ವಿಭಾಗಗಳು

ಸುದ್ದಿಪತ್ರ


 

ಮೋದಿ ವಿರೋಧ ಎಂದರೆ ಭಾರತವನ್ನು ವಿರೋಧಿಸುವುದೇ!?

ನರೇಂದ್ರಮೋದಿಯವರು ಭಾರತೀಯರೊಳಗೆ ಆತ್ಮವಿಶ್ವಾಸವನ್ನು ಚಿಮ್ಮಿಸುತ್ತಿದ್ದಾರೆ. ಎಲ್ಲಾ ಸೋಲುಗಳ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಗೆಲುವನ್ನು ದೇಶದ ಜನರಿಗೆ ವಗರ್ಾಯಿಸಲು ನಿಂತುಬಿಟ್ಟಿದ್ದಾರೆ. ಹೀಗೆಂದೇ ಹೊಸ ಸಾಹಸಕ್ಕೆ ಇಂದು ಭಾರತೀಯ ಮನಸ್ಸು ಮಾಡುತ್ತಿದ್ದಾನೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಇಂದು ನಾವು ಯುದ್ಧವಿಮಾನಗಳ ತಯಾರಿಕೆಗೆ ಮೂಂದಾಗಿದ್ದೇವೆ.

ಮೋದಿಯವರ ಪ್ರಭಾವ ದಿನೇ ದಿನೇ ಬಲವಾಗುತ್ತಲೇ ಸಾಗುತ್ತಿದೆ. ಪುಲ್ವಾಮಾ ದಾಳಿಯ ಒಂದೊಂದೇ ಮಜಲುಗಳು ತೆರೆದುಕೊಳ್ಳುತ್ತಿದ್ದಂತೆ ಎದುರಾಳಿಗಳು ಬಲಹೀನರಾಗುತ್ತಿದ್ದಾರೆ. ಈ ದಾಳಿ ಮತ್ತು ಸಾರ್ವತ್ರಿಕ ಚುನಾವಣೆಯ ನಡುವೆ ಬಹಳ ದಿನಗಳಿಲ್ಲ ಎಂಬುದನ್ನು ಅರಿತೇ ಇದನ್ನು ಸಂಘಟಿಸಲಾಗಿತ್ತು ಎಂಬುದಕ್ಕೆ ಈಗ ಪುರಾವೆಗಳ ಕೊರತೆ ಇಲ್ಲ. ಮೌಲಾನಾ ಮಸೂದ್ ಅಜರ್ ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಹೆಗಲಮೇಲೆ ಹೊತ್ತಿಕೊಂಡಿದ್ದು ಈ ಹೆಮ್ಮೆಯನ್ನು ಅನುಭವಿಸಲೆಂದೇ. ಆದರೆ ಅದೇ ಅವನಿಗೆ ಮುಳುವಾಗುತ್ತದೆಂಬುದರಲ್ಲಿ ಆತನಿಗೀಗ ಅನುಮಾನವಿಲ್ಲ. ಹಾಗೆ ನೋಡಿದರೆ ಜೈಶ್-ಎ-ಮೊಹಮ್ಮದ್ ಹಿಂದಿನ ಎಲ್ಲಾ ದಾಳಿಗಳಲ್ಲೂ ದಾಳಿ ಮಾಡಿದವ ವಿಡಿಯೊ ಬಿಡುಗಡೆ ಮಾಡುವ ಪ್ರಕ್ರಿಯೆ ಇರಲಿಲ್ಲ. ಆದರೆ ಈ ಬಾರಿ ಆದಿಲ್ ದಾರ್ ದಾಳಿಗೂ ಮುನ್ನ ಸ್ಪಷ್ಟವಾದ ವಿಡಿಯೊ ದಾಖಲಿಸಿ ಆಕ್ರಮಣ ಮಾಡಿದ್ದಾನೆ. ಅದರಲ್ಲೂ ಗೋಮೂತ್ರ ಕುಡಿಯುವವರ ವಿರುದ್ಧ ತನ್ನ ಹೋರಾಟ ಎಂದು ದಾಳಿಗೆ ಕಾರಣಗಳನ್ನೂ ಸ್ಪಷ್ಟಪಡಿಸಿದ್ದಾನೆ. ತಾನು ಸತ್ತರೆ ಸ್ವರ್ಗ ಸೇರುವುದಾಗಿ ಅವನು ಹೇಳಿರುವ ಮಾತುಗಳಂತೂ ಅಕ್ಷರಶಃ ಐಸಿಸ್ ಮಾದರಿಯ ದಾಳಿಯ ಕಲ್ಪನೆಯನ್ನು ಹೋಲುತ್ತದೆ. ಇವೆಲ್ಲವೂ ಗಮನದಲ್ಲಿಡಬೇಕಾದಂತಹ ಸಂಗತಿಗಳೇ. ಸಿರಿಯಾ ಮತ್ತು ಇರಾಕ್ಗಳಲ್ಲಿ ನೆಲೆ ಕಳೆದುಕೊಂಡಿರುವ ಐಸಿಸ್ಗೆ ಭಾರತದ ಅಮಾಯಕ ಮುಸ್ಲೀಂ ತರುಣರು ಆಹಾರವಾಗುತ್ತಿದ್ದಾರೆ. ಅಮಾಯಕರನ್ನು ಕೊಂದರೆ ಸ್ವರ್ಗಕ್ಕೆ ಹೋಗಿಬಿಡುತ್ತೇವೆಂಬ ಮತಾಂಧ ಚಿಂತನೆಗಳನ್ನು ಅವರ ತಲೆಗೆ ತುರುಕಲಾಗುತ್ತಿದೆ. ಹಾಗೆಯೇ ಹಿಂದೂಗಳನ್ನು ಮೂತರ್ಿಪೂಜಕರು, ಗೋಮೂತ್ರ ಕುಡಿಯುವವರು ಎಂದೆಲ್ಲಾ ಬಿಂಬಿಸಿ ಎತ್ತಿಕಟ್ಟುವ ಪ್ರಯಾಸಗಳೂ ಜೋರಾಗಿ ನಡೆಯುತ್ತಿದೆ. ಆದರೆ ಭಾರತದ ಮೂಲೆ-ಮೂಲೆಗಳಲ್ಲಿ ಜೊತೆಯಾಗಿ ನಿಂತಿರುವ ಹಿಂದೂ-ಮುಸಲ್ಮಾನರ ಬಾಂಧವ್ಯವನ್ನು ಒಡೆಯಲು ಸಾಧ್ಯವಾಗದೇ ಹೆಣಗಾಡುತ್ತಿದ್ದಾರೆ. ಈ ಬಾಂಧವ್ಯದ ಹಿಂದೆ ಇಲ್ಲಿನ ಸಂಸ್ಕೃತಿಯ ಛಾಯೆ ಅಡಗಿದೆ. ಭಾರತದ ಪ್ರತಿಯೊಬ್ಬರಿಗೂ ಋಷಿಮುನಿಗಳೇ ಮೂಲಪುರುಷರು ಎಂಬ ಅರಿವು ರಕ್ತಗತವಾಗಿದೆ. ಇದು ಇಸ್ಲಾಮಿಕ್ ಮೂಲಭೂತವಾದವನ್ನು ಹರಡಿಸುತ್ತಿರುವವರಿಗೆ ಬಲುದೊಡ್ಡ ಹೊಡೆತ. ಆದರೆ ಕಾಶ್ಮೀರದ ದಾಳಿ ಮತ್ತು ಉತ್ತರಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ಉಗ್ರರು ಅಲ್ಲಲ್ಲಿ ಈ ಚಿಂತನೆಯನ್ನು ಹರಡಿಸಲು ಪ್ರಯತ್ನ ಪಡುತ್ತಿರುವವರನ್ನು ಎನ್ಐಎ ಬಂಧಿಸಿರುವ ಪರಿಯನ್ನು ನೋಡಿದರೆ ಭಾರತವೂ ಕೂಡ ಹೈ ಅಲಟರ್್ಗೆ ಸಿದ್ಧವಾಗಿರಬೇಕೆಂದೆನಿಸುತ್ತದೆ!

2

ಇಡಿಯ ಪಾಕಿಸ್ತಾನ ಮಾಧ್ಯಮಗಳ ಮೂಲಕ ಅರಚಾಡುತಿರುವುದನ್ನು ನೀವು ನೋಡಬೇಕು. ಭಾರತ ಯುದ್ಧ ಮಾಡಿಯೇ ಬಿಡುತ್ತದೆ ಎನ್ನುವ ಹೆದರಿಕೆ ಅವರನ್ನು ತುಂಬಿಕೊಂಡುಬಿಟ್ಟಿದೆ. ಪಾಕಿಸ್ತಾನ ಅಣ್ವಸ್ತ್ರ ಹೊಂದಿದೆ ಎಂಬುದನ್ನು ಅವರು ಪದೇ ಪದೇ ಹೇಳುವ ಯತ್ನಮಾಡುತ್ತಿದ್ದಾರೆ. ಇದು ಒಳಗಿರುವ ಆತಂಕದ ಬಹಿರಂಗ ಸ್ವರೂಪ ಅಷ್ಟೇ. ಆದರೆ ಭಾರತ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಿರುವುದಲ್ಲದೇ ಈ ಅವಕಾಶವನ್ನು ಬಳಸಿಕೊಂಡು ಮೂಲಭೂತವಾದವನ್ನು ಹರಡಿಸುತ್ತಿರುವವರನ್ನು ಸಮೂಲ ನಾಶಗೈಯ್ಯಬೇಕೆಂಬ ಚಿಂತನೆಗೆ ಬದ್ಧವಾಗಿದೆ. ಇದೇ ಒತ್ತಡದಲ್ಲಿ ನರೇಂದ್ರಮೋದಿ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿರುವ ಆಟರ್ಿಕಲ್ 370ಯನ್ನು ಕಿತ್ತು ಬಿಸಾಡಿದರೂ ಅಚ್ಚರಿ ಪಡಬೇಕಿಲ್ಲ. ಕಾಶ್ಮೀರದ ಜನತೆಗೆ ತೊಂದರೆ ಕೊಟ್ಟು ಕಾಶ್ಮೀರದ ರಾಜಕಾರಣಿಗಳಿಗೆ ವಿಶೇಷ ಸವಲತ್ತನ್ನು ಕೊಡುತ್ತಿರುವ ಈ ಕಾಯ್ದೆಯೊಂದನ್ನು ಹೊರದಬ್ಬಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ಲೇಖನವನ್ನು ನೀವು ಓದುವ ವೇಳೆಗೆ ಸುಪ್ರೀಂಕೋಟರ್ಿನಲ್ಲಿ ಈ ಕುರಿತಂತೆ ವಿಚಾರಣೆ ಶುರುವಾಗಿ ನ್ಯಾಯಾಲಯವೇ ಇದನ್ನು ಕಿತ್ತು ಬಿಸುಡಬೇಕೆಂಬ ಆದೇಶವನ್ನು ಸಕರ್ಾರಕ್ಕೆ ಕೊಟ್ಟರೂ ಯಾರೂ ಅಚ್ಚರಿಪಡಬೇಕಿಲ್ಲ. ಸಕರ್ಾರವೇ ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಚುನಾವಣೆಯ ಕಸರತ್ತಿನ ಹೆಸರಿನಲ್ಲಿ ಕೆಲವು ದಶಕಗಳಿಂದ ಕಂಡರಿಯದಷ್ಟು ಸೇನಾ ಜಮಾವಣೆಯನ್ನು ಕಾಶ್ಮೀರದಲ್ಲಿ ಮಾಡಿದೆ. ಇದು ಮುನ್ಸೂಚನೆ ಅಷ್ಟೇ. ನಾವು ಹರಡಿಕೊಂಡಿರುವ ಚುಕ್ಕಿಗಳನ್ನು ಸೇರಿಸಿ ಚಿತ್ತಾರ ಮಾಡಬೇಕು!

ಇಡಿಯ ದೇಶ ಹೀಗೆ ಒಟ್ಟಾಗಿ ಪಾಕಿಸ್ತಾನದ ವಿರುದ್ಧ ಏಕಮುಖ ಪ್ರವಾಹದಲ್ಲಿ ನಿಂತಿದ್ದರೆ ದೇಶದೊಳಗಿನ ಪ್ರತ್ಯೇಕತಾವಾದಿಗಳ ಕೂಗು ಬೇರೆ ದಿಕ್ಕಿನಲ್ಲೇ ಇದೆ. ಈ ರಾಷ್ಟ್ರಭಕ್ತಿಯ ಸುನಾಮಿಯಲ್ಲಿ ಕೊಚ್ಚಿಹೋಗುವ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ಸು ನರೇಂದ್ರಮೋದಿಯ ವಿರುದ್ಧ ಸುಳ್ಳು ಆರೋಪಗಳಿಗೆ ತೊಡಗಿದೆ. ಮೋದಿ ಈ ಘಟನೆಯಾದ ದಿನ ಸಾಕ್ಷ್ಯ ಚಿತ್ರವೊಂದರ ಶೂಟಿಂಗ್ನಲ್ಲಿದ್ದರು ಎಂದದ್ದಲ್ಲದೇ ಘಟನೆಯ ನಂತರ ಟೀ ಮತ್ತು ಪಕೋಡ ಸವಿದರು ಎಂಬ ಪತ್ರಿಕಾ ವರದಿಯನ್ನು ಆಧರಿಸಿ ಪತ್ರಿಕಾಗೋಷ್ಠಿಯನ್ನೇ ನಡೆಸಿಬಿಟ್ಟಿದ್ದಾರೆ. ಅವೆಲ್ಲವೂ ಸುಳ್ಳೆಂದು ಸಾಬೀತಾದ ಮೇಲೆ ಈ ಘಟನೆಯ ನಂತರವೂ ರಾಹುಲ್ ನರ್ತನ ಮಾಡುತ್ತಿರುವುದೊಂದರ ಸಂಗತಿಯನ್ನು ಅಧಿಕೃತ ಪೇಜಿನಿಂದ ಟ್ವೀಟ್ ಮಾಡಿದ ಕಾಂಗ್ರೆಸ್ಸು ಆನಂತರ ಉತ್ತರಿಸಲಾಗದೇ ಚಡಪಡಿಕೆಯಿಂದ ಆ ಟ್ವೀಟನ್ನೇ ಡಿಲಿಟ್ ಮಾಡಿದೆ. ರಾಷ್ಟ್ರೀಯ ಪಕ್ಷವೊಂದು ತನ್ನ ಹೆಸರಿನಿಂದ ರಾಷ್ಟ್ರೀಯ ಎಂಬ ಪದವನ್ನು ತೆಗೆದು ಬಿಸಾಡಲು ಇದು ಸಕಾಲ.

3

ಇಡಿಯ ಭಾರತ ಮೋದಿಯವರೊಂದಿಗೆ ಹೀಗೆ ಜೊತೆಯಾಗಿ ನಿಂತಿರುವುದನ್ನು ಕಂಡು ಹೊಟ್ಟೆ ಉರಿಸಿಕೊಂಡಿದ್ದು ಕಾಂಗ್ರೆಸ್ಸು ಮತ್ತು ಇತರ ಪ್ರತಿಪಕ್ಷಗಳಷ್ಟೇ ಅಲ್ಲ, ಪಾಕಿಸ್ತಾನ ಮತ್ತು ಜೈಶ್-ಎ-ಮೊಹಮ್ಮದ್ನ ಮೌಲಾನಾ ಮಸೂದ್ ಅಜರ್ ಕೂಡ. ಎಲ್ಲರ ಕೋಪ ಈಗ ಅವನತ್ತಲೇ. ಮೋದಿಯನ್ನು ಬಲಹೀನಗೊಳಿಸಬೇಕಿದ್ದ ಆತ ಬಲಶಾಲಿಯಾಗಿಸಿಬಿಟ್ಟ ಆರೋಪ ಅವನ ವಿರುದ್ಧ ಎಲ್ಲರೂ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಆತ ತನ್ನ ಹೇಳಿಕೆಯಲ್ಲಿ ‘ಈ ಘಟನೆಯಿಂದ ಮೋದಿಯ ವಿರುದ್ಧ ಜನ ಕೂಗಾಡುತ್ತಾರೆ. ಹಳ್ಳಿ-ಹಳ್ಳಿಯಲ್ಲೂ ಕಾಶ್ಮೀರದ ವಿಚಾರದಲ್ಲಿ ಮೋದಿ ನಪಾಸಾಗಿದ್ದಾರೆ ಎಂಬ ಆಕ್ರೋಶ ಭುಗಿಲೇಳುತ್ತದೆ. ಇನ್ನು ಕೆಲವು ದಿನ ಕಾದು ನೋಡಿ ಮೋದಿ ಈ ಬಾರಿ ಖಂಡಿತ ಸೋಲುತ್ತಾರೆ. ನಮಗೆ ಪೂರಕವಾಗುವ ಸಕರ್ಾರ ಭಾರತದಲ್ಲಿ ಬರುತ್ತದೆ’ ಎಂದೆಲ್ಲಾ ಮಾತನಾಡಿ ಅಧಿಕೃತ ಹೇಳಿಕೆ ಕೊಡುತ್ತಿದ್ದಾನೆ ಇದರೊಟ್ಟಿಗೆ ಮೋದಿಯ ಒತ್ತಡಕ್ಕೆ ಮಣಿದು ತನ್ನ ವಿರುದ್ಧ ಕಾಯರ್ಾಚರಣೆ ನಡೆಸಿದರೆ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ಪಾಕಿಸ್ತಾನ ಸಕರ್ಾರಕ್ಕೆ ಕೊಟ್ಟಿದ್ದಾನೆ. ವಿಚಿತ್ರವೆಂದರೆ ಮೋದಿಯನ್ನು ಸೋಲಿಸಲು ಕಾಂಗ್ರೆಸ್ಸು ಹರಸಾಹಸ ಮಾಡುತ್ತಿರುವಂತೆಯೇ ಪಾಕಿಸ್ತಾನ ಮತ್ತು ಮೌಲಾನಾ ಮಸೂದ್ ಅಜರ್ಗಳೂ ಅಷ್ಟೇ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಮೋದಿ ಎಂದರೆ ಭಾರತ ಎಂದಾಗಿರುವುದು ಈ ಕಾರಣದಿಂದಲೇ. ಅದಕ್ಕೆ ನರೇಂದ್ರಮೋದಿಯವರನ್ನು ವಿರೋಧಿಸಬೇಕೆಂದರೆ ಭಾರತವನ್ನೇ ವಿರೋಧಿಸಬೇಕೆಂಬ ನಿರ್ಣಯಕ್ಕೆ ನಗರ ನಕ್ಸಲರಾದಿಯಾಗಿ ಪ್ರತಿಪಕ್ಷಗಳೆಲ್ಲರೂ ನಿಶ್ಚಯಿಸಿಬಿಟ್ಟಿರುವುದು!

4

ಮೊನ್ನೆ ತಾನೆ ವಂದೇ ಭಾರತ್ ಎಂಬ ಹೆಸರಿನ ರೈಲು ಹಳಿಗಿಳಿಯಿತಲ್ಲ ನಗರ ನಕ್ಸಲರೆಲ್ಲಾ ಅದರ ಹಿಂದೆ ಬಿದ್ದದ್ದು ಇದೇ ಕಾರಣಕ್ಕೆ. ನಾವು ಹೆಮ್ಮೆ ಪಡಬೇಕಾಗಿದ್ದ ಸಂಗತಿ ಇಂಜಿನ್ ರಹಿತ ಈ ರೈಲನ್ನು ಚೆನ್ನೈನಲ್ಲಿ ಭಾರತದ ಇಂಜಿನಿಯರ್ಗಳೇ ಸಿದ್ಧಪಡಿಸಿದ್ದರು ಎಂಬುದು. ಮಾಮೂಲಿ ರೈಲಿಗಿಂತ 40 ಪ್ರತಿಶತ ಹೆಚ್ಚು ವೇಗವಾಗಿ ಓಡುವ ಈ ರೈಲು 98 ಪ್ರತಿಶತ ಭಾರತದಲ್ಲೇ ನಿಮರ್ಾಣಗೊಂಡಿದ್ದೆಂಬುದನ್ನು ನಾವು ಜಗತ್ತಿನ ಮುಂದೆ ಡಂಗೂರ ಸಾರಬೇಕು. ಇದೇ ರೈಲನ್ನು ಇಂಗ್ಲೆಂಡಿನಲ್ಲಿ ನಿಮರ್ಿಸಿ ಆಮದು ಮಾಡಿಕೊಂಡಿದ್ದರೆ ಆಗುವ ಖಚರ್ಿಗಿಂತ 40 ಪ್ರತಿಶತ ಕಡಿಮೆ ಬೆಲೆಯಲ್ಲಿ ಚೆನ್ನೈನಲ್ಲಿ ಇದನ್ನು ನಿಮರ್ಿಸಿತ್ತು ಭಾರತ. ಅದು ಯಾತ್ರೆಯನ್ನು ಆರಂಭಿಸುವುದಕ್ಕಿಂತ ಒಂದು ದಿನ ಮುಂಚೆ ಪರೀಕ್ಷಾರ್ಥ ಓಡಾಟ ಶುರುಮಾಡಿದಾಗ ಹಳಿಯ ಮೇಲೆ ದನವೊಂದು ಅಡ್ಡಬಂದು ರೈಲು ಜಖಂ ಆಗಿತ್ತು. ರೈಲಿನ ವೇಗ ಅದೆಷ್ಟಿರುತ್ತದೆಂದರೆ ಸಣ್ಣ ಅಡೆತಡೆಯೂ ಅದನ್ನು ತೊಂದರೆಗೀಡುಮಾಡಬಲ್ಲದು. ಹೀಗಾಗಿ ಪರೀಕ್ಷಾರ್ಥ ಓಡಾಟ ನಡೆಸಿ ಈ ಅಡೆತಡೆಗಳ ಕುರಿತಂತೆ ಗಮನಿಸಬೇಕಾದ ಅಗತ್ಯ ಇತ್ತು. ಆದರೆ ಎನ್ಡಿಟಿವಿಯಂತಹ ಮಾಧ್ಯಮಗಳು, ಮೋದಿ ವಿರೋಧಿ ಹಣೆಪಟ್ಟಿ ಹೊತ್ತುಕೊಂಡ ಕೆಲವು ಪತ್ರಕರ್ತರು ಇದನ್ನು ಅದೆಷ್ಟು ಸಂಭ್ರಮಿಸಿದರೆಂದರೆ ಭಾರತದ ಇಂಜಿನಿಯರ್ ತಂತ್ರಜ್ಞಾನವನ್ನೇ ಪ್ರಶ್ನಿಸಲಾರಂಭಿಸಿದರು. ಭಾರತದ ಸಾಮಥ್ರ್ಯ ಕಳಪೆ ಎಂಬುದನ್ನು ಸಾಬೀತುಪಡಿಸಲು ಅನೇಕ ಟ್ವೀಟುಗಳನ್ನು ವ್ಯಯಿಸಿದರು. ಕೆಲವರಂತೂ ಉದ್ದುದ್ದ ಲೇಖನಗಳನ್ನು ಬರೆದು ಇದರ ಮೇಲೆ ನಂಬಿಕೆಯಿರಿಸಿದ್ದ ನರೇಂದ್ರಮೋದಿಯವರನ್ನು ಆಡಿಕೊಂಡರು. ಅಂದರೆ ಮೋದಿಯವರನ್ನು ಟೀಕಿಸುವ ಭರದಲ್ಲಿ ಇವರೆಲ್ಲಾ ಭಾರತವನ್ನೇ ವಿರೋಧಿಸುತ್ತಿದ್ದರು. ಇವೆಲ್ಲಕ್ಕೂ ಪ್ರತಿಯಾಗಿ ರೈಲ್ವೇ ಮಂತ್ರಿ ಪಿಯೂಷ್ ಗೋಯಲ್ ಪ್ರತಿಯೊಬ್ಬರಿಗೂ ಇದು ಪರೀಕ್ಷಾರ್ಥ ನಡೆದ ಓಡಾಟ ಎಂಬುದನ್ನು ನೆನಪಿಸಿಕೊಟ್ಟು ಮಾರನೆಯ ದಿನದಿಂದ ಓಡಾಡಲಿರುವ ಪೂರ್ಣ ಪ್ರಮಾಣದ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರೀತಿಯಿಂದ ಸ್ವಾಗತ ಕೋರಿದರು. ಮರುದಿನ ರೈಲು ಹಳಿಗಿಳಿದಾಗ ಅದು ತನ್ನ ಓಡಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತಲ್ಲದೇ ಪ್ರಯಾಣಿಕರಿಂದ ಪ್ರಶಂಸೆಗೆ ಪಾತ್ರವಾಯ್ತು. ಜೊತೆಗೆ ಈ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಇನ್ನೂ ಒಂದಷ್ಟು ಕಡೆ ವಿಸ್ತಾರಗೊಳಿಸುವ ಭರವಸೆಯ ಮಾತುಗಳನ್ನಾಡಲು ಪಿಯೂಷ್ ಗೋಯಲ್ರಿಗೆ ಧೈರ್ಯ ತುಂಬಿತು. ಅಂದಹಾಗೆ ಇನ್ನು ಮುಂದೆ ಇದೇ ಬಗೆಯ ಟ್ರೈನೊಂದು ಬೆಂಗಳೂರು ಮತ್ತು ಮಂಗಳೂರನ್ನು ಜೋಡಿಸಲಿದೆ. ದುರದೃಷ್ಟಕರವೆಂದರೆ ಚೀನಾ ಕೂಡ ಬುಲೆಟ್ ಟ್ರೈನನ್ನು ತರುವ ಮುಂಚೆ ಇದೇ ರೀತಿಯ ವೈಫಲ್ಯಗಳನ್ನು ಅನುಭವಿಸಿತ್ತು. ಬೃಹತ್ ಸೇತುವೆಗಳನ್ನು ಕಟ್ಟುವ ಮುಂಚೆ ಚೀನಾದ ಆರಂಭಿಕ ಸೇತುವೆಗಳು ಕುಸಿದೇ ಬಿದ್ದಿದ್ದವು. ಆದರಿಂದು ಅದೇ ಚಿನಾ ಎತ್ತರಕ್ಕೆ ಬೆಳೆದು ನಿಂತಿದೆ. ಚೀನಾದ ಇಂದಿನ ಸಾಧನೆಯನ್ನು ಹೊಗಳುವ ಇದೇ ನಗರ ನಕ್ಸಲರು ಭಾರತದ ಪ್ರಯತ್ನವನ್ನು ಆಡಿಕೊಳ್ಳುತ್ತಿದ್ದಾರೆ. ಈ ನಗರ ನಕ್ಸಲರೇ ಹಿಂದೊಮ್ಮೆ ಇಸ್ರೊ ಉಡ್ಡಯಕಗಳು ಸಮುದ್ರಕ್ಕೆ ಬಿದ್ದಾಗ ತಮಾಷೆ ಮಾಡುತ್ತಿದ್ದವು. ಈಗ ಗಗನ ಕ್ಷೇತ್ರದಲ್ಲಿ ಭಾರತದ ಅಪರೂಪದ ಸಾಧನೆಯನ್ನು ಕಂಡು ಬೆಚ್ಚಿಬೀಳುವಂತಾಗಿವೆ. ಚೀನಾವನ್ನು ಹಿಂದಿಕ್ಕಿ ನಾವು ಮುನ್ನುಗ್ಗುತ್ತಿರುವ ಪರಿ ಜಗತ್ತಿಗೇ ಹೆಮ್ಮೆ ತರಿಸುವಂತಿದೆ.

6

ನರೇಂದ್ರಮೋದಿಯವರು ಭಾರತೀಯರೊಳಗೆ ಆತ್ಮವಿಶ್ವಾಸವನ್ನು ಚಿಮ್ಮಿಸುತ್ತಿದ್ದಾರೆ. ಎಲ್ಲಾ ಸೋಲುಗಳ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಗೆಲುವನ್ನು ದೇಶದ ಜನರಿಗೆ ವಗರ್ಾಯಿಸಲು ನಿಂತುಬಿಟ್ಟಿದ್ದಾರೆ. ಹೀಗೆಂದೇ ಹೊಸ ಸಾಹಸಕ್ಕೆ ಇಂದು ಭಾರತೀಯ ಮನಸ್ಸು ಮಾಡುತ್ತಿದ್ದಾನೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಇಂದು ನಾವು ಯುದ್ಧವಿಮಾನಗಳ ತಯಾರಿಕೆಗೆ ಮೂಂದಾಗಿದ್ದೇವೆ. ನ್ಯೂಕ್ಲಿಯರ್ ಮಿಸೈಲ್ ಸಹಿತ ಸಬ್ಮರಿನ್ಗಳ ನಿಮರ್ಾಣ ನಾವು ಮಾಡುತ್ತಿದ್ದೇವೆ. ಮಹೀಂದ್ರಾ, ಎಲ್ ಆಂಡ್ ಟಿಗಳು ಯುದ್ಧ ಟ್ಯಾಂಕುಗಳ ನಿಮರ್ಾಣದ ಒಪ್ಪಂದಕ್ಕೆ ಸಹಿಮಾಡಿದೆ. ಕ್ರಮೇಣ ಭಾರತದಲ್ಲಿ ಮೈಕ್ರೋಚಿಪ್ಗಳ ನಿಮರ್ಾಣವೂ ಕೂಡ ನಡೆಯಲಿದೆ. ಅಲ್ಲಿಗೆ ಉತ್ಪಾದನಾ ಕ್ಷೇತ್ರದಲ್ಲಿದ್ದ ಚೀನಾದ ಏಕಸ್ವಾಮ್ಯತೆ ಖಂಡಿತವಾಗಿಯೂ ಕುಸಿಯಲಿದೆ. ಚೀನಾದ ಈ ಪರಿಯ ಹಿನ್ನಡೆಯನ್ನು ನಗರ ನಕ್ಸಲರು ಸಹಿಸುವುದಾದರೂ ಹೇಗೆ? ಅದಕ್ಕೆ ಮೋದಿಯವರನ್ನು ಸೋಲಿಸಬೇಕೆಂಬ ಚೀನಾದ ಪ್ರಯತ್ನಕ್ಕೆ ಇವರೂ ಕೈಜೋಡಿಸುತ್ತಿದ್ದಾರೆ. ಆದರೇನು ಗೊತ್ತೇ? ದೇಶದಲ್ಲಿ ಈಗ ಎದ್ದಿರುವ ರಾಷ್ಟ್ರಭಕ್ತಿಯ ಸುನಾಮಿಗೆ ಇವರೆಲ್ಲರೂ ತತ್ತರಿಸಿ ಹೋಗಿದ್ದಾರೆ. ಸೈನಿಕರ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ಸು ಈಗ ಅವರ ಸಮರ್ಥನೆಗೆ ನಿಲ್ಲುತ್ತಿದೆ. ಮಾವೋವಾದಿಗಳು ಕೂಡ ಭಾರತ್ಮಾತಾ ಕೀ ಜೈ ಎನ್ನುತ್ತಿದ್ದಾರೆ. ಮುಸ್ಲೀಮರೊಳಗೆ ಮತಾಂಧತೆಯನ್ನು ಬಿತ್ತುತ್ತಿದ್ದವರು ನಾವು ಭಾರತದ ಪರವಾಗಿದ್ದೇವೆ, ನಾವು ವಿರೋಧಿಗಳಲ್ಲ ಎಂದು ಗೋಗರೆದು ಕೇಳಿಕೊಳ್ಳುತ್ತಿದ್ದಾರೆ. ನಿಜವಾದ ಭಾರತದ ಕಾಲ ಈಗ ಶುರುವಾಗಿದೆ ಎಂದು ಖಂಡಿತವಾಗಿಯೂ ಅನಿಸುತ್ತಿದೆ.

Comments are closed.