ವಿಭಾಗಗಳು

ಸುದ್ದಿಪತ್ರ


 

ಸಿದ್ದರಾಮಯ್ಯನ ತಗೊಂಡ್ರೆ ಆತ್ಮಹತ್ಯೆ, ಕ್ಲೀನ್ಚಿಟ್, ಗೂಂಡಾಗಿರಿ ಫ್ರೀ!

ಮೈಸೂರಿನಲ್ಲಿ ರಾಜು, ಶಿವಮೊಗ್ಗದಲ್ಲಿ ವಿಶ್ವನಾಥ್ ಶೆಟ್ಟಿ, ಮಡಿಕೇರಿಯಲ್ಲಿ ಕುಟ್ಟಪ್ಪ, ಬೆಂಗಳೂರಿನಲ್ಲಿ ರುದ್ರೇಶ್, ಹೊನ್ನಾವರದಲ್ಲಿ ಪರೇಶ್, ಮಂಗಳೂರಿನಲ್ಲಿ ದೀಪಕ್, ಬಶೀರ್, ಸಂತೋಷ್ ಪೂಜಾರಿ ಹೀಗೆ ಸಾಲು-ಸಾಲು ಹತ್ಯೆಗಳು ನಡೆದುಹೋದವು. ಕೇರಳದ ಕೊಲೆಗಡುಕ ಮಾಫಿಯಾ ಕನರ್ಾಟಕವನ್ನು ಸದ್ದಿಲ್ಲದೇ ಆವರಿಸಿಕೊಳ್ಳುತ್ತಿರುವುದು ಸಿದ್ದರಾಮಯ್ಯನವರ ಅತಿ ಕೆಟ್ಟ ಆಡಳಿತದ ಕಣ್ಣಿಗೆ ಗೋಚರಿಸುತ್ತಿರುವ ಅಂಶ. ಐದೇ ವರ್ಷದ ಅಧಿಕಾರಾವಧಿಯಲ್ಲಿ ಕನರ್ಾಟಕದ ಜನತೆ ಐವತ್ತು ವರ್ಷ ಮರೆಯಲಾಗದ ಆಡಳಿತವನ್ನು ಮುಖ್ಯಮಂತ್ರಿಗಳು ನೀಡಿಬಿಟ್ಟಿದ್ದಾರೆ.

ಸಿದ್ದರಾಮಯ್ಯನವರು ಇನ್ನೈದು ವರ್ಷದ ಅಧಿಕಾರವನ್ನು ಎಲ್ಲರ ಬಳಿ ಬೇಡುತ್ತಿದ್ದಾರೆ. ಆರಂಭದಲ್ಲಿ ಅವರು ಅಧಿಕಾರಕ್ಕೆ ಬಂದಾಗ ಅನೇಕರ ಕಂಗಳಲ್ಲಿ ಆಶಾಕಿರಣವಿತ್ತು. ಕಲ್ಪನೆಗಳು ಗರಿಬಿಚ್ಚಿ ಹಾರಾಡುತ್ತಿದ್ದವು. ಸುದೀರ್ಘಕಾಲ ಅಧಿಕಾರದ ಸನಿಹದಲ್ಲೇ ಇದ್ದು ಸಮಾನತೆಯ ಕಲ್ಪನೆಯನ್ನು ಹೊತ್ತಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ರಾಜ್ಯಕ್ಕೊಂದು ಒಳ್ಳೆಯ ಆಡಳಿತ ಕೊಡುತ್ತಾರೆಂಬ ವಿಶ್ವಸವೂ ದೃಢವಾಗಿತ್ತು. ಆದರೆ, ಮುಖ್ಯಮಂತ್ರಿಗಳು ಆರಂಭದಲ್ಲಿಯೇ ಎಡವಿಬಿಟ್ಟರು. ಕೈಯಲ್ಲಿ ನಿಂಬೆಹಣ್ಣು ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡುವ ಕಲ್ಪನೆಯಿಂದ ಶುರುಮಾಡಿ ಕಾಗೆ ಕುಳಿತಿದ್ದಕ್ಕೆ ಕಾರನ್ನೇ ಬದಲಾಯಿಸುವವರೆಗೆ ಅವರ ಮೂಢನಂಬಿಕೆಯ ಪರಿಯನ್ನು ನೋಡಿ ಸಂಪ್ರದಾಯವಾದಿಯೂ ನಾಚಿ ನೀರಾಗಿದ್ದ. ತಮ್ಮ ಸುತ್ತಲೂ ಬಿಟ್ಟುಕೊಂಡ ಎಡ ಚಿಂತಕರ ಪಡೆ ಅವರ ಪ್ರತಿಯೊಂದು ನಿಧರ್ಾರದಲ್ಲೂ ಮೂಗು ತೂರಿಸುತ್ತಿತ್ತು. ಮಾಧ್ಯಮ ಸಲಹೆಗಾರರಾಗಿ ಅವರು ದಿನೇಶ್ ಅಮೀನ್ ಮಟ್ಟುವನ್ನು ಆರಿಸಿಕೊಂಡ ನಂತರವಂತೂ ಮುಂದೇನು ನಡೆಯಲಿದೆ ಎಂಬುದು ನಿಶ್ಚಿತವಾಗಿಬಿಟ್ಟಿತ್ತು. ಇಡಿಯ ದೇಶ ನರೇಂದ್ರಮೋದಿಯವರ ನೇತೃತ್ವದಲ್ಲಿ ಆಥರ್ಿಕತೆಗೆ ಬಲವನ್ನು ತುಂಬುತ್ತಾ ವಿಕಾಸದ ಹೆದ್ದಾರಿಯಲ್ಲಿ ಓಡುತ್ತಿದ್ದರೆ ಅದನ್ನು ಜೀಣರ್ಿಸಿಕೊಳ್ಳಲಾಗದ ಸಿದ್ದರಾಮಯ್ಯನವರ ಪಡೆ ಅದೇ ವಿಕಾಸದ ರಾಜ ಮಾರ್ಗದಲ್ಲಿ ರಿವಸರ್್ ಗೇರ್ನಲ್ಲಿ ಓಡಲಾರಂಭಿಸಿತು. ಇದರಿಂದಾಗಿಯೇ ಬಜೆಟ್ಗಳಲ್ಲಿ ಜನ ಮೆಚ್ಚುವ ಯೋಜನೆಗಳನ್ನು ಕೊಡುವ ಭರದಲ್ಲಿ ಜನೋಪಯೋಗಿ ಯೋಜನೆಗಳನ್ನು ಬದಿಗೆ ಸರಿಸಿಬಿಟ್ಟರು. ಅವರ ಈ ನಿಧರ್ಾರದಿಂದಾಗಿಯೇ ರಾಜ್ಯದ ಆಥರ್ಿಕತೆ ಹಳ್ಳ ಹಿಡಿದು ಅಧಿಕಾರಾವಧಿ ಕೊನೆಗೊಳ್ಳುವ ವೇಳೆಗೆ ಸುಮಾರು ಮೂರು ಲಕ್ಷಕೋಟಿಯಷ್ಟು ಸಾಲದ ಹೊರೆ ರಾಜ್ಯದ ಜನತೆಯ ತಲೆಯ ಮೇಲೆ ಬಿದ್ದಿರೋದು. ಹೊರಗಿನಿಂದ ಬಂದ ಸಾಲವಷ್ಟೇ ಅಲ್ಲ; ಒಳಗಿನ ಲೂಟಿಯೂ ಕೂಡ ಅಷ್ಟೇ ಪ್ರಮಾಣದಲ್ಲಿ ಆಗಿದೆ. ಟಿಂಬರ್ಲಾಬಿಗೆ ಮಣಿದು ಸಾರಾಸಗಟಾಗಿ ಕಾಡನ್ನು ನಾಶಗೈಯ್ಯಲಾಯ್ತು. ರಸ್ತೆ ಮೇಲ್ಸೇತುವೆಗಳ ನೆಪದಲ್ಲಿ ಬೆಂಗಳೂರಿನ ಸತ್ತ್ವವನ್ನು ಹೀರಲಾಯ್ತು. ಬೃಹತ್ ನೀರಾವರಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಲಾಯ್ತು. ಕೊನೆಗೆ ಅಧಿಕಾರ ಕಳೆಯುವ ವೇಳೆಗೆ ಜಿಲ್ಲಾ ಪ್ರವಾಸ ಕೈಗೊಂಡು ಒಂದು ಉದ್ಘಾಟನೆಗೆ ಹತ್ತಾರು ಶಂಕು ಸ್ಥಾಪನೆಗಳನ್ನು ಸೇರಿಸಿ ಮೆರೆಯಲಾಯ್ತು. ಬಹುಶಃ ಕನರ್ಾಟಕ ಕಂಡ ಕೆಟ್ಟ ಆಡಳಿತ ಇದೇ ಎಂದು ದಾಖಲಾಗಬಹುದೇನೋ!

1

ಭೌತಿಕ ಸಂಪತ್ತನ್ನು ಲೂಟಿ ಮಾಡಿ ಕೊಬ್ಬಿ ಬೆಳೆದಿರುವ ಸಕರ್ಾರ ಈ ನಾಡಿನ ಜನತೆಯ ಆತ್ಮವಿಶ್ವಾಸವನ್ನು ಸ್ಟ್ರಾ ಹಾಕಿ ಹೀರಿಬಿಟ್ಟಿದೆ. ಜನರ ಆತ್ಮವಿಶ್ವಾಸ ಪಕ್ಕಕ್ಕಿಡಿ ಜನರ ರಕ್ಷಣೆಗೆ ನಿಂತ ಪೊಲೀಸರಿಗಾದರೂ ಆತ್ಮವಿಶ್ವಾಸ ಉಳಿದಿದೆಯಾ? ಹಾಗೆ ಸುಮ್ಮನೆ ಸಿದ್ದರಾಮಯ್ಯನವರ ಅಧಿಕಾರಾವಧಿಯ ಒಂದಷ್ಟು ಘಟನೆಗಳನ್ನು ಪಟ್ಟಿ ಮಾಡುತ್ತೇನೆ. ಅವರು ಅಧಿಕಾರಕ್ಕೆ ಬಂದ ಆರಂಭದಲ್ಲಿ ಗುಲ್ಬಗರ್ಾದ ಸ್ಟೇಶನ್ ಬಜéಾರ್ನ ಪಿಎಸ್ಐ ಮಲ್ಲಿಕಾಜರ್ುನ್ ಬಂಡೆ ಮುನ್ನಾ ಎಂಬ ಸುಪಾರಿ ಕಿಲ್ಲರ್ ಒಬ್ಬನನ್ನು ಅಟ್ಟಿಸಿಕೊಂಡು ಹೋಗಿದ್ದರು. ಮನೆಯಲ್ಲಿ ಅಡಗಿದ್ದ ಮುನ್ನ ಪೊಲೀಸರನ್ನು ಕಂಡೊಡನೆ ಪರಾರಿಯಾಗಲೆತ್ನಿಸಿದ. ಬಂಡೆ ಅವನ ಕಾಲ್ಗಳಿಗೆ ಗುಂಡು ಹೊಡೆದು ಅವನನ್ನು ಬೀಳಿಸಿದರು. ಅತ್ತಲಿಂದ ದಾಳಿ ತೀವ್ರಗೊಂಡಿತು. ಮುನ್ನಾ ಮತ್ತು ಪೊಲೀಸರ ಗುಂಡಿನ ಚಕಮಕಿಯ ನಡುವೆ ಮುನ್ನಾ ಹೆಣವಾದರೆ ಇತ್ತ ಮಲಿಕಾಜರ್ುನ್ ಬಂಡೆಯೂ ತೀರಿಕೊಂಡಿದ್ದರು. ಘಟನೆಯ ಅತ್ಯಂತ ಮಹತ್ವದ ಅಂಶವೆಂದರೆ ಮಲ್ಲಿಕಾಜರ್ುನ್ ಬಂಡೆಯನ್ನು ಹೊಕ್ಕಿದ್ದ ಗುಂಡು ಮುನ್ನಾನ ಪಿಸ್ತೂಲಿನಿಂದಾಗಿರದೇ ಪೊಲೀಸರ ಪಿಸ್ತೂಲಿನ ಗುಂಡಾಗಿತ್ತು. ಈ ಸಾವಿನಲ್ಲಿ ಐಜಿಪಿ ವಜéೀರ್ಅಹ್ಮದ್ರ ಕೈವಾಡವಿದೆಯೆಂದು ಆರೋಪ ಬಂದಿತ್ತಾದರೂ ಸಕರ್ಾರ ತನ್ನ ಸಂಸ್ಥೆಗಳ ಮೂಲಕ ತನಿಖೆ ನಡೆಸಿ ಅವರಿಗೆ ಕ್ಲೀನ್ಚಿಟ್ ಕೊಟ್ಟುಬಿಟ್ಟಿತು. ಅದರ ಹಿಂದು ಹಿಂದೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್ಐ ಜಗದೀಶ್ ಬೆಳಿಗ್ಗೆ ಸುಮಾರು 11 ಗಂಟೆಗೆ ಕಳ್ಳರಿಬ್ಬರನ್ನು ನಡುರಸ್ತೆಯಲ್ಲಿ ಅಟ್ಟಿಸಿಕೊಂಡು ಹೋದರು. ಕಾಲ್ಜಾರಿ ಎಡವಿ ಬಿದ್ದ ಸಮಯವನ್ನು ನೋಡಿಕೊಂಡು ಕಳ್ಳ ಅವರ ಹೊಟ್ಟೆಗೆ ಚೂರಿಯಿಂದ ಇರಿದುಬಿಟ್ಟ. ಅದೇ ರಸ್ತೆಯಲ್ಲಿ ಜಗದೀಶ್ ರಕ್ತದ ಮಡುವಿನಲ್ಲಿ ಬಿದ್ದರು, ಹೆಣವಾಗಿ ಹೋದರು. ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ಸಕರ್ಾರ ನಡಕೊಂಡ ರೀತಿ ಹೇಗಿತ್ತು ಗೊತ್ತೇನು? ಮೊಹಮ್ಮದ್ ಕಬೀರ್ ಎಂಬ ದನಗಳ್ಳ ಅರ್ಧರಾತ್ರಿಯಲ್ಲಿ ಶೃಂಗೇರಿ-ಕಾರ್ಕಳ ಮಧ್ಯೆ ಕದ್ದ ದನವನ್ನು ಸಾಗಿಸುತ್ತಿದ್ದಾಗ ನಕ್ಸಲ್ ನಿಗ್ರಹ ಪಡೆಯ ಕೈಗೆ ಸಿಕ್ಕುಬಿದ್ದ. ಪೊಲಿಸ್ ಅಧಿಕಾರಿ ನವೀನ್ ನಾಯ್ಕ್ ಕಬೀರನ ವಿಚಾರಣೆಗೆ ಪ್ರಯತ್ನಿಸಿದಾಗ ಆತ ತಪ್ಪಿಸಿಕೊಂಡು ಓಡಲಾರಂಭಿಸಿದ. ಸಹಜ ವಿಚಾರಣೆಗೂ ನಿಲ್ಲದೇ ಓಡಿದ ಈ ವ್ಯಕ್ತಿಯ ಮೇಲೆ ಅನುಮಾನದಿಂದ ನವೀನ್ ಗುಂಡು ಹಾರಿಸಿದರು. ಆತ ಹೆಣವಾದ. ಮುಂದೇನಾಯ್ತು ಗೊತ್ತೇನು? 2012 ರಲ್ಲಿ ತನ್ನ ಶೌರ್ಯಕ್ಕೋಸ್ಕರ ರಾಷ್ಟ್ರಪತಿ ಪುರಸ್ಕಾರ ಪಡೆದಿದ್ದ ಕಾನ್ಸ್ಟೇಬಲ್ ನವೀನ್ ನಾಯ್ಕ್ರನ್ನು ದನಗಳ್ಳನ ಜೊತೆಗಾರನ ಕಂಪ್ಲೇಟ್ ಆಧಾರದ ಮೇಲೆ ಸಕರ್ಾರ ಬಂಧಿಸಿಬಿಟ್ಟಿತು. ಅಷ್ಟೇ ಅಲ್ಲ. ದನ ಕದ್ದು ಸಾಗಿಸುತ್ತಿದ್ದ ಕುರಿತಂತೆ ಮಂಗಳೂರಿನ ವ್ಯಾಪ್ತಿಯಲ್ಲಿ ಕುಖ್ಯಾತನಾಗಿದ್ದ ಕಬೀರನ ಮನೆಗೆ ಹತ್ತು ಲಕ್ಷ ರೂಪಾಯಿಯ ಪರಿಹಾರವನ್ನು ಘೋಷಿಸಿತು. ಇದು ಪೊಲೀಸರ ಮನಸ್ಥೈರ್ಯವನ್ನು ಕದಡಿಬಿಟ್ಟಿತ್ತು. ಸಿದ್ದರಾಮಯ್ಯನವರ ಧಾಷ್ಟ್ರ್ಯಕ್ಕೆ ತಾವಿನ್ನು ಎದುರಾಡಲಾಗದೆಂಬ ಮನಸ್ಥಿತಿ ಅವರಲ್ಲಿ ನಿಮರ್ಾಣವಾಗಿತ್ತು. ಅಷ್ಟಾದರೂ ಕರ್ತವ್ಯದಲ್ಲಿ ಪ್ರಾಮಾಣಿಕತೆಮೆರೆದ ಕೂಡ್ಲಿಗಿಯ ಡಿವೈಎಸ್ಪಿ ಅನುಪಮಾ ಶೆಣೈ ಮಂತ್ರಿ ಪರಮೇಶ್ವರ್ ನಾಯಕ್ರ ಮಾತನ್ನು ಕೇಳಲಿಲ್ಲವೆಂಬ ಕಾರಣಕ್ಕೆ ಶೋಷಣೆಗೊಳಗಾದರು. ಆಕೆಯ ಪ್ರತಿಭಟನೆ ಅರಣ್ಯರೋದನವಾಯ್ತು. ಕೊನೆಗೆ ಆಕೆ ರಾಜಿನಾಮೆ ಬಿಸುಟು ಸಕರ್ಾರಿ ವ್ಯವಸ್ಥೆಯಿಂದಲೇ ಹೊರಬರಬೇಕಾಗಿ ಬಂತು. ತನ್ನ ಕಾರ್ಯವ್ಯಾಪ್ತಿಯಲ್ಲಿ ಕಠಿಣವಾಗಿದ್ದು ನೂರು ಕೋಟಿ ರೂಪಾಯಿ ಹಗರಣವನ್ನು ಬಯಲಿಗೆಳೆದ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ಳನ್ನು ಸಾರ್ವಜನಿಕವಾಗಿಯೇ ಗೂಂಡಾಗಳು ಬಡಿದರು. ಆಕೆಯ ಬೆಂಬಲಕ್ಕೆ ನಿಲ್ಲಬೇಕಿದ್ದ ಸಕರ್ಾರ ಘಟನೆಯ ಐದೇ ದಿನಗಳ ನಂತರ ಆಕೆಗೊಂದು ನೋಟಿಸ್ ಜಾರಿಮಾಡಿ ಆಕೆ ಇನ್ನೆಂದೂ ಉಸಿರೆತ್ತದಂತೆ ಮಾಡಿತು. ಇದೇ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರಿಗೆ ಮುಖ್ಯಮಂತ್ರಿಗಳ ಆಪ್ತನೆಂಬ ಒಂದೇ ಕಾರಣಕ್ಕೆ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷನೂ ಆಗಿದ್ದ್ದ ಮರಿಗೌಡ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದ. ಶಿಖಾ ತಿರುಗಿ ಬೀಳಲಾರರು ಎಂದೆಣಿಸಿತ್ತು ಸಕರ್ಾರ. ಆದರೆ ಮರಿಗೌಡನ ವಿರುದ್ಧ ಜಿಲ್ಲಾಧಿಕಾರಿಗಳು ತೀವ್ರವಾಗಿಯೇ ದನಿಯೆತ್ತಿದ್ದರಿಂದ ಮೈಸೂರಿನ ಜನ ಬೀದಿಗಿಳಿದರು. ಮರಿಗೌಡ ಮುಖ್ಯಮಂತ್ರಿಗಳ ಸುಪದರ್ಿಯಲ್ಲೇ ಅನೇಕ ದಿನಗಳ ಕಾಲ ಬಚ್ಚಿಟ್ಟುಕೊಂಡಿದ್ದ. ಗೂಂಡಾಗಳನ್ನು ರಕ್ಷಿಸುವುದು ಸಿದ್ದರಾಮಯ್ಯನವರಿಗೆ ಇಂದು ಸಿದ್ಧಿಸಿರುವ ಕಲೆಯೇನಲ್ಲ! ಅದು ಅನೂಚಾನವಾಗಿ ಬಂದಿರುವ ಸಾಮಥ್ರ್ಯ.

2

ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಹಾಮಸ್ತಕಾಭಿಷೇಕ ಉತ್ಸವದಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ತಡೆಯಲು ಪ್ರಯತ್ನಿಸಿದ್ದನ್ನು ಸಿದ್ದರಾಮಯ್ಯನ ಸಕರ್ಾರ ಸಹಿಸಲೇ ಇಲ್ಲ. ಮಹಾಮಸ್ತಕಾಭಿಷೇಕಕ್ಕೂ ಕೆಲವು ದಿನಗಳ ಮುನ್ನ ಏಕಾಕಿ ಆಕೆಗೆ ವಗರ್ಾವಣೆಯ ಆದೇಶ ಹೊರಡಿಸಿತ್ತು. ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಬಂದು ಆಕೆಗೆ ಆರು ತಿಂಗಳೂ ಆಗಿರಲಿಲ್ಲ. ಹಾಗಂತ ಆಕೆಯೋರ್ವಳೇ ಅಲ್ಲ. ಎಂ.ವಿ ಜಯಂತಿ, ವಿ.ಚೈತ್ರ, ಎಸ್.ಬಿ. ಶಟ್ಟಣ್ಣವರ್, ಎಂ.ವಿ ವೆಂಕಟೇಶ್, ಕೆ.ರಾಜೇಂದ್ರ, ಬಿ.ಆರ್.ಮಮತಾ ಇವರೆಲ್ಲರನ್ನೂ ಬಲು ದಿಟ್ಟ ಅಧಿಕಾರಿಗಳೆಂಬ ಕಾರಣಕ್ಕೆ ರಾತ್ರೋ ರಾತ್ರಿ ವಗರ್ಾವಣೆ ಮಾಡಲಾಗಿತ್ತು. ಎಸ್ಪಿ ಭೂಷಣ್ ಗುಲಾಬ್ರಾವ್ ಬೋಸರ್ೆ ಮಂತ್ರಿಯೊಬ್ಬರೊಂದಿಗೆ ಕಠಿಣವಾಗಿ ನಡೆದುಕೊಂಡಿದ್ದರೆಂಬ ಕಾರಣಕ್ಕೆ ಆರು ತಿಂಗಳೊಳಗೆ ಎತ್ತಂಗಡಿಯಾಗಿದ್ದರು. ಐಪಿಎಸ್ ಅಧಿಕಾರಿಯಾಗಿ ತನ್ನ ಕರ್ತವ್ಯ ಶೈಲಿಗೆ ಹೆಸರಾಗಿದ್ದ ರೂಪ ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡಿನ ರಾಜಕಾರಣಿ ಶಶಿಕಲಾಳಿಗೆ ವಿಶೇಷ ಸವಲತ್ತು ದೊರೆಯುತ್ತಿದೆ ಎಂದು ಆರೋಪಿಸಿದ್ದರು. ರಾಜಕಾರಣಿಗಳ ವರ್ತನೆಯ ವಿರುದ್ಧ ಮುಲಾಜಿಲ್ಲದೇ ಮಾತನಾಡುತ್ತಿದ್ದ ಆಕೆಯನ್ನು ಸಿದ್ದರಾಮಯ್ಯನವರು ಗೌರವಿಸಿ ಆದರಿಸುವುದನ್ನು ಬಿಟ್ಟು ಸಂಚಾರ ನಿಯಂತ್ರಣ ವಿಭಾಗಕ್ಕೆ ವಗರ್ಾಯಿಸಿ ಕೈತೊಳೆದುಕೊಂಡುಬಿಟ್ಟರು. ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದ ಸೋನಿಯಾ ನಾರಂಗ್ನೊಂದಿಗೂ ಸಕರ್ಾರ ಇದೇ ರೀತಿಯಲ್ಲಿ ನಡೆದುಕೊಂಡಿತ್ತು. ಅಂದರೆ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಭಾಗ್ಯಗಳೊಂದಿಗೆ ಪ್ರಾಮಾಣಿಕರಿಗೆ ಎತ್ತಂಗಡಿ ಭಾಗ್ಯವನ್ನು ಕರುಣಿಸಿದ್ದಾರೆಂಬುದನ್ನು ಮರೆಯುವಂತಿಲ್ಲ.  ಬಹುಶಃ ಇವೆಲ್ಲ ಮುನ್ಸೂಚನೆಯ ಅರಿವಿದ್ದೇ ಜನಸ್ನೇಹಿ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ ರವಿ ಪ್ರಾಮಾಣಿಕರಿಗೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಬದುಕುವ ಯೋಗ್ಯತೆ ಇಲ್ಲವೆಂದು ನಿರ್ಧರಿಸಿಬಿಟ್ಟಿದ್ದರೇನೋ! ಕೋಲಾರ ಭಾಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ರವಿ ಬೆಂಗಳೂರಿನ ಭೂಗಳ್ಳರ ವಿರುದ್ಧ ಗುಟುರು ಹಾಕಿದ ಕೆಲವೇ ದಿನಗಳಲ್ಲಿ ತಮ್ಮ ಕೋಣೆಯಲ್ಲಿ ಹೆಣವಾಗಿ ಕಂಡು ಬಂದರು. ಮುಖ್ಯಮಂತ್ರಿಗಳ ಆಪ್ತರೇ ಈ ಸಾವಿನ ಪಾಲುದಾರರಾಗಿದ್ದುದು ತಿಳಿದಿರುವಾಗಲೂ ಅವರು ಕ್ಲೀನ್ಚಿಟ್ ಕೊಡುವುದರಲ್ಲಿ ಹಿಂದೆ ಬೀಳಲಿಲ್ಲ. ಹತ್ಯೆಯೆಂದು ಸಾಬೀತು ಪಡಿಸಲು ಇದ್ದ ಎಲ್ಲ ಸಾಕ್ಷ್ಯಗಳನ್ನು ನಾಶಮಾಡಿ ಆನಂತರ ಸಿಬಿಐ ತನಿಖೆಗೆ ರವಿಯವರ ಸಾವನ್ನು ಒಪ್ಪಿಸಿದ್ದು ಸಿದ್ದರಾಮಯ್ಯನವರ ಆಡಳಿತದ ಚಾಕಚಕ್ಯತೆಗೆ ಸಾಕ್ಷಿ. ಯಾವ ಸಾಕ್ಷ್ಯದ ಅಗತ್ಯವೂ ಇಲ್ಲದಂತೆ ಡಿವೈಎಸ್ಪಿ ಗಣಪತಿ ಸ್ಥಳೀಯ ಚಾನೆಲ್ನ ಕ್ಯಾಮೆರಾಗಳ ಮುಂದೆ ತನಗೆ ಕಿರುಕುಳ ಕೊಡುತ್ತಿದ್ದ ವ್ಯಕ್ತಿಗಳ ಹೆಸರನ್ನು ಹೇಳಿಯೇ ಮಡಿಕೇರಿಯ ಹೊಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಹತ್ಯೆಯಲ್ಲಿ ಗೃಹಸಚಿವ ಜಾಜರ್್ರ ನೇರ ಪಾಲುದಾರಿಕೆಯಿತ್ತು. ಮುಖ್ಯಂಮಂತ್ರಿಗಳು ವಿಧಾನಸೌಧದಲ್ಲಿ ತನ್ನ ಮಿತ್ರನ ಪರವಾಗಿ ಅರಚಾಡಿ ಅವರಿಗೆ ಕ್ಲೀನ್ಚಿಟ್ ಕೊಟ್ಟು ಗಣಪತಿಯವರ ಸಾವಿಗೆ ವಂಚನೆ ಮಾಡಿದರು. ಇಂದು ರಾಜ್ಯದಲ್ಲಿ ಪೊಲೀಸ್ ಇಲಾಖೆ ನಿಶ್ಯಕ್ತವಾಗಿದೆ. ಕಳ್ಳನೊಬ್ಬ ರಾಜಧಾನಿಯಲ್ಲೇ ಪೊಲೀಸರಿಗೆ ಬಡಿದು ಅವರ ಪಿಸ್ತೂಲನ್ನು ಕಸಿದುಕೊಂಡು ಹೋಗಿಬಿಡಬಲ್ಲಷ್ಟು ಮಟ್ಟಕ್ಕೆ ಬೆಳೆದಿದ್ದಾನೆ. ಕಾಯುವವರದ್ದೇ ಈ ಗತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು!

3

ಮೈಸೂರಿನಲ್ಲಿ ರಾಜು, ಶಿವಮೊಗ್ಗದಲ್ಲಿ ವಿಶ್ವನಾಥ್ ಶೆಟ್ಟಿ, ಮಡಿಕೇರಿಯಲ್ಲಿ ಕುಟ್ಟಪ್ಪ, ಬೆಂಗಳೂರಿನಲ್ಲಿ ರುದ್ರೇಶ್, ಹೊನ್ನಾವರದಲ್ಲಿ ಪರೇಶ್, ಮಂಗಳೂರಿನಲ್ಲಿ ದೀಪಕ್, ಬಶೀರ್, ಸಂತೋಷ್ ಪೂಜಾರಿ ಹೀಗೆ ಸಾಲು-ಸಾಲು ಹತ್ಯೆಗಳು ನಡೆದುಹೋದವು. ಕೇರಳದ ಕೊಲೆಗಡುಕ ಮಾಫಿಯಾ ಕನರ್ಾಟಕವನ್ನು ಸದ್ದಿಲ್ಲದೇ ಆವರಿಸಿಕೊಳ್ಳುತ್ತಿರುವುದು ಸಿದ್ದರಾಮಯ್ಯನವರ ಅತಿ ಕೆಟ್ಟ ಆಡಳಿತದ ಕಣ್ಣಿಗೆ ಗೋಚರಿಸುತ್ತಿರುವ ಅಂಶ. ಈ ಅಧಿಕಾರದ ಪಡಸಾಲೆಯ ಭಾಗಗಳಾಗಿರುವ ಮಂತ್ರಿಗಳ, ಶಾಸಕರ ಮಕ್ಕಳ ಗೂಂಡಾ ವರ್ತನೆ ಇದಕ್ಕೆ ಸೇರಿಕೊಂಡಿರುವಂತಹ ಮತ್ತೊಂದು ಕೊಂಡಿಯಷ್ಟೇ. ಶಾಸಕ ಹ್ಯಾರಿಸ್ನ ಮಗ ಮೊಹಮ್ಮದ್, ವಿದ್ವತ್ ಎಂಬ ತರುಣನನ್ನು ನಡುರಸ್ತೆಯಲ್ಲಿ ಥಳಿಸಿದ್ದು ನೋಡಿದರೆ ಕನರ್ಾಟಕದ ಭವಿಷ್ಯವೇನೆಂದು ಕಣ್ಣೆದುರು ರಾಚುತ್ತಿದೆ. ಐದೇ ವರ್ಷದ ಅಧಿಕಾರಾವಧಿಯಲ್ಲಿ ಕನರ್ಾಟಕದ ಜನತೆ ಐವತ್ತು ವರ್ಷ ಮರೆಯಲಾಗದ ಆಡಳಿತವನ್ನು ಮುಖ್ಯಮಂತ್ರಿಗಳು ನೀಡಿಬಿಟ್ಟಿದ್ದಾರೆ. ಅವರಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಈ ಗೂಂಡಾಗಿರಿಯ ವೈಭವದ ನರ್ತನಕ್ಕೆ ತಡೆಯೊಡ್ಡಲು ಇನ್ನು ಅದೆಷ್ಟು ವರ್ಷಗಳು ಬೇಕೋ!

ಪಾಪದ ಕೊಡ ಇಷ್ಟೆಲ್ಲಾ ತುಂಬಿದ್ದಾಗ್ಯೂ ಇನ್ನೈದು ವರ್ಷ ಅಧಿಕಾರ ಕೊಡಿರೆಂದು ಕೇಳುತ್ತಾರಲ್ಲಾ ಅದ್ಯಾವ ಭಂಡ ಧೈರ್ಯ ಇವರಿಗೆ!!

Comments are closed.