ವಿಭಾಗಗಳು

ಸುದ್ದಿಪತ್ರ


 

ಹಳ್ಳಿಗಳು ಪಕ್ಷದ ಕಪಿಮುಷ್ಟಿಯಿಂದ ಹೊರಬಂದರಷ್ಟೇ ಉದ್ಧಾರ!

ವಾಸ್ತವದಲ್ಲಿ ಭಾರತದ ಹಳ್ಳಿಗಳು ಸ್ವಯಂ ಆಡಳಿತ ಹೊಂದಿದವಾಗಿದ್ದವು. ತಮಗೆ ಬೇಕಾದ್ದನ್ನೆಲ್ಲ ತಾವೇ ಬೆಳೆದುಕೊಳ್ಳುತ್ತ ಹೊರಗಿನ ಸಂಪರ್ಕವನ್ನು ಅತಿ ಕಡಿಮೆ ಇರಿಸಿಕೊಂಡಿದ್ದವು. ವಾರಕ್ಕೊಮ್ಮೆ ಸಂತೆ, ವರ್ಷಕ್ಕೊಮ್ಮೆ ಜಾತ್ರೆಗಳನ್ನು ನಡೆಸಿ ಅಕ್ಕಪಕ್ಕದ ಹಳ್ಳಿಗಳವರು ಬಂದು ತಂತಮ್ಮ ವಸ್ತುಗಳನ್ನು ಮಾರಾಟ ಮಾಡಿಹೋಗಲು ವ್ಯವಸ್ಥೆ ಮಾಡಿಕೊಡುತ್ತಿದ್ದರು. ಎಲ್ಲಿಯೂ ಯಾರೂ ಮತ್ತೊಬ್ಬರ ಬದುಕಿನಲ್ಲಿ ಮೂಗು ತೂರಿಸುವಂತಿರಲಿಲ್ಲ.

ಇತ್ತೀಚೆಗೆ ನನ್ನ ಕನಸಿನ ಕನರ್ಾಟಕದ ಕಲ್ಪನೆ ಹೊತ್ತು ಹೊಸದುರ್ಗಕ್ಕೆ ಹೋಗುವ ಅವಕಾಶ ದಕ್ಕಿತ್ತು. ಪ್ರಬುದ್ಧರೊಂದಷ್ಟು ಜನ ಹಂಚಿಕೊಂಡ ವಿಚಾರಗಳು ಬರಲಿರುವ ಕರಾಳ ದಿನಗಳ ಮುನ್ಸೂಚನೆಯೇ ಆಗಿದ್ದವು. ಕೃಷಿಯನ್ನೇ ಆಧಾರವಾಗಿಸಿಕೊಂಡ ಚಿತ್ರದುರ್ಗದ ಈ ತಾಲೂಕು ಕಳೆದ ಅನೇಕ ವರ್ಷಗಳಿಂದ ಬರಗಾಲದಲ್ಲಿಯೇ ಬದುಕು ಸವೆಸುತ್ತಿದೆ. ಅಲ್ಲಿನ ಚುನಾವಣೆಯಲ್ಲಿಯ ಗೆಲ್ಲುವ ಅಭ್ಯಥರ್ಿ ಗಳಿಸುವ ಮತದ ಅರ್ಧದಷ್ಟು ಜನ ಬೆಂಗಳೂರಿಗೆ ವಲಸೆ ಹೋಗಿಯಾಗಿದೆ. ಇಲ್ಲಿನ ಹಳ್ಳಿಗಳು ಅಕ್ಷರಶಃ ವೃದ್ಧಾಶ್ರಮಗಳೇ. ಪಟ್ಟಣಗಳಿಗೆ ಹೋದ ಒಂದಷ್ಟು ತರುಣರು ಕಳಿಸುವ ಹಣದಿಂದಾಗಿ ಅವುಗಳಲ್ಲಿ ಜೀವಂತಿಕೆ ಇದೆಯೇ ಹೊರತು ಮತ್ತೇನು ಉಳಿದುಕೊಂಡಿಲ್ಲ. ಇದು ಒಂದು ತಾಲೂಕಿನ ಕಥೆಯಲ್ಲ. ಕನರ್ಾಟದ ಅನೇಕ ತಾಲೂಕುಗಳು ಹಾಗಾಗುವತ್ತ ವೇಗದಿಂದ ಧಾವಿಸುತ್ತಿವೆ. ಅಭಿವೃದ್ಧಿಯ ಭಾರ ತಾಳಲಾರದೇ ಬೆಂಗಳೂರು ಕುಸಿದು ಬೀಳುತ್ತಿದ್ದರೆ ರಾಜ್ಯದ ಇತರೆ ಜಿಲ್ಲೆಗಳು ಅಭಿವೃದ್ಧಿಯನ್ನೇ ಕಾಣದೇ ಸೊರಗುತ್ತಿವೆ.

12

ಕಾಂಗ್ರೆಸ್ಸು ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲಿಯೇ ಗಾಂಧೀಜಿಯ ಚಿಂತನೆಗಳನ್ನು ತಿರಸ್ಕರಿಸಿತು ಅಥವಾ ಅನುಸರಿಸುವ ನಾಟಕವಾಡಿತು. ಇಲ್ಲವಾದರೆ ಗಾಂಧೀಜಿಯ ರಾಮರಾಜ್ಯದ ಮತ್ತು ಗ್ರಾಮರಾಜ್ಯದ ಕನಸುಗಳೆಲ್ಲ ಅದಕ್ಕೆ ಅಪಥ್ಯವಾಗಬೇಕಿರಲಿಲ್ಲ. ‘ಭಾರತ ನೆಲೆಸಿರೋದು ಏಳುವರೆ ಲಕ್ಷ ಹಳ್ಳಿಗಳಲ್ಲಿಯೇ ಹೊರತು, ಪಟ್ಟಣಗಳಲ್ಲ’ ಅನ್ನೋದು ಗಾಂಧೀಜಿಯ ಮಾತೇ. ‘ಹಳ್ಳಿಗಳು ನಾಶವಾದರೆ ದೇಶವೇ ನಾಶವಾಗುವುದು’ ಎಂಬುದೂ ಅವರು ನೀಡಿದ ಎಚ್ಚರಿಕೆಯೇ. ಎಲ್ಲ ಆಥರ್ಿಕ ಚಟುವಟಿಕೆಗಳ ಕೇಂದ್ರವಾಗಿ ಹಳ್ಳಿಗಳನ್ನು ರೂಪಿಸುವುದೇ ಭಾರತದ ಉನ್ನತಿಗಿರುವ ಏಕಮಾತ್ರ ಮಾರ್ಗವೆಂದು ಅವರು ಸ್ಪಷ್ಟವಾಗಿ ಭಾವಿಸಿದ್ದರು. ಹಳ್ಳಿಗಳು ಸ್ವಾವಲಂಬಿಯಾಗಿರಬೇಕು, ಕೈಗಾರಿಕಾ ಬೆಳವಣಿಗೆಗಳಿಗೆ ಮಾತ್ರ ಇತರೆ ಹಳ್ಳಿಗಳೊಂದಿಗೆ ಸಂಬಂಧ ಹೊಂದುವಂತಿರಬೇಕು. ಆಧ್ಯಾತ್ಮಿಕ ಹಿನ್ನೆಲೆಯ ಜೀವನಶೈಲಿ ಅವರದ್ದಾಗಿರಬೇಕು ಎಂದೆಲ್ಲ ಕನಸು ಕಟ್ಟಿದ್ದರು ಗಾಂಧೀಜಿ. ಅದರ ಮಾದರಿಯನ್ನು ವಾಧರ್ಾದಲ್ಲಿ ನಿಮರ್ಿಸಿದ್ದರು ಕೂಡ. ತಮ್ಮನ್ನು ತಾವು ಹಿಂದು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಆನಂತರದ ಗಾಂಧಿಗಳಿಗೆ ಈ ವಿಚಾರಗಳು ಅರ್ಥವಾಗುವುದಾದರೂ ಹೇಗೆ ಹೇಳಿ?

ವಾಸ್ತವದಲ್ಲಿ ಭಾರತದ ಹಳ್ಳಿಗಳು ಸ್ವಯಂ ಆಡಳಿತ ಹೊಂದಿದವಾಗಿದ್ದವು. ತಮಗೆ ಬೇಕಾದ್ದನ್ನೆಲ್ಲ ತಾವೇ ಬೆಳೆದುಕೊಳ್ಳುತ್ತ ಹೊರಗಿನ ಸಂಪರ್ಕವನ್ನು ಅತಿ ಕಡಿಮೆ ಇರಿಸಿಕೊಂಡಿದ್ದವು. ವಾರಕ್ಕೊಮ್ಮೆ ಸಂತೆ, ವರ್ಷಕ್ಕೊಮ್ಮೆ ಜಾತ್ರೆಗಳನ್ನು ನಡೆಸಿ ಅಕ್ಕಪಕ್ಕದ ಹಳ್ಳಿಗಳವರು ಬಂದು ತಂತಮ್ಮ ವಸ್ತುಗಳನ್ನು ಮಾರಾಟ ಮಾಡಿಹೋಗಲು ವ್ಯವಸ್ಥೆ ಮಾಡಿಕೊಡುತ್ತಿದ್ದರು. ಎಲ್ಲಿಯೂ ಯಾರೂ ಮತ್ತೊಬ್ಬರ ಬದುಕಿನಲ್ಲಿ ಮೂಗು ತೂರಿಸುವಂತಿರಲಿಲ್ಲ. ಹೆಚ್ಚೆಂದರೆ ಸೀಮಾ ಸುಂಕವನ್ನು ರಾಜನಾದವನಿಗೆ ಕಟ್ಟಬೇಕಾಗುತ್ತಿತ್ತು. ಈ ಸುಂಕದ ಕಾರಣದಿಂದಾಗಿಯೇ ಹಳ್ಳಿಗಳ ರಕ್ಷಣೆ ರಾಜನ ಹೆಗಲ ಮೇಲಿರುತ್ತಿತ್ತು. ಅದರಿಂದಾಗಿಯೇ ಸಾಮ್ರಾಜ್ಯ ಯಾರಧೀನವಾಗಿದೆಯೆಂಬ ಅರಿವು ಹಳ್ಳಿಗರಿರುತ್ತಿತ್ತು ಬಿಟ್ಟರೆ ಉಳಿದಂತೆ ಅವರು ರಾಜಕೀಯದಿಂದ ಸಂಪೂರ್ಣ ಮುಕ್ತರೇ. ಅದಕ್ಕಾಗಿಯೇ ರಾಜ್ಯಗಳಳಿಯಲಿ, ಗದ್ದುಗೆಗಳುರುಳಲಿ ಆತ ಮಾತ್ರ ಎಂದಿಗೂ ತಲೆ ಕೆಡಿಸಿಕೊಂಡವನಲ್ಲ.

2

ಹಳ್ಳಿಗಳ ಮುಖ್ಯ ಉದ್ಯೋಗ ಕೃಷಿಯೇ. ಹಾಗಂತ ಅವೈಜ್ಞಾನಿಕವಾಗಿ ಕೃಷಿಯನ್ನು ಅವಲಂಬಿಸಿರಲಿಲ್ಲ ಭಾರತೀಯರು. ಕೃಷಿ ಆಧಾರಿವಾಗಿಯೇ ಭಿನ್ನ ಭಿನ್ನ ಶಾಖೆಗಳನ್ನು ಬೆಳೆಸಿ ತನ್ಮೂಲಕ ಅಭಿವೃದ್ಧಿಯ ಓಟ ನಿಲ್ಲದಂತೆ ನೋಡಿಕೊಂಡಿದ್ದರು. ಹೀಗಾಗಿಯೇ ಒಂದೆರಡು ವರ್ಷ ಮಳೆಯೇ ಇಲ್ಲವಾದರೂ ಭೀಕರ ಬರಗಾಲದ ಸ್ಥಿತಿ ಭಾರತಕ್ಕೆ ಎಂದೂ ಬರಲೇ ಇಲ್ಲ. ಹಾಗೆ ನೋಡಿದರೆ ಭಾರತ ಬರಗಾಲದ ಪರಿಸ್ಥಿತಿಯನ್ನು ಎದುರಿಸಿದ್ದು ಬ್ರಿಟೀಷರ ಅವೈಜ್ಞಾನಿಕ, ದ್ವೇಷಪೂರಿತ, ಸ್ವಾಥರ್ಿ ಆಡಳಿತದ ಕಾಲದಲ್ಲಿಯೇ. ನಮ್ಮಲ್ಲಿ ಕೃಷಿ ಮತ್ತು ಪಶುಸಂಗೋಪನೆ ಒಂದಕ್ಕೊಂದು ಬೆಸೆದುಕೊಂಡಿದ್ದರೂ ಅವೆರಡೂ ಪ್ರತ್ಯೇಕವಾಗಿಯೇ ಬೆಳೆದಿತ್ತು. ಹಳ್ಳಿಗಳಲ್ಲಿ ಪ್ರಾಣಿಗಳ ವಿಚಾರದಲ್ಲಿ ವಿಶೇಷ ಅಧ್ಯಯನ ನಡೆಸಿದ ಜಾತಿಯೇ ಇತ್ತು. ಮಹಾರಾಷ್ಟ್ರ ಪ್ರಭಾವಿತ ಹಳ್ಳಿಗಳಲ್ಲಿ ಇವರನ್ನು ಗೌಳಿಗಳೆಂದು ಕರೆಯುತ್ತಿದ್ದರು. ಕೆಲವರು ಇವರಲ್ಲಿ ಅಲೆಮಾರಿಗಳೂ ಹೌದು. ಕೃಷಿಗೆ ಪೂರಕವಾಗಿಯೇ ಪಶುಸಂಗೋಪನೆ ಇದ್ದರೂ ಅದು ಪೂರ್ಣ ಪ್ರತ್ಯೇಕವಾದ ಶಾಖೆಯಾಗಿಯೇ ಬೆಳೆದಿತ್ತು. ಬ್ರಿಟೀಷರು ಈ ಉದ್ಯೋಗವನ್ನು ಸಂಪೂರ್ಣ ನಾಶ ಮಾಡಿದರು. ಅವರಿಗೆ ಆದಾಯ ತಂದುಕೊಡದ ಯಾವ ಉದ್ಯೋಗಕ್ಕೂ ಅವರು ಬೆಲೆ ಕೊಡಲಿಲ್ಲವಾದ್ದರಿಂದ ಒಂದಿಡೀ ಉದ್ಯೋಗ ಧ್ವಂಸವಾಯ್ತು. ಪಶುಸಂಗೋಪನೆಯನ್ನೇ ಅವಲಂಬಿಸಿಕೊಂಡಿದ್ದವರು ಕೃಷಿಯತ್ತ ವಾಲಬೇಕಾಯ್ತು. ಕೃಷಿ ಭೂಮಿಯ ಮೇಲೆ ಒತ್ತಡ ಹೆಚ್ಚಾಯ್ತು. ಗೋರಕ್ಷಣೆ ಅನ್ನೋದು ಈ ದೃಷ್ಟಿಯಿಂದಲೂ ಬಲು ಪ್ರಮುಖ. ಗೋವನ್ನು ನೋಡಿಕೊಳ್ಳುವ ಜನರಿದ್ದಾರೆಂದರೆ ಮನೆಮನೆಗಳೂ ಅವುಗಳನ್ನು ಸಾಕಲು ಮುಂದಾಗುತ್ತಿದ್ದವು. ರೈತನ ಹೆಗಲ ಭಾರ ಕಡಿಮೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಷಯದ ತಜ್ಞರೇ ಇಲ್ಲವಾಗುತ್ತಿರುವುದರಿಂದ ಗೋಸಾಕಾಣಿಕೆ ಸುಲಭವೇನಲ್ಲ. ಬ್ರಿಟೀಷರು ಯಾವ ಉದ್ಯೋಗವನ್ನು ವ್ಯವಸ್ಥಿತವಾಗಿ ನಾಶಗೊಳಿಸಿದ್ದರೋ ಹಳ್ಳಿಗಳಲ್ಲಿ ಅದನ್ನು ಅಷ್ಟೇ ವ್ಯವಸ್ಥಿತವಾಗಿ ಪುನರುಜ್ಜೀವನಗೊಳಿಸುವ ಅಗತ್ಯವಿತ್ತು. ಹೀಗಾಗಿಯೇ ಗೋರಕ್ಷಣೆ ಎಂದಾಗ ಅದು ಹಿಂದುತ್ವದ ಅಜೆಂಡಾ ಅಲ್ಲ ಬದಲಿಗೆ ರಾಷ್ಟ್ರವನ್ನು ಉಳಿಸುವ ಮೂಲ ಕಲ್ಪನೆ!

ಬಿಳಿಯರ ಶೋಷಣೆ ಇಲ್ಲಿಗೇ ನಿಲ್ಲಲಿಲ್ಲ. ಕೃಷಿ ಆಧಾರಿತ ವೃತ್ತಿಗಳನ್ನು ಧ್ವಂಸಗೊಳಿಸಿದರು. ರೈತನಿಂದ ಹತ್ತಿ ಪಡೆದು ಅದನ್ನು ನೂಲಾಗಿಸಿ ಬಗೆಬಗೆಯ ವಿನ್ಯಾಸದ ಬಟ್ಟೆ ನೇಯುವ ಭಾರತೀಯ ಕುಶಲ ಕಮರ್ಿ ಕೃಷಿಯನ್ನೇ ಅವಲಂಬಿಸಿದ್ದರೂ ಅವನದ್ದೇ ಒಂದು ಪ್ರತ್ಯೇಕ ಶಾಖೆಯಾಗಿತ್ತು. ಬಟ್ಟೆನೇಯುವ ವರ್ಗವೇ ಇಲ್ಲಿ ಜಾತಿಯಾಗಿ ಗುರುತಿಸಿಕೊಂಡಿತ್ತು. ಪೀಳಿಗೆಯಿಂದ ಪೀಳಿಗೆಗೆ ಆ ಕಲೆ ಹರಿದು ಬಂದಿದ್ದರಿಂದ ಹೊಸ ಹೊಸ ಆವಿಷ್ಕಾರಗಳೂ ನಡೆದು ಬಟ್ಟೆ ಉದ್ದಿಮೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿತ್ತು. ಅತ್ತ ಕೃಷಿಗೆ ಪೂರಕವಾದ ನೇಗಿಲು ಮುಂತಾದ ಕಬ್ಬಿಣದ ವಸ್ತುಗಳನ್ನು ತಯಾರಿಸುವ ಉಕ್ಕಿನ ಕಾಖರ್ಾನೆಯೂ ವ್ಯವಸ್ಥಿತವಾಗಿ ನಡೆಯುತ್ತಿತ್ತು. ನಮ್ಮ ಕಬ್ಬಿಣದ ಉತ್ಪಾದನೆಗಳಿಗೂ ಜಾಗತಿಕ ಬೇಡಿಕೆಯಿತ್ತು. ಕಬ್ಬಿಣದ ಅದಿರನ್ನು ಸಂಗ್ರಹಿಸಿ ಅದನ್ನು ಕಬ್ಬಿಣವಾಗಿಸುವ ಭಾರತೀಯನೇ ಸಂಶೋಧಿಸಿದ ಸುಲಭವಾಗಿ ಬಳಸಬಹುದಾದ ಕುಲುಮೆಗಳ ಕುರಿತಂತೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಕಬ್ಬಿಣದ ಸಂಶೋಧನೆಯ ಮುಂದಿನ ಹಂತವಾಗಿಯೇ ಭಾರತೀಯರು ಹಡಗುಗಳ ನಿಮರ್ಾಣದಲ್ಲೂ ಯಶಸ್ಸು ಪಡೆದಿದ್ದು. ಜಗತ್ತಿನ ಅತಿ ಬಲಾಢ್ಯ ಹಡಗುಗಳು ನಿಮರ್ಾಣಗೊಳ್ಳುತ್ತಿದ್ದುದು ಇಲ್ಲಿಯೇ ಎಂಬುದು ನೆನಪಿರಲಿ. ಕೃಷಿಗೆ ಪೂರಕವಾಗಿ ಶುರುವಾದ ಉದ್ದಿಮೆ ಕಾಲಕ್ರಮದಲ್ಲಿ ಸ್ವತಂತ್ರವಾಗಿ ಬೆಳೆದು ನಿಂತಿದ್ದು ಹೀಗೆ. ಮಡಿಕೆಯೇ ಮೊದಲಾದ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಲೇ ಭಾರತೀಯ ಕುಂಬಾರ ಆಟಿಕೆಗಳನ್ನೂ ಮಣ್ಣಿನಲ್ಲಿಯೇ ತಯಾರಿಸುವ ಕೌಶಲವನ್ನು ಬೆಳೆಸಿಕೊಂಡ. ಅಲ್ಲಿಂದಲೇ ಭಿನ್ನಭಿನ್ನ ಕರಕುಶಲ ಕಲೆಯೂ ಅನಾವರಣಗೊಂಡು ಆ ಕ್ಷೇತ್ರದಲ್ಲಿಯೂ ಮಹತ್ವದ ಹೆಜ್ಜೆಯನ್ನೇ ಇಟ್ಟ ಭಾರತೀಯ. ಬ್ರಿಟೀಷರು ಭಾರತಕ್ಕೆ ಬರುವ ಮುನ್ನವೇ ಕೃಷಿ ವಸ್ತುಗಳಲ್ಲದೇ ಈ ಎಲ್ಲ ಕ್ಷೇತ್ರಗಳಲ್ಲೂ ಭಾರತ ತನ್ನ ಕಾಲನ್ನು ಬಲವಾಗಿಯೇ ಊರಿತ್ತು. ಸರಿಯಾಗಿ ಗಮನಿಸಿ. ಕೃಷಿಗೆ ಪೂರಕವಾಗಿ ಬೆಳೆದ ಈ ಶಾಖೆಗಳು ಕಾಲಕ್ರಮದಲ್ಲಿ ತಾವೇ ವಿಸ್ತಾರವಾಗಿ ಬೆಳೆದು ನಿಂತು ದೇಶದ ಸಂಪತ್ತನ್ನು ಹೆಚ್ಚಿಸಲು ಕಾರಣವಾದವು.

3

ಮೊಘಲರ ಆಳ್ವಿಕೆಯ ಕಾಲಕ್ಕೂ ಇದಕ್ಕೆ ಬಲುವಾದ ಧಕ್ಕೆಯೇನೂ ಬಂದಿರಲಿಲ್ಲ. ನಮ್ಮ ಕುಶಲ ಕಲೆ ಗ್ರಾಹಕರಿಗೆ ತಕ್ಕಂತೆ ಸ್ವಲ್ಪ ಇಸ್ಲಾಂ ಶೈಲಿಯನ್ನು ಆಮದು ಮಾಡಿಕೊಂಡಿತಷ್ಟೇ. ಆದರೆ ಬ್ರಿಟೀಷರು ತಮ್ಮ ಸಾರ್ವಭೌಮತೆಯನ್ನು ಸ್ಥಾಪಿಸಲೆಂದೇ ಈ ಉದ್ದಿಮೆಯಷ್ಟನ್ನೂ ನಾಶ ಮಾಡಿದರು. ಬಟ್ಟೆ ಉದ್ದಿಮೆಗೆ ಹೊಡೆತ ಕೊಟ್ಟು ನೇಯ್ಗೆಯ ಸಂಕುಲವನ್ನು ನಾಶ ಮಾಡಿದ ಮೇಲೆ ನೇಯ್ಗೆಯವರೂ ಕೃಷಿ ಭೂಮಿಗೆ ಆತುಕೊಂಡರು. ಅತ್ತ ಕಬ್ಬಿಣದ ಕ್ಷೇತ್ರದಲ್ಲಿ ಅಪಾರ ಜ್ಞಾನ ಗಳಿಸಿದ್ದ ಇಡಿಯ ಜನಾಂಗಕ್ಕೆ ಹೊಡೆತ ಕೊಟ್ಟ ಮೇಲೆ ಅವರೂ ಕೃಷಿಯತ್ತ ವಾಲಲೇ ಬೇಕಾಯ್ತು. ಕರಕುಶಲ ಕಲೆಯವರದ್ದೂ ಅದೇ ಕಥೆಯಾಯ್ತು. ಒಟ್ಟಿನಲ್ಲಿ ಅಲ್ಪಾವಧಿಯಲ್ಲಿಯೇ ಕೋಟ್ಯಂತರ ಜನ ತಂತಮ್ಮ ಉದ್ಯೋಗವನ್ನು ಬಿಟ್ಟು ಕೃಷಿಯನ್ನು ಅವಲಂಬಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದರು. ಆಗ ಭಾರತ ಅತಿದೊಡ್ಡ ಕೃಷಿ ಅವಲಂಬಿತ ದೇಶವಾಗಿ ಪ್ರತಿಶತ 70 ರಷ್ಟು ಜನ ಇಲ್ಲಿರುವ ಭೂಮಿಯನ್ನು ನಂಬಿಕೊಂಡು ಬದುಕುವ ಪರಿಸ್ಥಿತಿ ನಿಮರ್ಾಣವಾಯ್ತು. ಆ ಕೃಷಿಯನ್ನೂ ಬಿಳಿಯರು ಹಿಂಡಿ-ಹಿಪ್ಪೆ ಮಾಡಿದ್ದರಿಂದ ಕೃಷಿಕ ಬಡವಾದ, ಸವೆದು ಹೋದ. ತನ್ನ ಜಮೀನನ್ನು ಜಮೀನ್ದಾರರಿಗೆ ಅಡವಿಟ್ಟ. ಸಾಲಗಾರರ ಬಳಿ ಕೈಚಾಚಿ ಸೋತುಹೋದ. ಕೊನೆಗೊಮ್ಮೆ ಎಲ್ಲವನ್ನೂ ಕಳಕೊಂಡು ಊರು ಬಿಟ್ಟು ಹೊರಟ. ಕೃತಕ ಕ್ಷಾಮಗಳು ನಿಮರ್ಾಣಗೊಂಡದ್ದು ಹೀಗೆ.
ಸ್ವಾತಂತ್ರ್ಯಾ ನಂತರ ನಮ್ಮ ಕಾರ್ಯಶೈಲಿ ಬದಲಾಗಬೇಕಿತ್ತು. ಕೃಷಿಗೆ ಪೂರಕವಾಗಿ ಉದ್ಯಮಗಳನ್ನು ಬೆಳೆಸಬೇಕಿತ್ತು. ಗ್ರಾಮಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಅಲ್ಲಿನ ಜನ ಉದ್ಯೋಗವನ್ನರಸಿ ಪಟ್ಟಣಗಳಿಗೆ ಹೊರಡುವುದನ್ನು ಹೇಗಾದರೂ ತಡೆಯಬೇಕಿತ್ತು. ಪಟ್ಟಣಗಳ ಅವೈಜ್ಞಾನಿಕ ವಿಸ್ತಾರಕ್ಕೆ ತಡೆ ಹೇರಬೇಕಿದ್ದ ನಾವು ಹಳ್ಳಿಗಳನ್ನೇ ಪಟ್ಟಣವಾಗಿಸುವ ಯೋಜನೆಗಳನ್ನು ತಂದೆವು. ಹೋಗಲಿ ಹೀಗೆ ಬೆಳೆಸಿದ ಪಟ್ಟಣಗಳನ್ನಾದರೂ ಅಂತರಾಷ್ಟ್ರೀಯ ಮಾನ್ಯತೆಗೆ ತಕ್ಕಂತೆ ಬೆಳೆಸಿದೆವಾ? ಖಂಡಿತ ಇಲ್ಲ. ಅವು ವಿಸ್ತಾರವಾದವೇ ಹೊರತು ವ್ಯವಸ್ಥೆಯ ದೃಷ್ಟಿಯಿಂದ ಪಟ್ಟಣವೆನಿಸಲಿಲ್ಲ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿಗಳನ್ನೆಲ್ಲ ನೋಡಿದರೆ ಅದನ್ನು ಪಟ್ಟಣವೆನ್ನುವುದು ರಾಜಕೀಯ ನಾಯಕರುಗಳಿಗಷ್ಟೇ ಪ್ರೀತಿ!

ಬ್ರಿಟೀಷರ ಆಳ್ವಿಕೆಯ ಶೈಲಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲೇಬೇಕು. ಅವರು ಜಾತಿ ವೈಷಮ್ಯವನ್ನು ನಮ್ಮಲ್ಲಿ ಸೂಕ್ಷ್ಮವಾಗಿ ಬಿತ್ತಿ ವೃತ್ತಿ ವೃತ್ತಿಗಳ ನಡುವಿದ್ದ ಹಂದರವನ್ನು ನಾಶ ಮಾಡಿಬಿಟ್ಟರು. ಕುಂಬಾರನೆಂದರೆ ಹಿಂದುಳಿದ ಜಾತಿಯೆಂದು ಅದ್ಯಾವ ಕಾಲದಲ್ಲಿ ಭಾರತೀಯರ ಮನಸಿನಲ್ಲಿತ್ತೋ ದೇವರೇ ಬಲ್ಲ. ಅದೊಂದು ಮಣ್ಣಿನ ಕೆಲಸದಲ್ಲಿ ವಿಶೇಷ ನೈಪುಣ್ಯತೆ ಪಡೆದ ಎಂಜಿನಿಯರುಗಳ ಗುಂಪಾಗಿತ್ತು ಅಷ್ಟೇ. ನನ್ನದು ವೈದ್ಯ ವೃತ್ತಿ ಎನ್ನುವಾಗ ಯಾರಿಗಾದರೂ ಅಪದ್ಧವೆನಿಸುವುದೇನು? ವೈದ್ಯನಾದವ ವೈದ್ಯೆಯಾದವಳನ್ನೇ ಮದುವೆಯಾಗುವನಲ್ಲ ಅದು ಜಾತಿ ಪ್ರೇಮ ಎನಿಸುವುದೇನು? ಅವನ ಮಕ್ಕಳು ಮತ್ತೆ ವೈದ್ಯರೇ ಆಗುತ್ತಾರಲ್ಲ ಆಗಲೂ ತಪ್ಪೆನಿಸಲಿಲ್ಲ! ಆದರೆ ಮಣ್ಣಿನ ಕೆಲಸದಲ್ಲಿ ನೈಪುಣ್ಯ ಹೊಂದಿದ ಕುಶಲ ಕಮರ್ಿಯನ್ನು ಕಂಡಾಗ ಹಾಗೇಕೆನಿಸಬೇಕು. ತಮ್ಮ ಕಲೆಯ ವಿಸ್ತಾರಕ್ಕಾಗಿ ಅವರು ತಮ್ಮದೇ ಒಂದು ಸೂಕ್ಷ್ಮ ವ್ಯವಸ್ಥೆ ರೂಪಿಸಿಕೊಂಡರೆ ಅದೇಕೆ ಜಾತಿ ಪದ್ಧತಿಯೆನಿಸಬೇಕು? ಬ್ರಿಟೀಷರು ಅವರ ಕೈಗಳಿಂದ ಉದ್ಯೋಗ ಕಸಿದುಕೊಂಡು ಅವರನ್ನು ಬೀದಿಗೆ ತಳ್ಳುವವರೆಗೂ ಈ ದೇಶದಲ್ಲಿ ಕುಂಬಾರರು, ಕಮ್ಮಾರರು, ನೇಕಾರರು, ಬಣಜಿಗರು ಇವರೆಲ್ಲ ಚೆನ್ನಾದ ಬದುಕನ್ನೇ ನಡೆಸಿದ್ದರು. ಆಮೇಲೆಯೇ ಎಲ್ಲ ತಿರುವುಮುರುವಾಗಿದ್ದು. ಬಡತನ ಅವರನ್ನು ಆವರಿಸಿಕೊಂಡಿತು, ಬದುಕು ಅಂಧಕಾರದತ್ತ ತಳ್ಳಲ್ಪಟ್ಟಿತು. ಗೌರವದ ಬದುಕನ್ನು ಕಂಡಿದ್ದ ಈ ಎಲ್ಲ ಜನಾಂಗಗಳೂ ನೋಡನೋಡುತ್ತಲೇ ಸಾಮಾಜಿಕವಾಗಿ ಕುಸಿದು ಹೋದವು. ಸ್ವಾತಂತ್ರ್ಯಾನಂತರ ಈ ಎಲ್ಲ ಉದ್ಯಮಗಳಿಗೂ ಹೊಸ ಜೀವ ತುಂಬಿ, ಆಧುನಿಕತೆಯ ಸ್ಪರ್ಶ ಕೊಟ್ಟಿದ್ದರೆ ಇಂದು ಆಥರ್ಿಕತೆಯ ದೃಷ್ಟಿಯಿಂದ ಸಬಲರಾಗಿರುತ್ತಿದ್ದ ಅವರೆಲ್ಲ ಬಿಪಿಎಲ್ ಕಾಡರ್ಿಗಾಗಿ ಸಾಲು ನಿಂತಿರುತ್ತಿರಲಿಲ್ಲ.

4

ಬದಲಾವಣೆಗಾಗಿ ಇಂದು ಪ್ರತಿಯೊಬ್ಬರೂ ಹಾತೊರೆಯುತ್ತಿದ್ದಾರೆ. ನಾಯಕತ್ವ ವಹಿಸಬಲ್ಲ ಶಕ್ತಿಯುತ ಮನಸ್ಸುಗಳು ಬೇಕಷ್ಟೇ. ಗುಜರಾತಿನ ಪನ್ಸಾರಿಯ ಹಿಮಾಂಶು ಪಟೇಲನದ್ದು ಅಂಥದ್ದೇ ಒಂದು ಆದರ್ಶದ ಕಥೆ. ಆರು ಸಾವಿರ ಜನರಿದ್ದ ತನ್ನ ಹಳ್ಳಿಯ ದುಃಸ್ಥಿತಿಯನ್ನು ಕಂಡು ತಾನೇ ಅಲ್ಲಿನ ಮುಖ್ಯಸ್ಥನಾದ. ಜನರ ಒಲವನ್ನು ಗಳಿಸುವಲ್ಲಿ ಶ್ರಮಿಸಿದ. ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಹಳ್ಳಿಗಳಿಗೆಂದೇ ಮೀಸಲಾಗಿಟ್ಟ ಯೋಜನೆಗಳನ್ನು ಅಧ್ಯಯನ ಮಾಡಿ ತನ್ನ ಹಳ್ಳಿಗೆ ಒಂದೊಂದೇ ಬರುವಂತೆ ಮಾಡಿದ. ಹಳ್ಳಿಯ ರಸ್ತೆಗಳಲ್ಲಿ ಧ್ವನಿವರ್ಧಕಗಳನ್ನು ಜೋಡಿಸಿ ತುತರ್ಾಗಿ ಜನರೊಂದಿಗೆ ಮಾತಾಡುವ ವ್ಯವಸ್ಥೆ ರೂಪಿಸಿಕೊಂಡ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕಾರ್ಯಯೋಜನೆ ಕೈಗೆತ್ತಿಕೊಂಡು ಅದನ್ನು ಪೂರೈಸಿದ. ಜನರಿಂದ ತ್ಯಾಜ್ಯ ಸಂಗ್ರಹಿಸಿ ಅದನ್ನು ಗೊಬ್ಬರವಾಗಿ ಪರಿವತರ್ಿಸುವ ಘಟಕ ಶುರು ಮಾಡಿದ. ಇಡಿಯ ಊರಿಗೆ ವೈಫಿ ಸಿಗುವ ವ್ಯವಸ್ಥೆ ಮಾಡಿದ. ತಿಂಗಳಿಗೆ ಐವತ್ತು ರೂಪಾಯಿ ಪಾವತಿಸಿ ಊರಿನ ಯಾರು ಬೇಕಾದರೂ ಈ ಸೌಲಭ್ಯವನ್ನು ಬಳಸುವ ಯೋಜನೆ ರೂಪಿಸಿದ. ಇಂದು ಊರಿಗೆ ಬರುವವರಿಗೆ ಆತ ತನ್ನ ಹಳ್ಳಿಯಲ್ಲಿ ಒಂದು ಸೊಳ್ಳೆಯನ್ನು ಹುಡುಕಿಕೊಟ್ಟರೆ ಲಕ್ಷರೂಪಾಯಿ ಬಹುಮಾನವೆಂದು ಸವಾಲೊಡ್ಡುತ್ತಾನೆ. ಇದೇ ರೀತಿ ಬಿಹಾರದ ಧಣರ್ಾಯಿಯನ್ನು ಸೌರ ಶಕ್ತಿ ಸಂಚಾಲಿತವಾಗಿಸಿದ ಅಲ್ಲಿನ ನಾಯಕನ ಕಥೆಯೂ ಅಮೋಘ. ಇವೆಲ್ಲ ಹಳ್ಳಿಗಳನ್ನು ಬದಲಾಯಿಸಬಹುದಾದ ಅದ್ಭುತ ಯೋಜನೆಗಳು. ನಮ್ಮ ಹಳ್ಳಿಗಳಿಂದ ಜನ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಪಟ್ಟಣಗಳ ಅವೈಜ್ಞಾನಿಕ ಬೆಳವಣಿಗೆಗೆ ತಡೆ ಹಾಕಿ ಹಳ್ಳಿಗಳ ಸಾವಯವ ವಿಕಾಸಕ್ಕೆ ಆದ್ಯತೆ ಕೊಡಬೇಕು.

ಇವೆಲ್ಲಕ್ಕೂ ಮೊದಲು ಹಳ್ಳಿಗಳಲ್ಲಿನ ತರುಣರು ಜಾತಿ ಮತ್ತು ಪಕ್ಷಗಳ ಕಪಿಮುಷ್ಟಿಯಿಂದ ಹೊರಬರಬೇಕು. ಹೌದಲ್ವೇ?

Comments are closed.