ವಿಭಾಗಗಳು

ಸುದ್ದಿಪತ್ರ


 

ರಾಮಮಂದಿರ ನಿರ್ಮಾಣಕ್ಕೆ ಇನ್ನು ಕ್ಷಣಗಣನೆ!

ಯಾವುದಾದರೊಂದು ಘಟನೆಯ ಐತಿಹಾಸಿಕತೆಯನ್ನು ಪರೀಕ್ಷಿಸುವುದಕ್ಕೆ ಮೊದಲು ಜನಪದದಲ್ಲಿ ಹಬ್ಬಿ ಹೋಗಿರುವಂತಹ ಕಥನಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಆ ಕಥನಗಳಿಗೆ ಪೂರಕವಾದ ಸಾಹಿತ್ಯಾತ್ಮಕವಾದ ಆಧಾರಗಳನ್ನು ಆನಂತರ ಸಂಗ್ರಹಿಸಲಾಗುತ್ತದೆ. ಆನಂತರ ಅದಕ್ಕೆ ಸಂಬಂಧಪಟ್ಟ ಶಿಲಾಲೇಖಗಳನ್ನೋ ಸನದು ಪತ್ರಗಳನ್ನೋ ಹುಡುಕಾಡಲಿಕ್ಕೆ ಶುರುಮಾಡುತ್ತಾರೆ.

ಇತ್ತೀಚೆಗೆ ಮುಸ್ಲೀಂ ಬೌದ್ಧಿಕವಲಯದ ಹಿರಿತಲೆಗಳೊಂದಷ್ಟು ರಾಷ್ಟ್ರ ಒಪ್ಪುವ ಕೆಲವು ಮಾತುಗಳನ್ನಾಡಿದ್ದರು. ರಾಮ ಹುಟ್ಟಿದ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಿಂದೂಗಳಿಗೇ ಬಿಟ್ಟುಕೊಟ್ಟುಬಿಡಬೇಕು ಎಂಬುದು ಅವರ ವಾದವಾಗಿತ್ತು. ನ್ಯಾಯಾಲಯ ಮುಸಲ್ಮಾನರ ಪರವಾಗಿಯೇ ನಿರ್ಣಯ ಕೊಟ್ಟಾಗಲೂ ಮುಸಲ್ಮಾನರು ಅದನ್ನು ಹಿಂದೂಗಳಿಗೆ ಬಿಟ್ಟುಕೊಡುವ ಔದಾರ್ಯ ತೋರಬೇಕೆಂಬುದು ಅವರ ಅಂಬೋಣವಾಗಿತ್ತು. ಹೀಗೆ ಹೇಳಿಕೆ ಕೊಟ್ಟವರ್ಯಾರೂ ಸಾಮಾನ್ಯರಲ್ಲ. ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಜಮೀರುದ್ದೀನ್ ಶಾ, ನಿವೃತ್ತ ಐಎಎಸ್ ಅಧಿಕಾರಿ ಅನೀಸ್ ಅನ್ಸಾರಿ ಅಂಥವರೂ ಅದರಲ್ಲಿದ್ದರು. ಶಾ ಮಾತನಾಡುತ್ತಾ ’40 ವರ್ಷಗಳ ಸೈನ್ಯದ ಅನುಭವದ ನಂತರ ಯುದ್ಧದಿಂದ ಪರಿಹಾರವಿಲ್ಲವೆಂದು ಅರ್ಥವಾಗಿದೆ. ಹೀಗಾಗಿ ಹಿಂದೂ-ಮುಸಲ್ಮಾನರು ಸೌಹಾರ್ದ ಬದುಕಿಗೆ ಮರಳುವುದೊಳಿತು’ ಎಂದಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಆಲ್ ಇಂಡಿಯಾ ಬಾಬ್ರಿ ಮಸ್ಜಿದ್ ಆ್ಯಕ್ಷನ್ ಕಮಿಟಿ ‘ಲೆಫ್ಟಿನೆಂಟ್ ಜನರಲ್ ಶಾ ಈ ದೇಶದಲ್ಲಿ ಯಾರಿಗೂ ಗೊತ್ತೇ ಇಲ್ಲ. ಹೀಗೆ ಹೇಳಿಕೆ ಕೊಡುತ್ತಿರುವ ಇವರೆಲ್ಲಾ ಸಕರ್ಾರಿ ನೌಕರಿಯಲ್ಲಿದ್ದಂಥವರು. ಮುಸಲ್ಮಾನರ ಕುರಿತಂತೆ ಹೇಳಿಕೆ ಕೊಡಲು ಇವರು ಅಧಿಕೃತ ವಕ್ತಾರರೂ ಅಲ್ಲ’ ಎಂದೆಲ್ಲಾ ಬಡಬಡಾಯಿಸಿದ್ದಾರೆ. ಸಹಜವಾಗಿಯೇ ಈ ಮಾತುಗಳಿಗೆ ತುಪ್ಪ ಸುರಿಯಲು ಎಡಪಂಥೀಯ ಬುದ್ಧಿಜೀವಿಗಳು ಕಾತರಿಸುತ್ತಲೇ ಇರುತ್ತಾರೆ. ಸೇನೆಯ ಸೇವೆ ಸಲ್ಲಿಸಿ ರಾಷ್ಟ್ರೀಯತೆಯ ಪಾಠವನ್ನು ಅರೆದು ಕುಡಿದಿರುವ ಸೈನಿಕ ಮಾತುಗಳು ಇವನಿಗೆ ಅಧಿಕೃತವಲ್ಲ. ಆದರೆ ಹಿಂದೂಧರ್ಮದ ಬಗ್ಗೆ ಮಾತ್ರ ಬಿಡದಿಯ ನಿತ್ಯಾನಂದರು ಹೇಳಿದ್ದೂ ಅಧಿಕೃತವೇ. ಇದು ವಿಪಯರ್ಾಸ! ಇರಲಿ, ಆದರೆ ಪ್ರಶ್ನೆ ಇದಲ್ಲ. ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿ ಅಲ್ಲಿ ರಾಮಮಂದಿರ ನಿಮರ್ಾಣ ಮಾಡುವ ಸಂಕಲ್ಪ ಮಾಡಿದ್ದು ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ನ್ಯಾಯಾಲಯ ಎರಡು ಪಕ್ಷಗಳ ನಡುವೆ ಸಂಧಾನ ನಡೆಸುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದರೂ ಅದಾಗಲೇ ಅದು ಬಣ್ಣ ಕಳೆದುಕೊಂಡಿದೆ. ಇನ್ನೇನಿದ್ದರೂ ಸಾಕ್ಷಿಗಳ ಆಧಾರದ ಮೇಲಷ್ಟೇ ನಿರ್ಣಯವಾಗಬೇಕಿದೆ. ಅಯೋಧ್ಯೆಯಲ್ಲಿ ರಾಮಮಂದಿರವಿದ್ದುದನ್ನು ಸಾಕ್ಷಿ ಸಮೇತ ಪುರಸ್ಕರಿಸಲು ಸಾಧ್ಯವಿದೆಯೇ? ಎಂಬ ಪ್ರಶ್ನೆಗೆ ಕೋಟರ್ು ಉತ್ತರಕೊಡುವ ತುತ್ತ ತುದಿಗೆ ಬಂದು ನಿಂತಿದೆ.

2

ಕೆಲವು ವರ್ಷಗಳ ಹಿಂದೆ ಮುಸ್ಲೀಮರ ಸಮಾವೇಶವೊಂದಕ್ಕೆ ಹೋಗಿ ರಾಮಮಂದಿರದ ಕುರಿತಂತೆ ಮಾತನಾಡುವಾಗ ಕಾರ್ಯಕ್ರಮದಲ್ಲಿದ್ದ ಮೌಲ್ವಿ ಸಾಹೇಬರೊಬ್ಬರು ‘ಅಲ್ಲೊಂದು ರಾಮಮಂದಿರವಿತ್ತು ಎನ್ನುವುದನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಲ್ಲದೇ ಅದಕ್ಕೆ ಐತಿಹಾಸಿಕ ದಾಖಲೆಗಳನ್ನೂ ಒದಗಿಸಲು ಸಾಧ್ಯವಿಲ್ಲವೆಂದು ತಮ್ಮ ನಿರ್ಣಯಕೊಟ್ಟಿರುವ ಇತಿಹಾಸಕಾರರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಹೀಗೆ ಈ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗ ಸಕರ್ಾರದ ಕೋರಿಕೆಯ ಮೇರೆಗೆ ತಮ್ಮ ವಿಚಾರ ಮಂಡನೆ ಮಾಡಿದ ನಾಲ್ಕೂ ಜನ ಇತಿಹಾಸಕಾರರೂ ಎಡಪಂಥೀಯ ಬೌದ್ಧಿಕ ವಲಯದ ಅಡ್ಡಪರಿಣಾಮಗಳೇ ಆಗಿದ್ದರು. ಅಥವಾ ಭಾರತದಲ್ಲಿ ಹಿಂದೂವಿರೋಧಿ ಚಿಂತನೆಗಳನ್ನು ಬಿತ್ತುವ ಮೂಲ ಕೊಂಡಿಯೇ ಅವರಾಗಿದ್ದರು. ಆದರೆ ಅನೇಕ ವರ್ಷಗಳ ಕಾಲ ಮಸೀದಿಯ ಜಾಗದಲ್ಲಿ ರಾಮಮಂದಿರವೊಂದಿತ್ತೆಂದು ಸಾಧಿಸಲು ಯಾವ ಐತಿಹಾಸಿಕ ಪುರಾವೆಗಳೂ ಇಲ್ಲವೆಂದು ಅವರು ಹೇಳಿದ್ದನ್ನೇ ನ್ಯಾಯಾಲಯ ಪುರಸ್ಕರಿಸುತ್ತಾ ಬಂದಿತ್ತು. ಒಮ್ಮೆ ನ್ಯಾಯಾಧೀಶರೊಬ್ಬರು ಇವರ ಹೇಳಿಕೆಗಳನ್ನೇ ತಿರುವಿ ಹಾಕಿ ‘ಈ ವರದಿ ಕೊಡುವ ಮುನ್ನ ಆಕರ್ಿಯಾಲಾಜಿಕಲ್ ಸವರ್ೇ ಆಫ್ ಇಂಡಿಯಾದ ಸಂಶೋಧನೆಯನ್ನು ಗಮನಿಸಿರುವಿರಾ?’ ಎಂದು ಕೇಳಿದ್ದಕ್ಕೆ ನಾಲ್ಕೂ ಜನ ಇಲ್ಲವೆಂದರು. ಇಬ್ಬರಂತೂ ಅಯೋಧ್ಯೆಗೆ ತಾವು ಎಂದೂ ಹೋಗಲೇ ಇಲ್ಲ ಎಂದುಬಿಟ್ಟರು! ಕೊನೆಗೆ ಎಲ್ಲ ಕುತ್ತಿಗೆಗೆ ಸುತ್ತಿಕೊಳ್ಳುತ್ತಿದೆ ಎಂದು ಗೊತ್ತಾದಾಗ ಸಕರ್ಾರ ತುತರ್ಾಗಿ ವರದಿ ಕೇಳಿದ್ದರಿಂದ ಆ ಕ್ಷಣಕ್ಕೆ ಲಭ್ಯವಿದ್ದ ಒಂದಷ್ಟು ಮಾಹಿತಿಯ ಆಧಾರದ ಮೇಲೆ ನಾವು ಹೀಗೆ ಹೇಳಿ ಸುಮ್ಮನಾದೆವೆಂದು ಕೈ ತೊಳೆದುಕೊಂಡುಬಿಟ್ಟರು. ಆನಂತರವೇ ನ್ಯಾಯಾಲಯ ಅದು ಸಂಶೋಧನೆಯಲ್ಲ. ಬದಲಿಗೆ ಅವರ ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ದಾಖಲಿಸಿತು. ಹಾಗೊಂದು ಅಭಿಪ್ರಾಯವನ್ನು ಯಾರು ಯಾರ ಮೇಲೆ ಬೇಕಿದ್ದರೂ ಕೊಡಬಹುದು. ವಿರಾಟ್ ಕೋಹ್ಲಿ ಸೆಂಚುರಿ ಬಾರಿಸುವುದೇ ಸುಳ್ಳು. ಅದು ಚಾನೆಲ್ಗಳು ಮಾಡುವ ಅನಿಮೇಷನ್ ಎಂಬುದು ನನ್ನ ಅಭಿಪ್ರಾಯ ಎಂದು ಯಾರು ಬೇಕಿದ್ದರೂ ಹೇಳಬಹುದಲ್ಲಾ. ಎಡಪಂಥೀಯ ಇತಿಹಾಸಕಾರರದ್ದು ಇದಕ್ಕಿಂತಲೂ ಭಿನ್ನವಾದ ಕಥೆಯೇನಲ್ಲ!

3

ಯಾವುದಾದರೊಂದು ಘಟನೆಯ ಐತಿಹಾಸಿಕತೆಯನ್ನು ಪರೀಕ್ಷಿಸುವುದಕ್ಕೆ ಮೊದಲು ಜನಪದದಲ್ಲಿ ಹಬ್ಬಿ ಹೋಗಿರುವಂತಹ ಕಥನಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಆ ಕಥನಗಳಿಗೆ ಪೂರಕವಾದ ಸಾಹಿತ್ಯಾತ್ಮಕವಾದ ಆಧಾರಗಳನ್ನು ಆನಂತರ ಸಂಗ್ರಹಿಸಲಾಗುತ್ತದೆ. ಆನಂತರ ಅದಕ್ಕೆ ಸಂಬಂಧಪಟ್ಟ ಶಿಲಾಲೇಖಗಳನ್ನೋ ಸನದು ಪತ್ರಗಳನ್ನೋ ಹುಡುಕಾಡಲಿಕ್ಕೆ ಶುರುಮಾಡುತ್ತಾರೆ. ಇವಿಷ್ಟರೊಂದಿಗೆ ಸ್ವಲ್ಪ ಭೂಮಿಯನ್ನು ಅಗೆದು ಅಲ್ಲಿರಬಹುದಾಗಿರುವಂತಹ ಕಲ್ಲು, ಮಣ್ಣು, ಕಟ್ಟಡ ಸಂರಚನೆಗಳ ಮೂಲಕ ಸಾಕ್ಷಿಗಳನ್ನು ಒದಗಿಸಲು ವೈಜ್ಞಾನಿಕವಾಗಿ ಪ್ರಯತ್ನಪಡಲಾಗುತ್ತದೆ. ಕೆಲವೊಮ್ಮೆ ಒಂದು ಹೆಜ್ಜೆ ಮುಂದೆ ಹೋಗಿ ಸಮಾಧಿಯಿಂದ ಸಂಗ್ರಹಿಸಿದ ಮೃತವ್ಯಕ್ತಿಯ ಎಲುಬುಗಳ ಡಿಎನ್ಎ ಪರೀಕ್ಷಣೆ ನಡೆಸಿ ಜನಪದದ ಮೂಲಕ ಹಬ್ಬಿರುವ ವಿಚಾರಗಳನ್ನು ದೃಢೀಕರಿಸಲಾಗುತ್ತದೆ. ಈಗಂತೂ ಹೇಗಿದೆಯೆಂದರೆ ಆಕಾಶಕ್ಕೆ ಹಾರಿಬಿಟ್ಟಿರುವ ಉಪಗ್ರಹಗಳೂ ಕೂಡ ಭೂಮಿಯ ಮೇಲಿನ ಹೀಟ್ಮ್ಯಾಪುಗಳನ್ನು ಅಧ್ಯಯನ ಮಾಡಿ ಈ ಸಂಗತಿಗಳಿಗೆ ಶಕ್ತಿತುಂಬಿಬಿಡಬಲ್ಲವು. ಹೀಗಾಗಿಯೇ ಈಗ ಎಸಿ ರೂಮಿನಲ್ಲಿ ಕುಳಿತುಕೊಂಡ ಇತಿಹಾಸಕಾರನೊಬ್ಬ ತನ್ನ ಸುಳ್ಳುಗಳಿಂದ ಜನರನ್ನು ವಂಚಿಸಲು ಸಾಧ್ಯವೇ ಇಲ್ಲ. ಸತ್ಯ ಸಾಯುವುದಿಲ್ಲ, ಸುಳ್ಳು ನಿಲ್ಲುವುದಿಲ್ಲ. ಮತ್ತು ಇಂತಹ ಸುಳ್ಳು ಇತಿಹಾಸಕಾರರೂ ಮತ್ತು ಅವರ ಬೆಂಬಲಿಗರು ಬದುಕಿದ್ದೂ ಸತ್ತು ಹೋಗಿರುತ್ತಾರೆ!

ಅಯೋಧ್ಯೆ ರಾಮನ ಜನ್ಮಸ್ಥಳವೆಂಬುದಕ್ಕೆ ಹಿಂದೂಗಳು ಹೇಳುವ ಆಧಾರವೇ ಬೇಕಾಗಿಲ್ಲ. ಮುಸಲ್ಮಾನರೇ ಅದಕ್ಕೆ ಪೂರಕವಾದ ಸಾಹಿತ್ಯವನ್ನು ಒದಗಿಸಿದ್ದಾರೆ. ಅಕ್ಬರನ ಆಪ್ತನಾಗಿದ್ದ ಅಬುಲ್ ಫಜಲ್ ಐನ್-ಇ-ಅಕ್ಬರಿಯಲ್ಲಿ ಬರೆದಿರುವ ಮಾತುಗಳನ್ನು ಗಮನಿಸಿ, ‘ಅಯೋಧ್ಯೆ ಭಾರತದ ದೊಡ್ಡ ನಗರಗಳಲ್ಲೊಂದು. ಮತ್ತು ಇದು ಪವಿತ್ರ ತೀರ್ಥಕ್ಷೇತ್ರವೆಂದು ಭಾವಿಸಲಾಗುತ್ತದೆ. ಈ ನಗರ ತ್ರೇತಾಯುಗದಲ್ಲಿ ಆಧ್ಯಾತ್ಮಿಕ ಮತ್ತು ರಾಜಕೀಯವಾಗಿಯೂ ಸಂಪ್ರಭುತೆಯನ್ನು ಸ್ಥಾಪಿಸಿದ್ದ ರಾಮಚಂದ್ರನ ನೆಲೆಯಾಗಿತ್ತು’ ಎಂದಿದ್ದಾನೆ. ಅವನಿಗಿಂತಲೂ ಬಹುಕಾಲದ ಹಿಂದೆ ಮಹಮ್ಮದ್ ಘಜ್ನಿಯೊಂದಿಗೆ ಭಾರತಕ್ಕೆ ಆಗಮಿಸಿದ್ದ ಅಲ್ಬರೂನಿ ಶ್ರೀರಾಮನ ಕುರಿತಂತೆ ಮಾತನಾಡುತ್ತಾ, ‘ತ್ರೇತಾಯುಗದಲ್ಲಿ ದುಷ್ಟರ ನಾಶಗೈದು ಸದ್ವಿಚಾರಗಳನ್ನು ಪುನರ್ ಸ್ಥಾಪಿಸಬೇಕೆಂಬ ಮತ್ತು ಮೂರೂ ಲೋಕಗಳ ರಕ್ಷಣೆ ಮಾಡಬೇಕೆಂಬ ದೃಷ್ಟಿಯಿಂದ ಅವತರಿಸಿದ್ದವನು ರಾಮ’ ಎಂಬರ್ಥದ ಮಾತುಗಳನ್ನು ಹೇಳಿದ್ದಾನೆ.

4

ನಾನಿಲ್ಲಿ ಹಿಂದೂ ಸಾಹಿತ್ಯಗಳ ಕುರಿತಂತೆ ಮಾತನಾಡುವ ಅಗತ್ಯವೇ ಇಲ್ಲ. ವಾಲ್ಮೀಕಿ ರಾಮಾಯಣವಂತೂ ದೇವಾದಿದೇವ ವಿಷ್ಣು ವರ ಕರುಣಿಸಿದ ನಂತರ ತಾನು ಅವತರಿಸಬೇಕಾದ ಜನ್ಮಭೂಮಿಯ ಬಗ್ಗೆ ಚಿಂತಿಸಿದನು ಎಂದು ಹೇಳುತ್ತದಲ್ಲದೇ ಕೌಸಲ್ಯೆ ಜಗನ್ನಾಥ ರಾಮನಿಗೆ ಜನ್ಮನೀಡಿದಳು ಎಂಬುದನ್ನೂ ದಾಖಲಿಸುತ್ತದೆ. ತುಳಸಿ ರಾಮಾಯಣದಲ್ಲಿ ರಾವಣನ ವಧೆಯ ನಂತರ ಅಯಧ್ಯೆಗೆ ಮರಳುತ್ತಿರುವ ರಾಮ ಪುಷ್ಪಕವಿಮಾನದಲ್ಲಿ ಕುಳಿತು ಅಯೋಧ್ಯೆಯನ್ನು ಕಂಡು ಹೇಳುವ ಮಾತುಗಳನ್ನು ಕಾವ್ಯಾತ್ಮವಾಗಿ ವಣರ್ಿಸಲಾಗಿದೆ. ‘ಅಯೋಧ್ಯೆಯಷ್ಟು ಪ್ರಿಯವಾದುದು ಮತ್ತ್ಯಾವುದೂ ಇಲ್ಲ. ಏಕೆಂದರೆ ಇದು ನನ್ನ ಹುಟ್ಟೂರು, ಇದರ ಉತ್ತರ ದಿಕ್ಕಿನಲ್ಲಿ ಸರಯೂ ಹರಿಯುತ್ತದೆ’.

ಅನೂಚಾನವಾಗಿ ಭಾರತೀಯ ಪರಂಪರೆಯಲ್ಲಿ ರಾಮ ಜೊತೆಗೇ ಬಂದಿದ್ದಾನಲ್ಲದೇ ಇತಿಹಾಸ ಕೆದಕಿದಷ್ಟು ಆತ ಆಳಕ್ಕೇ ಹೋಗುತ್ತಾನೆ ಮತ್ತು ತೀರಾ 21ನೇ ಶತಮಾನದಲ್ಲಿ ನಿಂತಾಗಲೂ ಆತ ವಿಸ್ತಾರವಾಗಿಯೇ ಹಬ್ಬಿದ್ದಾನೆ. 1859ರಲ್ಲಿ ವಿಷ್ಣುಭಟ್ಟ ವಸರ್ೈಕರ್ ಅಯೋಧ್ಯೆಗೆ ಭೇಟಿಕೊಟ್ಟು ತನ್ನ ಪುಸ್ತಕ ಮಾಝಾ ಪ್ರವಾಸ್ದಲ್ಲಿ ಅದರ ವರ್ಣನೆ ಮಾಡಿದ್ದಾರೆ. ರಾಮ ಹುಟ್ಟಿದ ದಿನ ಅಂದರೆ ರಾಮನವಮಿಯಂದು ಏಳೆಂಟು ಲಕ್ಷ ಯಾತ್ರಿಕರು ಅಯೋಧ್ಯೆಯಲ್ಲಿ ಸೇರಿದ್ದನ್ನು ಅವರು ಆಶ್ಚರ್ಯಚಕಿತರಾಗಿ ಹೇಳಿರುವುದಲ್ಲದೇ ಅಷ್ಟೊಂದು ಸಾಧು-ಬೈರಾಗಿಗಳನ್ನು ಜೊತೆಯಲ್ಲಿ ತಾನೆಂದಿಗೂ ಕಾಣಲೇ ಇಲ್ಲ ಮತ್ತು ದಕ್ಷಿಣದಿಂದಲೂ ಕ್ಷೇತ್ರಾಥರ್ಿಗಳಾಗಿ ಬಂದಿರುವ ಅಷ್ಟು ಭಕ್ತರನ್ನು ನೋಡಿರಲಿಲ್ಲವೆಂದು ಉದ್ಘರಿಸಿದ್ದಾರೆ. ಐನ್-ಇ-ಅಕ್ಬರಿಯಲ್ಲೂ ಕೂಡ ರಾಮನವಮಿಯಂದು ಧಾಮರ್ಿಕ ಉತ್ಸವ ಅಯೋಧ್ಯೆಯಲ್ಲಿ ನಡೆಯುತ್ತದೆಂಬುದನ್ನು ವಿಶೇಷವಾಗಿ ದಾಖಲಿಸಲಾಗಿದೆ. ವಿಷ್ಣುಭಟ್ಟರದ್ದು 19ನೇ ಶತಮಾನದ ದಾಖಲೆಯಾದರೆ ಅಬುಲ್ ಫಜಲ್ನದ್ದು 16ನೇ ಶತಮಾನದ ದಾಖಲೆ ಎನ್ನುವುದು ಅಚ್ಚರಿ ತರಿಸುವಂಥದ್ದೇ. 1631ರಲ್ಲಿ ಜೋನ್ಸ್ ಡಿ ಲೇಟ್ ದೇಶದೆಲ್ಲೆಡೆಯಿಂದಲೂ ಅಯೋಧ್ಯೆಗೆ ಜನ ಆಗಮಿಸಿ ರಾಮನಿಗೆ ಪೂಜೆ ಮಾಡಿ ಕುರುಹಾಗಿ ಅನ್ನದ ಕಾಳುಗಳನ್ನು ತೆಗೆದುಕೊಂಡು ಹೋಗುತ್ತಾರೆಂದು ದಾಖಲಿಸಿದ್ದಾನೆ. 1891ರಲ್ಲಿ ಡಬ್ಲ್ಯೂ ಎ ಕೈನ್ ಎಂಬ ಯುರೋಪ್ ಯಾತ್ರಿಕನೊಬ್ಬ ರಾಮನವಮಿ ಮೇಲಾಕ್ಕೆ 4 ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆಂಬ ಅಂಶವನ್ನು ಬರೆದಿಟ್ಟಿದ್ದಾನೆ. ನಿಸ್ಸಂಶಯವಾಗಿ ಅಯೋಧ್ಯೆ ಅಂದಿನ ದಿನಗಳಲ್ಲಿ ಹಿಂದೂ ಶ್ರದ್ಧೆಯ ಕೇಂದ್ರವಾಗಿತ್ತು. ಇದಕ್ಕೆ ಕೈ ಹಾಕುವುದೆಂದರೆ ಅಧಿಕಾರದಲ್ಲಿ ಏರು-ಪೇರಾಗುವುದೆಂದೇ ಅರ್ಥವಾಗಿತ್ತು. ಹೀಗಾಗಿಯೇ ಮಾಚರ್್ 28, 1600ರಲ್ಲಿ ಮೊಘಲ್ ದೊರೆ ಅಕ್ಬರ್ ಅಯೋಧ್ಯೆಯ ಆವರಣದಲ್ಲೇ ಹನುಮಾನ್ ಮಂದಿರವೊಂದನ್ನು ಕಟ್ಟಲು 6 ಬಿಘಾಗಳಷ್ಟು ಭೂಮಿಯನ್ನು ಕೊಡುವ ಆದೇಶ ನೀಡಿದ. ಅಂದರೆ ಆ ಭೂಮಿಯಿಂದ ಬರುವ ಉತ್ಪನ್ನವನ್ನು ಮಂದಿರದ ನಿಮರ್ಾಣ ಮತ್ತು ನಿರ್ವಹಣೆಗೆ ಬಳಸಬೇಕು ಎಂದರ್ಥ. ಮುಂದೆ ಇದು 1723ರಲ್ಲಿ ಮತ್ತೊಬ್ಬ ಮೊಘಲ್ ದೊರೆ ಮಹಮ್ಮದ್ ಶಾ ನಿಂದ ಪುನರ್ನವೀಕರಿಸಲ್ಪಟ್ಟಿತು. ಅನೇಕ ಮುಸಲ್ಮಾನ್ ದೊರೆಗಳೇ ಅಯೋಧ್ಯೆಗೆ ಸಾಕಷ್ಟು ದಾನ ಕೊಟ್ಟಿದ್ದು ಉಲ್ಲೇಖವಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಔರಂಗಜೇಬನೆಂಬ ದುಷ್ಟ ರಾಜನ ಅತ್ಯಂತ ಕೆಟ್ಟ ಆಡಳಿತದ ಕಾಲದಲ್ಲಿ ತಿರುಗಿಬಿದ್ದ ಹಿಂದೂಗಳ ಆಕ್ರೋಶದ ಬೆಂಕಿಯನ್ನು ಅಥರ್ೈಸಿಕೊಂಡ ಮುಂದಿನ ಯಾವ ಮೊಘಲ್ ದೊರೆಗಳೂ ಅಯೋಧ್ಯೆಯಲ್ಲಿ ಮಸೀದಿ ಕಟ್ಟಲು ಅನುಮತಿಯನ್ನಾಗಲೀ, ಧನಸಹಾಯವನ್ನಾಗಲೀ ಕೊಡಲಿಲ್ಲವೆಂದು ಕಿಶೋರ್ ಕುನಾಲ್ ತಮ್ಮ Ayodhya-Beyond adduced evidence ಕೃತಿಯಲ್ಲಿ ದಾಖಲಿಸಿದ್ದಾರೆ. ಅವರು ಐಪಿಎಸ್ ಅಧಿಕಾರಿಯಾಗಿದ್ದು ದರ್ಭಂಗಾದ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳೂ ಆಗಿದ್ದರು.

5

ಆಧಾರಗಳು ಬೆಟ್ಟದಷ್ಟಿವೆ. ಪ್ರತೀ ಸಾಹಿತ್ಯಕ ಆಧಾರವೂ ರಾಮನ ಜನ್ಮಭೂಮಿ ಅಯೋಧ್ಯೆ ಎಂಬುದನ್ನು ಸಾಬೀತುಪಡಿಸುತ್ತದೆಯಲ್ಲದೇ ಐತಿಹಾಸಿಕವಾಗಿ ಅದಕ್ಕಿದ್ದ ಮೌಲ್ಯವನ್ನು ಬಲಗೊಳಿಸುತ್ತಾ ಹೋಗುತ್ತದೆ. ಎಲ್ಲಕ್ಕೂ ಮಿಗಿಲಾದ ಅಚ್ಚರಿಯ ಮತ್ತು ಹೆಮ್ಮೆಪಡುವ ಸಂಗತಿಯೆಂದರೆ, ಸುದೀರ್ಘ ಮುಸಲ್ಮಾನರ ಮತ್ತು ಕ್ರಿಶ್ಚಿಯನ್ನರ ಆಕ್ರಮಣದ ನಂತರವೂ ಹಿಂದೂ ರಾಮನನ್ನು ಬಿಟ್ಟುಕೊಡಲಿಲ್ಲ. ಆತ ರಾಮನೊಂದಿಗೆ ಬದುಕಿದ, ಆತನ ಉತ್ಸವವನ್ನು ಆಚರಿಸಿದ, ಮಾತಿನಲ್ಲಿ, ಚಿಂತನೆಯಲ್ಲಿ ಕೊನೆಗೆ ಎದುರಿಗೆ ಸಿಕ್ಕವನನ್ನು ಕೈಬೀಸಿ ಮಾತನಾಡಿಸುವಲ್ಲಿಯೂ ರಾಮನನ್ನು ನೆನಪಿಸಿಕೊಂಡ. ಹೀಗಾಗಿಯೇ ಅನೇಕ ಶತಮಾನಗಳ ಕದನದ ನಂತರರವೂ ಕೂಡ ಇಂದು ಮತ್ತೆ ರಾಮನ ಹಳಿಗೆ ಭಾರತ ಮರಳುತ್ತಿದೆ. ದೇಶದಾದ್ಯಂತ ರಾಮಮಂದಿರದ ನಿಮರ್ಾಣಕ್ಕೆ ಸಮರ್ಥ ಭೂಮಿಕೆ ಸಿದ್ಧವಾಗುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸವರ್ೋಚ್ಚ ನ್ಯಾಯಾಲಯ ಇದಕ್ಕೆ ಸಂಬಂಧಪಟ್ಟ ಚಚರ್ೆಯನ್ನು ಮುಗಿಸಿ ನಿರ್ಣಯವನ್ನು ಕೊಡಲಿದೆ. ನಾವೆಲ್ಲರೂ ನಿಜಕ್ಕೂ ಪುಣ್ಯವಂತರು. ನಮ್ಮ ಪೂರ್ವಜರು ಯಾವ ರಾಮನನ್ನು ಭಿನ್ನ ಭಿನ್ನ ಸ್ವರೂಪಗಳಲ್ಲಿ ಉಳಿಸಿಕೊಂಡಿದ್ದರೋ ಆತನ ಮಂದಿರದ ವೈಭವವನ್ನು ನಾವು ಕಾಣಲಿದ್ದೇವೆ!

Comments are closed.