ವಿಭಾಗಗಳು

ಸುದ್ದಿಪತ್ರ


 

ಮೋದಿ ಹೇಳಿದ್ದು ಕೊನೆಗೂ ಸುಳ್ಳಾಯ್ತಾ?!

ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಶೇಕಡಾ 60 ರಷ್ಟು ಜನ ಶೌಚಾಲಯವನ್ನೇ ಕಂಡಿರಲಿಲ್ಲ. ಇಂದು ಹೆಚ್ಚು-ಕಡಿಮೆ ಶೇಕಡಾ 90 ರಷ್ಟು ಜನಕ್ಕೆ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆಯಿದೆ. ಹಳ್ಳಿಗಳ ಈ ಮನೆಗಳಿಗೆ ಕರೆಂಟು ಬಂದಿದ್ದು ಮೋದಿಯ ಅವಧಿಯಲ್ಲೇ. ಮೋದಿಯವರು ಅಧಿಕಾರ ಸ್ವೀಕರಿಸುವ ಮುನ್ನ ಒಂದು ಅಂದಾಜಿನ ಪ್ರಕಾರ ಶೇಕಡಾ 70 ರಷ್ಟು ಜನಕ್ಕೆ ವಿದ್ಯುತ್ ಲಭ್ಯವಿತ್ತು. ಇಂದು ಈ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ತಂತಿಗಳನ್ನು ಎಳೆಯಲು ನಾವು ಸಕ್ಷಮರಾಗಿದ್ದೇವೆ.

ಪ್ರಧಾನಮಂತ್ರಿ ನರೇಂದ್ರಮೋದಿ ಆಯುಷ್ಮಾನ್ ಭಾರತದ ಯೋಜನೆಯನ್ನು ತಂದಾಗ ಅನೇಕರು ಅದನ್ನು ಜುಮ್ಲಾ ಎಂದು ಕರೆದಿದ್ದರು. ಜುಮ್ಲಾ ಅನ್ನೋದು ಫೇಕ್ ಅನ್ನೋದರ ದೇಸೀ ಪದ. ನರೇಂದ್ರಮೋದಿ ಅವರನ್ನು ಸುಳ್ಳು ಎನ್ನುವುದಷ್ಟೇ ಅಲ್ಲದೇ ಅವರನ್ನು ಬೆಂಬಲಿಸುವ ಪ್ರತಿಯೊಬ್ಬರನ್ನೂ ಸುಳ್ಳುಗಾರರೆಂದು ಹೇಳುವುದು ಕಾಂಗ್ರೆಸ್ಸಿಗೆ ಮತ್ತು ಅವರ ಅನುಯಾಯಿಗಳಿಗೆ ರೂಢಿಯಾಗಿಹೋಗಿಬಿಟ್ಟಿದೆ. ಆದರೆ ಕಾಲಕ್ರಮದಲ್ಲಿ ನರೇಂದ್ರಮೋದಿ ಹೇಳಿದ್ದನ್ನೆಲ್ಲಾ ಮಾಡಿ ತೋರಿಸುತ್ತಿದ್ದಂತೆ ಅವರ ಪುಂಗಿಯೇ ನಿಂತುಹೋಗುತ್ತದೆ. ಆರಂಭದಲ್ಲಿ ಊದಿದ್ದಷ್ಟೇ ಅವರಿಗೆ ಲಾಭ. ಆಯುಷ್ಮಾನ್ ಭಾರತಕ್ಕೆ ಆಯವ್ಯಯದಲ್ಲಿ ಮೋದಿ ಹಣವಿಟ್ಟಾಗ ಚಿದಂಬರಂನಂತಹ ತಥಾಕಥಿತ ಮಹಾನ್ ಆಥರ್ಿಕ ತಜ್ಞರುಗಳೆಲ್ಲಾ ಆಡಿಕೊಂಡು ನಕ್ಕಿದ್ದರು. ಆದರೆ, ಕಾಲಕ್ರಮದಲ್ಲಿ ಈ ಯೋಜನೆ ಬಡವರ ಕೈಗೆಟುಕುವಂತ ಆರೋಗ್ಯದ ಯೋಜನೆಯಾಗಿ ರೂಪುಗೊಳ್ಳುತ್ತಿರುವಾಗ ಇವರ್ಯಾರೂ ಮಾತಾಡುತ್ತಲೇ ಇಲ್ಲ. ಈ ಯೋಜನೆ 1350 ಗಂಭೀರ ಅನಾರೋಗ್ಯದ ಪರಿಸ್ಥಿತಿಗಳನ್ನು ಒಳಗೊಳ್ಳುತ್ತದೆ. ಇದುವರೆಗೂ ಈ ಯೋಜನೆಯ ಮೂಲಕ 3 ಲಕ್ಷಕ್ಕೂ ಹೆಚ್ಚು ಜನ ಫಲ ಪಡೆದುಕೊಂಡಿದ್ದಾರೆ. ಮೊನ್ನೆಯಷ್ಟೇ ತೆರೆದ ಹೃದಯದ ಶಸ್ತ್ರ ಚಿಕಿತ್ಸೆಯೊಂದಕ್ಕೆ ಆಯುಷ್ಮಾನ್ ಭಾರತದ ಯೋಜನೆಯಡಿಯಲ್ಲಿ ಆಗ್ರಾದ ದೇವೇಂದ್ರ ಎನ್ನುವಂತಹ 50 ವರ್ಷದ ವ್ಯಕ್ತಿಗೆ ಈ ಯೋಜನೆಯ ಫಲ ದಕ್ಕಿದೆ. ಕಳೆದ 3 ದಶಕಗಳಿಂದ ಗರೀಬಿ ಹಠಾವೋ ಎಂಬ ಘೋಷಣೆಯನ್ನು ಕೊಟ್ಟು ಅದನ್ನೇ ಪದೇ ಪದೇ ಹೇಳುತ್ತಾ ಬಂದಿದ್ದ ಕಾಂಗ್ರೆಸ್ಸಿನ ನಾಯಕರು, ಬುದ್ಧಿಜೀವಿಗಳೆಲ್ಲಾ ಇಂತಹ ಒಂದಾದರೂ ಯೋಜನೆಗೆ ಎಂದೂ ಕೈ ಹಾಕಿರಲಿಲ್ಲ. ಇಂಗ್ಲೆಂಡಿನ ಜನರನ್ನು ಒಳಗೊಂಡಿರುವ ನ್ಯಾಷನಲ್ ಹೆಲ್ತ್ ಸ್ಕೀಮ್ನಂತಹ ಯೋಜನೆಯನ್ನು ಬಡವರಿಗಾಗಿ ಜಾರಿಗೆ ತಂದು ಅದನ್ನು ವ್ಯವಸ್ಥಿತವಾಗಿ ಕೊನೆ ಹಂತದವರೆಗೂ ಮುಟ್ಟಿಸುವ ಪ್ರಯತ್ನ ಮಾಡಿರುವ ನರೇಂದ್ರಮೋದಿ ಅವರದ್ದು ಅಪರೂಪದ ಸಾಧನೆಯಲ್ಲವೆಂದು ಯಾರು ಹೇಳಲು ಸಾಧ್ಯ ಹೇಳಿ?!

6

ಬರೀ ಇಷ್ಟೇ ಅಲ್ಲ, ಕಾಂಗ್ರೆಸ್ಸು ಭಾರತವನ್ನು ಮೋದಿಯವರ ಕೈಲಿ ಕೊಡುವಾಗ ಶೇಕಡಾ 10ನ್ನು ದಾಟಿದ್ದ ಹಣದುಬ್ಬರವನ್ನು ಹಿಡಿತಕ್ಕೆ ತಂದುಕೊಂಡು ಅದು ಶೇಕಡಾ 4 ದಾಟದಂತೆ ತಾಳಿಕೊಂಡು ಬಂದಿರುವ ಮೋದಿಯವರ ಸಾಧನೆ ಸಾಮಾನ್ಯವಾದದ್ದೇನು? ಕಾಂಗ್ರೆಸ್ಸು ದೇಶವನ್ನು ಮೋದಿಯ ಕೈಗಿಡುವಾಗ ದೇಶದ ಅರ್ಧದಷ್ಟು ಜನ ಮಾತ್ರ ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದರು. ಅದರಲ್ಲೂ ಬಲುದೊಡ್ಡ ಪಾತ್ರ ಅಟಲ್ಜೀಯವರ ಕಾಲದ್ದೇ ಇತ್ತು. ಆದರೆ ಇಂದು ದೇಶದ 90 ಪ್ರತಿಶತಕ್ಕೂ ಹೆಚ್ಚು ಜನ ಗ್ಯಾಸ್ ಬಳಸಿ ಕಟ್ಟಿಗೆಯಂತ ಉರುವಲುಗಳ ಬಳಕೆ ನಿಲ್ಲಿಸಿದ್ದಾರಲ್ಲಾ, ಇದರ ಕಿರೀಟದ ಗರಿ ಯಾರಿಗೆ? ನಾಚಿಕೆಯಾಗಬೇಕು ಕಾಂಗ್ರೆಸ್ಸಿಗೆ. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಶೇಕಡಾ 60 ರಷ್ಟು ಜನ ಶೌಚಾಲಯವನ್ನೇ ಕಂಡಿರಲಿಲ್ಲ. ಇಂದು ಹೆಚ್ಚು-ಕಡಿಮೆ ಶೇಕಡಾ 90 ರಷ್ಟು ಜನಕ್ಕೆ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆಯಿದೆ. ಹಳ್ಳಿಗಳ ಈ ಮನೆಗಳಿಗೆ ಕರೆಂಟು ಬಂದಿದ್ದು ಮೋದಿಯ ಅವಧಿಯಲ್ಲೇ. ಮೋದಿಯವರು ಅಧಿಕಾರ ಸ್ವೀಕರಿಸುವ ಮುನ್ನ ಒಂದು ಅಂದಾಜಿನ ಪ್ರಕಾರ ಶೇಕಡಾ 70 ರಷ್ಟು ಜನಕ್ಕೆ ವಿದ್ಯುತ್ ಲಭ್ಯವಿತ್ತು. ಇಂದು ಈ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ತಂತಿಗಳನ್ನು ಎಳೆಯಲು ನಾವು ಸಕ್ಷಮರಾಗಿದ್ದೇವೆ. ಬಹುಶಃ 2019 ರ ಚುನಾವಣೆಗೂ ಮುನ್ನ ದೇಶದ ಪ್ರತಿಯೊಬ್ಬರ ಮನೆಗೂ ಮೋದಿ ಕರೆಂಟು ಮುಟ್ಟಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಗ್ರಾಮ-ಗ್ರಾಮಗಳಿಗೂ ಇಂದು ಇಂಟರ್ನೆಟ್ಟು ಸರಾಗವಾಗಿ ಸಿಗುತ್ತಿದೆಯಲ್ಲದೇ ಪ್ರತಿಯೊಂದು ಗ್ರಾಮ ಪಂಚಾಯತಿಯನ್ನು ಆಪ್ಟಿಕಲ್ ಫೈಬರ್ ಕೇಬಲ್ಗಳಿಂದ ಸಂಪಕರ್ಿಸುವಂತೆ ಮಾಡಬೇಕೆಂಬ ನರೇಂದ್ರಮೋದಿಯವರ ಕನಸು ಅರ್ಧದಷ್ಟು ಈಡೇರಿದೆ. ಅಂದರೆ ಏನು ಗೊತ್ತೇ? ಮೋದಿ ಅಧಿಕಾರಕ್ಕೆ ಬರುವ ಮುನ್ನ ಶೇಕಡಾ 2ರಷ್ಟಿದ್ದ ಆಪ್ಟಿಕಲ್ ಫೈಬರ್ ನೆಟ್ವಕರ್್ ಇಂದು ಶೇಕಡಾ 50 ಅನ್ನು ದಾಟಿದೆ. ಬ್ಯಾಂಕಿನ ಕುರಿತಂತೆ ನಾನು ಹೇಳಬೇಕಾಗಿಯೇ ಇಲ್ಲ. ದೇಶದ ಅರ್ಧಕ್ಕೂ ಸ್ವಲ್ಪ ಹೆಚ್ಚು ಜನ ಕಾಂಗ್ರೆಸ್ಸಿನ ಅವಧಿಯಲ್ಲಿ ಬ್ಯಾಂಕಿಗೆ ಹೋಗುವ ಅಧಿಕಾರ ಪಡೆದಿದ್ದರು. ಇಂದು ಹೆಚ್ಚು-ಕಡಿಮೆ ದೇಶದ ಪ್ರತಿಯೊಬ್ಬರೂ ಅಕೌಂಟನ್ನು ಹೊಂದಿಕೊಂಡು ಬ್ಯಾಂಕಿನೊಂದಿಗೆ ವಹಿವಾಟು ಮಾಡುತ್ತಾ ಸ್ಥಳೀಯ ಸಾಲಗಾರರಿಂದ ಮುಕ್ತಿ ಪಡೆಯುವ ಸಾಮಥ್ರ್ಯ ಹೊಂದಿದ್ದಾರಲ್ಲ ಇದು ಮೋದಿಯವರದ್ದೇ ಕೆಲಸ.

7

ಮೋದಿಯವರ ಆಗಮನಕ್ಕೆ ಮುನ್ನ 17 ಬಗೆಯ ತೆರಿಗೆಗಳಿದ್ದವು. ಇಂದು ಜಿಎಸ್ಟಿ ಒಂದು ಕಟ್ಟಿದರೆ ಸಾಕು. ರಸ್ತೆಗಳ ನಿಮರ್ಾಣದ ವೇಗ ಹಿಂದೆಂದಿಗಿಂತಲೂ ತೀವ್ರವಾಗಿದೆಯಲ್ಲದೇ ಹೆದ್ದಾರಿಗಳ ನಿಮರ್ಾಣವಷ್ಟೇ ಅಲ್ಲದೇ ಅನೇಕ ಕಾರಿಡಾರ್ಗಳ ನಿಮರ್ಾಣಕ್ಕೂ ಮೋದಿ ಕೈ ಹಾಕಿ ಯಶಸ್ವಿಯಾದರು. ಕಾಂಗ್ರೆಸ್ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ದಿನಕ್ಕೆ 12 ಕಿ.ಮೀ ವೇಗದಲ್ಲಿ ಹೆದ್ದಾರಿ ನಿಮರ್ಾಣಗೊಳ್ಳುತ್ತಿದ್ದರೆ, ಇಂದು ದಿನಕ್ಕೆ 27 ಕಿ.ಮೀ ವೇಗದಲ್ಲಿ ಅದು ಧಾವಿಸುತ್ತಿದೆ. ಅದರರ್ಥ ಹೆದ್ದಾರಿ ನಿಮರ್ಾಣ ಒಂದರಲ್ಲೇ ಕಾಂಗ್ರೆಸ್ಸಿಗಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ಈ ಸಕರ್ಾರ ಕೆಲಸ ಮಾಡುತ್ತಿದೆ. ಗ್ರಾಮೀಣ ರಸ್ತೆಗೂ ಇದು ಹೊರತಾಗಿಲ್ಲ. ಪ್ರತಿದಿನ 69 ಕಿ.ಮೀನಷ್ಟು ವೇಗದಲ್ಲಿದ್ದ ರಸ್ತೆ ನಿಮರ್ಾಣ ಇಂದು 134 ಕಿ.ಮೀ ದಾಟಿದೆ. ಗಡಿತುದಿಯ ರಸ್ತೆಗಳು ನಿಮರ್ಾಣಗೊಂಡಿದ್ದು, ದುರಸ್ಥಿಗೊಂಡಿತ್ತು ಈ ಹೊತ್ತಿನಲ್ಲಿಯೇ. ಮೋದಿಯವರ ಆಗಮನದ ನಂತರವೇ 75,000 ಮಾರಾಟವಾಗುತ್ತಿದ್ದ ಲೋಹದ ಹೃದಯ ಸ್ಟಂಟುಗಳು ಇಂದು 8000ಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿವೆ. ಜನರಿಕ್ ಔಷಧಗಳು ಬಂದ ನಂತರವಂತೂ ಹಿರಿಯರ ಬದುಕು ಸರಳವೆನಿಸಿದೆ. ಮತ್ತು ಯಾರ ಮೇಲೂ ನಿರ್ಭರವಾಗದ ಸ್ವಾಭಿಮಾನವನ್ನು ಅವರಿಗೆ ತುಂಬಿದೆ. ವಯಸ್ಸು ಯಾರಿಗೆ ಆಗುವುದಿಲ್ಲ ಹೇಳಿ? ಹಾಗೆ ವಯಸ್ಸಾಗಿ ಕೆಲಸ ಮಾಡಲು ಸಾಧ್ಯವಾಗದೇ ಹೋದಾಗ ಸಕರ್ಾರಿ ನೌಕರರಿಗೆ ಮಾತ್ರ ಪೆನ್ಷನ್ ಸಿಗುವ ಹೊಟ್ಟೆಉರಿ ಎಲ್ಲರಿಗೂ ಇದ್ದದ್ದೇ. ಅದಕ್ಕೆ ಮೋದಿ ಜಾರಿಗೆ ತಂದ ಪೆನ್ಷನ್ ಯೋಜನೆ ಪ್ರತಿಯೊಬ್ಬ ಬಡವನಿಗೂ ಜೀವತುಂಬುವ ಯೋಜನೆಯೇ ಸರಿ.

8

ಇಷ್ಟನ್ನೂ ಹೇಳಿದ್ದೇಕೆಂದರೆ ಮೋದಿಯ ಬಗ್ಗೆ ಮಾತನಾಡುವಾಗಲೆಲ್ಲಾ ಅನೇಕರು ವಿದೇಶಕ್ಕೆ ತಿರುಗಾಡಿ ಮೋದಿ ಸಾಕಷ್ಟು ಮಾಡಿದರು ಭಾರತೀಯರಿಗಾಗಿ ಮಾಡಿದ್ದೇನು ಎನ್ನುತ್ತಾರೆ. ಅವರಿಗೆಲ್ಲಾ ಅರ್ಥವಾಗಲಿಕ್ಕೆಂದು ಅಷ್ಟೇ. ಲೇಖನ ಪದಗಳ ಮಿತಿ ಮುಗಿಯಿತೆಂಬ ಕಾರಣಕ್ಕೆ ಇಲ್ಲಿಗೇ ನಿಲ್ಲಿಸಬೇಕು. ಇಲ್ಲದೇ ಹೋದರೆ ಈ ಐದು ವರ್ಷಗಳಲ್ಲಿ ಮೋದಿ ಮಾಡಿದ ಕೆಲಸ ಹೇಳಲಿಕ್ಕೆ ಬೆಟ್ಟದಷ್ಟಿದೆ. ಕಾಂಗ್ರೆಸ್ಸಿನವರಿಗೆ ಉರಿ ಎನಿಸೋದು ಅದಕ್ಕೇ. ಮೋದಿ ಇಟ್ಟಿರುವ ಪ್ರಗತಿಯ ಅಸಲಿ ಮಿಚರ್ಿಯ ಖಾರವನ್ನು ತಡೆದುಕೊಳ್ಳುವ ತಾಕತ್ತು ಬಡಪಾಯಿ ರಾಹುಲನಿಗೂ ಅವನ ಪಾಪದ ಅನುಯಾಯಿಗಳಿಗೂ ಖಂಡಿತ ಇಲ್ಲ.

Comments are closed.