ವಿಭಾಗಗಳು

ಸುದ್ದಿಪತ್ರ


 

ಸುಳ್ಳಿಗೆ ಸಾವಿರ ಜನ ಬೇಕು, ಸತ್ಯ ಒಬ್ಬಂಟಿಯೇ!!

ಎಡಪಂಥೀಯ ಬುದ್ಧಿಜೀವಿ ನಗರ ನಕ್ಸಲರು ಕಡಿಮೆ ಪ್ರತಿಕ್ರಿಯೆ ವ್ಯಕ್ತವಾಗುವ ಜನಸಮೂಹಗಳನ್ನು ಮಾತ್ರ ಎದುರುಹಾಕಿಕೊಳ್ಳುತ್ತಾರೆ, ಕೊಚ್ಚಿ-ಕೊಲೆಗೈಯ್ಯುವ ಜನಾಂಗಗಳನ್ನಲ್ಲ ಎಂಬುದು ಈ ನಾಡಿನ ಪುಟ್ಟ ಮಗುವಿಗೂ ಗೊತ್ತಿರುವ ಸಂಗತಿ.

ಹೊಸದೊಂದು ವರಾತ ಶುರುವಾಗಿದೆ. ಹಿಂದೂಗಳ ಸಹಕಾರಕ್ಕೆ ಯಾರೂ ಬರುವುದಿಲ್ಲ ಅಂತ. ಇದು ಸಕರ್ಾರ ಬಿಜೆಪಿಯದ್ದಿದ್ದಾಗಲೆಲ್ಲಾ ಕೇಳಿ ಬರುವ ಕೂಗು. ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಇವರೆಲ್ಲಾ ಹಿಂದೂಗಳ ಪ್ರತಿನಿಧಿಗಳಾಗಿರುವುದರಿಂದ ತಳಮಟ್ಟದ ಪ್ರತಿಯೊಂದು ಸಮಸ್ಯೆಗೂ ಇವರು ಧಾವಿಸಿ ಬಂದುಬಿಡಬೇಕೆಂದು ನಮ್ಮೊಳಗೆ ತುಡಿತವಿರುತ್ತದೆ. ಇತ್ತೀಚೆಗೆ ಅದು ಹೆಚ್ಚಾಗುತ್ತಲೇ ಹೋಗುತ್ತಿದೆ. ತಾನು ಮಾಡುವ ಕೆಲಸಕ್ಕೆ ಅಧಿಕಾರದಲ್ಲಿರುವವರು ಸಹಕಾರಕ್ಕೆ ಬರಲಿಲ್ಲವೆಂದರೆ ಅವರನ್ನು ಸೋಲಿಸುವುದೇ ತಮ್ಮ ಗುರಿ ಎನ್ನಲು ಈ ಜನ ಹೇಸುವುದಿಲ್ಲ. ಅಷ್ಟೇ ಅಲ್ಲ. ಅವರನ್ನು ಸೋಲಿಸಿದ ನಂತರ ಅಧಿಕಾರಕ್ಕೆ ಬರುವ ವ್ಯಕ್ತಿ ತಮ್ಮ ಸಹಕಾರಕ್ಕೆ ಬಂದುಬಿಡುತ್ತಾನಾ ಎಂಬ ಸಾಮಾನ್ಯ ಕಲ್ಪನೆಯೂ ಅವರಿಗಿಲ್ಲ.

6

ಇಷ್ಟೂ ಪೀಠಿಕೆ ಏಕೆಂದರೆ ಇತ್ತೀಚೆಗೆ ಸುವರ್ಣ ಚಾನೆಲ್ನ ಸುದ್ದಿಸಂಪಾದಕರಾದ ಅಜಿತ್ ಹನುಮಕ್ಕನವರ್ ಅವರ ಕುರಿತಂತೆ ಬಹಳ ಚಚರ್ೆಗಳಾಗುತ್ತಿವೆ. ಭಗವಾನ್ ಎಂಬ ಹುಚ್ಚು ಲೇಖಕನೊಬ್ಬ ಶ್ರೀರಾಮನ ಕುರಿತಂತೆ ಆಡಿದ ಮಾತುಗಳ ವಿಶ್ಲೇಷಣೆಗೆ ಕುಳಿತಾಗ ಅಜಿತ್ ಮುಂದಿಟ್ಟ ವಾದ ಮಾಮರ್ಿಕವಾಗಿತ್ತು. ಎಡಪಂಥೀಯ ಬುದ್ಧಿಜೀವಿ ನಗರ ನಕ್ಸಲರು ಕಡಿಮೆ ಪ್ರತಿಕ್ರಿಯೆ ವ್ಯಕ್ತವಾಗುವ ಜನಸಮೂಹಗಳನ್ನು ಮಾತ್ರ ಎದುರುಹಾಕಿಕೊಳ್ಳುತ್ತಾರೆ, ಕೊಚ್ಚಿ-ಕೊಲೆಗೈಯ್ಯುವ ಜನಾಂಗಗಳನ್ನಲ್ಲ ಎಂಬುದು ಈ ನಾಡಿನ ಪುಟ್ಟ ಮಗುವಿಗೂ ಗೊತ್ತಿರುವ ಸಂಗತಿ. ಸಾಮಾಜಿಕ ಜೀವನವನ್ನು ಒಪ್ಪಿಕೊಂಡ ನಂತರ ಪ್ರತಿಯೊಬ್ಬರೂ ಪ್ರಶ್ನಾರ್ಹರೇ. ಶಂಕರಾಚಾರ್ಯರು ಚಂಡಾಲನನ್ನು ದೂರ ಸರಿ ಎಂದದ್ದನ್ನು ಯಾರಾದರೂ ಪ್ರಶ್ನಿಸಿದರೆ ಅವನನ್ನು ಕೊಂದುಬಿಡುವ ಮಾತನಾಡುವುದು ಖಂಡಿತ ಸರಿಯಲ್ಲ. ಬದುಕಿನ ವಿಶ್ಲೇಷಣೆಗಳಿಂದಲೇ ಶ್ರೇಷ್ಠವಾದ ಅನುಭವದ ನವನೀತ ಹೊರಬರುವುದು. ಆದರೆ, ಕೆಲವು ವ್ಯಕ್ತಿಗಳು ಮಾತ್ರ ಪ್ರಶ್ನಾತೀತರೆಂದು ಜಗತ್ತೆಲ್ಲಾ ಒಪ್ಪಿಕೊಳ್ಳಬೇಕೆನ್ನುವುದು ಪ್ರಜ್ಞಾವಂತ ಸಮಾಜಕ್ಕೆ ಹೇಳಿ ಮಾಡಿಸಿದ್ದಲ್ಲ. ಈ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ಮೆಚ್ಚಬೇಕಾದ್ದೇ. ಭಗವಾನ್ ರಾಮನ ಕುರಿತಂತೆ ಅಪದ್ಧದ ಮಾತುಗಳನ್ನಾಡಿದಾಗ ಸಮರ್ಥ ಹಿಂದೂ ಕಡಿಯುವ, ಕೊಚ್ಚುವ ಮಾತನ್ನಾಡಲಿಲ್ಲ; ಬದಲಿಗೆ ರಾಮಾಯಣವನ್ನು ಮರುದಶರ್ಿಸುವ ಪ್ರಯತ್ನ ಮಾಡಿ ರಾಮನಿಗೆ ಇನ್ನೂ ಹೆಚ್ಚು ಹತ್ತಿರವಾದ. ರಾಮನ ಗುಣಗಳು ಬಹುತೇಕ ತರುಣರನ್ನು ಆಕಷರ್ಿಸಿದವು. ರಾಮಾಯಣದ ಪ್ರವಚನಗಳಿಗೆ ಯೂಟ್ಯೂಬ್ನಲ್ಲಿ ಭಾರಿ ಬೇಡಿಕೆ ಉಂಟಾದವು. ಇದು ಟೀಕೆಗೆ ಹಿಂದೂ ಪ್ರತಿಕ್ರಿಯಿಸುವ ರೀತಿ. ಹೀಗಾಗಿಯೇ ಸಹಸ್ರಾರು ವರ್ಷಗಳಿಂದ ಕ್ರೂರಿ ಮತಾನುಯಾಯಿಗಳ ಆಕ್ರಮಣದ ನಂತರವೂ ಧರ್ಮ ಬಲಾಢ್ಯವಾಗಿ ನಿಂತಿದೆ. ಆದರೆ, ಎಲ್ಲಾ ಮತಗಳು ಹೀಗೆಯೇ ಇರುತ್ತವೆ ಎಂದುಕೊಳ್ಳಬೇಡಿ. ಕೆಲವು ಮತಗಳಂತೂ ನಿಜಕ್ಕೂ ಬಾಲ್ಯದಿಂದಲೇ ಅಫೀಮಿನಂತೆ ತುರುಕಲ್ಪಡುವ ವಿಚಾರಗಳೇ. ತಮ್ಮನ್ನು ಬಿಟ್ಟು ಮತ್ತೊಬ್ಬರು ಬದುಕಲೇಬಾರದು ಎನ್ನುವ ಪ್ರಗತಿ ವಿರೋಧಿ ಚಿಂತನೆಗಳಿಂದ ತುಂಬಿರುವ ಈ ಮತ-ಪಂಥಗಳಿಗೆ ಸ್ಥಾಪಿತ ಸತ್ಯಗಳನ್ನು ತಾಳಿಕೊಳ್ಳುವ ತಾಕತ್ತೂ ಇರುವುದಿಲ್ಲ. ಈ ದಾಖಲುಗೊಂಡ ಸಂಗತಿಗಳನ್ನು ಪ್ರಶ್ನಿಸಿದೊಡನೆ ಅವರ ಶ್ರದ್ಧೆಗೆ ಭಂಗಬಂದುಬಿಡುವುದೆಂಬ ಹೆದರಿಕೆಯಿಂದ ಗಾಬರಿಗೊಂಡುಬಿಡುತ್ತಾರೆ. ಮುಂದಿನ ಪೀಳಿಗೆ ಈ ಮತದಿಂದಲೇ ವಿಮುಖರಾಗಿಬಿಡುವ ಹೆದರಿಕೆ ಅವರನ್ನು ಕಾಡುತ್ತದೆ. ಹೀಗಾಗಿಯೇ ಮತರಕ್ಷಣೆಯ ವಿಚಾರದಲ್ಲಿ ಕ್ರೌರ್ಯವನ್ನು ಅವರು ಎಂದೂ ವಿರೋಧಿಸುವುದೇ ಇಲ್ಲ.

7

ಗುಜರಾತಿನ ದಂಗೆಗಳ ಹೊತ್ತಿನಲ್ಲಿ ಕೈಲಿ ಕತ್ತಿ ಹಿಡಿದ ಹಿಂದೂವೊಬ್ಬನ ಚಿತ್ರವನ್ನು ಕಂಡೊಡನೆ ಬಹುತೇಕ ಹಿಂದೂಗಳು ನಾಚಿಕೆಯಿಂದ ತಲೆತಗ್ಗಿಸಿಬಿಡುತ್ತಾರೆ. ಆದರೆ ಮಸೀದಿಯಿಂದ ಹೊರಬಂದು ಅಮರ್ ಜವಾನ್ ಸ್ಮಾರಕವನ್ನು ಕಾಲಿನಿಂದು ಒದ್ದು ಪುಡಿಗೈಯ್ಯುತ್ತಿರುವ ಮುಸಲ್ಮಾನನ್ನು ಕಂಡಾಗ ಅವರಲ್ಲಿ ಅದೆಷ್ಟು ಜನ ಬೆಸಗೊಳ್ಳುತ್ತಾರೋ ದೇವರೇ ಬಲ್ಲ. ಚಿಂತನಶೀಲ ಸಮಾಜಕ್ಕೆ ಇವೆಲ್ಲವೂ ಬಹುಮುಖ್ಯ ಅಂಶಗಳಾಗುತ್ತವೆ. ಕಡಿಯುವ, ಕೊಚ್ಚುವ, ಕೊಲ್ಲುವ, ನಾಶಮಾಡುವ, ಪುಡಿಗೈಯ್ಯುವ ಇಂಥದ್ದೇ ಮಾತುಗಳನ್ನಾಡುವಂತಹ ಜನಾಂಗಗಳಿಗೆ ಇವೆಲ್ಲವೂ ಮುಖ್ಯವೆನಿಸುವುದಿಲ್ಲ. ತಾವು ನಂಬಿದ್ದನ್ನು ಜಗತ್ತೆಲ್ಲಾ ಒಪ್ಪಬೇಕು ಎಂಬುದಷ್ಟೇ ಅವರ ಸಿದ್ಧಾಂತ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರಲ್ಲ ರಾಷ್ಟ್ರನಿಮರ್ಾಣಕ್ಕೆ ಮುಸಲ್ಮಾನನ ದೇಹ ಮತ್ತು ವೇದಾಂತದ ಬುದ್ಧಿಯಿರಬೇಕು. ಅದರರ್ಥ ವೈಚಾರಿಕ ಬುದ್ಧಿ ಇರಬೇಕು ಮತ್ತು ಆಚರಿಸುವ ಶ್ರದ್ಧೆ ಇರಬೇಕು. ವೈಚಾರಿಕ ಪ್ರಜ್ಞೆಯಿಲ್ಲವಾದರೆ ಬರೀ ಕೂಗಾಟ-ಹಾರಾಟಗಳಷ್ಟೇ ಬದುಕಾಗಿಬಿಡುತ್ತದೆ. ಹೀಗಾಗಿಯೇ ಜಗತ್ತೆಲ್ಲವನ್ನೂ ತಮ್ಮವರನ್ನಾಗಿ ಪರಿವತರ್ಿಸಿಕೊಂಡ ನಂತರ ತಮ್ಮ-ತಮ್ಮೊಳಗೆ ಕಿತ್ತಾಟ ಮಾಡುವುದು ಅಂಥವರಿಗೆ ರೂಢಿಯಾಗಿಬಿಡುತ್ತದೆ. ಅಜಿತ್ ಹನುಮಕ್ಕನವರ್ ವಿಚಾರದಲ್ಲಂತೂ ಇದು ಸ್ಪಷ್ಟವಾಗಿ ಎದ್ದು ಕಂಡಿತ್ತು. ಯಾರ ಹೆಸರನ್ನೂ ಉಲ್ಲೇಖಿಸದೇ ಅಜಿತ್ ಹೇಳಿದ ವಿಚಾರವನ್ನು ತಾವೇ ಮೈಮೇಲೆಳೆದುಕೊಂಡಿದ್ದು ಮೊದಲನೆಯ ತಪ್ಪಾದರೆ ಮಂಗಳೂರು ಮುಸ್ಲೀಮ್ಸ್ ಎನ್ನುವ ಮುಖಪುಟದ ಪೇಜೊಂದು ಅಜಿತ್ನ ಮಗುವಿಗೆ ಬೇರೊಂದು ಅಪ್ಪನನ್ನು ಹುಡುಕಿಕೊ ಎಂದು ಅವನ ಪತ್ನಿಗೆ ಹೇಳಿದ ಮಾತುಗಳನ್ನು ಸಭ್ಯ ಸಮಾಜ ಸಹಿಸಿಕೊಂಡೀತಾದರೂ ಹೇಗೆ?! ದುರದೃಷ್ಟಕರವೆಂದರೆ ಯಾವೊಬ್ಬ ಬುದ್ಧಿಜೀವಿಯೂ ಈ ಮಾತುಗಳ ವಿರೋಧಕ್ಕೆ ಬರಲೇ ಇಲ್ಲ. ಸದಾ ಕಾಲ ಸ್ತ್ರೀಯರ ಪರವಾಗಿ ನಿಂತು ಹೋರಾಟ ಮಾಡುವ ನಾಟಕವಾಡುವ ಇವರಿಗೆಲ್ಲಾ ಒಂದು ಸಮಾಜದೊಂದಿಗೆ ಮಾತ್ರ ಕದನ ಮಾಡುವ ಉತ್ಸಾಹ. ಖಂಡಿತ ಸಮಸ್ಯೆಯಿಲ್ಲ. ಹಿಂದೂ ಸಮಾಜ ಇಂತಹ ಅನೇಕ ಜಯಚಂದ್ರರನ್ನು ನೋಡಿದೆ. ಮಲ್ಲಪ್ಪ ಶೆಟ್ಟಿ ವೆಂಕಟ್ರಾಯರಂಥವರಿಗೂ ನಮ್ಮಲ್ಲೇನೂ ಕೊರತೆಯಿಲ್ಲ. ಕಂಸನಂತ ರಾಕ್ಷಸರನ್ನು ಸಿಂಹಾಸನದಿಂದೆಳೆದು ಕೊಂದು ಬಿಸಾಡಿದ ಕೃಷ್ಣ ನಮ್ಮ ಆದರ್ಶ. ರಾವಣನ ವಧೆಗೆ ಸಾಮಾನ್ಯ ವಾನರರ ಪಡೆಯನ್ನೇ ಕಟ್ಟಿದ ರಾಮ ಆದರ್ಶ. ಮಾವಳಿ ಪೋರರ ಸಹಕಾರದಿಂದ ಮೊಘಲರ ಸಂತಾನವನ್ನೇ ನಾಶಗೈಯ್ಯಲುಪಕ್ರಮಿಸಿದ ಶಿವಾಜಿಯನ್ನು ನಾವು ಮರೆತಿಲ್ಲ. ಖಂಡಿತ ಎಲ್ಲಾ ಸವಾಲುಗಳನ್ನು ನಾವು ಮುಲಾಜಿಲ್ಲದೆ ಎದುರಿಸುತ್ತೇವೆ. ನಮ್ಮ ವಾದವನ್ನು ಸೌಮ್ಯವಾಗಿ ಒಪ್ಪಿಸಬೇಕಾದವರಿಗೆ ಒಪ್ಪಿಸುತ್ತೇವೆ. ತಂಟೆ ಮಾಡಿದವರಿಗೆ ಖಂಡಿತ ಉತ್ತರಿಸುತ್ತೇವೆ. ಆದರೆ, ಭಾರತ ಬಲವಾಗಲು ನಾವೆಲ್ಲರೂ ಜೊತೆಯಲ್ಲಿ ನಡೆದುಕೊಂಡು ಹೋಗಬೇಕೆಂಬುದನ್ನು ಎಲ್ಲಾ ಸಮಾಜದವರೂ ಅರಿತುಕೊಳ್ಳಬೇಕು. ದಲಿತರು ಮತ್ತು ಮೇಲ್ವರ್ಗದವರ ನಡುವೆ ಬೆಂಕಿ ಹಚ್ಚುವ ಕಾಯಕವನ್ನು ಮುಸಲ್ಮಾನರು ಕೈಬಿಡಬೇಕು. ಅನವಶ್ಯಕವಾಗಿ ಮುಸಲ್ಮಾನರ ವಿರುದ್ಧ ಕೂಗಾಡುವುದನ್ನು ಕೇಸರಿ ಪಡೆಗಳು ತಡೆಯಬೇಕು. ಹಾಗೆಯೇ ಅಜಿತ್ರಂತಹ ಪತ್ರಕರ್ತರ ಮೇಲೆ ಈ ರೀತಿಯ ಸಭ್ಯ ಸಮಾಜದ ಲಕ್ಷಣವೇ ಅಲ್ಲದ ಪೋಸ್ಟ್ಗಳನ್ನು ಹಾಕುವ ಅಯೋಗ್ಯರಿಗೆ ಮುಸಲ್ಮಾನರ ಹಿರಿತಲೆಗಳು ಬುದ್ಧಿ ಹೇಳಲೇಬೇಕು. ಇಲ್ಲವಾದರೆ ಬರುವ ದಿನಗಳು ಬಲುಕಠೋರ.

8

ಈಗ ಹೇಳಲೇಬೇಕಾದ ಮತ್ತೊಂದು ವಿಷಯ ಬಾಕಿ ಇದೆ. ರಾಷ್ಟ್ರದ ಕೆಲಸ ಮತ್ತು ಧರ್ಮದ ಕೆಲಸ ಮಾಡುವವರಾರೂ ತಾವೆಂದೂ ಸಂಕಟಕ್ಕೆ ಸಿಲುಕುವುದೇ ಇಲ್ಲ ಎಂಬ ಧಾಷ್ಟ್ರ್ಯದೊಂದಿಗೆ ಈ ಕೆಲಸಕ್ಕೆ ಬಂದಿದ್ದಲ್ಲ. ಅಥವಾ ಸಂಕಟಕ್ಕೆ ಸಿಲುಕಿದೊಡನೆ ಇಡಿಯ ದೇಶ, ಸಮಾಜ ನಮ್ಮ ಪರವಾಗಿ ಎದ್ದು ನಿಲ್ಲುವುದೆಂಬ ಭ್ರಮೆಯಿಂದಲೂ ಬಂದವರಲ್ಲ. ಎಲ್ಲಕ್ಕೂ ಮಿಗಿಲಾಗಿ ಯಾವುದೋ ಪಕ್ಷದ ಶಾಸಕರು, ಮಂತ್ರಿಗಳು ನಮ್ಮ ಪರವಾಗಿ ನಿಲ್ಲುವರೆಂಬ ಕಲ್ಪನೆ ಖಂಡಿತ ಇಲ್ಲ. ಇಷ್ಟಕ್ಕೂ ಸತ್ಯಕ್ಕೆ ಸಾವಿರ ಜನರ ಬೆಂಬಲ ಬೇಡ. ಅದು ಒಬ್ಬಂಟಿಯಾಗಿಯೇ ಹೋರಾಡುತ್ತದೆ. ಸುಳ್ಳಿಗೆ ಮಾತ್ರ ಪ್ರತಿಭಟನೆಗೆ ನೂರಾರು ಜನ ಬೇಕಾಗುತ್ತಾರೆ. ಅರವಿಂದರು ಅಲಿಪುರ್ ಮೊಕದ್ದಮೆಯಲ್ಲಿ ಜೈಲು ಹೊಕ್ಕರಲ್ಲ ಸಮರ್ಥನೆಗೇನು ಇಡಿ ದೇಶ ನಿಂತಿತ್ತೆಂದು ಭಾವಿಸಿದ್ದಿರೇನು!? ಸುಭಾಷ್ ಚಂದ್ರಬೋಸ್ರು ಗೃಹ ಬಂಧನದಲ್ಲಿದ್ದಾಗ ದೇಶದಲ್ಲೇನು ಪ್ರತಿಭಟನೆಯ ಆಂದೋಲನಗಳು ನಡೆದುಬಿಡಲಿಲ್ಲ. ಅನೇಕ ಕ್ರಾಂತಿಕಾರಿಗಳಂತೂ ಬ್ರಿಟೀಷರ ಎದೆಯನ್ನೇ ಕುಟ್ಟಿ ನೇಣುಗಂಬವನ್ನೇರುವಾಗಲೂ ಜನ ಅವರ ಪರವಾಗಿ ಮಾತನಾಡಲಿಲ್ಲ. ಹೋಗಲಿ ಸ್ವಾತಂತ್ರ್ಯ ಬಂದಮೇಲಾದರೂ ಅವರ ಕುರಿತಂತೆ ಚಚರ್ೆಗಳಾದವಾ? ಖಂಡಿತ ಇಲ್ಲ. ಯಾವಾಗಲಾದರೂ ವಾಸುದೇವ್ ಬಲವಂತ್ ಫಡಕೆಯ ಕಥನವನ್ನೋದಿ ನೋಡಿ. ಅಂಥವನ ಬೆಂಬಲಕ್ಕೆ ದೊಡ್ಡ ಸಂಖ್ಯೆಯಲ್ಲೇನು ಜನ ಬಂದಿರಲಿಲ್ಲ. ನನಗೆ ಗೊತ್ತು. ಇವೆಲ್ಲವೂ ಆದರ್ಶದ ಮಾತುಗಳಷ್ಟೇ. ಜೈಲಿನ ಎದುರು ನಿಲ್ಲುವ ಪರಿಸ್ಥಿತಿ ಬಂದಾಗ ನನ್ನೊಂದಿಗೆ ಯಾರೂ ಇಲ್ಲವೆಂಬ ನೋವು ಅನೇಕರನ್ನು ಕಾಡುತ್ತದೆ. ಆದರೆ ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ ಈ ಬಗೆಯ ಹೋರಾಟಗಳನ್ನು ಮಾಡಿರೆಂದು ನಮ್ಮನ್ಯಾರೂ ಕೇಳಿಕೊಳ್ಳಲಿಲ್ಲ. ಅದು ಅವರವರೇ ಇಚ್ಛೆ ಪಟ್ಟು ಸ್ವೀಕರಿಸಿದ ಮಾರ್ಗ. ಈ ಕೆಲಸಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಹೊಗಳುವಾಗ ಇದನ್ನು ಹಂಚಿಕೊಳ್ಳಲು ಯಾರೂ ಬರುವುದೇ ಇಲ್ಲವಲ್ಲ ಎಂದು ನಾವು ಕೇಳುವುದೇ ಇಲ್ಲ. ಸಂಕಟಗಳು ಬಂದಾಗ ಮಾತ್ರ ನಮ್ಮೊಳಗಿನ ಅಸಹಾಯಕ ಪ್ರಜ್ಞೆ ಜಾಗೃತವಾಗಿಬಿಡುತ್ತದೆ. ಹಿಂದೂಸಮಾಜ ಈ ಬಗೆಯ ಹತಾಶ ಮನೋಭಾವದಿಂದ ಹೊರಬಂದು ಏಕಾಂಗಿಯಾಗಿ ನಿಲ್ಲಬಲ್ಲ ಛಾತಿಯನ್ನು ತೋರದೇ ಹೋದರೆ ಇನ್ನೆಂದೂ ಹೋರಾಟದ ಹಾದಿಯಲ್ಲಿ ಧೈರ್ಯವಾಗಿ ಮುಂದಿಡುವುದು ಬಲು ಕಷ್ಟ. ಹಾಗಂತ ಸಮಾಜ ಜೊತೆಯಲ್ಲಿಲ್ಲ ಎಂದು ಭಾವಿಸುವುದೂ ತಪ್ಪೇ. ಅಜಿತ್ ಹನುಮಕ್ಕನವರ್ ಪ್ರಕರಣ ಗಂಭೀರವಾದಾಗ ರಾಜ್ಯದಾದ್ಯಂತ ತರುಣರು ಜಾಗೃತರಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ಪತ್ರಕರ್ತನೊಬ್ಬನ ಕೊಲೆ ಮಾಡುತ್ತೇನೆಂದು ಬೆದರಿಕೆ ಕೊಟ್ಟವರ ಕುರಿತಂತೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದನ್ನು ಮರೆಯುವುದು ಸಾಧ್ಯವೇ? ನ್ಯಾಯಾಲಯದಲ್ಲಿ ಅಜಿತ್ನ ಪರವಾಗಿ ಹೋರಾಟ ಮಾಡುತ್ತಿರುವುದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸುವರ್ಣದ ಚಾನೆಲ್ ರೇಟಿಂಗ್ ಕಡಿಮೆಯಾಗದಂತೆ ಸವಾಲನ್ನು ಸ್ವೀಕರಿಸಿದ್ದು ಹಿಂದೂ ತರುಣ ಸಮೂಹವೇ ಅಲ್ಲವೇನು?! ನೆನಪಿಡಿ. ಹಿಂದುಗಳಿಗೆ ಧರ್ಮ ಅಫೀಮಲ್ಲ. ಅದೊಂದು ಸುಂದರ ಬದುಕಿಗೆ ಬೇಕಾದ ಮಹಾಮಾರ್ಗ. ಅದಕ್ಕೆ ಆತ ತಕ್ಷಣಕ್ಕೆ ಬೀದಿಗೆ ಬಂದು ಪ್ರತಿಭಟಿಸಲಾರ. ಆಲೋಚಿಸಿ ನಿಧರ್ಾರ ಕೈಗೊಳ್ಳುತ್ತಾನೆ. ಇಷ್ಟಕ್ಕೇ ಹತಾಶರಾಗಿ ಶಾಸಕರನ್ನು, ಮಂತ್ರಿಗಳನ್ನು, ಪುಢಾರಿಗಳನ್ನು ಬೈಯ್ಯುತ್ತಾ ಈ ಬಾರಿ ಇವರೆಲ್ಲರನ್ನೂ ಸೋಲಿಸಿಬಿಡುತ್ತೇವೆಂಬ ಪಣತೊಟ್ಟ ಮಿತ್ರರಿಗೆ ನನ್ನದೊಂದು ಕಿವಿಮಾತಿದೆ. ನಿಜವಾದ ಹಿಂದುವಾದವನು ಕರ್ಮ ಸಿದ್ಧಾಂತವನ್ನು ನಂಬುತ್ತಾನೆ ಅಥವಾ ಕೃಷ್ಣನ ‘ನಿಮಿತ್ತ ಮಾತ್ರ ನೀನು’ ಎಂಬ ವಾಕ್ಯವನ್ನಾದರೂ ಒಪ್ಪುತ್ತಾನೆ. ಇಲ್ಲಿ ಪುರುಷ ಪ್ರಯತ್ನಕ್ಕಷ್ಟೇ ಬೆಲೆ. ಇಂಥದ್ದೇ ಫಲ ಬರುವಂತೆ ಮಾಡುತ್ತೇನೆನ್ನುವವನಿಗೆ ಈ ಮಾರ್ಗದಲ್ಲಿ ನಯಾಪೈಸೆಯ ಮೌಲ್ಯವಿಲ್ಲ. ಆದ್ದರಿಂದ ಇಂದೇ ನಿಶ್ಚಯಿಸಿಕೊಳ್ಳಿ. ನೀವು ರಾಷ್ಟ್ರ ಮತ್ತು ಧರ್ಮಗಳಿಗಾಗಿ ಧರ್ಮಕಾರ್ಯವನ್ನು ಮಾಡುತ್ತಿರುವಿರೋ ಅಥವಾ ಪಕ್ಷದ ಪ್ರಮುಖರು ನಿಮ್ಮ ಬಗ್ಗೆ ಮಾತುನಾಡುವರೆಂಬ ಕಾರಣಕ್ಕೆ ಮಾಡುತ್ತಿರುವಿರೋ. ಕಾರಣ ಮೊದಲನೆಯದಾದರೆ ತಲೆಕೆಡಿಸಿಕೊಳ್ಳಲೇಬೇಡಿ. ಸಮಾಜದ ಉನ್ನತಿಗಾಗಿ ಜೀವತೇಯ್ದು ಹೋಗಲಿ. ಕಾರಣ ಎರಡನೆಯದಾದರೆ ಗಂಭೀರ ಕೆಲಸಕ್ಕೆ ಕೈ ಹಚ್ಚಲೇಬೇಡಿ. ಎಚ್ಚರಿಕೆಯಿಂದ ಹೆಜ್ಜೆಯಿಟ್ಟು ಇರುವಷ್ಟು ದಿನ ಆನಂದದಿಂದ ಕಾಲ ಕಳೆದುಬಿಡಿ.

ಸಾವರ್ಕರ್ ಹೇಳಿದ್ದು ನೆನಪಿದೆ ತಾನೆ, ‘ಸ್ವಾತಂತ್ರ್ಯದ ಅಗ್ನಿಯಲ್ಲಿ ನಾವು ಹವಿಸ್ಸಾಗಲು ಸಿದ್ಧವಾಗಿದ್ದು ನಮಗೆ ಹಾರ-ತುರಾಯಿಗಳು ದೊರೆಯುತ್ತವೆಂದಲ್ಲ. ಬದಲಿಗೆ ತಾಯಿ ಭಾರತಿ ನಮ್ಮನ್ನು ಕೈಬೀಸಿ ಕರೆಯುತ್ತಿದ್ದಾಳೆ ಅಂತ’.

Comments are closed.