ವಿಭಾಗಗಳು

ಸುದ್ದಿಪತ್ರ


 

ವಿಶ್ವವಿದ್ಯಾಲಯದಲ್ಲಿ ಗೂಂಡಾ ಸಂಸ್ಕೃತಿ!

ಈ ವಿದ್ಯಾಥರ್ಿಗಳನ್ನು ಸಾಮಾನ್ಯದವರೆಂದು ಭಾವಿಸಬೇಡಿ. ಭಾರತ ವಿರೋಧಿ ಶಕ್ತಿಗಳೊಂದಿಗೆ ಅವರಿಗೆ ನೇರ ಸಂಪರ್ಕವಿರುವುದನ್ನು ದೆಹಲಿ ಪೊಲೀಸು ಮತ್ತು ರಾಷ್ಟ್ರೀಯ ತನಿಖಾ ದಳಗಳೇ ಸ್ಪಷ್ಟಪಡಿಸಿವೆ. ಅದರಲ್ಲೂ ವಿಶೇಷವಾಗಿ ಕಾಶ್ಮೀರ ಪ್ರತ್ಯೇಕತಾವಾದಿಗಳ ಅಡ್ಡ ಜೆಎನ್ಯುನ ವಿದ್ಯಾಥರ್ಿ ನಿಲಯ. ಈ ಹಿಂದೆ ಪ್ಯಾಲಿಸ್ತೇನಿನ ಕುರಿತಂತೆ, ಶ್ರೀಲಂಕಾದ ತಮಿಳರ ಕುರಿತಂತೆ ಅಲ್ಲಿ ಕಾರ್ಯಕ್ರಮ ನಡೆಯುವಾಗ ಕಾನೂನಿಗೆ ವಿರೋಧವಾಗಿ ಭಾರತ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂಬ ವಿಷಯವನ್ನೂ ಚಚರ್ೆ ಮಾಡಿದ್ದರು.

ಕಳೆದ ಕೆಲವು ವಾರಗಳಿಂದ ಎರಡು ವಿಶ್ವವಿದ್ಯಾಲಯಗಳು ದೊಡ್ಡದಾಗಿ ಸದ್ದು ಮಾಡುತ್ತಿವೆ. ಒಂದು ಕುಖ್ಯಾತವಾದ ಜೆಎನ್ಯು, ಮತ್ತೊಂದು ಪ್ರಖ್ಯಾತವಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯ. ಎರಡೂ ವಿವಿಯ ವಿದ್ಯಾಥರ್ಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರು. ಆದರೆ ಎಡಪಂಥೀಯ ಬುದ್ಧಿಜೀವಿ ಪತ್ರಕರ್ತರೆಲ್ಲಾ ಕಾನೂನನ್ನೇ ಕೈಗೆತ್ತಿಕೊಂಡ ಜೆಎನ್ಯು ವಿದ್ಯಾಥರ್ಿಗಳ ಬೆಂಬಲಕ್ಕೆ ನಿಂತರೆ ಹಿಂದೂ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳನ್ನು ಟೀಕಿಸಲು ಎಲ್ಲರಿಗಿಂತ ಮುಂದೆ ಬಂದು ನಿಂತರು.

7

ಜೆಎನ್ಯು ವಿದ್ಯಾಥರ್ಿಗಳ ದೇಶವಿರೋಧಿ ಚಿಂತನೆಗಳು ಹೊಸತೇನಲ್ಲ. ಈ ಹಿಂದೆಯೂ ಅನೇಕ ಬಾರಿ ರಾಷ್ಟ್ರೀಯತೆಯ ಪ್ರವಾಹದ ದಿಕ್ಕನ್ನು ತಿರುಗಿಸುವಲ್ಲಿ ಅವರು ಮಾಡಿರುವ ಪ್ರಯತ್ನ ಎಲ್ಲರಿಗೂ ಗೊತ್ತಿರುವಂಥದ್ದೇ. ಭಾರತ್ ತೇರೆ ತುಕ್ಡೇ ಹೋಂಗೇ ಇನ್ಶಾ ಅಲ್ಲಾ ಎಂಬ ಅವರ ಘೋಷಣೆ ಉಮರ್ ಖಾಲಿದ್ನ ಎಲ್ಲ ಕಾರ್ಯಕ್ರಮಗಳಲ್ಲೂ, ಕನ್ಹಯ್ಯಾನ ಬಹುತೇಕ ಕಾರ್ಯಕ್ರಮಗಳಲ್ಲೂ ಈಗಲೂ ಮೊಳಗುತ್ತವೆ. ಜೆಎನ್ಯುನಲ್ಲಿ ಇವರುಗಳೆಲ್ಲಾ ಸೇರಿ ಮಾಡಿರುವ ಅನೇಕ ಕಾರ್ಯಕ್ರಮಗಳಲ್ಲಿ ಭಾರತ ಎಷ್ಟು ಚೂರಾಗಿ ಒಡೆಯಬಹುದು ಎಂಬುದೇ ಯಾವಾಗಲೂ ಮುಖ್ಯ ಸಂಗತಿ. ಹಾಗಂತ ಇವರು ಮುಸಲ್ಮಾನರ ಪರ ಎಂದೇನೂ ಭಾವಿಸಬೇಡಿ. ದೇಶವಿರೋಧಿಗಳು ಅಷ್ಟೇ. ಬಹುಶಃ ನಿಮಗೆ ನೆನಪಿರಬೇಕು. ಅಬ್ದುಲ್ ಕಲಾಂರು ತೀರಿಕೊಂಡ ತಿಂಗಳಲ್ಲೇ ಯಾಕುಬ್ ಮೆನನ್ ಎಂಬ ಭಯೋತ್ಪಾದಕನನ್ನು ನೇಣಿಗೇರಿಸಲಾಗಿತ್ತು. ಆದರೆ ಜೆಎನ್ಯುನಲ್ಲಿರುವ ವಿದ್ಯಾಥರ್ಿಗಳು ಅಬ್ದುಲ್ ಕಲಾಮರಿಗೆ ಗೌರವ ಸೂಚಿಸುವ ಕೆಲಸ ಮಾಡಲಿಲ್ಲ. ಆದರೆ ಯಾಕುಬ್ ಮೆನನ್ ಸಾವಿಗೆ ಲೀಟರುಗಟ್ಟಲೆ ಕಣ್ಣೀರು ಸುರಿಸುತ್ತಾ ಅಲ್ಲಿ ಸಂತಾಪಸೂಚಕ ಸಭೆಯನ್ನೂ ನಡೆಸಿಬಿಟ್ಟರು. ನೇರವಾಗಿ ಜೆಎನ್ಯು ಭಯೋತ್ಪಾದಕ ಸಂಘಟನೆಗಳಿಗೆ ಬೇಕಾದ ಕರುಣೆಯನ್ನು ಜನರಲ್ಲಿ ಉದ್ದೀಪಿಸಲೆಂದು ಕೆಲಸ ಮಾಡುತ್ತಿದೆ ಎಂಬುದು ಹೊಸ ಆರೋಪವೇನಲ್ಲ. ಈ ಬಲಿತ ವಿದ್ಯಾಥರ್ಿಗಳು ಎಡಪಂಥೀಯ ವಿಚಾರಧಾರೆಯಿಂದ ಪೂರ್ಣವಾಗಿ ಬ್ರೈನ್ವಾಶ್ಗೊಳಗಾದವರಲ್ಲದೇ ಅಗತ್ಯಬಿದ್ದರೆ ಭಾರತವನ್ನು ತುಂಡರಿಸಲು ಶಸ್ತ್ರಗಳನ್ನೆತ್ತಬೇಕಾದ ಪ್ರೇರಣೆಯನ್ನೂ ಮುಲಾಜಿಲ್ಲದೇ ಕೊಡುತ್ತಾರೆ. 2015ರಲ್ಲಿ ಜೆಎನ್ಯು ಗೋಡೆಗಳ ಮೇಲೆ ‘ದಲಿತರ ರಕ್ಷಣೆಗಾಗಿ ಅಗತ್ಯಬಿದ್ದರೆ ಶಸ್ತ್ರಗಳನ್ನೂ ಕೈಗೆತ್ತಿಕೊಳ್ಳಿ’ ಎಂದು ಗೀಚಿದ್ದವರು ಇದೇ ವಿದ್ಯಾಥರ್ಿಗಳು!

8

ಈ ವಿದ್ಯಾಥರ್ಿಗಳನ್ನು ಸಾಮಾನ್ಯದವರೆಂದು ಭಾವಿಸಬೇಡಿ. ಭಾರತ ವಿರೋಧಿ ಶಕ್ತಿಗಳೊಂದಿಗೆ ಅವರಿಗೆ ನೇರ ಸಂಪರ್ಕವಿರುವುದನ್ನು ದೆಹಲಿ ಪೊಲೀಸು ಮತ್ತು ರಾಷ್ಟ್ರೀಯ ತನಿಖಾ ದಳಗಳೇ ಸ್ಪಷ್ಟಪಡಿಸಿವೆ. ಅದರಲ್ಲೂ ವಿಶೇಷವಾಗಿ ಕಾಶ್ಮೀರ ಪ್ರತ್ಯೇಕತಾವಾದಿಗಳ ಅಡ್ಡ ಜೆಎನ್ಯುನ ವಿದ್ಯಾಥರ್ಿ ನಿಲಯ. ಈ ಹಿಂದೆ ಪ್ಯಾಲಿಸ್ತೇನಿನ ಕುರಿತಂತೆ, ಶ್ರೀಲಂಕಾದ ತಮಿಳರ ಕುರಿತಂತೆ ಅಲ್ಲಿ ಕಾರ್ಯಕ್ರಮ ನಡೆಯುವಾಗ ಕಾನೂನಿಗೆ ವಿರೋಧವಾಗಿ ಭಾರತ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂಬ ವಿಷಯವನ್ನೂ ಚಚರ್ೆ ಮಾಡಿದ್ದರು. ಆನಂತರದ ದಿನಗಳಲ್ಲಿ ಈ ಕುರಿತಂತೆ ಸಾಕಷ್ಟು ಚಚರ್ೆಯೂ ಆಗಿತ್ತು. 2014ರಲ್ಲಿ ಇಂಥದ್ದೇ ಕಾರ್ಯಕ್ರಮವೊಂದರಲ್ಲಿ ಪ್ರತ್ಯೇಕ ಕಾಶ್ಮೀರದ ಪ್ರದರ್ಶನ ಮಳಿಗೆಯೊಂದನ್ನು ಹಾಕಲು ಹೊರಟಾಗ ಎಬಿವಿಪಿ ಅದನ್ನು ವಿರೋಧಿಸಿತ್ತು. ಎಬಿವಿಪಿ ತರುಣರ ಮೇಲೆ ಗೂಂಡಾಗಳಂತೆ ಮುಗಿಬಿದ್ದವರ ಮೇಲೆ ಅನೇಕ ಪ್ರತ್ಯೇಕತಾವಾದಿ ವಿದ್ಯಾಥರ್ಿ ಸಂಘಟನೆಗಳೂ ಸೇರಿದ್ದವು. 2013ರಲ್ಲಿ ಜೆಎನ್ಯು ಕಾಶ್ಮೀರದ ಜನರೊಂದಿಗೆ ನಾವಿದ್ದೇವೆ ಎನ್ನುತ್ತಾ ಬೃಹತ್ ರ್ಯಾಲಿಯನ್ನೇ ಆಯೋಜಿಸಿತ್ತು. ಆ ಮೂಲಕ ಭಾರತ ಕಾಶ್ಮೀರದ ಜನರನ್ನು ಶೋಷಿಸುತ್ತಿದೆ ಎಂಬ ಸಂದೇಶ ಕೊಡುವ ಪ್ರಯತ್ನ ಅವರದ್ದಾಗಿತ್ತು. ಅಲ್ಲಿನ ಮಾನವಾಧ್ಯಯನ ವಿಭಾಗ ಬಟ್ರರ್ಾನ್ ಡ್ರಜಲ್ರ ನಾನೇಕೆ ಕ್ರಿಶ್ಚಿಯನ್ ಅಲ್ಲ ಎಂಬ ಕೃತಿಯನ್ನು ಪಾಠ್ಯಕ್ರಮದಿಂದ ತೆಗೆದು ಕಂಚಾ ಇಳಯ್ಯನ ನಾನೇಕೆ ಹಿಂದೂವಲ್ಲ ಕೃತಿಯನ್ನು ಸೇರಿಸಿತ್ತು. ಮತ್ತು ಕಂಚಾ ಇಳಯ್ಯ ದಲಿತ್ ಫ್ರೀಡಂ ನೆಟ್ವಕರ್್ನಿಂದ ನಿರಂತರ ಪೋಷಣೆಗೊಳಗಾಗಿರುವವರು ಎಂಬುದು ಈಗ ಹೊಸ ಸಂಗತಿಯಾಗಿ ಉಳಿದಿಲ್ಲ. ಮೈಸೂರಿನಲ್ಲಿ ಇತ್ತೀಚೆಗೆ ಮಹಿಷಾಸುರ ಜಯಂತಿ ಆಚರಣೆಯ ವಿಚಾರದಲ್ಲಿ ಗಲಾಟೆ ಆಯ್ತಲ್ಲಾ, ಅದಕ್ಕೆ ಮೂಲ ಬೀಜವೂ ಜೆಎನ್ಯುನದ್ದೇ. ಅಲ್ಲಿಯೇ ಮಹಿಷಾಸುರನ ಜಯಂತಿಯನ್ನು ಆಚರಣೆ ಮಾಡುವ ವಿಚಾರದಲ್ಲಿ ಇಲ್ಲಿನವರಿಗೆ ಬೇಕಾದ ಸಾಹಿತ್ಯ ಸಂಶೋಧನೆಯಾಗೋದು, ಅಗತ್ಯಬಿದ್ದರೆ ಸೃಜನವಾಗೋದು.

ಅಲ್ಲಿ ಅರಾಬಿಕ್, ಪಷರ್ಿಯನ್, ಮತ್ತು ಸಂಸ್ಕೃತದ ವಿಭಾಗಗಳೆಲ್ಲವೂ ಇದೆ. ಅರಾಬಿಕ್ ವಿಭಾಗದ ಅಧ್ಯಾಪಕರು ಆ ಭಾಷೆಯನ್ನು ಅಲ್ಲಾಹ್ನ ಭಾಷೆ ಎಂದು ಕರೆದರೆ ಪಷರ್ಿಯನ್ ಕಲಿಸುವ ಮಾಸ್ತರರು ಅದೇ ಧಾಟಿಯಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಸಂಸ್ಕೃತ ವಿಭಾಗದ ಮುಖ್ಯಸ್ಥರು ಮಾತ್ರ ಚಾಮುಂಡಿಯನ್ನು ಶೋಷಕಿ ಎನ್ನುತ್ತಾರೆ, ಗಣೇಶ ಮೆರವಣಿಗೆಗಳನ್ನು ಮೂಢನಂಬಿಕೆ ಎಂದು ಜರಿಯುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಭವಿಷ್ಯದ ಪೀಳಿಗೆಯ ತರುಣ-ತರುಣಿಯರು ಹಿಂದುತ್ವದಿಂದ ದೂರ ಸರಿಯಲು ಬೇಕಾದ ಎಲ್ಲ ತಯಾರಿಯನ್ನು ಮಾಡಿಯೇ ಕಳಿಸುತ್ತಾರೆ. ಇಂದು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಿ ಕುಳಿತಿರುವ ಬಹುತೇಕರು ಜೆಎನ್ಯು ಫ್ಯಾಕ್ಟರಿಯ ಉತ್ಪನ್ನಗಳೇ. ಹೀಗಾಗಿಯೇ ಅವರಿಗೆ ಹಿಂದುತ್ವವನ್ನು ತೆಗಳುವಲ್ಲಿ ಆನಂದ ಮತ್ತು ಒಳ್ಳೆಯ ಬದುಕು ಎಂದರೆ ಮುಸಲ್ಮಾನರನ್ನು ಹೊಗಳುವುದೇ ಎಂದು ಅವರು ಭಾವಿಸಿಬಿಟ್ಟಿದ್ದಾರೆ!

9

ಹಾಗಂತ ಜೆಎನ್ಯು ಕರ್ಮಕಾಂಡ ಇಷ್ಟಕ್ಕೇ ಮುಗಿದಿಲ್ಲ. 2014ರಲ್ಲಿ ಚುನಾವಣೆಗೆ ಹೋಗುವ ಮುನ್ನ ಎರಡನೇ ಅವಧಿಯ ಯುಪಿಎ ಅಫ್ಜಲ್ಗುರುವನ್ನು ನೇಣಿಗೇರಿಸಿದ್ದು ನೆನಪಿದೆಯಲ್ಲವೇ? ಬಹುಶಃ ಮನಮೋಹನ್ ಸಿಂಗರು ತಮ್ಮ ಜೀವಿತಾವಧಿಯಲ್ಲಿ ತೆಗೆದುಕೊಂಡ ಏಕೈಕ ಕಠೋರ ನಿಧರ್ಾರ ಅದೇ ಇರಬಹುದೇನೋ. ಚುನಾವಣೆಯಲ್ಲಿ ತಾವು ಭಯೋತ್ಪಾದಕರ ಪರವಾಗಿದ್ದೇವೆ ಎಂಬ ಆರೋಪವನ್ನು ತಾಳಿಕೊಳ್ಳಲು ಅವರು ಮಾಡಿದ ಉಪಾಯ ಇದ್ದಿರಬಹುದು. ಈ ಸಾವಿಗೆ ಇಡಿಯ ದೇಶದಲ್ಲಿ ಕಠೋರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಎರಡು ಕಡೆ ಮಾತ್ರ. ಶ್ರೀನಗರದ ಅಫ್ಜಲ್ಗುರುವಿನ ಮಾವನ ಮನೆಯ ಕ್ಷೇತ್ರದಲ್ಲಿ ಮತ್ತು ಜೆಎನ್ಯು ಆವರಣದಲ್ಲಿ ಮಾತ್ರ. ಇಂದಿಗೂ ಆ ದಿನವನ್ನು ಜೆಎನ್ಯು ವಿದ್ಯಾಥರ್ಿಗಳು ಸ್ಮರಿಸಿಕೊಳ್ಳುತ್ತಾರೆ ಮತ್ತು ಕಿತ್ನೆ ಅಫ್ಜಲ್ ಮಾರೋಗೇ ಹರ್ ಘರ್ಸೆ ಅಫ್ಜಲ್ ನಿಕಲೇಗಾ (ಎಷ್ಟು ಅಫ್ಜಲ್ರನ್ನು ಕೊಲ್ಲುತ್ತೀರಿ, ಮನೆ-ಮನೆಯಿಂದಲೂ ಅಫ್ಜಲ್ ಬರುತ್ತಾನೆ) ಎಂದು ಘೋಷಣೆ ಕೂಗುತ್ತಾರೆ. ಅವನನ್ನು ನೇಣಿಗೇರಿಸಿ ಭಾರತ ತಪ್ಪು ಮಾಡಿತು ಎಂಬ ಪೋಸ್ಟರ್ಗಳನ್ನು ಊರ ತುಂಬಾ ಮೆತ್ತುತ್ತಾರೆ. ಈ ಸುದ್ದಿ ಪಾಕಿಸ್ತಾನದ ಪತ್ರಿಕೆಗಳಲ್ಲಲ್ಲದೇ ಅಮೇರಿಕಾ ಇಂಗ್ಲೆಂಡುಗಳಲ್ಲೂ ಪ್ರತಿಧ್ವನಿಸುವಂತೆ ನೋಡಿಕೊಳ್ಳುವ ಬಲಾಢ್ಯವಾದ ಜಾಲವನ್ನು ಅದಾಗಲೇ ಹೆಣೆದುಕೊಂಡಿದ್ದಾರೆ.

ಸ್ವಲ್ಪ ಹಿಂದೆ ಹೋದರೆ 2010ರಲ್ಲಿ ಛತ್ತೀಸ್ಘಡದ ದಾಂತೇವಾಡದಲ್ಲಿ ನಕ್ಸಲರು 76 ಸಿಆರ್ಪಿಎಫ್ ಜವಾನರನ್ನು ಹತ್ಯೆಗೈದಿದ್ದರಲ್ಲಾ; ಅವತ್ತು ಇಡೀ ದೇಶಕ್ಕೇ ಸೂತಕ. ನಕ್ಸಲರ ಆ ಶಕ್ತಿ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿತ್ತು. ಜೆಎನ್ಯುನಲ್ಲಿ ಮಾತ್ರ ಅಂದು ಹಬ್ಬದೂಟ. ಕಮ್ಯುನಿಸ್ಟ್ ಪಾಟರ್ಿಗೆ ಸೇರಿದ ವಿದ್ಯಾಥರ್ಿ ಸಂಘಟನೆಯೊಂದು ಕಾರ್ಯಕ್ರಮವೊಂದನ್ನು ಮಾಡಿ ಜನರ ಮೇಲೆ ಸಕರ್ಾರ ನಡೆಸುವ ದಬ್ಬಾಳಿಕೆಗೆ ಇದು ಸೂಕ್ತ ಪ್ರತಿಕ್ರಿಯೆ ಎಂಬ ಹೇಳಿಕೆಯನ್ನು ಕೊಟ್ಟಿತ್ತು. ಅಂದು ಸಿಹಿ ಹಂಚಿ ಸಂಭ್ರಮಿಸಿದ್ದರೆಂದು ಪತ್ರಿಕೆಗಳಲ್ಲಿ ಆನಂತರ ವರದಿಯಾದಾಗ ಇಡೀ ದೇಶ ಬೆಚ್ಚಿಬಿದ್ದಿತ್ತು. ಯಾರೋ ಒಂದಷ್ಟು ಪುಂಡಪೋಕರಿಗಳು ಮಾತನಾಡಿದರೆಂಬ ಮಾತ್ರಕ್ಕೆ ಭಾರತ ಬೆಚ್ಚಬೇಕಾದ್ದೇನೂ ಇರಲಿಲ್ಲ. ಆದರೆ ಜೆಎನ್ಯುಗೆ ನಾವೇ ಕೊಟ್ಟಿರುವ ಗೌರವ ಎಂಥದ್ದೆಂದರೆ ಅದು ಬುದ್ಧಿವಂತರನ್ನು ತಯಾರು ಮಾಡುವ ಕಾರ್ಯಕ್ಷೇತ್ರ ಎಂದುಬಿಟ್ಟಿದ್ದೇವೆ. ಅಲ್ಲಿನ ತರಗತಿಗಳ ಒಳಗೆ ನಡೆಯುವ ಆಲೋಚನೆಗಳೇ ದೇಶದ ಭವಿಷ್ಯದ ದಿಕ್ಕು ಎಂದು ನಾವೇ ನಂಬಿದ್ದೇವೆ ಮತ್ತು ನಂಬಿಸಿಯೂಬಿಟ್ಟಿದ್ದೇವೆ. ಹೀಗಾಗಿಯೇ ಇಲ್ಲಿ ಅಫ್ಜಲ್ಗೆ, ಯಾಕೂಬ್ ಮೆನನ್ಗೆ, ನಕ್ಸಲರಿಗೆ ಸಿಗುವ ಗೌರವ ರಾಷ್ಟ್ರದ ಆಲೋಚನೆಯ ಮಾನದಂಡವೂ ಹೌದು. ಹೀಗಾಗಿಯೇ ಈ ಅಯೋಗ್ಯರ ಬಾಲ ಕಡಿಯುವುದು ಎಂದೋ ಆಗಬೇಕಾದ್ದ ಕೆಲಸವಾಗಿತ್ತು. ಕಾಂಗ್ರೆಸ್ಸು ಆ ಧೈರ್ಯ ತೋರಲಿಲ್ಲ ಎಂಬುದಷ್ಟೇ ದುರಂತದ ಸಂಗತಿ.

10

ಜೆಎನ್ಯು ಹಾಳಾಗುವ ಪ್ರಕ್ರಿಯೆ ಶುರುವಾಗಿದ್ದು ಇಂದು ನಿನ್ನೆಯಲ್ಲ. ಅದು ಆರಂಭವಾದ ದಿನದಿಂದಲೂ ಕೂಡ. ಜವಾಹರ್ಲಾಲ್ ನೆಹರೂ ಕನಸುಗಳನ್ನು ಈಡೇರಿಸುವ ವಿಶ್ವವಿದ್ಯಾಲಯವಾಗಬೇಕೆಂದು ಅನೇಕರು ಬಯಸಿದ್ದರು. ಆದರೆ ಆರಂಭದಿಂದಲೂ ಅದು ಮೊಹಮ್ಮದ್ ಅಲಿ ಜಿನ್ಹಾನ ಕನಸುಗಳನ್ನು ಈಡೇರಿಸುವ ತಾಣವಾಗಿಯೇ ನಿಮರ್ಾಣಗೊಂಡಿತು. ರೊಮಿಲಾ ಥಾಪರ್ನಂತಹ ಮತಿಗೆಟ್ಟ ಇತಿಹಾಸ ತಿರುಚುವ ಅಧ್ಯಾಪಕರುಗಳ ಶಕ್ತಿ ಕೂಡಿಕೊಂಡ ಮೇಲಂತೂ ಈ ವಿಶ್ವವಿದ್ಯಾಲಯದ ದಿಕ್ಕು ದಿಸೆಯೇ ಬದಲಾಗಿಹೋಯ್ತು. ಆದರೆ ಈ ಹಾಳಗುವ ಪ್ರಕ್ರಿಯೆ ವೇಗ ದೊರಕಿದ್ದು ಮಾತ್ರ ಅಟಲ್ಜೀ ಸಕರ್ಾರ ಮುಗ್ಗರಿಸಿ ಬಿದ್ದು ಕಾಂಗ್ರೆಸ್ ಅಧಿಕಾರ ಪಡೆದುಕೊಂಡಾಗ. ಶಿಕ್ಷಣ ಕ್ರಮದಲ್ಲಿ ಅಟಲ್ಜಿ ತರಬೇಕೆಂದು ಬಯಸಿದ ಬದಲಾವಣೆ ದೀರ್ಘಕಾಲದಲ್ಲಿ ತಮ್ಮ ಅಸ್ತಿತ್ವವನ್ನು ನಾಶಪಡಿಸಲಿದೆ ಎಂದರಿತ ಕಮ್ಯುನಿಸ್ಟ್ ಪಕ್ಷ ಸಕರ್ಾರ ರಚನೆಗೆ ಕಾಂಗ್ರೆಸ್ ಜೊತೆ ಕೈಜೋಡಿಸಿತಲ್ಲದೇ ಜೆಎನ್ಯುವನ್ನು ಪೂರ್ಣವಾಗಿ ತನ್ನ ತೆಕ್ಕೆಗೆ ಸೆಳೆದುಕೊಂಡುಬಿಟ್ಟಿತು. ಈ ಹೊತ್ತಿನಲ್ಲಿಯೇ ಅಲ್ಲಿ ಎಡಪಂಥೀಯ ವಿದ್ಯಾಥರ್ಿ ಸಂಘಟನೆಗಳು ಬಲವಾಗಿ ಬೆಳೆದದ್ದು. ದೇಶವನ್ನು ತುಂಡರಿಸುವವರೊಂದಿಗೆ ಅಲ್ಲಿನ ವಿದ್ಯಾಥರ್ಿಗಳಿಗೆ ಸಂಪರ್ಕ ಒದಗಿದ್ದೂ ಆಗಲೇ. ಗುಪ್ತಚರ ವರದಿಯನ್ನು ಅವಲೋಕಿಸಿದರೆ ಈ ವಿದ್ಯಾಥರ್ಿಗಳಿಗೆ ಚೀನಾದ ಆತಿಥ್ಯವೂ ದೊರೆಯುವ ಸಂಗತಿ ಹೊಸತೇನೂ ಅಲ್ಲ. ಅಂದರೆ ಚೀನಾ ಭಾರತದ ರಾಜಧಾನಿಯೊಳಗೇ ತಮ್ಮ ಏಜೆಂಟುಗಳನ್ನು ನೇಮಿಸಿಟ್ಟುಬಿಟ್ಟಿತ್ತು. ದುಃಖದ ಸಂಗತಿ ಏನು ಗೊತ್ತೇ? ಚೀನಾದ, ಪಾಕಿಸ್ತಾನದ ಈ ಏಜೆಂಟುಗಳಿಗೆ ಊಟ, ವಸತಿ, ವಸ್ತ್ರ ನಮ್ಮ ತೆರಿಗೆ ಹಣದಲ್ಲಿಯೇ ಸಂದಾಯವಾಗುತ್ತಿದೆ. ಇವರ ಹಾಸ್ಟೆಲ್ ಫೀಸು ಅದೆಷ್ಟು ಕಡಿಮೆ ಎಂದರೆ ಕಳೆದ ಅನೇಕ ದಶಕಗಳಿಂದ ಅದು ಬದಲೂ ಆಗಿಲ್ಲ. ಈ ಬಾರಿ ಜೆಎನ್ಯು ಆಡಳಿತ ಅದಕ್ಕೊಂದು ಪರಿಷ್ಕರಣೆಯನ್ನು ಘೋಷಿಸಿದರೆ ಆ ವಿದ್ಯಾಥರ್ಿಗಳ ಗೂಂಡಾ ವರ್ತನೆ ಗಾಬರಿ ಹುಟ್ಟಿಸುವಂಥದ್ದಾಗಿತ್ತು. ಸ್ವಾಮಿ ವಿವೇಕಾನಂದರ ಮೂತರ್ಿಯನ್ನು ವಿರೂಪಗೊಳಿಸುವವರೆಗೂ ಅವರ ಮೇಲೆ ದೇಶದಲ್ಲಿ ಒಂದಷ್ಟು ಜನರಿಗೆ ಅನುಕಂಪವೂ ಇತ್ತು. ಆನಂತರ ಅದು ಜೆಎನ್ಯು ವಿದ್ಯಾಥರ್ಿಗಳ ವಿರೋಧದ ಅಲೆಯಾಗಿ ಮಾರ್ಪಟ್ಟಿತು. ದೇಶದ ಬಹುತೇಕರು ವಿಶೇಷವಾಗಿ ಮಧ್ಯಮವರ್ಗದ ಜನ ನಮ್ಮ ತೆರಿಗೆಯ ಹಣದಲ್ಲಿ ಇಂತಹ ಗೂಂಡಾಗಳನ್ನು ಸಲಹುವುದು ಸರಿಯಲ್ಲವೆಂದು ಸಕರ್ಾರದ ಜೊತೆಗೆ ನಿಂತರು. ಇಡಿಯ ದೇಶದಲ್ಲಿ ಅಗತ್ಯಬಿದ್ದರೆ ವಿಶ್ವಿವಿದ್ಯಾಲಯವನ್ನೇ ಬೇರೆಡೆಗೆ ಸ್ಥಳಾಂತರ ಮಾಡಿ ಎಂಬ ಸಲಹೆಯೂ ಕೇಳಿ ಬಂತು. ನೂರಾರು ಎಕರೆ ಜಮೀನಿನ ಮೇಲೆ ವಿಸ್ತಾರವಾಗಿ ಹಬ್ಬಿಕೊಂಡ ಈ ವಿಶ್ವವಿದ್ಯಾಲಯದಲ್ಲಿ ವಯಸ್ಸು ಮೀರಿದ ನಂತರವೂ ಇನ್ನೂ ಕಲಿಯುತ್ತಲೇ ಇರುವ ಕನ್ಹಯ್ಯಾ, ಉಮರ್ ಖಾಲಿದ್, ಶೆಹ್ಲಾ ರಶೀದ್ರಂಥವರು ನಮ್ಮ ಹಣದಲ್ಲಿಯೇ ಕೊಬ್ಬಿ ಬೆಳೆದಿರುವಂಥದ್ದು. ಈಗ ಇವರನ್ನೆಲ್ಲಾ ಮಟ್ಟಹಾಕಿ ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಇವರಂಥವರನ್ನು ಜನರ ಮುಂದೆ ಬೆತ್ತಲುಗೊಳಿಸುವಂತಹ ಹೊತ್ತು ಬಂದಿದೆ.

11

ಇದಕ್ಕೆ ವಿರುದ್ಧವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು ಹಿಂದೂಧರ್ಮದ ಮೂಲ ವಿಚಾರಗಳನ್ನು ತಿಳಿಸುವ ಕೋಸರ್ಿಗೆ ಮುಸಲ್ಮಾನ ಅಧ್ಯಾಪಕರನ್ನು ನೇಮಿಸಿದ್ದಾರೆಂಬುದಕ್ಕೆ ಪ್ರತಿಭಟಿಸಿದ್ದರು. ವಿಶ್ವವಿದ್ಯಾಲಯದ ಅಧಿನಿಯಮದ ಪ್ರಕಾರ ಈ ವಿಷಯವನ್ನು ಹಿಂದೂಗಳಲ್ಲದೇ ಅನ್ಯರು ಬೋಧಿಸುವಂತೆಯೇ ಇಲ್ಲ. ಆದರೇನು ಗೊತ್ತೇ? ಅವರ ನ್ಯಾಯಯುತವಾದ ಈ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನು ಎಲ್ಲ ಎಡಪಂಥೀಯ ಬುದ್ಧಿಜೀವಿಗಳೂ ಮಾಡಿದರು. ರಾಹುಲ್ ಕನ್ವಲ್ ಎಂಬ ಪತ್ರಕರ್ತನಂತೂ ಅಲ್ಲಿನ ವಿದ್ಯಾಥರ್ಿಯೊಂದಿಗೆ ಮಾತನಾಡಿದ ಶೈಲಿ ವ್ಯಾಪಕ ಟೀಕೆಗೆ ಒಳಗಾಗಿತ್ತು. ಉಮರ್ ಖಾಲಿದ್ನಂತಹ ದೇಶದ್ರೋಹಿಯನ್ನು ಜೀ ಎಂದು ಸಂಬೋಧಿಸುವ ಈ ಅಯೋಗ್ಯರು ಬಿಹೆಚ್ಯು ವಿದ್ಯಾಥರ್ಿಗಳಿಗೆ ಏಕವಚನ ಪ್ರಯೋಗ ಮಾಡುವುದು ಅಸಹ್ಯವಾಗಿತ್ತು. ಆದರೇನು? ಜನ ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಈಗ ಸರಿಯಾದ ಸಮಯ ಬಂದಿದೆ. ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಕುರಿತಂತೆ ಒಮ್ಮೆ ಮರುಚಿಂತನೆಯಾಗಿಬಿಡುವುದು ಒಳ್ಳೆಯದ್ದೇ!

Comments are closed.