ವಿಭಾಗಗಳು

ಸುದ್ದಿಪತ್ರ


 

ಸಮಸ್ಯೆಯೇ ತಪ್ಪಾಗಿದೆ! ಆ ತಪ್ಪೇ ಬದುಕಿಗೆ ಬೆಳಕಾಗಿದೆ!!

ಅಪ್ಪನಿಗೆ ಮಗನನ್ನು ವೈದ್ಯನನ್ನಾಗಿಸುವ ಹಂಬಲವಿತ್ತು. ಆದರೆ ಒಂಭತ್ತರ ಸ್ಟೀಫನ್ ಅದನ್ನು ಅಲ್ಲಗಳೆದುಬಿಡುತ್ತಿದ್ದ. ಜೀವಶಾಸ್ತ್ರಜ್ಞರು, ತಳಮಟ್ಟದ ವಿವರಣೆ ನೀಡುವಲ್ಲಿ ಸೋಲುತ್ತಾರೆ. ಅಲ್ಲಿ ಕಾಣದ ವಸ್ತುಗಳ ಚಿತ್ರ ಬಿಡಿಸಿ ತೋರುವುದೇ ಹೆಚ್ಚು ಎನ್ನುತ್ತಿದ್ದ. ನಾನು ವಿಜ್ಞಾನಿಯಾಗುತ್ತೇನೆ. ಕಣ್ಣಿಗೆ ಕಾಣದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತೇನೆ ಎಂದು ಕಣ್ತುಂಬಾ ಕನಸು ಕಾಣುತ್ತಿದ್ದ.

ಆ ರೋಗವನ್ನು ‘ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಥಿರೋಸಿಸ್’ ಎನ್ನುತ್ತಾರೆ. ಆಡು ಭಾಷೆಯಲ್ಲಿ ಅಮೆರಿಕನ್ನರು ‘ಲೌಗೇರಿ’ ರೋಗ ಎಂದು ಕರೆದುಕೊಳ್ಳುತ್ತಾರೆ. ಕೂಲಿ ಕಾಮರ್ಿಕ ಯಾಂಕೀ ಎನ್ನುವವನಲ್ಲಿ ಆ ರೋಗ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ರೋಗಿ ಕಾಲುಗಳು ಮೊದಲು ಸ್ವಾಧೀನ ಕಳೆದುಕೊಳ್ಳುತ್ತವೆ. ನಿಧಾನವಾಗಿ ಕೈಗಳು ನಿಶ್ಚೇಷ್ಟಿತವಾಗುತ್ತವೆ. ಈ ಸ್ವಾಧೀನ ಕಳೆದುಕೊಳ್ಳುವ ಪ್ರಕ್ರಿಯೆ ಇಂಚಿಂಚೂ ರೋಗಿಗೆ ಅನುಭವವಾಗುತ್ತದೆ. ಅದೇ ವೇಳೆಗೆ ಆತನ ತಲೆಯ ಮೇಲೆಯೇ ಹಿಡಿತ ತಪ್ಪಿಹೋಗುತ್ತದೆ. ಒಮ್ಮೆ ತಲೆ ಆಯತಪ್ಪಿ ಮುಂದೆ ಬಾಗಿತೆಂದರೆ, ಮತ್ತೆ ಅವನಾಗಿಯೇ ಅದನ್ನು ಮೇಲೆತ್ತಲಾರ. ಬೇರೆ ಯಾರಾದರೂ ಬಂದು ಅದನ್ನೆತ್ತಿ ನಿಲ್ಲಿಸಬೇಕು. ಅಬ್ಬ, ಅದು ಬಾಯ್ಬಿಟ್ಟು ಹೇಳಲಾಗದ ಭೀಕರ ರೋಗ ಬಿಡಿ.

ಅಂತಹುದೇ ರೋಗದಿಂದ ನರಳಿ-ಬಳಲಿ ಬೆಂಡಾದವನು ಸ್ಟೀಫನ್ ಹಾಕಿಂಗ್. ದೇವರ ಲೀಲೆ ಅದೇನೋ ಬಲ್ಲವರಾರು? ದೇಹದ ಎಲ್ಲ ಭಾಗಗಳು ಸ್ವಾಧೀನ ಕಳೆದುಕೊಳ್ಳುತ್ತಾ ಬಂದಂತೆ ಸ್ಟೀಫನ್ ನ ಮೆದುಳು ಚುರುಕಾಗುತ್ತ ಸಾಗಿತು. ಆತನ ಚಿಂತನೆಗಳಿಗೆ ನೀರೆರೆಯಿತು. ಮಿಸುಕಾಡುವ ಕೈ, ತೊದಲುವ ತುಟಿಗಳಿಗೆ ಆದೇಶ ನೀಡುತ್ತಿದ್ದ ಮೆದುಳು ಜಗತ್ತಿನ ಅಚ್ಚರಿಯ ವಿಚಾರಗಳನ್ನು ಹೊರ ಹಾಕಲಾರಂಭಿಸಿತು. ಸ್ಟೀಫನ್ ಹಾಕಿಂಗ್ ಐನ್ಸ್ಟೀನ್ನ ನಂತರ ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಯಾಗಿಬಿಟ್ಟ.

ಗೆಲಿಲಿಯೊ ತೀರಿಕೊಂಡ 300 ವರ್ಷಗಳ ನಂತರ 1942 ರ ಜನವರಿ 8 ರಂದು ಭೂಮಿಗೆ ಬಂದದ್ದು ಸ್ಟೀಫನ್. ಹುಟ್ಟೂರು ಇಂಗ್ಲೆಂಡಿನ ಆಕ್ಸ್ಫಡರ್್. ಹುಟ್ಟುವ ಕಾಲಕ್ಕೆ ಎರಡನೆಯ ಮಹಾಯುದ್ಧ ತೀವ್ರವಾಗಿ ಸಾಗಿತ್ತು. ಜರ್ಮನಿಯ ಕೈ ಮೇಲಾಗಿದ್ದ ಕಾಲಕ್ಕೆ ಇಂಗ್ಲೆಂಡಿನಲ್ಲೆಲ್ಲಾ ರಕ್ತದ ಘಾಟು ಘಾಟು. ಅದೇ ಕಮಟು ವಾಸನೆಯ ನಡುವೆ ಹುಟ್ಟಿದವನು ಸ್ಟೀಫನ್.

ತಂದೆ ವೈದ್ಯರಾಗಿದ್ದರು. ತಾಯಿಯೂ ಸಕರ್ಾರಿ ನೌಕರಿಯಲ್ಲಿದ್ದಳು. ಚಿಕ್ಕಂದಿನಲ್ಲಿಯೇ ಎಲ್ಲ ಕಷ್ಟಗಳನ್ನು ಸಹಿಸಿ ಮಗನನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಬೇಕೆಂಬ ಕನಸು ತಂದೆ-ತಾಯಿಯರಿಗಿತ್ತು. ಪಾಪ, ಸ್ಟೀಫನ್ನ ಬದುಕು ದುರದೃಷ್ಟದ ಮುದ್ದೆ. ವೆಸ್ಟ್ ಮಿನಿಸ್ಟರ್ ಎಂಬ ಪ್ರತಿಷ್ಠಿತ ಶಾಲೆಯ ವಿದ್ಯಾಥರ್ಿ ವೇತನದ ಪರೀಕ್ಷೆಯ ದಿನ ಆತ ಹುಷಾರು ತಪ್ಪಿದ. ಅದರ ಅದರ ಫಲವಾಗಿ ಹತ್ತಿರದಲ್ಲಿಯೇ ಇದ್ದ ಸೇಂಟ್ ಅಲ್ಬನ್ಸ್ ಶಾಲೆ ಸೇರಿದ. ಅವನ ದುರದೃಷ್ಟ ಆ ಶಾಲೆಗೆ ಅದೃಷ್ಟವಾಗಿ ಪರಿಣಮಿಸುವುದೆಂದು ಯಾರೂ ಎಣಿಸಿರಲಿಕ್ಕಿಲ್ಲ. ಸ್ಟೀಫನ್ ಓದಿದ ಆ ಶಾಲೆಗೆ ಇಂದು ಎಲ್ಲಿಲ್ಲದ ಬೇಡಿಕೆ. ಆನ ಮುಗಿಬಿದ್ದು ಆ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ಅಪ್ಪನಿಗೆ ಮಗನನ್ನು ವೈದ್ಯನನ್ನಾಗಿಸುವ ಹಂಬಲವಿತ್ತು. ಆದರೆ ಒಂಭತ್ತರ ಸ್ಟೀಫನ್ ಅದನ್ನು ಅಲ್ಲಗಳೆದುಬಿಡುತ್ತಿದ್ದ. ಜೀವಶಾಸ್ತ್ರಜ್ಞರು, ತಳಮಟ್ಟದ ವಿವರಣೆ ನೀಡುವಲ್ಲಿ ಸೋಲುತ್ತಾರೆ. ಅಲ್ಲಿ ಕಾಣದ ವಸ್ತುಗಳ ಚಿತ್ರ ಬಿಡಿಸಿ ತೋರುವುದೇ ಹೆಚ್ಚು ಎನ್ನುತ್ತಿದ್ದ. ನಾನು ವಿಜ್ಞಾನಿಯಾಗುತ್ತೇನೆ. ಕಣ್ಣಿಗೆ ಕಾಣದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತೇನೆ ಎಂದು ಕಣ್ತುಂಬಾ ಕನಸು ಕಾಣುತ್ತಿದ್ದ.

1

ನಾನು ಗಣಿತ, ಬರಿ ಗಣಿತ ಮತ್ತು ಹೆಚ್ಚು ಗಣಿತ ಅಧ್ಯಯನ ಮಾಡುತ್ತೇನೆ ಎನ್ನುತ್ತಿದ್ದ ಸ್ಟೀಫನ್ನ ಮಾತು ಅವನ ತಂದೆಗೆ ಸರಿ ಬರುತ್ತಿರಲಿಲ್ಲ. ಗಣಿತ ಕಲಿತರೆ ಶಿಕ್ಷಕ ಹುದ್ದೆ ಮಾತ್ರ ಗತಿ ಎನ್ನುತ್ತಾ ಗಣಿತ ಬಿಟ್ಟು ಬೇರೆಯದನ್ನೇ ಕಲಿಯಲು ಪ್ರೋತ್ಸಾಹಿಸಿದರು. ಸರಿ, ತಂದೆಯ ಮಾತುಗಳಂತೆ ನಡೆದ ಸ್ಟೀಫನ್ ರಸಾಯನ ಶಾಸ್ತ್ರ, ಭೌತಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಒಂದಷ್ಟು ಗಣಿತ ಶಾಸ್ತ್ರವನ್ನು ಓದಿಕೊಂಡ.

ಸರಿ ಸುಮಾರು ಅದೇ ಸಂದರ್ಭಕ್ಕೆ ಅವನು ಮನಸ್ಸಿನ ನಿಯಂತ್ರಣದ ವೈಜ್ಞಾನಿಕ ಅಧ್ಯಯನ ನಡೆಸಿದ್ದು. ಅದನ್ನು ವಿಜ್ಞಾನದ ಭಾಷೆಯಲ್ಲಿ ಎಕ್ಸ್ಟ್ರಾ ಸೆನ್ಸರಿ ಪರ್ಫೆಕ್ಷನ್ ಎನ್ನುತ್ತಾರೆ. ಮನಸ್ಸನ್ನು ಹತೋಟಿಯಲ್ಲಿರಿಸಿಕೊಂಡು ದಾಳವನ್ನೆಸೆದು ಇಂಥದೇ ಸಂಖ್ಯೆ ಬೀಳಬೇಕೆಂದರೆ ಹಾಗೆಯೇ ಆಗುತ್ತದೆ. ಆತ ಬಹಳ ಬಾರಿ ಸೋತ, ಕೆಲವು ಬಾರಿ ಗೆದ್ದ. ಮುಂದೊಮ್ಮೆ ಇಂತಹ ಘಟನೆಗಳು ಅಸಾಧ್ಯ ಎಂದು ಹೇಳಿದಾಗ ಆ ಪ್ರಯತ್ನ ಕೈಬಿಟ್ಟ. ಆದರೆ ಅವನು ತೀವ್ರವಾಗಿ ಮನಸ್ಸನ್ನು ಹತೋಟಿಯಲ್ಲಿರಿಸಿಕೊಳ್ಳುವ ಅಭ್ಯಾಸ ಮಾಡುತ್ತಿದ್ದನಲ್ಲ ಅದೇ ಅವನ ಬದುಕಿನ ಚಹರೆಯನ್ನು ಬದಲಾಯಿಸಿದ್ದೆಂದು ಒಪ್ಪಿಕೊಳ್ಳಲೇಬೇಕು. ಮನಸ್ಸು ಹತೋಟಿಗೆ ಬಂದಷ್ಟೂ ಬುದ್ಧಿ ಚುರುಕಾಗುತ್ತದೆ. ಚುರುಕಾದ ಬುದ್ಧಿಯಿಂದ ಯಾವುದು ಅಸಾಧ್ಯ ಹೇಳಿ!

ಸ್ಟೀಫನ್ ಭೌತಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಗಳಿಸಲಾರಂಭಿಸಿದ್ದ. ಮೌಖಿಕ ಪರೀಕ್ಷೆಯಲ್ಲಿ ಅವನು ನೀಡಿದ ಅಪ್ರತಿಮ ಉತ್ತರಗಳಿಂದ ಆಕ್ಸ್ಫಡರ್್ ವಿಶ್ವವಿದ್ಯಾಲಯಕ್ಕೆ ಆಯ್ಕೆಯೂ ಆಗಿದ್ದ. ಅವರಪ್ಪ ತನ್ನ ಕಿವಿಗಳನ್ನು ತಾನೇ ನಂಬಲಿಲ್ಲ, ಅಪಾರ ಬುದ್ಧಿಮತ್ತೆಯುಳ್ಳವರೂ ಆ ವಿಶ್ವವಿದ್ಯಾಲಯದಲ್ಲಿ ಸೀಟು ಗಳಿಸಲು ಹೆಣಗಾಡುತ್ತಾರೆ. ಹೀಗಿರುವಾಗ ಸ್ಟೀಫನ್ ಪರೀಕ್ಷೆಯಲ್ಲಿ ಪಾಸಾಗಿದ್ದು ಅವನಿಗೆ ಅಚ್ಚರಿ ತಂದಿತ್ತು.

ಹದಿನೇಳು ವರ್ಷದವನಾಗಿದ್ದಾಗಲೇ ಅವನು ಜಗತ್ತಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ನ್ಯಾಚುರಲ್ ಸೈನ್ಸ್ ಅಧ್ಯಯನ ಶುರುವಿಟ್ಟಿದ್ದ. ತನಗಿಂತ ವಯಸ್ಸಿನಲ್ಲಿ ದೊಡ್ಡವರಾದವರೊಂದಿಗೆ ಸೇರಿ ಕಲಿಯುತ್ತಿದ್ದ. ಆಗೆಲ್ಲ ಆತ ಸಾಮಾನ್ಯ ಬುದ್ಧಿಮತ್ತೆಯ ಹುಡುಗನಂತಿರುತ್ತಿದ್ದ. ಒಂದಷ್ಟು ಭೌತಶಾಸ್ತ್ರ, ಒಂದಷ್ಟು ಗಣಿತವನ್ನು ಚುರುಕಾಗಿ ಮಾಡುತ್ತಿದ್ದುದು ಬಿಟ್ಟರೆ ಮತ್ತೇನಿಲ್ಲ. ಆದರೆ ತನ್ನ ವ್ಯಕ್ತಿತ್ವದಿಂದಾಗಿ ಎಲ್ಲರ ಗಮನ ಸೆಳೆದಿದ್ದ. ಅವನಿಗೆ ಯಾರೊಂದಿಗೂ ಜಗಳವಿರಲಿಲ್ಲ. ಮುಖ ಯಾವಾಗಲೂ ನಗು-ನಗುತ್ತಿರುತ್ತಿತ್ತು. ಹೀಗಾಗಿ ಯುನಿವಸರ್ಿಟಿಯ ಮೆಚ್ಚಿನ ಹುಡುಗನಾಗಿಬಿಟ್ಟಿದ್ದ.

ಡಾ. ಬರ್ಮನ್ ಸ್ಟೀಫನ್ನನ್ನು ಮೆಚ್ಚುತ್ತಿದ್ದ ಅಧ್ಯಾಪಕರು. ಅವರು ಮಾತ್ರ ಸ್ಪಷ್ಟವಾಗಿ ಹೇಳಿದ್ದರು. ‘ದಿನಕ್ಕೊಂದು ಗಂಟೆ ಓದಿ ಈ ಪರಿಯ ಫಲಿತಾಂಶ ಕೊಡುವ ಹುಡುಗನಿಗೆ ಪದವಿಯ ಭೌತಶಾಸ್ತ್ರ ಮೂಲೆಯ ಕಸ. ಈತ ಮಾತ್ರ ಹೊಸ ಸಾಧನೆ ಮಾಡಬಲ್ಲ. ಜಗತ್ತು ಕಮಲದಗಲದ ಕಂಗಳಿಂದ ನೋಡುವಂತಹ ಸಾಧನೆ ಮಾಡಬಲ್ಲ’.

ಹೌದು. ಬರ್ಮನ್ರ ಮಾತು ನಿಜವಾಯಿತು. ಸ್ಟೀಫನ್ ಹಾಕಿಂಗ್ ಆಡುವ ಒಂದೊಂದು ಮಾತನ್ನು ಹೆಕ್ಕಲು ಜಗತ್ತಿನ ವಿಜ್ಞಾನಿಗಳು ಕಾತುರದಿಂದ ಕಾಯುತ್ತಾರೆ.

ಅಂದ ಹಾಗೆ ಒಂದು ವಿಷಯ ಮರೆತಿದ್ದೆ. ಸ್ಟೀಫನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅವನ ಉಪಾಧ್ಯಾಯರೊಬ್ಬರು ಹೇಳುತ್ತಿದ್ದರು. ‘ಈ ಮನುಷ್ಯ ಎಲ್ಲ ವಿದ್ಯಾಥರ್ಿಗಳಂತೆ ಸಮಸ್ಯೆಗೆ ಉತ್ತರ ಹುಡುಕುವ ಕೆಲಸವನ್ನು ಮಾಡೋಲ್ಲ. ಅದು ಅವನಿಗೆ ಸಲೀಸು. ಅವನು ಸಮಸ್ಯೆಯಲ್ಲಿರುವ ತಪ್ಪನ್ನು ಹುಡುಕುತ್ತಿರುತ್ತಾನೆ.’

ಅದಕ್ಕೆ ಬದುಕೇ ಸಮಸ್ಯೆಯಾದಾಗಲೂ ಅವನು ಹೆದರಲಿಲ್ಲ. ಆ ಸಮಸ್ಯೆಯಲ್ಲಿದ್ದ ತಪ್ಪನ್ನೇ ಹುಡುಕಿ ಅದನ್ನೇ ಬೆಳೆಸಿಕೊಂಡು ಬೆಳೆದುಬಿಟ್ಟ.

Comments are closed.