ವಿಭಾಗಗಳು

ಸುದ್ದಿಪತ್ರ


 

ಹಾಸ್ಟೆಲಿನ ಪಂಜರ ಒಡೆಯುವ ಜಾಮಿಯಾ ಮಿಲಿಯಾ ಹೋರಾಟ!

ಪಂಜರ ಮುರಿದು ಹಾಕು ಎಂಬರ್ಥದ ಈ ಹೋರಾಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ 2015 ರಲ್ಲಿ ಶುರುವಾಯ್ತು. ಈ ಹೋರಾಟದ ಕಾರ್ಯಕತರ್ೆ ಮರಿಯಾ ಮುಷ್ಟಾಕ್ ಹೇಳುವಂತೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶವೇನೋ ಸಿಕ್ಕಾಯ್ತು. ಆದರೆ ಪುರುಷರ ದಬ್ಬಾಳಿಕೆ ನಿಲ್ಲಲಿಲ್ಲ’. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ತಮ್ಮ ಕ್ರಿಯಾ ಶೈಲಿಯನ್ನು ಈಗ ಬದಲಿಸಿಕೊಳ್ಳಲೇಬೇಕಿದೆ.

ಸ್ತ್ರೀ ಸಮಾನತೆಯ ಹೋರಾಟದ ಹಿನ್ನೆಲೆಯಲ್ಲಿ ಎದೆ ಬಡೆದುಕೊಳ್ಳುವ ತಂಡವೊಂದು ಸದಾ ಟೌನ್ಹಾಲ್ನಲ್ಲಿ ನಿಂತು ಬೊಬ್ಬಿರಿಯುವುದನ್ನು ನಾವು ಕಂಡೇ ಇರುತ್ತೇವೆ. ಆದರೆ ಈ ಹೋರಾಟವೆಲ್ಲ ಬಹುಪಾಲು ಹಿಂದೂ ವಿರೋಧಿ ಮತ್ತು ಕೆಲವು ಬಾರಿ ದೇಶವಿರೋಧಿಯೂ ಆಗಿರುತ್ತವೆ. ತಮಗೆ ಬೇಕಾಗಿರುವುದನ್ನು ಮಾತ್ರ ಆರಿಸಿಕೊಂಡು ಪ್ರತಿಭಟನೆ ಮಾಡುವಲ್ಲಿ ಚೆನ್ನಾಗಿ ತಯಾರಾಗಿರುವ ಜನ ಇವರು. ಕಳೆದ ಮೂರು ವರ್ಷಗಳಿಂದ ದೇಶದಾದ್ಯಂತ ನಡೆಯುತ್ತಿರುವ ಒಂದು ಸ್ತ್ರೀ ಆಂದೋಲನದ ಕುರಿತಂತೆ ಇವರ್ಯಾರೂ ಮಾತನಾಡಲೇ ಇಲ್ಲ. ಪಿಂಜರಾತೋಡ್ ಎಂಬ ಹೋರಾಟದ ಕುರಿತಂತೆ ಅವರೆಂದಿಗೂ ಚಚರ್ೆಯೂ ಮಾಡಿಲ್ಲ.

10

ಪಂಜರ ಮುರಿದು ಹಾಕು ಎಂಬರ್ಥದ ಈ ಹೋರಾಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ 2015 ರಲ್ಲಿ ಶುರುವಾಯ್ತು. ಈ ಹೋರಾಟದ ಕಾರ್ಯಕತರ್ೆ ಮರಿಯಾ ಮುಷ್ಟಾಕ್ ಹೇಳುವಂತೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶವೇನೋ ಸಿಕ್ಕಾಯ್ತು. ಆದರೆ ಪುರುಷರ ದಬ್ಬಾಳಿಕೆ ನಿಲ್ಲಲಿಲ್ಲ’. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ತಮ್ಮ ಕ್ರಿಯಾ ಶೈಲಿಯನ್ನು ಈಗ ಬದಲಿಸಿಕೊಳ್ಳಲೇಬೇಕಿದೆ. ವಾಸ್ತವವಾಗಿ ಈ ಹೋರಾಟ ಶುರುವಾಗಿದ್ದು ಅಲ್ಲಿನ ಮಹಿಳಾ ಹಾಸ್ಟೆಲ್ಗಳಲ್ಲಿರುವ ತಾರತಮ್ಯದ ಕುರಿತಂತೆ. ಸಂಜೆ ಏಳುವರೆಯೊಳಗೆ ಹಾಸ್ಟೆಲ್ಗೆ ಬಂದು ಸೇರಿಕೊಂಡುಬಿಡಬೇಕು. ಆನಂತರ ಬೀಗ ಹಾಕಿ ಎಲ್ಲ ಮಕ್ಕಳನ್ನು ಹೊರಗೆ ಹೋಗಲು ಬಿಡಲಾಗದು ಎಂಬ ನಿಯಮವೇ ಈ ಹೆಣ್ಣುಮಕ್ಕಳು ಬೀದಿಗೆ ಬರಲು ಕಾರಣವಾಯ್ತು. ಇವರು ಬರಿ ಬೀದಿಗೆ ಬಂದದ್ದಷ್ಟೇ ಅಲ್ಲ. ಕಾಲೇಜು ಮತ್ತು ಹಾಸ್ಟೆಲ್ಗಳ ಗೋಡೆಯನ್ನು ಪಿಂಜರಾತೋಡ್ ಬರಹಗಳಿಂದ ತುಂಬಿಸಿಬಿಟ್ಟರು. ಮೇನಕಾ ಗಾಂಧಿ ನಗರಕ್ಕೆ ಬಂದಿದ್ದಾಗ ಈ ಲಕ್ಷ್ಮಣ ರೇಖೆಯಿಂದ ತಮ್ಮನ್ನುಳಿಸಿ ಎಂದು ಕೇಳಿಕೊಂಡಿದ್ದರೂ ಕೂಡ. ಜಾಮಿಯಾ ಮಿಲಿಯಾದಲ್ಲಿ ಈ ಗಲಾಟೆ ಶುರುವಾಗುತ್ತಿದ್ದಂತೆ ದೇಶದ ಬಹುತೇಕ ಹೆಣ್ಣುಮಕ್ಕಳ ಹಾಸ್ಟೆಲ್ಗಳಲ್ಲಿ ಇದೇ ಅಥವಾ ಇದಕ್ಕಿಂತಲೂ ಕಠಿಣವಾದ ನಿಯಮ ಜಾರಿಯಲ್ಲಿರುವುದು ಬೆಳಕಿಗೆ ಬಂತು. ಉತ್ತರ ಪ್ರದೇಶದ ಅಲಿಘರ್ ಮುಸ್ಲೀಂ ಯುನಿವಸರ್ಿಟಿಯಲ್ಲಿ ಸಂಜೆ 5 ಗಂಟೆಗೆ ವಿದ್ಯಾಥರ್ಿ ನಿಲಯದ ಬಾಗಿಲು ಹಾಕಿ ಹೆಣ್ಣುಮಕ್ಕಳನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯಗಳು ನಡುರಾತ್ರಿಯವರೆಗೆ ತೆರೆದಿರುವಾಗ ಹೆಣ್ಣುಮಕ್ಕಳು ವಿದ್ಯಾಥರ್ಿ ನಿಲಯದೊಳಗೆ ಏಕೆ ಕೂಡಿಹಾಕಲ್ಪಡಬೇಕೆಂಬುದು ಅವರ ಮೊದಲ ಪ್ರಶ್ನೆ. ಅದಕ್ಕೂ ಮಿಗಿಲಾಗಿ ಗಂಡುಮಕ್ಕಳು ರಾತ್ರಿ ಹೊರಗೆ ಅಡ್ಡಾಡಬಹುದಾದರೆ ತಮಗೇಕಿಲ್ಲ ಎಂಬುದು ಅಂತರಂಗದಲ್ಲಿ ಅಡಗಿರುವ ತೊಳಲಾಟ.

ಜಾಮಿಯಾ ಮಿಲಿಯಾದಲ್ಲಿ ಈ ಆಂದೋಲನ ಶುರುವಾಗುತ್ತಿದ್ದಂತೆ ನಿಧಾನವಾಗಿ ದೆಹಲಿ ಮತ್ತು ಪಂಜಾಬುಗಳಿಗೂ ಇದು ಹಬ್ಬಿತು. ಪಿಂಜರಾತೋಡ್ ಹೆಸರಿನಲ್ಲಿ ಫೇಸ್ಬುಕ್ ಪೇಜ್ಗಳು ಶುರುವಾದವು. ಮೊದ-ಮೊದಲು ವಿದ್ಯಾಥರ್ಿ ನಿಲಯಕ್ಕೆ ಸಂಬಂಧಪಟ್ಟ ನಿಯಮಗಳೊಂದಿಗೆ ನಡೆಯುತ್ತಿದ್ದ ಹೋರಾಟವಾಗಿದ್ದರೂ ಬರು-ಬರುತ್ತಾ ಇದು ಎಲ್ಲ ವಿಚಾರದ ಸ್ವಾತಂತ್ರ್ಯಕ್ಕೂ ಅಡಿಪಾಯವಾಗಲಾರಂಭಿಸಿತು. ಬೆದರಿದಂತೆ ಕಂಡ ಜಾಮಿಯಾ ಮಿಲಿಯಾ ಏಳುವರೆ ಒಳಗೆ ವಿದ್ಯಾಥರ್ಿ ನಿಲಯ ಸೇರಬೇಕೆಂಬ ನಿಯಮವನ್ನು ಹತ್ತೂವರೆಗೆ ವಿಸ್ತರಿಸಿತು. ಆದರೆ ಕಳೆದ ಒಂದು ವಾರದ ಹಿಂದೆ ಅದನ್ನು ಒಂಭತ್ತು ಗಂಟೆಗೆ ಇಳಿಸುವ ಮೂಲಕ ವಿದ್ಯಾಥರ್ಿನಿಯರಲ್ಲಿ ಆಕ್ರೋಶಕ್ಕೆ ಕಾರಣವಾಯ್ತು. ನಿಲಯದ ಮೇಲ್ವಿಚಾರಕರಾದ ಆಜ್ರಾ ಖುಷರ್ಿದ್ ‘ಹೆಣ್ಣುಮಕ್ಕಳ ರಕ್ಷಣೆಗೆಂದೇ ಈ ನಿಯಮವನ್ನು ತರಲಾಗಿದ್ದು ತಂದೆ-ತಾಯಿಯರ ಒಪ್ಪಿಗೆಯನ್ನು ಪಡೆದು ಅದಕ್ಕೆ ತಕ್ಕಂತೆ ನಡೆದುಕೊಳ್ಳಲಿದ್ದೇವೆ’ ಎಂದರಲ್ಲದೇ ‘ಅದೆಷ್ಟು ಪೋಷಕರು ತಮ್ಮ ಮಕ್ಕಳನ್ನು ನಡುರಾತ್ರಿಯಲ್ಲಿ ಬೀದಿಗೆ ಬಿಡಲು ಒಪ್ಪುತ್ತಾರೆಂದು ನೋಡೇಬಿಡೋಣ’ ಎಂದು ಸವಾಲೆಸೆದರು. ಜಾಮಿಯಾ ಮಿಲಿಯಾದ ಈ ಯೂಟನರ್್ನಿಂದ ಆಕ್ರೋಶಭರಿತರಾದ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಹೋರಾಟವನ್ನೇ ಸಂಘಟಿಸಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವ್ಡೇಕರ್ರಿಗೆ ಪಿಟೀಷನ್ ಬರೆದು ಈ ನಿಯಮವನ್ನೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ. ಸಿಸಿಟಿವಿಗಳನ್ನು ಎಲ್ಲೆಡೆ ಹಾಕಿಸುವ ಮೂಲಕ ಹೆಣ್ಣುಮಕ್ಕಳ ರಕ್ಷಣೆ ಮಾಡುತ್ತೇವೆಂದು ಬಡಾಯಿ ಕೊಚ್ಚಿದ್ದು ಸಾಕು. ಅವುಗಳಿಂದ ಅತ್ಯಾಚಾರದ ಪ್ರಕರಣಗಳೇನು ನಿಂತಿಲ್ಲ. ಸ್ತ್ರೀ ರಕ್ಷಣೆ ಎಂದರೆ ಅವರಿಗೆ ಸಮಾನತೆ ಕೊಡುವುದು ಮತ್ತು ಬಂಧಮುಕ್ತರಾಗಿಸುವುದು ಮಾತ್ರ ಎಂದೆಲ್ಲ ಈ ಹೋರಾಟಗಾರರು ಮಾತನಾಡುತ್ತಿದ್ದಾರೆ.

11

ಒಟ್ಟಾರೆ ಸಮಾಜದಲ್ಲಿ ಗೊಂದಲದ ವಾತಾವರಣವೊಂತು ಇದೆ. ಸ್ತ್ರೀ ರಕ್ಷಣೆಗೆ ಸಿಸಿಟಿವಿ ಅಳವಡಿಸುವುದೇ ಉಪಾಯವೆನ್ನಲಾಗಿತ್ತು. ಈಗ ಅದು ಸಾಕಾಗುತ್ತಿಲ್ಲ. ಹಾಸ್ಟೆಲ್ಲುಗಳಿಗೆ ಬೇಗ ಬರುವ ನಿಯಮ ಮಾಡಬೇಕು ಎಂದು ಹೇಳಲಾಗಿತ್ತು. ಈಗ ಅದೂ ಸಾಕಾಗುತ್ತಿಲ್ಲ. ರಾತ್ರಿಯಾದೊಡನೆ ಹಾಸ್ಟೆಲ್ಲುಗಳಿಗೆ ಬೀಗ ಹಾಕಬೇಕೆಂಬ ನಿಯಮ ಜಾರಿ ಮಾಡಲಾಯ್ತು. ಈಗ ಅದೂ ಸಾಲುತ್ತಿಲ್ಲ. ಅತ್ಯಾಚಾರದ ಪ್ರಕರಣಗಳು ದಿನೇ ದಿನೇ ವರದಿಯಾಗುತ್ತಿರುವ ಪ್ರಮಾಣ ಕಂಡರೆ ಎದೆ ಝಲ್ಲೆನ್ನುವಂಥದ್ದೇ. ಹಾಗಂತ ಪ್ರತಿ ಬಾರಿ ಅತ್ಯಾಚಾರದ ಪ್ರಕರಣ ವರದಿಯಾದಾಗಲೂ ಹೆಣ್ಣಿಗೆ ಕೊಡುವ ಶಿಕ್ಷೆ ಹೆಚ್ಚು ಮಾಡುತ್ತಾ ಹೋಗುವುದು ಒಪ್ಪಿಕೊಳ್ಳಬಹುದಾದ ಮಾತಲ್ಲವೇ ಅಲ್ಲ. ಹೆಣ್ಣು ಜೊತೆಗಿದ್ದರೆ ಮನಸ್ಸು ಹಾಳಾಗುವುದೆಂದು ಭಾವಿಸುವವ ಗಂಡಾದ್ದರಿಂದ ಸಮಸ್ಯೆ ಇರುವುದು ಅವನಲ್ಲೇ ಎಂದಾಯ್ತು. ಅವನ ಮನಸ್ಸಿನ ಕೊಳೆಯನ್ನು ತೊಳೆಯಲು ರಾಷ್ಟ್ರದಲ್ಲೊಂದು ಬೇಟಾ ಪಡಾವೋ ಆಂದೋಲನ ನಡೆಯಬೇಕಿದೆ. ಸಹಜವಾಗಿ ಬದುಕಬಲ್ಲ, ತನಗೆ ತಾನೇ ಮಾನಸಿಕ ಬಂಧನವನ್ನು ಹಾಕಿಕೊಳ್ಳಬಲ್ಲ ತರುಣ-ತರುಣಿಯರ ಸೃಷ್ಟಿಗೆ ಮೌಲ್ಯಯುತವಾದ ಶಿಕ್ಷಣದ ಅಡಿಪಾಯವನ್ನು ಹಾಕಬೇಕಿದೆ. ಹಾಗಂತ ಅಷ್ಟೇ ಅಲ್ಲ. ಸ್ವಾತಂತ್ರ್ಯ ಎಂದರೇನೆಂಬ ಅರ್ಥವನ್ನು ಹೆಣ್ಣುಮಕ್ಕಳು ಅರಿಯೋದು ಬೇಡವೇ? ಮಧ್ಯರಾತ್ರಿಯಲ್ಲೂ ಹಾಸ್ಟೆಲ್ನಿಂದ ಹೊರಗೆ ಬರುವುದೇ ಸ್ವಾತಂತ್ರ್ಯ ಎಂದು ಭಾವಿಸುವುದು ಅದೆಷ್ಟು ಸರಿಯಾದ್ದು ಎಂಬುದು ಮಂಥನ ನಡೆಯಲೇಬೇಕಿದೆ. ಜಾಮಿಯಾ ಮಿಲಿಯಾದಲ್ಲಿ ಆರಂಭವಾದ ಮುಸ್ಲೀಂ ಹೆಣ್ಣುಮಕ್ಕಳ ಈ ಪಿಂಜರಾತೋಡ್ ಆಂದೋಲನ ಈ ಬಗೆಯ ಅನೇಕ ಚಚರ್ೆಗಳಿಗೆ ಈಗ ಮೂಲ ದ್ರವ್ಯವನ್ನೊದಗಿಸುತ್ತಿದೆ. ಟೌನ್ಹಾಲ್ಪಂಥೀಯರು ಇದನ್ನೂ ಚಚರ್ೆಗೆಳೆದುಕೊಂಡರೆ ಬಹಳ ಒಳ್ಳೆಯದು.

ಅಂದಹಾಗೆ, ನಾನು ಓದುತ್ತಿದ್ದ ಹಾಸ್ಟೆಲ್ಗೆ ಸಂಜೆ ಆರರೊಳಗೆ ಬರಬೇಕಿತ್ತು ಮತ್ತು ಬೆಳಗ್ಗಿನ ಆರರವರೆಗೆ ಹೊರಗೆ ಹೋಗುವ ಅವಕಾಶ ನಮಗೆ ಖಂಡಿತ ಇರಲಿಲ್ಲ. ಆ ಬಂಧನದ ಫಲ ಈಗ ಉಣ್ಣುತ್ತಿದ್ದೇವೆ.

Comments are closed.