ವಿಭಾಗಗಳು

ಸುದ್ದಿಪತ್ರ


 

ಸೈಕಾಲಾಜಿಕಲ್ ವಾರ್! ಯುದ್ಧ ಮಾಡದೇ ಗೆದ್ದಿದೆ ಭಾರತ

ಇಂಡಿಯಾ ಟುಡೇ ಪತ್ರಿಕೆ ಚೀನಾವನ್ನು ಕೋಳಿಯಂತೆ, ಅದನ್ನನುಸರಿಸಿ ಹೊರಟಿರುವ ಪುಟ್ಟ ಕೋಳಿಯಂತೆ ಪಾಕಿಸ್ತಾನವನ್ನು ಚಿತ್ರಿಸಿ ಮುಖಪುಟದಲ್ಲಿ ಮುದ್ರಿಸಿತು. ಚೀನಾದಂತಿರುವ ಕೋಳಿಯಲ್ಲಿ ಟಿಬೇಟ್ ಮತ್ತು ತೈವಾನ್ನ್ನು ಬಿಟ್ಟ ಪತ್ರಿಕೆ ಚೀನಾದ ಆಡಳಿತ ವರ್ಗಕ್ಕೆ ನಡುಕ ಹುಟ್ಟಿಸಿತ್ತು. ಇದನ್ನೇನೂ ಆಲೋಚನೆ ಇಲ್ಲದೇ ಮಾಡಿದ್ದೆಂದು ಭಾವಿಸಬೇಡಿ. ತನಗೆ ಬೇಕಾದ ಸುದ್ದಿಯನ್ನು ಜಾಗತಿಕ ಮಟ್ಟದಲ್ಲಿ ಬಿತ್ತಲು ಸಕರ್ಾರಗಳು ಮಾಧ್ಯಮಗಳನ್ನು ಸಮರ್ಥವಾಗಿ ಬಳಸುತ್ತವೆ.

ರಾಜತಾಂತ್ರಿಕತೆ ಯುದ್ಧಗೆಲ್ಲುವ ಮೊದಲ ಅಸ್ತ್ರ. ಆಥರ್ಿಕ ದಿಗ್ಬಂಧನ ಎರಡನೆಯದು. ಪ್ರತ್ಯಕ್ಷ ಯುದ್ಧ ಎಲ್ಲಕ್ಕೂ ಕೊನೆಯದು. ಇವೆಲ್ಲದರ ನಡುವೆ ಮತ್ತೊಂದು ಬಲವಾದ ಅಸ್ತ್ರವಿದೆ. ಶತ್ರುಗಳನ್ನು ಮಾನಸಿಕವಾಗಿ ಸೋಲಿಸಿಬಿಡುವ ಸೈಕಾಲಾಜಿಕಲ್ ವಾರ್, ಸಿಂಪಲ್ಲಾಗಿ ಸೈ ವಾರ್! ಮೊದಲೆನೆಯದರಲ್ಲಿ ಮೋದಿ ಅದಾಗಲೇ ಚೀನಿಯರ ವಿರುದ್ಧ ಗೆಲುವು ಸಾಧಿಸಿಯಾಗಿದೆ. ಅಮೇರಿಕ, ಜಪಾನ್, ಆಸ್ಟ್ರೇಲಿಯಾ, ಇಸ್ರೇಲ್ಗಳನ್ನೆಲ್ಲ ತಮ್ಮೆಡೆಗೆ ಸೆಳೆದುಕೊಂಡು, ಮುಂಗೋಲಿಯ, ಶ್ರೀಲಂಕಾ, ತೈವಾನ್ಗಳೂ ಚೀನಾ ವಿರುದ್ಧ ತಿರುಗಿ ಬೀಳುವಂತೆ ಮಾಡಿ ಚೀನಾಕ್ಕೆ ಕಂಟಕಪ್ರಾಯವಾಗಿಬಿಟ್ಟಿದ್ದಾರೆ. ಆಥರ್ಿಕತೆಯ ವಿಚಾರದಲ್ಲಿ ಚೀನಾ ನಮಗಿಂತ ಸ್ವಲ್ಪ ಬಲಶಾಲಿಯಾದರೂ ಕಳೆದ ಮೂರು ವರ್ಷಗಳಲ್ಲಿ ಮೋದಿ ಭಾರತವನ್ನು ಸವಾಲಾಗುವಂತೆ ಕಡೆದು ನಿಲ್ಲಿಸಿದ್ದಾರೆ. ಈಗ ಚೀನಾಕ್ಕೆ ಇರುವುದೊಂದೇ ಅಸ್ತ್ರ. 1962ರ ಯುದ್ಧದ ಸೋಲನ್ನು ನೆನಪಿಸಿ ಭಾರತವನ್ನು ಮಾನಸಿಕವಾಗಿ ಕೊಂದು ಹಾಕಿಬಿಡುವುದು.

ಸೈಕಾಲಾಜಿಕಲ್ ವಾರ್ ಅನ್ನೋದು ಅತ್ಯಂತ ಪ್ರಾಚೀನ ಯುದ್ಧತಂತ್ರವೇ. ಕೃಷ್ಣ ರಾಕ್ಷಸರನ್ನು ಸಂಹಾರ ಮಾಡಿದ್ದು, ಆತ ಮಥುರೆಯಲ್ಲಿ ಧನುಸ್ಸನ್ನು ಮುರಿದಿದ್ದು, ಕುಬ್ಜೆಯ ಗೂನು ಸರಿ ಮಾಡಿ ಮಥುರೆಯ ಜನರ ಪಾಲಿಗೆ ದೇವರಂತಾಗಿದ್ದು ಕಂಸನ ಆಪ್ತರಲ್ಲೂ ದ್ವಂದ್ವ ಹುಟ್ಟಿಸಿಬಿಟ್ಟಿತ್ತು. ಕಂಸ ಅದೆಷ್ಟು ರಾತ್ರಿ ನಿದ್ದೆ ಕಳೆದುಕೊಂಡು ಪರಿತಪಿಸಿರಬೇಕು ಹೇಳಿ. ಯುದ್ಧಕ್ಕೂ ಮುನ್ನ ಕೃಷ್ಣ ಜಯಶಾಲಿಯಾಗಿಬಿಟ್ಟಿದ್ದ. ಅದು ಪುರಾಣಕಾಲವೆನಿಸಿದರೆ ಶಿವಾಜಿ ಮಹಾರಾಜರ ಕದನದ ಶೈಲಿಯೂ ಹಾಗೆಯೇ ಇತ್ತಲ್ಲವೇ. ಅವರನ್ನು ಬೆಟ್ಟದ ಇಲಿಯೆನ್ನುವ ಅದೆಷ್ಟು ಸಾಹಸ ಮಾಡಿದರೂ ಔರಂಗಜೇಬ ಶಿವಾಜಿಯ ಅತೀಂದ್ರಿಯ ಶಕ್ತಿಗಳನ್ನು ನೆನೆ ನೆನೆದೇ ಕೊರಗಿದವನಲ್ಲವೇ? ಸೋತವರ ಮೇಲೆ ಕ್ರೌರ್ಯದ ಪ್ರಹಾರ ಮಾಡಿ ಉಳಿದವರನ್ನು ಮಾನಸಿಕವಾಗಿ ಕುಗ್ಗಿಸಿಬಿಡುವ ಸೈಕಲಾಜಿಕಲ್ ವಾರ್ನ್ನು ಸಾಧಾರಣವಾಗಿ ಪ್ರತಿಯೊಬ್ಬ ಮುಸ್ಲೀಂ ರಾಜನೂ ಮಾಡಿದ್ದಾನೆ. ಚೆಂಗೀಸ್ ಖಾನನಂತೂ ಯುದ್ಧದ ವೇಳೆಗೆ ತನ್ನೆದುರಾಗಿ ನಿಂತ ಊರೂರನ್ನೇ ಧ್ವಂಸಗೊಳಿಸುತ್ತಿದ್ದ ಮತ್ತು ಕುದುರೆಗಳ ಮೇಲೆ ಸೈನಿಕರ ಪ್ರತಿರೂಪಗಳನ್ನು ಕೂರಿಸಿ ತನ್ನ ಸೈನ್ಯದ ಸಂಖ್ಯೆಯನ್ನು ಅಪಾರವಾಗಿ ತೋರಿಸಿ ಎದುರಾಳಿಗಳನ್ನು ಹೆದರುವಂತೆ ಮಾಡಿಯೇ ಕೊಲ್ಲುತ್ತಿದ್ದ.

23

ಮೊದಲ ವಿಶ್ವಯುದ್ಧದ ವೇಳೆ ಈ ಮಾರ್ಗವನ್ನು ಸಮರ್ಥವಾಗಿ ಬಳಸಿಕೊಳ್ಳಲಾಯ್ತು. ಪಶ್ಚಿಮದ ಜನ ದಿನ ಪತ್ರಿಕೆಗಳನ್ನು ಮತ್ತು ಪ್ರಚಾರ ಪತ್ರಗಳನ್ನು ಬಳಸಿ ಶತ್ರುಗಳನ್ನು ಬೌದ್ಧಿಕವಾಗಿ ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದರು. ಗೇರಿಲ್ಲಾ ಯುದ್ಧ ನಡೆಯುವ ಸ್ಥಳಗಳಲ್ಲಿ ವಿಮಾನಗಳಿಂದ ಕರಪತ್ರಗಳನ್ನೆಸೆದು ಕದನದಲ್ಲಿರುವವರ ಮನಸ್ಸು ಕೆಡುವಂತಹ ತಂತ್ರಗಾರಿಕೆಯನ್ನೂ ಪ್ರಯೋಗಿಸಲಾಗಿತ್ತು. ಎರಡನೇ ಮಹಾಯುದ್ಧದ ವೇಳೆಗೆ ರೇಡಿಯೋ ಸೈವಾರ್ನ ಮಹತ್ವದ ಭಾಗವಾಗಿತ್ತು. ವಿನ್ಸ್ಟನ್ ಚಚರ್ಿಲ್ ಶಕ್ತಿಶಾಲೀ ಟ್ರಾನ್ಸ್ಮಿಟರ್ಗಳನ್ನು ಬಳಸಿ ಜರ್ಮನ್ರ ವಿರುದ್ಧ ಜನರ ಭಾವನೆ ಕೆರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಅಷ್ಟೇ ಅಲ್ಲ. ಜರ್ಮನಿಯ ಗೂಢಚಾರರನ್ನು ಡಬಲ್ ಏಜೆಂಟ್ ಮಾಡಿ ಅವರ ಮೂಲಕ ಆಕ್ರಮಣದ ತಪ್ಪು ಮಾಹಿತಿ ರವಾನಿಸಿದ್ದ. ಅಣಕು ಯುದ್ಧ ಟ್ಯಾಂಕುಗಳನ್ನು ಬಳಸಿ ಯಾವ ದಿಕ್ಕಿನಲ್ಲಿ ಯುದ್ಧವೆಂಬುದೇ ಜರ್ಮನಿಯವರಿಗೆ ಗೊಂದಲವಾಗುವಂತೆ ಮಾಡಿದ್ದ. ಒಟ್ಟಿನಲ್ಲಿ ಜರ್ಮನಿಯ ಸೇನಾಪಡೆ ಗೊಂದಲಕ್ಕೊಳಗಾಗಿ ಕೈಚೆಲ್ಲುವಂತಾಯ್ತು. ಸೇನಾಪಡೆಯ ಈ ಗೊಂದಲ ಜನ ಸಾಮಾನ್ಯರಿಗೆ ಅರಿವಾಗುವಂತೆ ಮಾಡಿ ಅವರು ಸಕರ್ಾರದ ಮೇಲಿಟ್ಟಿದ್ದ ಭರವಸೆಯನ್ನು ಕಳಕೊಳ್ಳುವಂತೆ ಮಾಡಿತು ಮಿತ್ರ ಪಡೆ. ಅಲ್ಲಿಗೆ ಜರ್ಮನಿಯ ಸೋಲಿಗೆ ಷರಾ ಬರೆದಂತಾಗಿತ್ತು.

ಈ ಕೆಲಸ ಭಾರತ ಮಾಡುವುದಿಲ್ಲವೆಂದೇನಿಲ್ಲ. ಪಾಕೀಸ್ತಾನದ ಮೇಲೆ ನಾವು ಪದೇ-ಪದೇ ಗೆಲುವು ಸಾಧಿಸುತ್ತಿರುವುದಕ್ಕೆ ಮಾನಸಿಕ ಸ್ಥೈರ್ಯವೇ ಕಾರಣ. ಪ್ರತೀ ಬಾರಿ ಪಾಕಿಸ್ತಾನ ಹೆಚ್ಚು ಆಧುನಿಕ ಶಸ್ತ್ರಗಳೊಂದಿಗೆ ಯುದ್ಧಕ್ಕೆ ಬರುತ್ತದೆ ಆದರೆ ಭಾರತದ ಸೈವಾರ್ನ ಪ್ರಹಾರಕ್ಕೆ ಒಳಗಿನ ಪ್ರತಿರೋಧ ಎದುರಿಸಲಾಗದೇ ಸೈನ್ಯ ಸೋತು ಮರಳುತ್ತದೆ. ನೆನಪಿಡಿ. ಒಂದು ಬಾರಿ ಯುದ್ಧದಲ್ಲಿ ಸೋತ ಸೇನೆಗೆ ಮತ್ತೆ ಗೆಲ್ಲುವ ವಿಶ್ವಾಸ ಬರಬೇಕೆಂದರೆ ತುತರ್ಾಗಿ ಸಣ್ಣ ವಿಜಯವಾದರೂ ದಕ್ಕಲೇ ಬೇಕು. 1962ರಲ್ಲಿ ಚೀನಿಯರೆದುರು ಸೋತ ನಮಗೆ 1965ರಲ್ಲಿ ಪಾಕೀಸ್ತಾನದ ಮೇಲಿನ ವಿಜಯ ಎಷ್ಟು ಅಗತ್ಯವಾಗಿತ್ತೆಂಬುದನ್ನು ಈ ಹಿನ್ನೆಲೆಯಲ್ಲಿ ತುಲನೆ ಮಾಡಿ ನೋಡಬೇಕು. 1999ರಲ್ಲಿ ಆಯಕಟ್ಟಿನ ಜಾಗದಲ್ಲಿದ್ದಾಗಲೂ ಪಾಕಿಸ್ತಾನವನ್ನು ಕಾಗರ್ಿಲ್ನ ಗುಡ್ಡಗಳಲ್ಲಿ ಅಡ್ಡಹಾಕಿ ಸೋಲಿಸಿದ್ದೆವಲ್ಲ ಅದಂತೂ ನಮ್ಮ ಸೈನಿಕನ ಆತ್ಮಸ್ಥೈರ್ಯವನ್ನು ವೃದ್ಧಿಸಿದಷ್ಟೇ ಅಲ್ಲ, ಪಾಕಿಸ್ತಾನೀಯನ ಗೆಲುವಿನ ಉತ್ಸಾಹವನ್ನೇ ಕೊಂದುಬಿಟ್ಟಿತು. ಭಾರತ ಯುದ್ಧಗಳ ಮೂಲಕವಷ್ಟೇ ಪಾಕೀಸ್ತಾನವನ್ನು ತಣ್ಣಗೆ ಮಾಡಿದ್ದಲ್ಲ, ಸ್ವಾತಂತ್ರ್ಯ ಬಂದಾಗಿನಿಂದ ಅದರ ಮೇಲೊಂದು ಕಣ್ಣಿಟ್ಟು ಅದನ್ನು ಆಂತರಿಕವಾಗಿ ಸಡಿಲಗೊಳಿಸುತ್ತಲೇ ಬಂದಿದೆ. ಇಂದಿಗೆ ಸುಮಾರು ಎಂಟೊಂಭತ್ತು ವರ್ಷಗಳ ಹಿಂದೆಯೇ ಪಾಕೀಸ್ತಾನದ ರಕ್ಷಣಾ ತಜ್ಞ ಅಸಿಫ್ ಹರೂನ್ ಈ ಕುರಿತಂತೆ ಬರೆಯುತ್ತ, 1971ರಲ್ಲಿ ಭಾರತ ಹೇಗೆ ಪೂರ್ವ ಪಾಕೀಸ್ತಾನದ ಜನರ ತಲೆ ಕೆಡಿಸಿ ಅವರನ್ನು ಪ್ರತ್ಯೇಕವಾಗಲು ಪ್ರೇರೇಪಿಸಿತ್ತೆಂಬುದನ್ನು ವಿವರಿಸಿದ್ದ. ಆತನ ಪ್ರಕಾರ ಭಾರತದ ರಾ ಅಧಿಕಾರಿಗಳು ಸಿಂಧಿ, ಪಂಜಾಬಿ, ಪಠಾನ್, ಮೊಹಾಜಿರ್, ಬಲೂಚಿಗಳಿಗೆಲ್ಲ ಬೇರೆ-ಬೇರೆ ಬಗೆಯ ನೀತಿಯನ್ನು ರೂಪಿಸಿಕೊಂಡಿದ್ದಾರೆ ಮತ್ತು ಪಾಕಿಸ್ತಾನದ ಜನಕ್ಕೆ ಹಿಂದಿ ಸಿನಿಮಾಗಳ ಹುಚ್ಚು ಹಿಡಿಸಿ ಅವರೆಲ್ಲ ಧರ್ಮದ ಬಾಹುಗಳಿಂದ ಆಚೆ ಬರುವಂತೆ ಮಾಡಲಾಗಿದೆ ಎನ್ನುತ್ತಾನೆ. ಅಲ್ಲಿನ ಕೆಲವು ರಾಜಕೀಯ ಪಕ್ಷಗಳು ನಮ್ಮ ತಾಳಕ್ಕೆ ಕುಣಿಯುವಂತೆ ಭಾರತ ಸಂಚು ರೂಪಿಸಿದೆ ಎಂದು ಹೇಳುತ್ತಾನೆ. ಈ ಹಿನ್ನೆಲೆಯಲ್ಲಿಯೇ ಭಾರತ ಪಾಕೀಸ್ತಾನದೊಂದಿಗಿನ ಯುದ್ಧಕ್ಕೆ ಎಂದೂ ಹೆದರಿರಲಿಲ್ಲ. ಪಾಕೀಸ್ತಾನ ಏನೂ ಸುಮ್ಮನೆ ಕೂತಿಲ್ಲ. ಪ್ರತ್ಯೇಕತಾವಾದಿಗಳಿಗೆ ಹಣವೂಡಿಸಿ, ಪಾಕೀಸ್ತಾನದ ಪರವಾಗಿ ಮಾತನಾಡಿಸುವುದೇ ಅಲ್ಲದೇ ಆಗಾಗ ಹಳೆಯದನ್ನು ಕೆದಕಿ ಜನರನ್ನು ಪ್ರಭುತ್ವದ ವಿರುದ್ಧ ಭಡಕಾಯಿಸುತ್ತಲೇ ಇರುತ್ತದೆ. 1991ರಲ್ಲಿ ಭಯೋತ್ಪಾದನೆ ತೀವ್ರವಾಗಿದ್ದಾಗ ಸೇನೆ ಕಾಶ್ಮೀರದ ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿತ್ತೆಂಬ ಆರೋಪವನ್ನು ಆಗಾಗ ಹಸಿಗೊಳಿಸುತ್ತ ಜನರ ಮನದ ಕಟು ಭಾವನೆ ಆರದಿರುವಂತೆ ನೋಡಿಕೊಳ್ಳುತ್ತದೆ. ಅದನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿಬಿಂಬಿಸಲೆಂದೇ ಒಂದಷ್ಟು ಪತ್ರಕರ್ತರ, ಅವಾಡರ್್ ವಾಪ್ಸಿ ಗ್ಯಾಂಗುಗಳ ತಂಡವಿದೆ. ಒಟ್ಟಾರೆ ಭಾರತೀಯರ ಮಾನಸಿಕತೆಯನ್ನು ಸರಿ-ತಪ್ಪುಗಳ ದ್ವಂದ್ವಕ್ಕೆ ತಳ್ಳುವುದಷ್ಟೇ ಉದ್ದೇಶ. ಈ ಗೊಂದಲದ ಪ್ರತಿಬಿಂಬವೇ ಸೈನಿಕನ ಯುದ್ಧದ ವೇಳೆಯ ಮಾನಸಿಕ ಸ್ಥಿತಿ.

34

ಚೀನಾ ಕೂಡ ಬಲು ಜತನದಿಂದಲೇ ಸೈವಾರ್ ನಡೆಸುತ್ತಿದೆ. ಇಲ್ಲಿನ ಕೆಲವು ಪಕ್ಷಗಳು ಅದಕ್ಕೆ ಬಲು ಆತ್ಮೀಯ. ಕಮ್ಯುನಿಷ್ಟರನ್ನು ಬಿಡಿ, ಅಗತ್ಯ ಬಿದ್ದರೆ ಕಾಂಗ್ರೆಸ್ಸೂ ಕೂಡ ತಾಳಕ್ಕೆ ಕುಣಿಯುವಂತೆ ಸಂಬಂಧ ಇಟ್ಟುಕೊಂಡಿದ್ದಾರೆ. ಸುಖಾ ಸುಮ್ಮನೆ ದೂರುತ್ತಿಲ್ಲ, ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚೀನಿ ರಾಯಭಾರಿಯನ್ನು ಭೇಟಿ ಮಾಡಲು ಹೋಗಿದ್ದು, ಅದನ್ನು ತಾವು ಯಾರಿಗೂ ಹೇಳಿಕೊಳ್ಳದೇ ಮುಚ್ಚಿಟ್ಟಿದ್ದು. ಚೀನೀಯರೇ ಅದನ್ನು ಜಗಜ್ಜಾಹೀರು ಮಾಡಿ ಆನಂತರ ಕಾಂಗ್ರೆಸಿಗರ ಒತ್ತಡಕ್ಕೆ ಮಣಿದು ತಮ್ಮ ಅಧಿಕೃತ ವೆಬ್ ಸೈಟುಗಳಿಂದ ಅದನ್ನು ತೆಗೆದದ್ದು. ಇವೆಲ್ಲ ಎಷ್ಟರ ಮಟ್ಟಿಗೆ ಚೀನಿಯರ ತಂತ್ರವೋ ಗೊತ್ತಿಲ್ಲ ಆದರೆ ಯುದ್ಧದ ಸಾಧ್ಯತೆಗಳಿದ್ದ ಹೊತ್ತಲ್ಲಿ ಪ್ರತಿಪಕ್ಷದ ನಾಯಕ ಭೇಟಿ ಮಾಡಿದ್ದರ ಕುರಿತಂತೆ ಪ್ರಶ್ನೆಗಳಂತೂ ಇದ್ದೇ ಇವೆ.
ಹೌದು. ಸೈ ವಾರ್ನ ಮಹತ್ವದ ಕೌಶಲ ಅದು. ಶತ್ರು ರಾಷ್ಟ್ರದ ರಾಜಕೀಯ ನಾಯಕರನ್ನು, ಪತ್ರಕರ್ತರನ್ನು ಬುಟ್ಟಿಗೆ ಹಾಕಿಕೊಂಡು ಅವರ ಮೂಲಕವೇ ತಮಗೆ ಬೇಕಾದ ಕೆಲಸ ಸಾಧಿಸಿಕೊಳ್ಳೋದು.

ಚೀನಾ ಪಾಕಿಸ್ತಾನಕ್ಕೂ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತಿರುವುದನ್ನು ಅಲ್ಲಗಳೆಯಲಾಗದು. ಬುರ್ಹನ್ವಾನಿಯನ್ನು ಭಾರತೀಯ ಸೇನೆ ಕಾಶ್ಮೀರ ಕಣಿವೆಯಲ್ಲಿ ಕೊಂದು ಬಿಸಾಡಿದ್ದು ನೆನಪಿಸಿಕೊಳ್ಳಿ. ಅವತ್ತು ಆತನನ್ನು ಬಖರ್ಾ ದತ್ ಬಡ ಮೇಷ್ಟ್ರ ಮಗನೆಂದು ಸಮಾಜಕ್ಕೆ ಪರಿಚಯಿಸಿದ್ದಳಲ್ಲ; ಅದೇ ಹೊತ್ತಲ್ಲಿ ಒಟ್ಟೂ ಒಂದೂ ಕಾಲು ಲಕ್ಷ ಟ್ವೀಟ್ಗಳು ಹರಿದಾಡಿದ್ದವು. ಇದರಲ್ಲಿ 49 ಸಾವಿರದಷ್ಟು ಭಾರತೀಯರದ್ದಾದರೆ, 10 ಸಾವಿರ ಟ್ವೀಟುಗಳು ಪಾಕ್ ನೆಲದಿಂದ ಮಾಡಿದ್ದವು. ಇನ್ನು ಸುಮಾರು 52 ಸಾವಿರ ಟ್ವೀಟುಗಳು ಅನಾಮಿಕ ಪ್ರದೇಶಗಳಿಂದ. ಅರ್ಥ ಬಲು ಸ್ಪಷ್ಟ. ಭಾರತವನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುವ ತಂತ್ರಗಳು ಜೋರಾಗಿಯೇ ಕೆಲಸ ಮಾಡಿದ್ದವು. ಈಗಲೂ ಬುರ್ಹನ್ವಾನಿಯ ಸಾವಿನಿಂದಾಗಿಯೇ ಕಾಶ್ಮೀರದಲ್ಲಿ ಹೊಸ ಕ್ರಾಂತಿ ಚಿಗುರೊಡೆದಿರೋದು ಅಂತ ಅನೇಕರು ನಂಬುತ್ತಾರೆ. ಆದರೆ ಬಹಳ ಜನರಿಗೆ ಗೊತ್ತಿಲ್ಲ, ಆತನ ಸಾವಿಗೆ ಇವರೆಲ್ಲ ಪ್ರತಿಸ್ಪಂದಿಸಿದ ರೀತಿಯಿಂದಾಗಿಯೇ ಈ ಯುದ್ಧ ತಂತ್ರವನ್ನು ಎದುರಿಸುವ ಪಾಠ ಭಾರತ ಕಲಿತದ್ದು.

ಈ ಬಾರಿ ಭಾರತ ಚೀನಿ ಆಕ್ರಮಣಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡೇ ಅಖಾಡಾಕ್ಕೆ ಇಳಿದಿತ್ತು. ಜಗತ್ತಿನ ಕಾಲುಭಾಗದಷ್ಟಾದರೂ ರಾಷ್ಟ್ರಗಳನ್ನು ಭೇಟಿ ಮಾಡಿದ ಮೋದಿ ಅವರೊಂದಿಗೆ ಘನಿಷ್ಠ ಬಾಂಧವ್ಯವನ್ನು ಸ್ಥಾಪಿಸಿ ಬಂದಿದ್ದರು. ಅಲ್ಲೆಲ್ಲ ಭಯೋತ್ಪಾದನೆಯ ಕುರಿತಂತೆ ಮಾತನಾಡಿ ಪಾಕಿಸ್ತಾನವನ್ನು ಜಗತ್ತಿನ ಶತ್ರುವನ್ನಾಗಿ ಮಾಡಿಬಿಟ್ಟಿದ್ದರು. ನಮ್ಮ ಶತ್ರುತ್ವದ ಹಾದಿಯಿಂದ ಪಾಕಿಸ್ತಾನ ದೂರ ಸರಿದು ತಾನು ಭಯೋತ್ಪಾದನೆಯ ಬೆಂಬಲಿಗನಲ್ಲವೆಂದು ಸಾಬೀತುಪಡಿಸುವಲ್ಲಿಯೇ ಹೈರಾಣಾಯಿತು. ಒಂದೆಡೆ ಜಾಗತಿಕವಾಗಿ ಬೆಳೆಯುತ್ತಿರುವ ಭಾರತ ಮತ್ತೊಂದೆಡೆ ಕುಸಿಯುತ್ತಿರುವ ಪಾಕೀಸ್ತಾನ ಇವು ಅಲ್ಲಿನ ಜನರನ್ನು ಜರ್ಝರಿತವಾಗಿಸಿಬಿಟ್ಟಿತು. ಪಾಕ್ ಪತ್ರಕರ್ತರು, ಟಿವಿ ಚಾನೆಲ್ಲುಗಳು ಮೋದಿ ಪರವಾದ ಮಾತುಗಳನ್ನಾಡಲಾರಂಭಿಸಿದವು. ಅದಕ್ಕೆ ಪೂರಕವಾಗಿ ಸುಷ್ಮಾ ಸ್ವರಾಜ್ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಹೆಣ್ಣು ಮಗಳನ್ನು ಬಿಡಿಸಿ ಕ್ಯಾಮೆರಾಕ್ಕೆ ಪೋಸು ಕೊಟ್ಟರು. ಅಲ್ಲಿನ ಮಕ್ಕಳ ಚಿಕಿತ್ಸೆಗಾಗಿ ವೀಸಾ ಕೊಡಿಸಿದರು. ಈ ರಾಜತಾಂತ್ರಿಕ ಸಂಗತಿಗಳನ್ನು ಎಷ್ಟು ಸೂಕ್ಷ್ಮವಾಗಿ ನಿಭಾಯಿಸಲಾಯಿತೆಂದರೆ ಚಿಕಿತ್ಸೆ ಪಡೆದ ಮಗುವಿನ ತಾಯಿ ಪಾಕೀಸ್ತಾನದ ಪ್ರಧಾನಿ ಸುಷ್ಮಾರೇ ಆದರೆ ಚೆನ್ನಾಗಿತ್ತು ಎಂದುಬಿಟ್ಟರು. ಹಾಗೇ ಯೋಚಿಸಿ. ನಮ್ಮಲ್ಲಿ ಯಾರಾದರೊಬ್ಬರು ಈ ಹೊತ್ತಲ್ಲಿ ಚೀನಿ ಅಧ್ಯಕ್ಷರೇ ನಮ್ಮ ಪ್ರಧಾನಿಯಾಗಬೇಕೆಂದುಬಿಟ್ಟರೆ? ಪಾಕೀಸ್ತಾನಕ್ಕೂ ಅದೇ ಪರಿಸ್ಥಿತಿ ಈಗ.

45

ಒಮ್ಮೆ ಪಾಕೀಸ್ತಾನವನ್ನು ಸೈ ವಾರ್ನಲ್ಲಿ ಗೆದ್ದ ನಮಗೆ ಚೀನಾವನ್ನೆದುರಿಸುವುದು ಕಷ್ಟವಾಗಲಿಲ್ಲ. ಡೋಕ್ಲಾಂನಲ್ಲಿ ನಮ್ಮೆದುರಾಗಿ ನಿಂತ ಚೀನಾ ಮಾಡಿದ ಮೊದಲ ಕೆಲಸವೇ 1962ರ ಯುದ್ಧವನ್ನು ನೆನಪಿಸಿದ್ದು. ಭಾರತ ಅದಕ್ಕೆ ಪ್ರತಿಯಾಗಿ ‘ಇದು 1962 ಅಲ್ಲ, 2017’ ಎಂದಿತಲ್ಲ. ಅದು ಚೀನಾಕ್ಕೆ ನುಂಗಲಾರದ್ದಾಗಿತ್ತು. ಆಗಲೂ ನಮ್ಮ ಕೆಲವು ಬುದ್ಧಿವಂತರು ಭಾರತ ಈ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಹೊಂದಿದೆಯೋ ಚೀನಾ ಕೂಡ ಅದರ ಹತ್ತು ಪಟ್ಟು ಅಭಿವೃದ್ಧಿ ಕಂಡಿದೆ. ನಾವು ಯುದ್ಧಭೂಮಿಯಲ್ಲಿ ಅದನ್ನು ಎದುರಿಸುವುದು ಅಸಾಧ್ಯವೆನ್ನುತ್ತಿದ್ದರು. ಇದು ಒತ್ತಡ ತಂತ್ರವಷ್ಟೇ. ಯುದ್ಧವಾದರೆ ಭಾರತದ ಶಸ್ತ್ರಗಳು ಹತ್ತೇ ದಿನದಲ್ಲಿ ಖಾಲಿಯಾಗಲಿವೆ ಎಂಬ ಮೂರು ವರ್ಷದ ಹಳೆಯ ಸುದ್ದಿ ಮತ್ತೆ ಹರಿದಾಡಿತು. ಅದನ್ನು ವೈಭವೀಕರಿಸುವ ಪ್ರಯತ್ನ ಮಾಡಿದರು ಕೆಲವರು. ಭಾರತ ತಲೆಕೆಡಿಸಿಕೊಳ್ಳಲಿಲ್ಲ. ದಕ್ಷಿಣ ಚೀನಾ ಸಮುದ್ರದಲ್ಲಿ ಬೀಡುಬಿಟ್ಟಿರುವ ಅಮೇರಿಕ, ಜಪಾನುಗಳ ಯುದ್ಧ ನೌಕೆಯ ಪರಿಚಯ ಜಗತ್ತಿಗೆ ಮಾಡಿಕೊಟ್ಟಿತು. ಚೀನಾದ ಸಿಸಿಟಿವಿ ಟಿಬೆಟ್ನ ಬೆಟ್ಟಗಳ ಮೇಲೆ ಸಾವಿರಾರು ಟನ್ನುಗಳಷ್ಟು ಶಸ್ತ್ರಾಸ್ರಗಳನ್ನು ಸಾಗಿಸಿ, ಅಲ್ಲಿ ಅಣ್ವಸ್ತ್ರಗಳ ಪರೀಕ್ಷೆ ನಡೆಸಿದೆ ಎಂದೆಲ್ಲ ವಿಡಿಯೋ ಸಹಿತ ವರದಿ ಮಾಡಿತು. ಅದನ್ನು ಬೆನ್ನಟ್ಟಿಹೋದ ಭಾರತೀಯ ಗೂಢಚಾರರಿಗೆ ಸಿಕ್ಕಿದ್ದು ಸೊನ್ನೆ. ಇದು ಆಗಾಗ ನಡೆಯುವ ಸಹಜ ಕವಾಯತಾಗಿತ್ತಷ್ಟೇ. ಭಾರತದಲ್ಲಿರುವ ಚೀನಾಚೇಲಾಗಳು ಈ ಸುದ್ದಿಯನ್ನೇ ದೊಡ್ಡದು ಮಾಡಿ ಹೆದರಿಸುವ ಪ್ರಯತ್ನ ಶುರುಮಾಡಿಬಿಟ್ಟಿದ್ದರು. ಆಗಲೇ ಭಾರತ ಅರುಣಾಚಲದಲ್ಲಿ ಸುರಂಗ ಕೊರೆದು ನಮ್ಮ ಪಡೆಯನ್ನು ಅತ್ಯಂತ ವೇಗವಾಗಿ ಗಡಿ ತುದಿಗೆ ಒಯ್ಯಬಲ್ಲೆಡೆ ಗಮನ ಹರಿಸುತ್ತಿದ್ದೇವೆ ಎಂಬ ಸುದ್ದಿಯನ್ನು ಹರಿಬಿಟ್ಟಿತು. ಈ ಕುರಿತಂತೆ ಚೀನಿ ಮಾಧ್ಯಮಗಳು ಚಚರ್ಿಸಲಾರಂಭಿಸಿದ ಮೇಲೆ ವಾತಾವರಣ ಬದಲಾಯಿತು.

ಭಾರತ ಇಷ್ಟಕ್ಕೇ ನಿಲ್ಲಲಿಲ್ಲ. ಇಂಡಿಯಾ ಟುಡೇ ಪತ್ರಿಕೆ ಚೀನಾವನ್ನು ಕೋಳಿಯಂತೆ, ಅದನ್ನನುಸರಿಸಿ ಹೊರಟಿರುವ ಪುಟ್ಟ ಕೋಳಿಯಂತೆ ಪಾಕಿಸ್ತಾನವನ್ನು ಚಿತ್ರಿಸಿ ಮುಖಪುಟದಲ್ಲಿ ಮುದ್ರಿಸಿತು. ಚೀನಾದಂತಿರುವ ಕೋಳಿಯಲ್ಲಿ ಟಿಬೇಟ್ ಮತ್ತು ತೈವಾನ್ನ್ನು ಬಿಟ್ಟ ಪತ್ರಿಕೆ ಚೀನಾದ ಆಡಳಿತ ವರ್ಗಕ್ಕೆ ನಡುಕ ಹುಟ್ಟಿಸಿತ್ತು. ಇದನ್ನೇನೂ ಆಲೋಚನೆ ಇಲ್ಲದೇ ಮಾಡಿದ್ದೆಂದು ಭಾವಿಸಬೇಡಿ. ತನಗೆ ಬೇಕಾದ ಸುದ್ದಿಯನ್ನು ಜಾಗತಿಕ ಮಟ್ಟದಲ್ಲಿ ಬಿತ್ತಲು ಸಕರ್ಾರಗಳು ಮಾಧ್ಯಮಗಳನ್ನು ಸಮರ್ಥವಾಗಿ ಬಳಸುತ್ತವೆ. ಕಾಗರ್ಿಲ್ ಯುದ್ಧದ ಹೊತ್ತಲ್ಲಿ ರಕ್ಷಣಾ ಕಾರ್ಯದಶರ್ಿ ಬ್ರಿಜೇಶ್ ಮಿಶ್ರಾ ಈ ಬಗೆಯ ದಾಳಗಳನ್ನುದುರಿಸಿದ್ದು ಇಂದು ಇತಿಹಾಸ. ಚೀನಾದ ಪತ್ರಿಕೆಗಳು ಕಳೆದೆರಡು ದಿನದಿಂದ ಇದೇ ವಿಚಾರವನ್ನು ಚಚರ್ಿಸುತ್ತಿವೆ. ಟಿಬೇಟ್ ಮತ್ತು ತೈವಾನ್ ತಮ್ಮ ಅವಿಭಾಜ್ಯ ಅಂಗಗಳೆಂದು ವಾದಿಸುವುದರಲ್ಲಿ ಮಗ್ನವಾಗಿವೆ. ಅತ್ತ ತೈವಾನಿನ ಜನ ಭಾರತದ ಈ ಸಂದೇಶವನ್ನು ಬಲು ಆಸ್ಥೆಯಿಂದ ಸ್ವೀಕರಿಸಿ ಹೊಸ ಕನಸೊಂದನ್ನು ಕಾಣುತ್ತಿದ್ದಾರೆ. ಸೈವಾರ್ನಲ್ಲಿ ನಾವು ಹಾಕಿದ ದಾಳ ಯಶಸ್ಸು ಕಂಡಿದೆ. ಚೀನಾ ದಿನಕಳೆದಂತೆ ಬಲ ಕಳೆದುಕೊಳ್ಳುತ್ತಿರುವುದನ್ನು ಕಂಡ ಒಂದೊಂದೇ ರಾಷ್ಟ್ರಗಳು ಅದರ ತೆಕ್ಕೆಯಿಂದ ಆಚೆ ಬರುತ್ತಿವೆ. ಶ್ರೀಲಂಕಾ ಬಂದರೊಂದರ ನಿಮರ್ಾಣಕ್ಕೆ ಸಂಬಂಧಿಸಿದ ಒಪ್ಪಂದ ಮುರಿದುಕೊಂಡಿದ್ದರ ಹಿನ್ನೆಲೆ ಇದೇ! ಅಜಿತ್ ದೋವಲ್ ಬ್ರಿಕ್ಸ್ ಸಭೆಗೆ ಹೋದಾಗ ಸ್ವತಃ ಚೀನಾ ಅಧ್ಯಕ್ಷರೇ ಅವರೊಡನೆ ಮಾತನಾಡಲು ಉತ್ಸುಕರಾಗಿದ್ದಕ್ಕೂ ಇದೇ ಕಾರಣ. ಭಾರತದ ಈ ನಡೆಯಿಂದ ಗಲಿಬಿಲಿಗೊಳಗಾಗಿರುವ ಚೀನಾ, ಭಾರತದ ಬೆಂಬಲಕ್ಕೆ ನಿಲ್ಲ ಹೊರಟಿರುವ ಇಂಗ್ಲೆಂಡಿನೊಂದಿಗೂ ಶತ್ರುತ್ವ ಬೆಳೆಸಿಕೊಂಡಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ತಾನು ಯುದ್ಧ ನೌಕೆಯೊಂದಿಗೆ ಬರುತ್ತೇನೆಂದ ಆಸ್ಟ್ರೇಲಿಯಾವನ್ನು ‘ಕಚ್ಚಲು ಗೊತ್ತಿಲ್ಲದ ಬೊಗಳುವ ನಾಯಿ’ ಎಂದು ಜರಿದು ಸಮಸ್ಯೆಯನ್ನು ತನ್ನ ಮೈ ಮೇಲೆಳೆದುಕೊಂಡಿದೆ. ನಾಯಕತ್ವ ಬಲಾಢ್ಯವಾಗಿಲ್ಲದಾಗ ಮೆರೆದಾಡಿದ ಚೀನಾಕ್ಕೆ ಈಗ ಮೊದಲ ಬಾರಿಗೆ ಭಾರತ ಸಮರ್ಥ ಸವಾಲಾಗಿ ನಿಂತಿದೆ. ಭಾರತ ಯುದ್ಧ ಮಾಡದೇ ಗೆದ್ದುಬಿಟ್ಟಿದೆ.

ಇನ್ನು ಏಷಿಯಾದಲ್ಲಿ ನಮ್ಮದೇ ಹವಾ. ಬರಲಿರುವ ದಿನಗಳನ್ನು ಕಾದು ನೋಡಿ.

 

Comments are closed.