ವಿಭಾಗಗಳು

ಸುದ್ದಿಪತ್ರ

ಶ್ರೇಷ್ಠಮಾರ್ಗದಲ್ಲಿ ನಡೆಯಲೂ ‘ಛಾತಿ’ ಬೇಕು!

ಇತ್ತೀಚೆಗೆ ಅನೇಕರು ಮತಾಂತರವಾಗುತ್ತಿರುವ ಸುದ್ದಿ ಬರುತ್ತಿದೆ. ಲವ್ ಜಿಹಾದ್ನ ಭರಾಟೆಯೂ ಜೋರಾಗಿಯೇ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೂ ಮತಾಂತರ ನಿಷೇಧಕ್ಕೆ ಕಾಯಿದೆ ರೂಪಿಸುವ ಆಲೋಚನೆಯನ್ನೂ ಹೊರಹಾಕಿಯಾಗಿದೆ. ಹಿಂದೂ ಹೆಣ್ಣುಮಕ್ಕಳು ಮುಸ್ಲೀಂ ತರುಣರ (ಕೆಲವೊಮ್ಮೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವವರ) ಪ್ರೇಮಪಾಶಕ್ಕೆ ಬಲಿಬಿದ್ದು ಮತಾಂತರಗೊಂಡು ಮದುವೆಯಾಗುವ ಪ್ರಕ್ರಿಯೆ ತೀವ್ರವಾಗುವಂತೆ; ಹಳ್ಳಿಯಲ್ಲಿ ಕ್ರಿಶ್ಚಿಯನ್ನರು ಅನಾಮತ್ತು ಕೇರಿ-ಕೇರಿಗಳನ್ನೇ ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಹೀಗೇಕೆ? ಹಿಂದೂಧರ್ಮವನ್ನು ಬಿಟ್ಟು ಅನ್ಯ ಮತಗಳಿಗೆ ಜನ ಪರಿವತರ್ಿತರಾಗುತ್ತಿರುವುದಾದರೂ ಏಕೆ?

ಒಂದೇ ಧರ್ಮದ ಸತ್ತ್ವ ಅರಿಯದೇ ಮತಾಂತರಗೊಳ್ಳುವವರಿರಬಹುದು ಅಥವಾ ಆಮಿಷಗಳಿಗೆ ಬಲಿಯಾಗುವವರೂ ಇರಬಹುದು. ಅಕ್ಕಿ-ಬೇಳೆಗೋ, ಕೂಲಿ ಕೆಲಸದ ಕಾರಣಕ್ಕೋ ಮತಾಂತರಗೊಂಡವರು ಬಲು ಆಸಕ್ತಿಯಿಂದಲೇ ಅಲ್ಲಿನ ವಿಚಾರವನ್ನು ಸ್ವೀಕರಿಸುತ್ತಾರೆಂದೇನಿಲ್ಲ. ಕಾಲ ಪಕ್ವಗೊಂಡರೆ ಅವರು ಸರಕ್ಕನೆ ಸರಿದು ನಿಂತು ಬಿಡುತ್ತಾರೆ. ಆದರೆ ಧರ್ಮದ ಸತ್ತ್ವ ಅರಿಯದೆ ಅನ್ಯ ಮತದ ಥಳಕು-ಬಳುಕಿನ ವಿಚಾರಗಳಿಗೆ ಮರುಳಾಗಿ ಅತ್ತ ಕಾಲಿಟ್ಟವರು ಮಾತ್ರ ಕಟ್ಟರ್ಪಂಥಿಯಾಗುತ್ತಾರಲ್ಲದೇ ಸ್ವಾಮಿ ವಿವೇಕಾನಂದರು ಹೇಳುವಂತೆ ಹಿಂದೂಧರ್ಮಕ್ಕೆ ಶತ್ರುವಾಗಿಯೂ ನಿಂತುಬಿಡುತ್ತಾರೆ!

ಧರ್ಮದ ಚಿಂತನೆಗೆ ವಾಸ್ತವವಾಗಿ ನಮ್ಮಲ್ಲಿ ಅವಕಾಶವೇ ಇಲ್ಲ. ದೇವಸ್ಥಾನಗಳಿಗೆ ಹೋದರೆ ಆರತಿ-ದಕ್ಷಿಣೆಗೆ ಇರುವಷ್ಟು ಮಹತ್ವ ಧಾಮರ್ಿಕ ಚಿಂತನೆಗಳಿಗೆ ಇಲ್ಲ. ಅಷ್ಟಕ್ಕೆ ಪುರಸೊತ್ತೂ ಇತ್ತೀಚಿನ ಜನರಿಗೆ ಇಲ್ಲವೆನ್ನುವುದು ಬೇರೆ ಮಾತು ಬಿಡಿ. ಆದರೆ ನಾವು ಈ ದಿಕ್ಕಿನಲ್ಲಿ ಬದಲಾಗಬೇಕೆನ್ನುವುದಂತೂ ಖಂಡಿತ ಸತ್ಯ. ವಜ್ರದ ಗಣಿಯ ಒಡೆಯರಾಗಿ ಅದನ್ನು ಪರಿಚಯಿಸುವಲ್ಲಿ ಸೋಲುತ್ತಿದ್ದೇವೆ ಎನ್ನುವುದೇ ದುಃಖಕರ. ಇಷ್ಟಕ್ಕೂ ಜನರಿಗೆ ಕಠಿಣವಾದ, ಸವಾಲುಗಳುಳ್ಳ ದಾರಿ ಬೇಕಿಲ್ಲ. ಸೇರಬೇಕಾದ ಗುರಿಯಲ್ಲದೇ ಪ್ರಪಾತಕ್ಕೆ ಬಿದ್ದರೂ ಪರವಾಗಿಲ್ಲ; ಸುಖವಾದ ದಾರಿ ಎಲ್ಲರಿಗೂ ಬೇಕು. ಧರ್ಮದ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ. ಪಶ್ಚಿಮದ ಪ್ರೇಕ್ಷಕರೆದುರು ಮಾತನಾಡುತ್ತ ಸ್ವಾಮಿ ವಿವೇಕಾನಂದರು ಧರ್ಮದ ಮೂರು ಮುಖ್ಯ ಅಡಿಪಾಯಗಳನ್ನು ವಿವರಿಸುತ್ತಾರೆ. ಮೊದಲನೆಯದು ಧರ್ಮದ ತಿರುಳು. ನಿಜವಾಗಿಯೂ ಅದೇ ಸತ್ತ್ವ. ಅದರಲ್ಲಿಯೇ ಪ್ರತಿಯೊಬ್ಬನೂ ಅಂತಿಮವಾಗಿ ತಲುಪಬೇಕೆಲ್ಲಿ ಎಂಬುದರ ವಿವರಣೆಯಿರೋದು. ಇನ್ನು ಇದಕ್ಕೆ ಹೊಂದಿಕೊಂಡಂತೆ ಎರಡನೇ ಆವರಣವೇ ಪುರಾಣಗಳದ್ದು. ಅದು ತಿರುಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಬದುಕಿದವರ ಕಥೆಗಳು. ಕೆಲವೊಮ್ಮೆ ಇದರಲ್ಲಿ ಅತಿರಂಜಕತೆಯೂ ಸೇರಿರುವ ಸಾಧ್ಯತೆ ಇದೆ. ಇನ್ನು ಧರ್ಮದ ಅತ್ಯಂತ ಹೊರ ಆವರಣವೇ ಆಚರಣೆ. ಟೋಪಿ ಹೇಗೆ ಧರಿಸಬೇಕೆಂಬುದರಿಂದ ಹಿಡಿದು ಪ್ರಾರ್ಥನೆ ಹೇಗೆ ಸಲ್ಲಿಸಬೇಕೆಂಬುದರ ನಿಯಮದವರೆಗೂ ಎಲ್ಲವೂ ಇದರಲ್ಲಿಯೇ ಇರೋದು. ಅಂದರೆ ಆಚರಣೆಯ ಈ ಆವರಣ ಅದೆಷ್ಟು ಹೊರಗಿನದ್ದು ಎಂದರೆ ಸ್ವತಃ ಒಳಗಿನ ತಿರುಳು ಮರೆಯಾಗಿರುವಷ್ಟು. ದುರಂತವೆಂದರೆ ನಮ್ಮಲ್ಲಿ ಬಹುತೇಕರು ಈ ಆವರಣದೊಳಗೇ ಸಿಲುಕಿ ನಲುಗುತ್ತಿರುತ್ತೇವೆ. ಅದಕ್ಕಾಗಿಯೇ ಬಡಿದಾಡುತ್ತ, ರಕ್ತ ಹರಿಸುತ್ತ ಕೊನೆಗೆ ತಿರುಳನ್ನೇ ಪಕ್ಕಕಿಟ್ಟು ಸಿಪ್ಪೆಗಾಗಿ ಬೆಂಕಿ ಹಚ್ಚುತ್ತೇವೆ. ಹೌದಲ್ಲವೇನು? ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ನಡೆದ ಘಟನೆ ಹೊರ ಆವರಣವನ್ನು ಉಳಿಸಲು ನಡೆಸಿದ ಕದನ ಎನಿಸುವುದಿಲ್ಲವೇ? ಮೂಲವಸ್ತುವನ್ನು ಮರೆತು ಕವಚಕ್ಕೆ ಹೆಚ್ಚಿನ ಬೆಲೆ ಕೊಟ್ಟಾಗ ಹೀಗಾಗುತ್ತದೆ ಅಷ್ಟೇ. ಸ್ವಾಮಿ ವಿವೇಕಾನಂದರು ಹೇಳುವಂತೆ ಎಲ್ಲ ಮತಗಳ ತಿರುಳೂ ಒಂದೇ, ಆದರೆ ಅದರ ಕವಚಗಳು ಭಿನ್ನ ಭಿನ್ನ ಸ್ವರೂಪ ಪಡಕೊಂಡಿವೆ ಅಷ್ಟೇ.

ಒಂದು ಧರ್ಮದಿಂದ ಮತ್ತೊಂದು ಮತಕ್ಕೆ ಜನರನ್ನು ಸೆಳೆಯುವ ಧಂಧೆ ಮಾಡುವವರೆಲ್ಲ ಈ ಹೊರ ಆವರಣದ ಕಿರಿಕಿರಿಯಲ್ಲಿ ಕಾಲ ಕಳೆಯುವವರಷ್ಟೆ. ಮತಾಂತರವಾಗುವವರದ್ದೂ ಅದೇ ಕಥೆ. ಒಮ್ಮೆ ತಿರುಳನ್ನು ಮುಟ್ಟಿದರೆ ಮತ್ತೆ ಆವರಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಯಾರೂ ಹೋಗಲಾರರು. ಹಾಗಂತ ಆಚರಣೆ ಬೇಡವೆಂದಲ್ಲ. ಅದೂ ಮೆಟ್ಟಿಲಾಗಿ ನಮ್ಮನ್ನೇ ಭಗವಂತನಲ್ಲಿಗೆ ಒಯ್ಯಬಲ್ಲುದು. ಅಲ್ಲಿಯೇ ನಿಲ್ಲಬಾರದು ಅಷ್ಟೇ. ಸ್ವಾಮಿ ವಿವೇಕಾನಂದರು ಈ ಕುರಿತಂತೆ ವಿಸ್ತಾರವಾಗಿ ಮಾತನಾಡುತ್ತ ‘ಪ್ರತಿಯೊಬ್ಬರಿಗೂ ಆರಾಮದಾಯಕ ಮತ-ಪಂಥವೇ ಬೇಕು’ ಎನ್ನುತ್ತಾರೆ. ಭೂಮಿಯ ಮೇಲಿನ ಎಲ್ಲ ವೈಭವಗಳನ್ನೂ, ಸ್ವಾತಂತ್ರ್ಯವನ್ನೂ ಅನುಭವಿಸುತ್ತಲೇ ಅವರು ಭಗವಂತನಿಗೆ ಪ್ರಿಯರಾಗಲು ಯತ್ನಿಸುತ್ತಾರೆ. ವಿವೇಕಾನಂದರ ಬಳಿ ಬಂದ ಪಶ್ಚಿಮದ ಹೆಣ್ಣು ಮಗಳೊಬ್ಬಳು ‘ಭಗವಂತನನ್ನು ಕಾಣಲು ಏನು ಮಾಡಬೇಕು’ ಎಂದಳಂತೆ. ಸಾಕಷ್ಟು ಸಂಪತ್ತು, ಪ್ರತಿಭೆ, ಆಳು-ಕಾಳು, ಮಕ್ಕಳು-ಮರಿಗಳನ್ನು ಹೊಂದಿದ್ದ ಆಕೆ ಹಿಂದೂ ಪಥದಲ್ಲಿ ಸುಲಭವಾದುದೇನಾದರೂ ದಕ್ಕಬಹುದೇನೋ ಎಂದರಸಿ ಬಂದಿದ್ದಳು. ಸ್ವಾಮೀಜಿ ಮುಲಾಜಿಲ್ಲದೇ ನಿನ್ನ ಸಮಸ್ತ ವೈಭವ, ಸಂಸಾರವನ್ನೆಲ್ಲ ತ್ಯಜಿಸಿದರೆ ಭಗವಂತ ದೊರೆಯುತ್ತಾನೆಂದು ತ್ಯಾಗದ ಪರಿಕಲ್ಪನೆ ಕಟ್ಟಿಕೊಟ್ಟರು. ಅದೂ ಸರಿಯೇ ಬಿಡಿ. ವಸ್ತುವೊಂದು ಬೇಕೆಂದು ಮಗುವೂ ಹಠ ಹಿಡಿಯದಿದ್ದರೆ ತಾಯಿಯಾದವಳೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಜಗಜ್ಜನನಿ ಕರಗುವಳೇನು? ವಿವೇಕಾನಂದರ ಮಾತುಗಳಿಂದ ಆ ಹೆಣ್ಣುಮಗಳು ಪ್ರಭಾವಿತಳಾಗುವುದಿರಲಿ ಅವರ ಬಳಿ ಬರುವುದನ್ನೇ ಬಿಟ್ಟಳು. ಮುಂದೊಮ್ಮೆ ಸಿಕ್ಕಾಗ ‘ನನ್ನ ಸಂಪತ್ತಿನಲ್ಲಿ, ಮಕ್ಕಳಲ್ಲಿ, ಆಸ್ತಿಯಲ್ಲೇ ಭಗವಂತನನ್ನು ಕಾಣುವ ಉಪಾಯ ಇದ್ದರೆ ಬೇಕು’ ಎಂದಿದ್ದಳಂತೆ! ಪ್ರತಿಯೊಬ್ಬರಿಗೂ ಭೋಗಿಸಲು ಪೂರ್ಣ ಸ್ವಾತಂತ್ರ್ಯ ನೀಡುವ ಮಾರ್ಗ ಬೇಕು. ಒಂದಕ್ಕಿಂತ ಹೆಚ್ಚು ಮದುವೆಯಾಗಬೇಕೆನ್ನುವ ಸಿನಿಮಾ ನಟರು ಮತಾಂತರವಾಗುವುದೇಕೆ ಗೊತ್ತಾಯಿತಲ್ಲ! ಮನಸೋ ಇಚ್ಛೆ ಬಟ್ಟೆ ಧರಿಸಲು, ಬೇಕಿದ್ದನ್ನು ತಿಂದು ಕುಪ್ಪಳಿಸಲು ಒಂದು ಮಾರ್ಗದಲ್ಲಿ ಅವಕಾಶವಿಲ್ಲವೆಂದೇ ಮತ್ತೊಂದರೆಡೆಗೆ ಧಾವಿಸುವವರೂ ಇದ್ದಾರೆ. ನಾವು ಮಾಡುವ ಕೆಲಸಗಳಿಗೆ ಒಪ್ಪಿಗೆಯ ಮುದ್ರೆಯೊತ್ತುವ ಮತಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇದೆ. ಕಳ್ಳನೊಬ್ಬನಿಗೆ ‘ಕಳ್ಳತನ ಮಾಡುವುದು ಸರಿ’ ಎನ್ನುವ ಪಂಥ ಯಾವಾಗಲೂ ಇಷ್ಟವಾಗುತ್ತದೆ. ಹಾಗೆಯೇ ಡ್ರಗ್ಸ್ ಧಂಧೆಯಲ್ಲಿರುವವರಿಗೂ!

ಭೌತಿಕ ಸುಖವನ್ನು ತ್ಯಜಿಸಿ ಭಗವಂತನೆಡೆಗೆ ನಮ್ಮನ್ನು ಒಯ್ಯಲು ಧರ್ಮ ಬೇಕು ಅಷ್ಟೇ. ತ್ಯಜಿಸುವುದು ಕಷ್ಟವಾದರೂ ಆ ಸುಖವನ್ನು ಮೀರಿದ ಆನಂದವಿದೆ ಎಂದಾದರೂ ಹೇಳುವವರು ಬೇಕಲ್ಲ. ಇರುವ ಸಂಪತ್ತನ್ನೆಲ್ಲ ಕೂಡಿಟ್ಟು ಅರಚುವುದು, ಜಗತ್ತನ್ನೇ ಗೆದ್ದು ಮೆರೆದಾಡಬೇಕೆಂಬ ಹಂಬಲ ಇಟ್ಟುಕೊಳ್ಳುವುದು, ಕೊನೆಗೆ ಇಂದ್ರಿಯಗಳನ್ನು ಸುಸ್ತಾಗುವವರೆಗೆ ಬಳಸಿ, ಅವು ಶಕ್ತಿ ಹೀನವಾದಾಗ ಕಣ್ಣೀರಿಡುವುದು.. ಇವೆಲ್ಲ ಸಹಜ ಬದುಕು. ಊಟ, ನಿದ್ರೆ, ಮೈಥುನಗಳು ಎಲ್ಲ ಪ್ರಾಣಿಗಳಿಗಿರುವಂತೆ ಮನುಷ್ಯನಿಗೂ ಇದೆ. ಆದರೆ ಮನುಷ್ಯ ಇದರಿಂದ ಮೇಲೇರಬೇಕು ಅಷ್ಟೇ ಅಂತ ಮನುಸ್ಮೃತಿಯಲ್ಲೂ ಹೇಳಲಾಗಿದೆಯಲ್ಲ; ಧರ್ಮ ಹೀಗೆ ಮೇಲೇರುವ ದಾರಿ ತೋರುವ ಪ್ರಯತ್ನ ಅಷ್ಟೇ. ಓಶೋ ಸಂಭೋಗದಿಂದ ಸಮಾಧಿಗೆ ಎನ್ನುವಾಗ ಲೈಂಗಿಕ ಕ್ರಿಯೆಗಳಲ್ಲಿಯೇ ರಮಿಸುತ್ತಿರಿ ಎನ್ನುವುದಿಲ್ಲ. ಬದಲಿಗೆ ಅದನ್ನು ಮೀರಿದ ಆನಂದದ ಕಡೆಗೆ ತುಡಿತ ಹೊಂದಿ ಎನ್ನುತ್ತಾನೆ. ದುರಂತವೆಂದರೆ ಎಲ್ಲರೂ ಅವರ ಮಾತಿನ ಮೊದಲರ್ಧದ ಕಡೆಗೆ ಆಕಷರ್ಿತರಾಗುತ್ತಾರೆ ಮತ್ತು ದ್ವಿತೀಯಾರ್ಧವನ್ನು ಜಾಣತನದಿಂದಲೇ ಮರೆತು ಬಿಡುತ್ತಾರೆ. ಏಕೆಂದರೆ ಅದರ ಆಚರಣೆ ಬಲು ಕಷ್ಟ ಅಂತ. ಯಾವ ಮತಗಳು ಮೊದಲಾರ್ಧವನ್ನೇ ಹೆಚ್ಚು ಚಚರ್ಿಸುತ್ತವೋ ಸಾಮಾನ್ಯ ಜನರೆಲ್ಲ ಅತ್ತ ಬೇಗ ಆಕಷರ್ಿತರಾಗುತ್ತಾರೆ. ಇದನ್ನುಳಿದ ಶ್ರೇಷ್ಠ ಮಾರ್ಗವಿದೆ ಎನ್ನುವವರ ವಿರುದ್ಧ ಆಕ್ರೋಶಭರಿತರಾಗುತ್ತಾರೆ. ಕೊನೆಗೆ ಅವರನ್ನೂ ತಮ್ಮ ಮಾರ್ಗಕ್ಕೆ ಕರೆತರಲು ಯತ್ನಿಸಿ ಅವರು ಒಪ್ಪದೇ ಹೋದಾಗ ಕೊಲ್ಲುವ-ಕಡಿಯುವ ನಿರ್ಣಯ ಕೈಗೊಳ್ಳುತ್ತಾರೆ. ಹಿಂದೂಧರ್ಮ ಭಿನ್ನವಾಗಿ ನಿಲ್ಲುವುದೇ ಇಲ್ಲಿ. ಕೆಲವು ಮತ-ಪಂಥಗಳಲ್ಲಿ ಧರ್ಮವೇ ಯುದ್ಧವೆನಿಸಿಕೊಂಡರೆ ನಮ್ಮಲ್ಲಿ ಯುದ್ಧವೂ ಧರ್ಮದ ಆಚರಣೆಯ ಭಾಗವಾಗಿರುವಂತೆ ಹೇಳಿಕೊಡಲಾಗುತ್ತದೆ! ಆದರೆ ಯಾರು ಇಂದ್ರಿಯಗಳ ದಾಸರಾಗಿದ್ದು ಅದನ್ನೇ ಬದುಕೆಂದು ಭಾವಿಸಿಬಿಟ್ಟಿದ್ದಾರೋ ಅವರನ್ನು ಅದರಿಂದ ಹೊರತಂದರೆ ನಿಶ್ಚಿತ ಸಾವು! ಸ್ವಾಮಿ ವಿವೇಕಾನಂದರು ಇದರ ಬಗ್ಗೆ ಹೇಳುತ್ತಾ, ‘ಅನುಕಂಪದಿಂದ ನೀವೇನಾದರೂ ಹಂದಿಯನ್ನು ಊರಿನ ಶ್ರೇಷ್ಠ ಬ್ಯೂಟಿಪಾರ್ಲರ್ಗೆ ಒಯ್ದರೆ ಅದು ಹಂದಿಯ ಪಾಲಿಗೆ ಸಾವೇ ಸರಿ’ ಎನ್ನುತ್ತಾರೆ! ಬಹುಶಃ ಅಲ್ಲಿಂದಲೂ ಮುಕ್ತಿಗೆ ಮಾರ್ಗ ಹುಡುಕಿ ತೋರುವ ಪ್ರಯತ್ನವಷ್ಟೇ ಆಗಬೇಕೇನೋ! ರಾಮಕೃಷ್ಣ ಪರಮಹಂಸರು ಮೀನು ಮಾರುವ ಹೆಂಗಸಿನ ಕಥೆ ಹೇಳುತ್ತಾ, ಪಕ್ಕದೂರಲ್ಲಿ ರಾತ್ರಿ ತಂಗುವ ಅನಿವಾರ್ಯತೆ ಉಂಟಾದಾಗ ಆಕೆಗೆ ಮೆತ್ತನೆಯ ಹಾಸಿಗೆ ನೀಡಲಾಗಿದ್ದರೂ ನಿದ್ದೆ ಬಂದಿರಲಿಲ್ಲವಂತೆ. ಮೀನು ಮಾರುವ ಬುಟ್ಟಿಯನ್ನು ದಿಂಬಿನ ಬದಿಯಲ್ಲಿ ಇಟ್ಟುಕೊಂಡು ಮಲಗಿದಾಗಲಷ್ಟೇ ಆಕೆ ನಿದ್ದೆಗೆ ಜಾರಿದ್ದಂತೆ, ಎನ್ನುತ್ತಾರೆ. ನಾವೆಲ್ಲ ಹಾಗೆಯೇ ಮೀನು ಮಾರುವ ಆ ಹೆಂಗಸಿನಂತೆ. ಭಾರತೀಯ ಪರಂಪರೆ ಶ್ರೇಷ್ಠ ವಿಚಾರಗಳನ್ನೇ ಧಾರೆಯೆರೆದರೂ ನಾವು ಮಾತ್ರ ಆಕರ್ಷಣೀಯವೆನಿಸುವ ಮೀನಿನ ಬುಟ್ಟಿಯೊಂದಿಗೇ ಬದುಕು ಸವೆಸಲು ಹಾತೊರೆಯುತ್ತೇವೆ. ಇಂತಹ ಬದುಕಿಗೆ ಪೂರಕವಾದುದನ್ನು ಸಂಗ್ರಹಿಸುತ್ತ, ಸಂಭ್ರಮಿಸುತ್ತ ನಡೆಯುತ್ತೇವೆ.

ಈ ಕಾರಣಕ್ಕೇ ಸ್ವರ್ಗ ಪ್ರತಿಯೊಬ್ಬನಿಗೂ ಆಕರ್ಷಣೀಯವಾಗಿ ಕಾಣೋದು. ಜಗತ್ತಿನ ಬಹುಪಾಲು ಜನರಿಗೆ ನಮ್ಮನ್ನೂ ಸೇರಿದಂತೆ ಸ್ವರ್ಗವನ್ನು ಸೃಷ್ಟಿಸಿರಬಹುದಾದ ದೇವರ ಕುರಿತ ಚಿಂತೆಗಿಂತ ನಮ್ಮಂತೆ ಆತನ ಸೃಷ್ಟಿಯ ಭಾಗವಾಗಿರುವ ಸ್ವರ್ಗ ಸೇರಿಕೊಳ್ಳುವುದರದ್ದೇ ಚಿಂತೆ. ಏಕೆಂದರೆ ಅನಂತ ವೈಭೋಗದ ನಿಧಿಯಲ್ಲವೇ ಅದು! ಮೀನಿನ ಬುಟ್ಟಿ ಸ್ವರ್ಗಕ್ಕೆ ಹೋದರೂ ಬೇಕೇ ಬೇಕು. ಅದಕ್ಕೆ ಹಲವು ಮತ-ಪಂಥಗಳು ತಮ್ಮ ಅನುಯಾಯಿಗಳಿಗೆ ಶಾಶ್ವತ ಸ್ವರ್ಗವನ್ನು ಶಾಶ್ವತ ನರಕವನ್ನು ತೋರಿಬಿಡುತ್ತವೆ. ‘ನಾನು ಮತ್ತು ನಾನು ಬರೆದ ಪುಸ್ತಕ ಹೇಳಿದಂತೆ ಕೇಳಿದರೆ ಸ್ವರ್ಗಸುಖ. ಇಲ್ಲವಾದರೆ ನರಕದಲ್ಲಿ ಬೇಯಬೇಕು’ ಎಂಬ ಮಾತು ಅದೆಷ್ಟು ಗಾಬರಿ ಹುಟ್ಟಿಸುವುದೆಂದರೆ; ಇಲ್ಲಿ ಮೀನು ಮಾರಿ ನೆಮ್ಮದಿಯ ಬದುಕು ನಡೆಸುವುದು ಬಿಟ್ಟು ಸತ್ತ ಮೇಲೂ ಮೀನಿನ ಬುಟ್ಟಿ ಪಕ್ಕದಲ್ಲಿಯೇ ಇರುವಂತೆ ಮಾಡಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಇಂಥವರಿಂದಾಗಿಯೇ ಜಗತ್ತು ಸಂಕಟದಲ್ಲಿರೋದು. ಇಂದಿನ ಅಶಾಂತಿ-ದುಃಖ, ಸಾವು-ನೋವು, ಬೆಂಕಿ-ಕಾಡ್ಗಿಚ್ಚುಗಳೆಲ್ಲ ಇಂಥವರದ್ದೇ ಕೊಡುಗೆ. ಹಾಗಂತ ನಾನು ಸ್ವರ್ಗವನ್ನು ನೋಡಿ ಬಂದಿದ್ದೇನೆಂದು ಹೇಳುವ ಒಬ್ಬನೂ ಇದುವರೆವಿಗೆ ಅವರಿಗೆ ಸಿಕ್ಕಿಲ್ಲ. ನರಕದಲ್ಲಿ ಬೆಂದು ಬೆಂಡಾಗಿದ್ದೇನೆ ಎಂದು ಯಾರೊಬ್ಬರೂ ಹೇಳಿಲ್ಲ. ಆದರೂ ಅದರ ಆಕಾಂಕ್ಷೆ ಮತ್ತು ಭಯಗಳು ಮಾತ್ರ ಇಂಗಿಯೇ ಇಲ್ಲ. ಒಂದಿಡೀ ಜನಾಂಗವನ್ನು ಹೀಗೆ ಕಾಣದ ವಸ್ತುವಿನ ಆಮಿಷ ತೋರಿಸಿ ಮುನ್ನಡೆಸುವ ನಾಯಕ ಅಸಾಮಾನ್ಯನೇ ಸರಿ.

ಹಿಂದೂಧರ್ಮ ಭಿನ್ನವೆನಿಸುವುದೇ ಇಲ್ಲಿ. ಸ್ವರ್ಗ-ನರಕಗಳ ಕಲ್ಪನೆ ಇಲ್ಲಿಯೂ ಇದೆಯಾದರೂ ಅನ್ಯಮತಗಳಂತೆ ಅವು ಶಾಶ್ವತವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಭುವಿಯ ಮೇಲಿರುವಾಗ ಮಾಡಿದ ಕರ್ಮಕ್ಕನುಸಾರವಾಗಿ ಮರುಜನ್ಮ ಪಡೆದು ಭುವಿಗೇ ಮರಳುತ್ತಾನೆ. ಹಿಂದಿನ ಕರ್ಮಗಳ ಫಲ ಸ್ವರೂಪವಾಗಿ ಮತ್ತಷ್ಟು ಕರ್ಮಗಳನ್ನು ಮಾಡುತ್ತಾನೆ. ಸನ್ಮತಿಗಳಿಂದ ಪ್ರೇರಣೆ ಪಡೆದು ಈ ಕರ್ಮಗಳಿಂದ ಮುಕ್ತವಾಗುವ ಮಾರ್ಗ ಕಂಡುಕೊಳ್ಳುತ್ತಾನೆ. ಕೊನೆಗೊಮ್ಮೆ ಬ್ರಹ್ಮಜ್ಞಾನವನ್ನು ತನ್ನದಾಗಿಸಿಕೊಂಡು ಮುಕ್ತನಾಗುತ್ತಾನೆ. ಅವನನ್ನು ಹೊರಗಿನ ಪ್ರಪಂಚ ಬಾಧಿಸಲಾರದು, ಸಂಪತ್ತು ಸೆಳೆಯಲಾರದು; ಆಳು-ಕಾಳು, ಮಕ್ಕಳು-ಮರಿಗಳು ಅವನನ್ನು ಬಂಧಿಸಲಾರವು. ಅವನು ಯಾರಿಗೂ-ಯಾವುದಕ್ಕೂ ಹೆದರದವನಾಗಿಬಿಡುತ್ತಾನೆ ಏಕೆಂದರೆ ಎಲ್ಲರಲ್ಲೂ ತನ್ನನ್ನೇ ಕಾಣಲಾರಂಭಿಸುತ್ತಾನೆ!

ಹಾಗಂತ ಇವ್ಯಾವುವೂ ಕಾಣದೇ ಇದ್ದ ಭ್ರಾಮಕ ಕಲ್ಪನೆಗಳಲ್ಲ. ಈ ಗುರಿ ತಲುಪಲು ಬೇಕಾದ ವ್ಯವಸ್ಥಿತ ಮಾರ್ಗಸೂಚಿ ಇದೆ. ಅದನ್ನು ಅನುಸರಿಸಿ ಕಂಡುಕೊಂಡ ಮಹಾತ್ಮರು ಆಗಿ ಹೋಗಿದ್ದಾರೆ; ನಮ್ಮ ನಡುವೆಯೂ ಇದ್ದಾರೆ. ಅವರನ್ನು ಗುರುತಿಸುವ, ಅದೇ ಹಾದಿಯಲ್ಲಿ ನಡೆಯುವ ಛಾತಿಯಷ್ಟೇ ನಮಗೆ ಬೇಕಾಗಿದೆ!

Comments are closed.

Leave a Reply