ವಿಭಾಗಗಳು

ಸುದ್ದಿಪತ್ರ


 

ಯೋಗಿಯ ಸೋಲಿಸಲು ಭೋಗಿಗಳೆಲ್ಲ ಒಂದಾಗಬೇಕಾಯ್ತು!

ಮಾಚರ್್ 19 ರಂದು ಪ್ರಮಾಣ ವಚನ ಸ್ವೀಕರಿಸಿದ ಯೋಗಿಜಿ ವಿಕಾಸಕ್ಕಾಗಿ ಮತ್ತು ಅಪರಾಧ ಮುಕ್ತ ಉತ್ತರ ಪ್ರದೇಶಕ್ಕಾಗಿ ಪಣತೊಟ್ಟು ನಿಂತರು. ಕನಿಷ್ಠ 15 ವರ್ಷಗಳಿಂದ ಭ್ರಷ್ಟಾಚಾರ ವಂಶವಾದ, ಜಾತಿವಾದ ಇವುಗಳಲ್ಲಿ ನರಳಿದ್ದ ಉತ್ತರ ಪ್ರದೇಶವನ್ನು ಸಮರ್ಥವಾಗಿ ಕಟ್ಟುವ ನಿಶ್ಚಯವನ್ನಂತೂ ಅವರು ಮಾಡಿದ್ದರು. ಹಾಗಂತ ಹಿಂದುತ್ವವಾದದಿಂದ ಒಂದಿನಿತೂ ದೂರಸರಿಯಲಾರೆನೆಂಬ ಭರವಸೆಯನ್ನೂ ಅವರು ಕೊಟ್ಟಿದ್ದರು.

ಎಷ್ಟು ಬೇಗನೇ ಒಂದು ವರ್ಷ ಆಗಿಹೋಯ್ತು. ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದಾಗ ಇಡಿಯ ದೇಶದಲ್ಲಿ ಸಂಚಲನ ಉಂಟಾಗಿತ್ತು. ಕಾವಿ ಧಾರಿ ಸಂತನೊಬ್ಬ ಮುಖ್ಯಮಂತ್ರಿಯಾಗಿದ್ದು ಅನೇಕರಿಗೆ ಸಂಭ್ರಮದ ಸಂಗತಿಯಾದರೆ, ಕೆಲವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಕಾವಿಧಾರಿಗಳು ಮುಖ್ಯಮಂತ್ರಿಯಾಗಬಹುದೇ? ತ್ಯಾಗದ ಚಿಂತನೆಯಿಂದ ಸಂನ್ಯಾಸಿಯಾದವರು ಅಧಿಕಾರಕ್ಕೆ ಅಂಟಿಕೊಳ್ಳಬಹುದೇ? ಎಂದೆಲ್ಲ ನೈತಿಕ ಪ್ರಜ್ಞೆಯ ಮಾತುಗಳನ್ನಾಡಿದ್ದರು. 26 ನೇ ವಯಸ್ಸಿಗೆ ಗೋರಖ್ಪುರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥರು ಜನರ ಪ್ರೀತಿಯನ್ನೇ ಗಳಿಸಿ ಅಲ್ಲಿಂದಾಚೆಗೆ ಬಿಟ್ಟೂಬಿಡದೇ ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾದರು. 16 ನೇ ಲೋಕಸಭೆಯಲ್ಲಿ ಅವರ ಹಾಜರಿ ಶೇಕಡಾ 77 ರಷ್ಟಿದ್ದು 284 ಪ್ರಶ್ನೆಗಳನ್ನು ಕೇಳಿದ್ದರು. 56 ಚಚರ್ೆಗಳಲ್ಲಿ ಭಾಗವಹಿಸಿದ್ದರು. ಪಾಲರ್ಿಮೆಂಟನ್ನು ನಡೆಯಲು ಬಿಡದೇ ಪ್ರಧಾನಮಂತ್ರಿಯ ಭಾಷಣದ ನಡುವೆ ಅರಚಾಡುವ ಕಾಂಗ್ರೆಸ್, ಕಮ್ಯುನಿಷ್ಟರು ಯೋಗಿಜಿಯಿಂದ ಪಾಠ ಕಲಿಯುವುದು ಬಿಟ್ಟು ಅವರನ್ನು ಮುಖ್ಯಮಂತ್ರಿ ಮಾಡಿದ್ದರ ವಿರುದ್ಧ ಕೂಗಾಡಿದ್ದರು. ಯೋಗಿ ಆದಿತ್ಯನಾಥರದ್ದು ವಿಚಲಿತವಾಗುವ ವ್ಯಕ್ತಿತ್ವವೇನಲ್ಲ. ಈ ಹಿಂದೆಯೂ ಬಿಜೆಪಿ ತನ್ನ ಮೂಲ ಚಿಂತನೆಯಿಂದ ದೂರ ಸರಿದಾಗ ಆಕ್ರೋಶಗೊಂಡು ಯುವಾವಾಹಿನಿಯನ್ನು ಕಟ್ಟಿಕೊಂಡು ಅಧಿಕೃತ ಬಿಜೆಪಿ ಅಭ್ಯಥರ್ಿಗಳ ವಿರುದ್ಧವೇ ತಮ್ಮ ಬಳಗದವರನ್ನು ಹಾಕಿ ಪ್ರತಿಭಟಿಸಿದ್ದರು. ಇವೆಲ್ಲಾ ಸೈದ್ಧಾಂತಿಕ ಯುದ್ಧ. ಇದು ಅಧಿಕಾರ ಪಡೆಯಲು ಹಣ ಗಳಿಸಲು ಮಾಡುವ ತಂತ್ರಗಾರಿಕೆಯಲ್ಲ. ಹೀಗಾಗಿಯೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಯಾರೂ ಊಹಿಸದಷ್ಟು ಬಹುಮತ ಪಡೆದ ಭಾಜಪಾ ಯೋಗಿ ಆದಿತ್ಯನಾಥರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತ್ತು. ಮೋದಿಯವರು ಉತ್ತರ ಪ್ರದೇಶದಲ್ಲಿ ವಿಕಾಸಕ್ಕೆ ಬೇಕಾಗಿರುವ ಎಲ್ಲ ಯೋಜನೆಗಳನ್ನು ರೂಪಿಸುವುದಕ್ಕಾಗಿ ತಾವೇ ಆಯ್ದ ಅಧಿಕಾರಿಗಳನ್ನು ಆದಿತ್ಯನಾಥರ ಸಹಕಾರಕ್ಕೆಂದು ಕಳಿಸಿಕೊಟ್ಟರು.

1

ಮಾಚರ್್ 19 ರಂದು ಪ್ರಮಾಣ ವಚನ ಸ್ವೀಕರಿಸಿದ ಯೋಗಿಜಿ ವಿಕಾಸಕ್ಕಾಗಿ ಮತ್ತು ಅಪರಾಧ ಮುಕ್ತ ಉತ್ತರ ಪ್ರದೇಶಕ್ಕಾಗಿ ಪಣತೊಟ್ಟು ನಿಂತರು. ಕನಿಷ್ಠ 15 ವರ್ಷಗಳಿಂದ ಭ್ರಷ್ಟಾಚಾರ ವಂಶವಾದ, ಜಾತಿವಾದ ಇವುಗಳಲ್ಲಿ ನರಳಿದ್ದ ಉತ್ತರ ಪ್ರದೇಶವನ್ನು ಸಮರ್ಥವಾಗಿ ಕಟ್ಟುವ ನಿಶ್ಚಯವನ್ನಂತೂ ಅವರು ಮಾಡಿದ್ದರು. ಹಾಗಂತ ಹಿಂದುತ್ವವಾದದಿಂದ ಒಂದಿನಿತೂ ದೂರಸರಿಯಲಾರೆನೆಂಬ ಭರವಸೆಯನ್ನೂ ಅವರು ಕೊಟ್ಟಿದ್ದರು. ಅಧಿಕಾರ ಸ್ವೀಕರಿಸಿದ ಕೆಲವು ದಿನಗಳಲ್ಲಿಯೇ ಉತ್ತರ ಪ್ರದೇಶದಲ್ಲಿದ್ದ ಕಾನೂನುಬಾಹಿರ ಕಸಾಯಿಖಾನೆಗಳನ್ನು ನಿಷೇಧಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರು. ಮೊದಲ ಬಜೆಟ್ನಲ್ಲೇ ಕಬ್ಬು ಬೆಳೆಗಾರರ 23,000 ಕೋಟಿ ರೂಪಾಯಿ ಬಾಕಿ ಹಣವನ್ನು ತೀರಿಸಿ ರೈತರ 36,500 ಕೋಟಿ ಸಾಲ ಮನ್ನಾ ಮಾಡಿ ಬಲುದೊಡ್ಡ ಹೊರೆಯನ್ನು ಮೈಮೇಲೆಳೆದುಕೊಂಡಿದ್ದರು. ರಸ್ತೆ ಮತ್ತು ವಿದ್ಯುತ್ ಈ ವಿಚಾರದಲ್ಲಿ ಬಲು ಸೂಕ್ಷ್ಮವಾಗಿ ಹೆಜ್ಜೆಯಿಟ್ಟ ಯೋಗಿಜಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಮಟ್ಟಹಾಕುವುದಕ್ಕೆ ತಮ್ಮ ಗಮನ ಹರಿಸಿದರು. ಕಳೆದ ಒಂದು ವರ್ಷದಲ್ಲಿ 1322 ಎನ್ಕೌಂಟರ್ಗಳು ನಡೆದಿದ್ದು 44 ಕ್ರಿಮಿನಲ್ಗಳು ಸಾವನ್ನಪ್ಪಿದ್ದಾರೆ. ಹೊಸದಾಗಿ ನೇಮಕವಾದ ಡಿಜಿಪಿ ಓ.ಪಿ.ಸಿಂಗ್ ಮುಖ್ಯಮಂತ್ರಿಗಳ ಕನಸನ್ನು ನನಸು ಮಾಡುವಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಈ ಎಲ್ಲ ಪ್ರಯತ್ನಗಳಿಂದಾಗಿ ಅಖಿಲೇಶ್ ಯಾದವ್ನ ಕಾಲಕ್ಕೆ ಗೂಂಡಾರಾಜ್ಗೆ ಹೆಸರು ವಾಸಿಯಾಗಿದ್ದ ಉತ್ತರ ಪ್ರದೇಶ ಏಕಾಕಿ ಬದಲಾಗಲಾರಂಭಿಸಿತ್ತು. ತನ್ನ ಹುಡುಕಿ ಕೊಟ್ಟವರಿಗೆ 25,000 ರೂಗಳ ಬಹುಮಾನವನ್ನು ತಲೆಗೆ ಹೊತ್ತಿದ್ದ ಗ್ಯಾಂಗ್ಸ್ಟರ್ ಇಂದರ್ಪಾಲ್ ಪೊಲೀಸರೊಂದಿಗಿನ ಕಾದಾಟದಲ್ಲಿ ಹೆಣವಾಗಿ ಉರುಳಿದ. ಬುಲಂದ್ ಶಹರ್ ಮತ್ತು ಶ್ಯಾಮಲಿ ಭಾಗಗಳಿಂದ ಅತ್ಯಂತ ಹೆಚ್ಚು ಅಪರಾಧಿಗಳ ಬಂಧನವಾಗಿತ್ತು. ಈ ಕದನದಲ್ಲಿ 4 ಪೊಲೀಸರು ಅಸುನೀಗಿದ್ದರು ಮತ್ತು 283 ಕ್ಕೂ ಹೆಚ್ಚು ಜನ ಗಾಯಾಳುಗಳಾಗಿದ್ದರು. ಇವೆಲ್ಲದರ ಒಟ್ಟು ಪರಿಣಾಮವೇನು ಗೊತ್ತೇ?! ಈಗ ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಮುಕ್ತವಾಗಿ ತಿರುಗುವುದು ಬಿಡಿ, ‘ನಾನು ಅಪರಾಧಗಳನ್ನೆಲ್ಲಾ ಬಿಟ್ಟುಬಿಟ್ಟಿದ್ದೇನೆ. ನನ್ನ ತಪ್ಪನ್ನು ಮನ್ನಿಸಿ. ಕೊಲ್ಲಬೇಡಿ’ ಎಂಬ ಬೋಡರ್ು ನೇತಾಡಿಸಿಕೊಂಡಿರುತ್ತಾರೆ. ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದ ಅಪರಾಧಿಗಳಲ್ಲನೇಕರು ಎನ್ಕೌಂಟರ್ ಭಯಕ್ಕೆ ತುತ್ತಾಗಿಯೇ ತಾವೇ ತಾವಾಗಿ ಬಂದು ಪೊಲೀಸರಿಗೆ ಶರಣಾಗುತ್ತಿದ್ದಾರೆ. ಅನೇಕರಂತೂ ಅಪರಾಧ ಜಗತ್ತಿನಿಂದಲೇ ಹೊರಗೆ ಬಂದು ರಸ್ತೆ ಬದಿಯಲ್ಲಿ ಹಣ್ಣು-ಹಂಪಲು ಮಾರಾಟ ಮಾಡುವ ಕೆಲಸ ಶುರುಮಾಡಿದ್ದಾರೆ. ಉತ್ತರ ಪ್ರದೇಶ ಈಗ ಕನರ್ಾಟಕಕ್ಕಿಂತಲೂ ಸೇಫ್! ಅಲ್ಲಿ ಗೃಹ ಸಚಿವರು ಯಾರದ್ದಾದರು ಕೊಲೆಯ ಆರೋಪವನ್ನು ಸ್ಕ್ರೂ ಡ್ರೈವರ್ನ ಮೇಲಂತೂ ಹೊರಿಸುವುದಿಲ್ಲ.

ಈ ಬಾರಿ ಉತ್ತರ ಪ್ರದೇಶದ ಪರೀಕ್ಷೆಗಳು ಬಲು ಕಟ್ಟುನಿಟ್ಟಾಗಿಯೇ ನಡೆದಿವೆ. ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ನಕಲು ಮುಕ್ತ ಮಾಡಲಿಕ್ಕೆಂದು ಕಳೆದ ಸಪ್ಟೆಂಬರ್ನಲ್ಲೇ ಯೋಗಿಜಿ ತಯಾರಿ ಶುರುಮಾಡಿದ್ದರು. ನಕಲು ಮಾಡುವಲ್ಲಿ ನಿಸ್ಸೀಮವಾಗಿರುವ 1934 ಶಾಲೆಗಳನ್ನು ಗುರುತಿಸಿ ಅವುಗಳನ್ನು ಪರೀಕ್ಷಾ ಕೇಂದ್ರದ ಮಾನ್ಯತೆಯಿಂದ ಹೊರಗಿಡಲಾಗಿತ್ತು. ಸಿಸಿ ಟಿವಿಗಳನ್ನು ಅಳವಡಿಸಿ ನಕಲು ಮಾಡುವ ವಿದ್ಯಾಥರ್ಿಗಳು ಮತ್ತು ಅವರಿಗೆ ಬೆಂಬಲ ನೀಡುವವರಿಗೆ ಕಠಿಣ ಶಿಕ್ಷೆಯನ್ನು ನೀಡುವ ಯೋಜನೆಯನ್ನೂ ರೂಪಿಸಲಾಗಿತ್ತು. ಅದರ ಪರಿಣಾಮದಿಂದಲೇ ಈ ವರ್ಷ ಲಕ್ಷಾಂತರ ವಿದ್ಯಾಥರ್ಿಗಳು ಪರೀಕ್ಷೆಗೆ ಗೈರು ಹಾಜರಾದರು. ಕಳೆದ ವರ್ಷವೆಲ್ಲ ವಿದ್ಯಾಥರ್ಿಯೊಬ್ಬ ಒಳಹೊಕ್ಕರೆ ಅವನ ಸಹಾಯಕ್ಕೆಂದು ನಿಲ್ಲುತ್ತಿದ್ದ ಅವನ ಬಂಧು-ಮಿತ್ರ ಪರಿವಾರವೆಲ್ಲವೂ ಈ ಬಾರಿ ಪರೀಕ್ಷಾ ಕೇಂದ್ರದಿಂದ 400 ಮೀಟರ್ ದೂರದಲ್ಲಿತ್ತು.

2

ಶಿಸ್ತನ್ನು ಶಿಕ್ಷೆ ನೀಡಿಯೇ ಅಭ್ಯಾಸ ಮಾಡಿಸಬೇಕೆಂಬುದು ದುದರ್ೈವದ ಸಂಗತಿಯೇ ಸರಿ. ತಮ್ಮ ಸಂನ್ಯಾಸದ ಬದುಕನ್ನು ಕಠಿಣ ಪ್ರಯೋಗಗಳ ಮೂಲಕ ರೂಪಿಸಿಕೊಂಡಿರುವ ಯೋಗಿಜೀಗೆ ರಾಜ್ಯವನ್ನೂ ಕೂಡ ಶಿಸ್ತಿನ ವ್ಯಾಪ್ತಿಗೆ ತರುವಲ್ಲಿ ಬಹು ಸಮಯ ಹಿಡಿಯಲಿಲ್ಲ. ಹಾಗಂತ ಅವರು ಲಾಠಿ ಹಿಡಿದು ನಿಂತಿದ್ದಷ್ಟೇ ಅಲ್ಲ. ವಿಕಾಸದ ದೃಷ್ಟಿಯಿಂದಲೂ ತಮ್ಮ ಬಾಹುಗಳನ್ನು ಹಬ್ಬಿಸಿದರು. ಅನೇಕ ಫ್ಲೈಓವರ್ಗಳು ನಿಮರ್ಾಣಗೊಂಡವು. ರಿಂಗ್ ರಸ್ತೆ ಕಾಮಗಾರಿ ತ್ವರಿತಗೊಂಡಿತು. ಕಳೆದ ಆರು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ವಿದ್ಯುತ್ನ ಪರಿಸ್ಥಿತಿಯೂ ಬಹಳ ಸುಧಾರಿಸಿದೆ. ಗೋಮತಿ ನದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಕರ್ಾರದ ಯೋಜನೆಗಳು ಯಶಸ್ಸು ಕಂಡಿವೆ. ಯಾವ ಉತ್ತರ ಪ್ರದೇಶವನ್ನು ಒಂದು ಕಾಲದಲ್ಲಿ ಗಾಬರಿ ಪಟ್ಟು ಜನ ನೋಡುತ್ತಿದ್ದರೋ ಆ ಉತ್ತರ ಪ್ರದೇಶ ಇಂದು ಅಚ್ಚರಿಯ ಕಂಗಳಿಂದ ನೋಡುವಂತಾಗಿದೆ. ಅದರ ಪರಿಣಾಮವಾಗಿಯೇ ಕಳೆದ ತಿಂಗಳ 21 ಮತ್ತು 22 ರಂದು ನಡೆದ ಹೂಡಿಕೆದಾರರ ಸಮಾವೇಶ ಅಂದುಕೊಂಡಿದ್ದಕ್ಕಿಂತ ಯಶಸ್ಸು ಪಡೆಯಿತು. ಮೊದಲ ದಿನವೇ ನಾಲ್ಕುವರೆ ಲಕ್ಷ ಕೋಟಿಯಷ್ಟು ಹೂಡಿಕೆಯ ಒಪ್ಪಂದಕ್ಕೆ ಸಹಿ ಬಿದ್ದು ಇಡಿ ದೇಶವನ್ನು ಅಚ್ಚರಿಗೆ ನೂಕಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಪ್ರಧಾನಮಂತ್ರಿ ಮೋದಿ ಉತ್ತರ ಪ್ರದೇಶದಲ್ಲೊಂದು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕಾರಿಡಾರ್ ನಿಮರ್ಾಣದ ಕಲ್ಪನೆಯನ್ನು ಮುಂದಿಟ್ಟರು. ಅನುಮಾನವೇ ಇಲ್ಲ. ಈ ಎಲ್ಲಾ ಯಶಸ್ಸಿನ ಹಿಂದೆ ಇದ್ದದ್ದು ಸ್ವತಃ ಯೋಗಿ ಆದಿತ್ಯನಾಥರೇ. ಹೂಡಿಕೆ ಸಮಾವೇಶದ ಕುರಿತ ಜಾಹಿರಾತುಗಳನ್ನು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಕೊಟ್ಟು ಸುಮ್ಮನಾಗದೇ ಬೆಂಗಳೂರು, ದೆಹಲಿ, ಅಹ್ಮದಾಬಾದ್, ಹೈದರಾಬಾದ್, ಕೋಲ್ಕತ್ತಾ, ಮುಂಬೈಗಳಲ್ಲಿ ರೋಡ್ ಶೋ ನಡೆಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಲು ಮತ್ತು ದೇಶ-ವಿದೇಶಗಳ ಉದ್ದಿಮೆದಾರರನ್ನು ಆಕಷರ್ಿಸಲು ಸಾಕಷ್ಟು ಪ್ರಯಾಸ ಪಟ್ಟರು. ದೇಶ-ವಿದೇಶದಿಂದ ಬಂದಿದ್ದ 5000 ಕ್ಕೂ ಹೆಚ್ಚು ಉದ್ದಿಮೆದಾರರೆದುರು ಮಾತನಾಡುತ್ತಾ ಯೋಗಿಜೀ ತಮ್ಮದೇ ಶೈಲಿಯಲ್ಲಿ, ‘ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ನನ್ನ ಪಾಲಿಗಿರಲಿ. ಕಾಖರ್ಾನೆಗಳನ್ನು ಶುರುಮಾಡಿ ಕೆಲಸ ಕೊಡಿಸುವ ಹೊಣೆ ನೀವು ಹೊತ್ತುಕೊಂಡರೆ ಸಾಕು’ ಎಂದಿದ್ದರು.

ಒಂದು ಕಾಲದಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಇತರೆಲ್ಲ ರಾಜ್ಯಗಳಿಗಿಂತ ಹಿಂದುಳಿದಿದ್ದ ಉತ್ತರ ಪ್ರದೇಶ ಈಗ ಬದಲಾವಣೆಯ ಹೊಸ್ತಿಲಲ್ಲಿ ನಿಂತಿದೆ. 15 ವರ್ಷಗಳ ದುರಾಡಳಿತದ ನಂತರ ದೇಶದ ಅತಿದೊಡ್ಡ ರಾಜ್ಯವೊಂದು ಈಗ ನೆಮ್ಮದಿಯ ಉಸಿರಾಡುತ್ತಿದೆ. ಸಂನ್ಯಾಸಿಗಳು, ತ್ಯಾಗಿಗಳು ಅಧಿಕಾರದ ಚುಕ್ಕಾಣಿ ಹೊರುವುದೆಂದರೆ ಅದು ಹೀಗೆಯೇ. ಅವರಿಗೆ ಸ್ವಂತ ಮಾಡಿಕೊಳ್ಳಬೇಕೆಂಬ ತುಡಿತವಿರುವುದಿಲ್ಲ. ಯಾರಿಗಾದರೂ ಹೆದರಬೇಕಾದ ಅನಿವಾರ್ಯತೆಯೂ ಇಲ್ಲ. ಯೋಗಿ ರಾಜಮಾರ್ಗದಲ್ಲಿ ಗೂಳಿಯಂತೆ ಮುನ್ನುಗ್ಗುತ್ತಿದ್ದಾರೆ. ಸಂನ್ಯಾಸದ ಅವಧಿಯುದ್ದಕ್ಕೂ ಕಲಿತ ವೀರತೆಯ ಪಾಠವನ್ನು ಸಮಾಜಕ್ಕಾಗಿ ಪ್ರಯೋಗಿಸುತ್ತಿದ್ದಾರೆ. ಶಿವಾಜಿ ಮತ್ತು ರಾಮದಾಸರು ಒಂದೇ ವ್ಯಕ್ತಿಯೊಳಗೆ ಇಣುಕಿರುವಂತೆ ಇದೆ ಯೋಗಿಜಿ. ಹಾಗಂತ ಯೋಗಿಯನ್ನು ಸಾಮಾನ್ಯರೆಂದೇನೂ ಭಾವಿಸಬೇಡಿ. ಅಧಿಕಾರಕ್ಕೆ ಬಂದ ಆರಂಭದಲ್ಲೇ ಹಳೆಯ ಸಕರ್ಾರಗಳ ಕುರುಹುಗಳಿರುವಂತಹ ಎಲ್ಲ ಹೆಸರುಗಳನ್ನು ತೆಗೆದು ಬಿಸಾಡಿದರು. ಈ ದೇಶದ ಅನೇಕ ಪಕ್ಷಗಳಿಗೆ ಅದೊಂದು ಹುಚ್ಚು. ತೆರಿಗೆಯ ದುಡ್ಡಿನಲ್ಲಿ ಜನೋಪಯೋಗಿ ಯೋಜನೆಗಳನ್ನು ರೂಪಿಸಿದರೂ ಅದಕ್ಕೆ ತಮ್ಮ ಮತ್ತು ತಮ್ಮವರ ಹೆಸರುಗಳನ್ನಿಟ್ಟುಬಿಡುತ್ತಾರೆ. ಅಖಿಲೇಶ್ ಸಕರ್ಾರದ ಎಲ್ಲ ಯೋಜನೆಗಳೂ ಸಮಾಜವಾದಿ ಎಂಬ ಪೂರ್ವನಾಮದೊಂದಿಗೇ ರೂಪುಗೊಂಡಿತ್ತು. ಸಮಾಜವಾದಿ ಪೆನ್ಷನ್ ಸ್ಕೀಮ್, ಸಮಾಜವಾದಿ ಆಂಬುಲೆನ್ಸ್, ಸಮಾಜವಾದಿ ಹೌಸಿಂಗ್ ಸ್ಕೀಮ್ ಜೊತೆಗೆ ಅಖಿಲೇಶನ ಭಾವಚಿತ್ರವುಳ್ಳ ಸಮಾಜವಾದಿ ರೇಷನ್ ಕಾಡರ್್ ಕೂಡ! ಕಂಡ ಕಂಡಲ್ಲಿ ಸಿದ್ದರಾಮಯ್ಯನವರ ಚಿತ್ರವನ್ನೇ ನೋಡುತ್ತಿರುವ ಕನ್ನಡಿಗರಿಗೆ ಇದೇನು ವಿಶೇಷವೆನಿಸಲಾರದು. ಆದರೆ, ತೆರಿಗೆ ಹಣದಲ್ಲಿ ಹೀಗೆ ಪಕ್ಷಗಳು, ವ್ಯಕ್ತಿಗಳು ವೈಭವದಿಂದ ಮೆರೆಯುವುದನ್ನು ಸಹಿಸದ ಯೋಗಿಜಿ ಎಲ್ಲ ಯೋಜನೆಗಳಲ್ಲೂ ಸಮಾಜವಾದಿ ಎಂಬ ಹೆಸರನ್ನು ತೆಗೆದು ಮುಖ್ಯಮಂತ್ರಿ ಯೋಜನೆ ಎಂದು ಮಾಡಿದರು. ಅಷ್ಟೇ ಅಲ್ಲ. ಯಾವ ಯಾವ ಯೋಜನೆಗಳಲ್ಲಿ ಬೇನಾಮಿದಾರರು ಫಲಾನುಭವಿಗಳಾಗಿದ್ದರೋ ಅಂಥವರನ್ನು ಗುರು-ಗುರುತಿಸಿ ಹೊರದಬ್ಬಲಾಯಿತು.

3

ಉತ್ತರ ಪ್ರದೇಶ ನಿಧಾನವಾಗಿ ಬದಲಾವಣೆಯ ಉಸಿರಾಡುತ್ತಿದೆ. ಎಲ್ಲ ದಿಕ್ಕಿನಿಂದಲೂ ಬೆಳವಣಿಗೆಗೆ ಅಣಿಯಾಗುತ್ತಿದೆ. ಅಲ್ಲಿ ಯೋಗಿಜಿ ಒಂದು ವರ್ಷದ ವರದಿ ಕೊಡುತ್ತಿರುವಂತೆ ಕನರ್ಾಟಕ ಸಕರ್ಾರ ಐದು ವರ್ಷಗಳನ್ನು ಮುಗಿಸಿ ಚುನಾವಣೆಗೆ ಸಜ್ಜಾಗುತ್ತಿದೆ. ಸುಂದರವಾಗಿದ್ದ ರಸ್ತೆಗಳು ಗಬ್ಬೆದ್ದು ಹೋಗಿವೆ. ಅಪರಾಧ ಮಿತಿ ಮೀರಿ ಬದುಕುವುದೇ ದುಸ್ತರವೆನ್ನುವ ಮಟ್ಟಿಗೆ ಬಂದಿದೆ. ಶಾಸಕರ ಮಕ್ಕಳು ಯಾರನ್ನು ಬೇಕಿದ್ದರೂ ಎಲ್ಲಿ ಬೇಕಿದ್ದರೂ ತದುಕಬಹುದು ಎಂಬ ಅಘೋಷಿತ ನಿಯಮ ರೂಪುಗೊಂಡಂತಿದೆ. ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿ ಹೋಗುವುದು ಅತ್ಯಂತ ಸಾಮಾನ್ಯವಾಗಿದೆ. ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ, ನೀರಿನ ಸಮಸ್ಯೆಗೂ ಪರಿಹಾರ ದಕ್ಕಿಲ್ಲ. ಉತ್ತರ ಪ್ರದೇಶ ವಿಕಾಸದ ಓಟದಲ್ಲಿ 15 ವರ್ಷಗಳ ತಪ್ಪನ್ನು ತಿದ್ದುಕೊಂಡು ಮುನ್ನಡೆಯುತ್ತಿದ್ದರೆ ನಾವು ಕಳೆದ ಐದು ವರ್ಷಗಳಲ್ಲಿ ರಿವಸರ್್ ಗೇರ್ನಲ್ಲಿ ಓಡುತ್ತಿದ್ದೇವೆ. ಇನ್ನಾದರೂ ಕನರ್ಾಟಕಕ್ಕೊಬ್ಬ ಸಮರ್ಥ ನಾಯಕ ಬೇಕಾಗಿದ್ದಾನೆ. ಯೋಗಿಯನ್ನು ನೋಡಿದ ಮೇಲೆ ಎಂಥವನಿಗೂ ಹಾಗನ್ನಿಸುವುದು ಸಹಜ.

Comments are closed.