ವಿಭಾಗಗಳು

ಸುದ್ದಿಪತ್ರ


 

ಸೈನಿಕರ ಸಾವಿನ ಪ್ರತೀಕಾರ ಆಗಲೇಬೇಕಿದೆ!!

ಒಟ್ಟಾರೆ ಇವರಿಗೆ ಭಾರತದಲ್ಲಿ ಆಂತರಿಕ ದಂಗೆಗಳಾಗಬೇಕೆಂಬಂತೆ ನೋಡಿಕೊಳ್ಳಬೇಕಂಬ ಹಠವಿದೆ. ನರೇಂದ್ರಮೋದಿಯವರನ್ನು ಸೋಲಿಸಲು ಅವರಿಗೀಗ ಇರುವುದು ಇದೊಂದೇ ಮಾರ್ಗ. ನಾವೂ ಕೂಡ ಧಾವಂತಕ್ಕೆ ಬಿದ್ದು ಸಣ್ಣ ತಪ್ಪನ್ನು ಎಸಗಿದರೂ ಭಾರತದ ಒಟ್ಟಾರೆ ವಾದ ಜಾಗತಿಕ ಮಟ್ಟದಲ್ಲಿ ಸೋತು ಹೋಗುತ್ತದೆ. ಬಹುಶಃ ಈ ಕಾಲಘಟ್ಟ ತುಂಬ ಗಂಭೀರವಾದ್ದು. ನಾವೀಗ ಎಲ್ಲಾ ವಿಚಾರಗಳಲ್ಲೂ ಸಂಯಮ ಕಾಪಾಡಿಕೊಳ್ಳಬೇಕಿದೆ.

ಪುಲ್ವಾಮಾ ದಾಳಿಯ ನಂತರ ದೇಶದಲ್ಲಿ ವಿಚಿತ್ರವಾದ ವಾತಾವರಣ ಉಂಟಾಗಿದೆ. ಪ್ರತಿಯೊಬ್ಬರೂ ಪ್ರತೀಕಾರದ ಮಾತುಗಳನ್ನಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸಿಬಿಡಬೇಕೆಂಬ ತುಡಿತ ಎಲ್ಲರಲ್ಲೂ ಇದ್ದದ್ದೇ. ಆದರೆ ಈ ಬಾರಿಯ ಆಕ್ರೋಶ ಹಿಂದೆಂದಿಗಿಂತಲೂ ಜೋರಾಗಿದೆ. ಈ ನಡುವೆಯೇ ಒಂದಷ್ಟು ಬುದ್ಧಿಜೀವಿಗಳು ಮತ್ತು ಜೀವಪರ ಎನ್ನುವ ವಿಚಾರಧಾರೆಯೊಂದಿಗೆ ಭಾರತದ ವಿರೋಧದ ಮಾತುಗಳನ್ನಾಡುವವರು ಮೂರ್ನಾಲ್ಕು ದಿನ ಬಿಲದಲ್ಲಿ ಅಡಗಿ ಕೂತಿದ್ದು ಈಗ ಹೊರಬರಲಾರಂಭಿಸಿದ್ದಾರೆ. ಯುದ್ಧವನ್ನು ವಿರೋಧಿಸುವ ನೆಪದಲ್ಲಿ ಭಾರತೀಯ ಸೇನೆಯ ಮನೋಬಲ ಕುಸಿಯುವಂತೆ ಮಾಡುತ್ತಿದ್ದಾರೆ. ತನ್ನ 40 ಜನರನ್ನು ಕಳೆದುಕೊಂಡ ನಂತರವೂ ಭಾರತೀಯ ಸೇನೆ ಒಂದಿನಿತೂ ಜಗ್ಗಲಿಲ್ಲ ಏಕೆಂದರೆ ದೇಶದ ನೇತೃತ್ವ ಅದರೊಂದಿಗೆ ಬಲವಾಗಿ ಆತುಕೊಂಡಿದೆ ಮತ್ತು ದೇಶದ 128 ಕೋಟಿ ಜನ ಸೇನೆಯನ್ನು ಆರಾಧಿಸುತ್ತಿದ್ದಾರೆ. ಇದು ಎದುರಾಳಿಗಳಲ್ಲಿ ಆತಂಕವನ್ನು ಹುಟ್ಟಿಸಬಲ್ಲಂಥದ್ದು. ಈ ಮನೋಬಲ ಕುಸಿಯುವಂತೆ ಮಾಡದಿದ್ದರೆ ಭಾರತದ ಕೈ ಮೇಲಾಗಿಬಿಡಬಹುದು ಎಂಬ ಭಾವನೆಯಿಂದಲೇ ಇವರೆಲ್ಲರೂ ಈಗ ಬೀದಿಗೆ ಬಂದಿರುವುದು.

2

ಶೆಹ್ಲಾ ರಶೀದ್ ನಿಮಗೆ ನೆನಪಿರಬೇಕು. ಜೆಎನ್ಯುನಲ್ಲಿ ಕಳೆದ ದಶಕದಿಂದಲೂ ಅಧ್ಯಯನ ಮಾಡುತ್ತಿರುವ ವಿದ್ಯಾಥರ್ಿನಿ. ತುಕ್ಡೇ ತುಕ್ಡೇ ಗ್ಯಾಂಗಿನ ಆಸ್ಥಾನ ನರ್ತಕಿ. ಕಥುವಾದಲ್ಲಿ ಬಾಲಕಿಯ ಸಾವು ನಡೆದಾಗ ಅದನ್ನು ಅತ್ಯಾಚಾರವೆಂದು ಸಾಧಿಸಲು ಹೆಣಗಾಡಿ ಕೊನೆಗೆ ಅದನ್ನು ಹಿಂದೂ-ಮುಸ್ಲೀಂ ಕದನವಾಗಿ ಮಾರ್ಪಡಿಸಲು ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಹೆಸರನ್ನೂ ಬಹಿರಂಗಪಡಿಸಿ ಪ್ರತಿಯೊಬ್ಬ ಹಿಂದುವೂ ತಲೆತಗ್ಗಿಸುವಂತೆ ಮಾಡಿದ್ದಳು. ಅಷ್ಟೇ ಅಲ್ಲ. ಅತ್ಯಾಚಾರಕ್ಕೊಳಗಾದ ಮನೆಯವರಿಗೆ ಹಣ ಕೊಡುತ್ತೇನೆಂದು ಜನರನ್ನು ನಂಬಿಸಿ 30 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಯಾರಿಗೂ ಕೊಡದೇ ಪಂಗನಾಮ ಹಾಕಿದ್ದಳು. ಈಗ ಈ ಘಟನೆಯ ಹೊತ್ತಲ್ಲಿ ದೇಶದ ಬೇರೆ ಬೇರೆ ಭಾಗದಲ್ಲಿರುವ ಕಶ್ಮೀರದ ತರುಣರನ್ನು ಹಿಂದೂಗಳು ಹೊಡೆಯುತ್ತಿದ್ದಾರೆಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾಳೆ. ಅದಕ್ಕೆ ಕುಖ್ಯಾತ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಮತ್ತಿತರರ ಸಾಥು ಬೇರೆ! ಉತ್ತರಾಖಂಡದ ಹಾಸ್ಟೆಲ್ ಒಂದರಲ್ಲಿ ಹೆಣ್ಣುಮಕ್ಕಳನ್ನು ಕೂಡಿ ಹಾಕಿ ಅವರನ್ನು ಬರ್ಬರವಾಗಿ ಬಡಿಯಲಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಆಕೆ ಹರಡಿಸಿದ್ದಳು. ತಕ್ಷಣ ಅಲ್ಲಿನ ಪೊಲೀಸರು ಆ ಜಾಗಕ್ಕೆ ಹೋಗಿ ಅಲ್ಲಿ ಅಂತಹ ಯಾವುದೇ ಘಟನೆ ನಡೆಯುತ್ತಿಲ್ಲವೆಂಬ ಹೇಳಿಕೆಯನ್ನು ಬಿಡುಗಡೆ ಮಾಡಿದ ನಂತರವೂ ಇವರ ಅರಚಾಟ ನಿಂತಿರಲಿಲ್ಲ. ರಾಜ್ದೀಪ್ ಅಂತೂ ಕಾಶ್ಮೀರಿ ತರುಣರಿಗೆ ಎಲ್ಲಿ ಸಮಸ್ಯೆಯಾದರೂ ತನಗೆ ಕರೆಮಾಡಿ ಎಂದು ಜೀವಪರ ನಿಲುವು ತಳೆದವನಂತೆ ಮಾತನಾಡಿ ಎಲ್ಲರಿಂದ ಛೀಮಾರಿಗೆ ಒಳಗಾದ.

3

ಒಟ್ಟಾರೆ ಇವರಿಗೆ ಭಾರತದಲ್ಲಿ ಆಂತರಿಕ ದಂಗೆಗಳಾಗಬೇಕೆಂಬಂತೆ ನೋಡಿಕೊಳ್ಳಬೇಕಂಬ ಹಠವಿದೆ. ನರೇಂದ್ರಮೋದಿಯವರನ್ನು ಸೋಲಿಸಲು ಅವರಿಗೀಗ ಇರುವುದು ಇದೊಂದೇ ಮಾರ್ಗ. ನಾವೂ ಕೂಡ ಧಾವಂತಕ್ಕೆ ಬಿದ್ದು ಸಣ್ಣ ತಪ್ಪನ್ನು ಎಸಗಿದರೂ ಭಾರತದ ಒಟ್ಟಾರೆ ವಾದ ಜಾಗತಿಕ ಮಟ್ಟದಲ್ಲಿ ಸೋತು ಹೋಗುತ್ತದೆ. ಬಹುಶಃ ಈ ಕಾಲಘಟ್ಟ ತುಂಬ ಗಂಭೀರವಾದ್ದು. ನಾವೀಗ ಎಲ್ಲಾ ವಿಚಾರಗಳಲ್ಲೂ ಸಂಯಮ ಕಾಪಾಡಿಕೊಳ್ಳಬೇಕಿದೆ. 128 ಕೋಟಿ ಜನರ ಒಟ್ಟು ಆಕ್ರೋಶ ಪ್ರಧಾನಿಯೊಬ್ಬರ ಆಕ್ರೋಶಕ್ಕೆ ಸಮ. ಈ ಘಟನೆಯಾದಾಗಿನಿಂದ ಅವರ ಚಹರೆ ಬೇರಯೇ ಆಗಿಹೋಗಿದೆ. ಹಾಗಂತ ಯಾವ ನಿರ್ಣಯವನ್ನೂ, ಯಾವ ಆಕ್ರಮಣವನ್ನೂ ತಕ್ಷಣಕ್ಕೆ ಮಾಡಲಾಗದು. ಸಜರ್ಿಕಲ್ ಸ್ಟ್ರೈಕ್ಗೂ 11 ದಿನಗಳ ಸಮಯ ಹಿಡಿದಿತ್ತು ಎಂಬುದನ್ನು ನಾವು ಮರೆಯಬಾರದು. ಈ 11 ದಿನಗಳ ಅವಧಿಯಲ್ಲೂ ಎರಡು ಬಾರಿ ದಿನಾಂಕ ಮುಂದೂಡಲ್ಪಟ್ಟಿತ್ತು ಎಂಬುದನ್ನೂ ನೆನಪಿಡಿ. ಈ ಬಾರಿ ನಾವು ಅದಕ್ಕಿಂತಲೂ ಬಲವಾದ ದಾಳಿ ಸಂಘಟಿಸಬೇಕಿದೆ. ಇದು ಸುದೀರ್ಘ ಕಾಲ ಭಾರತದ ಪಾಕಿಸ್ತಾನ ಪಾಲಿಸಿಯನ್ನು ನಿರ್ಧರಿಸಲಿದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಒಂದೆಡೆ ಪಾಕಿಸ್ತಾನವನ್ನು ಸೂಕ್ಷ್ಮವಾಗಿ ಗಮನಿಸಿದಷ್ಟೇ ಒಳಗೆ ಅಡಗಿರುವ ಈ ಬುದ್ಧಿಜೀವಿಗಳ ನಡೆಯನ್ನೂ ಅವಲೋಕಿಸುತ್ತಿರಿ. ಇವರು ಇಡಿಯ ವಿಚಾರಧಾರೆಯನ್ನು ಯಾವಾಗ ಬೇಕಿದ್ದರೂ ತಿರುಗಿಸಿಬಿಡಬಲ್ಲರು. ಸಜರ್ಿಕಲ್ ಸ್ಟ್ರೈಕ್ನ ಸಿನಿಮಾದ ಖ್ಯಾತಿಯಿಂದ ಕಂಗೆಟ್ಟಿದ್ದ ಈ ಅಯೋಗ್ಯರು ಈಗ ಹೊಸದೇನನ್ನೋ ಸೃಷ್ಟಿಸಬಲ್ಲರು. ಮೈಯೆಲ್ಲಾ ಕಣ್ಣಾಗಿರಬೇಕಾದ ಅವಶ್ಯಕತೆಯಿದೆ. ಈಗ ಸೈನಿಕರು ಭಯೋತ್ಪಾದಕರನ್ನು ಕೊಂದರೂ ಕಶ್ಮೀರದ ನಾಗರಿಕರನ್ನೇ ಕೊಂದು ಹಾಕಿದರೆಂದು ಇವರು ಬೊಬ್ಬೆ ಇಡುವ ಸಾಧ್ಯತೆಯಿದೆ. ಸಿಆರ್ಪಿಎಫ್ನ ಟ್ರಕ್ಕಿನ ಮೇಲೆ ದಾಳಿ ಮಾಡಿದ ಗಾಡಿಗೆ ಪರವಾನಗಿ ಸಿಕ್ಕಿದ್ದೂ ಕೂಡ ಇಂತಹ ಜೀವಪರ ಹೋರಾಟದ ದಯೆಯಿಂದಲೇ. ಹಿಂದೊಮ್ಮೆ 2014ರಲ್ಲಿ ಹೀಗೆ ಸಾಗುತ್ತಿದ್ದ ವಾಹನಗಳನ್ನು ಲೆಕ್ಕಿಸದೇ ನುಗ್ಗಿದ ಗಾಡಿಯೊಂದರ ಮೇಲೆ ಸೈನಿಕನೊಬ್ಬ ದಾಳಿ ನಡೆಸಿದಾಗ ಜೀವಪರ ಹೋರಾಟಗಾರರೆಲ್ಲ ಎದೆ ಬಡಿದುಕೊಂಡು ಅತ್ತಿದ್ದರು. ಆಗಲೇ ಸೈನಿಕರ ವಾಹನಗಳು ಹೋಗುವಾಗ ಇತರರನ್ನು ತಡೆಯಬಾರದು ಎಂಬ ನಿಯಮ ರೂಪುಗೊಂಡಿದ್ದು. ಅಂದು ಗುಂಡಿನ ದಾಳಿ ನಡೆಸಿದ್ದ ಆ ಸೈನಿಕ ಇಂದೂ ತಿಹಾರ್ ಜೈಲಿನಲ್ಲಿದ್ದಾನೆ! ಅವನು ಮಾಡಿದ ತಪ್ಪಾದರೂ ಏನು ಎಂದು ಇಂದು ಪ್ರಶ್ನಿಸಬೇಕಾದ ಅನಿವಾರ್ಯತೆಯಿದೆ.

4

ಕಾಶ್ಮೀರದ ಸಮಸ್ಯೆ ಭಿನ್ನ. ಅದಕ್ಕಿರುವ ಪರಿಹಾರ ಪಾಕಿಸ್ತಾನವನ್ನು ಚೂರು ಮಾಡುವುದು ಮಾತ್ರ. ಮೋದಿ ಈ ಐದು ವರ್ಷಗಳಲ್ಲಿ ಸ್ವಲ್ಪ ಹೆಚ್ಚಿನ ಪ್ರಯತ್ನ ಹಾಕಿದ್ದರೆ ಅದು ಆಗಿಯೇ ಬಿಡುತ್ತಿತ್ತೇನೋ. ಅವರು ಪಾಕಿಸ್ತಾನಕ್ಕೆ ಆಥರ್ಿಕ ದಿಗ್ಬಂಧನ ಹೇರುವ ಪ್ರಯತ್ನವನ್ನು ಮಾಡುತ್ತಾ ಆ ಮೂಲಕವೇ ಅದನ್ನು ನಾಶಮಾಡಿಬಿಡುವ ಯತ್ನದಲ್ಲಿ ತೊಡಗಿದ್ದರು. ಈಗಲೂ ಕಾಲ ಮಿಂಚಿಲ್ಲ. ಪಾಕಿಸ್ತಾನಕ್ಕೆ ಸೂಕ್ತ ಪಾಠ ಕಲಿಸಲು ಸುತ್ತಲ ರಾಷ್ಟ್ರಗಳ ಮೂಲಕ ದಿಗ್ಭಂಧನ ಹೇರಿಸುವಂತಹ ಅವಶ್ಯಕತೆಯಿದೆ. ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರರ ಕೈಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಪಾಕಿಸ್ತಾನದ ವಿರುದ್ಧ ಎದೆಸೆಟಸಿ ನಿಲ್ಲುವಂತೆ ಮಾಡಬೇಕಾದ ಜರೂರತ್ತಿದೆ. ಅದಾಗಲೇ ಆ ಪ್ರಯತ್ನ ಜೋರಾಗಿ ನಡೆಯುತ್ತಿದೆ. ಕಾದು ನೋಡುವ ಅವಧಿಯಷ್ಟೇ ಇದು!

Comments are closed.