ವಿಭಾಗಗಳು

ಸುದ್ದಿಪತ್ರ


 

ಸ್ವಂತ ಲಾಭಕ್ಕೋಸ್ಕರ ರಾಜ್ಯ ತುಂಡರಿಸುವವರು!

ಬಹಮನಿಯ ಆಳ್ವಿಕೆಯ ಕಾಲಕ್ಕೆ ಕನರ್ಾಟಕ ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಈ ಹೊತ್ತಿನಲ್ಲಿ ಹೆಸರುವಾಸಿಯಾದ ಪಂಡಿತರು, ತತ್ತ್ವಜ್ಞಾನಿಗಳು, ತಂತ್ರಜ್ಞರು, ಸಂತರು ಅನೇಕರಿದ್ದರು. ಆದರೆ ಅವರ್ಯಾರೂ ಭಾರತೀಯರಾಗಲಿ ಕನ್ನಡಿಗರಾಗಲಿ ಆಗಿರಲಿಲ್ಲ. ಅವರನ್ನೆಲ್ಲ ಇರಾನಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಹಮನಿ ಸುಲ್ತಾನರು ಕಣ್ಣುಕುಕ್ಕುವ ಕಟ್ಟಡಗಳ ನಿಮರ್ಾಣ ಮಾಡಿದರಾದರೂ ಅವ್ಯಾವುವೂ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವಂತದ್ದಾಗಿರಲಿಲ್ಲ.

ಸಿದ್ದರಾಮಯ್ಯನವರ ಕಾಲಕ್ಕೆ ಇನ್ನು ಏನೇನನ್ನು ನೋಡುವುದು ಬಾಕಿ ಇದೆಯೋ. ಕೆಲವರ ಆಳ್ವಿಕೆಯನ್ನು ಸಮಾಜ ನೂಕರ್ಾಲ ನೆನಪಿಸಿಕೊಳ್ಳುತ್ತದೆ. ಅದು ಒಳ್ಳೆಯ ಕಾರಣಕ್ಕಾದರೂ ಇರಬಹುದು ಅಥವಾ ಆ ಆಳ್ವಿಕೆ ಉಂಟು ಮಾಡಿದ ದೂರಗಾಮಿ ಕೆಡುಕುಗಳ ಕಾರಣಕ್ಕಾದರೂ ಇರಬಹುದು. ಸಿದ್ದರಾಮಯ್ಯನವರು ಕನರ್ಾಟಕದ ಮುಖ್ಯಮಂತ್ರಿಯಾಗಿ ಯಾವುದರಲ್ಲಿ ಗಣಿಸಲ್ಪಡುತ್ತಾರೆಂಬುದನ್ನು ಕಾಲವೇ ನಿರ್ಧರಿಸಲಿದೆ. ಆದರೆ ಒಂದಂತೂ ಸತ್ಯ ಈ ನಾಡನ್ನು ಜಾತಿ-ಮತ-ಪಂಥಗಳ ಆಧಾರದ ಮೇಲೆ ವಿಂಗಡಿಸಿ ತನ್ನ ಲಾಭಕ್ಕೋಸ್ಕರ ರಾಜ್ಯವನ್ನು ತುಂಡರಿಸಲು ಹೇಸದಂತಹ ಮುಖ್ಯಮಂತ್ರಿಯೆಂಬ ಅಭಿದಾನಕ್ಕಂತೂ ಖಂಡಿತ ಪಾತ್ರರಾಗಲಿದ್ದಾರೆ. ಇದನ್ನೂ ಅವರೊಂದು ಗೌರವವೆಂದು ಸ್ವೀಕರಿಸಿದರೆ ದೇವರೇ ಕಾಪಾಡಬೇಕು. ಅವರ ಐದು ವರ್ಷಗಳ ಅಪದ್ಧಗಳಿಗೆ ಮತ್ತೊಂದು ಸೇರ್ಪಡೆಯಾಗಿ ಕನರ್ಾಟಕ ಸಕರ್ಾರ ತೆರಿಗೆ ಹಣದಲ್ಲಿ ಬಹಮನಿ ಉತ್ಸವ ಮಾಡಲು ಹೊರಟಿದೆ. ಅಕ್ಷರಶಃ ಕಲ್ಬುಗರ್ಿ ಬೀದರ್ಗಳಲ್ಲಿ ಹಿಂದೂ-ಮುಸಲ್ಮಾನ ಸಂಬಂಧವನ್ನು ಕದಡಲೆಂದೇ ಸಿದ್ದರಾಮಯ್ಯನವರು ಮಾಡಿರುವ ಹುನ್ನಾರ ಇದು. ವಾಸ್ತವವಾಗಿ ಯಾವ ಮುಸಲ್ಮಾನನೂ ಬಹಮನಿ ಉತ್ಸವವನ್ನು ಮಾಡಿರೆಂದು ಕೇಳಿಕೊಂಡಿದ್ದೇ ಅನುಮಾನ. ಇಷ್ಟಕ್ಕೂ ಬಹಮನಿ ಸುಲ್ತಾನನಿಗೂ ಕನರ್ಾಟಕಕ್ಕೂ ಆಳ್ವಿಕೆಯ ದೃಷ್ಟಿಯಿಂದ ಸಂಬಂಧವಿದೆಯೇ ಹೊರತು ಸಂಸ್ಕೃತಿಯಲ್ಲಾಗಲಿ, ಭಾಷೆಯಲ್ಲಾಗಲಿ, ಪರಂಪರೆಯ ದೃಷ್ಟಿಯಿಂದಾಗಲಿ ಅವರೆಂದಿಗೂ ಕನ್ನಡಿಗರಾಗಿರಲೇ ಇಲ್ಲ. ಕನ್ನಡಿಗರೇಕೆ ಭಾರತೀಯರೂ ಆಗಿರಲಿಲ್ಲ!

1

ಮಲ್ಲಿಕಾಫರ್, ಖಿಲ್ಜಿಯ ಆದೇಶದ ಮೇರೆಗೆ ದೇವಗಿರಿ, ವಾರಂಗಲ್, ದ್ವಾರಸಮುದ್ರಗಳನ್ನು ಲೂಟಿಗೈದು ದಕ್ಷಿಣದೆಡೆಗೆ ಇಸ್ಲಾಂನ ಪತಾಕೆ ಹೊತ್ತು ತಂದಿದ್ದ. ಅವನ ಈ ಆಕ್ರಮಣ ತಾತ್ಕಾಲಿಕವಾದುದಾಗಿತ್ತು. ಮುಂದೆ ತುಘಲಕ್ ದಕ್ಷಿಣದ ಮೇಲೆ ಹಿಡಿತವನ್ನು ಸ್ಥಾಪಿಸಿಲೆಂದೇ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವಗರ್ಾಯಿಸಿದ. ಆನಂತರವೇ ದಕ್ಷಿಣದಲ್ಲಿ ಇಸ್ಲಾಂ ವ್ಯಾಪಕವಾಗಿ ಹಬ್ಬಲಾರಂಭಿಸಿದ್ದು. ದೆಹಲಿಯ ಸುಲ್ತಾನ ತುಘಲಕ್ ಉತ್ತರದಿಂದ ದಕ್ಷಿಣ್ಕಕೆ ಮುಸಲ್ಮಾನರನ್ನು ಕರೆದುಕೊಂಡು ಬಂದು ಇಲ್ಲಿ ಕಾಲೋನಿಗಳನ್ನು ಸೃಷ್ಟಿ ಮಾಡಿದ. ಆಗಿನಿಂದಲೂ ಈ ಸಾಂಸ್ಕೃತಿಕ ಹೇರಿಕೆಯನ್ನು ವಿರೋಧಿಸುವ, ತಡೆಯುವ ಪ್ರಯತ್ನ ಕನರ್ಾಟಕದಲ್ಲಿ ನಡೆದೇ ಇದೆ. ದೆಹಲಿಯ ಸುಲ್ತಾನ ದಕ್ಷಿಣ ಭಾರತವನ್ನು ಬಿಟ್ಟು ಉತ್ತರ ಭಾರತಕ್ಕೆ ಹೊರಟೊಡನೆ ಈ ಕದನ ತುದಿಮುಟ್ಟಿತ್ತು. ಈ ಹೊತ್ತಿನಲ್ಲೇ ಅಲ್ಲಾದ್ದೀನ್ ಹಸನ್ ಬಹಮನ್ ಶಾ ದೆಹಲಿಯ ಸಾಮ್ರಾಜ್ಯದ ವಿರುದ್ಧ ಪ್ರತಿಭಟಿಸಿ ದಂಗೆಯೆದ್ದು ದಕ್ಷಿಣದಲ್ಲಿ ಬಹಮನಿ ಸಾಮ್ರಾಜ್ಯವನ್ನು ನಿಮರ್ಾಣ ಮಾಡಿದ ಎನ್ನುತ್ತಾರೆ. ಅದು ಹೆಚ್ಚು ಕಡಿಮೆ 14 ನೇ ಶತಮಾನದ ಮಧ್ಯಭಾಗ. ನಾವೆಲ್ಲ ಪಠ್ಯ ಪುಸ್ತಕದಲ್ಲಿ ಬಹಮನಿ ಸಾಮ್ರಾಜ್ಯದ ಸ್ಥಾಪಕ ಹಸನ್ ಬಹಮನಿ ಗಂಗೂ ಎಂದು ಓದಿದ್ದೆವು. ಇತಿಹಾಸಕಾರ ಫರಿಶ್ತಾನ ಪ್ರಕಾರ ತುಘಲಕ್ ನ ಜ್ಯೋತಿಷಿಯಾಗಿದ್ದ ಗಂಗು ಎಂದು ಕರೆಯಲ್ಪಡುತ್ತಿದ್ದ ಗಂಗಾಧರ್ ಶಾಸ್ತ್ರಿಯ ಸೇವಕನ ಹೆಸರು ಹಸನ್. ಅದೊಮ್ಮೆ ಗಂಗುವಿನ ಕೃಷಿ ಭೂಮಿಯಲ್ಲಿ ಉಳುತ್ತಿರುವಾಗ ಹಸನ್ಗೆ ಚಿನ್ನದ ನéಾಣ್ಯ ತುಂಬಿದ ತಾಮ್ರದ ಪಾತ್ರೆಯೊಂದು ದೊರಕಿತಂತೆ. ಆತ ಅದನ್ನು ಗಂಗುವಿಗೆ ತಲುಪಿಸಿದ. ಗಂಗು ಅಷ್ಟೇ ಪ್ರಾಮಾಣಿಕವಾಗಿ ತುಘಲಕ್ನಿಗೆ ಒಪ್ಪಿಸಿದನಂತೆ. ಸಂಪ್ರೀತನಾದ ತುಘಲಕ್ ಗಂಗುವನ್ನು ನೂರು ಕುದುರೆಗಳ ಸೇನೆಗೆ ಮುಖ್ಯಸ್ಥನನ್ನಾಗಿಸಿದ. ಇದನ್ನೇ ಮೂಲ ಬಂಡವಾಳವಾಗಿಟ್ಟುಕೊಂಡು ದಕ್ಷಿಣದಲ್ಲಿ ಹಸನ್ ಸಾಮ್ರಾಜ್ಯ ಸ್ಥಾಪಿಸಿದನಂತೆ. ಹೀಗಾಗಿಯೇ ತನ್ನೊಡೆಯನ ನೆನಪು ಸದಾ ಉಳಿಯಲೆಂದೇ ತನ್ನ ಹೆಸರಿನೊಡನೆ ಗಂಗೂ ಸೇರಿಸಿಕೊಂಡನಂತೆ. ಹಸನ್ ಇಲ್ಲಿನವನೇ ಎಂದು ಸಾಬೀತು ಪಡಿಸಲು ನಡೆಸಿದ್ದ ಕಥಾ ಕಾಲಕ್ಷೇಪವದು ಎಂದೆನಿಸುತ್ತದೆ. ಹೀಗಾಗಿ ಅನೇಕ ಇತಿಹಾಸಕಾರರು ಅದನ್ನು ಒಪ್ಪುವುದಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಬೀದರ್ನಲ್ಲಿ ದೊರೆತ ಶಿಲಾಶಾಸನವೊಂದು ಹಸನ್ ಇರಾನಿನವನೆಂದು ದೃಢಪಡಿಸುತ್ತದೆ. ಇರಾನಿನ ಬಹಮನಿ ಆತನ ಊರು. ಇಂದು ಹಸನ್ ಇರಾನಿಗೆ ಸೇರಿದವನು ಎಂದು ಹೇಳಲಿಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತಿವೆ. ಆದರೆ ಭಾರತೀಯ ಸಾರ್ವಭೌಮತೆಯನ್ನು ಧಿಕ್ಕರಿಸಲೆತ್ನಿಸುವ ಒಂದಷ್ಟು ಇತಿಹಾಸಕಾರರಿಗೆ ಆಧುನಿಕ ಸಂಶೋಧನೆಗಳನ್ನು ಒಪ್ಪಿಕೊಳ್ಳುವ ಮನಸ್ಸೇ ಇಲ್ಲ. ಅದು ಆರ್ಯ, ದ್ರಾವಿಡ ವಾದವಿರಬಹುದು ಅಥವಾ ಜಾತಿ-ವರ್ಣಗಳ ವಿಚಾರಗಳೇ ಇರಬಹುದು. ವೈಜ್ಞಾನಿಕ ಆಧಾರಗಳನ್ನು ಬದಿಗಿಟ್ಟು ತಾವು ಒಪ್ಪಿಕೊಂಡಿದ್ದನ್ನೇ ಇತರರ ಮೇಲೆ ಹೇರುವ ಪ್ರಯತ್ನ ಅವರದ್ದು. ಬಹಮನಿ ಸಾಮ್ರಾಜ್ಯದ ಕಥೆಯೂ ಅದೇ. ಅದರ ಕುರಿತಂತೆ ವೈಜ್ಞಾನಿಕವೆನಿಸಬಹುದಾದ ಯಾವ ಸಂಶೋಧನೆಯನ್ನೂ ಮಾಡದೇ ಸೆಕ್ಯುಲರ್ ಸಿದ್ಧಾಂತಕ್ಕೆ ಗಂಟುಬಿದ್ದೇ ಇತಿಹಾಸವನ್ನು ರಚಿಸಿರುವುದು ಎದ್ದು ಕಾಣುತ್ತದೆ.

2

ಅರೇಬಿಯಾದಿಂದ ಭಾರತದೆಡೆಗೆ ಬಂದ ಆಕ್ರಮಣಕಾರಿಗಳಿಗೆಲ್ಲ ಈ ನಾಡು ಅತ್ಯಾಕರ್ಷಕವಾಗಿ ಕಂಡಿತ್ತು. ಇಲ್ಲಿನ ಪ್ರಾಕೃತಿಕ ಶ್ರೀಮಂತಿಕೆ ಮತ್ತು ಜನರ ನೆಮ್ಮದಿಯ ಬದುಕುಗಳು ಈ ಆಕ್ರಮಣಕಾರಿಗಳ ನಿದ್ದೆ ಕೆಡಿಸಿದ್ದವು. ಮರಳುಗಾಡಿನ ವಾತಾವರಣದ ಕಾರಣದಿಂದಾಗಿ ಇರಬಹುದಾದ ಸಹಜ ಕ್ರೌರ್ಯ ಅವರನ್ನು ಯುದ್ಧ ನೀತಿ, ಧರ್ಮಗಳಿಂದ ವಿಮುಖವಾಗಿಸಿ ಗೆಲ್ಲುವುದಷ್ಟನ್ನೇ ಗುರಿಯಾಗಿಸಿತ್ತು. ರಾತ್ರಿ-ಹಗಲುಗಳೆನ್ನದೆ ಸರಿ-ತಪ್ಪುಗಳೆನ್ನದೇ ಎದುರಿಗೆ ಕಂಡದ್ದನ್ನೆಲ್ಲಾ ಧ್ವಂಸಗೊಳಿಸುವಂತಹ ಪ್ರವೃತ್ತಿ ಅವರಿಗಿದ್ದುದರಿಂದ ಅನೇಕೆಡೆಗಳಲ್ಲಿ ಅವರು ಜಯಶಾಲಿಯಾಗಿಬಿಟ್ಟರು. ಬರಗೆಟ್ಟ ನಾಡಿನಿಂದ ಬಂದವರ ಕೈಗೆ ಸಮೃದ್ಧಿಯ ಸಾಮ್ರಾಜ್ಯ ದೊರೆತೊಡನೆ ಅವರು ಮೆರೆದಾಡಿಬಿಟ್ಟರು. ಸುಖವನ್ನೆಲ್ಲಾ ಸೂರೆಗೈಯ್ಯುವ ಅವರ ವಾಂಛೆ ಇಲ್ಲಿನ ಸಹಜ ಬದುಕನ್ನು ಅಸ್ತವ್ಯಸ್ತಗೊಳಿಸಿಬಿಟ್ಟಿತು. ಅವರ ಭೋಗ-ಲಾಲಸೆಗಳು ಭಾರತದ ಸಭ್ಯ ಜನಾಂಗಕ್ಕೆ ಆಘಾತವನ್ನುಂಟುಮಾಡಿತ್ತು. ಈ ಆಘಾತದಿಂದ ಎಚ್ಚೆತ್ತುಕೊಳ್ಳುವ ವೇಳೆಗಾಗಲೇ ಸಾಕಷ್ಟು ತಡವಾಗಿತ್ತು. ಬಹಮನಿ ಸಾಮ್ರಾಜ್ಯವೂ ಇದಕ್ಕಿಂತ ಭಿನ್ನವಾದುದೇನಲ್ಲ. ಈ ಇಡಿಯ ಸಾಮ್ರಾಜ್ಯದಲ್ಲಿ ಸುಮಾರು 18 ಸುಲ್ತಾನರುಗಳಾಗಿ ಹೋದರು. ಅವರಲ್ಲಿ ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲಾ ವೈಭವದ ಬದುಕಿಗೆ ದಾಸರಾದವರೇ. ಇಲ್ಲಿನ ಮೂಲ ಧರ್ಮವಾಗಿದ್ದ ಹಿಂದುವಿನ ಭಾವನೆಗಳಿಗೆ ಘಾಸಿಗೊಳಿಸುತ್ತಾ ಈ ಧರ್ಮವನ್ನೇ ನಾಶಮಾಡಿ ಇಸ್ಲಾಂ ಅನ್ನು ಪ್ರತಿಷ್ಠಾಪಿಸಬೇಕೆಂಬ ಅವರ ಪ್ರಯತ್ನ ಜೋರಾಗಿಯೇ ಇತ್ತು. ಹಿಂದು ಮಂದಿರಗಳು ಮತ್ತಿತರ ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಿ ಅಲ್ಲೆಲ್ಲಾ ಮುಸಲ್ಮಾನರ ಕಟ್ಟಡಗಳು ಎದ್ದುನಿಲ್ಲುವಂತಾಗಿದ್ದು ಇದೇ ಹೊತ್ತಲ್ಲಿ! ಅವರು ಅದೆಷ್ಟು ಕ್ರೂರಿಗಳಾಗಿದ್ದರೆಂದರೆ ತಾವು ಸೋಲಿಸಿದ ರಾಜನನ್ನು ಪೂರ್ಣ ಪ್ರಮಾಣದಲ್ಲಿ ಲೂಟಿಗೈದು ಅವನಿಗೆ ಚಿತ್ರಹಿಂಸೆ ಕೊಡುತ್ತಿದ್ದರು. ಬಹಮನಿ ಸುಲ್ತಾನರ ಕಾಲಘಟ್ಟದಲ್ಲಿ ಅವರ ಭೋಗದಾಸೆಗೆ ಬಲಿಯಾಗಿದ್ದು ಸಾಮಾನ್ಯ ಜನತೆ. ಸಿರಿವಂತವಾಗಿದ್ದ ಕಲ್ಬುಗರ್ಿ ಬೀದರ್ಗಳು ಈ ಕಾಲದಲ್ಲಿಯೇ ತನ್ನ ವೈಭವವನ್ನು ಕಳೆದುಕೊಂಡಿದ್ದು. ಜನರ ಮೇಲೆ ವ್ಯವಸ್ಥಿತವಾದ ರಾಜನ ಕೃಪಾ ಪೋಷಿತ ಅತ್ಯಾಚಾರಗಳೂ ಈ ಹೊತ್ತಲೇ ನಡೆದಿದ್ದು. ಇರಾಕಿನ ಬಸ್ರಾದಿಂದ ಆಮದು ಮಾಡಿಕೊಂಡ ಸೂಫಿಸಂ ಅನ್ನು ಹೇಗೆ ಹೇರಲಾಯಿತೆಂದರೆ ಇಂದು ಆ ಭಾಗಗಳಲ್ಲಿ ಕಂಡು ಬರುವ ಅನೇಕ ಮುಸಲ್ಮಾನರು ಈ ಹೊತ್ತಿನಲ್ಲಿಯೇ ಮೂಲಧರ್ಮವನ್ನು ತೊರೆದು ಹೋದವರು. ಅಲ್ಲಿನ ಹಿಂದುಗಳಿಗಿದ್ದದ್ದು ಎರಡೇ ದಾರಿ. ಒಂದು ಆಕ್ರಮಣಕಾರಿಗಳ ಕತ್ತಿಗೆ ಆಹುತಿಯಾಗಬೇಕು ಅಥವಾ ಮಾತೃಧರ್ಮವನ್ನು ತೊರೆಯಬೇಕು. ತಾತ್ಕಾಲಿಕವಾದ ಈ ತೂಗುಗತ್ತಿಯಿಂದ ಪಾರಾಗಲು ಅಂದಿನ ನಮ್ಮ ಪೂರ್ವಜರು ಆರಿಸಿಕೊಂಡಂತಹ ಈ ದುದರ್ೈವೀ ಮಾರ್ಗದ ಲಾಭವನ್ನು ಈಗಿನ ಕಾಲದ ಸಿದ್ದರಾಮಯ್ಯನವರಂತಹ ಸುಲ್ತಾನರು ಪಡೆದುಕೊಳ್ಳುತ್ತಿದ್ದಾರೆ.

ಬಹಮನಿಯ ಆಳ್ವಿಕೆಯ ಕಾಲಕ್ಕೆ ಕನರ್ಾಟಕ ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಈ ಹೊತ್ತಿನಲ್ಲಿ ಹೆಸರುವಾಸಿಯಾದ ಪಂಡಿತರು, ತತ್ತ್ವಜ್ಞಾನಿಗಳು, ತಂತ್ರಜ್ಞರು, ಸಂತರು ಅನೇಕರಿದ್ದರು. ಆದರೆ ಅವರ್ಯಾರೂ ಭಾರತೀಯರಾಗಲಿ ಕನ್ನಡಿಗರಾಗಲಿ ಆಗಿರಲಿಲ್ಲ. ಅವರನ್ನೆಲ್ಲ ಇರಾನಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಹಮನಿ ಸುಲ್ತಾನರು ಕಣ್ಣುಕುಕ್ಕುವ ಕಟ್ಟಡಗಳ ನಿಮರ್ಾಣ ಮಾಡಿದರಾದರೂ ಅವ್ಯಾವುವೂ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವಂತದ್ದಾಗಿರಲಿಲ್ಲ. ಇರಾನ್-ಪಷರ್ಿಯಾಗಳು ಅಲ್ಲೆಲ್ಲಾ ರಾರಾಜಿಸುತ್ತಿದ್ದವು. ಆ ಹೊತ್ತಿನ ವ್ಯಾಪಾರ ಸಂಬಂಧಗಳು ಅಷ್ಟೆ. ತುಕರ್ಿ, ಪಷರ್ಿಯಾ, ಇರಾನ್, ಪೋಚರ್ುಗೀಸ್ಗಳೊಂದಿಗೇ ಹೆಚ್ಚಾಗಿದ್ದುದು. ಈ ಹೊತ್ತಿನ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಳೂ ಕೂಡ ಅಗಾಧ ನಿಜ. ಆದರೆ ಆ ಭಾಷೆ ಕನ್ನಡವಾಗಿರಲಿಲ್ಲ ಅಷ್ಟೇ. ಅರಾಬಿಕ್, ಪಷರ್ಿಯನ್ ಮತ್ತು ಉದರ್ು ಸಾಹಿತ್ಯದ ಅಭಿವೃದ್ಧಿಯ ಕಡೆ ಆಳುವವರ ಗಮನವಿತ್ತು. ಅರಾಬಿಕ್ ಮತ್ತು ಪಷರ್ಿಯಾ ಸಾಹಿತ್ಯಕಾರರಿಗೆ ಬಹಮನಿ ಸಾಮ್ರಾಜ್ಯದಲ್ಲಿ ಅಪಾರವಾದ ಗೌರವವಿತ್ತೆನ್ನುವುದನ್ನು ಎಲ್ಲ ಇತಿಹಾಸಕಾರರೂ ಮುಲಾಜಿಲ್ಲದೇ ಒಪ್ಪುತ್ತಾರೆ. ದಖನಿ ಎನ್ನುವ ಹೊಸ ಭಾಷೆ ಹುಟ್ಟಿಕೊಂಡಿದ್ದು ಇದೇ ಕಾಲಕ್ಕೆ. ಕನ್ನಡದ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ ಎಂದು ಬೊಬ್ಬೆಯಿಡುವ ಎಲ್ಲ ಮಹನೀಯರು ಗುಲ್ಬಗರ್ಾ-ಬೀದರ್ಗಳಲ್ಲಿ ಕನ್ನಡವನ್ನು ವಿರೂಪಗೊಳಿಸಿ ಮೂಲ ಸಂಸ್ಕೃತಿಗೆ ಧಕ್ಕೆ ತಂದ ಬಹಮನಿಗಳ ಉತ್ಸವ ಆಚರಿಸುವಾಗ ಮೌನ ವಹಿಸಿರುವುದು ಮಾತ್ರ ಬಲು ಅಚ್ಚರಿಯೇ. ಇವರಿಗೆ ಎದುರಾಳಿಯಾಗಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಕೃತ, ಕನ್ನಡ ಮತ್ತು ತೆಲುಗುಗಳನ್ನು ಶ್ರೀಮಂತಗೊಳಿಸುವ ಪ್ರಯತ್ನ ಮಾಡುತ್ತಿದ್ದಾಗ ಬಹಮನಿಗಳು ಉದರ್ು, ಅರಾಬಿಕ್, ಪಷರ್ಿಯಾಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದರು.

ಇತಿಹಾಸಕಾರ ಅಹ್ಮದ್ ಹೇಳುವಂತೆ ಬಹಮನಿಗಳ ಕಾಲದಲ್ಲಿ ನಿಮರ್ಾಣಗೊಂಡ ಕಟ್ಟಡಗಳು ಇರಾನಿನ ಕಟ್ಟಡ ರಚನೆಗಳಿಂದ ಪ್ರಭಾವಗೊಂಡಿತ್ತಲ್ಲದೇ ಅಲ್ಲಿನ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಈ ನಾಡಿಗೆ ತರುತ್ತವೆಂದು ಆಳುವ ದೊರೆಗಳು ಹೇಳಿಕೊಳ್ಳುತ್ತಿದ್ದರು. ಅವರು ನಿಮರ್ಿಸಿದ ಕಟ್ಟಡಗಳಲ್ಲೆಲ್ಲಾ ಪಸರ್ೊ ಬಹಮನಿ ಕಮಾನುಗಳು ಕಂಡು ಬರುತ್ತವೆ. ಕೋಟೆಗಳ ಒಳಹೊಕ್ಕೊಡನೆ ಕಂಡು ಬರುವ ವಿಶಾಲವಾದ ಚೌಕಾಕೃತಿಯ ಹಜಾರಗಳೂ ಕೂಡ ಆಮದು ಮಾಡಿಕೊಂಡ ಕಲ್ಪನೆಗಳೇ. ಈ ಇರಾನ್ ಪಷರ್ಿಯಾಗಳೊಂದಿಗೆ ಬೆಸೆದುಕೊಂಡ ಬಹಮನಿ ಕಟ್ಟಡ ರಚನೆಗಳನ್ನು ದಖನಿ ರಚನೆಗಳೆಂದು ಆನಂತರದ ದಿನಗಳಲ್ಲಿ ಕರೆಯಲಾಯಿತು ಮತ್ತು ಕೋಟೆ ಕೊತ್ತಲಗಳಲ್ಲದೇ ಸಾಮಾನ್ಯ ಕಟ್ಟಡ ರಚನೆಗೂ ಅದೇ ಶೈಲಿಯನ್ನು ಆನಂತರ ಬಳಸಲಾಗುತ್ತಿತ್ತು.

3

ಒಟ್ಟಾರೆ ಅರಿತುಕೊಳ್ಳಬೇಕಾದ ಸಂಗತಿ ಒಂದೇ. ಬಹಮನಿಗಳು ಯಾವ ಕಾರಣಕ್ಕೂ ಕನ್ನಡದ ಸಂಸ್ಕೃತಿ ಪರಂಪರೆಗಳನ್ನು ಎತ್ತಿ ಹಿಡಿದವರಲ್ಲವೇ ಅಲ್ಲ. ಅವರ ಕಾಲದಲ್ಲಿ ಬೊಕ್ಕಸ ತುಂಬಿ ತುಳುಕಾಡುತ್ತಿತ್ತು ಎನ್ನುತ್ತಾರೆ ನಿಜ. ಆದರೆ ಅದರಲ್ಲಿ ಬಹುತೇಕ ಪಾಲು ಇತರ ರಾಜ್ಯಗಳ ಮೇಲೆ ಆಕ್ರಮಣ ಮಾಡಿ ಅಲ್ಲಿಂದ ಲೂಟಿಗೈದ ಸಂಪತ್ತೇ ಆಗಿರುತ್ತಿತ್ತು. ಈ ಹೊತ್ತಲ್ಲಿಯೇ ಗುಲ್ಬಗರ್ಾ-ಬೀದರ್ ಭಾಗಗಳಲ್ಲಿ ಸಾಕಷ್ಟು ಆಥರ್ಿಕ ಅಭಿವೃದ್ಧಿ ಕಂಡುಬಂದಿತೆಂದು ಇತಿಹಾಸಕಾರರು ಹೇಳುತ್ತಾರೆ. ಹೊಸ ಕಾಖರ್ಾನೆಗಳು ತಲೆ ಎತ್ತಿದವು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಈ ಆಥರ್ಿಕ ಬೆಳವಣಿಗೆಯ ಕುರುಹುಗಳಂತೂ ಆ ಭಾಗಗಳಲ್ಲಿ ಕಾಣುವುದಿಲ್ಲ. ಜನರ ಧಾಮರ್ಿಕ ಪ್ರವೃತ್ತಿಗೂ ಕೈ ಹಾಕಿದ ಈ ಸಾಮ್ರಾಜ್ಯ ಪರಂಪರೆಯಿಂದ ನಂಬಿಕೊಂಡು ಬಂದಿದ್ದ ಎಲ್ಲ ಸತ್ಯಗಳನ್ನೂ ನಿರಾಕರಿಸಿ ಒತ್ತಾಯವಾಗಿ ಇಸ್ಲಾಮನ್ನು ಸ್ವೀಕರಿಸುವಂತೆ ಮಾಡಿತು. ತನ್ನಿಚ್ಛೆಯ ಪಂಥವನ್ನು ಆಚರಿಸಲು ಬಿಡದ ಸಾಮ್ರಾಜ್ಯವೊಂದನ್ನು ಶ್ರೇಷ್ಠ ಸಾಮ್ರಾಜ್ಯವೆಂದು ಕರೆಯುವುದಾದರೂ ಹೇಗೆ? ಅನತಿ ದೂರದಲ್ಲಿಯೇ ಇದ್ದ ವಿಜಯನಗರ ಸಾಮ್ರಾಜ್ಯದಲ್ಲಿ ಎಲ್ಲ ಜಾತಿ-ಮತ-ಪಂಥಗಳಿಗೂ ಸಮಾನವಾದ ಅವಕಾಶವಿತ್ತು. ರಾಜನ ಬೊಕ್ಕಸವಷ್ಟೇ ಅಲ್ಲ ಜನರೂ ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿದ್ದರು. ಮುತ್ತು-ರತ್ನಗಳನ್ನು ರಸ್ತೆಗಳಲ್ಲಿ ಮಾರಾಟ ಮಾಡಬಹುದಾದ ವೈಭವ ಇತ್ತು. ಸ್ಥಳೀಯ ಪಂಡಿತರಿಗೆ ಅಪಾರವಾದ ಗೌರವವಿತ್ತು. ಈ ನಾಡಿನ ಶಿಲ್ಪಕಲೆ, ಸಂಗೀತ, ನಾಟ್ಯ, ಸಾಹಿತ್ಯ ಇವೆಲ್ಲವುಗಳಿಗೆ ಅಲ್ಲಿ ಅಪಾರವಾದ ಬೆಲೆಯಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕನ್ನಡದ ಗೌರವ ರಕ್ಷಣೆಯ ವಿಚಾರದಲ್ಲಿ ವಿಜಯನಗರ ಸಾಮ್ರಾಜ್ಯದ ಕುರಿತಂತೆ ನೀವು ಹೆಮ್ಮೆ ತಳೆದಿರಾದರೆ ಬಹಮನಿ ಸಾಮ್ರಾಜ್ಯದ ಕುರಿತಂತೆ ಆಕ್ರೋಶ ತಾಳಬೇಕಾಗಿರುವುದು ಅನಿವಾರ್ಯ. ಇದ್ದಷ್ಟೂ ಕಾಲ ವಿಜಯನಗರ ಸಾಮ್ರಾಜ್ಯದೊಂದಿಗೆ ಕಿತ್ತಾಡುತ್ತಾ ಬಂದ ಬಹಮನಿಯ ಸುಲ್ತಾನರು ನೇರವಾಗಿ ಎದುರಿಸಲಾರದೇ ಕೊನೆಗೂ ತಮ್ಮ ಬೆನ್ನಿಗೆ ಚೂರಿ ಹಾಕುವ ಬುದ್ಧಿಯನ್ನು ಬಳಸಿಯೇ ವಿಜಯನಗರ ಸಾಮ್ರಾಜ್ಯವನ್ನು ಧ್ವಂಸಗೊಳಿಸಿದರು. ಅಳಿಯ ರಾಮರಾಯನನ್ನು ಮೋಸದಿಂದ ಕೊಂದು ಅವನ ಕತ್ತನ್ನು ಕಡಿದು ಚರಂಡಿಯೊಳಗಿಟ್ಟು ಸಂಭ್ರಮಿಸಿದರು. ವಿಜಯ ನಗರವನ್ನು ಲೂಟಿಗೈದು ಮೆರೆದಾಡಿದರು.

ಸಿರಿವಂತಿಕೆಯಿಂದ ಕೂಡಿರಬೇಕಿದ್ದ ಬೀದರ್-ಕಲ್ಬುಗರ್ಿಗಳೆಲ್ಲಾ ಇಂದು ಹಿಂದುಳಿದಿರುವ ಹಣೆಪಟ್ಟಿ ಹಚ್ಚಿಕೊಂಡು ಸಕರ್ಾರದ ಮುಂದೆ ಕೈ ಚಾಚಿ ನಿಂತಿರುವುದಕ್ಕೆ ಈ ಮಧ್ಯಯುಗೀನ ರಾಕ್ಷಸೀ ವೃತ್ತಿಯ ಆಡಳಿತವೇ ಕಾರಣ ಎಂಬುದು ಸುಲಭ ಗೋಚರವಾಗುವಂಥದ್ದು. ಇಂಥವರ ನೆನಪಿನಲ್ಲಿ ಉತ್ಸವ ಆಚರಿಸುವುದರಿಂದ ಮುಸಲ್ಮಾನರ ವೋಟು ಸಿಗುವುದೆಂದು ಸಿದ್ದರಾಮಯ್ಯನವರು ಭಾವಿಸಿರುವುದು ಬಲುದೊಡ್ಡ ದುರಂತ. ಕಲ್ಬುಗರ್ಿ ಬೀದರ್ನ ಮುಸಲ್ಮಾನರು ಕನ್ನಡಿಗರಾಗಲೀ ಭಾರತೀಯರಾಗಲೀ ಅಲ್ಲ; ಅವರು ಇರಾನಿನವರು ಎಂಬುದನ್ನು ಪ್ರತಿಪಾದಿಸಲು ಹೊರಟ ಈ ಉತ್ಸವವನ್ನು ಸ್ವತಃ ಮುಸಲ್ಮಾನರೂ ವಿರೋಧಿಸುತ್ತಾರೆ. ಹಿಂದುಗಳಿಂದ ಅವರನ್ನು ಬೇರ್ಪಡಿಸುವ ಸಿದ್ದರಾಮಯ್ಯನವರ ಈ ಸಂಚು ರಾಜ್ಯಕ್ಕೇ ಮುಳುವಾಗಲಿರುವುದರಲ್ಲಿ ಯಾವ ಸಂಶಯವೂ ಇಲ್ಲ.

ಸದ್ಯಕ್ಕಂತೂ ಬಹಮನಿ ಸುಲ್ತಾನರ ಇಂದಿನ ಪೀಳಿಗೆಯವರು ಇಲ್ಲಿ ಯಾರೂ ಇಲ್ಲ. ಅವರನ್ನು ತಮ್ಮ ಪೂರ್ವಜರೆಂದು ಹೆಮ್ಮೆಪಡುವ ಕನ್ನಡಿಗ ಬಿಡಿ, ಮುಸಲ್ಮಾನನೂ ಇಲ್ಲ. ಕನ್ನಡದ ಸಂಸ್ಕೃತಿಯ ಮೇಲೆ ಆಕ್ರಮಣಗೈದ ಈ ಕ್ರೂರಿಗಳ ಉತ್ಸವಕ್ಕೆ ನನ್ನದೊಂದು ಧಿಕ್ಕಾರವಿದೆ. ಇನ್ನುಳಿದದ್ದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು.

Comments are closed.