ವಿಭಾಗಗಳು

ಸುದ್ದಿಪತ್ರ


 

ರಫೆಲ್ ಡೀಲ್ ಒಂದಷ್ಟು ಪ್ರಶ್ನೆ, ಉತ್ತರಗಳು!

ರಫೆಲ್ ಕೊಳ್ಳುವಿಕೆಯಲ್ಲಿ ಐದು ವರ್ಷಗಳ ಕಾಲ ಚೌಕಶಿ ನಡೆಸಿದ ಕಾಂಗ್ರೆಸ್ಸು ಒಪ್ಪಂದವನ್ನು ಮಾಡಿಕೊಂಡ ನಂತರವೂ ಕೈಬಿಟ್ಟಿತ್ತು. ಇದರ ಹಿಂದಿರುವ ಕಾರಣಗಳು ಈಗ ಒಂದೊಂದಾಗಿ ಬಯಲಿಗೆ ಬರುತ್ತಿವೆ. ವಾದ್ರಾನ ಮಿತ್ರ ಸಂಜಯ್ ಭಂಡಾರಿ ಎಂಬ ಮಧ್ಯವತರ್ಿಯ ಹೆಸರೂ ತಳುಕು ಹಾಕಿಕೊಂಡಿರುವುದರಿಂದ ರಫೆಲ್ನ ಖರೀದಿಯಲ್ಲಿ ಆಗಬಹುದಾಗಿದ್ದ ದೊಡ್ಡ ಹಗರಣವೊಂದು ಕಾಂಗ್ರೆಸ್ ಸಕರ್ಾರದ ಪತನದಿಂದಾಗಿ ಉಳಿದುಹೋಯ್ತು ಎನ್ನಲಾಗುತ್ತಿದೆ.

ರಫೆಲ್ ಡೀಲ್ ಏನಿದು?
ಕಾಗರ್ಿಲ್ ಯುದ್ಧದ ನಂತರ ವಾಯುಸೇನೆಯಲ್ಲಿ ದೂರದಿಂದಲೇ ದಾಳಿ ಮಾಡಬಲ್ಲ ಮತ್ತು ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ಭೂಮಿಯ ಮೇಲಿರುವ ಗುರಿಯೆಡೆಗೆ ದಾಳಿ ಮಾಡಬಲ್ಲ ಸಾಮಥ್ರ್ಯವುಳ್ಳ ಮಲ್ಟಿರೋಲ್ ಕಂಬಾಟ್ ಏರ್ಕ್ರಾಫ್ಟ್ಗಳ ಅಗತ್ಯ ಕಂಡುಬಂದಿತ್ತು. ಆ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿದ್ದ ಎಲ್ಲ ವಿಮಾನಗಳಿಗಿಂತಲೂ ಸಶಕ್ತವಾಗಿದ್ದು ರಫೆಲ್ ಆಗಿದ್ದರಿಂದ ಫ್ರಾನ್ಸಿನೊಂದಿಗೆ ಈ ವಿಮಾನಗಳ ಖರೀದಿಗೆಂದು ಮಾಡಿಕೊಂಡ ಒಪ್ಪಂದವೇ ರಫೆಲ್ ಡೀಲ್.

6

ರಫೆಲ್ ಯಾಕೆ?
ಅಮೆರಿಕಾದ ಎಫ್-16, ಸ್ವಿಡನ್ನಿನ ಗ್ರಿಪೆನ್, ರಷ್ಯಾದ ಮಿಗ್, ಯುರೋಪಿನ ಯೂರೊಫೈಟರ್ ಟೈಫೂನ್ಗಳು ರಫೆಲ್ನೊಂದಿಗೆ ತುಲನೆ ಮಾಡಬಹುದಾದಂಥವು. ಆದರೆ ನಮ್ಮ ಶತ್ರುಗಳಾದ ಚೀನಾ ಮತ್ತು ಪಾಕಿಸ್ತಾನವನ್ನು ಗಮನದಲ್ಲಿರಿಸಿಕೊಂಡು ನಾವು ಕೊಳ್ಳಬಹುದಾದ ವಿಮಾನಗಳು ಯೂರೊಫೈಟರ್ ಅಥವಾ ರಫೆಲ್ ಮಾತ್ರ. ರಫೆಲ್ಗಿರುವ ವಿಶೇಷ ರೆಡಾರ್ ವ್ಯವಸ್ಥೆ 40 ಶತ್ರು ವಿಮಾನಗಳನ್ನು ಗುರುತಿಸಬಹುದಲ್ಲದೇ 8 ಯುದ್ಧವಿಮಾನಗಳೊಂದಿಗೆ ತಾನು ಕಾದಾಡಬಲ್ಲುದು. ಇದು ಚೀನಾ ಪಾಕಿಸ್ತಾನದ ಫೈಟರ್ ಜೆಟ್ಗಳ ಎದುರಿಗೆ ನಮ್ಮ ಶಕ್ತಿಯನ್ನು ಸಾಕಷ್ಟು ವೃದ್ಧಿಸುತ್ತದೆ. ರಫೆಲ್ ಅನ್ನು ನೌಕಾಸೇನೆಯೂ ಬಳಸಬಹುದು. ಅಲ್ಲದೇ ಇದನ್ನು ಉತ್ಪಾದಿಸುವ ಕಂಪನಿ ದಸಾಲ್ಟ್ ನಾವು ಅದಾಗಲೇ ಬಳಸುವ ಮಿರೇಜ್ ಅನ್ನೂ ಉತ್ಪಾದಿಸಿದ್ದರಿಂದ ಉಪಯೋಗದ ದೃಷ್ಟಿಯಿಂದ ಹೊಸ ವಿಮಾನಗಳನ್ನು ತರುವುದಕ್ಕಿಂತ ಇದು ಲಾಭದಾಯಕ. ಇದಕ್ಕಾಗಿ ಪ್ರತ್ಯೇಕ ಮೂಲಭೂತಸೌಕರ್ಯದ ಅಭಿವೃದ್ಧಿ ಮಾಡಬೇಕಾದ ಜರೂರತ್ತಿಲ್ಲ ಮತ್ತು ಇದನ್ನು ಚಲಾಯಿಸುವ ಪೈಲಟ್ಗಳಿಗೆ ವಿಶೇಷ ತರಬೇತಿ ನೀಡುವ ಅವಶ್ಯಕತೆಯೂ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ರಫೆಲ್ನ ಬೆಲೆ ಯುರೊಫೈಟರ್ಗಿಂತ ಸಾಕಷ್ಟು ಮಟ್ಟಿಗೆ ಕಡಿಮೆಯಿದೆ.

ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್ಸು ರಫೆಲ್ ಕೊಳ್ಳಲಿಲ್ಲ ಏಕೆ?
ರಫೆಲ್ ಕೊಳ್ಳುವಿಕೆಯಲ್ಲಿ ಐದು ವರ್ಷಗಳ ಕಾಲ ಚೌಕಶಿ ನಡೆಸಿದ ಕಾಂಗ್ರೆಸ್ಸು ಒಪ್ಪಂದವನ್ನು ಮಾಡಿಕೊಂಡ ನಂತರವೂ ಕೈಬಿಟ್ಟಿತ್ತು. ಇದರ ಹಿಂದಿರುವ ಕಾರಣಗಳು ಈಗ ಒಂದೊಂದಾಗಿ ಬಯಲಿಗೆ ಬರುತ್ತಿವೆ. ವಾದ್ರಾನ ಮಿತ್ರ ಸಂಜಯ್ ಭಂಡಾರಿ ಎಂಬ ಮಧ್ಯವತರ್ಿಯ ಹೆಸರೂ ತಳುಕು ಹಾಕಿಕೊಂಡಿರುವುದರಿಂದ ರಫೆಲ್ನ ಖರೀದಿಯಲ್ಲಿ ಆಗಬಹುದಾಗಿದ್ದ ದೊಡ್ಡ ಹಗರಣವೊಂದು ಕಾಂಗ್ರೆಸ್ ಸಕರ್ಾರದ ಪತನದಿಂದಾಗಿ ಉಳಿದುಹೋಯ್ತು ಎನ್ನಲಾಗುತ್ತಿದೆ. ಹೀಗಾಗಿ ರಫೆಲ್ನ ಬೆಲೆಯ ಕುರಿತಂತೆ ಮಾತನಾಡುತ್ತಿರುವ ರಾಹುಲ್ 2012 ರಲ್ಲಿ ಆದ ಒಪ್ಪಂದದ ಪ್ರಕಾರ ನಡೆಯಬೇಕಿದ್ದ ಖರೀದಿ ನಿಂತಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರವನ್ನೇ ಕೊಡುತ್ತಿಲ್ಲ.

7

ಮೋದಿ ವಿಮಾನಗಳ ಖರೀದಿಯಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಂಡರೆ?
ರಫೆಲ್ಗಳ ಅಗತ್ಯ ಮನಗಂಡು ವಾಯುಸೇನೆಯೊಂದಿಗೆ ನಿರಂತರ ಚಚರ್ೆ ನಡೆಸಿದ ಮೋದಿ ಹಳೆಯ ಒಪ್ಪಂದದಲ್ಲಿರುವ ನ್ಯೂನತೆಗಳನ್ನು ಗುರುತಿಸಿ 2015 ರಲ್ಲಿ ಫ್ರಾನ್ಸ್ಗೆ ಹೋದಾಗ ಹೊಸ ಒಪ್ಪಂದದ ಪ್ರಸ್ತಾವನೆ ಇಟ್ಟರು. ಕಾಂಗ್ರೆಸ್ಸಿನ ಒಪ್ಪಂದದ ಪ್ರಕಾರ 18 ರಫೆಲ್ಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಭಾರತಕ್ಕೆ ಬರಬೇಕಿತ್ತು, 108ನ್ನು ಹೆಚ್ಎಎಲ್ ನಿಮರ್ಿಸಬೇಕಿತ್ತು. ಆದರೆ ನರೇಂದ್ರಮೋದಿಯವರ ಪ್ರಸ್ತಾವನೆಯಲ್ಲಿ ಭಾರತಕ್ಕೆ 36 ರಫೆಲ್ಗಳು ಯುದ್ಧಸನ್ನದ್ಧ ಸ್ಥಿತಿಯಲ್ಲಿ ಬರಬೇಕಿದ್ದವು ಮತ್ತು ಇಲ್ಲಿ ಯುದ್ಧವಿಮಾನಗಳನ್ನು ತಯಾರು ಮಾಡುವ ಅಗತ್ಯವಿರಲಿಲ್ಲ. ಈ ಪ್ರಸ್ತಾವನೆಯೊಂದಿಗೆ ಹಳೆಯ ಒಪ್ಪಂದವನ್ನು ಮುರಿದು ಹಾಕಲಾಯ್ತು. ಪ್ರೈಸ್ ಮತ್ತು ಕಾಂಟ್ರಾಕ್ಟ್ ನೆಗೊಸಿಯೇಷನ್ ಕಮಿಟಿಗಳು 14 ತಿಂಗಳುಗಳ ಕಾಲ ಚೌಕಶಿ ನಡೆಸಿ 2016 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯ್ತು. ಒಪ್ಪಂದಕ್ಕೂ ಮುನ್ನ ಕ್ಯಾಬಿನೆಟ್ಟಿನ ಅನುಮೋದನೆಯನ್ನೂ ಪಡೆಯಲಾಗಿತ್ತು.

ರಫೆಲ್ನ ಮೌಲ್ಯದ ಕುರಿತಂತೆ ಇರುವ ಗೊಂದಲವಾದರೂ ಏನು?
ರಾಹುಲ್ನ ಪ್ರಕಾರ ಕಾಂಗ್ರೆಸ್ಸು ಸುಮಾರು 500 ಕೋಟಿಗೆ ಖರೀದಿ ಮಾಡುತ್ತಿದ್ದ ಯುದ್ಧವಿಮಾನಗಳನ್ನು ಹೊಸ ಸಕರ್ಾರ 1500 ಕೋಟಿ ರೂಪಾಯಿಗೆ ಖರೀದಿ ಮಾಡುತ್ತಿದೆ. ಆದರೆ ವಾಸ್ತವ ಹಾಗಲ್ಲ. ಹಳೆಯ ಸಕರ್ಾರ ಬೇಸಿಕ್ ಮಾಡೆಲ್ನ ರಫೆಲ್ ಅನ್ನು ಖರೀದಿ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದರೆ ಹೊಸ ಸಕರ್ಾರ ಶಸ್ತ್ರ ಸನ್ನದ್ಧ ಮತ್ತು ಅತ್ಯಾಧುನಿಕವಾದ ಸಚರ್್ ಅಂಡ್ ಟ್ರ್ಯಾಕ್ ಸಿಸ್ಟಮ್ ಒಳಗೊಂಡಂತಹ ಮತ್ತು ಲೇಹ್ನಂತಹ ಎತ್ತರದ ಸ್ಥಿತಿಗಳಲ್ಲಿ ಕೆಲಸ ಮಾಡಬಲ್ಲ ಇಂಜಿನ್ ಕ್ಷಮತೆಯುಳ್ಳ ಹೈ ಎಂಡ್ ಯುದ್ಧವಿಮಾನಗಳಿಗಾಗಿ ಒಪ್ಪಂದ ಮಾಡಿಕೊಂಡಿತು. ಇದೇ ಯುದ್ಧವಿಮಾನಗಳನ್ನು ಕತಾರ್ ಏರ್ಫೋಸರ್್ 1705 ಕೋಟಿಗೆ ಕೊಂಡುಕೊಂಡಿತ್ತು. ಅಷ್ಟೇ ಅಲ್ಲದೇ. ದಶಕದ ಹಿಂದೆ ಕಾಂಗ್ರೆಸ್ಸು ಕೊಂಡುಕೊಳ್ಳಲಿದ್ದ ರಫೆಲ್ ಎಫ್-3 ವರ್ಷನ್ನಿನದ್ದಾಗಿದ್ದರೆ ಈಗಿನದ್ದು ಅತ್ಯಾಧುನಿಕ ಏಫ್3ಆರ್ ವರ್ಷನ್ನಿನದ್ದಾಗಿತ್ತು. ಒಂದು ಅಂದಾಜಿನ ಪ್ರಕಾರ ಈ ಒಟ್ಟಾರೆ ಡೀಲಿನಲ್ಲಿ ನರೇಂದ್ರಮೋದಿಯವರ ಸಕರ್ಾರ ಕಳೆದ ಸಕರ್ಾರದ ಒಪ್ಪಂದಕ್ಕಿಂತಲೂ ಶೇಕಡಾ 40 ರಷ್ಟು ಹಣವನ್ನು ಉಳಿಸಿದ್ದಾರೆ. ಜೊತೆಗೆ ಈ ವಿಮಾನಗಳೊಂದಿಗೆ ಫ್ರಾನ್ಸ್ ತನ್ನ ಸೇನೆಯಲ್ಲಿದ್ದ 32 ನಿವೃತ್ತ ಜಾಗ್ವಾರ್ ಯುದ್ಧವಿಮಾನಗಳನ್ನು ಉಚಿತವಾಗಿ ಕೊಟ್ಟು ಇದನ್ನು ಭಾರತದಲ್ಲಿರುವ ಜಾಗ್ವಾರ್ ವಿಮಾನಗಳಿಗೆ ಬಿಡಿ ಭಾಗಗಳ ಪೂರೈಕೆಗೆ ಬಳಸಿಕೊಳ್ಳುವಂತೆ ಕೇಳಿಕೊಂಡಿದೆ. ರಾಹುಲ್ ಮೇಲೆ-ಕೆಳಗೆ, ಅಕ್ಕ-ಪಕ್ಕ ಯಾವ ದಿಕ್ಕಿನಿಂದ ನೋಡಿದರೂ ಈ ಒಪ್ಪಂದ ಹಿಂದೆಂದಿಗಿಂತಲೂ ಲಾಭದಾಯಕ.

ಈ ಒಪ್ಪಂದದಲ್ಲಿ ವಿಮಾನಗಳ ತಯಾರಿಕೆಗೆ ರಿಲಯನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವಂತೆ ಮೋದಿ ಒತ್ತಡ ಹೇರಿದ್ದರಾ?
ಈ ಇಡೀ ಒಪ್ಪಂದದಲ್ಲಿ ಭಾರತದಲ್ಲಿ ವಿಮಾನಗಳ ತಯಾರಿಕೆ ನಡೆಯುವುದೇ ಇಲ್ಲ. ಯುದ್ಧಸನ್ನದ್ಧ ವಿಮಾನಗಳು ನೇರವಾಗಿ ಫ್ರಾನ್ಸಿನಿಂದ ಇಲ್ಲಿಗೆ ಬರುತ್ತದೆ. ಕೇಂದ್ರ ಸಕರ್ಾರ ಹಾಕಿರುವ ನಿಯಮಕ್ಕೆ ಅನ್ವಯವಾಗಿ ಒಟ್ಟಾರೆ ಒಪ್ಪಂದದ ಹಣದಲ್ಲಿ 50 ಪ್ರತಿಶತವನ್ನು ಭಾರತದಲ್ಲಿ ವಿಮಾನಗಳ ಬಿಡಿ ಭಾಗಗಳ ತಯಾರಿಕೆಗೆಂದು ಹೂಡಲಾಗುತ್ತದೆ. ಈ ಬಿಡಿ ಭಾಗಗಳು ರಫೆಲ್ನದ್ದೇ ಆಗಿರಬೇಕೆಂದೇನಿಲ್ಲ. ದಸಾಲ್ಟ್ ತನಗೆ ಬೇಕಾಗಿರುವ ಅನ್ಯ ವಿಮಾನಗಳ ಬಿಡಿ ಭಾಗಗಳನ್ನೂ ಇಲ್ಲಿ ತಯಾರಿಸಬಹುದು. ಈ ಕೆಲಸಕ್ಕೆ ಅದು ಒಟ್ಟು 72 ಕಂಪನಿಗಳನ್ನು ಆಯ್ದುಕೊಂಡಿದೆ. ಅವುಗಳಲ್ಲಿ ಮಹೀಂದ್ರ, ಗಾದ್ರೇಜ್, ಎಲ್ ಆಂಡ್ ಟಿ, ರಿಲಯನ್ಸ್, ಡಿಆರ್ಡಿಒಗಳಲ್ಲದೇ ಹೆಚ್ಎಎಲ್ ಕೂಡ ಸೇರಿದೆ. ಹಾಗೆ ನೋಡಿದರೆ 2012 ರ ಒಪ್ಪಂದದಲ್ಲಿ ಹೆಚ್ಎಎಲ್ನೊಂದಿಗೆ ತನಗೆ ವಹಿವಾಟು ಸಾಧ್ಯವೇ ಇಲ್ಲವೆಂದು ದಸಾಲ್ಟ್ ಸ್ಪಷ್ಟವಾಗಿ ಹೇಳಿತ್ತು. ಮೋದಿ ಹೆಚ್ಎಎಲ್ ಅನ್ನೂ ಈ ಒಪ್ಪಂದದಲ್ಲಿ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಆರ್ಡಿಒ ಒಂದಕ್ಕೇ ಈ ಒಪ್ಪಂದದ ಮೂಲಕ 9000 ಕೋಟಿಗೂ ಹೆಚ್ಚು ಹಣ ಹೂಡಿಕೆಯ ರೂಪದಲ್ಲಿ ಬರಲಿದೆ.

8

ರಿಲಯನ್ಸ್ಗೆ ಶಸ್ತ್ರಾಸ್ತ್ರ ನಿಮರ್ಾಣ ಕ್ಷೇತ್ರದಲ್ಲಿ ಅನುಭವವೇ ಇಲ್ಲ. ಆದರೂ ದಸಾಲ್ಟ್ ಆಯ್ಕೆ ಮಾಡಿಕೊಂಡಿದ್ದೇಕೆ?
2015 ರಲ್ಲಿ ಗುಜರಾತಿನ ಪಿಪಾವಾ ಶಿಪ್ಯಾಡರ್್ ಅನ್ನು ರಿಲಯನ್ಸ್ ಕೊಳ್ಳುವುದರೊಂದಿಗೆ ಶಸ್ತ್ರಾಸ್ತ್ರ ಕ್ಷೇತ್ರದಲ್ಲಿ ತನ್ನ ಮೊದಲ ಹೆಜ್ಜೆಯನ್ನೂರಿತ್ತು. 2016 ರಲ್ಲಿ ಅನಿಲ್ ಅಂಬಾನಿ ಈ ಕಂಪೆನಿಯ ಮುಖ್ಯಸ್ಥರೂ ಆಗಿಬಿಟ್ಟರು. ರಿಲಯನ್ಸ್ ಡಿಫೆನ್ಸ್ ಆಂಡ್ ಎಂಜಿನಿಯರಿಂಗ್ ಎಂದು ಮರುನಾಮಕರಣಗೊಂಡ ಈ ಕಂಪನಿ ಜಗತ್ತಿನ ಅತ್ಯಂತ ದೊಡ್ಡ ಡ್ರೈಡಾಕ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ತೀರಾ ಇತ್ತೀಚೆಗೆ ಅಮೇರಿಕಾದಿಂದ 15,000 ಕೋಟಿ ರೂಪಾಯಿಯ ಗುತ್ತಿಗೆಯೊಂದನ್ನು ಪಡೆದಿದ್ದಲ್ಲದೇ ಈ ಕಂಪೆನಿ ಭಾರತದ ನೌಕಾಸೈನ್ಯಕ್ಕೆ ಸಚಿ ಮತ್ತು ಶೃತಿ ಎಂಬ ಗಸ್ತು ನೌಕೆಯನ್ನು ಸಮಪರ್ಿಸಿದೆ. ಇಷ್ಟಾದರೂ ರಿಲಯನ್ಸ್ಗೆ ಈ ಕ್ಷೇತ್ರದಲ್ಲಿ ಅನುಭವವಿಲ್ಲ ಎಂದು ರಾಹುಲ್ ಹೇಳುತ್ತಿರುವುದು ಕಾಂಗ್ರೆಸ್ಸಿನ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಜಗತ್ತಿನಲ್ಲೆಲ್ಲಾ ಖಾಸಗಿ ಕಂಪೆನಿಗಳು ಶಸ್ತ್ರ ನಿಮರ್ಾಣದಲ್ಲಿ ವಿಕ್ರಮವನ್ನೇ ಸಾಧಿಸಿದ್ದರೆ ನಾವಿನ್ನೂ ಅಂಬೆಗಾಲಿಡಲು ಸಾಧ್ಯವಾಗದಿರುವುದು ಅವರ ಆಡಳಿತದ ಕೀತರ್ಿಯನ್ನು ಸಾರುವಂತಿದೆ. ಮೋದಿ ಈ ಕ್ಷೇತ್ರಕ್ಕೆ ಈ ಒಪ್ಪಂದವೊಂದರ ಮೂಲಕ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ.

ಹೆಚ್ಎಎಲ್ನ ಗುತ್ತಿಗೆಯನ್ನು ಕಸಿದುಕೊಂಡು ರಿಲಯನ್ಸ್ಗೆ ಕೊಡಲಾಯ್ತಾ?
ವಾಸ್ತವವಾಗಿ ಹೆಚ್ಎಎಲ್ನೊಂದಿಗೆ ಒಪ್ಪಂದ ಸಾಧ್ಯವೇ ಇಲ್ಲವೆಂದು ದಸಾಲ್ಟ್ 2013 ರಲ್ಲೇ ಹೇಳಿಬಿಟ್ಟಿತ್ತು. 18 ವಿಮಾನಗಳನ್ನು ಪೂರೈಸುವುದಷ್ಟೇ ತನ್ನ ಜವಾಬ್ದಾರಿ. ಉಳಿದ 108 ಯುದ್ಧ ವಿಮಾನಗಳ ನಿಮರ್ಾಣದ ಕುರಿತಂತೆ ಹೆಚ್ಎಎಲ್ನೊಂದಿಗೆ ಪ್ರತ್ಯೇಕ ಒಪ್ಪಂದವನ್ನು ಕೇಂದ್ರ ಸಕರ್ಾರವೇ ಮಾಡಿಕೊಳ್ಳಬೇಕೆಂಬುದು ದಸಾಲ್ಟ್ನ ಆಗ್ರಹವಾಗಿತ್ತು. ಸಕರ್ಾರ ಎಷ್ಟೇ ಕೋರಿಕೊಂಡರೂ ದಸಾಲ್ಟ್ ಹೆಚ್ಎಎಲ್ನೊಂದಿಗಿನ ಮಾತುಕತೆಯನ್ನು ಮುಂದುವರಿಸಲು ಒಪ್ಪಲೇ ಇಲ್ಲ. ಆದರೆ ಈಗ ಬಿಡಿಭಾಗಗಳ ನಿಮರ್ಾಣದಲ್ಲಿ ಎಂಜಿನ್ನುಗಳಿಗೆ ಸಂಬಂಧಪಟ್ಟಂತ ವಸ್ತುಗಳ ನಿಮರ್ಾಣಕ್ಕೆ ಹೆಚ್ಎಎಲ್ಗೆ ಗುತ್ತಿಗೆ ದೊರೆತಿರುವುದನ್ನು ರಾಹುಲ್ ಬುದ್ಧಿವಂತಿಕೆಯಿಂದ ಮುಚ್ಚಿಡುತ್ತಿದ್ದಾರೆ. ಒಟ್ಟಾರೆ ಹೊಸ ಒಪ್ಪಂದದಲ್ಲಿ ಹೆಚ್ಎಎಲ್ಗೆ ನಷ್ಟವೇನಿಲ್ಲ. ಬದಲಿಗೆ ದಸಾಲ್ಟ್ನಂತಹ ಸಮರ್ಥ ಕಂಪೆನಿಗೆ ಪೂರಕವಾಗಿ ದುಡಿದು ತನ್ನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶ ಅದಕ್ಕೆ ದೊರೆಯಲಿದೆ.

9

ರಾಹುಲ್ ಸುಳ್ಳು ಹೇಳುತ್ತಿದ್ದಾರಾ?
ಹಾಗೆ ಹೇಳುವುದು ಕಷ್ಟ. ಸುಳ್ಳು ಹೇಳುವವರಿಗೆ ಸತ್ಯ ಗೊತ್ತಿರುತ್ತದೆ. ಆದರೆ ಪಾಪ ರಾಹುಲ್ಗೆ ಸತ್ಯವೂ ಗೊತ್ತಿಲ್ಲ; ಸುಳ್ಳೂ ಗೊತ್ತಿಲ್ಲ. ಕಾಂಗ್ರೆಸ್ ಮಾಡಿಕೊಂಡ ಒಪ್ಪಂದದ ಪ್ರಕಾರ ರಫೆಲ್ನ ಬೆಲೆಯೆಷ್ಟೆಂಬುದೇ ಅವರಿಗೆ ಅರಿವಿಲ್ಲ. ನಾಲ್ಕು ಭಾಷಣಗಳಲ್ಲಿ ನಾಲ್ಕು ಸಂಖ್ಯೆಯನ್ನು ಘೋಷಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡುವಾಗ ಈ ಒಪ್ಪಂದದ ಕುರಿತಂತೆ ಗೌಪ್ಯತೆ ಕಾಪಾಡಬೇಕೆಂಬ ಯಾವ ನಿಯಮವೂ ಇಲ್ಲವೆಂದು ಫ್ರಾನ್ಸಿನ ಅಧ್ಯಕ್ಷರೇ ಹೇಳಿದ್ದಾರೆಂಬ ಬಾಲಿಶ ಹೇಳಿಕೆಯನ್ನು ರಾಹುಲ್ ಕೊಟ್ಟರು. ಅದಾದ ಕೆಲವು ಘಂಟೆಗಳಲ್ಲೇ ಈ ಕುರಿತಂತೆ ರಾಹುಲ್ನೊಂದಿಗೆ ಮಾತುಕತೆಯಾಡಿಯೇ ಇಲ್ಲ ಮತ್ತು ಹಾಗೊಂದು ನಿಯಮ ಎರಡೂ ರಾಷ್ಟ್ರಗಳೊಂದಿಗೆ ಇರುವುದು ನಿಜವೆಂದು ಫ್ರಾನ್ಸಿನ ಅಧ್ಯಕ್ಷರೇ ಹೇಳಿಕೆ ನೀಡಿದ ಮೇಲೆ ಆತ ಇಂಗು ತಿಂದ ಮಂಗನಂತಾಗಿಬಿಟ್ಟಿದ್ದರು. 2008 ರಲ್ಲಿ ರಕ್ಷಣಾ ಸಚಿವ ಎ.ಕೆ ಆಂಟನಿಯೇ ಗೌಪ್ಯತೆಯ ಕಾಯ್ದೆಗೆ ಸಹಿ ಮಾಡಿದ್ದು ಪಾಪ ರಾಹುಲ್ಗೆ ಗೊತ್ತೇ ಇರಲಿಲ್ಲ. ಆರಂಭದಲ್ಲಿ ರಿಲಯನ್ಸ್ಗೆ ದೊರೆಯುತ್ತಿರುವ ಹಣ 4 ಬಿಲಿಯನ್ ಡಾಲರ್ಗಳಷ್ಟು ಎಂದ ರಾಹುಲ್ ಆನಂತರ ಇದನ್ನು 20 ಬಿಲಿಯನ್ ಡಾಲರುಗಳಿಗೇರಿಸಿದರು. ಒಟ್ಟಾರೆ 1,30,000 ಕೋಟಿ ರೂಪಾಯಿಯ ಹಗರಣವಿದು ಎಂದು ನಂಬಿಸುವ ಪ್ರಯತ್ನ ಮಾಡಿದರು. ಆದರೆ ವಾಸ್ತವವಾಗಿ ರಫೆಲ್ನ ಇಡಿಯ ಒಪ್ಪಂದವೇ 60,000 ಕೋಟಿ ರೂಪಾಯಿ ದಾಟಲಿಲ್ಲ. ಹಾಗಿದ್ದ ಮೇಲೆ 1,30,000 ಕೋಟಿ ಎಲ್ಲಿನದ್ದು? ಬಹುಶಃ ಅವರು 2ಜಿ ಸ್ಪೆಕ್ಟ್ರಂ ಹಗರಣವನ್ನು ನೆನಪಿಸಿಕೊಂಡಿರಬೇಕು.

10

ರಫೆಲ್ ಹಗರಣದಲ್ಲಿ ವಾದ್ರಾ ತಿರುವು ಏನು?
2017 ರಲ್ಲಿ ಭಾರತದಿಂದ ಕಾಣೆಯಾಗಿರುವ ಸಂಜಯ್ ಭಂಡಾರಿಯೆಂಬ ಶಸ್ತ್ರಾಸ್ತ್ರ ಖರೀದಿಯ ದಲ್ಲಾಳಿ ವಾದ್ರಾನ ಆಪ್ತಮಿತ್ರ. ಈತ ತನ್ನ ಕಂಪೆನಿ ಆಫ್ಸೆಟ್ ಇಂಡಿಯಾ ಸಲ್ಯೂಷನ್ಸ್ ಮೂಲಕ 2012 ರಲ್ಲಿ ರಫೆಲ್ನ ಆಫ್ಸೆಟ್ ಗುತ್ತಿಗೆಗೆ ಬೇಡಿಕೆ ಮಂಡಿಸಿದ್ದ. ದಸಾಲ್ಟ್ ಅವನ ಬೇಡಿಕೆಯನ್ನು ನಿರಾಕರಿಸಿತೆಂಬ ಕಾರಣಕ್ಕೆ 2012 ರಲ್ಲಿ ವಾದ್ರಾನ ಒತ್ತಡಕ್ಕೆ ಮಣಿದು ಒಟ್ಟಾರೆ ಖರೀದಿಯ ಒಪ್ಪಂದವನ್ನೇ ಕಾಂಗ್ರೆಸ್ ರದ್ದು ಮಾಡಿತು. ಇದಕ್ಕೂ ಮುನ್ನ ರಾಹುಲ್ನ ಭಾವ ವಾದ್ರಾನಿಗೆ ಸಂಜಯ್ ಭಂಡಾರಿ ಲಂಡನ್ನಿನಲ್ಲಿ 19 ಕೋಟಿ ರೂಪಾಯಿಯ ಆಸ್ತಿಯನ್ನು ಕೊಡುಗೆಯಾಗಿ ಕೊಟ್ಟಿದ್ದನೆಂಬ ವಿವರಗಳು ಈಮೇಲ್ಗಳ ಮೂಲಕ ಸಿಕ್ಕಿದೆ. 2014 ರಲ್ಲಿ ಆತನ ಕಂಪನಿಯನ್ನು ಮೋದಿ ಕಪ್ಪುಪಟ್ಟಿಗೆ ಸೇರಿಸಿ ಆತನ ಕಛೇರಿಗಳ ಮೇಲೆ, ಮನೆಯ ಮೇಲೆ ದಾಳಿ ನಡೆಸಿದಾಗ ಅನೇಕ ಮಾಹಿತಿಗಳು ಹೊರಬಂದಿವೆ. ಅವುಗಳ ಪ್ರಕಾರ ಈ ರಫೆಲ್ ಒಪ್ಪಂದವನ್ನು ರದ್ದುಪಡಿಸಿದ್ದರಲ್ಲಷ್ಟೇ ಅಲ್ಲ, ಹೆಚ್ಎಎಲ್ಗೆ ಸಿಗಬೇಕಾಗಿದ್ದ ಭಾರತೀಯ ವಾಯುಸೇನೆಯ ಬೇಸಿಕ್ ಟ್ರೈನರ್ ಏರ್ಕ್ರಾಫ್ಟ್ನ ಗುತ್ತಿಗೆಯನ್ನೂ ಸ್ವಿಟ್ಜರ್ಲ್ಯಾಂಡಿನ ಪಿಲಾಟಸ್ಗೆ ವಗರ್ಾಯಿಸುವಲ್ಲಿ ವಾದ್ರಾನ ಪಾತ್ರ ಜೋರಾಗಿತ್ತ್ತು. ಇದೇ ಸಂಜಯ್ ಭಂಡಾರಿಯ ಮನೆಯಲ್ಲಿ ರಕ್ಷಣಾ ಸಚಿವರ ಬಳಿ ಮಾತ್ರ ಇರಬೇಕಿದ್ದ ರಕ್ಷಣಾ ಇಲಾಖೆಯ ಗುಪ್ತ ಮಾಹಿತಿಗಳೆಲ್ಲಾ ಇದ್ದುದ್ದು ದಾಳಿಯ ವೇಳೆ ಕಂಡುಬಂದಿತ್ತು. ಅದರ ಅರ್ಥ ರಾಬಟರ್್ ವಾದ್ರಾ, ಸಂಜಯ್ ಭಂಡಾರಿ, ಕೆಲವು ಐಎಎಸ್ ಅಧಿಕಾರಿಗಳು ಇವರೆಲ್ಲರೂ ಭಾರತದ ರಕ್ಷಣಾಲಯವನ್ನು ತಮ್ಮ ಇಚ್ಛೆಗೆ ತಕ್ಕಂತೆ ನಡೆಸುತ್ತಿದ್ದರೆಂಬುದು ಈಗ ಬೆಳಕಿಗೆ ಬರುತ್ತಿದೆ.

ಕಾಂಗ್ರೆಸ್ಸಿನ ಅರಚಾಟದಲ್ಲಿ ವಿದೇಶೀಯರ ಕೈವಾಡ ಇರಬಹುದಾ?
ಅಲ್ಲಗಳೆಯುವುದು ಕಷ್ಟ. ಭಾರತದ ವಾಯುಸೇನೆ ಸದೃಢವಾಗುವುದು ಚೀನಾಕ್ಕೆ ಆತಂಕಕಾರಿ ವಿಷಯ. ಅಂದಹಾಗೆ ಈ ಹಿಂದೆ ಚೀನಾದ ರಾಯಭಾರಿಯನ್ನು ರಾಹುಲ್ ಗುಪ್ತವಾಗಿ ಭೇಟಿ ಮಾಡಿದ್ದರು. ಅವರು ಮಾನಸ ಸರೋವರ ಯಾತ್ರೆಗೆ ಹೋಗುವಾಗ ಚೀನಾ ಸಾಕಷ್ಟು ಸಹಕಾರ ನೀಡಿತ್ತು ಎಂಬ ಸುದ್ದಿಯೂ ಹರಿದಾಡಿತ್ತು. ಒಮ್ಮೆ ರಾಹುಲ್ ಚೀನಾಗೂ ಹೋಗಿಬಂದಿದ್ದು ಅನೇಕರಿಗೆ ನೆನಪಿರಬೇಕು. ಹೇಗಾದರೂ ಮಾಡಿ ಈ ಒಪ್ಪಂದವನ್ನು ರದ್ದುಪಡಿಸಿಬಿಟ್ಟರೆ ಯುದ್ಧದ ವಿಚಾರದಲ್ಲಿ ಚೀನಾ ಭಾರತಕ್ಕಿಂತಲೂ ಒಂದು ಕೈ ಮೇಲಾಗಿಯೇ ಇರುತ್ತದೆ ಎಂಬ ಖಾತ್ರಿ ಚೀನಾಕ್ಕಿದೆ. ಹೀಗಾಗಿಯೇ ರಾಹುಲ್ ಚೀನಾದ ಮಾತುಗಳನ್ನು ಆಡುತ್ತಿದ್ದರೆ ಅಚ್ಚರಿ ಪಡಬೇಕಾದುದೇನು ಇಲ್ಲ.

Comments are closed.