ವಿಭಾಗಗಳು

ಸುದ್ದಿಪತ್ರ


 

ರಾಹುಲ್ ಇದಕ್ಕಿಂತಲೂ ನೀಚನಾಗುವುದು ಸಾಧ್ಯವೇ ಇರಲಿಲ್ಲ!!

ತನ್ನೊಳಗಿನ ಕೆಟ್ಟ ರಕ್ತವನ್ನು ಮತ್ತೆ ಮತ್ತೆ ಸಾಬೀತುಪಡಿಸಿಕೊಳ್ಳುತ್ತಿದೆ ಕಾಂಗ್ರೆಸ್ಸು. ಇತ್ತೀಚೆಗೆ ರಾಹುಲ್ ಮನೋಹರ್ ಪರಿಕ್ಕರ್ ಅನ್ನು ಭೇಟಿ ಮಾಡಲು ಹೋಗಿದ್ದ. ಪರಿಕ್ಕರ್ ಅವರು ಈ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ರಕ್ಷಣಾ ಸಚಿವ. ಗೋವೆಯನ್ನರ ಅತ್ಯಂತ ಪ್ರೀತಿಯ ಮುಖ್ಯಮಂತ್ರಿ. ಆದರೆ ದುದರ್ೈವದಿಂದಾಗಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದ ನಡುವೆಯೂ ಗೋವೆಯನ್ನರ ಸೇವೆ ಮಾಡುವ ತಮ್ಮ ಛಲವನ್ನು ಅವರು ಬಿಟ್ಟುಕೊಡುತ್ತಿಲ್ಲ. ಮೂಗಿಗೆ ಪೈಪು ಹಾಕಿಕೊಂಡೇ ಕಾಮಗಾರಿ ವೀಕ್ಷಣೆಗೆ ಹೋಗುತ್ತಾರೆ, ಸಕರ್ಾರಿ ಕಡತಗಳನ್ನು ಪರಿಶೀಲಿಸುತ್ತಾರೆ, ಕೊನೆಗೆ ಮೊನ್ನೆ ತಾನೆ ಗೋವಾದ ಬಜೆಟ್ ಅನ್ನು ಮಂಡಿಸಿ ಇಡಿಯ ದೇಶದ ಜನರ ಹುಬ್ಬೇರುವಂತೆ ಮಾಡಿದ್ದಾರೆ. ಬಹುಶಃ ಎದುರಿಗಿರುವ ಸಾವನ್ನು ಇದಕ್ಕಿಂತಲೂ ಸುಂದರವಾಗಿ ಸಂಭ್ರಮಿಸಲು ಸಾಧ್ಯವಾಗುವುದಿಲ್ಲವೇನೋ! ಸ್ವಲ್ಪ ವಿಷಯಾಂತರವೆನಿಸಿದರೂ ಈ ಸಂದರ್ಭದಲ್ಲಿ ಹೇಳಲೇಬೇಕು. ತಾವು ಸಾಯುವುದು ಖಾತ್ರಿಯಾಗಿದ್ದಾಗ ಅನಂತ್ಕುಮಾರರು ಇದೇ ರೀತಿ ಕೆಲಸ ಮಾಡಿದ್ದರಂತೆ. ತಮ್ಮೆದುರಿಗಿದ್ದ ಎಲ್ಲ ಕಡತಗಳನ್ನೂ ಅಧ್ಯಯನ ಮಾಡುತ್ತಾ, ಅದನ್ನು ಸೂಕ್ತ ವಿಲೇವಾರಿ ಮಾಡುತ್ತಾ ಆರೋಗ್ಯವಂತರಾಗಿದ್ದುದಕ್ಕಿಂತ ಹತ್ತುಪಟ್ಟು ಹೆಚ್ಚು ಕೆಲಸ ಮಾಡುತ್ತಿದ್ದರಂತೆ. ಸಾಯುವುದೇ ನಿಶ್ಚಿತವಾಗಿದ್ದ ಮೇಲೆ ಗಂಧದ ಕೊರಡಿನಂತೆ ತೇಯ್ದು ಹೋಗುವುದೇ ಒಳ್ಳೆಯದೆಂಬುದು ಇವರೆಲ್ಲರ ಅನಿಸಿಕೆ ಇರಬೇಕು. ಆದರೆ ಇಂತಹ ಗಂಧದ ಕೊರಡಿನ ಬಳಿ ನಿಂತಾಗಲೂ ತಾವು ಚರಂಡಿಗಿಂತ ಭಿನ್ನವಲ್ಲವೆಂದು ತೋರ್ಪಡಿಸಿಕೊಳ್ಳುವ ಜನರೂ ಇರುತ್ತಾರೆ. ರಾಹುಲ್ ಅಂಥದ್ದೇ ಜಾತಿಗೆ ಸೇರಿದವರೆನಿಸುತ್ತದೆ. ಇತ್ತೀಚೆಗೆ ಗೋವಾಕ್ಕೆ ಹೋದಾಗ ಪರಿಕ್ಕರರನ್ನು ಸೌಜನ್ಯದ ಭೇಟಿಯ ದೃಷ್ಟಿಯಿಂದ ಮಾತನಾಡಿಸಿಬಂದ ಆತ ಆನಂತರ ಸಾರ್ವಜನಿಕ ಭಾಷಣದಲ್ಲಿ ಮಾತನಾಡುತ್ತಾ ‘ಪರಿಕ್ಕರರು ಹೊಸ ರಫೇಲ್ ಒಪ್ಪಂದದ ಕುರಿತಂತೆ ತನಗೇನೂ ಗೊತ್ತೇ ಇಲ್ಲವೆಂದು ಹೇಳಿಕೊಂಡರು’ ಎಂದು ಅಲವತ್ತುಕೊಂಡಿದ್ದಾರೆ. ಇದು ಭರ್ಜರಿ ಚಚರ್ೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವಂತಹ ಪರಿಕ್ಕರರು ‘ಬಲು ಸೌಜನ್ಯದಿಂದ ನೀವು ಭೇಟಿ ಮಾಡಲು ಬಂದಿದ್ದಿರಿ ಎಂದುಕೊಂಡಿದ್ದೆ. 5 ನಿಮಿಷಕ್ಕಿಂತಲೂ ಹೆಚ್ಚು ನಾವಿಬ್ಬರೂ ಮಾತನಾಡಲೇ ಇಲ್ಲ. ರಫೇಲ್ನ ಕುರಿತಂತೆ ಚಚರ್ೆಯೂ ಆಗಲಿಲ್ಲ. ಸುಳ್ಳೇಕೆ ಹೇಳುತ್ತೀರಿ?!’ ಎಂದು ಸುದೀರ್ಘವಾದ ಪತ್ರವನ್ನು ಬರೆದು ರಾಹುಲನ ಮಾನ ಹರಾಜು ಹಾಕಿದ್ದಾರೆ. ಇಡಿಯ ದೇಶ ರಾಹುಲನ ಈ ಕೃತ್ಯಕ್ಕೆ ಅಸಹ್ಯಪಟ್ಟುಕೊಂಡಿದೆ. ಸಾಯುವ ಸ್ಥಿತಿಯಲ್ಲಿದ್ದ ಶತ್ರುಗಳನ್ನು ನೋಡಲು ಹೋದಾಗಲೂ ಜನ ಎರಡು ಹನಿ ಕಂಬನಿ ಸುರಿಸಿ ಬರುತ್ತಾರೆ. ತೀರಿಕೊಂಡವನು ಶತ್ರುವೇ ಆದರೂ ಹೆಗಲುಕೊಡುತ್ತಾರೆ. ಆದರೆ ರಾಹುಲ್ ಇವೆಲ್ಲಕ್ಕೂ ತಿಲಾಂಜಲಿ ಇಟ್ಟು ಸಾವಿನ ಮನೆಯಲ್ಲೂ ಚಿನ್ನ ಕದಿಯುವ ಧೂರ್ತ ದರೋಡೆಕೋರನ ಮಟ್ಟಕ್ಕಿಳಿದುಬಿಟ್ಟಿದ್ದಾರೆ. ಅಲ್ಲದೇ ಮತ್ತೇನು? ಜೀವನ್ಮರಣದ ಹೋರಾಟ ನಡೆಸುತ್ತಾ ತನ್ನ ಜನತೆಗೆ, ದೇಶಕ್ಕೆ ಒಳಿತು ಮಾಡಲು ಹಗಲು-ರಾತ್ರಿ ಶ್ರಮಿಸುತ್ತಿರುವ ನಾಯಕನೊಬ್ಬನನ್ನು ಸಾವಿಗೂ ಮುಂಚೆ ಖಳನಾಯಕನನ್ನಾಗಿಸುವ ಪ್ರಯತ್ನ ನೀಚರು ಮಾತ್ರ ಮಾಡಲು ಸಾಧ್ಯ. ದೇಶದ ಜನರನ್ನು ಬಿಡಿ, ರಾಹುಲ್ ಮಾಡಿದ್ದೆಲ್ಲವನ್ನೂ ಸಮಥರ್ಿಸಿಕೊಳ್ಳುವ ಪಿಡಿ ಗ್ಯಾಂಗಿನಲ್ಲಿ ಒಬ್ಬರಾದ ರಾಜ್ದೀಪ್ ಸರ್ದೇಸಾಯಿ ಕೂಡ ಈ ಕೆಲಸವನ್ನು ಸಮಥರ್ಿಸಿಕೊಳ್ಳಲಾಗದು ಎಂದು ಟ್ವೀಟ್ ಮಾಡಿದ್ದಾರೆ.

Manohar Parrikar assumes charge

ಇದಕ್ಕೆ ಕಾರಣವಿಲ್ಲ ಎಂದು ತಿಳಿದುಕೊಳ್ಳಬೇಡಿ. ಪರಿಕ್ಕರ್ ಮತ್ತು ರಾಹುಲ್ ತುಲನೆ ಮಾಡಲಾಗದ ವ್ಯಕ್ತಿತ್ವ. ಗೋವಾದ ಮಾಪ್ಸಾದಲ್ಲಿ ಹುಟ್ಟಿದ ಪರಿಕ್ಕರರು ಮಡಗಾಂವ್ನಲ್ಲಿ ಆರಂಭಿಕ ಅಧ್ಯಯನ ಮುಗಿಸಿ ಐಐಟಿ ಮುಂಬೈಯಿಂದ ಪದವಿಯನ್ನು ಪಡೆದವರು. ಇದೇ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ 26ನೇ ವಯಸ್ಸಿನಲ್ಲಿಯೇ ಸಂಘಚಾಲಕರಾಗಿ ರಾಮಜನ್ಮಭೂಮಿಯ ಚಳುವಳಿಯ ನೇತೃತ್ವ ವಹಿಸಿದವರು. ಸಂಘ ಅವರನ್ನು ಭಾರತೀಯ ಜನತಾಪಕ್ಷಕ್ಕೆ ಬಿಟ್ಟುಕೊಟ್ಟಾಗ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದರು. 94ರಲ್ಲಿ ಎಮ್ಎಲ್ಎಯಾಗಿ ಆಯ್ಕೆಯಾದ ಪರಿಕ್ಕರರು 2000ನೇ ಇಸವಿಯಲ್ಲಿ ಗೋವಾದ ಮುಖ್ಯಮಂತ್ರಿಯಾದರು. 2002ರಲ್ಲಿ ಸಕರ್ಾರ ಬಿದ್ದು ಮತ್ತೆ ಚುನಾವಣೆಯಾದಾಗ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ನಾಲ್ಕು ಜನರನ್ನು ತನ್ನತ್ತ ಸೆಳೆದು ಕಾಂಗ್ರೆಸ್ಸು ಮೋಸದಿಂದ ಸಕರ್ಾರ ಉರುಳಿಸಿ ಅಧಿಕಾರ ಕಿತ್ತುಕೊಂಡಾಗ ನಗುನಗುತ್ತಲೇ ಮರಳಿದವರು ಪರಿಕ್ಕರ್. ಆದರೆ 2012ರಲ್ಲಿ ಜಯಭೇರಿ ಬಾರಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾದ ಪರಿಕ್ಕರ್ ಗೋವಾದ ಜನರ ಪಾಲಿನ ಅಭಿವೃದ್ಧಿಯ ಆಶಾಕಿರಣವಾದರು. ಗೋವಾದ ಎರಡು ಲೋಕಸಭಾ ಸ್ಥಾನಗಳನ್ನು ಮೋದಿಗೆ ಗೆಲ್ಲಿಸಿಕೊಟ್ಟ ಪರಿಕ್ಕರರು ಮುಂದೆ ಮೋದಿಯವರ ಅಪೇಕ್ಷೆಯಂತೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ದೇಶದ ಮಹತ್ವದ ಹುದ್ದೆಯಾದ ರಕ್ಷಣಾಸಚಿವರ ಸ್ಥಾನಕ್ಕೇರಿದರು. ನೆನಪಿಡಿ. ಹಣಕಾಸು, ರಕ್ಷಣಾ, ಗೃಹ ಮತ್ತು ರೈಲ್ವೇ ಇಲಾಖೆಗಳು ಅತ್ಯಂತ ಪ್ರಮುಖವಾದವು ಮತ್ತು ದೇಶದ ರಾಜಕಾರಣದ ದಿಕ್ಕನ್ನು ಬದಲಿಸಿಬಲ್ಲಂಥವು. ಅಲ್ಲಿಯವರೆಗೂ ಅರುಣ್ ಜೇಟ್ಲಿಯವರು ನಿಭಾಯಿಸುತ್ತಿದ್ದ ಖಾತೆಯನ್ನು ಮೋದಿಯವರು ಸಮರ್ಥನ ಕೈಗೆ ನೀಡಬೇಕೆಂತಲೇ ಪರಿಕ್ಕರರನ್ನು ಕರೆತಂದದ್ದು. ಪರಿಕ್ಕರರು ತಮ್ಮ ಅವಧಿಯಲ್ಲಿ ಅನೇಕ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿದ್ದಲ್ಲದೇ ಕಡತಗಳಲ್ಲಿ ಅಡಗಿಕುಳಿತಿದ್ದ ಹಳೆಯ ಹಗರಣಗಳನ್ನು ಬಯಲಿಗೆಳೆದರು. ಕಾಂಗ್ರೆಸ್ ಸಕರ್ಾರ ಅಮೇರಿಕಾದಲ್ಲಿ ರಕ್ಷಣಾ ಖರೀದಿಗೆಂದು ಇಟ್ಟು ಮರೆತಿದ್ದ ಸಾವಿರಾರು ಕೋಟಿ ಹಣವನ್ನು ಮರಳಿ ಬೊಕ್ಕಸಕ್ಕೆ ತಂದರು. ಇವೆಲ್ಲದರ ನಡುವೆಯೂ ಅವರ ಸರಳತೆ ಜನರ ಮನಸೂರೆಗೊಳ್ಳುವಂತಿತ್ತು. ಅವರೆಂದಿಗೂ ರಕ್ಷಣಾ ಸಚಿವರಾಗಿ ಧಿಮಾಕನ್ನು ತೋರಲಿಲ್ಲ. ಸಹಜವಾಗಿಯೇ ತಮ್ಮ ಎಂದಿನ ಉಡುಪಿನಲ್ಲಿ ಎಲ್ಲೆಂದರಲ್ಲಿ ಹೊರಟುಬಿಡುವಂತಹ ಸಾಮಾನ್ಯವಾದ ವ್ಯಕ್ತಿಯಾಗಿದ್ದರು ಅವರು. ಗೋವಾದಲ್ಲೊಮ್ಮೆ ಅವರ ಕಾರಿನ ಮುಂದೆ ಅನವಶ್ಯಕವಾಗಿ ಕಾರನ್ನು ನಿಲ್ಲಿಸಿಕೊಂಡಿದ್ದ ಹುಡುಗನೊಬ್ಬನನ್ನು ಅವರು ಕಾರು ತೆಗೆಯುವಂತೆ ಕೇಳಿಕೊಂಡಿದ್ದರಂತೆ. ಆ ಹುಡುಗ ಸ್ವಲ್ಪ ಧಿಮಾಕಿನಿಂದ ಕಣ್ಣು ಕೆಂಪಗೆ ಮಾಡುತ್ತಾ ನಾನು ಪೊಲೀಸ್ ಕಮೀಷನರ್ರ ಮಗ ಎಂದನಂತೆ. ತಕ್ಷಣ ಪರಿಕ್ಕರರು ನಾನು ಗೋವಾದ ಮುಖ್ಯಮಂತ್ರಿ ಎಂದು ನಮಸ್ಕರಿಸಿದರಂತೆ. ಗಾಬರಿಯಾದ ಹುಡುಗ ತನ್ನ ತಪ್ಪನ್ನು ತಿದ್ದಿಕೊಂಡು ಗಾಡಿ ತೆಗೆದುಕೊಂಡು ಹೊರಟಿದ್ದನ್ನು ಅಲ್ಲಿನ ಪತ್ರಿಕೆಗಳು ಪ್ರಕಟಿಸಿದ್ದವು.

3

ಇಂತಹ ಮಹಾನಾಯಕರೊಂದಿಗೆ ರಾಹುಲ್ನನ್ನು ತಕ್ಕಡಿಯಲ್ಲಿಟ್ಟು ನೋಡಿ. ಆತನಿಗಿರುವ ಡಿಗ್ರಿಯ ಬಗ್ಗೆ ಖಾತ್ರಿಯಿಲ್ಲ. ಮುಖ್ಯಮಂತ್ರಿಯಾಗುವುದಿರಲಿ ತಾನು ಗೆದ್ದಿರುವ ಕ್ಷೇತ್ರಗಳಲ್ಲಿನ ಬಡತನ ನಿವಾರಿಸುವುದು ಸಾಧ್ಯವಾಗಲಿಲ್ಲ. ಯಾವುದಾದರೊಂದು ವಿಷಯದ ಕುರಿತಂತೆ ಅಸ್ಖಲಿತವಾಗಿ ತಪ್ಪಿಲ್ಲದೇ ಮಾತನಾಡುವ ಸಿದ್ಧಿ ಅವನಿಗಿಲ್ಲ. ಗಾಂಧಿ ಪರಿವಾರದ ಕುಡಿಯಾಗಿರದೇ ಹೋಗಿದ್ದರೆ ಕಾಂಗ್ರೆಸ್ಸಿನ ಅಧ್ಯಕ್ಷನಾಗುವ ಯಾವ ಅರ್ಹತೆಯೂ ಇಲ್ಲದ ಈತ ಪರಿಕ್ಕರರನ್ನು ಹುಷಾರಿಲ್ಲದಾಗ ಮಾತನಾಡಿಸಿ ಸೌಜನ್ಯದಿಂದ ಪ್ರತಿಕ್ರಿಯಿಸಿ ಬಂದಿದ್ದರೆ ಅಷ್ಟಾದರೂ ಘನತೆ ಉಳಿಸಿಕೊಂಡಿರುತ್ತಿದ್ದ. ಆದರೆ ಅವರೊಂದಿಗೆ ಮಾತನಾಡಿ ಬಂದ ನಂತರ ವೇದಿಕೆಯ ಮೇಲೆ ಸುಳ್ಳು ಸುದ್ದಿಗಳನ್ನು ಜನರೊಂದಿಗೆ ಹಂಚಿಕೊಂಡಿದ್ದನ್ನು ನೋಡಿದರೆ ಖಂಡಿತವಾಗಿಯೂ ಇದು ಭಾರತೀಯ ಸಂಸ್ಕೃತಿಗೆ ಪೂರಕವಾದುದೆಂದು ಎನಿಸುವುದಿಲ್ಲ. ನನಗೆ ಗೊತ್ತಿರುವಂತೆ ತೀರಾ ಇಟಲಿಯ ಸಂಸ್ಕೃತಿಯೂ ಇಷ್ಟು ಕೆಟ್ಟದ್ದಾಗಿರಲಾರದು.

ರಾಜಕಾರಣವನ್ನು ಕಾಂಗ್ರೆಸ್ಸು ಇಷ್ಟೊಂದು ನೀಚಮಟ್ಟಕ್ಕೆ ತರುವಂತಹ ಪರಿಸ್ಥಿತಿ ಬರಬಾರದಿತ್ತು. ಸಾಂವಿಧಾನಿಕ ಘನತೆ-ಗೌರವಗಳುಳ್ಳ ಸ್ಥಾನ ನರೇಂದ್ರಮೋದಿಯವರದ್ದು. ರಾಹುಲ್ ಅವರನ್ನು ಕಳ್ಳ ಎಂದು ಜರಿದ. ಮೋದಿಯವರು ಟೀ ಮಾರಲಿಕ್ಕಷ್ಟೇ ಲಾಯಕ್ಕು ಎಂದ ಮಣಿಶಂಕರ್ ಅಯ್ಯರ್. ಮಧ್ಯಪ್ರದೇಶದ ಚುನಾವಣೆಯ ಹೊತ್ತಲ್ಲಿ ಮೋದಿಯವರ ತಂದೆ-ತಾಯಿಯ ಯೋಗ್ಯತೆಯ ಕುರಿತಂತೆ ಮಾತನಾಡಲಾಯ್ತು. ಇಂಗ್ಲೀಷ್ ಭಾಷೆ ಗೊತ್ತಿರದಿದ್ದುದರಿಂದ ಮೋದಿ ಸಮರ್ಥ ನಾಯಕರೇ ಅಲ್ಲ ಎಂದರು ಕಾಂಗ್ರೆಸ್ಸಿನ ಶಶಿತರೂರ್. 2014ರ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಸಿನ ಮತ್ತೊಂದು ಕುಡಿ ಪ್ರಿಯಾಂಕ ಮೋದಿಯವರನ್ನು ನೀಚ ವ್ಯಕ್ತಿ ಎಂದೂ ಜರಿದುಬಿಟ್ಟಳು. ಅಂದರೆ ರಾಜಕಾರಣದಲ್ಲಿ ಟೀಕಿಸುವಾಗಲೂ ಘನತೆ-ಸಂಯಮಗಳು ಇರುತ್ತಿದ್ದುದನ್ನು ಮರೆತೇಬಿಟ್ಟರು. ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ಸು ಈ ಪರಿ ಪ್ರಪಾತಕ್ಕೆ ಬೀಳಬಹುದೆಂದು ಯಾರೂ ಊಹಿಸಿರಲಿಲ್ಲ. ಆರೋಪಗಳನ್ನು ಮಾಡಬೇಕು, ಅದನ್ನು ಸಾಬೀತುಪಡಿಸಲು ಬೇಕಾದ ಸ್ವಲ್ಪಮಟ್ಟಿಗಿನ ಪುರಾವೆಗಳಾದರೂ ಇರಬೇಕು. ಕಾಗರ್ಿಲ್ ಯುದ್ಧದ ಹೊತ್ತಿನಲ್ಲಿ ಶವಪೆಟ್ಟಿಗೆಗಳ ಹಗರಣ ನಡೆದಿದೆ ಎಂದು ಕಾಂಗ್ರೆಸ್ಸು ಗದ್ದಲ ಮಾಡಿತು. ಆದರೆ ಸೂಕ್ತ ಪುರಾವೆಗಳನ್ನು ಕೊಡಲಾಗದೇ ಹತ್ತು ವರ್ಷಗಳ ನಂತರ ಅದನ್ನೊಂದು ಕಪೋಲಕಲ್ಪಿತ ಆರೋಪವೆಂದು ಕೋಟರ್ು ತೆಗೆದೆಸೆಯಿತು. ರಫೇಲ್ನ ಕುರಿತಂತೆ ರಾಹಲ್ ಮಾಡುತ್ತಿರುವ ಒಂದೇ ಒಂದು ಆರೋಪಕ್ಕೂ ಪುರಾವೆ ಒದಗಿಸದೇ ಸೋತು ಹೋಗಿದ್ದಾನೆ. ಮೋದಿಯವರನ್ನು ಭ್ರಷ್ಟರೆಂದು ಸಾಬೀತುಪಡಿಸಲು ಆತ ತಿಪ್ಪರಲಾಗ ಹಾಕುತ್ತಿದ್ದಾನೆ. ಆದರೆ ಅದೇ ಧಾವಂತದಲ್ಲಿ ಮನೋಹರ್ ಪರಿಕ್ಕರ್ರಂತಹ ಮಹಾನ್ ನಾಯಕರ ಮುಂದೆ ತಲೆತಗ್ಗಿಸಿ ನಿಂತಿದ್ದಾನೆ.

4

ಸುಮ್ಮನೆ ಯೋಚಿಸಿ ನೋಡಿ. ತಾನು ಭೇಟಿ ಮಾಡಿದಾಗ ಮನೋಹರ್ ಪರಿಕ್ಕರರು ಹೀಗೆ ಹೇಳಿದ್ದರು ಎಂದು ಆತ ಪರಿಕ್ಕರರ ಸಾವಿನ ನಂತರ ಹೇಳಿದ್ದರೆ ಅದನ್ನು ಅಲ್ಲಗಳೆಯಲು ಅವರೂ ಇರುತ್ತಿಲಿಲ್ಲ. ಇದೇ ರಾಜ್ದೀಪ್ ಸರ್ದೇಸಾಯಿ ಅಂದು ರಾಹುಲ್ ಮಾತುಗಳಿಗೆ ರೆಕ್ಕೆ-ಪುಕ್ಕ ಕಟ್ಟಿ ಮೋದಿಯನ್ನು ಜರಿಯಲು ನಿಂತುಬಿಡುತ್ತಿದ್ದರು. ಆದರೆ ಪರಿಕ್ಕರ್ ಪೂರ್ಣಪ್ರಜ್ಞೆಯೊಂದಿಗೆ ರಾಹುಲ್ನ ಈ ನೀಚತನವನ್ನು ಜರಿದು ಬಿಸಾಡಿರುವುದರಿಂದ ಇಂದು ಮತ್ತೊಮ್ಮೆ ಮೋದಿ ಪ್ರಖರ ಸೂರ್ಯನಾಗಿಯೇ ಕಂಗೊಳಿಸುತ್ತಿದ್ದಾರೆ.

Comments are closed.