ವಿಭಾಗಗಳು

ಸುದ್ದಿಪತ್ರ


 

ರಫೇಲ್: ಸರಿಯಾದ ಉತ್ತರ ಕಾಂಗ್ರೆಸ್ಸಿಗೆ ಜನರೇ ಕೊಡುತ್ತಾರೆ!

ನಿಂತ ನೆಲ ಕುಸಿಯುತ್ತಿದೆ ಎನಿಸಿದಾಗಲೇ ಕಾಂಗ್ರೆಸ್ಸು ಈ ಒಪ್ಪಂದದಲ್ಲಿ ರಿಲಯನ್ಸ್ ಅನ್ನು ಎಳೆದುಕೊಂಡು ಬಂದಿದ್ದು. ಅವರು ಮಾಡಿರುವ ಅಪಪ್ರಚಾರ ಹೇಗಿದೆ ಎಂದರೆ ರಫೆಲ್ ವಿಮಾನಗಳನ್ನೇ ನಿಮರ್ಾಣ ಮಾಡಿಕೊಡುವ ಗುತ್ತಿಗೆ ರಿಲಯನ್ಸ್ಗೆ ಸಿಕ್ಕಂತಿದೆ.

ರಫೇಲ್ನ ಖರೀದಿಯ ಕಲ್ಪನೆ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲೇ ಆಗಿತ್ತು. ಅದನ್ನು ಕೊಳ್ಳುವ ಮುನ್ನವೇ ಸಕರ್ಾರ ಬಿದ್ದುಹೋಯ್ತು. 2007 ರಲ್ಲಿ ಕಾಂಗ್ರೆಸ್ ಸಕರ್ಾರ ಟೆಂಡರ್ ಕರೆದು ರಫೆಲನ್ನು ಆಯ್ಕೆ ಮಾಡಿಕೊಂಡಿತು. ಆದರೆ ಸುಮಾರು ಐದು ವರ್ಷಗಳ ಕಾಲ ನಿರಂತರ ಮಾತುಕತೆಯ ನಂತರವೂ ಕೂಡ ಸಮರ್ಥವಾದ ಒಪ್ಪಂದವೊಂದಕ್ಕೆ ಬರಲು ಅದಕ್ಕೆ ಸಾಧ್ಯವಾಗಲೇ ಇಲ್ಲ. 2012 ರಲ್ಲಿ 18 ರಫೆಲ್ಗಳನ್ನು ನೇರವಾಗಿ ಕೊಂಡುಕೊಳ್ಳುವುದು, 108 ರಫೆಲ್ಗಳನ್ನು ಹೆಚ್ಎಎಲ್ನಲ್ಲಿ ನಿಮರ್ಾಣ ಮಾಡುವುದು ಎಂಬ ಒಪ್ಪಂದಕ್ಕೆ ಸಹಿ ಮಾಡಿಸಲಾಯ್ತು. ಅದೇ ವರ್ಷ ದಸಾಲ್ಟ್ ಕಂಪನಿ ರಿಲಯನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡು ಬಿಡಿ ಭಾಗಗಳ ತಯಾರಿಕೆಯ ಹೊಣೆಗಾರಿಕೆಯನ್ನು ಅದಕ್ಕೆ ಕೊಟ್ಟಿತ್ತು. ನೆನಪಿಡಿ ಇದು 2012 ರ ಮಾತು ಮತ್ತು ಆಗ ಕಾಂಗ್ರೆಸ್ ಸಕರ್ಾರವೇ ಇತ್ತು. ಮರು ವರ್ಷವೇ ದಸಾಲ್ಟ್ ಹೆಚ್ಎಎಲ್ನ ಒಪ್ಪಂದದ ವಿಷಯದಲ್ಲಿ ತಗಾದೆ ತೆಗೆದು 18 ವಿಮಾನಗಳನ್ನು ಕೊಡುವುದಷ್ಟೇ ನನ್ನ ಜವಾಬ್ದಾರಿ, ಹೆಚ್ಎಎಲ್ ನಿಮರ್ಿಸಲಿರುವ ವಿಮಾನದ ಕುರಿತಂತೆ ನಾವು ಹೊಣೆ ಹೊರಲಾರೆವು ಎಂದುಬಿಟ್ಟಿತು.

2

ಕಾಂಗ್ರೆಸ್ಸು ಇದರ ಜವಾಬ್ದಾರಿಯನ್ನು ತಾನೇ ಹೊರಬೇಕು. ಹೆಚ್ಎಎಲ್ನಂತಹ ಸಮರ್ಥವಾದ ಸಂಸ್ಥೆಯೊಂದನ್ನು ಸಮಯಕ್ಕೆ ಸರಿಯಾಗಿ ಕೊಟ್ಟ ಜವಾಬ್ದಾರಿಯನ್ನು ಪೂರೈಸದ ಸಂಸ್ಥೆಯಾಗಿ ಪರಿವತರ್ಿಸಿರುವುದು ಅದರದ್ದೇ ಸಾಧನೆ. ತನ್ನ ಆಳ್ವಿಕೆಯ 60 ವರ್ಷದ ಅವಧಿಯಲ್ಲಿ ರಕ್ಷಣಾ ಇಲಾಖೆಯನ್ನು, ಸೇನೆಯನ್ನು ಬಲಪಡಿಸುವ ಮಾಧ್ಯಮವನ್ನಾಗಿಸಿಕೊಳ್ಳದೇ ಹಣದ ಕಣಜವಾಗಿ ಬಳಸಿಕೊಂಡಿತಲ್ಲ ಈ ಕಾರಣಕ್ಕಾಗಿ ಭಾರತದಲ್ಲಿ ರಕ್ಷಣಾ ಉದ್ದಿಮೆ ಬೆಳೆಯಲೇ ಇಲ್ಲ. ಇದರಿಂದಾಗಿಯೇ 2005 ರಲ್ಲಿ ತೇಜಸ್ನ ನಿಮರ್ಿಸಿ ಕೊಡುವ ಮಾತುಕತೆಯಾಗಿದ್ದರೂ 2018 ರ ವೇಳೆಗೂ ಒಪ್ಪಿಕೊಂಡ 40 ತೇಜಸ್ಗಳನ್ನು ನಿಮರ್ಿಸಿ ಕೊಡಲು ಹೆಚ್ಏಎಲ್ಗೆ ಸಾಧ್ಯವಾಗಲೇ ಇಲ್ಲ. ಅವೆಲ್ಲ ಪಕ್ಕಕ್ಕಿರಲಿ. ಒಟ್ಟಾರೆ ಕಾಂಗ್ರೆಸ್ಸಿನ ನಿಷ್ಕ್ರಿಯಿತೆಯಿಂದಾಗಿ ಮತ್ತು ವಾದ್ರಾನ ಕಿರಿಕಿರಿಯಿಂದಾಗಿ ರಫೆಲ್ ಒಪ್ಪಂದ ಮುರಿದೇ ಬಿತ್ತು. ಅದರೊಟ್ಟಿಗೆ ಕಾಂಗ್ರೆಸ್ ಸಕರ್ಾರದ ಅವಧಿಯೂ ಮುಗಿದು ನರೇಂದ್ರಮೋದಿ ಪ್ರಧಾನಿಯಾದರು. ತಕ್ಷಣವೇ ಅವರು ಸೈನ್ಯಕ್ಕೆ ಬೇಕಾದ ಯುದ್ಧವಿಮಾನಗಳ ಕುರಿತಂತೆ ಮತ್ತೆ ಮತ್ತೆ ಚಚರ್ೆ ನಡೆಸಿ ರಫೆಲ್ಗಳ ಅಗತ್ಯ ಮನಗಂಡರು. ಮರುವರ್ಷವೇ ಫ್ರಾನ್ಸ್ಗೆ ಹೋಗಿ ಅಲ್ಲಿನ ಅಧ್ಯಕ್ಷರ ಕೈ ಕುಲುಕಿ 36 ರಫೆಲ್ಗಳನ್ನು ನೇರವಾಗಿ ಖರೀದಿಸುವ ಘೋಷಣೆ ಮಾಡಿದರು. ನೆನಪಿಡಿ. ಕಾಂಗ್ರೆಸ್ಸಿಗರ ಒಪ್ಪಂದದ ಪ್ರಕಾರ 18 ವಿಮಾನಗಳು ಬರಬೇಕಿತ್ತು, 108 ಇಲ್ಲೇ ತಯಾರಾಗಬೇಕಿತ್ತು. ಸಮಯದ ಮಿತಿ ಇದ್ದದ್ದು 18 ಕ್ಕೆ ಮಾತ್ರ. ಉಳಿದ 108 ರ ಕುರಿತಂತೆ ಯಾರೂ ಹೊಣೆಗಾರಿಕೆ ಹೊತ್ತಿರಲಿಲ್ಲ. ಆದರೆ ಮೋದಿ, ಕಾಂಗ್ರೆಸ್ ತರಲಿಚ್ಛಿಸಿದಕ್ಕಿಂತ ಎರಡು ಪಟ್ಟು ಹೆಚ್ಚು ರಫೆಲ್ಗಳನ್ನು ಖರೀದಿಸುವ ಮಾತನಾಡಿ ಬಂದಿದ್ದರು. ಅವರ ಘೋಷಣೆ ಹಾಗೆ ಉಳಿಯಲಿಲ್ಲ. ಬೆಲೆ ಚೌಕಶಿ ಸಮಿತಿ ಮತ್ತು ಗುತ್ತಿಗೆ ಚೌಕಶಿ ಸಮಿತಿ 14 ತಿಂಗಳುಗಳ ಕಾಲ ನಿರಂತರವಾಗಿ ಭಿನ್ನ ಭಿನ್ನ ಸ್ವರೂಪಗಳಲ್ಲಿ ದಸಾಲ್ಟ್ನೊಂದಿಗೆ ಫ್ರಾನ್ಸ್ ಸಕರ್ಾರದೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಅಂತಿಮ ಸ್ವರೂಪ ಕೊಡಲಾಯ್ತು. ಕಾಂಗ್ರೆಸ್ ಮಾಡಿಕೊಂಡ ಒಪ್ಪಂದದಲ್ಲಿ ಸಾಮಾನ್ಯ ರಫೆಲ್ಗಳಷ್ಟೇ ಇದ್ದವು. ಈಗಿನ ಒಪ್ಪಂದದಲ್ಲಿ ಅತ್ಯಾಧುನಿಕ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಫುಲ್ಲಿ ಲೋಡಡ್ ವಿಮಾನಗಳಿದ್ದವು. ಈ ರಫೆಲ್ಗಳು ಲೇಹ್ಲಡಾಕ್ನಂತಹ ಎತ್ತರ ಪ್ರದೇಶದಲ್ಲೂ ಕಾರ್ಯನಿರ್ವಹಿಸಬೇಕಿದ್ದರಿಂದ ಎಂಜಿನ್ನುಗಳ ಮರುವಿನ್ಯಾಸ ಅಗತ್ಯವಿತ್ತು. ಅತ್ಯಾಧುನಿಕವಾದ ಇನ್ಫ್ರಾರೆಡ್ ಸಚರ್್ ಆಂಡ್ ಟ್ರ್ಯಾಕ್ ವ್ಯವಸ್ಥೆಯೂ ಬೇಕಾಗಿತ್ತು. ಚೌಕಶಿ ಸಮಿತಿ ಕಂಪನಿಯ ಮುಂದೆ ಅವೆಲ್ಲವನ್ನೂ ಇಟ್ಟು ಇನ್ನೊಂದಷ್ಟು ಸಂಶೋಧನೆಗೆ ಕೆಲಸವನ್ನೂ ಕೊಟ್ಟು ಒಪ್ಪಂದದ ರೂಪುರೇಷೆಗಳನ್ನು ಪೂರ್ಣಗೊಳಿಸಿತ್ತು. ಕಾಂಗ್ರೆಸ್ಸಿನ ಸಕರ್ಾರ ಬೇಸಿಕ್ ಮಾಡೆಲ್ನ ರಫೆಲ್ಗೆ 570 ಕೋಟಿಯ ಬೆಲೆ ನಿಗದಿ ಪಡಿಸಿಕೊಂಡಿದ್ದರೆ ಈ ಸಕರ್ಾರ ಹೈ ಎಂಡ್ ರಫೆಲ್ಗಳಿಗೆ 1600 ಕೋಟಿ ರೂಪಾಯಿಯನ್ನು ನಿಗದಿಪಡಿಸಿತು. ಬೆಲೆ ನೋಡಿದ ನಂತರವೇ ಅರ್ಥವಾಗಿದ್ದು ಬೇಸಿಕ್ ರಫೆಲ್ಗಳ ಮೇಲೆ ಕಾಂಗ್ರೆಸ್ಸಿನ ಒಪ್ಪಂದಕ್ಕಿಂತ 9 ಪ್ರತಿಶತ ಹಣವನ್ನು ಹೊಸ ಸಕರ್ಾರ ಉಳಿಸಿತ್ತು ಮತ್ತು ಹೈ ಎಂಡ್ ರಫೆಲ್ಗಳ ಮೇಲೆ 20 ಪ್ರತಿಶತದಷ್ಟು ಹಣ ಉಳಿತಾಯ ಮಾಡಿತ್ತು. ಈ ಚೌಕಶಿಯಲ್ಲಿ ಭಾಗವಹಿಸಿದ್ದ ಡೆಪ್ಯುಟಿ ಚೀಫ್ ಏರ್ ಮಾರ್ಶಲ್ ರಘುನಾಥ್ ನಂಬಿಯಾರ್ ‘ಹಣ ನೀಡುವ ವಿಧಾನವನ್ನು ಗಮನದಲ್ಲಿರಿಸಿಕೊಂಡರೆ ಈ ಒಟ್ಟಾರೆ ಒಪ್ಪಂದದ ಮೂಲಕ ಹಳೆಯ ಒಪ್ಪಂದಕ್ಕಿಂತಲೂ 40 ಪ್ರತಿಶತ ಹಣ ಉಳಿಸಿದ್ದೇವೆ’ ಎಂದಿದ್ದರು. ಅದು ಸಹಜವೂ ಹೌದು. ವರ್ಷದಿಂದ ವರ್ಷಕ್ಕೆ ನಿಮರ್ಾಣದ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. 6 ವರ್ಷಕ್ಕೋ 7 ವರ್ಷಕ್ಕೋ ಒಮ್ಮೆ ಈ ಮೊತ್ತ ಎರಡರಷ್ಟಾದರೂ ಅಚ್ಚರಿ ಪಡಬೇಕಾಗಿಲ್ಲ. ಹೀಗಿರುವಾಗ 2012 ಕ್ಕೆ ಆದ ಒಪ್ಪಂದದ ಪ್ರಕಾರ 570 ಕೋಟಿಯ ರಫೆಲ್ 2018 ರಲ್ಲಿ ಕನಿಷ್ಠಪಕ್ಷ 1000 ಕೋಟಿ ರೂಪಾಯಿಯಾದರೂ ಇರಬೇಕು. 2000 ಕೋಟಿಯ ಫುಲ್ಲಿ ಲೋಡಡ್ ರಫೆಲ್ ಈಗ 4000 ಕೋಟಿಯಾದರೂ ಆಗಬೇಕು. ಆದರೆ ಮೋದಿ ಅದನ್ನು 1600 ಕೋಟಿಗೆ ಇಳಿಸಿದ್ದರು.

ಇಷ್ಟಕ್ಕೂ ನರೇಂದ್ರಮೋದಿಯವರು ಹೊಸ ಕಾನೂನುಗಳನ್ನು ರಚಿಸಿ ಒಪ್ಪಂದ ಮಾಡಿಕೊಂಡಿರಲಿಲ್ಲ. 2013 ರ ಡಿಫೆನ್ಸ್ ಪ್ರಕ್ಯೂರ್ಮೆಂಟ್ ಪ್ರೊಸೀಜರ್ ನಿಯಮಗಳ ಆಧಾರದ ಮೇಲೆಯೇ ಒಟ್ಟಾರೆ ಒಪ್ಪಂದಗಳನ್ನು ಮಾಡಿಸಿದ್ದರು. ಅದಕ್ಕೇ ಕಾಂಗ್ರೆಸ್ಸೂ ಕೂಡ ವಿಮಾನಗಳ ಬೆಲೆಯ ಕುರಿತಂತೆ ಮಾತನಾಡುತ್ತಿದೆಯೇ ಹೊರತು ಒಪ್ಪಂದದಲ್ಲಿ ಹಗರಣವಾಗಿದೆ ಎಂದು ಹೇಳಲು ಧೈರ್ಯವೇ ತೋರುತ್ತಿಲ್ಲ. ಮತ್ತು ಈ ಒಪ್ಪಂದ ನಡೆದಿರುವುದು ಎರಡು ಸಕರ್ಾರಗಳ ನಡುವೆ ಆದ್ದರಿಂದ ಇಲ್ಲಿ ಮಧ್ಯವತರ್ಿಗೂ ಅವಕಾಶವಿರಲಿಲ.್ಲ ನಿಯಮದ ಪ್ರಕಾರ ಹೊಸ ಟೆಂಡರ್ ಕರೆಯಬೇಕಾದ ಅಗತ್ಯವೂ ಇರಲಿಲ್ಲ. ಮೋದಿ ಅದೆಷ್ಟು ಪ್ರಾಮಾಣಿಕವಾದ ಮತ್ತು ಪಾರದರ್ಶಕವಾದ ಒಪ್ಪಂದವನ್ನು ಮಾಡಿಕೊಂಡಿದ್ದಾರೆಂದರೆ ಎನ್ಸಿಪಿಯ ಮುಖ್ಯಸ್ಥರೂ ಮತ್ತು ಹಿಂದೊಮ್ಮೆ ರಕ್ಷಣಾ ಸಚಿವರೂ ಆಗಿದ್ದ ಶರತ್ ಪವಾರ್ ‘ಮೋದಿಯನ್ನು ಭ್ರಷ್ಟರೆಂದರೆ ಜನ ಒಪ್ಪಲಾರರು. ಈ ಒಪ್ಪಂದವನ್ನು ವಿವರಿಸುವಲ್ಲಿ ಅವರ ಮಂತ್ರಿಗಳು ಸೋತಿರಬಹುದು ನಿಜ. ಆದರೆ ಇದರಲ್ಲಿ ಭ್ರಷ್ಟತೆಯಂತೂ ಇಲ್ಲ’ ಎಂದು ಬಲು ಸ್ಪಷ್ಟವಾಗಿ ಹೇಳಿದ್ದಾರೆ. ಸ್ವತಃ ಫ್ರಾನ್ಸಿನ ಅಧ್ಯಕ್ಷ ಮಾಕ್ರಾನ್ ಈ ಒಪ್ಪಂದದ ಬಗ್ಗೆ ಮಾತನಾಡುತ್ತಾ ಮೋದಿಯವರ ದೂರದಶರ್ಿತ್ವವನ್ನು ಬಾಯ್ತುಂಬ ಹೊಗಳಿದ್ದಾರೆ.

3

ನಿಂತ ನೆಲ ಕುಸಿಯುತ್ತಿದೆ ಎನಿಸಿದಾಗಲೇ ಕಾಂಗ್ರೆಸ್ಸು ಈ ಒಪ್ಪಂದದಲ್ಲಿ ರಿಲಯನ್ಸ್ ಅನ್ನು ಎಳೆದುಕೊಂಡು ಬಂದಿದ್ದು. ಅವರು ಮಾಡಿರುವ ಅಪಪ್ರಚಾರ ಹೇಗಿದೆ ಎಂದರೆ ರಫೆಲ್ ವಿಮಾನಗಳನ್ನೇ ನಿಮರ್ಾಣ ಮಾಡಿಕೊಡುವ ಗುತ್ತಿಗೆ ರಿಲಯನ್ಸ್ಗೆ ಸಿಕ್ಕಂತಿದೆ. ವಾಸ್ತವವಾಗಿ ಪ್ರತಿಯೊಂದು ಶಸ್ತ್ರಾಸ್ತ್ರ ಖರೀದಿಯ ಒಪ್ಪಂದದಲ್ಲೂ ಒಂದು ಆಫ್ಸೆಟ್ ಕ್ಲಾಸ್ ಇರುತ್ತದೆ. ಶಸ್ತ್ರಾಸ್ತ್ರ ಖರೀದಿಯ ನಂತರ ಪೂರೈಕೆದಾರ ರಾಷ್ಟ್ರಗಳು ಈ ಹಣದ ಒಂದಷ್ಟು ಪಾಲನ್ನು ಖರೀದಿ ಮಾಡಿದ ರಾಷ್ಟ್ರದಲ್ಲೇ ಮತ್ತೆ ಹೂಡಬೇಕು. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ಶಸ್ತಾಸ್ತ್ರ ನಿಮರ್ಾಣದ ತಂತ್ರಜ್ಞಾನದ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲಬೇಕು. ಇದು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದಲೂ ಬಲುದೊಡ್ಡ ಹೊಣೆಗಾರಿಕೆ. ಈ ಒಪ್ಪಂದವೂ ಹಾಗೆಯೇ ಇದೆ. ದಸಾಲ್ಟ್ ತಾನು ಪಡೆದಿರುವ ಹಣದ 30 ಪ್ರತಿಶತ ಅಂದರೆ ಸರಿಸುಮಾರು 20,000 ಕೋಟಿ ರೂಪಾಯಿಯನ್ನು ಮರಳಿ ಭಾರತದಲ್ಲೇ ಹೂಡಿಕೆ ಮಾಡಬೇಕು. ಈ ಹೂಡಿಕೆಗೆಂದು ಅದು ಒಟ್ಟಾರೆ 72 ಕಂಪನಿಗಳನ್ನು ಆಯ್ದುಕೊಂಡಿದೆ. ಅವುಗಳಲ್ಲಿ ಮಹೀಂದ್ರ, ಗಾದ್ರೇಜ್, ಎಲ್ ಆಂಡ್ ಟಿ, ಟಾಟಾ ಮತ್ತು ರಿಲಯನ್ಸ್ಗಳಲ್ಲದೇ ಸಕರ್ಾರಿ ಸ್ವಾಮ್ಯದ ಡಿಆರ್ಡಿಒ ಕೂಡ ಸೇರಿದೆ. ಒಂದು ಅಂದಾಜಿನ ಪ್ರಕಾರ ಹೂಡಿಕೆಯ ಬಹುದೊಡ್ಡ ಮೊತ್ತ, ಸುಮಾರು 9000 ಕೋಟಿ ರೂಪಾಯಿ ಡಿಆರ್ಡಿಒಗೆ ಮರಳಿ ಬರಲಿದೆ. ರಿಲಯನ್ಸ್ಗೆ ಸಿಗಬಹುದಾದ ಒಟ್ಟಾರೆ ಗುತ್ತಿಗೆಯ ಹಣ 200 ದಶಲಕ್ಷ ಡಾಲರ್ಗಳನ್ನು ಮೀರದು ಎಂಬುದು ತಜ್ಞರ ಅಭಿಪ್ರಾಯ. ರಿಲಯನ್ಸ್ಗೆ ಶಸ್ತ್ರಾಸ್ತ್ರಗಳ ನಿಮರ್ಾಣದ ಅನುಭವವೇ ಇಲ್ಲ ಎಂಬುದು ಕಾಂಗ್ರೆಸ್ಸಿನ ಮತ್ತು ಬಿಜೆಪಿಯಿಂದ ಮುನಿಸಿಕೊಂಡಿರುವ ಅರುಣ್ಶೌರಿಯಂಥವರ ವಾದ. ಆದರೆ ಪಿಪಾವಾವ್ ಶಿಪ್ಯಾಡರ್್ ಲಿಮಿಟೆಡ್ ಅನ್ನು 2015 ರಲ್ಲಿ ಕೊಂಡುಕೊಳ್ಳಲು ಆರಂಭಿಸಿದ ರಿಲಯನ್ಸ್ ಒಂದೇ ವರ್ಷದ ವೇಳೆಗೆ ಅದರಲ್ಲಿ ತನ್ನ ಶೇರನ್ನು ಸಾಕಷ್ಟು ವಿಸ್ತರಿಸಿಕೊಂಡು ಅನಿಲ್ ಅಂಬಾನಿಯೇ ಚೇರ್ಮನ್ ಕೂಡ ಆದರು. ಈ ಪಿಪಾವಾವ್ ಜಗತ್ತಿನ ಅತ್ಯಂತ ದೊಡ್ಡ ಡ್ರೈಡಾಕ್ ಅನ್ನು ಹೊಂದಿರುವುದಲ್ಲದೇ ಯುದ್ಧ ನೌಕೆಗಳನ್ನು ತಯಾರಿಸುವ ಗುತ್ತಿಗೆಯನ್ನೂ ಪಡೆಯುತ್ತಿತ್ತು. 2017 ರಲ್ಲಿ ರಿಲಯನ್ಸ್ ಡಿಫೆನ್ಸ್ನೊಂದಿಗೆ ಅಮೇರಿಕಾದ ನೌಕಾಸೈನ್ಯ ಒಪ್ಪಂದ ಮಾಡಿಕೊಂಡು ಏಷ್ಯಾದ ಭಾಗದಲ್ಲಿರುವ ತನ್ನ ನೌಕೆಗಳ ಮರಮ್ಮತ್ತು ಮಾಡುವ 15,000 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಇದೇ ಕಂಪನಿಗೆ ನೀಡಿತ್ತು. ಸಚಿ, ಶೃತಿ ಎಂಬ ಎರಡು ಗಸ್ತು ಹಡಗುಗಳನ್ನು ನಿಮರ್ಿಸಿ ನೌಕಾಸೇನೆಗೆ ಸಮಪರ್ಿಸಿತ್ತು. ಇದಕ್ಕಿಂತಲೂ ಹೆಚ್ಚಿನ ಅನುಭವ ಬೇಕೆಂದರೆ ಮತ್ತಿನ್ನೇನು ಹೇಳಬೇಕು. ಇಷ್ಟೆ ಅಲ್ಲ, 2015 ರಲ್ಲಿ ಯುದ್ಧ ವಿಮಾನಗಳ ಎಂಜಿನ್ ನಿಮರ್ಿಸುವ ಸಫ್ರಾನ್ ಎನ್ನುವ ಕಂಪೆನಿ ಹೆಚ್ಎಎಲ್ನೊಂದಿಗೆ ಒಪ್ಪಂದ ಮಾಡಿಕೊಂಡು ಎಂಜಿನ್ನುಗಳ ಬಿಡಿ ಭಾಗ ತಯಾರಿಸುವ ಗುತ್ತಿಗೆ ನೀಡಿತ್ತು. ಇವೆಲ್ಲವೂ ಈ ಖರೀದಿಯ ಅಂಗವಾಗಿಯೇ ಬಂದಿರುವಂಥದ್ದು.

4

ನರೇಂದ್ರಮೋದಿ ಭಾರತವನ್ನು ಶಸ್ತ್ರ ನಿಮರ್ಾಣ ಮಾಡುವ ರಾಷ್ಟ್ರವಾಗಿಸಲು ಸಾಕಷ್ಟು ಹಾತೊರೆಯುತ್ತಿದ್ದಾರೆ. ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಸಿಕ್ಕಿದ್ದೆಲ್ಲ ಬಡಬಡಾಯಿಸುವ ರಾಹುಲ್ ಊರ ತುಂಬಾ ರಫೆಲ್ನ ವಿರುದ್ಧವಾಗಿ ಮಾತನಾಡುತ್ತ ಸೈನ್ಯವನ್ನು ಬಡವಾಗಿಸುವ ಧಾವಂತದಲ್ಲಿ ಇದ್ದಾರೆ. ಜನ ಮಾತ್ರ ದೂರದಲ್ಲೇ ಕುಳಿತು ಎಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಖಂಡಿತ ಉತ್ತರಿಸುತ್ತಾರೆ.

Comments are closed.