವೆಂದೂ ಹಿಂದೆ ನಿಂತಿಲ್ಲ. ಜಗತ್ತಿನ ಆರೋಗ್ಯಕ್ಕಾಗಿ ಅಂತರ್ರಾಷ್ಟ್ರೀಯ ಯೋಗದಿನವನ್ನು ಪ್ರಸ್ತುತ ಪಡಿಸಿದಷ್ಟೇ ಅಗತ್ಯವಿದ್ದಾಗ ಔಷಧಿಗಳನ್ನು ತಯಾರಿಸಿ ರಫ್ತೂ ಕೂಡ ಮಾಡುತ್ತಿದ್ದೇವೆ. ಜಗತ್ತು ಭಾರತವನ್ನು ಗೌರವದ ಕಂಗಳಿಂದ ನೋಡುವುದು ಈ ಕಾರಣಕ್ಕಾಗಿಯೇ. ತಾನು ತೊಂದರೆಯಲ್ಲಿರುವಾಗಲೂ ಇತರರ ಸಹಕಾರಕ್ಕೆ ಸದಾ ಮುನ್ನುಗ್ಗುವ ಜನ ಭಾರತೀಯರು! ಪಶ್ಚಿಮದ ರಾಷ್ಟ್ರಗಳಲ್ಲಿ ಎಲ್ಲ ಕೆಲಸವನ್ನು ಸಕರ್ಾರವೇ ಮಾಡಬೇಕು ಎಂಬ ಭಾವನೆ ಇರುವಾಗ ಈ ನಾಡಿನಲ್ಲಿ ಮಾತ್ರ ಲಾಕ್ಡೌನಿನ ಹೊತ್ತಿನಲ್ಲಿ ಪ್ರತಿಯೊಬ್ಬ ಹಸಿದವನಿಗೂ ಊಟ ತಲುಪಿಸುವ ಕಾಯಕವನ್ನು ಜನರೇ ಹೊತ್ತಿದ್ದರು. 50 ದಿನಗಳ ಕಾಲ ದೇಶ ಸ್ತಬ್ಧವಾಗಿ ಹೋದಾಗಲೂ ಬೀದಿಗಳಲ್ಲಿ ವಸ್ತುಗಳನ್ನು ಮಾರುವ, ರೈಲ್ವೇ ಪ್ಲಾಟ್ಫಾಮರ್್ಗಳಲ್ಲಿ ನೀರು, ತಿಂಡಿ ಮಾರುವ ಬಡವರೂ ಕೂಡ ಹತಾಶರಾಗದೇ ಬದುಕುವ ಛಲ ತೋರಿದರು. ಆ ಛಲ, ಉತ್ಸಾಹಗಳ ಪರಿಣಾಮವಾಗಿಯೇ ಒಂದು ಪಿಪಿಇ ಕಿಟ್ಗಳನ್ನೂ ತಯಾರಿಸದ್ದಿದ್ದ ಭಾರತ ಇಂದು ದಿನಕ್ಕೆ 2ಲಕ್ಷದಷ್ಟು ಕಿಟ್ಗಳನ್ನು ತಯಾರಿಸುತ್ತಿದೆ. 2ಲಕ್ಷ ಎನ್-90 ಮುಖಗವಸುಗಳು ಇಂದು ನಿಮರ್ಾಣಗೊಳ್ಳುತ್ತಿವೆ. ಭಾರತಕ್ಕೆ ಅಪರೂಪದ ಅಂತಃಶಕ್ತಿಯೊಂದಿದೆ. ಕರೋನಾ ಅದನ್ನೀಗ ಬಡಿದೆಬ್ಬಿಸಿಬಿಟ್ಟಿದೆ. ಹೀಗೆಂದು ಮೋದಿ ಹೇಳುವಾಗ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು! ಅವರು ಸುಮ್ಮನೆ ಪ್ರೇರಣೆ ಕೊಡಲಿಲ್ಲ. ಸಮರ್ಥ ರಾಜಮಾರ್ಗವನ್ನೂ ಮುಂದಿಟ್ಟಿದ್ದಾರೆ. ನಾವೀಗ ಭಾರತದ ಆಥರ್ಿಕತೆ ಬಲುದೊಡ್ಡ ನೆಗೆತ ಕಾಣುವಂತೆ ರೂಪಿಸಬೇಕಿದೆ. ಮೂಲಭೂತ ಸೌಕರ್ಯಗಳಲ್ಲಿ ನಾವೀಗ ಹೊಸದೊಂದು ಮೈಲಿಗಲ್ಲು ಸ್ಥಾಪಿಸಬೇಕಿದೆ. ತಂತ್ರಜ್ಞಾನವನ್ನು ಬಳಸಿ ಹೊಸ ವ್ಯವಸ್ಥೆಯನ್ನು ರೂಪಿಸಬೇಕಿದೆ. ನಮ್ಮ ಜನಸಂಖ್ಯೆಯೇ ಶಕ್ತಿ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಸಮಯ ಬಂದಿದೆ. ಇನ್ನು ಕೊನೆಯದಾಗಿ ಜನರ ಬೇಡಿಕೆಯನ್ನು ಪೂರೈಕೆಮಾಡುವ ಜನರೊಂದಿಗೆ ಜೋಡಿಸಿ ಸಮರ್ಥವಾದ ಪೂರೈಕೆಯ ವ್ಯವಸ್ಥೆಯನ್ನು ನಿಮರ್ಿಸುವ ಹೊತ್ತು ಬಂದಿದೆ. ಈ ಐದು ಸ್ತಂಭಗಳ ಮೇಲೆ ಆತ್ಮನಿರ್ಭರ ಭಾರತ ರೂಪುಗೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಹಾಗಂತ ಇದು ಹೊಸದಾಗಿ ಹೇಳುತ್ತಿರುವುದೇನೂ ಅಲ್ಲ. ಪ್ರತಿಯೊಂದು ಸ್ತಂಭವೂ ಕೂಡ ಅದಾಗಲೇ ಬಲವಾಗಿ ನಿಮರ್ಾಣಗೊಳ್ಳುತ್ತಿದೆ. ವ್ಯವಸ್ಥೆ ಹೇಗೆ ಡಿಜಿಟಲೀಕರಣಗೊಂಡಿದೆ ಎಂದರೆ ಎಲ್ಲಾ ಲಾಕ್ಡೌನಿನ ಸ್ಥಿತಿಯಲ್ಲಿದ್ದರೂ ಜನ್ಧನ್, ಆಧಾರ್ ಮತ್ತು ಮೊಬೈಲ್ಗಳನ್ನು ಬಳಸಿ ಫಲಾನುಭವಿಗಳಿಗೆ ಹಣ ತಲುಪುವ ವ್ಯವಸ್ಥೆ ನಡೆದಿದೆ. ಇದು ನಿಜಕ್ಕೂ ಭಾರತದ ಕುರಿತಂತೆ ಊಹಿಸಲಿಕ್ಕೆ ಸಾಧ್ಯವೇ ಇಲ್ಲದಂತಹ ಸಂಗತಿ!

5

ಮೋದಿ ಬಲುಶ್ರದ್ಧೆಯಿಂದ ತಮ್ಮ ಕೆಲಸ ಮಾಡುತ್ತಿದ್ದಾರೆ. ಈಗ ನಮ್ಮ ಜವಾಬ್ದಾರಿ. ರಾಷ್ಟ್ರಕ್ಕಾಗಿ ಹೋರಾಡುವ ಹೊತ್ತು ಈಗ ಖಂಡಿತ ಬಂದಿದೆ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ನಾವಿರಲಿಲ್ಲ ಎಂಬ ನೋವು ಈಗ ಬೇಕಿಲ್ಲ. ಸ್ವಾತಂತ್ರ್ಯಾನಂತರ ಭಾರತ ನಿಮರ್ಾಣದ ಬಲುದೊಡ್ಡ ಅವಕಾಶ ಒದಗಿಬಂದಿದೆ. ಪ್ರಧಾನಮಂತ್ರಿಯವರು ಹೇಳಿದಂತೆ ಸ್ಥಳೀಯ ವಸ್ತುಗಳನ್ನು ಕೊಳ್ಳುವ ಮತ್ತು ಬೇಡಿಕೆ-ಪೂರೈಕೆಗಳಿಗೆ ವ್ಯವಸ್ಥೆ ರೂಪಿಸುವ ಹೊಣೆ ಹೊತ್ತುಕೊಳ್ಳೋಣ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರಲ್ಲ ‘ಕೃಷಿಕನ ದರಿದ್ರ ನಿವಾಸದಿಂದ ನೇಗಿಲನ್ನು ಹಿಡಿದು ನವಭಾರತ ಮೈದೋರಲಿ. ಬೆಸ್ತನ ಜೋಪಡಿ, ಚಮ್ಮಾರ, ಚಾಡಮಾಲಿಗಳ ಗುಡಿಸಲಿನಿಂದ ಅದು ಹೊರಹೊಮ್ಮಲಿ. ಮಳಿಗೆಯಿಂದ, ಕಾರ್ಖಾನೆಯಿಂದ, ಅಂಗಡಿಯಿಂದ, ಪರ್ವತ, ಕಾನನಗಳಿಂದ, ಕಂದರವನಗಳಿಂದ ನವ ಭಾರತ ಮೂರ್ತಿ ರೂಪುಗೊಳ್ಳಲಿ’ ಅಂತ. ಆ ಹೊತ್ತು ಈಗ ಬಂದಿದೆ. ಅವರೇ ಹೇಳಿದಂತೆ ತಾಯಿ ಭಾರತಿ ಕಾಳಿಯಂತೆ, ದುಗರ್ೆಯಂತೆ ಮೈಕೊಡವಿಕೊಂಡು ಎದ್ದುನಿಲ್ಲುತ್ತಿದ್ದಾಳೆ. ಬನ್ನಿ ಆಕೆ ಸಿಂಹಾಸನಸ್ಥಳಾಗುವುದನ್ನು ಕಣ್ತುಂಬಿಕೊಳ್ಳೋಣ!

Comments are closed.