ವಿಭಾಗಗಳು

ಸುದ್ದಿಪತ್ರ


 

ರಾಮರಾಜ್ಯ ಭ್ರಾಮಕ ಕಲ್ಪನೆಯಲ್ಲ!

ರಾಮ ದುಷ್ಟರನ್ನು ಮುಲಾಜಿಲ್ಲದೇ ಶಿಕ್ಷಿಸಿದ್ದ. ಸಜ್ಜನರಿಗೆ ತೊಂದರೆ ಕೊಟ್ಟು ರಾಷ್ಟ್ರದ ಅವನತಿಗೆ ಕಾರಣವಾಗುವ ರಾಕ್ಷಸರ ಸಮೂಲನಾಶಗೈದಿದ್ದ. ನಾಶ ಎನ್ನುವ ಪದ ಬಲು ಕಟು ಎನಿಸಿದರೂ ಏಳು ದಶಕಗಳಲ್ಲಿ ಭಾರತ ಅಭಿವೃದ್ಧಿಯಾಗಬಾರದೆಂದೇ ದುಡಿದ ಅನೇಕರ ಸಂತಾನಗಳು ಇಂದಿಗೂ ಕ್ರಿಯಾಶೀಲವಾಗಿವೆ. ಅವರುಗಳನ್ನು ಮಟ್ಟಹಾಕುವ ಹೊಣೆ ಇದ್ದೇ ಇದೆ.

ರಾಮಮಂದಿರ ನಿಮರ್ಾಣ ಹಿಂದುವಿನ ಪಾಲಿಗೆ ಒಂದು ಮೋಹಕ ಕಲ್ಪನೆಯಷ್ಟೇ ಆಗಿತ್ತು. ಇದಕ್ಕಾಗಿ ನಡೆದ ಹೋರಾಟ ದಶಕಗಳದ್ದಲ್ಲ, ಶತಕಗಳದ್ದು. ಬಹುಶಃ ಪೂಜಾಸ್ಥಾನವೊಂದನ್ನು ಮರಳಿ ಪಡೆಯುವ ಸುದೀರ್ಘ ಹೋರಾಟಗಳಲ್ಲಿ ಇದೂ ಒಂದೆಂದು ದಾಖಲಾಗಬಹುದೇನೋ! ರಾಮಮಂದಿರ, ರಾಮರಾಜ್ಯ ಇವೆರಡೂ ಕೂಡ ಕಾಲ್ಪನಿಕವೆಂದೇ ಪ್ರತಿಯೊಬ್ಬರೂ ಭಾವಿಸಿದ್ದರು. ಚುನಾವಣೆ ಗೆಲ್ಲಲು ಗಿಮಿಕ್ಕುಗಳಾಗಿ ಬಳಕೆಯಾಗಬಹುದೆಂಬ ಮನೋಗತವೇ ಎಲ್ಲರದ್ದೂ ಆಗಿತ್ತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸಾವಿರ ವರ್ಷಗಳ ಕಾಲ ಬಿಟ್ಟೂ ಬಿಡದೇ ನಡೆದ ಇಸ್ಲಾಂ ಆಕ್ರಮಣ, ಗೆದ್ದು ಅಧಿಕಾರವನ್ನು ಸಮರ್ಥವಾಗಿ ಸ್ಥಾಪಿಸುವುದರೊಳಗೆ ಪತನಗೊಳ್ಳುತ್ತಿದ್ದ ಹಿಂದೂ ಸಾಮ್ರಾಜ್ಯಗಳು ಪರಂಪರೆಯನ್ನು ಬಲವಾಗಿ ಉಳಿಸುವಲ್ಲಿ ಪದೇ ಪದೇ ಸೋತವು. ಇನ್ನೇನು ಬೆಳಕು ಕಂಡೇ ಬಿಡುತ್ತದೆ ಎನ್ನುವ ವೇಳೆಗೆ ಪಶ್ಚಿಮದಿಂದ ನಡೆದ ಕ್ರಿಶ್ಚಿಯನ್ ಆಕ್ರಮಣ ಬೌದ್ಧಿಕವಾಗಿ ನಮ್ಮನ್ನು ದಾಸ್ಯಕ್ಕೆ ತಳ್ಳಿಬಿಟ್ಟಿತು. ಈ ದಾಸ್ಯದ ಮುಂದುವರೆದ ವಾರಸುದಾರರಾಗಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಅಧಿಕಾರವನ್ನು ಪಡೆದುಕೊಂಡ ಕಾಂಗ್ರೆಸ್ಸು ಭಾರತೀಯ ಚಿಂತನೆ, ವಿಚಾರಗಳನ್ನು ಬ್ರಿಟೀಷರಿಗಿಂತ ತುಚ್ಛವಾಗಿ ಕಂಡಿತು. ಇವರೊಟ್ಟಿಗೆ ಸೇರಿಕೊಂಡ ಕಮ್ಯುನಿಸ್ಟರು ಭವಿಷ್ಯವನ್ನು ಪೂರ್ಣಪ್ರಮಾಣದಲ್ಲಿ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ರೂಪಿಸುವಲ್ಲಿ ಸಾಕಷ್ಟು ಕೊಡುಗೆಯನ್ನಿತ್ತರು. ಇವೆಲ್ಲದರ ಪರಿಣಾಮವಾಗಿಯೇ ನಮ್ಮ ಪರಂಪರೆಯನ್ನು ಧಿಕ್ಕರಿಸುವ, ಸಂಸ್ಕೃತಿಯನ್ನು ಹಳಿಯುವ, ಪಶ್ಚಿಮವನ್ನು ಕಣ್ಮುಚ್ಚಿಕೊಂಡು ಅನುಸರಿಸುವ ಮತ್ತು ಭಾರತೀಯವಾದ್ದೆಲ್ಲಾ ಕಳಪೆ ಎಂದು ಜರಿಯುವ ಹೊಸ ಪೀಳಿಗೆ ನಿಮರ್ಾಣವಾಯ್ತು.

9

ಈ ಹೊಸ ಜನಾಂಗ ಅದೆಷ್ಟು ಮನೋವೈಕಲ್ಯಕ್ಕೆ ಒಳಗಾಗಿತ್ತೆಂದರೆ ರಾಮಮಂದಿರದ ಬದಲು ಅದೇ ಜಾಗದಲ್ಲಿ ಆಸ್ಪತ್ರೆಯನ್ನೋ ಶಾಲೆಯನ್ನೋ ಕಟ್ಟಿಸಿಬಿಡೋಣ ಎನ್ನುತ್ತಿತ್ತು. ರಾಮ ಹುಟ್ಟಿದ ಜಾಗದಲ್ಲಿ ನಿಮರ್ಾಣಗೊಳ್ಳುವ ಮಂದಿರವೊಂದು ಭಾರತೀಯರ ಅಸ್ಮಿತೆಗೆ ಕೇಂದ್ರವಾಗಿ ನಿಲ್ಲುವುದೆಂಬ ಸಾಮಾನ್ಯಜ್ಞಾನವೂ ಅವರಿಗಿರಲಿಲ್ಲ. ಅವರಿಗೆ ಬಾಬರ್ ಕಟ್ಟಿದ ಕಟ್ಟಡವನ್ನು ಉರುಳಿಸಿದ ಹೃದಯವೇದನೆ ತೀವ್ರವಾಗಿತ್ತು. ಆದರೆ ಅದೇ ಬಾಬರ್ ರಾಮಮಂದಿರವನ್ನು ಕೆಡವಿ ಅದರ ಅವಶೇಷಗಳಿಂದಲೇ ಈ ಕಟ್ಟಡ ನಿಮರ್ಿಸಿದುದರ ಕುರಿತಂತೆ ಇತಿಹಾಸವನ್ನು ಮರುಸಂದಶರ್ಿಸಬೇಕೆಂಬ ವ್ಯವಧಾನವೂ ಇರಲಿಲ್ಲ. ಈ ಹೊಸ ಜನಾಂಗಕ್ಕೆ ಮಾತೃಭಾಷೆಯ ಶಿಕ್ಷಣವೆಂದರೆ ಅಸಡ್ಡೆ. ತಪ್ಪಿ ಭಾರತದಲ್ಲಿ ಹುಟ್ಟಿರುವ ತಾವು ವಿಶ್ವದ ಪ್ರಜೆಗಳಾಗಿ ಬೆಳೆಯಬೇಕೆಂಬ ಧಾವಂತ ಅವರಿಗಿತ್ತು. ಬೇರನ್ನು ಕಳೆದುಕೊಂಡು ಯಾವ ಗಿಡವೂ ಹಣ್ಣು ಕೊಡುವುದಿಲ್ಲವೆಂಬ ಸಾಮಾನ್ಯಜ್ಞಾನದ ಕೊರತೆ ಅದು. ಪಶ್ಚಿಮದಿಂದ ಬಂದ ವಿಚಾರಗಳನ್ನು ಸಾರಾಸಗಟಾಗಿ ನಕಲು ಮಾಡುತ್ತಿದ್ದ ಈ ಜನ ಎರವಲು ಪಡೆದುಕೊಂಡೇ ಏಳು ದಶಕಗಳನ್ನು ಕಳೆದುಬಿಟ್ಟರು. ಇಂಥವರಿಗೆ ರಾಮರಾಜ್ಯ ಕಾಲ್ಪನಿಕವೆನಿಸುವುದು ಸರಿಯೇ.

ಬಹುಶಃ ನಾವುಗಳೆಲ್ಲರೂ ರಾಮರಾಜ್ಯದ ಕುರಿತಂತೆ ಕಟ್ಟಿಕೊಂಡ ಆದರ್ಶಗಳೇ ಇಂದಿನ ಜಗತ್ತಿನಲ್ಲಿ ಕಲ್ಪನೆ ಎನಿಸುವಂತೆ ಮಾಡಿಬಿಟ್ಟಿರಬಹುದು. ಮಹಾತ್ಮ ಗಾಂಧೀಜಿ 1929ರಲ್ಲಿ ಯಂಗ್ ಇಂಡಿಯಾಕ್ಕೆ ಬರೆದ ಲೇಖನವೊಂದರಲ್ಲಿ, ‘ರಾಮರಾಜ್ಯವೆಂದರೆ ಹಿಂದೂ ರಾಜ್ಯವೆಂದು ನನ್ನ ಅಭಿಪ್ರಾಯವಲ್ಲ. ನನ್ನ ಪ್ರಕಾರ ಅದು ದೈವೀ ಸಾಮ್ರಾಜ್ಯ. ನನ್ನ ಪಾಲಿಗೆ ರಾಮ-ರಹೀಮ ಇಬ್ಬರೂ ಒಂದೇ. ಸತ್ಯ ಮತ್ತು ಧರ್ಮವೆಂಬ ಭಗವಂತನನ್ನು ಬಿಟ್ಟರೆ ಇನ್ಯಾರನ್ನೂ ನಾನಂತೂ ಒಪ್ಪಿಕೊಳ್ಳುವುದಿಲ್ಲ. ನನ್ನ ಕಲ್ಪನೆಯ ರಾಮ ಭೂಮಿಯ ಮೇಲೆ ವಾಸಿಸಿದ್ದನೋ ಇಲ್ಲವೋ ಹೇಳಲಾರೆ. ಆದರೆ ಪ್ರಾಚೀನವಾದ ರಾಮರಾಜ್ಯದ ಆದರ್ಶ ಮಾತ್ರ ನಿಸ್ಸಂಶಯವಾಗಿ ಸಾಮಾನ್ಯ ವ್ಯಕ್ತಿಗೂ ಕ್ಷಿಪ್ರವಾಗಿ ನ್ಯಾಯವನ್ನು ದೊರಕಿಸಿಕೊಡಬಲ್ಲ ನೈಜ ಪ್ರಜಾಪ್ರಭುತ್ವ. ನಾಯಿಯೂ ಕೂಡ ರಾಮರಾಜ್ಯದಲ್ಲಿ ನ್ಯಾಯವನ್ನು ಪಡೆಯುತ್ತಿತ್ತೆಂದು ಕವಿ ವಣರ್ಿಸುತ್ತಾನೆ. ನನ್ನ ಕಲ್ಪನೆಯ ರಾಮರಾಜ್ಯದಲ್ಲಿ ರಾಜ ಮತ್ತು ಭಿಕಾರಿ ಇಬ್ಬರಿಗೂ ನ್ಯಾಯವಿದೆ’ ಎಂದಿದ್ದಾರೆ. ಅವರ ಈ ಮಾತುಗಳು ಕಲ್ಪನೆಯ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯುತ್ತವೆಯೇ ಹೊರತು ರಾಮರಾಜ್ಯವನ್ನು ಸಾಕಾರಗೊಳಿಸಿಕೊಳ್ಳಬಲ್ಲ ಭರವಸೆ ನೀಡುವುದಿಲ್ಲ!

10

ಹೌದು. ರಾಮರಾಜ್ಯದಲ್ಲಿ ಎಲ್ಲರೂ ಸಮಾನರೇ. ಅಲ್ಲಿ ಜಾತಿ-ಮತ-ಪಂಥಗಳ ಭೇದವಿಲ್ಲ. ಸಾಮಂತರ ನಡುವೆ ಅಂತರವಿಲ್ಲ. ಕಾಡಿನ ಹೆಣ್ಣುಮಗಳು ಶಬರಿಗೆ ರಾಮನಿಂದ ಆಶೀವರ್ಾದ ದೊರೆತರೆ ಬ್ರಾಹ್ಮಣನಾಗಿದ್ದರೂ ದುಷ್ಟನಾಗಿದ್ದ ರಾವಣನ ಮೇಲೆ ರಾಮಬಾಣದ ಪ್ರಯೋಗವಾಯ್ತು. ಸಮಾನತೆ ರಾಮರಾಜ್ಯದ ಮೂಲಮಂತ್ರ. ಹಾಗೆ ನೋಡಿದರೆ ಈಗ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಒಂದು ಭಾರತ ನಿಮರ್ಾಣಗೊಂಡಿದೆ. ಸಂವಿಧಾನದ 370ನೇ ವಿಧಿಯನ್ನು ಕಿತ್ತು ಬಿಸುಟ ನಂತರ ದೇಶವೆಲ್ಲಾ ಒಂದೆನ್ನುವ ಭಾವದಿಂದ ಎದೆಯುಬ್ಬಿಸಿಕೊಂಡಿದೆ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ಇದು ಘೋಷಣೆಯಾಗಿ ಅಷ್ಟೇ ಉಳಿದಿಲ್ಲ. ಇಡಿಯ ರಾಷ್ಟ್ರಕ್ಕೆ ಒಂದೇ ಪವರ್ಗ್ರಿಡ್, ಎಲ್ಲರಿಗೂ ಒಂದೇ ಬಗೆಯ ರೇಷನ್ಕಾಡರ್್ ಮೊದಲಾದವುಗಳ ಮೂಲಕ ರಾಷ್ಟ್ರದೊಂದಿಗೆ ಏಕರಸವಾಗಿಸುವ ಪ್ರಯತ್ನವಿದೆಯಲ್ಲ ಅದು ಸಾಮಾನ್ಯದ್ದಲ್ಲ. 65 ವರ್ಷಗಳಿಂದ 370ನೇ ವಿಧಿ ರದ್ದಿಗಾಗಿ ಕಾಯುತ್ತಿದ್ದ ಭಾರತಕ್ಕೆ, ಸ್ವಾತಂತ್ರ್ಯ ಬಂದ ಲಾಗಾಯ್ತು ಪ್ರತಿಯೊಬ್ಬರಿಗೂ ಶೌಚಾಲಯಗಳ ನಿಮರ್ಾಣವಾಗಿ ಸಮಾನತೆಯ ಅನುಭವವಾಗಬೇಕು ಎಂದು ಆಲೋಚಿಸಿದ ಭಾರತಕ್ಕೆ ಈಗ ನೆಮ್ಮದಿ ಸಿಕ್ಕಿದೆ.

ರಾಮರಾಜ್ಯದಲ್ಲಿ ಪ್ರಜೆಗಳಿಗೆ ಹೆದರಿಕೆ ಎಂಬುದು ಇರಲಿಲ್ಲವಂತೆ. ಬಹುಶಃ ಸುತ್ತಲಿನ ಶತ್ರುಗಳಿಂದ ಒಳಬಂದು ದೇಶವನ್ನು ನಾಶಮಾಡಲೆತ್ನಿಸುವ ಭಯೋತ್ಪಾದಕರನ್ನು ಈಗ ಮಟ್ಟಹಾಕಿರುವ ರೀತಿಯಲ್ಲಿ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಅವರ ನಾಡಿಗೇ ನುಗ್ಗಿ ಶತ್ರುಗಳನ್ನು ಧ್ವಂಸಗೊಳಿಸಿ, ಇಲ್ಲಿ ಅವರ ಬೆಂಬಲಕ್ಕೆ ನಿಲ್ಲುವವರ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡುವ ಈ ಪರಿ ನಿಜಕ್ಕೂ ವಿಶೇಷವಾದ್ದೇ. ಋಷಿಗಳ ಯಜ್ಞವನ್ನು ಕೆಡಿಸಲೆಂದು ಬರುತ್ತಿದ್ದ ಆತತಾಯಿಗಳನ್ನು ರಾಮರಾಜ್ಯದಲ್ಲಿ ಬಡಿದು ಕೊಲ್ಲಲಾಗುತ್ತಿತ್ತಲ್ಲ, ಈಗಲೂ ಹಾಗೆಯೇ. ರಾಷ್ಟ್ರದ ಅಭಿವೃದ್ಧಿಯ ಓಟಕ್ಕೆ ತಡೆವೊಡ್ಡುವ ವಿದೇಶದ ಏಜೆಂಟರನ್ನು ಮುಲಾಜಿಲ್ಲದೆ ಹೆಡೆಮುರಿ ಕಟ್ಟಲಾಗುತ್ತಿದೆ.

ರಾಮ ಅಸಹಾಯಕರಿಗೆ ಜೊತೆಯಾಗುತ್ತಿದ್ದನಂತೆ. ಅಹಲ್ಯೆಯನ್ನು ಉದ್ಧರಿಸಿದ ರಾಮ ತಂಟೆ ಮಾಡಲು ಬಂದ ಶೂರ್ಪನಖಿಗೆ ಪಾಠ ಕಲಿಸಿದ್ದ. ಹಾಗಂತ ಸಮರ್ಥರಾದ ಹೆಣ್ಣುಮಕ್ಕಳಿಗೆ ಪೂರ್ಣಪ್ರಮಾಣದಲ್ಲಿ ಅರಳಲು ವ್ಯವಸ್ಥೆ ಮಾಡಿಕೊಟ್ಟು ಅವರು ಗೆಲುವನ್ನು ಕಂಡಾಗ ಎಲ್ಲರ ಮುಂದೆ ಅಭಿನಂದಿಸುತ್ತಿದ್ದ. ಟ್ರಿಪಲ್ ತಲಾಖಿನಿಂದ ಶೋಷಣೆಗೊಳಗಾಗಿದ್ದ ಹೆಣ್ಣುಮಕ್ಕಳಿಗೆ ಬೆಂಬಲವಾಗಿ ನಿಂತಿದ್ದು ಇಂದಿನ ಭಾರತವೇ. ಆದರೆ ರಾಷ್ಟ್ರವಿರೋಧಿ ಕೃತ್ಯದಲ್ಲಿ ಭಾಗಿಯಾಗಿರುವ ಅನೇಕರಿಗೆ ಸೂಕ್ತ ಪಾಠ ಕಲಿಸುತ್ತಿರುವುದೂ ಇದೇ ಭಾರತ. ಇನ್ನು ಸಮರ್ಥ ಶಕ್ತಿಯನ್ನು ಅನಾವರಣಗೊಳಿಸಲು ಹಾತೊರೆಯುತ್ತಿರುವ ಸ್ತ್ರೀಸಮಾಜಕ್ಕೆ ಯುದ್ಧಭೂಮಿಯಲ್ಲಿ ಕಾದಾಡುವ ಅವಕಾಶ ದೊರೆತಿರವುದು ಈ ಹೊತ್ತಿನಲ್ಲಿಯೇ. ಇಷ್ಟಕ್ಕೇ ರಾಮರಾಜ್ಯ ಎನ್ನುವುದು ಸರಿಯೊ ತಪ್ಪೋ ಬೇರೆ ವಿಚಾರ, ಆದರೆ ಸಾಮ್ಯವಂತೂ ಇದ್ದೇ ಇದೆ.

11

ರಾಮ ಸಜ್ಜನರ ಗುರುತಿಸಿ ಗೌರವಿಸಿದವ. ನಿಷಾದ ರಾಜ ರಾಮನನ್ನು ತಬ್ಬಿಕೊಳ್ಳಲು ಸಾಧ್ಯವಾಗಿತ್ತು. ಸುಗ್ರೀವ, ವಿಭೀಷಣರಾದಿಯಾಗಿ ಎಲ್ಲರಲ್ಲೂ ಇರುವ ಒಳಿತನ್ನು ಗುರುತಿಸಿ ಗೌರವಿಸಿದವ ರಾಮ. ಹೀಗೆ ಗೌರವಿಸುವಾಗ ಜಾತಿ-ಮತ-ಪಂಥಗಳನ್ನೆಣಿಸದೇ ಅವರ ಸೇವಾ ಮನೋಭಾವವನ್ನಷ್ಟೇ ಗುರುತಿಸಿದ್ದ. ಸ್ಥಾನಮಾನಗಳು ಗೌಣವಾಗಿದ್ದವು. ಕಳೆದ ಆರು ವರ್ಷಗಳಿಂದ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳು ಯಾರ ಪಾಲಾಗಿವೆ ಎಂಬುದನ್ನು ಒಮ್ಮೆ ಪಟ್ಟಿ ತೆಗೆದು ನೋಡಿ. ಅಚ್ಚರಿಯಾದೀತು. ಸೆಲೆಬ್ರಿಟಿಗಳ ಪಟ್ಟಿಯಲ್ಲೇ ಇಲ್ಲದಿರುವ, ಇದು ರಾಮರಾಜ್ಯವಾಗಿಲ್ಲದೇ ಹೋದರೆ ಮುನ್ನೆಲೆಗೆ ಬರಲು ಸಾಧ್ಯವೇ ಇಲ್ಲದ ಅನೇಕರು ಕಾಣಸಿಗುತ್ತಾರೆ. ರಾಷ್ಟ್ರದ ಇಂತಹ ಮಹೋನ್ನತ ಪ್ರಶಸ್ತಿಗೆ ಜಾತಿ-ಮತಗಳು ಅಡ್ಡ ಬರಲಿಲ್ಲ. ಪದವಿ, ಪ್ರತಿಷ್ಠೆಗಳು ತೊಂದರೆ ಕೊಡಲಿಲ್ಲ. ರಾಷ್ಟ್ರ ಗುರುತಿಸಿದ್ದು ಅವರ ಸೇವಾ ಮನೋಭಾವವನ್ನು ಮಾತ್ರ. ಹೀಗಾಗಿಯೇ ಇಂದು ಕಿತ್ತಲೆ ಮಾರಿ ಶಾಲೆಕಟ್ಟಿದ ಹಾಜಬ್ಬನಿಂದ ಹಿಡಿದು ಗಿಡಗಳನ್ನು ನೆಟ್ಟು ಮಕ್ಕಳಂತೆ ಕಾಪಾಡಿದ ತಿಮ್ಮಕ್ಕನವರೆಗೂ ಎಲ್ಲರೂ ಗೌರವಾನ್ವಿತರಾಗಿಬಿಟ್ಟಿದ್ದಾರೆ. ರಾಮರಾಜ್ಯದ ಶ್ರೇಷ್ಠ ಲಕ್ಷಣಗಳಲ್ಲಿ ಇದೂ ಒಂದು.

ರಾಮ ಮಿತ್ರರ ಕೈ ಎಂದೂ ಬಿಡಲಿಲ್ಲ. ಅಧಿಕಾರಕ್ಕೆ ಬರುವ ಮುನ್ನವೇ ತನ್ನ ಸಾಮ್ರಾಜ್ಯದ ಸಾಮಾನ್ಯ ಪಾಳೆಗಾರರನ್ನು ಸಂಧಿಸಿದ, ಅಪ್ಪಿಕೊಂಡ, ಅವರ ಸಹಾಯಕ್ಕೆ ನಿಲ್ಲುವ ಭರವಸೆ ಕೊಟ್ಟ. ಗುಹನಿಂದ ಹಿಡಿದು ಸುಗ್ರೀವನವರೆಗೆ ಪ್ರತಿಯೊಬ್ಬರೂ ರಾಮರಾಜ್ಯದ ಪಾಲುದಾರರೇ ಆಗಿದ್ದರು. ಧಮರ್ಾರ್ಥ ಕಾಮ ಮೋಕ್ಷಗಳಲ್ಲಿ ಯಾರನ್ನೂ ಹಿಂದೆ ಬಿಟ್ಟು ರಾಮ ಮುಂದೋಡಲಿಲ್ಲ. ಭಾರತದ ಕಥೆಯೂ ಭಿನ್ನವಲ್ಲ. ಆಸಿಯಾನ್ ರಾಷ್ಟ್ರಗಳನ್ನೂ ನಮ್ಮೊಂದಿಗೇ ಒಯ್ಯುವ ಹೊಣೆಗಾರಿಕೆಯನ್ನು ನಾವೇ ಹೊತ್ತಿದ್ದೇವೆ. ಈ ರಾಷ್ಟ್ರಗಳಿಗೆ ಉಪಯೋಗವಾಗಲೆಂದು ಉಪಗ್ರಹ ಹಾರಿಸುತ್ತೇವೆ. ಕರೋನಾ ಹೊತ್ತಲ್ಲಿ ಅವರುಗಳಿಗೆ ಸಹಕಾರವಾಗಲೆಂದು ಕೋಟ್ಯಂತರ ರೂಪಾಯಿಯನ್ನು ತೆಗೆದಿರಿಸುತ್ತೇವೆ. ನೆರೆಹೊರೆಯಲ್ಲಿ ಯಾರಿಗೆ ಯಾವ ಆಪತ್ತು ಬಂದರೂ ನಮ್ಮ ಕೈಲಾದ ಸಹಾಯವನ್ನು ಮಾಡಲು ತುದಿಗಾಲಲ್ಲಿ ನಿಂತಿರುತ್ತೇವೆ. ಶತ್ರುಗಳೇ ಆಗಿಬಿಟ್ಟಿದ್ದ ಬಾಂಗ್ಲಾದಂತಹ ರಾಷ್ಟ್ರಗಳು ಮಿತ್ರತ್ವವನ್ನು ಈಗ ಹೊಂದಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಬಲಶಾಲಿಯ ಆಕ್ರಮಣದ ಭೀತಿಯಿಂದ ಅದರುತ್ತಿದ್ದ ಸಣ್ಣ ರಾಷ್ಟ್ರಗಳಿಗೆ ಅಭಯವಾಗಿ ನಿಂತಿದ್ದೇವೆ. ಇವೆಲ್ಲವೂ ಭರವಸೆಯನ್ನು ಮೂಡಿಸುವ ಅಂಶಗಳೇ. ರಾಮ ಹೀಗೆ ರಾಜರುಗಳೊಂದಿಗಲ್ಲದೇ ತನ್ನ ಪ್ರಜೆಗಳೊಂದಿಗೂ ಘನಿಷ್ಠ ಬಾಂಧವ್ಯ ಹೊಂದಿದ್ದ. ಸಾಮಾನ್ಯ ಪ್ರಜೆಯೊಬ್ಬ ನುಡಿದ ಕಟು ಮಾತಿಗೆ ಸೀತೆಯನ್ನೇ ತ್ಯಜಿಸಿದ. ಇಷ್ಟಕ್ಕೂ ಆ ಸಾಮಾನ್ಯನೇನು ರಾಮನೆದುರು ಬಂದು ಹೇಳಿದ್ದಲ್ಲ. ತನ್ನ ಪಾಡಿಗೆ ತಾನು ಆಡಿಕೊಂಡಂಥವು. ಸಾಮಾಜಿಕ ಜಾಲತಾಣಗಳ ಪ್ರಭಾವದ ಈ ಹೊತ್ತಲ್ಲಿ ಟ್ವೀಟೊಂದಕ್ಕೆ ಪ್ರತಿಸ್ಪಂದಿಸುವ ಮಂತ್ರಿ, ಪ್ರಧಾನಮಂತ್ರಿಗಳನ್ನು ನೋಡಿದಾಗ ಬದಲಾವಣೆಯಂತೂ ಸ್ಪಷ್ಟವಾಗಿ ಕಾಣುತ್ತದೆ. ಮನ್ ಕಿ ಬಾತ್ನ ಮೂಲಕ ದೇಶದ ಪ್ರಧಾನಿ ಪ್ರತಿಯೊಬ್ಬರನ್ನೂ ಮುಟ್ಟುವುದು, ಹೃದಯ ತಟ್ಟುವುದು ಸಾಮಾನ್ಯದ ಮಾತಲ್ಲ. ಬಹುಶಃ ರಾಮರಾಜ್ಯದ ಕಲ್ಪನೆ ಹೀಗೇ ಇರುತ್ತದೆನೋ!

12

ಹಾಗಂತ ಎಲ್ಲವೂ ಮುಗಿದಿಲ್ಲ. ಮಾಡಬೇಕಾದ ಕೆಲಸ ಇನ್ನೂ ಬೆಟ್ಟದಷ್ಟಿದೆ. ರಾಮ ದುಷ್ಟರನ್ನು ಮುಲಾಜಿಲ್ಲದೇ ಶಿಕ್ಷಿಸಿದ್ದ. ಸಜ್ಜನರಿಗೆ ತೊಂದರೆ ಕೊಟ್ಟು ರಾಷ್ಟ್ರದ ಅವನತಿಗೆ ಕಾರಣವಾಗುವ ರಾಕ್ಷಸರ ಸಮೂಲನಾಶಗೈದಿದ್ದ. ನಾಶ ಎನ್ನುವ ಪದ ಬಲು ಕಟು ಎನಿಸಿದರೂ ಏಳು ದಶಕಗಳಲ್ಲಿ ಭಾರತ ಅಭಿವೃದ್ಧಿಯಾಗಬಾರದೆಂದೇ ದುಡಿದ ಅನೇಕರ ಸಂತಾನಗಳು ಇಂದಿಗೂ ಕ್ರಿಯಾಶೀಲವಾಗಿವೆ. ಅವರುಗಳನ್ನು ಮಟ್ಟಹಾಕುವ ಹೊಣೆ ಇದ್ದೇ ಇದೆ. ಹೇಗೆ ರಾಮ ಸಾಮಂತರ ಗೌರವವನ್ನು ಗಳಿಸಿ ಅಶ್ವಮೇಧ ಮಾಡಿ ಎಲ್ಲರನ್ನೂ ಸಮರ್ಥವಾಗಿ ಒಂದೇ ಛತ್ರದಡಿ ಬಂಧಿಸಿದನೋ, ಹಾಗೆಯೇ ಉತ್ತರ-ದಕ್ಷಿಣಗಳ ಭೇದವನ್ನು ತೊಡೆದು ಏಕರಸವಾಗಿ ಭಾರತ ಬೆಸೆಯುವಂತೆ ಮಾಡುವಲ್ಲಿ ನಮಗಿನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ರಾಮನ ರಾಜ್ಯದಲ್ಲಿ ಆಲಸ್ಯ ಇಣುಕಿರಲಿಲ್ಲ. ತಾರುಣ್ಯ ಚೈತನ್ಯವನ್ನು ಕಳೆದುಕೊಂಡಿರಲಿಲ್ಲ. ಕ್ರಿಯಾಶೀಲತೆ ಉತ್ಸಾಹ ಇವೆಲ್ಲವೂ ತರುಣರ ಗುಣವಾಚಕಗಳಾಗಿದ್ದವು. ಕಳೆದ ಏಳು ದಶಕಗಳಲ್ಲಿ ಉಚಿತ ವಸ್ತುಗಳನ್ನು ಪಡೆಯುವ ರೂಢಿಗೆ ಬಿದ್ದ ಮೇಲೆ ತಾಮಸಿಕ ವೃತ್ತಿ ಹೆಚ್ಚುತ್ತಿದೆ. ತಾರುಣ್ಯಕ್ಕೆ ಹೊಸ ಕಸುಬು ತುಂಬಬೇಕಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಅಂಥದ್ದೊಂದು ಕ್ರಿಯಾಶೀಲ ಪೀಳಿಗೆಯನ್ನು ಸೃಷ್ಟಿಮಾಡುವ ಭರವಸೆ ಸಿಕ್ಕಿದೆಯಾದರೂ ಮಾಡಬೇಕಾದ ಕೆಲಸವಂತೂ ಜೋರಾಗಿಯೇ ಇದೆ. ಆದರೆ ಆ ದಿಕ್ಕಿನತ್ತ ಒಂದಲ್ಲ ಹತ್ತಾರು ಹೆಜ್ಜೆಗಳನ್ನು ಇಟ್ಟಾಗಿದೆ ಎಂಬುದಷ್ಟೇ ಈಗ ಸಮಾಧಾನದ ಸಂಗತಿ.

ಆರಂಭದಲ್ಲೇ ಹೇಳಿದೆನಲ್ಲ, ಯಾವ ರಾಮರಾಜ್ಯ ಸ್ವತಃ ಗಾಂಧೀಜಿಯವರ ಪಾಲಿಗೂ ಒಂದು ಭ್ರಾಮಕ ಕಲ್ಪನೆಯಾಗಿತ್ತೋ ಅದು ನಮ್ಮ ಕಾಲದಲ್ಲಿ ಸಾಧ್ಯವಾಗಬಹುದೆನ್ನುವ ಭರವಸೆಯನ್ನು ತಂದಿಟ್ಟಿದೆ. ರಾಮಮಂದಿರ ಆಗುವುದೇನೋ ನಿಜ. ಆದರೆ ನಿಜವಾಗಿಯೂ ಭಾರತೀಯರ ಮುಂದಿರುವ ಸವಾಲು ಪರಿಪೂರ್ಣ ರಾಮರಾಜ್ಯಕ್ಕೆ ಈ ನಾಡನ್ನು ಸಜ್ಜುಗೊಳಿಸುವುದು ಮಾತ್ರ. ಸಿದ್ಧರಾಗೋಣ..

Comments are closed.