ವಿಭಾಗಗಳು

ಸುದ್ದಿಪತ್ರ


 

ಸ್ಮಾರ್ಟ್ ಹಳ್ಳಿಗಳ ನಿರ್ಮಾಣಕ್ಕೆ ನೀವು ಸಿದ್ಧರಿದ್ದೀರಾ, ಹೇಳಿ!

ನಾವೀಗ ಹೇಗಾಗಿದ್ದೇವೆ ಗೊತ್ತೇನು? ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಬಲಿಕೊಡಬಲ್ಲವರಾಗಿದ್ದೇವೆ. ದೇಶದ ಅಭಿವೃದ್ಧಿ-ರಾಜ್ಯದ ಬೆಳವಣಿಗೆಗಳಿಗಿಂತಲೂ ನಮಗಿಂದು ನಮ್ಮ ಜಾತಿಯ ಪ್ರಶ್ನೆ ಬಲುಮುಖ್ಯವಾಗಿದೆ. ಭಾಷೆಯ ಹೆಸರಲ್ಲಿ ಬಡಿದಾಡುವುದು ನಮಗೆ ಬೇರೆಲ್ಲವುಗಳಿಗಿಂತಲೂ ಮುಖ್ಯ. ನಾಲ್ಕೂವರೆ ವರ್ಷ ಅಭಿವೃದ್ಧಿಯ ಮಾತನಾಡದ ಸಂಸದ, ಶಾಸಕರು ಕೊನೆಯ ಆರು ತಿಂಗಳಲ್ಲಿ ಎರಡು ಜಾತಿ ಸಮಾವೇಶ ಮತ್ತು ಒಂದು ಹಿಂದೂ-ಮುಸ್ಲೀಂ ಕದನ ಮಾಡಿಸಿಕೊಂಡು ಮತ್ತೆ ಜನನಾಯಕರಾಗಿಬಿಡುತ್ತಾರೆ.

ಇತ್ತೀಚೆಗೆ ಶಿವಮೊಗ್ಗ ಮತ್ತು ಮಂಗಳೂರಿನ ಒಂದಷ್ಟು ಮಿತ್ರರು ಭಿನ್ನಭಿನ್ನ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿಯುವ, ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಒಳ್ಳೆಯ ಬೆಳವಣಿಗೆ. ಪಟ್ಟಣಗಳು ನಿಮರ್ಾಣವಾಗಿರೋದೇ ಹಳ್ಳಿಗಳನ್ನು ಹಿಂಡಿ ಹಿಪ್ಪೆ ಮಾಡಿದ ಮೇಲೆ. ನಿಮ್ಮಲ್ಲನೇಕರು ಈ ವಾದವನ್ನು ಒಪ್ಪದಿರಬಹುದು ಆದರೆ ತಿರಸ್ಕರಿಸುವುದಂತೂ ಸಾಧ್ಯವಿಲ್ಲ. ಪಟ್ಟಣದ ಜನರಿಗೆ ಬೇಕಾದ ಎಲ್ಲ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಘಟಕ ಹಳ್ಳಿಯೇ. ಪಟ್ಟಣಕ್ಕೆ ಬೇಕಾದ ಧಾನ್ಯ ಹಳ್ಳಿಯಿಂದ ಬರುತ್ತದೆ, ಪಟ್ಟಣಿಗರು ಬಳಸುವ ನೀರು ಹಳ್ಳಿಯಿಂದ ಹಾದು ಹೋಗುತ್ತದೆ. ಇವರು ವಾತಾವರಣಕ್ಕೆ ಬಿಡುಗಡೆ ಮಾಡಿದ ವಿಷಾನಿಲವನ್ನು ಹಳ್ಳಿ ತನ್ನೊಡಲೊಳಗೆ ಇಂಗಿಸಿಕೊಳ್ಳುತ್ತದೆ. ಐಷಾರಾಮಿ, ಥಳುಕು-ಬಳುಕಿನ ಬದುಕಿನಿಂದ ಉತ್ಪಾದನೆಯಾದ ಎಲ್ಲ ತ್ಯಾಜ್ಯವನ್ನೂ ಹಳ್ಳಿಗೇ ಸುರಿದು ಬರುತ್ತೇವೆ. ನಮಗೆ ಹೊರೆಯಾಗದಂತೆ ಅವರನ್ನು ಕೂಲಿಯಾಗಿ ಬಳಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ನಾವು ಕೆನೆ ಪದರವಾಗಲು ಅವರ ಸತ್ವವನ್ನು ಚೆನ್ನಾಗಿ ಹೀರುತ್ತೇವೆ. ಎಲ್ಲಿಯವರೆಗೂ ಅಲ್ಲಿನ ಜೀವನ ನೆಮ್ಮದಿಯಿಂದ ಕೂಡಿರುವುದೋ ಅಲ್ಲಿಯವರೆಗೂ ಪಟ್ಟಣಿಗರೂ ಸಮೃದ್ಧ. ಹಳ್ಳಿಗಳು ಸ್ವಸ್ವರೂಪ ಕಳೆದುಕೊಂಡಷ್ಟೂ ಭಾರತ ವಿರೂಪವಾಗುತ್ತ ನಡೆಯುತ್ತದೆ. ಇಷ್ಟಕ್ಕೂ ಏಳು ಲಕ್ಷ ಹಳ್ಳಿಗಳಿಂದ ಸಮೃದ್ಧವಾಗಿರುವ ನಾಡಿದು, ನೆನಪಿರಲಿ.

11
ಆಕ್ರಮಣಕ್ಕೆ ಒಳಗಾದಾಗಿನಿಂದಲೂ ಭಾರತದ ಹಳ್ಳಿಗಳಲ್ಲಿ ವಿಷಪ್ರಾಶನವಾಗುತ್ತಲೇ ಬಂದಿವೆ. ಕಳೆದ ಎಪ್ಪತ್ತು ವರ್ಷಗಳಿಂದ ನಾವೂ ಅದಕ್ಕೆ ನೀರೆರೆದಿದ್ದೇವೆ. ಜಾತಿ, ಹೆಂಡ ಮತ್ತು ಸ್ವಪ್ರತಿಷ್ಠೆಗಳು ಹಳ್ಳಿಗಳ ಸಾಮರಸ್ಯವನ್ನು ಹಾಳುಗೆಡವಿಬಿಟ್ಟಿವೆ. ಅದಕ್ಕೆ ನಾವು ಅಜ್ಞಾನ, ದಾರಿದ್ರ್ಯ ಮತ್ತು ಆತ್ಮವಿಶ್ವಾಸ ಹನನಗಳ ಆಜ್ಯ ಹುಯ್ದಿದ್ದೇವೆ. ಅದರ ಪರಿಣಾಮವಾಗಿಯೇ ಇಂದು ಹಳ್ಳಿಗರಿಗೆ ತಮಗೇನು ಬೇಕೆಂಬ ಅರಿವೇ ಇಲ್ಲ. ‘ನಾವು ಚೆನ್ನಾಗಿಯೇ ಇದ್ದೇವೆ’ ಎಂಬ ಅವರ ಮಾತು ತಾತ್ಕಾಲಿಕ ಹಸಿವಿನ ಇಂಗುವಿಕೆಯ ಸಂಕೇತವಷ್ಟೇ. ಒಳ್ಳೆಯ ಆಡಳಿತವೆನ್ನುವುದು ಸಮಾಜದ ಕೊನೆಯ ವ್ಯಕ್ತಿಯೂ ಆನಂದ, ನೆಮ್ಮದಿಗಳಿಂದ ಬದುಕೋದು ಎನ್ನುವ ಚಿಂತನೆ ಆಳುವವರ ಕೈಪಿಡಿಯಿಂದ ಎಂದೋ ಮಾಯವಾಗಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಪ್ರತಿಯೊಬ್ಬ ಸಂಸದನೂ ಒಂದೊಂದು ಹಳ್ಳಿಯನ್ನು ಮಾದರಿಯಾಗಿಸಲು ಶ್ರಮಿಸಬೇಕೆಂದು ಕೇಳಿಕೊಂಡಿದ್ದರು. ಒಬ್ಬಾತ ಒಂದು ವರ್ಷಕ್ಕೆ ಒಂದು ಹಳ್ಳಿಯನ್ನು ಗುರಿಯಾಗಿರಿಸಿಕೊಂಡಿದ್ದರೆ ಈ ಅವಧಿ ಕಳೆಯುವದರೊಳಗಾಗಿ ಐದು ಹಳ್ಳಿಗಳು ಮೂಲಸೌಕರ್ಯದಲ್ಲಿ, ಜೀವನ ಮಟ್ಟದಲ್ಲಿ ಸುಧಾರಣೆ ಕಂಡು ಅಭಿವೃದ್ಧಿಯ ಪಥದಲ್ಲಿ ಓಡಿರುತ್ತಿದ್ದವು. ಹಾಗೇನಾದರೂ ಐದುನೂರು ಸಂಸದರು ಈ ವಿಚಾರದ ಬೆನ್ನುಬಿದ್ದಿದ್ದರೆ, ಕನಿಷ್ಠ ಎರಡೂವರೆ ಸಾವಿರ ಹಳ್ಳಿಗಳ ಚಿತ್ರಣ ಈ ಅವಧಿಯಲ್ಲಿ ಬದಲಾಗಿರುತ್ತಿದ್ದವು. ಇದಕ್ಕೆ ನಾಡಿನ ಎಲ್ಲ ಶಾಸಕರೂ ಕೈಜೋಡಿಸಿದ್ದರೆ ದೇಶದ ಕಾಲು ಭಾಗದಷ್ಟು ಹಳ್ಳಿಗಳು ಈ ಐದು ವರ್ಷದ ಅವಧಿಯಲ್ಲೇ ಹೊಸ ಗಾಳಿಯನ್ನು ಉಸಿರಾಡುವಂತಾಗಿರುತ್ತಿತ್ತು. ಐದೈದು, ಆರಾರು ಬಾರಿ ಸಂಸದರಾಗಿರುವ ಅನೇಕರು ತಮ್ಮಿಡೀ ಕ್ಷೇತ್ರದಲ್ಲಿ ಒಂದಾದರೂ ಮಾದರಿ ಗ್ರಾಮಗಳನ್ನು ಸೃಷ್ಟಿಸುವಲ್ಲಿ ವಿಫಲರಾಗಿರುವುದನ್ನು ನೋಡಿದಾಗ ಏಳನೇ ಬಾರಿ ಮತ್ತೆ ಚುನಾವಣೆಗೆ ನಿಲ್ಲುವುದೇ ವಿಪಯರ್ಾಸವೆನಿಸುತ್ತದೆ.

ಭಾರತದ ಹಳ್ಳಿಗಳು ಪುಟ್ಟದೊಂದು ಗಣತಂತ್ರದಂತೆ ಇದ್ದವು. ತೆರಿಗೆ ಸಂಗ್ರಹದಿಂದ ನ್ಯಾಯ ಪ್ರದಾನದವರೆಗೆ ಎಲ್ಲವೂ ಸುವ್ಯವಸ್ಥಿತ. ಈ ಸುಂದರ ಹಂದರವನ್ನು ಹಾಳು ಮಾಡುವ ಅಧಿಕಾರ ರಾಜನಿಗೂ ಇರಲಿಲ್ಲ. ರಾಜ ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದವನಷ್ಟೇ. ಧಮರ್ಾಧಾರಿತವಾಗಿ ಅಧಿಕಾರ ನಡೆಸುವ ರಾಜ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡರೆ ಅಂತಹ ಪ್ರಜೆಗಳು ರಾಜನನ್ನು ದೇವರಂತೆ ಕಾಣುತ್ತಿದ್ದರು. ರಾಜ ಸ್ವಲ್ಪ ಹಾದಿ ತಪ್ಪಿದರೆ ಅವನನ್ನು ಬದಿಗೆ ಸರಿಸುವ ಪ್ರಯಾಸಗಳೂ ನಡೆಯುತ್ತಿದ್ದವು. ಅಂದರೆ ಆಡಳಿತದ ಅನುಕ್ರಮಣಿಕೆ ಇಂದಿನಂತಲ್ಲ. ದಿಲ್ಲಿಯಿಂದ ಬಂದ ನಿಯಮ ಇಲ್ಲಿ ಅನುಸರಿಸುವುದಲ್ಲ, ಬದಲಿಗೆ ಹಳ್ಳಿಯ ಅವಶ್ಯಕತೆಗಳಿಗೆ ದಿಲ್ಲಿ ಪ್ರತಿಸ್ಪಂದಿಸುವುದಷ್ಟೇ. ಹೀಗಾಗಿಯೇ ಹಳ್ಳಿ ಇಲ್ಲಿನ ಎಲ್ಲ ವ್ಯವಸ್ಥೆಯಲ್ಲೂ ಮಹತ್ವದ ಪಾತ್ರವನ್ನು ವಹಿಸುತ್ತಿತ್ತು ಮತ್ತು ಸಮೃದ್ಧತೆಯ ಆಗರವಾಗಿತ್ತು. ಕಾಲಕ್ರಮದಲ್ಲಿ ಈ ಪಿರಮಿಡ್ಡು ತಿರುವು ಮುರುವಾಯಿತು. ಆಕ್ರಮಣಕಾರರು ತಮ್ಮ ಸಂಸ್ಕೃತಿಯನ್ನು ಹೊತ್ತು ತಂದರು. ಹಳ್ಳಿಗಳ ಮೇಲೆ ಪದಾಘಾತವಾಯ್ತು, ಸಂಪತ್ತನ್ನು ಸೂರೆಗೈಯ್ಯಲಾಯ್ತು. ತೆರಿಗೆ ಪದ್ಧತಿ ಬಲು ಕಠಿಣವಾಗಿ ಬರುಬರುತ್ತ ಹಳ್ಳಿಗ ಸಟೆದು ನಿಂತು ಅಂತಹ ಆಕ್ರಮಣಕಾರರ ವಿರುದ್ಧ ನಿಂತವನೊಂದಿಗೆ ಕೈಜೋಡಿಸಿದ. ಭಾರತೀಯ ಇತಿಹಾಸದ ವೈಭವವೇ ಅದು. ಮೊಘಲರ ವಿರುದ್ಧದ ಹೋರಾಟಕ್ಕೆ ಶಿವಾಜಿ ಮಹಾರಾಜರೊಂದಿಗೆ ನಿಂತ ವೀರ ಪಡೆ ಮಾವಳಿಯ ಹುಡಗರದ್ದು. ವಿಜಯನಗರದ ಸಾಮ್ರಾಜ್ಯದ ನಿಮರ್ಾಣಕ್ಕೆ ಮತ್ತು ರಕ್ಷಣೆಗೆ ಲಕ್ಷಾಂತರ ಜನ ಸೈನಿಕರಾಗಿ ಬಂದರಲ್ಲ ಅವರೆಲ್ಲ ತಮ್ಮ ಬದುಕನ್ನು ಉಧ್ವಸ್ತಗೊಳಿಸಿದ್ದ ಸುಲ್ತಾನರ ಪಡೆಗೆ ಮಣ್ಣು ಮುಕ್ಕಿಸಿ ಮತ್ತೊಮ್ಮೆ ವ್ಯವಸ್ಥೆಯನ್ನು ಹದಗೊಳಿಸಲೆಂದೇ ಬಂದ ಸಾಮಾನ್ಯ ಹಳ್ಳಿಗರು. ಮುಂದೆ ಬ್ರಿಟೀಷರ ಅತ್ಯಾಧುನಿಕ ಪಡೆಗಳು ಈ ನಾಡಿಗೆ ಕಾಲಿಟ್ಟಾಗ ಕಾದಾಟಗಳಿಂದ ಬೇಸತ್ತಿದ್ದ ಭಾರತೀಯರು ಇನ್ನಾದರೂ ನೆಮ್ಮದಿಯಿಂದ ಬದುಕಬಹುದೆಂದು ಭಾವಿಸಿದರೆ ಆಕ್ರಮಕ ಕ್ರಿಶ್ಚಿಯನ್ನರು ಮೊಘಲರಿಗಿಂತ ಕ್ರೂರವಾಗಿ ನಡೆದುಕೊಂಡರು. ಹದಗೆಟ್ಟಿದ್ದ ವ್ಯವಸ್ಥೆಯನ್ನು ತನ್ನಪಾಡಿಗೆ ತಾನು ಬಿಟ್ಟಿದ್ದರೆ ಅದು ಸರಿಹೋಗಿಬಿಡುತ್ತಿತ್ತು. ಬ್ರಿಟೀಷರು ಬಿಡಲಿಲ್ಲ. ಹಳ್ಳಿಗಳ ರೈತರನ್ನು ವ್ಯವಸ್ಥಿತವಾಗಿ ಹಿಂಡಲಾಯ್ತು. ತನ್ನೂರಿನಲ್ಲಿಯೇ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಡೆದು ನೆಮ್ಮದಿಯಿಂದ ಬದುಕಿದ್ದವನನ್ನು ಬ್ರಿಟೀಷರ ಕೋಟರ್ುಗಳಿಗೆ ಎಳ ತರಲಾಯ್ತು; ಪೊಲೀಸ್ ವ್ಯವಸ್ಥೆಯನ್ನು ದಮನಕ್ಕೆಂದೇ ಬಳಸಲಾಯ್ತು. ಕೃಷಿ ಆಧಾರಿತ ಉದ್ದಿಮೆಯನ್ನು ನಾಶ ಮಾಡಲಾಯ್ತು. ರೈತನೊಬ್ಬ ಜಮೀನ್ದಾರ, ಸಾಲ ನೀಡುವವ, ಪೊಲೀಸ್ ಪೇದೆ, ಕಲೆಕ್ಟರ್, ನ್ಯಾಯವಾದಿ ಕೊನೆಗೆ ಆಳುವ ಅಧಿಕಾರಿಗಳು-ದೊರೆಗಳೆದುರಿಗೆಲ್ಲ ಕೈಮುಗಿದು ನಿಲ್ಲಬೇಕಾಯ್ತು. ಯಾರನ್ನು ತನ್ನ ಅನ್ನದಿಂದ ಆತನೇ ಸಾಕುತ್ತಾನೋ ಅವರೆದುರಿಗೆಲ್ಲ ಕಣ್ಣೀರಿಡುತ್ತ ನಿಲ್ಲಬೇಕಾಯ್ತು. ಹಳ್ಳಿಯ ಬೆನ್ನೆಲುಬಾಗಿದ್ದ ರೈತನ ಸ್ಥಿತಿ ಹದಗೆಡುತ್ತಿದ್ದಂತೆ ಹಳ್ಳಿ ಸೊರಗಿತು, ಮೂಲ ಸ್ವರೂಪವನ್ನು ಕಳೆದುಕೊಂಡು ಬರಡಾಯಿತು. ಹೊಸ ಚಿಂತನೆ, ಹೊಸ ತಂತ್ರಜ್ಞಾನಗಳಿಗೆಲ್ಲ ಸದಾ ಮುಕ್ತವಾಗಿದ್ದ ಹಳ್ಳಿ ಈಗ ಪಾಳು ಬಿದ್ದಿತು. ಆತ್ಮವಿಶ್ವಾಸ ಕಳೆದುಕೊಂಡು ಕಳಾಹೀನವಾಯ್ತು. ಇಷ್ಟಾದರೂ ಒಬ್ಬರು ಮತ್ತೊಬ್ಬರನ್ನು ಓಲೈಸಿ ಬದುಕು ನಡೆಸುವ ಪಟ್ಟಣಿಗರ ಮನಸ್ಥಿತಿ ಹಳ್ಳಿಗರಿಗೆ ಬಂದಿರಲಿಲ್ಲ. ಗಾಂಧೀಜಿ ಈ ನಾಡಿ ಮಿಡಿತವನ್ನು ಕಂಡುಕೊಂಡರು. ಅವರ ಹೋರಾಟದ ಹಾದಿಯನ್ನು ಹಳ್ಳಿಗರನ್ನು ಜೋಡಿಸಿಕೊಂಡೇ ರೂಪಿಸಿದರು. 1920ರಲ್ಲಿ ಶುರುವಾದ ಅಸಹಕಾರ ಚಳವಳಿ ಹಳ್ಳಿಗರನ್ನು ಬ್ರಿಟೀಷರ ವಿರುದ್ಧ ಎದೆಯೆತ್ತಿ ನಿಲ್ಲುವಂತೆ ಮಾಡುವ ಮೊದಲ ಚಳವಳಿಯಾಗಿತ್ತು. ಖಾದಿ ಚಳವಳಿ, ದಂಡೀ ಉಪ್ಪಿನ ಸತ್ಯಾಗ್ರಹ, ನೀಲಿ ಬೆಳೆಯ ಕುರಿತಂತೆ ನಡೆದ ಹೋರಾಟ, ಬಾಡರ್ೋಲಿಯ ರೈತರ ಸತ್ಯಾಗ್ರಹ ಇವೆಲ್ಲವೂ ಕಳೆದು ಹೋದ ಹಳ್ಳಿಗರ ಅಂತಃಸತ್ವವನ್ನು ಬಡಿದೆಬ್ಬಿಸುವ ಪ್ರಯತ್ನವೇ ಆಗಿತ್ತು. ಈ ಅಂಶವನ್ನು ಬಲುಬೇಗ ಅಥರ್ೈಸಿಕೊಂಡವರು ಸದರ್ಾರ್ ಪಟೇಲರೇ. ಅವರಿಗೆ ಪಟ್ಟಣ ಮತ್ತು ಹಳ್ಳಿಗಳೆರಡನ್ನೂ ಸಮಸಮವಾಗಿ ಬೆಸೆಯಬಲ್ಲ ಸಾಮಥ್ರ್ಯವಿತ್ತು. ಪಟ್ಟಣದಲ್ಲಿ ಬದುಕು ನಡೆಸುವ ಮತ್ತು ಹಳ್ಳಿಗಳಲ್ಲಿನ ಸಾಮಥ್ರ್ಯವನ್ನುವೃದ್ಧಿಸುವ ಚಾಕಚಕ್ಯತೆ ಅವರಿಗೆ ಖಂಡಿತ ಇತ್ತು. ದುದರ್ೈವವಶಾತ್ ದೇಶದ ಚುಕ್ಕಾಣಿ ಅವರ ಕೈಸೇರದೇ ವಿದೇಶದ ಪಟ್ಟಣಗಳ ತುಡಿತದಿಂದಲೇ ತುಂಬಿದ್ದ ನೆಹರೂ ಕೈಸೇರಿತು. ಮತ್ತೊಮ್ಮೆ ಸ್ವಾವಲಂಬಿಯಾಗಿ ಬೆಳಗಬೇಕಿದ್ದ ಹಳ್ಳಿಗಳು ನಮ್ಮ ಕಾಲದಲ್ಲಿ ಹೆಚ್ಚು ಅವಗಣನೆಗೆ ತುತ್ತಾದವು. ಅಲ್ಲಿನ ಜನರ ಮುಗ್ಧತೆಯ ಲಾಭ ಪಡೆದ ಆಧುನಿಕ ಶಿಕ್ಷಿತರು ಬ್ರಿಟೀಷರಿಗಿಂತ ಹೆಚ್ಚು ನಯವಂಚಕರಾದರು. ಅದರ ಪರಿಣಾಮವೇ ಇಂದಿನ ಹಳ್ಳಿಗರ ಈ ಬಗೆಯ ಪರಿಸ್ಥಿತಿ.

2

ನಾವೀಗ ಹೇಗಾಗಿದ್ದೇವೆ ಗೊತ್ತೇನು? ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಬಲಿಕೊಡಬಲ್ಲವರಾಗಿದ್ದೇವೆ. ದೇಶದ ಅಭಿವೃದ್ಧಿ-ರಾಜ್ಯದ ಬೆಳವಣಿಗೆಗಳಿಗಿಂತಲೂ ನಮಗಿಂದು ನಮ್ಮ ಜಾತಿಯ ಪ್ರಶ್ನೆ ಬಲುಮುಖ್ಯವಾಗಿದೆ. ಭಾಷೆಯ ಹೆಸರಲ್ಲಿ ಬಡಿದಾಡುವುದು ನಮಗೆ ಬೇರೆಲ್ಲವುಗಳಿಗಿಂತಲೂ ಮುಖ್ಯ. ನಾಲ್ಕೂವರೆ ವರ್ಷ ಅಭಿವೃದ್ಧಿಯ ಮಾತನಾಡದ ಸಂಸದ, ಶಾಸಕರು ಕೊನೆಯ ಆರು ತಿಂಗಳಲ್ಲಿ ಎರಡು ಜಾತಿ ಸಮಾವೇಶ ಮತ್ತು ಒಂದು ಹಿಂದೂ-ಮುಸ್ಲೀಂ ಕದನ ಮಾಡಿಸಿಕೊಂಡು ಮತ್ತೆ ಜನನಾಯಕರಾಗಿಬಿಡುತ್ತಾರೆ. ಭಾವನೆಗಳು ಕೆಟ್ಟದಲ್ಲ ಆದರೆ ಅಭಿವೃದ್ಧಿಯಾಗದೇ ಹೋದಾಗ ಸಿಡಿದೇಳದ ಜನ ಜಾತಿ-ಮತಗಳ ಸೂಕ್ಷ್ಮ ವಿಚಾರಕ್ಕೆ ರಕ್ತ ಹರಿಸುವ ಮಟ್ಟಕ್ಕೆ ಹೋಗುತ್ತಾರೆಂದರೆ ಪ್ರಜ್ಞಾವಂತಿಕೆಯ ಲಕ್ಷಣವಂತೂ ಅಲ್ಲ. ಕನಿಷ್ಠ ಎರಡು ಸಾವಿರ ವರ್ಷಗಳಷ್ಟು ಹಿಂದಿನಿಂದಲೂ ಜೊತೆಜೊತೆಯಲೇ ಬದುಕಿರುವ ಕನ್ನಡ-ತಮಿಳುಗಳು ಕದನದ ವಿಷಯವಾಗಿದ್ದು ಬ್ರಿಟೀಷರು ವಿಷಬೀಜ ಬಿತ್ತಿದ ನಂತರವೇ. ಕಾಶಿ-ರಾಮೇಶ್ವರಗಳು ಒಂದೇ ಯಾತ್ರೆಯ ಭಾಗವಾಗಿದ್ದ ನಾಡಿನಲ್ಲಿ ಉತ್ತರ-ದಕ್ಷಿಣಗಳ ಭೇದಾವಾಪವಾಗಿದ್ದು ಬ್ರಿಟೀಷರ ಆಳ್ವಿಕೆಯ ಹೊತ್ತಿನಲ್ಲಿಯೇ ಅಲ್ಲವೇ. ಇವೆಲ್ಲಕ್ಕೂ ಮಂಗಳ ಹಾಡಿಸಿ ವಿಕಾಸದ ಹೊಸ ಪಥದಲ್ಲಿ ಕರೆದೊಯ್ಯಬೇಕಿದ್ದ ಜವಹರಲಾಲ್ ನೆಹರೂ ತಾವೇ ಇದರ ಪೋಷಕರಾಗಿಬಿಟ್ಟರು. ಕಾಂಗ್ರೆಸ್ಸು ಅದನ್ನು ಅನುಸರಿಸಿ ಹೆಜ್ಜೆ ಇಟ್ಟಿತಷ್ಟೇ.

ಇವುಗಳ ನಡುವೆಯೂ ಗುರುದೇವ ರವೀಂದ್ರರು 1921ರಲ್ಲಿ ಶುರು ಮಾಡಿದ ಶ್ರೀನಿಕೇತನ್ ಎಂಬ ಸಂಸ್ಥೆ ಹಳ್ಳಿಗರನ್ನು ಸ್ವಾವಲಂಬಿಯಾಗಿಸುವ ತರಬೇತಿ ನೀಡುತ್ತಿತ್ತು. ಅವರ ಕರಕುಶಲ ಕಲೆಯನ್ನು ಅಭಿವೃದ್ಧಿ ಪಡಿಸುವ, ಸಂಗೀತ, ನಾಟ್ಯ, ಸಾಹಿತ್ಯಾಸಕ್ತಿಯನ್ನು ವೃದ್ಧಿಸುವ ಪ್ರಯತ್ನವನ್ನೂ ಮಾಡಿದ್ದರು ರವೀಂದ್ರರು. ಬರೋಡಾದ ಮಹಾರಾಜ ಸಯ್ಯಾಜಿ ರಾವ್ ಗಾಯಕವಾಡರೂ 1890ರಲ್ಲೇ ಹಳ್ಳಿಗಳಲ್ಲಿ ಪಂಚಾಯತಿಗಳನ್ನು ಶುರು ಮಾಡುವ, ತಾಲೂಕು-ಜಿಲ್ಲೆಯಲ್ಲೂ ಸಮಿತಿ ರಚಿಸುವ ಸಾಹಸಕ್ಕೆ ಕೈಹಾಕಿದ್ದರು. ಬ್ರಿಟೀಷರ ಆಳ್ವಿಕೆಯ ಕಾಲಕ್ಕೆ ಕಳೆದುಹೋದುದನ್ನು ಮರಳಿ ಸ್ಥಾಪಿಸುವ ಪ್ರಯತ್ನವಾಗಿತ್ತದು. 1932ರ ಹೊತ್ತಿಗೆ ಅವರು ಅಧಿಕೃತವಾಗಿ ಈ ಕುರಿತ ಯೋಜನೆಯೊಂದನ್ನು ಆರಂಭಿಸಿ ಹಳ್ಳಿಯ ಮಕ್ಕಳಿಗೆ ಶಾಲಾ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದರು. ಸ್ವಸಹಾಯ ಗುಂಪುಗಳ ಕಲ್ಪನೆಯನ್ನು ಅವರು ಅಂದೇ ನೀಡಿದ್ದರು. ಅಚ್ಚರಿಯೆಂದರೆ ಮಹಾರಾಜರು ಹಳ್ಳಿಗಳನ್ನು ಅಧ್ಯಯನ ನಡೆಸಿ ಅವರಿಗೆ ಬೇಕಾದ ಸೌಕರ್ಯಗಳನ್ನು ಪಟ್ಟಿ ಮಾಡಿಸಿ ಪ್ರತಿಶತ ಐವತ್ತರಷ್ಟು ಹಣ ಅಥವ ಪರಿಶ್ರಮವನ್ನು ಅವರಿಂದ ಮಾಡಿಸಿ ಉಳಿದದ್ದನ್ನು ರಾಜಸ್ವದಿಂದ ತುಂಬಿಸುವ ಕೆಲಸ ಮಾಡುತ್ತಿದ್ದರು. ಒಂದು ಆದರ್ಶದ ಗ್ರಾಮ ವಿಕಾಸದ ಮಾದರಿ ಇದು. ಆನಂತರ ಸ್ವತಃ ಬ್ರಿಟೀಷ್ ಸಕರ್ಾರವೇ ಈ ಕೆಲಸಕ್ಕಿಳಿಯುವ ಅನಿವಾರ್ಯತೆಯೊದಗಿತು. ಆದರೆ ಆಸ್ಥೆ ಕಡಿಮೆಯಿದ್ದುದರಿಂದ ಅವೆಲ್ಲವೂ ತೋರಿಕೆಯ ಬೆಳವಣಿಗೆಯಂತಾಯ್ತೆ ಹೊರತು ವಾಸ್ತವವಾಗಿ ಜನರಿಗೆ ಮುಟ್ಟಿದ್ದೇನೂ ಇಲ್ಲ. ಈಗಿನ ಸಕರ್ಾರಗಳದ್ದೂ ಅದೇ ಪರಿಸ್ಥಿತಿ. ಯೋಜನೆಗಳೇನೋ ಏಸಿ ರೂಮುಗಳಲ್ಲಿ ರೂಪುಗೊಳ್ಳುತ್ತವೆ, ಆದರೆ ಅವು ಸಮರ್ಪಕವಾಗಿ ಜನರಿಗೆ ಮುಟ್ಟುವ ಮುನ್ನ ಮಧ್ಯವತರ್ಿಗಳ ಹಾವಳಿಗೆ ಸಿಕ್ಕು ನಲುಗಿಬಿಡುತ್ತದೆ. ರೈತರಿಗೆಂದೇ ಇರುವ ಸಬ್ಸಿಡಿ ನುಂಗಲೆಂದೇ ಬ್ಯಾಂಕುಗಳಿಂದ ಶುರುಮಾಡಿ, ಪಂಚಾಯತ್ ಅಧಿಕಾರಿಯವರೆಗೆ ಅನೇಕರು ಸಿದ್ಧವಾಗಿ ನಿಂತಿರುತ್ತಾರೆ. ರಸ್ತೆಗೆಂದು ಬಿಡುಗಡೆಯಾದ ಅನುದಾನವನ್ನು ಊರಿನ ನಾಯಕರೇ ತಿಂದು ತೇಗಿಬಿಡುತ್ತಾರೆ. ಈ ನಡುವೆ ಪ್ರಜ್ಞಾವಂತ, ನಿಸ್ವಾಥರ್ಿ ತರುಣರೊಂದಷ್ಟು ಜನ ಜೊತೆಗೂಡಿ ತಮ್ಮ ತಮ್ಮ ಹಳ್ಳಿಯ ಜವಾಬ್ದಾರಿಯನ್ನು ತಾವೇ ಹೊರಲು ಸಿದ್ಧವಾದರೆ ಬದಲಾವಣೆ ಶತಃಸಿದ್ಧ.

4

ಪ್ರಧಾನ ಮಂತ್ರಿಯವರು ಸ್ಮಾಟರ್್ ಸಿಟಿಗಳ ಮಾತನಾಡುತ್ತಿದ್ದಾರೆ; ಅವರು ಪಟ್ಟಣಗಳ ಕಡೆ ಗಮನ ಕೇಂದ್ರೀಕರಿಸಲಿ, ನಾವು ಹಳ್ಳಿಗಳ ಅಭಿವೃದ್ಧಿಗೆ ಜೊತೆಯಾಗೋಣ. ನಮ್ಮ ಹಳ್ಳಿಯನ್ನು ವೃದ್ಧಾಶ್ರಮದ ಹಣೆಪಟ್ಟಿಯಿಂದ ಹೊರತಂದು ಬೆಳವಣಿಗೆಯ ಕೇಂದ್ರವಾಗಿಸುವ ತುತರ್ು ಜರೂರತ್ತಿದೆ. ನಾವು ಪಟ್ಟಣಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸಿದ್ದು ಸಾಕು, ಇನ್ನೀಗ ನಾವು ನಮ್ಮ ಹಳ್ಳಿಯಲ್ಲಿಯೇ ನೆಲೆ ನಿಲ್ಲಬೇಕಿದೆ. ಇಲ್ಲಿನ ರಸ್ತೆಗಳು, ಕುಡಿಯುವ ನೀರು, ಕಸ ವಿಲೇವಾರಿ ಎಲ್ಲವನ್ನೂ ನಾವು ನಿಶ್ಚಯಿಸಿ ಅದಕ್ಕೆ ತಕ್ಕಂತೆ ರೂಪಿಸಬೇಕಿದೆ. ಸಕರ್ಾರದ ಯೋಜನೆಗಳು ಚೆನ್ನಾಗಿಯೇ ಇವೆ, ಅದನ್ನು ಕಡತಗಳಿಂದಾಚೆಗೆ ಎಳೆದು ತಂದು ನಮ್ಮ ಹಳ್ಳಿಗೆ ಮುಟ್ಟಿಸಬೇಕಿದೆ. ಇಂಟನರ್ೆಟ್ಟು ಬೇಕೆಂದರೆ ಮೊದಲ ಮಹಡಿಗೆ ಹೋಗಿ ನಿಲ್ಲುವ, ಫೋನು ಬಂತೆಂದರೆ ಮನೆಯಾಚೆಗೆ ಓಡಿಹೋಗುವ ಸ್ಥಿತಿ ನಮಗಿರಬಾರದು. ಪಟ್ಟಣಿಗರು ಆನಂದಿಸುವಷ್ಟೇ ವೇಗದ ಇಂಟನರ್ೆಟ್ಟು ಹಳ್ಳಿಯಲ್ಲೇ ಲಭ್ಯವಾಗಬೇಕು. ನಮ್ಮದು ಸ್ಮಾಟರ್್ ಸಂತೆಯಾಗಬೇಕು, ಸ್ಮಾಟರ್್ ವ್ಯವಹಾರವಾಗಬೇಕು. ನಮ್ಮ ಹಳ್ಳಿಯಿಂದ ಯಾವೊಬ್ಬನೂ ನ್ಯಾಯಾಲಯದ ಮೊರೆ ಹೊಕ್ಕುವ ಪರಿಸ್ಥಿತಿ ಬರಬಾರದು. ಸೌಹಾರ್ದ, ಪ್ರೇಮ, ಸಜ್ಜನಿಕೆಗಳ ಮೌಲ್ಯದ ಆಧಾರದ ಮೇಲೆ ಆಧುನಿಕ ಸೌಲಭ್ಯಗಳನ್ನೆಲ್ಲ ಹೊಂದಿದ ಹಳ್ಳಿಯಾಗಬೇಕು ನಮ್ಮದ್ದು.

ಇದ್ಯಾವುದೂ ಅಸಾಧ್ಯವಲ್ಲ. ಆದರೆ ಮನಸು ಮಾಡುವ ತರುಣ ಪೀಳಿಗೆ ಬೇಕಷ್ಟೇ. ಕೊಲ್ಲಾಪುರದ ಕಾಣೇರಿ ಮಠಾಧೀಶರು ದಶಕಗಳ ಹಿಂದೆಯೇ ಇಂತಹ ಆದರ್ಶ ಹಳ್ಳಿಗಳ ಪರಿಕಲ್ಪನೆಯನ್ನು ನಮ್ಮ ಮುಂದಿಟ್ಟಿರುವಾಗ ಇಂದು ಅವುಗಳನ್ನು ಸಾಕಾರಗೊಳಿಸಿಕೊಳ್ಳುವುದು ನಮಗೆ ಖಂಡಿತ ಕಷ್ಟವಾಗಬಾರದು. ನೀವು ಸಿದ್ಧರಿದ್ದೀರಾ ಹೇಳಿ, ಅಷ್ಟೇ.

Comments are closed.