ವಿಭಾಗಗಳು

ಸುದ್ದಿಪತ್ರ


 

ಯೋಗಿ; ಎನ್ಕೌಂಟರ್ ಸಾಲಿಗೆ ಮತ್ತೊಂದು!

ವಿಕಾಸ್ ಸಾಮಾನ್ಯ ಆಸಾಮಿಯಲ್ಲ. ಕಾನ್ಪುರದ ಬಿಕ್ರು ಗ್ರಾಮದ ನಿವಾಸಿಯಾದ ಆತ ಬಾಲ್ಯದಿಂದಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ಆದರೆ ಬುದ್ಧಿವಂತ. ಓದಲೆಂದು ಸಂಬಂಧಿಕರ ಮನೆಗೆ ಹೋಗಿದ್ದ. ಆದರೆ ಶಾಲೆಗಿಂತ ಹೆಚ್ಚು ಹೊರಗೇ ಸಮಯ ಕಳೆಯುತ್ತಿದ್ದ. 25ನೇ ವಯಸ್ಸಿನ ವೇಳೆಗೆ ಬಾಬ್ರಿ ಮಸೀದಿ ಉರುಳುವ ಸ್ವಲ್ಪ ಮುನ್ನ, ಆತನ ಹಳ್ಳಿ ಬಿಕ್ರುವಿನಲ್ಲಿ ಸಣ್ಣ ಗಲಾಟೆಯೊಂದರಲ್ಲಿ ಆತ ಪಾಲ್ಗೊಂಡು ಎದುರಿಗಿರುವವರ ಜೊತೆ ಘರ್ಷಣೆಯಲ್ಲಿ ತೊಡಗಿದ್ದ.

ವಿಕಾಸ್ ದುಬೆ ಕಾನ್ಪುರ್ವಾಲಾ ಒಂದು ವಾರವಿಡೀ ಎಲ್ಲರ ಮನಸ್ಸು ಕೊರೆಯುತ್ತಿದ್ದ ಹೆಸರು. ಮಧ್ಯಪ್ರದೇಶದ ಮಹಾಕಾಲ ಮಂದಿರದಿಂದ ಅವನನ್ನು ಹಿಡಿದು ತಂದಾಗಲೇ ಅನೇಕರು ಹುಬ್ಬೇರಿಸಿದ್ದರು. ಆದರೆ ಆತನನ್ನು ಉತ್ತರಪ್ರದೇಶಕ್ಕೆ ತಂದು ಗಮ್ಯಸ್ಥಾನಕ್ಕೆ 22 ಕಿ.ಮೀ ದೂರವಿರುವಾಗ ಎನ್ಕೌಂಟರ್ ಮಾಡಿರುವ ರೀತಿಯನ್ನು ನೋಡಿದರೆ ಎಲ್ಲ ಕ್ರಿಮಿನಲ್ಲುಗಳಿಗೂ ಸ್ಪಷ್ಟವಾದ ಸಂದೇಶ ಕೊಟ್ಟಂತೆ!

2

ವಿಕಾಸ್ ಸಾಮಾನ್ಯ ಆಸಾಮಿಯಲ್ಲ. ಕಾನ್ಪುರದ ಬಿಕ್ರು ಗ್ರಾಮದ ನಿವಾಸಿಯಾದ ಆತ ಬಾಲ್ಯದಿಂದಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ಆದರೆ ಬುದ್ಧಿವಂತ. ಓದಲೆಂದು ಸಂಬಂಧಿಕರ ಮನೆಗೆ ಹೋಗಿದ್ದ. ಆದರೆ ಶಾಲೆಗಿಂತ ಹೆಚ್ಚು ಹೊರಗೇ ಸಮಯ ಕಳೆಯುತ್ತಿದ್ದ. 25ನೇ ವಯಸ್ಸಿನ ವೇಳೆಗೆ ಬಾಬ್ರಿ ಮಸೀದಿ ಉರುಳುವ ಸ್ವಲ್ಪ ಮುನ್ನ, ಆತನ ಹಳ್ಳಿ ಬಿಕ್ರುವಿನಲ್ಲಿ ಸಣ್ಣ ಗಲಾಟೆಯೊಂದರಲ್ಲಿ ಆತ ಪಾಲ್ಗೊಂಡು ಎದುರಿಗಿರುವವರ ಜೊತೆ ಘರ್ಷಣೆಯಲ್ಲಿ ತೊಡಗಿದ್ದ. ಅಲ್ಲಿಂದಾಚೆಗೆ ಆತ ಹಿಂದಿರುಗಿ ನೋಡಿದ್ದೇ ಇಲ್ಲ. ಕಾಲೇಜಿನಲ್ಲಿದ್ದಾಗ ರಾಜಕೀಯ ನೇತಾರರ ಸಂಪರ್ಕ ಪಡೆದಿದ್ದ ವಿಕಾಸ್ ಆಗಾಗ ಅವರ ಕೆಲಸಗಳನ್ನು ಮಾಡಿಕೊಡುತ್ತಿದ್ದ ಮತ್ತು ತಾನು ಪೊಲೀಸರ ಕಿರಿಕಿರಿಯಲ್ಲಿ ಸಿಕ್ಕಿಬಿದ್ದಾಗ ಅವರ ಸಹಕಾರದಿಂದ ತಪ್ಪಿಸಿಕೊಳ್ಳುತ್ತಿದ್ದ. ಒಬ್ಬ ಮಗ 2003ರಲ್ಲಿ ಅಚಾನಕ್ಕಾಗಿ ತೀರಿಕೊಂಡ. ಈ ಸಾವು ನಿಗೂಢವಾಗಿರುವಾಗಲೇ ಆತನ ಹೆಂಡತಿಯೂ ನಿಗೂಢವಾಗಿಯೇ ಸತ್ತಳು. ಆಗ ಆತ ಮದುವೆಯಾಗಿದ್ದು ತನ್ನ ಸಹವತರ್ಿಯ ಸಹೋದರಿ ರಿಚಾಳನ್ನು. ಅದು ಪ್ರೇಮ ವಿವಾಹ ಅಂತಾರೆ. ಅವಳ ಕುರಿತು ಇಲ್ಲಿ ಏಕೆ ಪ್ರಸ್ತಾಪಿಸಬೇಕಾಯಿತೆಂದರೆ ವಿಕಾಸ್ ಅಂತ್ಯ ಸಂಸ್ಕಾರಕ್ಕೆ ಸ್ವತಃ ತಂದೆ ಬರಲು ನಿರಾಕರಿಸಿದರೂ ರಿಚಾ ಮಗನನ್ನು ಕರೆದುಕೊಂಡು ಬಂದಳು. ಆತನ ಎನ್ಕೌಂಟರ್ ಕುರಿತಂತೆ ಪತ್ರಕರ್ತರು ಪ್ರಶ್ನೆ ಕೇಳುವಾಗ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯಾಗಿದೆ ಎಂದ ಆಕೆ ಒಂದು ಹಂತದಲ್ಲಿ ‘ನಾನೇ ಬಂದೂಕು ಕೈಗೆತ್ತಿಕೊಳ್ಳುತ್ತೇನೆ. ಎಲ್ಲರಿಗೂ ಸರಿಯಾದ ಪಾಠ ಕಲಿಸುತ್ತೇನೆ’ ಎಂದುಬಿಟ್ಟಿದ್ದಳು!

3

ವಿಕಾಸ್ಗೆ ಒಂದು ವಿಶೇಷವಾದ ಶಕ್ತಿಯಿತ್ತು. ಚುನಾವಣೆಯಲ್ಲಿ ಗೆಲ್ಲಬಹುದಾದ ಕುದುರೆಯನ್ನು ಆತ ಮೊದಲೇ ಗುರುತಿಸಿಬಿಡುತ್ತಿದ್ದ. ಇದು ದೇವರು ಕೊಟ್ಟ ವರವೆಂದು ಆತನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ. ಈ ಕಾರಣದಿಂದಾಗಿಯೇ ಆತ ಯಾವ ಪಕ್ಷ ಗೆದ್ದರೂ ಸಮರ್ಥವಾಗಿ ತನ್ನ ಕೆಲಸ ಮುಂದುವರೆಸಿಕೊಂಡು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ. ಕಳೆದ ಎರಡು-ಮೂರು ದಶಕಗಳಿಂದ ಅವನ ಹಳ್ಳಿಯ ವ್ಯಾಪ್ತಿಯ ಗ್ರಾಮಪಂಚಾಯಿತಿಗೆ ಈತ ಮತ್ತು ಈತನ ಪರಿವಾರದವರೇ ಅಧ್ಯಕ್ಷರು. ರೌಡಿ ಎಂದು ಹೆಸರು ಪಡೆದಿದ್ದ ವಿಕಾಸ್ ಎರಡೆರಡು ಬಾರಿ ಪಂಚಾಯಿತಿಯ ಅಧ್ಯಕ್ಷನಾಗಿದ್ದನಲ್ಲದೇ ಒಮ್ಮೆಯಂತೂ ಜೈಲಿನಿಂದಲೇ ಜಿಲ್ಲಾ ಪಂಚಾಯತ್ ಚುನಾವಣೆಯನ್ನೂ ಗೆದ್ದುಕೊಂಡಿದ್ದ. 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ವಿಕಾಸ್ ಪ್ರಭಾವಿ ನಾಯಕರುಗಳ ಕಾರಣದಿಂದಾಗಿ ತಪ್ಪಿಸಿಕೊಂಡೇ ತಿರುಗಾಡುತ್ತಿದ್ದ. ಸಣ್ಣ-ಪುಟ್ಟ ಅಧಿಕಾರಿಗಳು ಬಿಡಿ, ಎಸ್ಪಿ ಮಟ್ಟದ ಅಧಿಕಾರಿಗಳೂ ಕೂಡ ವಿಕಾಸ್ನ ಆಪ್ತರಾಗಿದ್ದರಂತೆ. ಅವರೊಡನೆ ಆತ ನಿರಂತರ ಟೆಲಿಫೋನ್ ಸಂಭಾಷಣೆಯಲ್ಲಿರುತ್ತಿದ್ದನಲ್ಲದೇ ಅಗತ್ಯಬಿದ್ದಾಗ ತನ್ನ ಸಹಾಯಕರನ್ನು ಕಳುಹಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದನಂತೆ. ಹೀಗಾಗಿಯೇ ಆತ ಕಲಿತ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರ ಹತ್ಯೆಗೆ ಕಾರಣನಾಗಿದ್ದಾಗ್ಯೂ ಆತ ಬಚಾವಾಗಿಬಿಟ್ಟ. 2001ರಲ್ಲಿ ಪೊಲೀಸ್ ಠಾಣೆಯಲ್ಲಿಯೇ ರಾಜ್ಯದ ಮಂತ್ರಿಯೊಬ್ಬರನ್ನು ಕೊಂದು ಹಾಕಿದ ಆರೋಪ ಅವನ ಮೇಲಿತ್ತು. ಆರು ತಿಂಗಳುಗಳ ಕಾಲ ಆತ ಪೊಲೀಸರಿಗೆ ಸಿಗಲಿಲ್ಲ. ಅಷ್ಟೇ ಅಲ್ಲ, ಆನಂತರ ಆತನನ್ನು ಗುರುತಿಸುವಲ್ಲಿ ಪೊಲೀಸರು ನಿರಾಕರಿಸಿದ್ದರಿಂದ ಆಗಲೂ ತಪ್ಪಿಸಿಕೊಂಡುಬಿಟ್ಟ! ಒಟ್ಟಾರೆ ಏಳು ಕೊಲೆ ಮತ್ತು ಎಂಟು ಕೊಲೆ ಪ್ರಯತ್ನಗಳ ಆರೋಪ ಹೊಂದಿದ್ದ ವಿಕಾಸ್ ಐಶಾರಾಮಿ ಬದುಕನ್ನು ನಡೆಸುತ್ತಿದ್ದ. ತನ್ನ ತಂದೆ-ತಾಯಿಯರಿಗೆ ದೊಡ್ಡ ಬಂಗಲೆಯನ್ನೇ ಕಟ್ಟುಕೊಟ್ಟಿದ್ದ. ಹಳ್ಳಿಗರು ಅವನ ಭೀತಿಯಿಂದ ನರಳುತ್ತಿದ್ದರಲ್ಲದೇ ಆತನ ಕಾರಣಕ್ಕಾಗಿ ತಮ್ಮ ಜಮೀನಿಗೆ ಬೆಲೆಯೂ ದಕ್ಕುತ್ತಿಲ್ಲವೆಂದು ಆರೋಪಿಸುತ್ತಿದ್ದರು. ಪೊಲೀಸ್ ಪೇದೆಯಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರನ್ನೂ ತೆಕ್ಕೆಯಲ್ಲಿಟ್ಟುಕೊಂಡಿದ್ದರಿಂದ ಅವನೆದುರು ಮಾತನಾಡಲು ಎಲ್ಲರೂ ಹೆದರಿಕೊಳ್ಳುತ್ತಿದ್ದರು. ಜೂನ್ ತಿಂಗಳ ಆರಂಭದಲ್ಲಿ ಆತನ ಜಾಡು ಹಿಡಿದು ಹೊರಟ ಪೊಲೀಸರು ಆತ ನಿರಂಕುಶವಾಗಿ ದಾಳಿ ಮಾಡಿದಾಗ ಅಚ್ಚರಿಗೊಳಗಾಗಿದ್ದರು. ಎಂಟು ಜನ ಪೊಲೀಸರು ರಕ್ತ-ಸಿಕ್ತವಾಗಿ ಅಂಗಾತ ಬಿದ್ದುಕೊಂಡಿದ್ದು ಇಲಾಖೆಗೆ ಸವಾಲಾಗಿತ್ತಷ್ಟೇ ಅಲ್ಲ ರೌಡಿಗಳನ್ನು ಮುಲಾಜಿಲ್ಲದೇ ಮಟ್ಟ ಹಾಕಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೂ ಮುಖಭಂಗವೆನಿಸಿತ್ತು. ಪೊಲೀಸ್ ವ್ಯವಸ್ಥೆಯೊಳಗಿನ ವ್ಯಕ್ತಿಗಳೇ ಈ ಕಾಯರ್ಾಚರಣೆಯ ಮುನ್ಸೂಚನೆಯನ್ನು ಅವನಿಗೆ ನೀಡಿದ್ದು ಆನಂತರ ತಿಳಿದು ಬಂದಾಗ ವ್ಯವಸ್ಥೆಯೇ ಅವಮಾನಿಗೊಂಡಿತ್ತು. ಆತನನ್ನು ಹುಡುಕಲೆಂದು ನಾಲ್ಕಾರು ರಾಜ್ಯಗಳಲ್ಲಿ ಜಾಲ ಬೀಸಲಾಯ್ತು. ಧಿಮಾಕಿನಿಂದಲೇ ‘ನಾನು ಕಾನ್ಪುರದವ ಮತ್ತೆ ಬರುತ್ತೇನೆ’ ಎಂದು ಹೋಗಿದ್ದವ ಮಹಾಕಾಲ ದೇವಸ್ಥಾನದಲ್ಲಿ ಸೆಕ್ಯುರಿಟಿಯ ಕಣ್ಣಿಗೆ ಬಿದ್ದಿದ್ದ. ತಕ್ಷಣವೇ ಪೊಲೀಸರು ಕಾರ್ಯ ಪ್ರವೃತ್ತರಾಗಿ ಅವನನ್ನು ಹಿಡಿದು ಉತ್ತರ ಪ್ರದೇಶದ ಪೊಲೀಸರ ಕೈಗೆ ಇಟ್ಟರು.

4

ಆ ವೇಳೆಗಾಗಲೇ ಬುದ್ಧಿಜೀವಿಗಳು ಆತನನ್ನು ಹಿಡಿಯಲು ಸ್ವತಃ ಮುಖ್ಯಮಂತ್ರಿಗಳಿಗೇ ಮನಸ್ಸಿಲ್ಲವೆಂದು ಛೇಡಿಸಲಾರಂಭಿಸಿದ್ದರು. ಸಿಕ್ಕುಬಿದ್ದಾಗ ಅವರಿಗೆ ನಿಜಕ್ಕೂ ಖೇದವೂ ಆಗಿತ್ತು. ಆತ ನಿಸ್ಸಂಶಯವಾಗಿ ಒಂದಷ್ಟು ರಾಜಕೀಯ ನೇತಾರರಲ್ಲದೇ ಅಧಿಕಾರಿಗಳು, ವ್ಯಕ್ತಿಗಳ ಹೆಸರನ್ನು ಬಾಯ್ಬಿಡುತ್ತಾನೆ ಎಂಬ ಅರಿವಿದ್ದುದರಿಂದ ಇಡಿಯ ಎಡಪಂಥೀಯ ವರ್ಗ ಚಡಪಡಿಸುತ್ತಾ ನಿಂತಿತ್ತು. ಆತನಿಂದ ಬಾಯ್ಬಿಡಿಸಿಕೊಳ್ಳಬೇಕಾದ್ದೆಲ್ಲವನ್ನೂ ಬಿಡಿಸಿಕೊಂಡ ಪಡೆ ಅವನನ್ನು ಕರೆದುಕೊಂಡು ಬಂದು ಎನ್ಕೌಂಟರ್ ಮಾಡಿ ಬಿಸಾಡಿತು. ಉತ್ತರ ಪ್ರದೇಶಕ್ಕೆ ಇದು ಹೊಸತೇನೂ ಅಲ್ಲ. ಇದುವರೆಗೂ 6145 ಕಾಯರ್ಾಚರಣೆಗಳನ್ನು ನಡೆಸಿ, 119 ಜನರನ್ನು ನಡುರಸ್ತೆಯಲ್ಲಿ ಕೊಂದು ಬಿಸಾಡಿರುವ ಪೊಲೀಸರು ಅದಕ್ಕೆ ಈ ವ್ಯಕ್ತಿಯನ್ನು ಈಗ ಸೇರಿಸಿದ್ದಾರಷ್ಟೇ. ಹಾಗಂತ ಮಾನವ ಹಕ್ಕುಗಳ ಹೋರಾಟದವರಿಗೆ ಗಲಾಟೆ ಮಾಡಲು ಇಲ್ಲಿ ಅವಕಾಶವಿಲ್ಲ. ನಡೆಯಬೇಕಾದ ವಿಚಾರಣೆಗಳ ಮೂಲಕವೇ ಸಾಗಿ ಅದಾಗಲೇ 74 ಪ್ರಕರಣಗಳಲ್ಲಿ ಪೊಲೀಸರು ಕ್ಲೀನ್ಚಿಟ್ ಪಡೆದಿರುವುದರಿಂದ ಇದೂ ಅವಗಳಲ್ಲೊಂದಾಗಲಿದೆ. ದುಃಖದ ಸಂಗತಿ ಎಂದರೆ ಸ್ವತಃ ಪೊಲೀಸರು ಪಾಲ್ಘರ್ನಲ್ಲಿ ಸಾಧುಗಳನ್ನು ದುಷ್ಟರ ಕೈಗೆ ಒಪ್ಪಿಸುವಾಗ ಸುಮ್ಮನಿದ್ದ ಎಡಪಂಥೀಯರು ಈಗ 62 ಪ್ರಕರಣಗಳಲ್ಲಿ ಬೇಕಾಗಿದ್ದ ಕ್ರಿಮಿನಲ್ ಒಬ್ಬನ ಪರವಾಗಿ ಮಾತನಾಡುತ್ತಿದ್ದಾರೆ. ದುಬೆಯ ಬ್ರಾಹ್ಮಣ ಜಾತಿಯನ್ನು ಹಿಡಿದು ಆ ವೋಟುಗಳನ್ನು ಕಡಿತಗೊಳಿಸುವ ಯತ್ನದಲ್ಲಿ ಅವರು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ. ಇತ್ತ ಬ್ರಾಹ್ಮಣರಿಂದಲೇ ಕೂಡಿರುವ ಬಿಕ್ರುವಿನ ಪಕ್ಕದ ಹಳ್ಳಿಯಲ್ಲಿ ದುಬೆಯ ಸಾವಿನ ಸುದ್ದಿ ಕೇಳಿ ಜನ ಸಿಹಿಹಂಚಿಕೊಂಡು ತಿಂದಿದ್ದಾರೆ!

ಒಂದಂತೂ ಸತ್ಯ ಈ ಪ್ರಕರಣದ ನಂತರ ಯೋಗಿ ಆದಿತ್ಯನಾಥರು ಹಿಂದೆಂದಿಗಿಂತಲೂ ಬಲವಾಗಿ ಬೆಳೆದು ನಿಂತಿದ್ದಾರೆ. ಜೊತೆಗೆ ಹಿಂದೂ ಸಮಾಜವು ಹಿಂದುವೆಂಬ ಕಾರಣಕ್ಕೆ ಕ್ರಿಮಿನಲ್ ಒಬ್ಬನನ್ನು ಸಮಥರ್ಿಸಿಕೊಳ್ಳುವುದಿಲ್ಲ ಎಂಬುದನ್ನು ತೋರಿಸಿ ಉಳಿದೆಲ್ಲ ಮತ-ಪಂಥಗಳಿಗೆ ಮೇಲ್ಪಂಕ್ತಿಯಾಗಿ ನಿಂತಿದೆ. ಒಬ್ಬ ವಿಕಾಸ್ ದುಬೆ ಅನೇಕ ಸಂಗತಿಗಳನ್ನು ತಿಳಿಹೇಳಿ ಹೋಗಿದ್ದಾನೆ!

Comments are closed.