ವಿಭಾಗಗಳು

ಸುದ್ದಿಪತ್ರ


 

ಸೋರುತಿಹುದು ಮನೆಯ ನೆಲ ಮಾಳಿಗೆ!!

ಪಾಪ. ಇಡಿಯ ಕಾಂಗ್ರೆಸ್ಸು ಪತರಗುಟ್ಟಿದೆ. ಜೊತೆಗೆ ಮೋದಿ ವಿರೋಧಿಸುತ್ತಿದ್ದ ಚೀನಾ ಚೇಲಾಗಳು ಕೂಡ. ಅವರು ಮೈಯೆಲ್ಲಾ ಪರಚಿಕೊಳ್ಳುತ್ತಿದ್ದಾರೆ. ಅದಾಗಲೇ ಕೆಲವರು ಪ್ರತಿಭಟನೆ ಮಾಡಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಮಂಗಳೂರಿನಲ್ಲಿರುವ ತೆರಿಗೆ ಕಚೇರಿಗೆ ಕಲ್ಲೆಸೆದು ಬಂದಿದ್ದಾರೆ. ಗೋವಿನ ಹೆಸರಿನ ರಾಜಕಾರಣ ಮಾಡಬೇಕೆಂದು ಆಲೋಚಿಸುತ್ತಿದ್ದ ಕಾಂಗ್ರೆಸ್ ಈಗ ಸ್ವಂತದ ಮನೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ದೇಶದಲ್ಲಿ ಎಲ್ಲೆಲ್ಲೊ ಬಾಂಬ್ ಸ್ಫೋಟಗಳು ನಡೆಯುತ್ತವೆಂದು ಎಲ್ಲರೂ ಊಹಿಸುತ್ತ ಕುಳಿತಿದ್ದರೆ ಅದು ಯಾರ್ಯಾರದೋ ಕಾಲಬುಡದಲ್ಲಿ ಸಿಡಿಯುತ್ತಿದೆ. ಅತ್ತ ಡೋಕ್ಲಂನಲ್ಲಿ ಚೀನಾದೆದುರಿಗೆ ಭಾರತದ ಸೈನಿಕರ ರಂಪಾಟಕ್ಕೆ ಚೀನಾ ಪತ್ರಿಕೆಗಳು ಪತರಗುಟ್ಟಿವೆ. ಇತ್ತ ಕಾಶ್ಮೀರದಲ್ಲಿ ಸದಾ ಇತರರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಭಯೋತ್ಪಾದಕರು ತಮ್ಮ ಜೀವವುಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಚೀನಿ ರಾಯಭಾರಿಯನ್ನು ಭೇಟಿ ಮಾಡಿ ಬಂದ ರಾಹುಲ್ ಗಾಂಧಿ ಹೊಸದೇನೋ ಪ್ರಯತ್ನಕ್ಕೆ ಕೈಹಾಕಿ ಅಲ್ಲಲ್ಲಿ ನಡೆದ ಗೋಸಂಬಂಧಿ ಹತ್ಯೆಗಳನ್ನು ಸುದ್ದಿಯಾಗಿಸುವ ತವಕದಲ್ಲಿದ್ದರು. ದೇಶದಾದ್ಯಂತ ಹಿಂದೂ-ಮುಸ್ಲೀಂ ಕದನಗಳು ಹೆಚ್ಚಾಗುವಂತೆ ಮಾಡಿ ಕೊನೆಯ ಒಂದೂವರೆ ವರ್ಷದ ಅವಧಿಯಲ್ಲಿ ಮೋದಿ ಕಿರಿಕಿರಿ ಅನುಭವಿಸುವಂತೆ ಮಾಡುವ ಆತುರವೂ ಇತ್ತು ಅವರಿಗೆ. ಅದಕ್ಕೆ ಪೂರಕವಾಗಿಯೇ ದೆಹಲಿಯಿಂದ ನೂರು ಜನರ ಬೈಕ್ ರ್ಯಾಲಿ ದೇಶದಾದ್ಯಂತ ತಿರುಗಿ ಗೋವಿನ ವಿಚಾರದಲ್ಲಿ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಶುರು ಮಾಡಿತು. ಸಂಜಯ್ ಝಾ ಮುಸಲ್ಮಾನರಿಗಿಂತ ಗೋವಿನ ಪ್ರಾಣವೇ ಹೆಚ್ಚಾಯಿತೇ ಎಂಬರ್ಥದ ಲೇಖನ ಬರೆದು ಆತಂಕ ವ್ಯಕ್ತ ಪಡಿಸಿದರು. ಅದನ್ನು ಮೂಲ ಬಂಡವಾಳವಾಗಿಸಿಕೊಂಡು ಟ್ವೀಟ್ ಮಾಡಿದ ಶಶಿ ತರೂರು ತಮ್ಮ ಪಾಲಿನದ್ದನ್ನೂ ಒಂದಷ್ಟು ಸೇರಿಸಿ ಕೈ ಮುಗಿದರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಿಂದ ಸಾವಿರಾರು ಮೈಲು ದೂರದ ದಾದ್ರಿಗೆ ಹೋಗಿ ಸತ್ತವರಿಗೆ ಸಾಂತ್ವನ ಹೇಳಿಬಂದರು. ಅಲ್ಲಿಗೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಒಟ್ಟೂ ಯೋಜನೆ ಪಕ್ಕಾ ಆಯಿತು. ಸ್ವಲ್ಪ ಎಡವಟ್ಟಾಗಿದ್ದರೂ ದೇಶದಾದ್ಯಂತ ಹಿಂದೂ ಮುಸ್ಲೀಂ ದಂಗೆಗಳೇ ಆಗಿ ರಾಷ್ಟ್ರೀಯ ಮನೋಸ್ಥೈರ್ಯವೇ ಕುಸಿದು ಹೋಗಬೇಕಿತ್ತು. ಚೀನಾದೆದುರು ಭಾರತೀಯ ಪಡೆ ಮಾನಸಿಕವಾಗಿ ಹಿನ್ನೆಡೆ ಅನುಭವಿಸಿರುತ್ತಿತ್ತು. ಅತ್ತ ಕಾಶ್ಮೀರದಲ್ಲಿ ನಡೆದಿರುವ ಆಪರೇಷನ್ ಆಲ್ಔಟ್ ಕೂಡ ಕ್ಷಣಕಾಲ ಹಿಂಜರಿತಕ್ಕೆ ಒಳಗಾಗಿರುತ್ತಿತ್ತು. ಹೇಳಿದೆನಲ್ಲ, ಬೇರೆಯವರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಬೇಕೆಂದುಕೊಂಡಿದ್ದವರೆಲ್ಲ ಈಗ ತಮ್ಮ ಮನೆಗೆ ಹಚ್ಚಿರುವ ಬೆಂಕಿ ಆರಿಸುವಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ. ತಲೆ ಕೆಡಿಸಿಕೊಳ್ಳಬೇಡಿ. ಸಾವಿರ ಗುಡಿಸಲುಗಳಿಗೆ ಬೆಂಕಿ ಹಚ್ಚುವ ತವಕದಲ್ಲಿದ್ದ ಸಿರಿವಂತನ ಬಂಗಲೆಯೊಂದು ಉರಿದುಹೋದರೆ ಬೇಸರಿಸುವ ಕಾರಣವಿಲ್ಲ.

1

ಹೌದು. ನಾನು ಡಿಕೆ ಶಿವಕುಮಾರ್ರವರ ಬಗ್ಗೆಯೇ ಮಾತನಾಡುತ್ತಿರೋದು. ಅವರ ಮನೆಯ ಮೇಲೆ, ಇನ್ನೊಂದು ಮನೆಯ ಮೇಲೆ, ಮತ್ತೊಂದು ಮನೆಯ ಮೇಲೆ, ಅಲ್ಲೊಂದು ಮನೆ-ಇಲ್ಲೊಂದು ಮನೆಯ ಮೇಲೆ (ಎಷ್ಟೂಂತ ಹೇಳೋದು? ಮುಂಬೈನಲ್ಲಿಯೇ ನೂರಾರು ಕೋಟಿ ಬೆಲೆ ಬಾಳುವ ನೂರಕ್ಕೂ ಹೆಚ್ಚು ಫ್ಲ್ಯಾಟುಗಳಿವೆಯಂತೆ!) ಭರ್ಜರಿ ದಾಳಿಗಳು ನಡೆದವು. ಹತ್ತಾರು ಕೋಟಿ ನಗದು ವಶ ಪಡಿಸಿಕೊಳ್ಳಲಾಯಿತು. ರಾಜ್ಯದ ಜನತೆ ಕರೆಂಟ್ ಹೋಗಿ ಅಂಧಕಾರದಲ್ಲಿ ನರಳುವಾಗಲೂ ತಲೆ ಕೆಡಿಸಿಕೊಳ್ಳದ ಇಂಧನ ಸಚಿವ ಏಕಾಕಿ ದಾಳಿಯಾದಾಗ ಮುಖ ಬಾಡಿಸಿಕೊಂಡು ಕುಳಿತಿದ್ದುದನ್ನು ನೋಡಬೇಕಿತ್ತು. ಪ್ರತಿಯೊಬ್ಬ ಟೌನ್ಹಾಲ್ ಮಿತ್ರನ ಕರುಳು ಕಿತ್ತು ಬರುವಂತಿತ್ತು. ಗುಜರಾತಿನ ಶಾಸಕರನ್ನು ರೆಸಾಟರ್್ನಲ್ಲಿ ಕೂಡಿಹಾಕಿಕೊಂಡು ಕಾಂಗ್ರೆಸ್ಸು ರೆಸಾಟರ್್ ರಾಜಕಾರಣ ಮಾಡುವಾಗ ಈ ದಾಳಿ ನಡೆದದ್ದು ಅನೇಕರ ನಿದ್ದೆ ಕೆಡಿಸಿಬಿಟ್ಟಿತ್ತು. ಮೋದಿ ಹೇಳಿದೊಡನೆ ದಾಳಿ ಮಾಡಲು ತಯಾರಾಗಿ ನಿಂತ ತೆರಿಗೆ ಅಧಿಕಾರಿಗಳು ಎಂದೆಲ್ಲ ಅನೇಕರು ಬಾಯಿ ಬಡಿದುಕೊಂಡರು. ಇದರಲ್ಲಿ ತಮ್ಮನ್ನು ತಾವು ಬುದ್ಧಿವಂತರೆಂದು ಕರೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮೆರೆಯುವ ಅನೇಕರು ಸೇರಿದ್ದರು. ಐಟಿ ಅಧಿಕಾರಿಗಳೆಂದರೆ ವಿವೇಚನಾ ಸಾಮಥ್ರ್ಯವಿಲ್ಲದ ಪಕ್ಷದ ಕಾರ್ಯಕರ್ತರಂತಲ್ಲ ಎಂದು ಅವರಿಗೆ ಬಿಡಿಸಿ ಹೇಳುವವರು ಯಾರು? ಇಷ್ಟಕ್ಕೂ ಮೋದಿಯ ಮಾತಿಗೆ ಈ ಪರಿಯ ದೊಡ್ಡದೊಂದು ಪಡೆ ಎರಡೇ ದಿನದಲ್ಲಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಅಖಾಡಾಕ್ಕೆ ಧುಮುಕುತ್ತದೆನ್ನುವನ್ನು ಒಪ್ಪುವುದಾದರೆ, ಅವರ ತಾಕತ್ತನ್ನು ಮೆಚ್ಚಲೇ ಬೇಕು. ಅಧಿಕಾರಿ ವರ್ಗವನ್ನು ಈ ಪರಿ ಏಕಮುಖಿಯಾಗಿ ಪ್ರೇರೇಪಿಸುವ ಸಾಮಥ್ರ್ಯ ಸಾಮಾನ್ಯವೇನು? ತಮ್ಮಡಿಯಲ್ಲೇ ಇರುವ ಪೊಲೀಸು ಇಲಾಖೆಯನ್ನು ಸೂಕ್ತವಾಗಿ ಹಿಡಿತಲ್ಲಿಟ್ಟುಕೊಳ್ಳಲಾಗದೇ ಹೆಣಗಾಡುತ್ತಿರುವ, ಅಧಿಕಾರಿಗಳನ್ನು ಏಕಸೂತ್ರದಲ್ಲಿ ಬಂಧಿಸಿ ಕೆಲಸ ಮಾಡಿಸಿಕೊಳ್ಳಲಾಗದೇ ಕಣ್ಣೀರಿಡುತ್ತಿರುವ ಮುಖ್ಯಮಂತ್ರಿಗಳು ಸಮರ್ಥವಾಗಿ ರಾಜ್ಯ ಮುನ್ನೆಡೆಸುವ ಪಾಠವನ್ನು ಮೋದಿಯಿಂದ ಕಲಿತು ಬರುವುದೇ ಒಳ್ಳೆಯದು.

ಇದೆಲ್ಲವನ್ನೂ ಬದಿಗಿಟ್ಟು ಒಂದು ಪ್ರಶ್ನೆ ಕೇಳಿಕೊಳ್ಳಿ. ಜನಾರ್ದನ ರೆಡ್ಡಿಯವರ ವಿರುದ್ಧ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ಅವತ್ತು ಅರಚಾಡಿ ರಂಪ ಮಾಡಿದ್ದರು. ಈತನನ್ನು ಎಲ್ಲ ದಿಕ್ಕಿನಿಂದಲೂ ಮುಗಿಸಿಬಿಡುತ್ತೇನೆಂದು ಸಂಕಲ್ಪ ಮಾಡಿ ಬಳ್ಳಾರಿಯಲ್ಲಿ ತೊಡೆ ತಟ್ಟಿದ್ದರು. ಅದಾದ ನಂತರವೇ ಇಲ್ಲಿ ಐಟಿ ದಾಳಿಗಳಾಗಿ ಕೊನೆಗೆ ರೆಡ್ಡಿ, ಜೈಲಿಗೂ ಹೋಗಿ ಹೈರಾಣಾಗಿ ಮರಳಿ ಬಂದರು. ಆಗೆಲ್ಲ ಬಲಪಂಥೀಯರೆನಿಸಿಕೊಂಡವರು ಕಣ್ಣಿರಿಟ್ಟು ಅಂಗಿ ಹರಕೊಳ್ಳಲಿಲ್ಲ. ರಾಜಕೀಯ ದ್ವೇಷದ ಮಾತಾಡುತ್ತ ಕಾಂಗ್ರೆಸ್ಸಿಗರಿಗೆ ಶಾಪ ಹಾಕಲಿಲ್ಲ. ಬದಲಿಗೆ ಟೀವಿಗಳಲ್ಲಿ ಬಂದ ರಂಗುರಂಗಿನ ವರದಿಯನ್ನು ಆನಂದಿಸಿದರು, ಕರ್ಮ ಸಿದ್ಧಾಂತದ ಕುರಿತಂತೆ ಹೆಮ್ಮೆ ಪಟ್ಟುಕೊಂಡರು. ಹೆಚ್ಚೆಂದರೆ ಮನೆಗಳಲ್ಲಿ ‘ಪಾಪ! ಇದ್ದಾಗ ಚೆನ್ನಾಗಿ ಮೆರೆದ’ ಅಂತ ನಿಟ್ಟುಸಿರು ಬಿಟ್ಟಿರಬಹುದಷ್ಟೇ. ಆದರೆ ಈಗಿನ ಕಥೆ ಬೇರೆಯೇ. ಡಿಕೆಶಿವಕುಮಾರ್ ಮನೆಯಲ್ಲಿ ಕೋಟಿ-ಕೋಟಿ ರೂಪಾಯಿ ಸಿಗುತ್ತಿರುವಾಗ ಸಾಮಾಜಿಕ ನ್ಯಾಯದ ಪರವಾಗಿದ್ದವರ ವರಸೆಯೇ ಬದಲಾಗಿ ಬಿಟ್ಟಿದೆ. ಸಂಪತ್ತನ್ನು ಸಮಾನವಾಗಿ ಹಂಚಬೇಕೆಂದು ಪುಂಖಾನುಪುಂಖವಾಗಿ ಬರೆದು-ಮಾತನಾಡುತ್ತಿದ್ದವರೆಲ್ಲ ಯಾಕೋ ನರೇಂದ್ರ ಮೋದಿಯ ಶತ್ರುತ್ವ ಭರಿತ ರಾಜಕಾರಣದ ಕುರಿತಂತೆ ಕೆಂಡಕಾರುತ್ತಿದ್ದಾರೆ. ಆಯಿತು. ಈ ದಾಳಿ ದ್ವೇಷದಿಂದ ಕೂಡಿದ್ದು ಅಂತಾನೆ ಸ್ವಲ್ಪ ಕಾಲ ನಂಬೋಣ. ಆದರೆ ಮಂತ್ರಿ ಮಹೋದಯರ ಮನೆಯಲ್ಲಿ ಅಷ್ಟೆಲ್ಲ ಹಣ ಸಿಕ್ಕಿತಲ್ಲ ಅದಕ್ಕೇನೆನ್ನೋಣ? ಮುಂಬೈನ ಬಂಗಲೆಗಳ ಲೆಕ್ಕ ಏನು ಮಾಡೋಣ? ಜನರ ಕೈಲಿ ಡೀಮಾನಿಟೈಜéೇಷನ್ನಿಂದಾಗಿ ಹಣ ಓಡಾಡುತ್ತಿಲ್ಲವೆಂದ ಪುಣ್ಯಾತ್ಮನ ಮನೆಯಲ್ಲಿ ಹೊಸ ನೋಟುಗಳು ಕಂತೆ ಕಂತೆ ಸಿಕ್ಕಿದವಲ್ಲ ಅದಕ್ಕಾದರೂ ಮಾತಾಡೋದು ಬೇಡವೇ? ರೆಸಾಟರ್್ನ ಹಾಸಿಗೆಯಡಿಯಲ್ಲಿ ಕಂತೆ ಕಂತೆ ನೋಟು ಪೇರಿಸಿಟ್ಟಿದ್ದರಂತಲ್ಲ ಇದು ಆಡಿಕೊಳ್ಳಬೇಕಾದ ಸಂಗತಿಯಲ್ಲವೇನು?

3

ಪಾಪ. ಇಡಿಯ ಕಾಂಗ್ರೆಸ್ಸು ಪತರಗುಟ್ಟಿದೆ. ಜೊತೆಗೆ ಮೋದಿ ವಿರೋಧಿಸುತ್ತಿದ್ದ ಚೀನಾ ಚೇಲಾಗಳು ಕೂಡ. ಅವರು ಮೈಯೆಲ್ಲಾ ಪರಚಿಕೊಳ್ಳುತ್ತಿದ್ದಾರೆ. ಅದಾಗಲೇ ಕೆಲವರು ಪ್ರತಿಭಟನೆ ಮಾಡಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಮಂಗಳೂರಿನಲ್ಲಿರುವ ತೆರಿಗೆ ಕಚೇರಿಗೆ ಕಲ್ಲೆಸೆದು ಬಂದಿದ್ದಾರೆ. ಗೋವಿನ ಹೆಸರಿನ ರಾಜಕಾರಣ ಮಾಡಬೇಕೆಂದು ಆಲೋಚಿಸುತ್ತಿದ್ದ ಕಾಂಗ್ರೆಸ್ ಈಗ ಸ್ವಂತದ ಮನೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ಹಾಗಂತ ಇಷ್ಟೇ ಅಲ್ಲ. ದೆಹಲಿಯ ಪಡಸಾಲೆಗಳಲ್ಲಿ ಅದಾಗಲೇ ಶಶಿ ತರೂರು ಸುದ್ದಿ ಮಾಡುತ್ತಿದ್ದಾರೆ. ಸುನಂದಾ ಪುಷ್ಕರ್ ಕೊಲೆಯ ಕೇಸು ತೆರೆದುಕೊಳ್ಳುತ್ತಿದ್ದಂತೆ ಆತ ಹೆಂಗೆಂಗೋ ಆಡುತ್ತಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಈ ವಿಚಾರವಾಗಿ ಕರೆದ ಪತ್ರಿಕಾಗೋಷ್ಠಿಗೆ ರಿಪಬ್ಲಿಕ್ ಚಾನೆಲ್ಲಿನ ಪತ್ರಕರ್ತರನ್ನು ಹೊರಗೆ ತಳ್ಳಿ ಸುದ್ದಿ ಮಾಡಿದ್ದರು. ಕಾರಣವೇನು ಗೊತ್ತೇ? ರಿಪಬ್ಲಿಕ್ ಚಾನೆಲ್ಲು ಈ ಸುದ್ದಿಯನ್ನು ಹೊರಗೆ ತಂದಿತ್ತು ಅಂತ. ಇಷ್ಟಕ್ಕೂ ಶಶಿ ತರೂರನ್ನು ಕಾಪಾಡಲು ಇಡಿಯ ಕಾಂಗ್ರೆಸ್ಸು ಹಿಂದೆ ಬಿದ್ದಿರುವುದೇತಕ್ಕೆ? ಅಲ್ಲದೇ ಈ ಹಿಂದೆ ಸ್ವತಃ ತರೂರು ಮೋದಿಯವರನ್ನು ಹೊಗಳಿ ಬಣ್ಣದ ಮಾತಾಡಿದ್ದು ಏಕೆ? ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ಸುನಂದಾ ಕೊಲೆಯ ಹಿಂದೆ ಮುಖ್ಯವಾಗಿ ಕಾಣುತ್ತಿರುವ ಕೈ ಶಶಿ ತರೂರ್ದ್ದಾದರೂ ಅದು ಕಾಂಗ್ರೆಸ್ಸಿನ ಒಳಕೋಣೆಯನ್ನು ಭೇದಿಸಬಲ್ಲ ರಹಸ್ಯವನ್ನು ತನ್ನೊಳಗೆ ಅಡಗಿಸಿಟ್ಟುಕೊಂಡು ಕೂತಿದೆ. ಪ್ರತಿ ಬಾರಿ ಕಾಂಗ್ರೆಸ್ಸು ದೇಶ ಭೇದಿಸುವ ಹೊಸ ಯೋಜನೆ ರೂಪಿಸುವ ಸುದ್ದಿ ಸಿಗುತ್ತಿದ್ದಂತೆ ಸುನಂದಾ ಸದ್ದು ಮಾಡುತ್ತಲೇ ಇರುತ್ತಾಳೆ. ಅದರ ಎಳೆಗಳು ಸುರುಳಿ ಬಿಚ್ಚಿಕೊಳ್ಳುತ್ತಾ ಸಾಗುತ್ತಿದ್ದಂತೆ ಕಾಂಗ್ರೆಸ್ಸು ಸಹಿಸಲಾಗದ ವೇದನೆ ಅನುಭವಿಸುತ್ತಲೇ ಇರುತ್ತದೆ. ಅದನ್ನು ಮುಚ್ಚಿಕೊಳ್ಳುವ ಕಿರಿಕಿರಿಯೊಳಗೆ ತನ್ನ ದೇಶ ವಿಭಜನೆಯ ಯೋಜನೆಯನ್ನೆಲ್ಲ ಪಕ್ಕಕ್ಕಿಟ್ಟು ಸುಮ್ಮನಾಗಿಬಿಡುತ್ತದೆ.

ಕಾಂಗ್ರೆಸ್ಸು ಅಧಿಕಾರದಲ್ಲಿದ್ದಾಗ ಬೆಟ್ಟದಷ್ಟು ತಪ್ಪು ಮಾಡಿಬಿಟ್ಟಿದೆ. ಅದನ್ನು ಸಮಾಧಿಯೊಳಗೆ ಅಡಗಿಸಿಬಿಡುವ ಮುನ್ನ ಮೋದಿ ಅಧಿಕಾರಕ್ಕೆ ಬಂದುಬಿಟ್ಟರು. ಗುಜರಾತಿನಲ್ಲಿ ಮೋದಿಯ ಕಾರ್ಯವೈಖರಿಯನ್ನು ಕಂಡೇ ಅವರನ್ನು ಪ್ರಧಾನಿ ಪಟ್ಟಕ್ಕೆ ಬೇಡವೆಂದಿತ್ತು ಕಾಂಗ್ರೆಸ್ಸು. ಅವರಿಗೆ ಮೋದಿಯ ಬದಲಿಗೆ ಅಡ್ವಾಣಿ, ಸುಷ್ಮಾ, ಅನಂತ್ ಕುಮಾರ್, ಮುರಳಿ ಮನೋಹರ್ ಜೋಷಿ ಯಾರಾದರೂ ಪರವಾಗಿರಲಿಲ್ಲ; ಮೋದಿಯೊಬ್ಬ ಬೇಡವಾಗಿತ್ತು. ಈಗ ನೋಡಿ ಚಿದಂಬರಂ ತಮ್ಮ ಮಗನೊಂದಿಗೆ ಸೇರಿ ಜೈಲಿನ ಎದುರಿಗೆ ನಿಂತಿದ್ದಾರೆ. ಸೋನಿಯಾ, ರಾಹುಲ್ ಜೊತೆಗೆ ನ್ಯಾಶನಲ್ ಹೆರಾಲ್ಡ್ನ ಕೇಸಿನಲ್ಲಿ ಪರಿತಪಿಸುತ್ತಿದ್ದಾರೆ. ಶಶಿ ತರೂರ್ ಬಾಲ ಹಿಡಿದ ಅನೇಕರು ಉಗುಳಲೂ ಆಗದೇ, ನುಂಗಲೂ ಆಗದೇ ಕಣ್ಣೀರಿಡುತ್ತಿದ್ದಾರೆ. ಇತ್ತ ಪ್ರತ್ಯೇಕ ಧ್ವಜ, ಪ್ರತ್ಯೇಕ ಧರ್ಮ ಎಂದೆಲ್ಲ ಬೆಂಕಿ ಹಚ್ಚಿ ರಾಜ್ಯ ಒಡೆದು ಅಧಿಕಾರ ಪಡೆಯುವ ಕನಸು ಕಾಣುತ್ತಿದ್ದ ಸಿದ್ದರಾಮಯ್ಯ ಡಿಕೆ ಶಿವಕುಮಾರರಿಂದಾಗಿ ಕಂಪಿಸಿಬಿಟ್ಟಿದ್ದಾರೆ. ಎಲ್ಲರ ದೃಷ್ಟಿಯೂ ಈಗ ತಮ್ಮನ್ನು ತಾವು ಉಳಿಸಿಕೊಳ್ಳುವುದರಲ್ಲಿ ಮಗ್ನವಾಗಿದೆ. ದಾದ್ರಿ-ಅಖಲಾಕ್ ಪಾಪ ಮರೆತೇ ಹೋಗಿದ್ದಾರೆ. ಬೈಕ್ ತೊಗೊಂಡು ದಿಲ್ಲಿಯಿಂದ ಹೊರಟವರು ಪೆಟ್ರೋಲಿಗೂ ಕಾಸಿಲ್ಲದೇ ಮರಳಿದರೆ ಅಚ್ಚರಿ ಪಡಬೇಡಿ.

4

ಹೇಳೋದು ಮರೆತಿದ್ದೆ. ಈ ಎಲ್ಲ ಗಲಾಟೆಗಳ ನಡುವೆ ಕಾಶ್ಮೀರದಲ್ಲಿ ಪ್ರಮುಖ ಉಗ್ರಗಾಮಿಗಳ ಹತ್ಯೆಯನ್ನು ಎಗ್ಗಿಲ್ಲದೇ ಮಾಡುತ್ತಿದೆ ಸೇನೆ. ಮುಂದಿನ ಡಿಸೆಂಬರ್ ಒಳಗೆ ಕಾಶ್ಮೀರವನ್ನು ಭಯೋತ್ಪಾದಕ ಮುಕ್ತ ಮಾಡುವ ನಾಡಿನ ಹಂಬಲಕ್ಕೆ ಅವರು ಪೂರಕವಾಗಿ ದುಡಿಯುತ್ತಿದ್ದಾರೆ. ಅದಕ್ಕೆ ಶತಾಯಗತಾಯ ವಿರೋಧ ವ್ಯಕ್ತ ಪಡಿಸಬೇಕಾಗಿದ್ದ ಕಾಂಗ್ರೆಸ್ಸು ಮತ್ತೊಂದಿಷ್ಟು ಪತ್ರಕರ್ತರು ಈಗ ತಮ್ಮ ತಮ್ಮ ಮನೆಯ ನೆಲ ಮಾಳಿಗೆಯಲ್ಲಿರುವ ಸಂಪತ್ತನ್ನು ಅಡಗಿಸಿಡುವಲ್ಲಿ ವ್ಯಸ್ತರಾಗಿದ್ದಾರೆ.

ಮೋದಿ ಸಾಮಾನ್ಯರಲ್ಲ.

Comments are closed.