ವಿಭಾಗಗಳು

ಸುದ್ದಿಪತ್ರ


 

ಸವಾಲುಗಳನ್ನು ಅವಕಾಶವಾಗಿಸಿಕೊಳ್ಳುವ ಚಾಣಾಕ್ಷ ಮೋದಿ!

ಭಾರತ ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿರುವುದರಿಂದ ಪ್ರಬಲವಾದ ಅನೇಕ ರಾಷ್ಟ್ರಗಳು ನಮಗೆ ಶತ್ರವೂ, ಮಿತ್ರನೂ ಏಕಕಾಲಕ್ಕೆ ಆಗಿವೆ. ಯಾರಿಂದ ಶಸ್ತ್ರಗಳನ್ನು ಕೊಳ್ಳುವೆವೋ ಅವರು ನಮಗೆ ಮಿತ್ರರಾಗಿಬಿಟ್ಟರೆ, ಯಾರಿಂದ ಕೊಳ್ಳುವುದಿಲ್ಲವೋ ಅವರು ಶತ್ರುಗಳು.

ಸವಾಲಾಗಿ ಎದುರಾಗಿರುವ ಸಂಗತಿಯನ್ನು ಅವಕಾಶವಾಗಿ ಪರಿವತರ್ಿಸಿಕೊಳ್ಳುವವನು ಬುದ್ಧಿವಂತ. ಅದಕ್ಕೆ ಬುದ್ಧಿಯಂತೂ ಬೇಕೇ ಬೇಕು. ಜೊತೆಗೆ 56 ಇಂಚಿನ ಎದೆಯೂ ಬೇಕು. ಹೌದು. ನಾನು ನರೇಂದ್ರಮೋದಿಯವರ ಬಗ್ಗೆಯೇ ಮಾತನಾಡುತ್ತಿದ್ದೇನೆ. ಕರೋನಾ ಭಾರತಕ್ಕೆ ಅಪ್ಪಳಿಸುವ ಆರಂಭದಲ್ಲಿ ಜನತಾ ಕಫ್ಯರ್ೂ ಘೋಷಿಸಿದ್ದು, ಅದರ ಹಿಂದು-ಹಿಂದೆಯೇ ಲಾಕ್ಡೌನ್ಗಳು ಭಾರತವನ್ನು ಆವರಿಸಿಕೊಂಡಿದ್ದು ಈಗ ಹಳೆಯ ಕಥೆ. ಯಾವೊಬ್ಬ ನಾಯಕನಿಗಾದರೂ ಇಂತಹ ದುಃಸ್ಥಿತಿಗೆ ಕಾರಣರಾದ ವ್ಯಕ್ತಿ ಅಥವಾ ದೇಶದ ಮೇಲೆ ಕೋಪವಿರುವುದು ಸಹಜವೇ. ಹಾಗಂತ ತೀರಿಸಿಕೊಳ್ಳುವುದಾದರೂ ಹೇಗೆ? ಅಮೇರಿಕಾ ತಂಟೆ ಮಾಡಿದ್ದರೆ ಪ್ರಜಾಪ್ರಭುತ್ವ ರೀತಿಯಲ್ಲೇ ಬಡಿದಾಡಬಹುದಿತ್ತೇನೋ; ಎಷ್ಟಾದರೂ ಅದೂ ಪ್ರಜಾಪ್ರಭುತ್ವ ರಾಷ್ಟ್ರವೇ ಅಲ್ಲವೇನು? ಆದರೆ ಚೀನಾ ಹಾಗಲ್ಲ. ಅದು ತನ್ನಿಚ್ಛೆಗೆ ಬಂದಂತೆ ನಡೆಯುವ ಹಠಮಾರಿ ಧೋರಣೆಯ ರಾಷ್ಟ್ರ. ಉತ್ಪಾದನೆಯಲ್ಲಿ ಎಲ್ಲರಿಗಿಂತಲೂ ಮುಂದಿದ್ದೇನೆಂಬ ಧಿಮಾಕು ಬೇರೆ. ಸಣ್ಣ-ಪುಟ್ಟ ರಾಷ್ಟ್ರಗಳನ್ನು ಹಣಕೊಟ್ಟು ಕೊಳ್ಳಬಲ್ಲೆ ಎಂಬ ದುರಹಂಕಾರ. ಅದರೆದುರಿಗೆ ನಾವಾದರೂ ಎಂಥವರು. ದೊಡ್ಡ ಮೊತ್ತದ ವ್ಯಾಪಾರ ಕೊರತೆ ನಮ್ಮಿಬ್ಬರ ನಡುವೆ. ಅವರದ್ದೇ ಸಿದ್ಧಾಂತಗಳ ಮೇಲೆ ನಡೆಯುವ ಪಕ್ಷ ಇಲ್ಲಿ ಕೇರಳದಲ್ಲಿ ಅಧಿಕಾರ ಹಿಡಿದಿದೆಯಲ್ಲದೇ ಈ ಸಿದ್ಧಾಂತವನ್ನು ಮಾತನಾಡುವ ಅನೇಕ ಮಂದಿ ಆಯಕಟ್ಟಿನ ಜಾಗಗಳಲ್ಲಿ ಕುಳಿತು ಭಾರತವನ್ನೇ ವಿರೋಧಿಸುತ್ತಾರೆ. ಇವೆಲ್ಲವನ್ನೂ ವಿರೋಧಿಸಬೇಕಿದ್ದ ಗಾಂಧೀಜಿಯವರ ಹೆಸರು ಹೇಳುವ ಕಾಂಗ್ರೆಸ್ ಪಕ್ಷವಂತೂ ಚೀನಾ ಸಕರ್ಾರದೊಂದಿಗೆ ಒಪ್ಪಂದ ಮಾಡಿಕೊಂಡು ಹಣ ಪಡೆಯುವ ಆರೋಪಕ್ಕೊಳಗಾಗಿ ಸ್ವತಃ ಸುಪ್ರೀಂಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡಿದೆ. ಬೇರೆ ಸಂದರ್ಭಗಳಲ್ಲಿ ಚೀನಾವನ್ನೆದುರಿಸುವ ಮಾತನ್ನು ನರೇಂದ್ರಮೋದಿ ಆಡಿದ್ದರೆ ಇವರುಗಳೇ ವಿರೋಧಿಸಿಬಿಡುತ್ತಿದ್ದರೇನೋ! ಈಗ ಹಾಗಾಗಲಿಲ್ಲ. ಕರೋನಾ ನೆಪ ಬಳಸಿಕೊಂಡು ಚೀನಾಕ್ಕೆ ಸೆಡ್ಡು ಹೊಡೆಯುವ ಆತ್ಮನಿರ್ಭರ ಭಾರತದ ಕನಸನ್ನು ಮೋದಿ ಕಟ್ಟಿಕೊಟ್ಟರು. ಆದರೆ ಅದು ಅಕ್ಷರಶಃ ಚೀನಾ ವಿರುದ್ಧವೇ ಎಂದು ಬಿಂಬಿತವಾಗಲು ಗಾಲ್ವಾನ್ನಲ್ಲಿ ಚೀನಾ ತಂಟೆ ಮಾಡಬೇಕಾಗಿ ಬಂತು. 20 ಸೈನಿಕರ ಹೌತಾತ್ಮ್ಯ ದೇಶದ ಪ್ರಧಾನಿಯನ್ನು ಕಂಗೆಡಿಸಿದ್ದು ನಿಜ. ಆದರದು ವ್ಯರ್ಥವಾಗಲು ಅವರು ಬಿಡಲಿಲ್ಲ. ಹಂತ-ಹಂತವಾಗಿ ಚೀನಾದ ಅಪ್ಲಿಕೇಶನ್ಗಳನ್ನು ನಿಷೇಧಿಸುತ್ತಾ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಸಮರ್ಥವಾದ ಸಂದೇಶವನ್ನು ಕೊಟ್ಟರು. ಟಿಕ್ಟಾಕ್ನಂತಹ ಕಂಪೆನಿಗಳಿಗಂತೂ ಸಾವಿರಾರು ಕೋಟಿಗಳ ನಷ್ಟವಾಯ್ತು. ಸ್ವತಃ ಅಮೇರಿಕಾ, ಯುರೋಪ್ಗಳು ಹುವೈ ಕಂಪೆನಿಯನ್ನು ನಿಷೇಧಿಸುವ ಮಾತನಾಡಿದಮೇಲೆಯಂತೂ ಚೀನಾ ವ್ಯಾಪಾರದ ವಿಷಯದಲ್ಲಿ ಮುಟ್ಟಿ ನೋಡಿಕೊಳ್ಳುವಷ್ಟು ನಷ್ಟ ಅನುಭವಿಸಿತು!

6

ನಿಜವಾದ ಸವಾಲಿದ್ದದ್ದು ರಕ್ಷಣಾ ಇಲಾಖೆಯಲ್ಲಿ. ಭಾರತ ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿರುವುದರಿಂದ ಪ್ರಬಲವಾದ ಅನೇಕ ರಾಷ್ಟ್ರಗಳು ನಮಗೆ ಶತ್ರವೂ, ಮಿತ್ರನೂ ಏಕಕಾಲಕ್ಕೆ ಆಗಿವೆ. ಯಾರಿಂದ ಶಸ್ತ್ರಗಳನ್ನು ಕೊಳ್ಳುವೆವೋ ಅವರು ನಮಗೆ ಮಿತ್ರರಾಗಿಬಿಟ್ಟರೆ, ಯಾರಿಂದ ಕೊಳ್ಳುವುದಿಲ್ಲವೋ ಅವರು ಶತ್ರುಗಳು. ಹಾಗಂತ ಶಸ್ತ್ರಾಸ್ತ್ರಗಳನ್ನು ಕೊಂಡ ಮಾತ್ರಕ್ಕೆ ಮುಗಿಯಲಿಲ್ಲ. ಚೀನಾದ ಪ್ರತಿಭಟನೆ ಕೂಡ ಅದಕ್ಕೆ ಸೇರಿಕೊಳ್ಳುತ್ತದೆ. ನಮ್ಮನ್ನು ಪರೋಕ್ಷವಾಗಿ ಬೆದರಿಸುತ್ತದೆ ಚೀನಾ. ಶಸ್ತ್ರಾಸ್ತ್ರ ಕೊಳ್ಳುವುದಿರಲಿ ಗಡಿಯಲ್ಲಿ ರಸ್ತೆಗೆ ನಾವು ಕೈ ಹಾಕಿದರೆ ಚೀನಾ ಉರಿದುಬೀಳುತ್ತದಲ್ಲ ಅಂಥದ್ದರಲ್ಲಿ ಯಾವ ಸಕರ್ಾರ ತಾನೇ ಮಹತ್ವದ ಒಪ್ಪಂದಕ್ಕೆ ಒಂದಾದಮೇಲೊಂದರಂತೆ ಸಹಿ ಹಾಕಬಲ್ಲದು ಹೇಳಿ? ಗಾಲ್ವಾನ್ನ ಚೀನಾದ ದಾಳಿಯ ನಂತರ ಭಾರತಕ್ಕೆ ಮುಕ್ತ ಅವಕಾಶ ತೆರೆದುಕೊಂಡಂತಾಯ್ತು. ಸೇನಾ ನಾಯಕರುಗಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವ ಆಪತ್ಕಾಲದ ಅವಕಾಶ ಮೋದಿ ಸಕರ್ಾರ ನೀಡಿದ್ದಲ್ಲದೇ ಅಗತ್ಯವಾಗಿ ಬೇಕಾಗಿದ್ದ ಶಸ್ತ್ರಾಸ್ತ್ರಗಳನ್ನು ತುತರ್ು ಖರೀದಿ ಮಾಡಿಬಿಟ್ಟಿತು. ಇಷ್ಟೇ ಆಗಿದ್ದರೆ ದೊಡ್ಡ ಸಂಗತಿಯಾಗಿರುತ್ತಿರಲಿಲ್ಲ. ಎರಡು ದಿನಗಳ ಹಿಂದೆ ರಕ್ಷಣಾ ಇಲಾಖೆಯಲ್ಲಿ ಇನ್ನು ಮುಂದೆ ಆಮದು ಮಾಡಲೇಬಾರದಾಗಿರುವ ನೂರಾ ಒಂದು ವಸ್ತುಗಳನ್ನು ಪಟ್ಟಿ ಮಾಡಿ ಪ್ರಕಟಣೆ ಹೊರಡಿಸಲಾಗಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಬೇಕೆಂದು ನಿಶ್ಚಯವೂ ಮಾಡಲಾಗಿದೆ. ಖಾಸಗಿ ಕಂಪೆನಿಗಳು ಈ ಕ್ಷೇತ್ರದಲ್ಲಿ ಗಮನ ಹರಿಸಿ ಭಾರತವನ್ನು ಆತ್ಮನಿರ್ಭರವಾಗುವತ್ತ ಶ್ರಮಿಸಲು ಸಹಕರಿಸಬೇಕೆಂದು ಕೇಳಿಕೊಳ್ಳಲಾಗಿದೆ. ಕಳೆದ ಐದು ವರ್ಷಗಳಲ್ಲಿ ಸೇನೆಯ ಮೂರು ವಿಭಾಗಗಳು ಈ ಪಟ್ಟಿಯೊಳಗಿನ ವಸ್ತುಗಳ ಖರೀದಿಗೆ ಸುಮಾರು ಮೂರುವರೆ ಲಕ್ಷಕೋಟಿ ರೂಪಾಯಿ ವ್ಯಯಿಸಿವೆ. ಈ ಆಧಾರದ ಮೇಲೆಯೇ ಮುಂದಿನ ಆರರಿಂದ ಏಳು ವರ್ಷಗಳಲ್ಲಿ ಸುಮಾರು ನಾಲ್ಕು ಲಕ್ಷಕೋಟಿ ರೂಪಾಯಿಯ ವಸ್ತುಗಳ ಉತ್ಪಾದನೆ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಅಭಿಪ್ರಾಯಪಟ್ಟಿದೆ. ಈ ವರ್ಷವೇ ಸುಮಾರು 52ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗುವುದೆಂದು ರಕ್ಷಣಾ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ನೆನಪಿಡಿ. ಹೀಗೆ ಆಮದು ನಿಷೇಧಿತ ವಸ್ತುಗಳಲ್ಲಿ ಸಣ್ಣ-ಪುಟ್ಟ ಬೋಲ್ಟು-ನೆಟ್ಟುಗಳು ಸೇರಿಕೊಂಡಿದೆ ಎಂದು ಭಾವಿಸಬೇಡಿ. ಇವುಗಳಲ್ಲಿ ಆಟರ್ಿಲರಿ ಗನ್ನುಗಳು, ಯುದ್ಧೋಪಯೋಗಿ ರೈಫಲ್ಗಳು, ಸೋನಾರ್ಗಳು, ಟ್ರಾನ್ಸ್ಪೋಟರ್್ ಏರ್ಕ್ರಾಫ್ಟ್, ರೆಡಾರ್, ಹಗುರ ಯುದ್ಧ ಹೆಲಿಕಾಪ್ಟರ್ಗಳು ಕೂಡ ಸೇರಿವೆ.

ಇದರಲ್ಲೇನು ವಿಶೇಷ? ಎಂದು ಅನೇಕರು ಹುಬ್ಬೇರಿಸಬಹುದು. ಮುಂದಿನ ಐದಾರು ವರ್ಷಗಳಲ್ಲಿ ಈ ನಾಲ್ಕುಲಕ್ಷ ಕೋಟಿ ರೂಪಾಯಿಯನ್ನು ವಿದೇಶಕ್ಕೆ ಕೊಡದೇ ಇಲ್ಲಿನ ಕಂಪೆನಿಗಳಿಗೇ ತಮ್ಮ ಚಟುವಟಿಕೆಯನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಂತಾಗುವುದು. ಜೊತೆಗೆ ಖರೀದಿ ಖಾತ್ರಿಯಾಗಿರುವುದರಿಂದ ಆ ಕಂಪೆನಿಗಳು ಮುಲಾಜಿಲ್ಲದೇ ವಸ್ತುಗಳನ್ನು ಉತ್ಪಾದಿಸುವುದಲ್ಲದೇ ಹೊಸ ಆವಿಷ್ಕಾರಗಳತ್ತ ಗಮನವೀಯಲೂ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಇದು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿ ಭಾರತವನ್ನು ಶಸ್ತ್ರ ಆಮದು ರಾಷ್ಟ್ರದಿಂದ ಶಸ್ತ್ರ ರಫ್ತು ರಾಷ್ಟ್ರವಾಗಿ ಪರಿವತರ್ಿಸುವಲ್ಲಿ ಸಹಾಯ ಮಾಡಲಿದೆ. ಇದೇ ಹೊತ್ತಲ್ಲಿ ಮತ್ತೊಂದು ಸಂಭ್ರಮದ ಸುದ್ದಿ ಎಂದರೆ ಚೀನಾ ಭಾರತಕ್ಕೆ ರಫ್ತು ಮಾಡುವ ಪ್ರಮಾಣ ಜನವರಿಯಿಂದೀಚೆಗೆ ಶೇಕಡಾ 25ರಷ್ಟು ಕಡಿಮೆಯಾಗಿದೆ. ಅದೇ ವೇಳೆಗೆ ಭಾರತ ಸುಮಾರು ಶೇಕಡಾ 7ರಷ್ಟು ಹೆಚ್ಚು ರಫ್ತು ಮಾಡಿದೆ. ಚೀನಾದ ಸ್ಮಾಟರ್್ಫೋನ್ಗಳ ಮಾರುಕಟ್ಟೆ ಭಾರತದಲ್ಲಿ ಶೇಕಡಾ 81ರಿಂದ 72ಕ್ಕೆ ಕುಸಿದಿರುವುದು ಒಳ್ಳೆಯ ಬೆಳವಣಿಗೆ.

7

ಚೀನಾ ಭಾರತೀಯ ಸೈನಿಕರ ಮೇಲೆ ಕೈ ಮಾಡಿ ದೊಡ್ಡ ಸಮಸ್ಯೆಯನ್ನು ಮೈಮೇಲೆಳೆದುಕೊಂಡಿದೆ. ಅದರಲ್ಲೂ ಮೋದಿ ಎಂತಹ ನಾಯಕತ್ವ ಪ್ರದಶರ್ಿಸುತ್ತಿದ್ದಾರೆಂದರೆ ಪ್ರತ್ಯಕ್ಷ ಯುದ್ಧಭೂಮಿಯಲ್ಲೂ ಚೀನಾ ಹಿಂದಡಿಯಿಡುವಂತೆ ಮಾಡುತ್ತಿದ್ದಾರಲ್ಲದೇ ಪರೋಕ್ಷ ಯುದ್ಧದಲ್ಲೂ ಚೀನಾಕ್ಕೆ ಬೆವರಿಳಿಸುತ್ತಿದ್ದಾರೆ. ಎಸೆದ ಕಲ್ಲುಗಳನ್ನು ಮನೆಗೆ ಇಟ್ಟಿಗೆ ಮಾಡಿಕೊಳ್ಳುವುದರಲ್ಲಿ ಮೋದಿ ನಿಸ್ಸೀಮರು ಎನ್ನುವುದು ಸುಳ್ಳಲ್ಲ!

Comments are closed.