ವಿಭಾಗಗಳು

ಸುದ್ದಿಪತ್ರ


 

ಲಾಲ್ ಬಹದ್ದೂರ್ ಶಾಸ್ತ್ರಿ ಕೊಂದಿದ್ದು ಯಾರು?!

ರಾಯಭಾರಿಯಾಗಿದ್ದ ಟಿಎನ್ಕೌಲ್ ತಮ್ಮ ಕೃತಿಯಲ್ಲಿ ಶಾಸ್ತ್ರಿಜಿಯವರದ್ದು ಅಕಾಲ ಮೃತ್ಯುವೆಂದರೆ ವಿದೇಶಾಂಗ ಕಾರ್ಯದಶರ್ಿ ಸಿಎಸ್ ಝಾ ತಾಷ್ಕೆಂಟ್ ಒಪ್ಪಂದಕ್ಕೆ ಭಾರತೀಯರು ನೀಡಿದ ಕಠಿಣ ಪ್ರತಿಕ್ರಿಯೆಯಿಂದ ಭಾರವಾದ ಶಾಸ್ತ್ರಿಜಿ ಹೃದಯಾಘಾತಕ್ಕೆ ಒಳಗಾದರು ಎಂದಿದ್ದರು. ಎಲ್ಪಿ ಸಿಂಗ್ ಇದು ಸಹಜ ಸಾವು ಎಂಬ ತೀರ್ಪನ್ನು ತಾವೇ ಕೊಟ್ಟುಬಿಟ್ಟರು. ಮುಂದಿನ ಮೂರು ದಶಕಗಳ ಕಾಲ ಈ ವಿಚಾರ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತೇ ಹೊರತು ನಾಯಕರೆನಿಸಿಕೊಂಡವರು ಚಚರ್ೆಯ ಗೋಜಿಗೇ ಹೋಗಲಿಲ್ಲ.

ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ಒಳಸುಳಿಗಳು ಮತ್ತೆ ತೆರೆದುಕೊಳ್ಳುವಂತೆ ಕಾಣುತ್ತಿವೆ. 2009 ರಲ್ಲಿ ಅನುಜ್ ಧರ್ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಂದ್ರ ಸಕರ್ಾರಕ್ಕೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಶಾಸ್ತ್ರಿಯವರ ಸಾವಿನ ಹಿನ್ನೆಲೆಯನ್ನು ಕೆದುಕುವ ಈ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆಯಿಂದ ನುಣುಚಿಕೊಂಡ ಸಕರ್ಾರ ರಾಷ್ಟ್ರ-ರಾಷ್ಟ್ರಗಳ ನಡುವಿನ ಒಪ್ಪಂದಕ್ಕೆ ಇದು ಭಂಗ ತರುವುದೆಂಬ ಕಾರಣ ಕೊಟ್ಟುಬಿಟ್ಟಿತು. ಹಠ ಬಿಡದ ಅನುಜ್ ಸೆಂಟ್ರಲ್ ಇನ್ಫಾರ್ಮೇಶನ್ ಕಮಿಷನ್ ಎದುರಿಗೆ ತಮ್ಮ ವಾದ ಮಂಡಿಸಿ ‘ಯಾವ ರಾಷ್ಟ್ರದಲ್ಲಿ ಅಂದು ಶಾಸ್ತ್ರಿಜೀಯವರ ಕೊಲೆಯಾಗಿತ್ತೋ ಆ ಯುಎಸ್ಎಸ್ಆರ್ ಇಂದು ಉಳಿದೇ ಇಲ್ಲ. ಹೀಗಿರುವಾಗ ರಾಷ್ಟ್ರಗಳ ಸಂಬಂಧ ಹಾಳಾಗುವುದೆಂಬ ಅನಿಸಿಕೆಯೇ ತಪ್ಪು’ ಎಂದರು. ಅದರ ಲಾಭ ಎಷ್ಟಾಯಿತೊ ದೇವರೇ ಬಲ್ಲ. ಆದರೆ ಕಾಂಗ್ರೆಸ್ಸಿನದ್ದೇ ಅಂಗವಾಗಿರುವ ಶಾಸ್ತ್ರಿಯವರ ಹಿರಿಯ ಮಗ ತಮ್ಮದ್ದೇ ಸಕರ್ಾರವಿದ್ದಾಗಲೂ ಶಾಸ್ತ್ರಿಯವರ ಹತ್ಯೆಯ ಕುರಿತಂತ ಕಡತಗಳನ್ನು ಡಿಕ್ಲಾಸಿಫೈ ಮಾಡಿ ಎಂದು ಆಗ್ರಹಿಸಬೇಕಾದ ಸ್ಥಿತಿ ಬಂತು. ಅದೇ ವೇಳೆಗೆ ಅನುಜ್ ಖ್ಯಾತ ಪತ್ರಕರ್ತ ಕುಲ್ದೀಪ್ ನಯರ್ ಅವರನ್ನು ಮಾತನಾಡಿಸಿ ಅಂದಿನ ರಷ್ಯಾದ ಅಂಬಾಸಿಡರ್ ಟಿ.ಎನ್.ಕೌಲ್ ತಮಗೆ ನಾಲ್ಕಾರು ಬಾರಿ ಕರೆ ಮಾಡಿ ಶಾಸ್ತ್ರಿಯವರ ಸಾವು ಸಹಜವಾಗಿತ್ತು ಎಂಬ ಹೇಳಿಕೆ ಕೊಡುವಂತೆ ತಾಕೀತು ಮಾಡಿದ್ದರೆಂಬುದನ್ನು ಒಪ್ಪಿಸಿದ್ದರು. ಇತ್ತೀಚೆಗೆ ಅನುಜ್ ಬರೆದಿರುವ ‘ಯುವರ್ ಪ್ರೈಮ್ಮಿನಿಸ್ಟರ್ ಈಸ್ ಡೆಡ್’ ಕೃತಿ ಅನೇಕ ಸತ್ಯಗಳನ್ನು ಬಯಲಿಗೆಳೆಯುತ್ತದೆ.

v2

1965 ರ ಪಾಕಿಸ್ತಾನದ ಯುದ್ಧದ ವೇಳೆಗೆ ಭಾರತ ಸೈನಿಕ ಬಲದಲ್ಲಿ ಕ್ಷೀಣವಾಗಿದೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ಸಮರ್ಥ ನಾಯಕನಿಲ್ಲ ಎಂದೇ ಜಗತ್ತು ಭಾವಿಸಿತ್ತು. ಆದರೆ ನೆಹರೂರವರಿಗಿಂತ ಸಮರ್ಥ ನಾಯಕನಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ತಮ್ಮನ್ನು ತಾವು ಸಮಾಜದ ಮುಂದೆ ಸಾಬೀತುಪಡಿಸಿಕೊಂಡಿದ್ದರೆಂಬುದನ್ನು ಜಗತ್ತು ಅರಿಯುವಲ್ಲಿ ಸೋತಿತ್ತು. ಅತ್ಯಂತ ಆಯಕಟ್ಟಿನ ಸ್ಥಳದಲ್ಲಿದ್ದ ಶಾಸ್ತ್ರಿಯವರ ಆಪ್ತ ಅಧಿಕಾರಿ ಧರ್ಮವೀರ್ ‘1962 ರ ಚೀನಾ ಎದುರಿನ ಸೋಲಿನ ನಂತರ ಅಧಿಕಾರಕ್ಕೆ ಬಂದ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತೀಯ ಸೈನ್ಯವನ್ನು ಬಲಾಢ್ಯಗೊಳಿಸುವ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಲ್ಲದೇ ಅಗತ್ಯಬಿದ್ದರೆ ಸೈನ್ಯಕ್ಕೆ ಮುಕ್ತ ಹಸ್ತ ನೀಡುವುದಾಗಿಯೂ ಹೇಳಿ ಶಕ್ತಿ ತುಂಬಿದ್ದರು’ ಎಂಬುದನ್ನು ಸ್ಮೃತಿ ಚಿತ್ರದಲ್ಲಿ ದಾಖಲಿಸುತ್ತಾರೆ. ಹೀಗಾಗಿ 1965 ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲು ಅನಿರೀಕ್ಷಿತವಾಗಿತ್ತು. ಸಿಯಾಲ್ಕೋಟ್ನಿಂದ ನುಗ್ಗಿ ಜಮ್ಮು-ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ಪಾಕಿಸ್ತಾನದ ಕನಸಿಗೆ ಶಾಸ್ತ್ರಿಜಿ ತಣ್ಣೀರೆರೆಚಿದ್ದು ಹೇಗೆ ಗೊತ್ತೇ? ಲಾಹೋರಿನ ಗಡಿಯೊಳಕ್ಕೆ ನುಗ್ಗಿ ಪಾಕಿಸ್ತಾನವನ್ನೇ ತುಂಡರಿಸಿಬಿಡುವ ಭೀತಿಯನ್ನು ಹೆಚ್ಚಿಸುವ ಮೂಲಕ. ಅಂತರರಾಷ್ಟ್ರೀಯ ಗಡಿಯನ್ನು ದಾಟುವ ಆದೇಶವನ್ನು ಕೊಟ್ಟ ಶಾಸ್ತ್ರೀಜಿ ಸೈನಿಕರ ಆತ್ಮಸ್ಥೈರ್ಯಕ್ಕೆ ಬಲವಾದ ಶಕ್ತಿ ತುಂಬಿದ್ದರು. ಜಗತ್ತಿಗೆ ಉತ್ತರ ಕೊಡುವ ಹೊಣೆಗಾರಿಕೆ ತನ್ನದ್ದೆಂದು ಹೇಳಿ ಸೇನಾ ನಾಯಕರಿಗೆ ಮುಕ್ತ ವಾತಾವರಣ ನಿಮರ್ಿಸಿ ಕೊಟ್ಟಿದ್ದರು. ಸೋತು ಸುಣ್ಣವಾದ ಪಾಕಸಿಸ್ತಾನ ವಿಶ್ವಸಂಸ್ಥೆಯ ಎದುರು ಬಕೆಟ್ಟುಗಟ್ಟಲೆ ಕಣ್ಣೀರು ಸುರಿಸಿತ್ತು. ಅನಿವಾರ್ಯವಾದ ಯುದ್ಧವಿರಾಮ ಭಾರತದ ಮೇಲೆ ಹೇರಲ್ಪಟ್ಟಿತು. ಅದೇ ವೇಳೆಗೆ ಮಧ್ಯಸ್ಥಿಕೆ ವಹಿಸಲು ಬಂದ ರಷ್ಯಾ ಎರಡೂ ದೇಶದ ಪ್ರಮುಖರನ್ನು ತಾಷ್ಕೆಂಟಿಗೆ ಆಹ್ವಾನಿಸಿತು. ಆರು ದಿನಗಳ ಕಾಲ ಸಂಧಾನದ ಸೂತ್ರಕ್ಕೆ ಒಪ್ಪದ ಶಾಸ್ತ್ರೀಜಿ ಇದ್ದಕ್ಕಿದ್ದಂತೆ ಏಳನೆಯ ದಿನ ಭಾರತದ ಸೈನಿಕರು ಗೆದ್ದಿದ್ದ ಹಾಜಿಪೀರ್ ಪಾಸನ್ನು ಬಿಟ್ಟುಕೊಡಲು ಒಪ್ಪಿದ್ದಷ್ಟೇ ಅಲ್ಲದೇ ಲಾಹೋರ್ನವರೆಗೂ ನುಗ್ಗಿದ್ದ ಭಾರತೀಯ ಸೈನಿಕರು ಮರಳಿ ಬರುವಂತೆ ಮಾಡಿಕೊಂಡ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರು. ಅದೇ ರಾತ್ರಿ ದೇಶದಲ್ಲಿ ಇದಕ್ಕೆ ಸಿಕ್ಕ ಮಿಶ್ರ ಪ್ರತಿಕ್ರಿಯೆಯನ್ನು ತಿಳಿದು ಮಲಗುವ ಮುನ್ನ ತಮ್ಮ ಸಹಾಯಕ ರಾಮನಾಥನಿಂದ ಒಂದು ಲೋಟ ಹಾಲನ್ನು ಸ್ವೀಕರಿಸಿ, ಫ್ಲಾಸ್ಕಿನಲ್ಲಿಟ್ಟಿದ್ದ ಬಿಸಿ ನೀರನ್ನು ಕುಡಿದರು. ಮಧ್ಯರಾತ್ರಿ ಸುಮಾರು ಒಂದುವರೆಯಷ್ಟರ ಹೊತ್ತಿಗೆ ಎದೆ ಹಿಡಿದು ವೈದ್ಯರ ಬಳಿ ಬಂದ ಶಾಸ್ತ್ರೀಜಿ ವೈದ್ಯರು ಕೊಟ್ಟ ಇಂಜೆಕ್ಷನ್ನಿನಿಂದ ಚೇತರಿಸಿಕೊಳ್ಳದೇ ಅಪಾರ ಪ್ರಯತ್ನದ ನಂತರವೂ ಚಿಕಿತ್ಸೆಗೆ ಪ್ರತಿಕ್ರಿಯಿಸದೇ ತೀರಿಕೊಂಡರು. ಹಾಗಂತ ಸಂಸತ್ತಿನಲ್ಲಿ ಅಂದಿನ ಕಾಂಗ್ರೆಸ್ ನಾಯಕರು ಹೇಳಿಕೆ ಕೊಟ್ಟರು. ಹೃದಯಾಘಾತದಿಂದ ತೀರಿಕೊಂಡ ಶಾಸ್ತ್ರೀಜಿಯವರ ದೇಹವನ್ನು ಮಧ್ಯಾಹ್ನದ ವೇಳೆಗಾಗಲೇ ಭಾರತಕ್ಕೆ ತರಲಾಗಿತ್ತು. ಈ ಸಾವನ್ನು ಕುರಿತ ಮೊದಲ ಅನುಮಾನ ವ್ಯಕ್ತಪಡಿಸಿದು ಅಟಲ್ ಬಿಹಾರಿ ವಾಜಪೇಯಿ. ಪ್ರಧಾನಮಂತ್ರಿಯವರ ಕೋಣೆಯಲ್ಲಿ ವೈದ್ಯರನ್ನು ತುತರ್ಾಗಿ ಕರೆಸಿಕೊಳ್ಳುವ ಬಜರ್ ಇರಲಿಲ್ಲವೇಕೆ? ಎಂಬುದು ಅವರ ಮೊದಲ ಪ್ರಶ್ನೆಯಾಗಿತ್ತು. ಶಾಸ್ತ್ರೀಜಿ ಹೃದ್ರೋಗದಿಂದ ಬಳಲುತ್ತಿದ್ದರು ಎಂದು ಗೊತ್ತಿದ್ದಾಗಲೂ ಅವರಿದ್ದ ಕೋಣೆಯಲ್ಲಿ ಆಕ್ಸಿಜನ್ನ ವ್ಯವಸ್ಥೆ ಇರಲಿಲ್ಲ ಏಕೆ? ಎಂಬ ಎರಡೂ ಅತ್ಯಂತ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದ ಅಟಲ್ಜಿ ಹಾಲು ಕೊಟ್ಟವರು ಯಾರು? ಎಂಬ ಪ್ರಶ್ನೆ ಕೇಳುವ ಮೂಲಕ ಸಕರ್ಾರ ಬಚ್ಚಿಡಲು ಹೊರಟಿದ್ದ ಒಂದು ಸಂಗತಿಯೆಡೆಗೆ ದೇಶದ ಗಮನ ಸೆಳೆದರು. ಶಾಸ್ತ್ರಿಜಿಯವರಿಗೆ ಅಡುಗೆ ಮಾಡಲೆಂದೇ ರಾಯಭಾರಿ ಟಿಎನ್ ಕೌಲರ ಅಡುಗೆ ಭಟ್ಟ ಮೊಹಮ್ಮದ್ ಜಾನ್ನನ್ನು ನೇಮಿಸಲಾಗಿತ್ತು. ಇಡಿಯ ಸಾವಿನ ಪ್ರಕರಣ ಈಗೊಂದು ಹೊಸ ದಿಕ್ಕಿನತ್ತ ತನ್ನನ್ನು ತೆರೆದುಕೊಂಡಿತ್ತು. ಪಾಕಿಸ್ತಾನವನ್ನು ಭಾರತ ಸೋಲಿಸಿದ ಸೇಡನ್ನು ಮೊಹಮ್ಮದ್ ಜಾನ್ ತೀರಿಸಿಕೊಂಡುಬಿಟ್ಟಿದ್ದ ಎಂದು ಅನೇಕರು ಮಾತನಾಡಲಾರಂಭಿಸಿಬಿಟ್ಟಿದ್ದರು.

v3

ಇತ್ತ ರಷ್ಯಾ ಬೆಂಬಲಿತ ಮುಂಬೈ ಮೂಲದ ಬ್ಲಿಟ್ಜ್ ಪತ್ರಿಕೆ ತಾಷ್ಕೆಂಟ್ಗೆ ಹೋಗುವ ಮುನ್ನ ಶಾಸ್ತ್ರಿಜಿ ಬರೆದ ಪತ್ರವೊಂದನ್ನು ಪ್ರಕಟಿಸಿ ಈ ಒಪ್ಪಂದದ ಕುರಿತಂತೆ ಶಾಸ್ತ್ರಿಜಿಯವರಿಗಿದ್ದ ಆಸ್ಥೆಯತ್ತ ಜನರ ಗಮನ ಸೆಳೆಯಲು ಪ್ರಯತ್ನಿಸಿತ್ತು. ಅದೇ ವೇಳೆಗೆ ಸಂಸದ ಪೀಲು ಮೋದಿ ನಡೆಸುತ್ತಿದ್ದ ಪತ್ರಿಕೆಯೊಂದು ಶಾಸ್ತ್ರಿಜಿಯವರು ಈ ಪತ್ರ ಬರೆದಿದ್ದೇ ಸುಳ್ಳು ಎಂಬುದನ್ನು ದಾಖಲೆ ಸಮೇತ ಜನರ ಮುಂದಿಟ್ಟಿತ್ತು. ಈ ಸತ್ಯಾಸತ್ಯತೆಯನ್ನು ಹುಡುಕುವುದು ಬಹಳ ಕಠಿಣವೇನಾಗಿರಲಿಲ್ಲ. ಪ್ರಧಾನಮಂತ್ರಿಯೊಬ್ಬರು ಪತ್ರಿಕೆಯೊಂದಕ್ಕೆ ಪತ್ರ ಬರೆದರೆ ಅದು ಅಧಿಕೃತ ಪತ್ರವೇ ಆಗಿರುತ್ತದೆ. ಹೀಗಾಗಿ ಅದರ ಮತ್ತೊಂದು ಪ್ರತಿಯೋ ಕ್ರಮಸಂಖ್ಯೆಯೋ ಪಧಾನಮಂತ್ರಿ ಕಛೇರಿಯಲ್ಲಿ ಇರಬೇಕಾದ್ದು ಅನಿವಾರ್ಯ. ಈ ಕುರಿತಂತೆ ಗಲಾಟೆಗಳೆದ್ದು ಸಂಸದ ಅಬಿದ್ ಅಲಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದರೆ ಪ್ರಧಾನಮಂತ್ರಿ ಇಂದಿರಾ ಆಗುವುದಿಲ್ಲವೆಂದು ನಿರಾಕರಿಸಿದರಲ್ಲದೇ ಈ ಕುರಿತಂತ ಚಚರ್ೆಗೂ ಅವಕಾಶ ಕೊಡಲಿಲ್ಲ. ಅಲ್ಲಿಗೆ ಸಕರ್ಾರ ಇಡಿಯ ಪ್ರಕರಣವನ್ನು ಮುಚ್ಚಿಕಹಾಕಲು ಪ್ರಯತ್ನಿಸುತ್ತಿರುವುದು ಕಣ್ಣಿಗೆ ರಾಚುತ್ತಿತ್ತು. ಕಾಂಗ್ರೆಸ್ಸಿಗೆ ಇದು ಹೊಸತೇನಲ್ಲ. ಪ್ರಕರಣಗಳನ್ನು ಮುಚ್ಚಿ ಹಾಕುವುದರಲ್ಲಿ ಮತ್ತು ಜನಮಾನಸದಿಂದ ದೂರಾಗುವಂತೆ ಮಾಡುವುದರಲ್ಲಿ ಅದು ನಿಸ್ಸೀಮ. ಮುಂದಿನ ಮೂರು ವರ್ಷಗಳ ಕಾಲ ಶಾಸ್ತ್ರೀಜಿಯವರನ್ನು ಜನ ಮರೆತೇ ಬಿಟ್ಟರು. 1970 ರಲ್ಲಿ ಆರ್ಗನೈಸರ್ ಮತ್ತು ಇಂಡಿಯನ್ ಮಾನಿಟರ್ ಪತ್ರಿಕೆಗಳು ಈ ಪ್ರಕರಣದ ಕುರಿತಂತೆ ವಿಸ್ತಾರವಾಗಿ ಬರೆದು ಮತ್ತೊಮ್ಮೆ ಎಲ್ಲವನ್ನೂ ನೆನಪಿಗೆ ತರಿಸಿಬಿಟ್ಟರು. ಈಗ ರಾಜ್ಯಸಭಾದಲ್ಲಿ ಇಂದಿರಾಳ ಬದ್ಧವೈರಿ ರಾಜನಾರಾಯಣ್, ಟಿಎನ್ ಸಿಂಗ್ ಮತ್ತು ಪಟೇಲರ ಪುತ್ರ ದಾಹ್ಯಾ ಭಾಯ್ ಈ ಪ್ರಕರಣದ ಚಚರ್ೆಯನ್ನು ಆರಂಭಿಸಿದರು. ಪ್ರಧಾನಮಂತ್ರಿಯೊಬ್ಬರ ಸಾವಿನ ಕುರಿತ ಷಡ್ಯಂತ್ರದ ಚಚರ್ೆಗೆ ಸಕರ್ಾರ ಕೊಟ್ಟಿದ್ದು ಅರ್ಧ ಗಂಟೆ ಮಾತ್ರ. ಈ ಅರ್ಧಗಂಟೆಯೊಳಗೆ ಹೊರ ಬಂದ ಸ್ಫೋಟಕ ಮಾಹಿತಿಗಳು ದೇಶವನ್ನೇ ಬೆಚ್ಚಿ ಬೀಳಿಸಿದ್ದವು. ಸಕರ್ಾರ ಶಾಸ್ತ್ರಿಜಿಯವರ ಸಾವಿನ ಹೊತ್ತಿನಲ್ಲಿ ಅವರ ಕೋಣೆಯಲ್ಲಿ ಮೂರು ದೂರುವಾಣಿಗಳಿದ್ದು ಅದರಲ್ಲಿ ಒಂದು ಸಹಾಯಕರನ್ನು, ವೈದ್ಯರನ್ನು ತುತರ್ಾಗಿ ಕರೆಯಬಲ್ಲ ಆದೇಶವುಳ್ಳ ಫೋನಾಗಿತ್ತು ಎಂದಿತ್ತು. ಆದರೆ ಅವರ ಕೋಣೆಯಲ್ಲಿ ಆ ರೀತಿಯ ವ್ಯವಸ್ಥೆಯೇ ಇರಲಿಲ್ಲವೆಂದು ಪ್ರತಿಪಕ್ಷಗಳು ಬೆಳಕಿಗೆ ತಂದವು. ಶಾಸ್ತ್ರಿಜಿಯವರ ಸಾವಿನ ವೇಳೆಯಲ್ಲಿ ಅಲ್ಲಿದ್ದ ರಷ್ಯಾದ ವೈದ್ಯೆ ಸಾವಿನ ವರದಿಗೆ ಸಹಿಯೇ ಮಾಡರಿರಲಿಲ್ಲವೆಂಬ ಮತ್ತೊಂದು ಮಾಹಿತಿ ಬಹಿರಂಗಗೊಳಿಸಲಾಯಿತು. ಭಾರತೀಯರೆಲ್ಲರೂ ಉಳಿದುಕೊಂಡ ಹೊಟೆಲ್ಲಿನಲ್ಲಿ ಶಾಸ್ತ್ರಿಜೀಯವರನ್ನಿಡದೇ ಪ್ರತ್ಯೇಕ ವಿಲ್ಲಾದ ವ್ಯವಸ್ಥೆಯನ್ನು ಅವರಿಗೆ ಮಾಡಲಾಗಿತ್ತು. ಈ ಕುರತಂತೆ ಪ್ರತಿಪಕ್ಷಗಳು ಸ್ಪಷ್ಟೀಕರಣ ಬಯಸಿದವಲ್ಲದೇ ಶಾಸ್ತ್ರಿಜೀಯವರ ದೇಹ ಭಾರತಕ್ಕೆ ಬರುವ ವೇಳೆಗೆ ನೀಲಿಬಣ್ಣಕ್ಕೆ ತಿರುಗಿದ್ದೇಕೆ? ಮತ್ತು ರಷ್ಯಾ ಪೋಸ್ಟ್ಮಾರ್ಟಮ್ ಮಾಡುತ್ತೇನೆಂದರೂ ಭಾರತ ಒಪ್ಪದಿರಲು ಕಾರಣವೇನು? ಎಂಬ ಪ್ರಶ್ನೆಗಳೂ ಎದ್ದವು. ತಡಬಡಾಯಿಸಿದ ಸಕರ್ಾರ ಸಮರ್ಥವಾಗಿರುವಂಥ ಉತ್ತರಗಳನ್ನು ಕೊಡದೇ ಅಲ್ಲಿಯೇ ತೇಪೆ ಹಚ್ಚಿ ಶಾಂತವಾಯ್ತು. ಆದರೆ ಎಲ್ಲ ಮುಗಿಯಿತು ಎನ್ನುವಾಗಲೇ ಹಿಂದಿ ವಾರಪತ್ರಿಕೆ ಧರ್ಮಯುಗ್ನಲ್ಲಿ ಶಾಸ್ತ್ರಿಜಿಯವರ ಧರ್ಮ ಪತ್ನಿ ಲಲಿತಾ ಶಾಸ್ತ್ರಿಯವರ ಸಂದರ್ಶನ ಪ್ರಕಟವಾಯ್ತು. ಆ ಸಂದರ್ಶನದ ಮೂಲಕ ಇನ್ನೊಂದಷ್ಟು ಸತ್ಯಗಳು ಬೆಳಕಿಗೆ ಬಂದವು. ಹಾಲು ಕುಡಿದ ನಂತರ ಮನೆಗೆ ಕರೆ ಮಾಡಿದ ಶಾಸ್ತ್ರಿಜಿ ಲವಲವಿಕೆಯಿಂದಲೇ ಇದ್ದರು. ಆದರೆ ಫ್ಲಾಸ್ಕಿನಿಂದ ಬಿಸಿನೀರನ್ನು ಕುಡಿದ ನಂತರ ಅವರ ತಲೆ ಭಾರವಾದಂತಾಗಿ ಮಲಗಿಕೊಳ್ಳಬೇಕೆನಿಸಿತ್ತು. ಹೀಗಾಗಿ ನೀರಿನಲ್ಲಿ ಏನೋ ಸಮಸ್ಯೆಯಿತ್ತೆಂಬುದು ಲಲಿತಾಜೀಯವರ ಹೊಸ ಆರೋಪವಾಗಿತ್ತು. ಆ ಆರೋಪಕ್ಕೆ ಪೂರಕವಾಗಿ ಅವರು ಶಾಸ್ತ್ರಿಜೀಯವರ ನೀರು ಕುಡಿಯುವ ಫ್ಲಾಸ್ಕ್ ಮತ್ತು ಡೈರಿ ಮತ್ತೆ ಮರಳಿ ಬರಲೇ ಇಲ್ಲವೆಂಬ ಅಚ್ಚರಿಯ ಮಾಹಿತಿ ಹೊರಹಾಕಿದರು. ಅಷ್ಟೇ ಅಲ್ಲ. ಅವರ ದೇಹ ಮರಳಿ ಬಂದಾಗ ಒಂದಷ್ಟು ಅಧಿಕಾರಿಗಳು ಸುತ್ತಲೂ ನಿಂತು ಅವರ ದೇಹದ ಬಳಿಗೆ ಮನೆಯವರನ್ನೂ ಬಿಡಲಿಲ್ಲ. ಕೊನೆಗೆ ದೇಹದ ಮೇಲೆ ನೀಲಿ ಬಣ್ಣದ ಗುರುತುಗಳಿವೆ ಎಂದು ಆರೋಪಿಸಿದಾಗ ತೇಯ್ದ ಗಂಧವನ್ನು ತಂದು ಅವರ ದೇಹಕ್ಕೆ ಮೆತ್ತುವ ಪ್ರಯತ್ನ ಮಾಡಲಾಗಿತ್ತು ಎಂದರು ಲಲಿತಾಜಿ. ಶಾಸ್ತ್ರಿಜೀಯವರ ಕುತ್ತಿಗೆಯ ಹಿಂಭಾಗದಲ್ಲಿ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಕತ್ತರಿಸಿದ ಗುರುತುಗಳಿದ್ದದ್ದನ್ನು ಬಹಿರಂಗಪಡಿಸಿದ್ದರು ಅವರು. ಒಟ್ಟಾರೆ ಇವೆಲ್ಲವೂ ದೇಶವನ್ನೇ ಕಂಪಿಸಬಲ್ಲ ಸತ್ಯಗಳಾಗಿದ್ದವು.

ದಾಹ್ಯಾಭಾಯ್ ಪಟೇಲ್ ಈ ಹೊತ್ತಲ್ಲೇ ‘ಶಾಸ್ತ್ರಿ ಕೊಲೆಯಾದರಾ?’ ಎಂಬ ಸಣ್ಣ ಹೊತ್ತಿಗೆಯೊಂದನ್ನು ಪ್ರಕಟಿಸಿ ಅದುವರೆಗೂ ಹೊರಬರದಿದ್ದ ಒಂದೆರಡು ಸಂಗತಿಗಳನ್ನು ಹಂಚಿಕೊಂಡಿತು. ರಷ್ಯಾದ ರೆಡಿಯೊ ಅಲ್ಲಿನ ವೈದ್ಯೆ ಶಾಸ್ತ್ರಿಜಿಯವರ ಚಿಕಿತ್ಸೆಗೆ ಹೋಗುವ ಮುನ್ನವೇ ಅವರ ಅಂತ್ಯವಾಗಿತ್ತು ಎಂಬುದನ್ನು ಹೇಳಿದರೆ ಭಾರತ ಸಕರ್ಾರ ಆಕೆ ಮತ್ತು ಅನೇಕ ವೈದ್ಯರು ಅಲ್ಲಿಗೆ ಬಂದು ಪ್ರಯಾಸ ಪಟ್ಟ ನಂತರವೂ ಶಾಸ್ತ್ರಿಜಿಯನ್ನು ಉಳಿಸಿಕೊಳ್ಳಲಾಗಲಲಿಲ್ಲ ಎಂದಿತ್ತು. ಶಾಸ್ತ್ರಿಜಿಯವರ ದೇಹ ಅಗತ್ಯಕ್ಕಿಂತ ಹೆಚ್ಚು ಊದಿಕೊಂಡಿದ್ದು ಅನೇಕರು ಹುಬ್ಬೇರಿಸಲು ಕಾರಣವಾಗಿತ್ತು. ಮೃತ ವರದಿಯಲ್ಲಿ ರಷ್ಯಾದ ಭಾಷೆಯ ವರದಿಗೂ ಇಂಗ್ಲೀಷ್ ಅನುವಾದಿತ ವರದಿಗೂ ಭಿನ್ನತೆಯಿದ್ದುದಷ್ಟೇ ಅಲ್ಲ ಎರಡಕ್ಕೂ ಸಹಿ ಮಾಡಿದ ವೈದ್ಯರು ಬೇರೆಯವರೇ ಇದ್ದರು. ಶಾಸ್ತ್ರಿಜಿಯವರ ರಕ್ಷಣಾ ಅಧಿಕಾರಿ ಜಿಸಿ ದತ್ತ ಶಾಸ್ತ್ರಿಜಿಯನ್ನು ಉಳಿಸುವ ವ್ಯವಸ್ಥೆ ಸೂಕ್ತವಾದುದಲ್ಲವೆಂದೂ ಕೆಲವು ಗುರುತೇ ಇಲ್ಲದ ವ್ಯಕ್ತಿಗಳು ಅಲ್ಲಿ ಅಡ್ಡಾಡುತ್ತಿದ್ದಾರೆಂದೂ ಕಳಿಸಿದ ತುತರ್ು ಸಂದೇಶವನ್ನು ಇಲ್ಲಿ ಅವಗಣನೆ ಮಾಡಲಾಗಿತ್ತು. ಇವೆಲ್ಲದರ ಚಚರ್ೆಗೆಂದೂ ಸಕರ್ಾರ ಅವಕಾಶವೇ ಕೊಡದೇ ಅಧಿವೇಶನವನ್ನೇ ಮುಗಿಸಿಬಿಟ್ಟಿತು.

ಈ ಹೊತ್ತಿನಲ್ಲೇ ರಾಯಭಾರಿಯಾಗಿದ್ದ ಟಿಎನ್ಕೌಲ್ ತಮ್ಮ ಕೃತಿಯಲ್ಲಿ ಶಾಸ್ತ್ರಿಜಿಯವರದ್ದು ಅಕಾಲ ಮೃತ್ಯುವೆಂದರೆ ವಿದೇಶಾಂಗ ಕಾರ್ಯದಶರ್ಿ ಸಿಎಸ್ ಝಾ ತಾಷ್ಕೆಂಟ್ ಒಪ್ಪಂದಕ್ಕೆ ಭಾರತೀಯರು ನೀಡಿದ ಕಠಿಣ ಪ್ರತಿಕ್ರಿಯೆಯಿಂದ ಭಾರವಾದ ಶಾಸ್ತ್ರಿಜಿ ಹೃದಯಾಘಾತಕ್ಕೆ ಒಳಗಾದರು ಎಂದಿದ್ದರು. ಎಲ್ಪಿ ಸಿಂಗ್ ಇದು ಸಹಜ ಸಾವು ಎಂಬ ತೀರ್ಪನ್ನು ತಾವೇ ಕೊಟ್ಟುಬಿಟ್ಟರು. ಮುಂದಿನ ಮೂರು ದಶಕಗಳ ಕಾಲ ಈ ವಿಚಾರ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತೇ ಹೊರತು ನಾಯಕರೆನಿಸಿಕೊಂಡವರು ಚಚರ್ೆಯ ಗೋಜಿಗೇ ಹೋಗಲಿಲ್ಲ. 1998 ರಲ್ಲಿ ದ ಟೆಲಿಗ್ರಾಫ್ ಪತ್ರಿಕೆ ಒಂದು ವರದಿಯನ್ನು ಹೊರಹಾಕಿತು. ಶಾಸ್ತ್ರಿಜಿಯವರು ತೀರಿಕೊಂಡಿದ್ದಾಗ ರಷ್ಯಾದ ಪತ್ರಿಕೆಯೊಂದು ಮೊಹಮ್ಮದ್ ಜಾನ್ ಮತ್ತು ಅಡುಗೆ ಭಟ್ಟನಾಗಿದ್ದ ಅಹಮದ್ ಸತ್ತಾರೊವ್ವನ್ನು ರಷ್ಯಾದ ಗೂಢಚಾರ ಇಲಾಖೆ ಬಂಧಿಸಿ ಶಾಸ್ತ್ರಿಯವರಿಗೆ ವಿಷಪ್ರಶಾನ ಮಾಡಿದ್ದುದರ ಕುರಿತಂತೆ ವಿಚಾರಣೆ ನಡೆಸಿದ ಸಂಗತಿಯನ್ನು ವಿಸ್ತೃತವಾಗಿ ಪ್ರಕಟಿಸಿತ್ತು. ಹಾಗೆ ನೋಡಿದರೆ ಶಾಸ್ತ್ರಿಯವರ ಸಾವಿನ ರಾಜಕಾರಣ ಮರುಹುಟ್ಟು ಪಡೆದಿದ್ದು ಆಗಲೇ.

v4

ಶಾಸ್ತ್ರಿಯವರ ಸಾವಿನಿಂದ ಲಾಭವಿದ್ದುದ್ದಾದರೂ ಯಾರಿಗೆ? ಮೊದಲನೆಯದಾಗಿ ಶಾಸ್ತ್ರಿಜಿ ನೆಹರೂವಿನಷ್ಟು ಸಮರ್ಥರಲ್ಲವೆಂದು ದೇಶದ ಜನತೆ ಅವರನ್ನು ತಿರಕಸ್ಕರಿಸಿಬಿಡುತ್ತಾರೆಂದು ಕಾಯುತ್ತ ಕುಳಿತಿದ್ದ ಕಾಂಗ್ರೆಸ್ಸಿನ ಪಟ್ಟಬದ್ಧ ಹಿತಾಸಕ್ತಿಗಳಿಗೆ ಪಾಕಿಸ್ತಾನ ಯುದ್ಧದಲ್ಲಿ ಶಾಸ್ತ್ರಿಜಿಯವರ ಗೆಲುವು ಆಘಾತ ತಂದಿತ್ತು. ಶಾಸ್ತ್ರಿಜೀಯವರು ಅಷ್ಟೇ, ಇಂದಿರಾಳಿಗೆ ನೆಹರೂ ಮಗಳೆಂಬ ಕಾರಣಕ್ಕೆ ಯಾವ ವಿಶೇಷ ಸವಲತ್ತುಗಳನ್ನೂ ಕೊಡಲು ಒಪ್ಪಿರಲಿಲ್ಲ. ಪ್ರಮುಖ ಖಾತೆಯನ್ನೂ ಕೂಡ ಕೊಡದೇ ಆಕೆಯನ್ನು ಭಿನ್ನ ಭಿನ್ನ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿ ಸಮಾಧಾನ ಪಡಿಸಿಬಿಡುತ್ತಿದ್ದರು. ಬೇಸತ್ತ ಇಂದಿರಾ ತಾನು ಇಂಗ್ಲೆಂಡಿಗೆ ಹೋಗಿ ನೆಲೆಸಿಬಿಡುವುದಾಗಿ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಳಂತೆ. ಈ ವೇಳೆಗೆ ನೆಹರೂ ಆಪ್ತವಲಯದಲ್ಲಿದ್ದು ಹಡಗಿನ ವಹಿವಾಟಿನ ಮೂಲಕ ಅಪಾರ ಹಗರಣಗಳಿಗೆ ನೇತೃತ್ವ ವಹಿಸಿದ್ದ ಧರ್ಮತೇಜ ಎಂಬ ವ್ಯಾಪಾರಿಯನ್ನು ಶಾಸ್ತ್ರಿಜಿ ಕರೆದು ಛೀಮಾರಿ ಹಾಕಿದ್ದಲ್ಲದೇ ವಿಚಾರಣೆ ನಡೆಸುವುದಾಗಿ ಎಚ್ಚರಿಕೆಯನ್ನು ಕೊಟ್ಟಿದ್ದರು. ತಾಷ್ಕೆಂಟ್ ಒಪ್ಪಂದಕ್ಕೂ ಕೆಲವು ದಿನಗಳ ಮುನ್ನ ಆತ ಮುಂಬೈಯಿಂದ ಮಾಸ್ಕೊಗೆ ಓಡಿಹೋಗಿದ್ದ. ಅಲ್ಲಿ ಒಂದು ವಾರಗಳ ಕಾಲ ಟಿಎನ್ ಕೌಲರ ಜೊತೆಗಿದ್ದ. ನಂತರ ತಾಷ್ಕೆಂಟ್ಗೆ ಹೋಗಿ ಅಲ್ಲಿಯೇ ಉಳಿದ. ಶಾಸ್ತ್ರಿ ತೀರಿಕೊಂಡ ನಂತರ ಭಾರತಕ್ಕೆ ಮರಳಿ ಬಂದ. ಸಂಸತ್ತಿನಲ್ಲಿ ಧರ್ಮತೇಜನ ಕುರಿತಂತೆಯೂ ಸಾಕಷ್ಟು ಚಚರ್ೆಗಳಾದವು. 1977 ರಲ್ಲಿ ಎಲ್ಲ ಮಾಹಿತಿಯನ್ನೂ ಸಮಾಜದ ಮುಂದಿಡಬಲ್ಲ ಏಕೈಕ ಕೊಂಡಿಯಾಗಿದ್ದ ವೈದ್ಯರು ಅಪಘಾತದಲ್ಲಿ ತೀರಿಕೊಂಡರು. ಲಾರಿಯೊಂದು ಅವರ ಕಾರಿಗೆ ಹಿಂದಿನಿಂದ ಬಡಿಯಿತು. ಏನಾಗಿದೆ ಎಂದು ನೋಡಲು ಕೆಳಗಿಳಿದ ವೈದ್ಯರಿಗೆ ಅದೇ ಲಾರಿ ಮತ್ತೊಮ್ಮೆ ಗುದ್ದಿತು. ಅವರು ಸ್ಥಳದಲ್ಲೇ ತೀರಿಕೊಂಡರು. ತನ್ನ ತಲೆಯ ಮೇಲಿರುವ ಭಾರವನ್ನೆಲ್ಲಾ ಕೆಳಗಿಳಿಸಿಬಿಡುತ್ತೇನೆ ಎಂದು ಲಲಿತಾ ಶಾಸ್ತ್ರಿಯವರಿಗೆ ಮಾತುಕೊಟ್ಟು ಅವರ ಮನೆಯಿಂದ ಹೊರಟ ಶಾಸ್ತ್ರಿಜಿಯವರ ಆಪ್ತ ಸಹಾಯಕ ರಾಮ್ನಾಥ್ ಸ್ವಲ್ಪ ದೂರ ಹೋಗುವಷ್ಟರಲ್ಲಿ ಆಘಾತಕ್ಕೊಳಗಾದ. ಯಾರ ಕಣ್ಣಿಗೂ ಬೀಳದೇ ಶಾಸ್ತ್ರಿಜಿಯವರ ಕನ್ನಡಕದ ಡಬ್ಬಿಯಲ್ಲಿ ಉಳಿದಿದ್ದ ‘ನನಗೆ ಮೋಸವಾಗಿಹೋಯ್ತು’ ಎನ್ನುವ ಚೀಟಿಯನ್ನು ಲಲಿತಾ ಶಾಸ್ತ್ರಿ ಅದೊಮ್ಮೆ ಅಗೆದು ನುಂಗಿಬಿಟ್ಟರಂತೆ. ಅವರನ್ನು ಭೇಟಿ ಮಾಡಲು ಬಂದ ವ್ಯಕ್ತಿಯೊಬ್ಬ ನಿಮ್ಮ ಮನೆಯವರ ಒಳಿತಿಗಾಗಿ ಕೆಲವು ಗುಟ್ಟು ಮುಚ್ಚಿಡುವುದೊಳಿತು ಎಂದು ಹೇಳಿ ಹೋಗಿದುದರ ಪರಿಣಾಮ.

v5

ಶಾಸ್ತ್ರಿಜಿಯವರ ಹತ್ಯೆಯ ಪಾಲುದಾರಿಕೆ ಯಾರದ್ದಿತ್ತೋ ಗೊತ್ತಿಲ್ಲ. ಆದರೆ ಅವರ ನಂತರ ರಷ್ಯಾಕ್ಕೆ ಬಲು ಆಪ್ತವಾಗಿದ್ದ ಇಂದಿರಾ ಅಧಿಕಾರಕ್ಕೇರಿದರು. ನೆಹರೂ ಪರಿವಾರ ಮತ್ತೆ ಪ್ರಧಾನಿ ಗಾದಿಯಲ್ಲಿ ಬಲವಾಯ್ತು. ಶಾಸ್ತ್ರಿ ನೇಪಥ್ಯಕ್ಕೆ ಸರಿದುಬಿಟ್ಟರು.

Comments are closed.