ವಿಭಾಗಗಳು

ಸುದ್ದಿಪತ್ರ


 

ಮೋದಿ ಸುನಾಮಿಗೆ ಹೊರ ಬಂದ ವಿಷಸರ್ಪಗಳನ್ನು ಏನು ಮಾಡುವಿರಿ?

6

ಕೊನೆಗೂ ಅರ್ಬನ್ ನಕ್ಸಲರು ಭುಸುಗುಡಲು ಶುರುಮಾಡಿಯೇ ಬಿಟ್ಟಿದ್ದಾರೆ. ಇಷ್ಟು ದಿನಗಳ ಕಾಲ ಯಾರು ಯಾವುದರ ಬೆಂಬಲಿಗರೆಂದು ಗುರುತಿಸಲು ಸಾಧ್ಯವೇ ಆಗದ ಪರಿಸ್ಥಿತಿಯಿತ್ತು. ಈಗ ಹಾಗಿಲ್ಲ. ತಾವು ದೇಶ ವಿರೋಧಿ ಕೃತ್ಯದಲ್ಲಿಯೇ ನಿರತರಾಗಿರುವವರೆಂದು ತಮ್ಮ ಹೆಗಲ ಮೇಲೆ ಫಲಕವನ್ನು ಇಳಿಬಿಟ್ಟುಕೊಂಡೇ ಕುಳಿತುಬಿಟ್ಟಿದ್ದಾರೆ. ಒಂದು ರೀತಿ ಒಳ್ಳೆಯದೇ ಆಯ್ತು. ಶತ್ರು ಯಾರೆಂದು ಗೊತ್ತಾಗದೇ ಹೋರಾಟ ಮಾಡುವುದು ಬಹಳ ಕಷ್ಟ. ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಶತ್ರುಗಳು ತಾವೇ ತಾವಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಅರ್ಬನ್ ನಕ್ಸಲರಿಗೆ ಅಥವಾ ಸಭ್ಯ ಮುಖವಾಡದ ಉಗ್ರವಾದಿಗಳಿಗೆ ನರೇಂದ್ರಮೋದಿಯವರನ್ನು ಕಂಡರೆ ಕೋಪವಾದರೂ ಏಕೆ? ಉತ್ತರ ಬಲು ಕಠಿಣವೇನಲ್ಲ. ಬಡವರ ಹೆಸರು ಹೇಳಿಕೊಂಡು, ಕಷ್ಟ ಕಾರ್ಪಣ್ಯದ ಕಥೆ ಹೇಳಿಕೊಂಡು ಅವರ ಸಮಾಧಿಯ ಮೇಲೆ ಸೌಧವನ್ನು ಕಟ್ಟಿದ್ದ ಇವರ ಬುಡದಡಿಯ ಚಾದರವನ್ನೇ ನರೇಂದ್ರಮೋದಿ ಎಳೆದು ಬಿಸಾಡಿಬಿಟ್ಟಿದ್ದಾರೆ. ನಾಲ್ಕೇ ವರ್ಷಗಳಲ್ಲಿ ಬದುಕಿನ ಕಠೋರ ದಿನಗಳನ್ನು ಕಂಡುಬಿಟ್ಟಿರುವ ಇವರಿಗೆ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬಂದುಬಿಟ್ಟರೆ ತಾವು ಮೈಬಗ್ಗಿಸಿ ದುಡಿಯಬೇಕಾದ ಪರಿಸ್ಥಿತಿ ಬಂದುಬಿಡುತ್ತದಲ್ಲಾ ಎಂಬ ಹೆದರಿಕೆಯಿದೆ. ಅಲ್ಲದೇ ಮತ್ತೇನು? ಫೇಕ್ ಎನ್ಜಿಒಗಳನ್ನು ಸೃಷ್ಟಿ ಮಾಡಿ, ವಿದೇಶದ ಏಜೆನ್ಸಿಗಳ ಹಣವನ್ನು ಅದಕ್ಕೆ ಸೆಳೆದು ಈ ಹಣದಲ್ಲಿ ಬಹುದೊಡ್ಡ ಪಾಲನ್ನು ದೇಶವಿರೋಧಿ ಕೃತ್ಯ ನಡೆಸುವ ಜನರಿಗೆ ತಲುಪಿಸುವ ಏಜೆಂಟುಗಳಾಗಿದ್ದ ಇವರುಗಳನ್ನು ಮೋದಿ ಗುರುತಿಸಿ ಕಳೆದ ನಾಲ್ಕು ವರ್ಷಗಳಲ್ಲಿ ಸರಿಯಾಗಿಯೇ ಬಡಿದಿದ್ದಾರೆ. ರಾಜ್ಯಸಭೆಯಲ್ಲಿ ಕಿರಣ್ ರಿಜಿಜು ಕಳೆದ ವರ್ಷ ವಿದೇಶೀ ದೇಣಿಗೆ ನಿಯಂತ್ರಣ ಕಾಯ್ದೆಯ ಕುರಿತಂತೆ ಮಾತನಾಡುತ್ತಾ ಸ್ಫೋಟಕ ಸುದ್ದಿಯೊಂದನ್ನು ಬಿಚ್ಚಿಟ್ಟಿದ್ದರು. ಮೋದಿಯ ಆಗಮನದ ನಂತರ 18,868 ಸಕರ್ಾರೇತರ ಸಂಸ್ಥೆಗಳ ವಿದೇಶೀ ದೇಣಿಗೆ ಸ್ವೀಕರಿಸಬಹುದಾದ ಪರವಾನಗಿಯನ್ನು ರದ್ದುಪಡಿಸಲಾಯ್ತು. 2013 ರಲ್ಲಿ ಈ ಸಂಖ್ಯೆ 4, 2014 ರಲ್ಲಿ 59 ಇತ್ತು. 2015 ರ ಒಂದೇ ವರ್ಷದಲ್ಲಿ 8500 ಎನ್ಜಿಒಗಳ ಪರವಾನಗಿ ರದ್ದಾಗಿತ್ತು. ಪರಿಣಾಮವೇನು ಗೊತ್ತೇ? 2015-16 ರಲ್ಲಿ 17,773 ಕೋಟಿ ವಿದೇಶಿ ಹಣ ಈ ಎನ್ಜಿಒಗಳಿಗೆ ಹರಿದು ಬಂದಿದ್ದರೆ, ಮರು ವರ್ಷದ ವೇಳೆಗೆ ಈ ಪ್ರಮಾಣ 6499 ಕೋಟಿಗೆ ಇಳಿದಿತ್ತು. ಅಂದರೆ 11,000 ಕೋಟಿಯಷ್ಟು ಖೋತಾ. ಬಿಟ್ಟಿ ಕೂಳು ತಿಂದುಕೊಂಡು ಬದುಕಿದ್ದವರು ಏಕಾಏಕಿ ಅನ್ನದ ಮೂಲ ನಿಂತುಹೋದರೆ ಸುಮ್ಮನಿರುತ್ತಾರೆ ಎಂದುಕೊಂಡಿರೇನು? ಸಹಜವಾಗಿಯೇ ಪಿತ್ತ ನೆತ್ತಿಗೇರುತ್ತದೆ. ಇಷ್ಟಕ್ಕೂ ನರೇಂದ್ರಮೋದಿ ಈ ಎನ್ಜಿಒಗಳನ್ನು ಗುರುತಿಸಿದ್ದು ಹೇಗೆ ಗೊತ್ತಾ? ವಿದೇಶಿ ದೇಣಿಗೆ ಪಡೆಯುವಂಥ ಈ ಸಂಸ್ಥೆಗಳ ಮೇಲೆ ಗುಪ್ತಚಾರರಿಗೆ ಗಮನವಿರಿಸುವಂತೆ ಹೇಳಿದರು. ಆನಂತರ ಜಾಗತಿಕ ಮಟ್ಟದಲ್ಲಿ ಭಾರತ ವಿರೋಧಿ ಕೃತ್ಯಗಳಿಗೆ ಹಣ ನೀಡುವ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಅವರಿಂದ ನಿರಂತರವಾಗಿ ಹಣ ಪಡೆಯುತ್ತಿದ್ದ ಸಂಸ್ಥೆಗಳನ್ನು ನಿಗರಾನಿಗೆ ಒಳಪಡಿಸಿದರು. ಆಗ ಎಲ್ಲರ ಬಂಡವಾಳ ಹೊರಗೆ ಬಿತ್ತು. ನಾಲ್ಕಾರು ವರ್ಷಗಳಿಂದ ಲೆಕ್ಕಪತ್ರವನ್ನೇ ಕೊಡದೇ ಕೊಬ್ಬಿ ಬೆಳೆದಿದ್ದ ಅನೇಕ ಸಂಸ್ಥೆಗಳು ಪರವಾನಗಿ ಸಹಜವಾಗಿಯೇ ಕಳೆದುಕೊಂಡವು. ಇಷ್ಟಕ್ಕೇ ಸುಮ್ಮನಾಗದ ಮೋದಿ ದೆಹಲಿಯ ಸಕರ್ಾರಿ ಬಂಗಲೆಯಲ್ಲಿ ನಾಟಕ, ಕಲೆ, ಸಂಗೀತದ ಹೆಸರು ಹೇಳಿಕೊಂಡು ದಶಕಗಳಿಂದ ಠಿಕಾಣಿ ಹೂಡಿದ್ದ ಮತ್ತು ಆಯಕಟ್ಟಿನ ಜಾಗದಲ್ಲಿ ಕುಳಿತು ದೇಶವಿರೋಧೀ ಕೃತ್ಯಗಳಿಗೆ ಸಭೆ ನಡೆಸುತ್ತಿದ್ದ ಅನೇಕ ಅಯೋಗ್ಯರನ್ನು ಈ ಬಂಗಲೆಗಳಿಂದ ಹೊರದಬ್ಬಿದರು. ಪತ್ರಕರ್ತರೆನಿಸಿಕೊಂಡು ಪ್ರಧಾನಮಂತ್ರಿಗಳೊಂದಿಗೆ ವಿದೇಶ ತಿರುಗಾಟ ಮಾಡುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದ ದೆಹಲಿಯ ಲೂಟಿಕೋರ ಮಾಧ್ಯಮದವರನ್ನು ಮೋದಿ ಪ್ರೋತ್ಸಾಹಿಸಲೇ ಇಲ್ಲ. ವಿದೇಶ ಪ್ರವಾಸದಲ್ಲಿ ಅವರು ತಮ್ಮೊಂದಿಗೆ ಒಯ್ಯುತ್ತಿದ್ದುದು ದೂರದರ್ಶನ ಮತ್ತು ಆಕಾಶವಾಣಿಯ ವರದಿಗಾರರನ್ನು ಮಾತ್ರ. ಸಹಜವಾಗಿಯೇ ಈ ವಲಯದಲ್ಲಿ ಉರಿ ಹತ್ತಿಕೊಂಡಿತ್ತು.
ಮೋದಿಗೆ ಪಾಠ ಕಲಿಸಲೆಂದೇ ಬಿಹಾರ ಚುನಾವಣೆಗೂ ಮುನ್ನ ಅವಾಡರ್್ ವಾಪ್ಸಿಯ ನಾಟಕ ಮಾಡಿದ್ದು. ಇವರ ಬೆಂಬಲಕ್ಕೆ ಬಂದ ಸಾಹಿತಿಗಳು ಪತ್ರಕರ್ತರ ಸಂಖ್ಯೆ 50 ದಾಟಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಂಡವಾಳ ಎಷ್ಟರ ಮಟ್ಟಿಗೆ ಬಯಲಾಯ್ತೆಂದರೆ ಅವಾಡರ್್ ಮರಳಿಸಿದ ಅನೇಕರು ತಮ್ಮ ದೊಡ್ಡ ಮೊತ್ತದ ಪ್ರಶಸ್ತಿಗಳನ್ನು ಮರಳಿಸಿರಲಿಲ್ಲ. ಬದಲಿಗೆ ಹಣದ ಸುಳಿವೇ ಇಲ್ಲದ ಸಣ್ಣ-ಸಣ್ಣ ಪ್ರಶಸ್ತಿಗಳನ್ನು ಮರಳಿಸಿ ಮುಖಪುಟದಲ್ಲಿ ರಾರಾಜಿಸುವ ಪ್ರಯತ್ನ ಮಾಡಿದ್ದರು. ಬಿಹಾರದಲ್ಲಿ ಭಾಜಪಾ ಅಧಿಕಾರಕ್ಕೆ ಬರಲಾಗಲಿಲ್ಲ ನಿಜ. ಆದರೆ ಅದಕ್ಕೆ ಕಾರಣ ನಿತೀಶ್-ಲಾಲು ಮಿಲನವೇ ಹೊರತು ಎಡಪಂಥೀಯ ನಕ್ಸಲ್ ಭಯೋತ್ಪಾದಕರ ಪ್ರಯತ್ನಗಳಾಗಿರಲಿಲ್ಲ. ಮೋದಿ ಮತ್ತು ಅವರ ಬೆಂಬಲಿಗರು ಗಟ್ಟಿಯಾಗುತ್ತಲೇ ಹೋದರು.

4

ಒಂದಾದಮೇಲೊಂದರಂತೆ ರಾಜ್ಯಗಳು ಮೋದಿಯವರ ತೆಕ್ಕೆಗೆ ಬೀಳಲಾರಂಭಿಸಿದವು. ಜನ ಬೆಂಬಲವನ್ನು ಚೆನ್ನಾಗಿ ಅನುಭವಿಸಿದ ಮೋದಿ ಕಶ್ಮೀರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವ ಬಲು ಕಠೋರ ನಿರ್ಣಯವನ್ನು ತೆಗೆದುಕೊಂಡರು. ಆಪರೇಶನ್ ಆಲ್ ಔಟ್ ಕಶ್ಮೀರದ್ದಷ್ಟೇ ಅಲ್ಲ, ಭಯೋತ್ಪಾದಕರ ಬೆಂಬಲಿಗರೆಲ್ಲರ ಎದೆ ನಡುಗಿಸಿತು. ಆನಂತರ ನಕ್ಸಲರತ್ತ ತಿರುಗಿದ ಮೋದಿ ಶಸ್ತ್ರ ಕೆಳಗಿರಿಸುವಂತೆ ಮುಕ್ತ ಆಹ್ವಾನ ಕೊಟ್ಟರು. ಭಯೋತ್ಪಾದನೆಗೆ ತಾವು ಸಹಿಷ್ಣುವಲ್ಲ ಎಂಬುದನ್ನು ಬಲವಾಗಿಯೇ ಸಾರಿದ ಮೋದಿ ಗದಾಪ್ರಹಾರ ಮಾಡಿದರು. 2011 ರಲ್ಲಿ 99 ಮಾವೋವಾದಿಗಳ ಹತ್ಯೆಯಾಗಿತ್ತು. ನಮೋ ಅಧಿಕಾರಕ್ಕೆ ಬಂದ ನಂತರ 2016 ರಲ್ಲಿ ಸೈನಿಕರು 222 ನಕ್ಸಲರನ್ನು ಕೊಂದು ಬಿಸಾಡಿದ್ದರು. ಯಾರ ಬಂದೂಕಿನ ಬಲದ ಮೇಲೆ ನಗರದಲ್ಲಿರುವ ನಕ್ಸಲರು ಸಕರ್ಾರ ಸ್ಥಾಪಿಸುವ ಮಾತನಾಡುತ್ತಿದ್ದರೋ ಮೋದಿಯವರ ಆಗಮನದಿಂದ ಅದೇ ಬಂದೂಕು ತುಕ್ಕು ಹಿಡಿದುಬಿಟ್ಟಿತ್ತು. ಇಷ್ಟಕ್ಕೇ ನಿಲ್ಲದ ಮೋದಿ ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾರೊಂದಿಗಿನ ತಮ್ಮ ಸಂಬಂಧ ಗಟ್ಟಿಗೊಳಿಸಿಕೊಂಡು ಅನೇಕ ರಕ್ಷಣಾ ಒಪ್ಪಂಗದಳನ್ನು ಮಾಡಿಕೊಂಡರಲ್ಲದೇ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದ ಪ್ರಾಬಲ್ಯ ಹೆಚ್ಚಾಗುವಂತೆ ನೋಡಿಕೊಂಡರು. ಚೀನಾ ಒಳಗಿಂದೊಳಗೇ ಬೇಯುತ್ತಾ ಹೋಯ್ತು. ಇತ್ತ ಚೀನಾದ ಆಜ್ಞಾಪಾಲಕರು ಒಂದೇ ಕಣ್ಣಲ್ಲಿ ಅಳಲಾರಂಭಿಸಿದರು. ಮುಂದೇನು? ಕಮ್ಯುನಿಸ್ಟ್ ನಕ್ಸಲ ಭಯೋತ್ಪಾದಕರ ಬತ್ತಳಿಕೆ ಖಾಲಿಯಾಗುತ್ತಾ ಬಂದಿತು. ಮೋದಿ ಹಳ್ಳಿಗಳಲ್ಲೆಲ್ಲಾ ಪ್ರಭಾವಿಯಾಗಿ ನೆಲೆ ಕಂಡುಕೊಂಡಿದ್ದನ್ನು ಅವರಿಂದ ಸಹಿಸಲಾಗುತ್ತಿರಲಿಲ್ಲ. ತಮ್ಮ ಶಕ್ತಿಕೇಂದ್ರವನ್ನು ಮೋದಿ ಛಿದ್ರಗೊಳಿಸಿದ್ದಾರೆಂದು ಗೊತ್ತಾದೊಡನೆ ಮೋದಿಯವರ ಶಕ್ತಿಸ್ರೋತವಾಗಿರುವ ನಗರಗಳಲ್ಲಿ ತಮ್ಮ ಚಟುವಟಿಕೆ ತೀವ್ರಗೊಳಿಸಬೇಕೆಂದು ನಗರದ ನಕ್ಸಲರು ನಿರ್ಧರಿಸಿದರು. ಮಹಾರಾಷ್ಟ್ರ ಅವರಿಗೀಗ ಆಯ್ಕೆಯ ತಾಣವಾಯ್ತು. ಭೀಮಾ ಕೋರೆಗಾಂವ್ನಲ್ಲಿ ಮಹಾ ರೆಜಿಮೆಂಟಿನ ಸಹಾಯದಿಂದ ಪೇಶ್ವೆಗಳ ವಿರುದ್ಧ ಬ್ರಿಟೀಷರು ಗಳಿಸಿದ ಜಯದ 200 ನೇ ವರ್ಷದ ಸ್ಮರಣೆಯನ್ನು ಮಾಡಿಕೊಳ್ಳಬೇಕೆಂದು ನಿಶ್ಚಯಿಸಿ ಆ ಮೂಲಕ ಬಲುದೊಡ್ಡ ಪ್ರಹಾರಕ್ಕೆ ಕೈ ಹಾಕಿದರು. ಒಂದು ವರ್ಷ ಮುಂಚಿನಿಂದಲೇ ಇದಕ್ಕೋಸ್ಕರ ತಯಾರಿ ನಡೆಸಿ ಜಿಗ್ನೇಶ್ ಮೇವಾನಿಯನ್ನು ನಾಯಕನನ್ನಾಗಿ ಮಾಡಿ ಜನವರಿ ಒಂದರ ಕಾರ್ಯಕ್ರಮದಲ್ಲಿ ದಂಗೆಯಾಗಿ ಮಹಾರಾಷ್ಟ್ರ ಉರಿದುಹೋಗುವಂತೆ ನೋಡಿಕೊಳ್ಳಲಾಯ್ತು. ಕೋರೆಗಾಂವ್ನ ಈ ಕಿಡಿ ದೇಶದಾದ್ಯಂತ ಹಬ್ಬಿ ಕಂಡಕಂಡಲ್ಲಿ ದಂಗೆಗಳು ನಡೆದು ಮೋದಿ ಸಕರ್ಾರ ಉರುಳುವುದೆಂಬ ಕನಸು ಕಂಡಿದ್ದ ನಗರದ ನಕ್ಸಲರಿಗೆ ಭಾರಿ ದೊಡ್ಡ ಆಘಾತ ಕಾದಿತ್ತು. ಮೋದಿ ಅದಾಗಲೇ ತಮ್ಮ ಅಭಿವೃದ್ಧಿಯ ಕಲ್ಪನೆಗಳಿಂದ ದಲಿತರನ್ನು ಮುಟ್ಟಿಬಿಟ್ಟಿದ್ದಾರೆ. ಅವರ್ಯಾರೂ ಮೋದಿಯ ವಿರುದ್ಧ ಹೊರಬರಲು ಸಜ್ಜಾಗಲೇ ಇಲ್ಲ. ಕೈ ಚೆಲ್ಲಿದ ಕಾಮ್ರೇಡುಗಳು ಮುಂದಿನ ಹಂತಕ್ಕೆ ತಯಾರಿ ನಡೆಸಲಾರಂಭಿಸಿದರು. ರಾಜೀವ್ ಗಾಂಧಿ ಮಾದರಿಯಲ್ಲಿ ಮೋದಿಯವರನ್ನು ಕೊಲೆಗೈಯ್ಯಬೇಕೆಂದು ನಿಶ್ಚಯಿಸಿಬಿಟ್ಟರು. ಮೋದಿಯವರ ರ್ಯಾಲಿ, ರೋಡ್ ಶೋಗಳಲ್ಲಿ ಮುನ್ನುಗ್ಗಿ ಆತ್ಮಹತ್ಯಾ ದಾಳಿಯ ಮೂಲಕ ಅವರನ್ನು ಮುಗಿಸಬೇಕೆಂಬ ಎಲ್ಲ ಯೋಜನೆಗಳನ್ನೂ ರೂಪಿಸಿಕೊಂಡಾಗಿತ್ತು. ಭೀಮಾ ಕೋರೆಗಾಂವ್ ಪ್ರಕರಣದ ನಂತರ ಈ ಬಗೆಯ ಒಟ್ಟಾರೆ ವಿಧ್ವಂಸಕ ಕೃತ್ಯಗಳ ತಯಾರಿಯಲ್ಲಿರುವ ನಗರದ ನಕ್ಸಲರ ಬೆನ್ನುಬಿದ್ದ ಪೊಲೀಸರು ಅನೇಕ ಸತ್ಯಗಳನ್ನು ಅಗೆದು ತೆಗೆದರು. ಹೈದರಾಬಾದ್ನಿಂದ ವರವರರಾವ್, ಮುಂಬೈನಿಂದ ಗೋನ್ಸಾಲ್ವೀಸ್, ಫರೀರಾ, ಫರಿದಾಬಾದ್ನಿಂದ ಸುಧಾ ಭಾರದ್ವಾಜ್, ದೆಹಲಿಯಿಂದ ಗೌತಮ್ ನವಲಖಾ ಇವರನ್ನೆಲ್ಲಾ ಸಾಕ್ಷಿ ಸಮೇತ ಬಂಧಿಸಿ ತಂದರು. ಆದರೆ ನಗರಗಳಲ್ಲಿ ಕುಳಿತು ಚಟುವಟಿಕೆಯನ್ನು ನಿಯಂತ್ರಿಸುವ ಈ ಬೌದ್ಧಿಕ ಭಯೋತ್ಪಾದಕರು ಸಕರ್ಾರದ ವಿರುದ್ಧ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು ನ್ಯಾಯಾಲಯ ಇವರನ್ನು ಗೃಹ ಬಂಧನಕ್ಕೆ ಸೀಮಿತಗೊಳಿಸುವಂತೆ ಮಾಡಿಬಿಟ್ಟರು.

5

ಈ ಅರ್ಬನ್ ನಕ್ಸಲರ ಕಾರ್ಯಶೈಲಿ ವ್ಯವಸ್ಥಿತವಾಗಿರುವಂಥದ್ದು. ನಿಮಗೆ ಅರ್ಥವಾಗಲೆಂದೇ ಒಂದು ಉದಾಹರಣೆಯ ಮೂಲಕ ಹೇಳುತ್ತೇನೆ. ಮುಖ್ಯಮಂತ್ರಿಯ ಮೇಲೆ ಪ್ರಭಾವ ಬೀರಿ ಒಂದಷ್ಟು ಬುದ್ಧಿಜೀವಿಗಳು ಟಿಪ್ಪುಜಯಂತಿಯ ಯೋಜನೆ ರೂಪಿಸುತ್ತಾರೆ. ಟಿಪ್ಪು ಜಯಂತಿ ಆಗಬೇಕೆಂದು ಮುಸಲ್ಮಾನರು ಹಿಂದೆಯೂ ಬೇಡಿಕೆಯಿಟ್ಟಿರಲಿಲ್ಲ. ಅದೆಂದೂ ಅವರ ಆಕಾಂಕ್ಷೆಯೂ ಆಗಿರಲಿಲ್ಲ. ಶಾಂತವಾಗಿದ್ದ ತಲೆಯೊಳಗೆ ಬುದ್ಧಿಜೀವಿಗಳು ಬಿತ್ತಿದ ವಿಷವದು. ಜಯಂತಿಯ ಘೋಷಣೆಯಾದೊಡನೆ ಒಂದಷ್ಟು ವಿಶ್ವವಿದ್ಯಾಲಯಗಳು ಪ್ರೊಫೆಸರ್ಗಳು ಬೀದಿಗಿಳಿದು ಟಿಪ್ಪುವನ್ನು ಸಮಥರ್ಿಸಿಕೊಳ್ಳುವ ಬೂಸಾ ದಾಖಲೆಗಳನ್ನು ಮುಂದಿಡುತ್ತಾರೆ. ನಕ್ಸಲರ ಬೆಂಬಲಿತ ಪತ್ರಿಕೆಗಳು ಇದೇ ಅಧ್ಯಾಪಕರುಗಳ ಲೇಖನವನ್ನು ವಿಶೇಷವಾಗಿ ಪ್ರಕಟಿಸುತ್ತವೆ. ಮುಸಲ್ಮಾನರು ಗೊಂದಲದಲ್ಲಿರುವಾಗಲೇ ಒಂದಷ್ಟು ಮಾವೋವಾದಿ ಚಳುವಳಿಕೋರರು ಬೀದಿಗಿಳಿದು ಹಿಂದುಗಳ ವಿರುದ್ಧ ಪ್ರತಿಭಟನೆ ಶುರುಮಾಡಿಬಿಡುತ್ತಾರೆ. ಸಹಜವಾಗಿಯೇ ಕುಪಿತರಾಗುವ ಹಿಂದುಗಳು ತಮ್ಮೆಲ್ಲ ಆಕ್ರೋಶವನ್ನು ತೀರಿಸಿಕೊಳ್ಳುವುದು ಈ ಛದ್ಮವಾದಿ ನಕ್ಸಲರ ಮೇಲಲ್ಲ; ಬದಲಿಗೆ ಯಾವುದರಲ್ಲೂ ಪಾಲ್ಗೊಳ್ಳದೇ ತಮ್ಮ ಪಾಡಿಗೆ ತಾವಿದ್ದ ಮುಸಲ್ಮಾನರ ಮೇಲೆ. ಯಾವಾಗ ಹಿಂದೂ-ಮುಸಲ್ಮಾನ್ ಎಂಬ ತಿರುವು ಜಯಂತಿಗೆ ಸಿಕ್ಕಿಬಿಡುತ್ತದೋ ಅದು ಅರ್ಬನ್ ನಕ್ಸಲರ ಬೆಳವಣಿಗೆಗೆ ಪೂರಕವಾದ ವಾತಾವರಣ. ಅಪ್ಪ-ತಪ್ಪಿ ಪ್ರತಿಭಟನೆಯ ವೇಳೆ ಮುಸಲ್ಮಾನನಿಗೆ ಗಾಯವಾದರೆ ಅರ್ಬನ್ ನಕ್ಸಲರದ್ದೇ ಮುಖವಾಡವಾಗಿರುವ ಒಂದಷ್ಟು ಮಾನವ ಹಕ್ಕು ಸಂಬಂಧಿ ಎನ್ಜಿಒಗಳು ಬೊಬ್ಬಿಡಲಾರಂಭಿಸುತ್ತವೆ. ಹಿಂದೂ ತೀರಿಕೊಂಡರೆ ಇವರುಗಳೇ ಅದಕ್ಕೆ ಗುಂಪು ಘರ್ಷಣೆ ಎಂದುಬಿಡುತ್ತಾರೆ. ಮುಸಲ್ಮಾನ ಪೊಲೀಸರ ವಶವಾದರೆ ಅವನನ್ನು ಬಿಡಿಸಲು ನಕ್ಸಲ್ ಬೆಂಬಲಿಗ ವಕೀಲ ಉಚ್ಚ ನ್ಯಾಯಾಲಯದಲ್ಲೂ ಕಾಯ್ದುಕೊಂಡೇ ಇರುತ್ತಾನೆ. ಒಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ನಮಗರಿವಿಲ್ಲದಂತೆ ತಮ್ಮವರನ್ನು ಸೃಷ್ಟಿ ಮಾಡಿ ಬೇಕಾಗಿರುವ ಬೆಳೆ ತೆಗೆಯುತ್ತಾರೆ ಈ ಅಯೋಗ್ಯರು. ಇವರ ಪಾಲಿಗೆ ಪಟ್ಟಣ ಹಣದ ಸ್ರೋತ. ಅದು ರಕ್ಷಣೆಗೆ ಸೂಕ್ತ ಜಾಗ. ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಲು ವ್ಯವಸ್ಥೆಯಿರುವ ತಾಣ. ಶಸ್ತ್ರ ಸಂಗ್ರಹಕ್ಕೆ, ಕಾನೂನಿನ ರಕ್ಷಣೆಗೆ, ವೈದ್ಯಕೀಯ ತಪಾಸಣೆಗೆ ಮತ್ತು ಮಾಧ್ಯಮ ಸಹಕಾರಕ್ಕೆ ಪಟ್ಟಣವೇ ಸೂಕ್ತ. ಹೀಗೆಂದೇ ಪೂನಾ, ಅಹಮದಾಬಾದ್, ಕೋಲ್ಕತ್ತಾ, ಪಟ್ನಾ, ಕಾನ್ಪುರ್, ದೆಹಲಿ, ಚೆನ್ನೈ, ಕೋಯ್ಮತ್ತೂರು, ಬೆಂಗಳೂರು ಇಲ್ಲೆಲ್ಲಾ ವ್ಯವಸ್ಥಿತವಾದ ಜಾಲವನ್ನು ಅವರು ನಿಮರ್ಿಸಿಬಿಟ್ಟಿದ್ದಾರೆ. ವಿಶ್ವವಿದ್ಯಾಲಯಗಳ ಒಳಹೊಕ್ಕು ಅಲ್ಲಿ ಭವಿಷ್ಯದ ಪೀಳಿಗೆಯ ತಲೆ ಕೆಡಿಸುತ್ತಿದ್ದಾರೆ. ಕೋಮು ಸೌಹಾರ್ದದ ನೆಪದಲ್ಲಿ ಹಿಂದೂ-ಮುಸಲ್ಮಾನರ ಗಲಾಟೆ ಆರದಂತೆ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಂಧಿತರಾದ ಐದು ಜನ ಬಿಚ್ಚಿಟ್ಟ ಮಾಹಿತಿ ಭಯಾನಕವಾಗಿದೆ. ಈ ಐದು ಜನ ಇನ್ನೂ ಐವತ್ತು ಜನರತ್ತ ಬೊಟ್ಟು ಮಾಡಿದ್ದಾರೆ.

1

ಇವರೆಲ್ಲರ ಕುರಿತಂತೆ ಸಿನಿಮಾ ಮಾಡಿದ ವಿವೇಕ್ ಅಗ್ನಿಹೋತ್ರಿ ನಕ್ಸಲರ ವಿರುದ್ಧ ಕೆಲಸ ಮಾಡಿದ ಪೊಲೀಸ್ ಅಧಿಕಾರಿಯೊಬ್ಬರ ಮಾತನ್ನು ಚೆನ್ನಾಗಿಯೇ ದಾಖಲಿಸಿದ್ದಾರೆ, ‘ಸೈನ್ಯ ಶತ್ರುಗಳನ್ನು ಸೋಲಿಸಲು ಸಮರ್ಥವಾಗಿದೆ. ಆದರೆ ಕಣ್ಣಿಗೇ ಕಾಣದ ಶತ್ರುವಿನೊಂದಿಗೆ ಕಾದಾಡುವುದಾದರೂ ಹೇಗೆ?’ ಮೋದಿ ಈ ಎಲ್ಲಾ ಅರ್ಬನ್ ನಕ್ಸಲರನ್ನು ಕಣ್ಣಿಗೆ ಕಾಣುವಂತೆ ಎದುರಿಗೆ ತಂದು ನಿಲ್ಲಿಸಿದ್ದಾರೆ. ಪ್ರವಾಹ ಬಂದಾಗ ಕೊಡಗು-ಕೇರಳದಲ್ಲಿ ಅಡಗಿದ್ದ ಹಾವುಗಳೆಲ್ಲಾ ಹೊರಬಂದವಲ್ಲಾ ಮೋದಿಯ ಸುನಾಮಿ ಈ ಅರ್ಬನ್ ನಕ್ಸಲರೆಂಬ ವಿಷಸರ್ಪವನ್ನೇ ಎಳೆದು ತಂದು ನಮ್ಮೆದುರಿಗೆ ನಿಲ್ಲಿಸಿದೆ. ‘ಜೀವಪರ’ ಕಾಳಜಿಯಿಂದ ಇವುಗಳನ್ನು ಮತ್ತೆ ಹುತ್ತಕ್ಕೆ ಬಿಡುವಿರೋ ಅಥವಾ ಇತರರ ಒಳಿತಿಗಾಗಿ ಸರಿಯಾದ ಪಾಠ ಕಲಿಸುವಿರೋ ಈಗ ನಿರ್ಧರಿಸಬೇಕಿದೆ ಅಷ್ಟೇ!

Comments are closed.