ವಿಭಾಗಗಳು

ಸುದ್ದಿಪತ್ರ


 

ವಿಕಾಸದತ್ತ ಪಥ ಬದಲಾಯಿಸಿದ ಹೊಸ ಬಗೆಯ ಸಂಕ್ರಾಂತಿ!!

ಇದು ಹೊಸ ಭಾರತ. ಹಾಗಂತ ನರೇಂದ್ರಮೋದಿ ಹೇಳುತ್ತಲೇ ಬಂದಿದ್ದಾರೆ. ಅದಕ್ಕೆ ಪೂರಕವಾದ ಅನೇಕ ಪುರಾವೆಗಳನ್ನೂ ಅವರು ಕೊಟ್ಟಿದ್ದಾರೆ. ಹೇಗೆ ಸಂಕ್ರಾಂತಿಯಂದು ಸೂರ್ಯನ ಪಥ ಬದಲವಾವಣೆಯಾಗುತ್ತದೋ ಹಾಗೆ ನರೇಂದ್ರಮೋದಿ ಅಧಿಕಾರ ಸ್ವೀಕರಿಸಿದ ನಂತರ ಭಾರತದ ಪಥ ಬದಲಾವಣೆಯಾಯ್ತು. ಅವರು ಅಧಿಕಾರಕ್ಕೆ ಬರುವ ಮುನ್ನ ನಾವು ಬೇಡುವ ರಾಷ್ಟ್ರವೇ ಆಗಿಬಿಟ್ಟಿದ್ದೆವು. ಪೆಟ್ರೋಲ್-ಡೀಸೆಲ್ಗಳ ಮೇಲಿನ ನಮ್ಮ ಸಾಲ ಹಾಗೆಯೇ ಮುಂದುವರೆದಿದ್ದರೆ ಕೆಲವು ವರ್ಷಗಳಲ್ಲೇ ನಮ್ಮನ್ನು ಪಾಕಿಸ್ತಾನದ ಪರಿಸ್ಥಿತಿಗೆ ತಳ್ಳಿಬಿಟ್ಟಿರುತ್ತಿತ್ತು. ನಮ್ಮ ಬೇಡುವ ಮಟ್ಟ ಎಂಥದ್ದಿತ್ತೆಂದರೆ ಸ್ವತಃ ಅಂದಿನ ರಕ್ಷಣಾ ಸಚಿವ ಎ.ಕೆ ಆ್ಯಂಟನಿ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ನಮ್ಮ ಬಳಿ ಹಣವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟುಬಿಟ್ಟಿದ್ದರು. ಇಟಲಿಯ ಕಂಪೆನಿ ಅಗಸ್ತಾವೆಸ್ಟ್ಲ್ಯಾಂಡಿಗೆ 12 ಹೆಲಿಕಾಪ್ಟರ್ಗಳ ಡೀಲು ಕೊಡುವಾಗ 3600 ಕೋಟಿ ರೂಪಾಯಿಯನ್ನು ಮಾತ್ರ ಎಲ್ಲಿಂದಲೋ ಹೊಂದಿಸಿ ಕೊಟ್ಟುಬಿಟ್ಟಿದ್ದರು. ಸೈನಿಕರಿಗೆ ಒನ್ ರ್ಯಾಂಕ್ ಒನ್ ಪೆನ್ಷನ್ ಕೊಡಲು ನಮ್ಮ ಬಳಿ ಹಣವಿರಲಿಲ್ಲ. ಬುಲೆಟ್ಪ್ರೂಫ್ ಜಾಕೆಟ್ಗಳನ್ನು ಸೈನಿಕರಿಗೆಂದು ತಂದುಕೊಡಲು ನಮ್ಮ ಹತ್ತಿರ ಸಾಧ್ಯವಿರಲಿಲ್ಲ. ಅಂತಹ ಅತಿ ಕೆಟ್ಟ ಸಕರ್ಾರವನ್ನು ನಡೆಸಿ ದೇಶದ ಸುರಕ್ಷತೆಯನ್ನೇ ನಾವು ಅನ್ಯ ರಾಷ್ಟ್ರಗಳ ಮುಲಾಜಿಗೆ ಒಡ್ಡಿದ್ದೆವು. ಸಾಲಕ್ಕಾಗಿ ಕೈ ಚಾಚುವುದು ನಮಗೆಂದೂ ತಪ್ಪೆನಿಸಿರಲಿಲ್ಲ. ಆದರೆ, ಒಳಗಿರುವ ಅಯೋಗ್ಯರು ಲೂಟಿಗೈದು ವಿದೇಶದಲ್ಲಿರುವ ಶೆಲ್ ಕಂಪನಿಗಳ ಮೂಲಕ ಮತ್ತೆ ಭಾರತದಲ್ಲಿ ಹಣ ಹೂಡುತ್ತಿದ್ದರಲ್ಲ, ಅದಕ್ಕೆ ಮಾತ್ರ ತಡೆಯೇ ಇರಲಿಲ್ಲ. ಹಗರಣಗಳ ಸಾಲು-ಸಾಲು ನಡೆದು ಹೋದವು. ದೇಶದ ಪ್ರಾಕೃತಿಕ ಸಂಪನ್ಮೂಲವನ್ನೇ ಮಾರಿಕೊಂಡುಬಿಟ್ಟರು ಈ ಅಯೋಗ್ಯರು. ಭೂಗರ್ಭದಲ್ಲಿರುವ ಕಲ್ಲಿದ್ದಲಿನಿಂದ ಹಿಡಿದು ಆಕಾಶದಲ್ಲಿ ಕಣ್ಣಿಗೆ ಕಾಣದಂತೆ ಹಬ್ಬಿರುವ 2ಜಿ, 3ಜಿ ತರಂಗಗಳವರೆಗೂ ಭಾರತದ ಸಂಪತ್ತೆಲ್ಲವನ್ನೂ ಸೂರೆಗೈಯ್ಯಲು ತುದಿಗಾಲಲ್ಲಿ ನಿಂತಿದ್ದರು. ಹಣ ಮರಳಿಸುವ ಸಾಮಥ್ರ್ಯವಿಲ್ಲವೆಂದು ಗೊತ್ತಿದ್ದಾಗಲೂ ಮಲ್ಯನಂಥವರಿಗೆ ಸಾವಿರಾರು ಕೋಟಿ ರೂಪಾಯಿ ಸಾಲಕೊಟ್ಟು ಭಾರತವನ್ನು ಅಕ್ಷರಶಃ ಸಾಮಥ್ರ್ಯಹೀನ ರಾಷ್ಟ್ರವನ್ನಾಗಿಸಿದ್ದರು. ಜಗತ್ತು ನಮ್ಮನ್ನು ಅಸಡ್ಡೆಯಿಂದಲೇ ನೋಡುತ್ತಿತ್ತು. ಅದೂ ಸರಿಯೇ. ಸದಾ ಬೇಡುವವರನ್ನು ಕಂಡರೆ ಕೊಡುವವನಿಗೆ ಅಸಡ್ಡೆ ಮತ್ತು ಧಿಮಾಕು ಇದ್ದದ್ದೇ.

India's Prime Minister Narendra Modi visits Shwedagon Pagoda in Yangon

ಮೋದಿ ಬರುವುದರೊಂದಿಗೆ ಎಲ್ಲವೂ ಬದಲಾಯ್ತು. ಭಾರತದ ಸಂಪತ್ತನ್ನು ಅವರು ಚೌಕಿದಾರನಾಗಿ ರಕ್ಷಿಸಿದರು. ವಿದೇಶಗಳೊಂದಿಗಿನ ಬಾಂಧವ್ಯವನ್ನು ಬಲಗೊಳಿಸಿಕೊಂಡರು. ಎಲ್ಲಕ್ಕಿಂತ ಮಿಗಿಲಾಗಿ ಮೇಲ್ಮಟ್ಟದಲ್ಲಿದ್ದ ಭ್ರಷ್ಟಾಚಾರ ಪೂರ್ಣ ನಿಂತಿದ್ದರಿಂದ ಬೊಕ್ಕಸ ತುಂಬಲಾರಂಭಿಸಿತು. ಯಾವ ಹಗರಣಗಳ ಮೂಲಕ ಕಾಂಗ್ರೆಸ್ಸು ಲಕ್ಷಾಂತರ ಕೋಟಿ ರೂಪಾಯಿ ಬೊಕ್ಕಸಕ್ಕೆ ನಷ್ಟ ಮಾಡಿತ್ತೋ ಅದೇ ಯೋಜನೆಗಳನ್ನು ಪುನರ್ರೂಪಿಸಿ ಬೊಕ್ಕಸವನ್ನು ತುಂಬಿಸಿದರು ಮೋದಿ. ನಿಧಾನವಾಗಿ ಸಾಲ ತೀರಲಾರಂಭಿಸಿತು. ಅಕ್ಕ-ಪಕ್ಕದ ರಾಷ್ಟ್ರಗಳು ಸಾಲ ನೀಡುವಂತೆ ನಮ್ಮನ್ನೇ ಕೇಳಿಕೊಳ್ಳಲಾರಂಭಿಸಿದವು. ನಾವೀಗ ಬೇಡುವ ರಾಷ್ಟ್ರವಾಗಿಲ್ಲ, ಕೊಡುವ ರಾಷ್ಟ್ರವಾಗಿದ್ದೇವೆ. ಇದ್ದಕ್ಕಿದ್ದಂತೆ ಬಲಾಢ್ಯ ರಾಷ್ಟ್ರಗಳೂ ಕೂಡ ಭಾರತವನ್ನು ಗೌರವಿಸಲಾರಂಭಿಸಿದವು. ಸ್ವತಃ ಚೀನಾ ಭಾರತದ ಕುರಿತಂತಹ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಕ್ಕುಹಾಕಿಕೊಂಡಿತು. ಈ ಎಲ್ಲಾ ಬದಲಾವಣೆಗಳಿಗೂ ನರೇಂದ್ರಮೋದಿಯವರೇ ಕಾರಣವೆಂದರೆ ಅನೇಕರ ಕಣ್ಣು ಕೆಂಪಾದೀತು. ಆದರೆ, ಹತ್ತು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿಗೆ ಇದರಲ್ಲಿ ಹತ್ತು ಪೈಸೆಯಷ್ಟನ್ನೂ ಮಾಡಲಿಕ್ಕಾಗಲಿಲ್ಲವೆಂಬುದೇ ದುಃಖದಾಯಕ ಸಂಗತಿ.

8

ಮೋದಿಯ ನಿರ್ಣಯಗಳಲ್ಲಿ ನೋಟು ಅಮಾನ್ಯೀಕರಣದ್ದು ಅತ್ಯಂತ ಕಠಿಣವಾದುದಾಗಿತ್ತು. ಇಡಿಯ ಭಾರತ ಏಕಕಂಠದಿಂದ ಈ ನಿರ್ಣಯಕ್ಕೆ ಸ್ವಾಗತವನ್ನು ಕೋರಿತ್ತು. ಅದು ಮೋದಿಯವರ ಮೇಲಿನ ವಿಶ್ವಾಸದ ಪರಿಣಾಮ. ನಿಮಗೆ ನೆನಪಿರಬೇಕು. ಚಿನ್ನದ ಆಮದು ಹೆಚ್ಚಾಗುತ್ತಿದ್ದಾಗ ಅದರ ಖರೀದಿ ಕಡಿಮೆ ಮಾಡುವಂತೆ ಚಿದಂಬರಂ ಭಾರತೀಯರನ್ನು ಕೇಳಿಕೊಂಡಿದ್ದರು. ಉಲ್ಟಾ ಖರೀದಿ ಹೆಚ್ಚಾಗಿತ್ತು. ನಾಯಕ ವಿಶ್ವಾಸಯೋಗ್ಯನಾಗಿದ್ದರೆ ಮಾತ್ರ ಜನ ಅವನ ಮಾತನ್ನು ಕೇಳುತ್ತಾರೆಂಬುದಕ್ಕೆ ಇದೇ ಉದಾಹರಣೆ. ರಾಹುಲ್ ಹರಿದ ಜೇಬಿನ ನಾಟಕ ಮಾಡಿದ್ದು ನಿಜವಾದರೂ ಜನ ಮಾತ್ರ ಮಿಸುಕಾಡಲಿಲ್ಲ. ನೋಟು ಅಮಾನ್ಯೀಕರಣಕ್ಕೆ ಬೆಂಬಲ ಸೂಚಿಸಿ ಶಾಂತವಾಗಿಯೇ ಸಹಕರಿಸಿದರು. ಸಿರಿವಂತರ ಮನೆಯಲ್ಲಿ ಕೂಡಿಟ್ಟಿದ್ದ ಹಣವೆಲ್ಲ ಸರಸರನೆ ಬ್ಯಾಂಕಿಗೆ ಹರಿದುಬಂತು. ಇದರ ಮಧ್ಯೆಯೇ ನಕಲಿ ಕಂಪನಿಗಳ ಮೂಲಕ ಬ್ಯಾಂಕಿಗೆ ಹಣ ಹೂಡಿದ ಅನೇಕರು ಸಿಕ್ಕಿಬಿದ್ದರು. ಕೆಲವರಂತೂ ಹಣ ಮರಳಿಸಿದರು. ಆದರೆ ಅದನ್ನು ತಮ್ಮದೆಂದು ಹೇಳಿಕೊಳ್ಳಲು ಮುಂದೆಯೇ ಬರಲಿಲ್ಲ. ಒಂದು ನಕಲಿ ಕಂಪನಿ 2000ಕ್ಕೂ ಹೆಚ್ಚು ಅಕೌಂಟುಗಳ ಮೂಲಕ ವಹಿವಾಟು ನಡೆಸುತ್ತಿದುದು ಬೆಳಕಿಗೆ ಬಂತು. ನೋಡ-ನೋಡುತ್ತಲೇ 2 ಲಕ್ಷಕ್ಕೂ ಹೆಚ್ಚು ದಗಲ್ಬಾಜಿ ಕಂಪನಿಗಳು ಸಕರ್ಾರದ ಗಮನಕ್ಕೆ ಬಂದವಲ್ಲದೇ ಅವೆಲ್ಲವನ್ನೂ ನಿಷೇಧಿಸಲಾಯ್ತು. ನೆನಪಿಡಿ, ಇವೇ ಕಂಪನಿಗಳ ಮೂಲಕ ಇಲ್ಲಿ ಲೂಟಿ ಮಾಡಿದ ಕಪ್ಪುಹಣವನ್ನು ಬಿಳಿಯಾಗಿ ಪರಿವತರ್ಿಸುತ್ತಿದ್ದರು ಅಯೋಗ್ಯರು. ಇದಕ್ಕೆ ಪೂರಕವಾಗಿಯೇ ನಕಲಿ ನೋಟುಗಳ ಧಂಧೆ ನಡೆಸುತ್ತಿದ್ದ ಪಾಕಿಸ್ತಾನ ಪೂರ್ಣ ಬೀದಿಗೆ ಬಂತಲ್ಲದೇ ಈಗ ಅಕ್ಷರಶಃ ಭಿಕಾರಿಯಾಗಿ ಭಿಕ್ಷಾಪಾತ್ರೆ ಹಿಡಿದು ಜಗತ್ತಿನಲ್ಲೆಲ್ಲಾ ಅಡ್ಡಾಡುತ್ತಿದೆ.
ಜಿಎಸ್ಟಿಯ ವಿಚಾರದಲ್ಲೂ ಹಾಗೆಯೇ. ವಿರೋಧ ಪಕ್ಷಗಳು ಅಬ್ಬರ ಮಾಡಿ ಎಷ್ಟೇ ಅರಚಾಡಿದರೂ ಜನಸಾಮಾನ್ಯರಿಗೆ ಜಿಎಸ್ಟಿ ನೆಮ್ಮದಿ ತಂದಿರುವುದು ಈಗ ಅರಿವಾಗುತ್ತಿದೆ. ಅನೇಕ ಬಗೆಯ ತೆರಿಗೆಗಳು ಈಗ ಇಲ್ಲದಿರುವುದರಿಂದ ರಾಜ್ಯಗಳ ಗಡಿಭಾಗದ ಚೆಕ್ಪೋಸ್ಟ್ಗಳು ಇಲ್ಲ. ಪರಿಣಾಮ ವಸ್ತುಗಳನ್ನು ಹೊರುವ ಗೂಡ್ಸ್ಟ್ರಕ್ಕುಗಳು ಪ್ರತಿದಿನ ಸರಾಸರಿ 30ಕಿ.ಮೀ ಹೆಚ್ಚು ಕ್ರಮಿಸುತ್ತಿರುವುದು ದೇಶದ ವೇಗಕ್ಕ ಸಿಕ್ಕ ಬಲ.

9

ಸಜರ್ಿಕಲ್ ಸ್ಟ್ರೈಕ್ ನಿರ್ಣಯ ತೆಗೆದುಕೊಳ್ಳುವುದು ಅಳ್ಳೆದೆಯವರಿಗೆ ಸಾಧ್ಯವಾಗುವ ಮಾತೇ ಅಲ್ಲ. ಒಮ್ಮೆ ಸಜರ್ಿಕಲ್ ಸ್ಟ್ರೈಕ್ ಮಾಡಿ ಮುಗಿಸಿದ ನಂತರ ಪಾಕಿಸ್ತಾನ ಪತರಗುಟ್ಟಿ ಹೋಗಿದೆ. ವರ್ಷಗಟ್ಟಲೆ ತಯಾರು ಮಾಡಿದ್ದ ವ್ಯವಸ್ಥೆ ಛಿದ್ರವಾಗಿಹೋಗಿದೆ. ಅಪನಂಬಿಕೆ ತಾಣವಾಗಿ ಹೋಗಿದ್ದಾರೆ ಪಾಕಿಸ್ತಾನಿಯರು. ಹೀಗಾಗಿಯೇ ಆನಂತರದ ದಿನಗಳಲ್ಲಿ ಭಯೋತ್ಪಾದನೆಯ ಕೃತ್ಯ ಭಾರತದಲ್ಲಿ ನಡೆಸುವುದಿರಲಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸುವ ಯೋಚನೆಯೂ ಅವರು ಮಾಡುತ್ತಿಲ್ಲ.

ಮೋದಿ ತೆಗೆದುಕೊಂಡಿರುವ ಪ್ರತಿಯೊಂದು ನಿರ್ಣಯಗಳೂ ಹೀಗೆಯೇ. ಅವು ಜಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಮಾಡುವ ಪ್ರಯತ್ನ. ಈ ನಿರ್ಣಯಗಳನ್ನು ಕೈಗೊಳ್ಳುವಾಗ ಅನೇಕರ ವಿರೋಧ ಎದುರಾಗುತ್ತದೆಂಬುದು ಗೊತ್ತಿದ್ದಾಗಲೂ ರಾಷ್ಟ್ರದ ಹಿತದೃಷ್ಟಿಯಿಂದ ಅದನ್ನು ಮುಲಾಜಿಲ್ಲದೇ ಕೈಗೊಂಡವರು ಅವರು. ವ್ಯಾಪಾರಿಗಳು ತನಗೆ ವಿರುದ್ಧವಾಗುತ್ತಾರೆಂದು ಗೊತ್ತಿದ್ದಾಗಲೂ ಗುಜರಾತಿನ ಚುನಾವಣೆಗೆ ಮುನ್ನ ಜಿಎಸ್ಟಿ ಜಾರಿಗೆ ತಂದಿದ್ದು ಮೋದಿಯವರ ತಾಕತ್ತೇ ಸರಿ. ಅವರ ಹೊಸ ಭಾರತದ ಕಲ್ಪನೆ ಈಗೀಗ ಸಾಕಾರವಾಗುವಂತೆ ಕಾಣುತ್ತಿದೆ. ಸಂಕ್ರಾಂತಿಯಲ್ಲಿ ಹಂಚುವ ಎಳ್ಳು ತಿನ್ನಲು ಕಹಿ, ಆದರೆ ದೇಹಾರೋಗ್ಯಕ್ಕೆ ಬಹಳ ಒಳ್ಳೆಯದು. ಅದೇ ರೀತಿ ಮೋದಿಯವರು ತೆಗೆದುಕೊಂಡ ನಿರ್ಣಯಗಳು ಬಲು ಕಠಿಣ. ಆದರೆ, ದೇಶದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಬಾರಿಯ ಸಂಕ್ರಾಂತಿ ದೇಶದ ಹಿತದೃಷ್ಟಿಯಿಂದ ಆಚರಿಸಲ್ಪಡಬೇಕಾಗಿರುವಂಥದ್ದು. ನಾನು, ನನ್ನ ಮನೆ, ನನ್ನ ಜನ, ಇಲ್ಲಿಂದೆಲ್ಲ ವಿಸ್ತಾರಗೊಂಡು ನಾವು, ನಮ್ಮ ನಾಡು, ನಮ್ಮ ಜಲ, ನಮ್ಮ ದೇಶ ಇತ್ತ ಹೊರಳಬೇಕಾದಂತಹ ಸಂಕ್ರಾಂತಿ ಇದು. ದೇಶ ವಿಕಾಸದ ಪಥ ಹಿಡಿದಿರುವಾಗ ಅದನ್ನು ಬೆಂಬಲಿಸುವುದಕ್ಕೆ ನಾವು ಜೊತೆಯಾಗಬೇಕು.

10

ಇಂದು ಎಳ್ಳು-ಬೆಲ್ಲ ತಿಂದು ದೇಶಕ್ಕಾಗಿ ಸಮರ್ಥ ಸಂಕಲ್ಪ ಮಾಡೋಣ.

Comments are closed.