ವಿಭಾಗಗಳು

ಸುದ್ದಿಪತ್ರ


 

ರಂಜಾನ್ ಮುಗಿಯಿತು. ಇನ್ನು ಲೆಕ್ಕ ಚುಕ್ತಾ ಮಾಡಬೇಕಷ್ಟೇ!

ಕಾಶ್ಮೀರ ಈ ರೀತಿಯ ಶಾಂತ ಸ್ಥಿತಿಗೆ ಮರಳುವುದನ್ನು ಅರಿತೊಡನೆ ಪಾಕಿಸ್ತಾನ ಬೆಂಬಲಿತ ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಚಡಪಡಿಕೆಗೆ ಒಳಗಾಗುತ್ತಾರೆ. ಈ ಬಾರಿಯೂ ಹಾಗೆಯೇ ಆಯ್ತು. ಹೇಗಾದರೂ ಮಾಡಿ ಸೈನಿಕರನ್ನು ಭಡಕಾಯಿಸಿ ಕದನವಿರಾಮವನ್ನು ಅವರೇ ಮುರಿಯುವಂತೆ ಮಾಡಬೇಕೆಂಬ ಪ್ರಯತ್ನ ಪ್ರತ್ಯೇಕತಾವಾದಿಗಳಲ್ಲಿ ಖಂಡಿತವಾಗಿಯೂ ಇತ್ತು. ಆದರೆ ಈ ಬಾರಿ ಭಾರತೀಯ ಸೇನೆ ತೋರಿದ ಸಂಭ್ರಮ ಬಲು ಅಪರೂಪದ್ದು.

ಈ ಲೇಖನ ಓದುವ ವೇಳೆಗಾಗಲೇ ರಂಜಾನ್ ಮಾಸ ಮುಗಿದು ಹಬ್ಬವೂ ಕಳೆದುಬಿಟ್ಟಿರುತ್ತದೆ. ಅದರೊಟ್ಟಿಗೆ ಕೇಂದ್ರ ಸರ್ಕರ ಏಕಪಕ್ಷೀಯವಾಗಿ ಘೋಷಿಸಿದ್ದ ಕದನವಿರಾಮವೂ ಅಂತ್ಯಗೊಳ್ಳುತ್ತದೆ. 2017 ರಲ್ಲಿ ಭಾರತೀಯ ಸೇನೆ ಆರಂಭಿಸಿದ್ದ ಆಪರೇಶನ್ ಆಲ್ ಔಟ್ ಒಂದು ಮಹತ್ವಪೂರ್ಣ ಘಟ್ಟವನ್ನು ರಂಜಾನ್ನ ವೇಳೆಗೆ ಮುಟ್ಟಿತ್ತು. ಈ ವೇಳೆಗೆ ಕದನ ವಿರಾಮವನ್ನು ಭಾರತ ಸಕರ್ಾರ ಘೋಷಿಸಬಹುದೆಂದು ಯಾರು ಊಹಿಸಿಯೂ ಇರಲಿಲ್ಲ. ನರೇಂದ್ರಮೋದಿಯವರು ಬಲು ಎಚ್ಚರಿಕೆಯಿಂದ ಇಟ್ಟ ಹೆಜ್ಜೆ ಅದಾಗಿತ್ತು. ಕದನ ವಿರಾಮದ ಘೋಷಣೆಯಾಗಬೇಕೆಂದು ಮೆಹಬೂಬ ಮುಫ್ತಿ ಗೋಗರೆದು ಕೇಳಿಕೊಂಡಿದ್ದರು. ಕಶ್ಮೀರದ ಮೂಲೆ ಮೂಲೆಗಳಲ್ಲಿಯೂ ಆಕೆಗದು ಬಲವನ್ನು ತಂದುಕೊಡುತ್ತಿತ್ತು. ಆರಂಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕದನ ವಿರಾಮದ ಸಾಧ್ಯತೆಯನ್ನು ತಳ್ಳಿಹಾಕಿಬಿಟ್ಟಿದ್ದರು. ಅದಾದ ಒಂದೆರಡು ದಿನಗಳಲ್ಲಿಯೇ ಗೃಹ ಸಚಿವ ರಾಜನಾಥ್ ಸಿಂಗ್ ಸಕರ್ಾರ ಕದನ ವಿರಾಮಕ್ಕೆ ಮನಸ್ಸು ಮಾಡಿರುವುದಾಗಿ ಘೋಷಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಬಲಪಂಥೀಯರೆಲ್ಲಾ ಸಕರ್ಾರದ ವಿರುದ್ಧ ತಿರುಗಿ ಬಿದ್ದಿದ್ದರು. ಸ್ವತಃ ಮೋದಿ ಕಾಶ್ಮೀರಕ್ಕೆ ಹೋಗಿ ಇದರ ಕುರಿತಂತೆ ಧನಾತ್ಮಕವಾಗಿಯೇ ಮಾತನಾಡಿ ಕದನವಿರಾಮದ ನಿಧರ್ಾರವನ್ನು ಸಮಥರ್ಿಸಿಕೊಂಡಿದ್ದರು. ಅಚ್ಚರಿಯೆಂದರೆ ಈ ಕದನ ವಿರಾಮ ಕಶ್ಮೀರದ ಪ್ರತ್ಯೇಕತಾವಾದಿಗಳಿಗೆ ಬಲುದೊಡ್ಡ ಆಘಾತವನ್ನೇ ಉಂಟುಮಾಡಿದೆ. ಹಿಂದೂ ಪರವಾಗಿರುವಂಥ ಭಾಜಪ ಹೀಗೊಂದು ಮುಸಲ್ಮಾನರ ಹೃದಯಕ್ಕೆ ತಂಪೆರೆಯಬಲ್ಲ ನಿರ್ಣಯ ತೆಗೆದುಕೊಳ್ಳಬಲ್ಲದೆಂಬುದನ್ನು ಯಾರೂ ಊಹಿಸಿಯೂ ಇರಲಿಲ್ಲ. ಕಾಶ್ಮೀರದ ಸಾಮಾನ್ಯ ಜನತೆ ಆಪರೇಶನ್ ಆಲ್ ಔಟ್ನ ಸಂದರ್ಭದಲ್ಲಿ ಮನೆ-ಮನೆಗೆ ನುಗ್ಗಿ ಭಯೋತ್ಪಾದಕರನ್ನು ಹಿಡಿಹಿಡಿದು ಬಗ್ಗು ಬಡಿಯುತ್ತಿದ್ದ ಸೈನಿಕರ ಕಾಯರ್ಾಚರಣೆಯಿಂದ ಇನ್ನು ಮುಂದೆ ಮುಕ್ತಿ ದೊರೆಯಿತೆಂದು ನಿಟ್ಟುಸಿರು ಬಿಟ್ಟರು. ಕಾಶ್ಮೀರ ಈ ರೀತಿಯ ಶಾಂತ ಸ್ಥಿತಿಗೆ ಮರಳುವುದನ್ನು ಅರಿತೊಡನೆ ಪಾಕಿಸ್ತಾನ ಬೆಂಬಲಿತ ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಚಡಪಡಿಕೆಗೆ ಒಳಗಾಗುತ್ತಾರೆ. ಈ ಬಾರಿಯೂ ಹಾಗೆಯೇ ಆಯ್ತು. ಹೇಗಾದರೂ ಮಾಡಿ ಸೈನಿಕರನ್ನು ಭಡಕಾಯಿಸಿ ಕದನವಿರಾಮವನ್ನು ಅವರೇ ಮುರಿಯುವಂತೆ ಮಾಡಬೇಕೆಂಬ ಪ್ರಯತ್ನ ಪ್ರತ್ಯೇಕತಾವಾದಿಗಳಲ್ಲಿ ಖಂಡಿತವಾಗಿಯೂ ಇತ್ತು. ಆದರೆ ಈ ಬಾರಿ ಭಾರತೀಯ ಸೇನೆ ತೋರಿದ ಸಂಭ್ರಮ ಬಲು ಅಪರೂಪದ್ದು. ಗಡಿ ತುದಿಯಲ್ಲಿ ಅಪ್ರಚೋದಿತ ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಮೇಲೆ ನಿರಂತರ ಗುಂಡಿನ ಸುರಿಮಳೆಗೈದು ಪಾಕಿಸ್ತಾನದ ಡಿಜಿಎಂಒ ಭಾರತದ ಡಿಜಿಎಂಒಗೆ ಮಾತನಾಡಿ ಕದನವಿರಾಮದ ಉಲ್ಲಂಘನೆ ಇನ್ನು ಮುಂದೆ ಮಾಡುವುದು ಬೇಡ ಎಂದು ಗೋಗರೆಯುವ ಸ್ಥಿತಿ ನಿಮರ್ಾಣವಾಗಿತ್ತು. ಭಾರತದ ಸೈನಿಕರಿಗಿದ್ದ ಆದೇಶ ಬಲು ನಿಚ್ಚಳವಾಗಿತ್ತು. ತಾವಾಗಿಯೇ ಕಾಯರ್ಾಚರಣೆ ನಡೆಸುವಂತಿಲ್ಲ ಆದರೆ ಪ್ರಚೋದನೆ ಬಂದರೆ ಬಿಡುವಂತೇನಿಲ್ಲ. ಸೇನೆಗೂ ಸಿಆರ್ಪಿಎಫ್ಗೂ ಸಣ್ಣ ವ್ಯತ್ಯಾಸವಿದೆ. ಸೇನೆಗೆ ಬಂದೂಕೆತ್ತಲು ಮೇಲಿನ ಆದೇಶಕ್ಕೆ ಕಾಯಬೇಕಂತಿಲ್ಲ. ಆದರೆ ಸಿಆರ್ಪಿಎಫ್ ಜವಾನ ತಾನಾಗಿಯೇ ನಿರ್ಣಯ ತೆಗೆದುಕೊಳ್ಳುವಂತಿಲ್ಲ. ಆತನದ್ದು ತಡೆಯುವುದಷ್ಟೇ ಕೆಲಸ ಹೊಡೆಯುವುದಲ್ಲ. ಇದು ಗೊತ್ತಿದ್ದುದರಿಂದಲೇ ಕಾಶ್ಮೀರದ ಪುಂಡರು ಸಿಆರ್ಪಿಎಫ್ ಜವಾನರ ಮೇಲೆ ಕಲ್ಲೆಸೆಯುತ್ತಾರೆ. ಸೇನೆಯವರ ಮೇಲೆ ಕಲ್ಲೆಸೆದರೆ ಬಚಾವಾಗುವುದು ಕಷ್ಟ ಎಂದು ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ ರಂಜಾನಿನ ಪವಿತ್ರ ಆಚರಣೆಯ ಹೊತ್ತಲ್ಲೇ ಕಲ್ಲೆಸೆದು; ಸಿಆರ್ಪಿಎಫ್ ಸೈನಿಕನನ್ನು ಜಗ್ಗಾಡಿ ಅವನ ಚಕ್ರದ ಕೆಳಗೆ ಸಿಕ್ಕಿಹಾಕಿಕೊಂಡು ಒಬ್ಬ ಸತ್ತದ್ದು.

1

ಆಗಲೇ ಕಾಶ್ಮೀರದ ದಿ ರೈಸಿಂಗ್ ಕಶ್ಮೀರ್ ನ ಮುಖ್ಯ ಸಂಪಾದಕ ಶುಜಾತ್ ಭುಖಾರಿ ಸೈನ್ಯದ ವಿರುದ್ಧ ಲೇಖನಗಳನ್ನು ಬರೆದದ್ದು. ಆತ ಮೊದಲಿನಿಂದಲೂ ಪ್ರಭುತ್ವದ ವಿರುದ್ಧವೇ. ಕಶ್ಮೀರಿಯತ್ತನ್ನು ಉಳಿಸಬೇಕು ಎನ್ನುವ ಮಾತನಾಡುತ್ತಲೇ ಭಯೋತ್ಪಾದಕರ ಬೆಂಬಲಕ್ಕೆ ನಿಂತವನು. ನರೇಂದ್ರಮೋದಿ ಕದನವಿರಾಮ ಘೋಷಣೆ ಮಾಡಿದಾಗಿನಿಂದಲೂ ಅವರ ವಿರುದ್ಧ ಬೆಂಕಿ ಕಾರುತ್ತಿದ್ದ. ಟೆರರಿಸಂ ಮತ್ತು ಟೂರಿಸಂನ ನಡುವೆ ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ನರೇಂದ್ರಮೋದಿಯವರು ಹೇಳಿದ್ದನ್ನು ಆತ ಮೂದಲಿಸುತ್ತಿದ್ದ. ವಾಜಪೇಯಿಯವರು ಮಾತನಾಡುತ್ತಿದ್ದ ಕಶ್ಮೀರಿಯತ್ತಿನ ಕುರಿತಂತೆ ನರೇಂದ್ರಮೋದಿಯವರು ಮಾತನಾಡುವುದು ನಿಜ. ಆದರೆ ಕಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ಜಂಮೂರಿಯತ್ತನ್ನು ಮರೆತೇ ಬಿಟ್ಟಿದ್ದಾರೆ ಎಂದು ಕಟಕಿಯಾಡುತ್ತಿದ್ದ. ಕಶ್ಮೀರದ ಸಮಸ್ಯೆಗೆ ಪರಿಹಾರ ಅಭಿವೃದ್ಧಿಯೊಂದೇ ಎಂದು ಮೋದಿ ಹೇಳಿದ್ದನ್ನು ಅವನು ಎಂದಿಗೂ ಒಪ್ಪಿಕೊಂಡವನೇ ಅಲ್ಲ. ಹಾಗಾಗುವುದಿದ್ದರೆ 80 ಸಾವಿರ ಕೋಟಿ ರೂಪಾಯಿಯ ಯೋಜನೆಯನ್ನು ಕಶ್ಮೀರಕ್ಕೆ ಘೋಷಿಸಿದಾಗ ಕಶ್ಮೀರದಲ್ಲಿ ಬದಲಾವಣೆ ಕಾಣಬೇಕಿತ್ತು ಎಂಬುವುದು ಅವನ ಅನಿಸಿಕೆ. ಕಾಶ್ಮೀರಕ್ಕೆ ಬೇಕಿರುವುದು ಸ್ವಾತಂತ್ರ್ಯ ಮಾತ್ರ ಎಂದು ಅವನು ಯಾವಾಗಲೂ ಭಾವಿಸುತ್ತಿದ್ದ. ಎಲ್ಲಾ ಬಲಪಂಥೀಯರು ಮೋದಿಯ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತಿದ್ದರೆ ಶುಜಾತ್ ಭುಖಾರಿ ಮಾತ್ರ ಮೋದಿಯ ಚಾಣಾಕ್ಷ ನಡೆಯ ಅಂತರಂಗವನ್ನು ಗುರುತಿಸಿಬಿಟ್ಟಿದ್ದ. ಜನರನ್ನು ಭಡಕಾಯಿಸುವಲ್ಲಿ ಮತ್ತು ರಂಜಾನಿನ ಕಾಲದ ಕದನ ವಿರಾಮ ಮುರಿಸಿ ಕದನದ ಪರಿಸ್ಥಿತಿಯನ್ನು ನಿಮರ್ಾಣ ಮಾಡಬೇಕು ಎನ್ನುವುದರಲ್ಲಿ ಶುಜಾತ್ ಪಾತ್ರವೂ ಸಾಕಷ್ಟಿತ್ತು. ಸಿಆರ್ಪಿಎಫ್ ಜವಾನರ ಗಾಡಿಯ ಚಕ್ರಕ್ಕೆ ಸಿಲುಕಿ ಕಲ್ಲೆಸೆತಗಾರನೊಬ್ಬ ಸತ್ತಾಗ ಆ ಚಿತ್ರವನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸೈನಿಕರ ವಿರುದ್ಧ ಸಾರ್ವತ್ರಿಕ ದಂಗೆಗೆ ಪ್ರಚೋದನೆಯನ್ನೂ ನೀಡಿದ್ದ. ಖ್ಯಾತ ಪತ್ರಕರ್ತ ರಂಗನಾಥನ್ ಸಭೆಯೊಂದರಲ್ಲಿ ಶುಜಾತ್ ಭುಖಾರಿಯ ಈ ಬಗೆಯ ದೇಶವಿರೋಧೀ ವ್ಯಕ್ತಿತ್ವದ ಕುರಿತಂತೆ ಆತಂಕದಿಂದ ಮಾತನಾಡಿದ್ದರು.

ಅಚ್ಚರಿಯೇನೋ ಎಂಬಂತೆ ಮೊನ್ನೆ ಇತ್ತೀಚೆಗೆ ಶ್ರೀನಗರ ಲಾಲ್ಚೌಕ್ನಲ್ಲಿ ಪತ್ರಕರ್ತರ ಸಭೆಯೊಂದರಿಂದ ಹೊರಬಂದ ಶುಜಾತ್ ಭುಖಾರಿಯನ್ನು ಮುಸುಕು ಹಾಕಿಕೊಂಡು ಬಂದ ಮೂರು ಜನ ಉಗ್ರಗಾಮಿಗಳು ನಡುರಸ್ತೆಯಲ್ಲೇ ಗುಂಡು ಹೊಡೆದು ಕೊಂದು ಬಿಸಾಡಿದ್ದರು. ಕಶ್ಮೀರದ ಸ್ವಾತಂತ್ರ್ಯಕ್ಕಾಗಿ ಸೈನಿಕರ ರಕ್ತ ಹರಿಸುವಂತೆ ಕರೆ ಕೊಡುತ್ತಿದ್ದ ಭುಖಾರಿ ತಾವೇ ರಕ್ತ ಹರಿಸಿ ಅನಾಮತ್ತಾಗಿ ಬಿದ್ದುಕೊಂಡಿದ್ದರು.

2
ಅದರೊಟ್ಟಿಗೇ ಲೆಫ್ಟಿನೆಂಟ್ ಉಮರ್ ಖಲೀದ್ರನ್ನು ಮರೆಯುವ ಮುನ್ನವೇ ರಾಷ್ಟ್ರೀಯ ರೈಫಲ್ಸ್ನ ಸೈನಿಕ ಔರಂಗಜೇಬರ ಹತ್ಯೆಯಾಗಿದೆ. ಹಬ್ಬವನ್ನಾಚರಿಸಲು ರಜೆ ಪಡೆದು ಮನೆಗೆ ಹೋಗುತ್ತಿದ್ದ ಔರಂಗಜೇಬ್ ಅಪಹರಣಕ್ಕೊಳಗಾಗಿ ಕಾಣೆಯಾಗಿಬಿಟ್ಟಿದ್ದರು. ಅವರು ಪತ್ತೆಯಾದಾಗ ಗುಂಡೇಟು ತಿಂದು ಕಲ್ಲಿನಿಂದ ಹೊಡೆದು ಕೊಂದ ಸ್ಥಿತಿಯಲ್ಲಿದ್ದರು. ಪ್ರತಿ ರಂಜಾನಿಗೊಬ್ಬ ಮುಸಲ್ಮಾನ ಸೈನಿಕನನ್ನು ಕೊಲ್ಲುವ ಉದ್ದೇಶವಾದರೂ ಏನಿದ್ದಿರಬಹುದೆಂದು ಮೇಲ್ನೋಟಕ್ಕೆ ಅರ್ಥವಾಗಲಾರದು ಆದರೆ ವಾಸ್ತವವಾಗಿ ನರೇಂದ್ರಮೋದಿ ಬಂದಾಗಿನಿಂದ ಬದಲಾಗುತ್ತಿರುವ ಜಮ್ಮು-ಕಾಶ್ಮೀರದ ಚಹರೆ ಜಾಗತಿಕ ಮಟ್ಟದಲ್ಲಿ ಗಾಬರಿ ಹುಟ್ಟಿಸಿದೆ. ಅಲ್ಲಿನ ತರುಣರು ಈಗ ಸೈನ್ಯಕ್ಕೆ ಸೇರುತ್ತಾರೆ. ಸಿವಿಲ್ ಸವರ್ೀಸ್ ಪರೀಕ್ಷೆಗಳಲ್ಲಿ ರ್ಯಾಂಕು ಗಳಿಸುತ್ತಾರೆ, ಕ್ರಿಕೆಟ್ ಸ್ಟಾರುಗಳಾಗುತ್ತಾರೆ ಎಲ್ಲರಂತೆ ಬದುಕಿ ತಾವು ಮುಖ್ಯವಾಹಿನಿಗೆ ಬರಬೇಕೆಂದು ಬಯಸುತ್ತಾರೆ. ಇದು ಹೆಚ್ಚು ಹೆಚ್ಚಾದಷ್ಟು ಭಯೋತ್ಪಾದನೆಗೆ ಸಿಗುವ ಮೂಲವಸ್ತು ಕಡಿಮೆಯಾಗುತ್ತಲೇ ಹೋಗುವುದರಿಂದ ಅಸ್ತಿತ್ವ ಉಳಿಸಿಕೊಳ್ಳಲು ಕೃತಕವಾಗಿಯಾದರು ಈ ಭಯವನ್ನು ಹುಟ್ಟಿಸುವುದು ಅನಿವಾರ್ಯ. ಹಾಗೆಂದೇ ಎಲ್ಲ ಕ್ಷೇತ್ರಗಳಲ್ಲಿಯೂ ಕೊಲೆಗಳು ತೀರಾ ಸಾಮಾನ್ಯವಾಗುತ್ತಿವೆ. ಕಾಶ್ಮೀರದಲ್ಲಿಯಂತೂ ರಾಷ್ಟ್ರದ ಪರ ವಿರೋಧ ಎಂಬುದೇನೂ ಇಲ್ಲ. ಇಸ್ಲಾಮಿನ ರಕ್ಷಣೆಯಂತೂ ಬಲು ದೂರದ ಮಾತು. ಪ್ರತಿಯೊಬ್ಬರಿಗೂ ತಮಗೆ ದಕ್ಕುವ ಲಾಭದ್ದಷ್ಟೇ ಚಿಂತೆ. ಮಹಮ್ಮದ್ ಅಲಿ ಜಿನ್ಹಾನ ಮಹತ್ವಾಕಾಂಕ್ಷೆಗೆ ಬಲಿಯಾದ ಮುಸಲ್ಮಾನರು ಇಂದು ಪಾಕಿಸ್ತಾನದಲ್ಲಿ ಚರಂಡಿಯ ಹುಳುಗಳಿಗಿಂತ ಕೆಟ್ಟ ಬದುಕು ನಡೆಸುತ್ತಿದ್ದಾರೆ. ಕಶ್ಮೀರದ ಕಥೆಯೂ ಅದೇ. ಅತ್ತ ಪ್ರತ್ಯೇಕತಾವಾದಿಗಳಾಗಿ ಭಾರತ ಸಕರ್ಾರದ ವಿರುದ್ಧ ನಿಂತು ಪಾಕಿಸ್ತಾನದಿಂದ ಹಣ ಪಡೆಯುವವರು ಇತ್ತ ಸಕರ್ಾರದ ಮಜರ್ಿಯನ್ನೂ ಗಳಿಸಿ ಡಬಲ್ ಏಜೆಂಟುಗಳಾಗಿಬಿಡುತ್ತಾರೆ. ಅದು ಗೊತ್ತಾದೊಡನೆ ಅವರ ಅಂತ್ಯ ಕಟ್ಟಿಟ್ಟ ಬುತ್ತಿಯೇ. ಭುಖಾರಿಯ ಹತ್ಯೆಯಲ್ಲಿ ಈ ಬಗೆಯ ಹಿನ್ನೆಲೆ ಏನಾದರೂ ಇದ್ದಿರಬಹುದೇ ಎನ್ನುವುದು ಕಾಡುತ್ತಿರುವ ಪ್ರಶ್ನೆ. ಆತನನ್ನು ಕೊಂದವರ ಚಿತ್ರಗಳಂತೂ ಸಿಕ್ಕಿವೆ. ಬೈಕಿನಲ್ಲಿ ಬಂದ ಮೂವರು ಭುಖಾರಿಯನ್ನು ಕೊಂದ ಒಂದೆರಡು ನಿಮಿಷ ಅಲ್ಲಿಯೇ ನಿಂತು ಆತ ಸತ್ತದ್ದನ್ನು ಖಾತ್ರಿ ಪಡೆಸಿಕೊಂಡೇ ಹೋಗಿದ್ದಾರೆ. ಸದಾ ಕಲ್ಲೆಸೆತ, ಗುಂಡಿನ ಮೊರೆತಗಳಿಂದ ತುಂಬಿರುವ ಲಾಲ್ಚೌಕ್ಗೆ ಈ ಬಗೆಯ ಒಂದೆರಡು ಗುಂಡುಗಳ ಸದ್ದು ಪಟಾಕಿ ಸಿಡಿದಂತೆ ಭಾಸವಾಗಿದ್ದಿರಬಹುದು. ಆದರೆ ಈ ಹತ್ಯೆಯಿಂದ ಭಯೋತ್ಪಾದಕರ ಕೈ ಒಂದು ಮುಷ್ಟಿಯಷ್ಟು ಮೇಲಾಗಿದ್ದಂತೂ ನಿಜ. ಹೊಸಬರ್ಯಾರೂ ಇನ್ನು ಮುಂದೆ ಧೈರ್ಯವಾಗಿ ರಾಷ್ಟ್ರದ ಪರ ನಿಲ್ಲಲಾರರು.

featured

ಇಡಿಯ ಕಶ್ಮೀರದ ಸಮಸ್ಯೆ ಶ್ರೀನಗರ, ಶೋಪಿಯಾನ್ ಮತ್ತು ಪಾಕಿಸ್ತಾನದ ಗಡಿಗೆ ಹತ್ತಿರವಿರುವ ಬಾರಮುಲ್ಲಾ, ಉರಿ ಭಾಗಗಳಲ್ಲಿ ಮಾತ್ರ. ಅಲ್ಲಿಯೂ ಹಳ್ಳಿಗರು ಈ ಎಲ್ಲಾ ಕಿರಿಕಿರಿಯಿಂದ ಮುಕ್ತವಾಗಿ ಸಹಜವಾದ ಬದುಕನ್ನು ನಡೆಸಲು ಹಾತೊರೆಯುತ್ತಿದ್ದಾರೆ. ಹೇಗೆ ಒಬ್ಬ ಭಗವಾನ್, ಗೌರಿ ಲಂಕೇಶ್, ಪ್ರಕಾಶ್ ರಾಜ್, ದಿನೇಶ್ ಅಮೀನ್ ಮಟ್ಟು ಅಂಥವರು ಅರ್ಬನ್ ನಕ್ಸಲ್ಗಳಾಗಿ ಸಮಾಜದಲ್ಲಿ ಇಲ್ಲವಾದ್ದನ್ನೆಲ್ಲಾ ಇದೆಯೆಂದು ಬಿಂಬಿಸಲು ಪ್ರಯತ್ನ ಪಡುತ್ತಾರೋ ಹಾಗೆಯೇ ಕಾಶ್ಮೀರದ ಅರ್ಬನ್ ನಕ್ಸಲರೂ ಕೂಡ. ಇವರ ಸಂಖ್ಯೆ ಬಲು ಕಡಿಮೆಯಾದರೂ ಸದ್ದು ಮಾತ್ರ ಬಲು ಜೋರು. ವಿದೇಶದಿಂದ ಹಣ ಪಡೆದು ಕಾರ್ಯನಿರ್ವಹಿಸುವ ಇವರು ತಾವು ಹೇಳಿದ್ದೇ ಸತ್ಯವೆಂದು ಜಗತ್ತನ್ನೆಲ್ಲಾ ನಂಬಿಸಿಬಿಡಬಲ್ಲರು. ರಂಜಾನ್ ಮುಗಿದೊಡನೆ ಭಯೋತ್ಪಾದಕರ ಸದ್ದಡಗಿಸಿ ಕಾಶ್ಮೀರದ ಬಹುಪಾಲು ಶಾಂತಿಪ್ರಿಯ ಜನರನ್ನು ಬಲಗೊಳಿಸುವ ಕೆಲಸ ಖಂಡಿತವಾಗಿಯೂ ಮುಂದಿದೆ. ಮೋದಿ ಅದಕ್ಕೆ ಸಜ್ಜಾಗಿದ್ದಾರೆ ಕೂಡ. ಭಾರತೀಯ ಸೇನೆ ಸಮವಸ್ತ್ರವನ್ನು ಇಸ್ತ್ರಿ ಮಾಡಿಸಿಕೊಂಡು ಕಾಯುತ್ತಿದೆ. ಲೆಕ್ಕ ಚುಕ್ತಾ ಮಾಡುವ ವಿಚಾರಗಳು ಸದ್ಯದಲ್ಲೇ ಕಿವಿಗೆ ಅಪ್ಪಳಿಸಲಿವೆ, ಸ್ವಲ್ಪ ಕಾಯಬೇಕು ಅಷ್ಟೇ.

Comments are closed.