ವಿಭಾಗಗಳು

ಸುದ್ದಿಪತ್ರ


 

ರಂಗೇರುತ್ತಿದೆ ರಾಜ್ಯದ ಚುನಾವಣೆ!

ಸದ್ಯಕ್ಕೆ ಎರಡೂ ಪಕ್ಷಗಳ ಸಮಸ್ಯೆ ಒಂದೇ. ಕನರ್ಾಟಕದಲ್ಲಿ ಒಗ್ಗಟ್ಟು ಬರಬೇಕೆಂದರೆ ಮೇಲಿನವರು ಜುಟ್ಟು ಬಲವಾಗಿ ಹಿಡಿಯಬೇಕು. ಹಾಗೆ ನೋಡಿದರೆ ಮೇಲ್ನೋಟಕ್ಕೆ ಈ ವಿಚಾರದಲ್ಲಿ ಗೆದ್ದಿರುವುದು ಕಾಂಗ್ರೆಸ್ಸೇ.  ಸಿದ್ದರಾಮಯ್ಯನವರ ನೇತೃತ್ವವನ್ನು ಕಾಂಗ್ರೆಸ್ಸು ಪೂತರ್ಿ ಒಪ್ಪಿದಂತಿದೆ.

ಏನೇ ಹೇಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಜಾಗ ಬಿಟ್ಟ ನಂತರ ಸಿದ್ದರಾಮಯ್ಯನವರು ಸ್ವಲ್ಪ ಚುರುಕಾಗಿದ್ದಾರೆ. ಕೆಲವರು ಹಾಗೆಯೇ ತಾವು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸುತ್ತಾರೆ. ಬಹುಶಃ ಅಧಿಕಾರಕ್ಕೆ ಬಂದ ಆರಂಭದಿಂದಲೂ ದಿನೇಶ್ ಅಮೀನ್ ಮಟ್ಟುರವರನ್ನು ಸ್ವಲ್ಪ ದೂರ ಇಟ್ಟಿದ್ದರೆ ರಾಜ್ಯ ಒಂದು ಒಳ್ಳೆಯ ಆಡಳಿತವನ್ನು ಕಾಣುತ್ತಿತ್ತೇನೋ?

ಇದ್ದಕ್ಕಿದ್ದಂತೆ ಕನರ್ಾಟಕದ ಕಾಂಗ್ರೆಸ್ಸಿನ ಚಹರೆಯನ್ನು ಬದಲು ಮಾಡುವ ಬಲುದೊಡ್ಡ ಪ್ರಯತ್ನ ನಡೆದಿರುವಂತೂ ನಿಜ. ಆದರೆ ಹೇಗೆ ನರೇಂದ್ರ ಮೋದಿಯವರ ಖ್ಯಾತಿ ಜನರ ಮನದಾಳದಲ್ಲಿ ಹೊಕ್ಕಿದೆಯೋ ಹಾಗೆಯೇ ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಗಳಿಸಿರುವ ಕುಖ್ಯಾತಿ ಕೂಡ ಜನ ಮಾನಸವನ್ನು ಹೊಕ್ಕಿ ಕುಳಿತುಬಿಟ್ಟಿದೆ. ಅದನ್ನು ಹೊರಗೆಳೆದು ಬಿಸಾಡಲು ಭಾರೀ ದೊಡ್ಡ ಸಾಹಸವೇ ಬೇಕಾದೀತು. ಆದರೂ ಕಳೆದ ಮೂರ್ನಾಲ್ಕು ತಿಂಗಳಿಂದ ಮುಖ್ಯಮಂತ್ರಿಗಳು ಮಾಡುತ್ತಿರುವ ಚಟುವಟಿಕೆಗಳು ಎಂಥವನಿಗೂ ಅಚ್ಚರಿ ಹುಟ್ಟಿಸುವಂಥದ್ದು. ಪ್ರಶಾಂತ್ ಕಿಶೋರ್ ಕನರ್ಾಟಕಕ್ಕೆ ಬಂದು ಬಿಟ್ಟಿದ್ದಾರೆ ಎಂದು ಪುಕಾರು ಹಬ್ಬುವಷ್ಟರ ಮಟ್ಟಿಗೆ!

FB_IMG_1508034298830

ಹಾಗೆ ಸುಮ್ಮನೆ ಗಮನಿಸಿ ನೋಡಿ. ಮುಖ್ಮಂತ್ರಿಗಳೆಂಬ ಘನತೆಯನ್ನೂ ಮರೆತು ಅಧಿಕೃತ ಟ್ವಿಟರ್ ಐಡಿಯಿಂದ ಕಳಪೆ ಟ್ವೀಟ್ಗಳನ್ನು ಮಾಡುತ್ತಿದ್ದರು ಅವರು. ವೈಯಕ್ತಿಕವಾದ ಆಕ್ರೋಶಗಳನ್ನು ಅದರ ಮೂಲಕ ಹೊರ ಹಾಕುತ್ತಿದ್ದರು. ಪ್ರಧಾನ ಮಂತ್ರಿಗಳನ್ನು ನಿಂದಿಸುತ್ತಿದ್ದರು; ಕೊನೆಗೆ ಕುಟುಂಬದೊಡನೆ ಹಂಚಿಕೊಳ್ಳಬಹುದಾದ್ದನ್ನು ಅಧಿಕೃತ ಟ್ವಿಟರ್ ಖಾತೆಯಿಂದ ಜನರೆದುರು ಹೇಳಿಕೊಳ್ಳುತ್ತಿದ್ದರು. ಮುಖ್ಯಮಂತ್ರಿಗಳ ಕಚೇರಿಯ ಖಾತೆ ಒಬ್ಬರಿಗೆ ಸೇರಿದ್ದಲ್ಲ, ಅದು ಏಳು ಕೋಟಿ ಕನ್ನಡಿಗರ ಆಸ್ತಿ ಎನ್ನುವುದನ್ನು ಅವರು ಮರೆತಿದ್ದರು ಮತ್ತು ಅದೆಷ್ಟೇ ತಿವಿದರೂ ತಿದ್ದುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಅದನ್ನು ನಿಭಾಯಿಸುವವರ ಬುದ್ಧಿಮತ್ತೆ ಹಾಗಿತ್ತು. ಮಾಧ್ಯಮ ಸಲಹೆಗಾರರು ಜಾಗ ಖಾಲಿ ಮಾಡಿ ಹೋದ ನಂತರ ಬದಲಾವಣೆ ಬಂತು. ಅವರ ಖಾತೆ ಬದಲಾಯಿತು. ಸಿದ್ದರಾಮಯ್ಯ ಎಂಬ ಹೆಸರಿನ ತಮ್ಮದೇ ಖಾತೆ ಆರಂಭಿಸಿದರು. ವ್ಯವಸ್ಥಿತವಾಗಿ ಟ್ವೀಟ್ ಮಾಡಲು ಶುರು ಮಾಡಿದರು.

3

ವೇಣುಗೋಪಾಲ್ ಅವರು ಕನರ್ಾಟಕದ ಉಸ್ತುವಾರಿ ಸ್ವೀಕರಿಸಿದಾಗಿನಿಂದ ಇಲ್ಲಿನ ಕಾಂಗ್ರೆಸ್ಸು ಚುರುಕಾಗಿಬಿಟ್ಟಿದೆ. ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡಿ ತಿಂಗಳಲ್ಲಿ ಇಪ್ಪತ್ತು ದಿನ ಇಲ್ಲಿಯೇ ಇರುತ್ತೇನೆ ಎಂದಾಗ ಕಾಂಗ್ರೆಸಿಗರು ಹುಬ್ಬೇರಿಸಿದ್ದರು. ದಿಗ್ವಿಜಯ್ ಸಿಂಗ್ರ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯನವರು ತಮ್ಮ ಮಾತಿಗೆ ತಕ್ಕಂತೆ ಹೈಕಮಾಂಡ್ ನಡೆಯುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ವೇಣುಗೋಪಾಲರ ಆಗಮನದಿಂದ ಚಿತ್ರಣ ಬದಲಾಯಿತು. ಅವರು ಅಮಿತ್ ಶಾಹ್ರಂತೆ ಕಾಂಗ್ರೆಸ್ಸಿಗರನ್ನು ಝಾಡಿಸಲು ಶುರು ಮಾಡಿದರು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ವಿವಾದಕ್ಕೆಡೆಯಿಲ್ಲದಂತೆ ಖಾತ್ರಿ ಮಾಡಿದರು. ಎಲ್ಲ ವಿಭಾಗಗಳನ್ನು ಕೆಲಸಕ್ಕೆ ಹಚ್ಚಿದರು. ಥೇಟು ಭಾಜಪಾದ ಶೈಲಿಯಲ್ಲಿ ಕೆಲಸ ಆರಂಭವಾಯಿತು. ಮನೆಮನೆಗೆ ಕಾಂಗ್ರೆಸ್ಸು ಎಂಬ ಸಂಘದ ಪಾಲಿಗೆ ಬಲು ಹಳೆಯದಾದ ಕಾಂಗ್ರೆಸ್ಸಿನ ಪಾಲಿಗೆ ಹೊಚ್ಚ ಹೊಸದಾದ ಯೋಜನೆ ರೂಪಿಸಲಾಯಿತು. ಆಲೋಚನೆ ಚೆನ್ನಾಗಿದೆ. ಆಚರಣೆ ಸುಲಭವಲ್ಲ. ಮನೆಮನೆಗೆ ಹೋಗಿ ಜನರನ್ನು ಭೇಟಿ ಮಾಡಲು ಕನರ್ಾಟಕ ಕಾಂಗ್ರೆಸ್ಸಿಗೆ ಎಂಟೆದೆಯೇ ಬೇಕು. ಇದುವರೆಗೂ ಹಿಂದು ವಿರೋಧಿಯಾಗಿ ನಡೆದುಕೊಂಡಿರುವ ರೀತಿ, ಜಾತಿ-ಜಾತಿಗಳ ನಡುವೆ ತಂದಿರುವ ಒಡಕು, ಧರ್ಮವನ್ನು ಒಡೆಯುವಲ್ಲಿ ಮಾಡಿರುವ ಪ್ರಯತ್ನ, ಹದಗೆಟ್ಟಿರುವ ಕನರ್ಾಟಕದ ಆಥರ್ಿಕ ಸ್ಥಿತಿ, ಉದ್ಯೋಗ ಸೃಷ್ಟಿಯಲ್ಲಿ ಸೋತಿರುವ ರಾಜ್ಯ ಇವೆಲ್ಲವೂ ಸಾಮಾನ್ಯ ಜನತೆಯಲ್ಲಿ ಆಕ್ರೋಶವನ್ನು ಹುಟ್ಟಿಸಿದೆ. ನರೇಂದ್ರ ಮೋದಿ ನೋಟು ಅಮಾನ್ಯೀಕರಣದಿಂದ, ಜಿಎಸ್ಟಿ ಜಾರಿಗೆ ತಂದಿದ್ದರಿಂದ ಸಿರಿವಂತರನ್ನು ಎದುರು ಹಾಕಿಕೊಂಡಿದ್ದಾರೆ. ಆದರೆ ಇಷ್ಟೂ ವರ್ಷಗಳಿಂದ ಸಿರಿವಂತರ ದರ್ಪದಿಂದ ಕಂಗಾಲಾಗಿದ್ದ ಬಡವರಿಗೆ ಒಳಿತಾಗಿದೆ. ಹೀಗಾಗಿ ಅವರೊಡನೆ ಸಾಮಾನ್ಯ ಜನತೆ ನಿಂತಿದ್ದಾರೆ. ಆದರೆ ಸಿದ್ದರಾಮಯ್ಯನವರು ಹಾಗಲ್ಲ. ಅವರು ತಂದಿರುವ ಯೋಜನೆಗಳು ಸಾಮಾನ್ಯ ಜನತೆಯನ್ನು ಮುಟ್ಟುವಲ್ಲಿ ಸೋತುಹೋಗಿವೆ. ಹೊಗಳುಭಟ್ಟರ ಬಹು ಪರಾಖಿನಲ್ಲಿ ಅವರು ಇಷ್ಟು ದಿನ ಕಾಲ ಕಳೆದು ಈಗ ಏಕಾಕಿ ಜಾಗೃತರಾಗಿದ್ದಾರೆ. ಒಳ್ಳೆಯದೇ. ಸುದೀರ್ಘ ನಿದ್ದೆಯಲ್ಲಿರುವ ವಿರೋಧಿಗಳಿಗೆ ಇದು ಎಚ್ಚರಿಕೆಯ ಕರೆಗಂಟೆಯಾದರೂ ಆಗಲಿ.

2

ಅತ್ತ ಸಿದ್ದರಾಮಯ್ಯನವರು ಚುರುಕಾಗಿಬಿಟ್ಟಿದ್ದರೆ ಇತ್ತ ಕನರ್ಾಟಕದ ಬಿಜೆಪಿ ಅರೆ ಪ್ರಜ್ಞಾವಸ್ಥೆಯಲ್ಲಿಯೇ ಇದೆ. ಆಡಳಿತ ವಿರೋಧಿ ಅಲೆಯಲ್ಲಿಯೇ ತೇಲಿಕೊಂಡು ವಿಧಾನಸೌಧಕ್ಕೆ ಸೇರಿಕೊಂಡುಬಿಡುತ್ತೇವೆಂಬ ಅವರ ನಂಬಿಕೆ ಈಗ ಹುಸಿಯಾಗುತ್ತಿರುವಂತೆ ಕಾಣುತ್ತಿದೆ. ಆಡಳಿತ ವಿರೋಧಿ ಅಲೆ ಜೋರಾಗಿದ್ದಾಗ ವಿರೋಧ ಪಕ್ಷಗಳು ಗೆಲ್ಲುವ ವಿಶ್ವಾಸ ತೋರುವುದು ಸಹಜ. ಆದರೆ ಆಗಲೇ ಅಲ್ಲಿಯೂ ಟಿಕೇಟಿಗಾಗಿ ಆಕಾಂಕ್ಷಿಗಳ ಸಂಖ್ಯೆಯೂ ವೃದ್ಧಿಯಾಗೋದು. ಹೈಕಮಾಂಡು ಮುಖ್ಯಮಂತ್ರಿ ಪಟ್ಟಕ್ಕೆ ಸಫಾರಿ ಹೊಲಿಸಿಕೊಳ್ಳಬೇಕಾದವರು ನೀವೇ ಎಂದ ಮೇಲೂ ಯಡಿಯೂರಪ್ಪನವರ ಮನದೊಳಗಣ ಬೇಗುದಿ ಆರಿಲ್ಲ. ಇಲ್ಲಿನ ಹಿರಿಯರೆನಿಸಿಕೊಂಡವರೆಲ್ಲರ ವಿರೋಧಿ ಸಂಘಟನಾ ಕಾರ್ಯದಶರ್ಿ ಸಂತೋಷ್ ಅವರು ಕೇರಳದಲ್ಲಿ ಜನ ರಕ್ಷಾ ಯಾತ್ರೆಯನ್ನು ಬಲು ಜೋರಾಗಿ ಸಂಘಟಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಹಾಗಂತ ಅಮಿತ್ ಷಾಹ್ ಪಡೆ ಸುಮ್ಮನಿಲ್ಲ. ಕೇರಳದ ಹತ್ಯೆಗಳ ವಿರುದ್ಧ ಬೆಂಗಳೂರಿನಲ್ಲಿ ನಡೆದ ಹೋರಾಟದ ನೇತೃತ್ವವನ್ನು ಮಾಜಿ ಉಪ ಮುಖ್ಯಮಂತ್ರಿ ಅಶೋಕ್ ಕೈಲಿಟ್ಟು ಚಾಣಾಕ್ಷ ನಡೆ ಪ್ರದಶರ್ಿಸಿದೆ. ಈಗ ನಡೆಯಬೇಕಿರುವ ಪರಿವರ್ತನಾ ರ್ಯಾಲಿಗೆ ಸಂಸದೆ ಶೋಭಾ ಅವರನ್ನು ಮುಂದೆ ನಿಲ್ಲಿಸಿ ಒಳಗಿನ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಸದ್ಯಕ್ಕೆ ಎರಡೂ ಪಕ್ಷಗಳ ಸಮಸ್ಯೆ ಒಂದೇ. ಕನರ್ಾಟಕದಲ್ಲಿ ಒಗ್ಗಟ್ಟು ಬರಬೇಕೆಂದರೆ ಮೇಲಿನವರು ಜುಟ್ಟು ಬಲವಾಗಿ ಹಿಡಿಯಬೇಕು. ಹಾಗೆ ನೋಡಿದರೆ ಮೇಲ್ನೋಟಕ್ಕೆ ಈ ವಿಚಾರದಲ್ಲಿ ಗೆದ್ದಿರುವುದು ಕಾಂಗ್ರೆಸ್ಸೇ.  ಸಿದ್ದರಾಮಯ್ಯನವರ ನೇತೃತ್ವವನ್ನು ಕಾಂಗ್ರೆಸ್ಸು ಪೂತರ್ಿ ಒಪ್ಪಿದಂತಿದೆ. ವೇಣುಗೋಪಾಲ್ ಈ ವಿಚಾರದಲ್ಲಿ ಅಮಿತ್ ಶಾಹ್ರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಸ್ವತಃ ರಾಜಕೀಯದಲ್ಲಿ ಚೆನ್ನಾಗಿ ಪಳಗಿರುವ ಸಿದ್ದರಾಮಯ್ಯ ತಮ್ಮ ಚುರುಕು ನಡೆಗಳಿಂದ ಎದುರಾಳಿಗಳಿಗೆ ಗಾಬರಿ ಹುಟ್ಟಿಸುತ್ತಿದ್ದಾರೆ. ಮಾಡುತ್ತಾರೋ, ಹೇಳಿಕೆ ಕೊಟ್ಟು ಸುಮ್ಮನಾಗುತ್ತಾರೋ ಗೋವಾದ ನಿರಾಶ್ರಿತರಿಗೆ ನಿವೇಶನವನ್ನಂತೂ ಘೋಷಿಸಿದ್ದಾರೆ. ಚುನಾವಣೆಯ ಕಾಲಕ್ಕೆ ಅದು ಅವರಿಗೆ ಶಕ್ತಿಯಂತೂ ಹೌದು. ಗೋವಾದಲ್ಲಿರುವ ಸಕರ್ಾರ ಬೀಜೇಪಿಯದ್ದೆಂಬುದಂತೂ ಸಿದ್ದರಾಮಯ್ಯ ಸೂಕ್ತವಾಗಿ ಬಳಸಿಕೊಳ್ಳಬಹುದಾದ ಅಸ್ತ್ರ. ಕಳೆದ ಆರು ತಿಂಗಳಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಪಟ್ಟಭದ್ರ ಮತಬ್ಯಾಂಕುಗಳನ್ನೆಲ್ಲ ಒಡೆದು ಬಿಸಾಡಿದ್ದಾರೆ ಅವರು. ಹಾಗೇ ಯೋಚಿಸಿ, ಉತ್ತರ ಕನರ್ಾಟಕದ ಜನ ಭಾಜಪಾದ ಒಲವಿರುವವರು. ಆದರೆ ಲಿಂಗಾಯತ-ವೀರಶೈವ ಕಿತ್ತಾಟದ ನಂತರ ಅದೆಷ್ಟು ಜನ ಯಡಿಯೂರಪ್ಪನ ಪರ ಬಲವಾಗಿ ನಿಂತಿದ್ದಾರೆನ್ನುವುದು ಅನುಮಾನ. ಇತ್ತ ಕರಾವಳಿಯಲ್ಲಿ ಬಿಜೇಪಿಯ ಅಲೆ ಜೋರೆನಿಸುತ್ತಿತ್ತು, ಈಗಲೂ ಇದೆ. ಆದರೆ ಟಿಕೇಟ್ ಆಕಾಂಕ್ಷಿಗಳು ಅದೆಷ್ಟು ಮಂದಿ ಇದ್ದಾರೆಂದರೆ, ಟಿಕೇಟ್ ಸಿಗದ ಪ್ರತಿಯೊಬ್ಬನೂ ಪಕ್ಷಕ್ಕೆ ಮುಳುವಾದರೆ ಅಚ್ಚರಿ ಪಡಬೇಕಿಲ್ಲ. ಮೈಸೂರು ಭಾಗದಲ್ಲಿ ಜನತಾ ದಳ ಪ್ರಭಾವಿ ಎನಿಸಿದರೂ ಮುಸಲ್ಮಾನರನ್ನು ಆರಿಸಿ-ಆರಿಸಿ ಬುಟ್ಟಿಗೆ ಹಾಕಿಕೊಳ್ಳುತ್ತಿರುವ ಸಿದ್ದರಾಮಯ್ಯ ತನ್ನ ತಾನು ಪ್ರಭಾವೀ ಹಿಂದು ವಿರೋಧಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅದಕ್ಕೇ ಅಲ್ಲಿ ದಳದ ನೆಲೆಯೂ ಅಷ್ಟು ಬಲವಾಗಿಲ್ಲ. ಒಂದಂತೂ ಸತ್ಯ. ಕಾಂಗ್ರೆಸ್ಸು ಅಧಿಕಾರಕ್ಕೆ ಬರದಿದ್ದರೂ ಬೀಜೇಪಿಗೆ ಅಧಿಕಾರ ಸುಲಭವಲ್ಲ ಎಂಬ ವಾತಾವರಣವನ್ನಂತೂ ಸೃಷ್ಟಿಸುತ್ತಿದೆ.

21-1432206003-ramya-challenge-to-pm-modi-7

 

ಅತ್ತ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸು ಮಾಡು ಇಲ್ಲವೇ ಮಡಿ ಎಂಬ ವಾತಾವರಣದ ಸೃಷ್ಟಿಗೆ ಬದ್ಧವಾಗಿ ನಿಂತಿದೆ. ಇತ್ತೀಚೆಗೆ ಸಿಪಿಎಮ್ನ ಪ್ರಕಾಶ್ ಕಾರಟ್ ಬಿಜೇಪಿ, ಆರೆಸ್ಸೆಸ್ಗಳನ್ನು ಮಟ್ಟಹಾಕಲು ವೇದಿಕೆ ರೂಪಿಸುವ ಮಾತನಾಡುತ್ತಿದ್ದಾರೆ. ಅವರೊಂದಿಗೆ ಕಾಂಗ್ರೆಸ್ಸು, ಸಮಾಜವಾದಿ, ಬಹುಜನ, ಮುಸ್ಲೀಂ ಲೀಗು, ಚೀನಾ ಚೇಲಾ, ಪಾಕೀಸ್ತಾನ್ ಭಕ್ತರೆಲ್ಲ ಸೇರಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಮೋದಿಯನ್ನು ಅಧಿಕಾರಕ್ಕೆ ಮತ್ತೆ ತರಲು ರಾಷ್ಟ್ರದ ಜನ ಹಣ ಸಂಗ್ರಹಿಸುವ ದದರ್ಿನಲ್ಲಿದ್ದರೆ, ಅವರನ್ನು ಅಧಿಕಾರದಿಂದ ದೂರವಿರಿಸಲು ಭಾರತ ವಿರೋಧಿ ಶಕ್ತಿಗಳು ಹಣ ಸುರಿಯುವ ಎಲ್ಲ ಲಕ್ಷಣಗಳೂ ಇವೆ. ಮೋದಿಯನ್ನು ವಯಕ್ತಿಕವಾಗಿ ಹಳಿಯಲು ಭಿನ್ನ ಭಿನ್ನ ಮಾರ್ಗಗಳನ್ನು ಅದಾಗಲೇ ಬಳಸಲಾರಂಭಿಸಿದ್ದಾರೆ. ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣಗಳು ಹುಚ್ಚೆದ್ದು ಕುಣಿಯುತ್ತಿವೆ. ಪ್ರತಿನಿತ್ಯ ನೂರಾರು ಫೇಕ್ ಅಕೌಂಟುಗಳು ಸೃಷ್ಟಿಯಾಗುತ್ತಿವೆ. ಅವುಗಳ ಮೂಲಕ ಮೋದಿ ವಿರೋಧಿ ಚಿಂತನೆಗಳನ್ನು ಬಿತ್ತುವ ಕಾರ್ಯ ಸೊಗಸಾಗಿ ನಡೆಯುತ್ತಿದೆ. ಕನ್ನಡದ ನಟಿ ರಮ್ಯಾಳಿಗೆ ಇದರ ಶ್ರೇಯ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಸ್ವಲ್ಪ ದಿನ ಚಟುವಟಿಕೆ ತೋರಿದ್ದ ದಳದ ಸಾಮಾಜಿಕ ಜಾಲತಾಣಗಳ ತಂಡವೀಗ ಪೂರ್ಣ ಸ್ತಬ್ಧವಾಗಿದೆ. ಇತ್ತ ಭಾರತೀಯ ಜನತಾ ಪಾಟರ್ಿಯ ಐಟಿ ಸೆಲ್ ನಿಷ್ಕ್ರಿಯವೇ ಆಗಿಬಿಟ್ಟಿದೆ.

ಒಟ್ಟಿನಲ್ಲಿ ರಾಜ್ಯದ ಚುನಾವಣೆ ಈಗ ರಂಗೇರಿದೆ. ಕೇಸರಿ, ಹಸಿರು, ಕೆಂಪು, ನೀಲಿ ಎಲ್ಲ ಬಣ್ಣಗಳೂ ಆಗಸಕ್ಕೆ ರಾಚಿಕೊಳ್ಳಲಿವೆ. ನಾವೀಗ ಕಾದು ನೋಡಬೇಕಷ್ಟೇ.

 

Comments are closed.