ವಿಭಾಗಗಳು

ಸುದ್ದಿಪತ್ರ


 

ಹಿಂದೂ ಸ್ತ್ರೀವಾದ ಮತ್ತೊಮ್ಮೆ ಮೈದಳೆಯಬಲ್ಲದೇ?

 ಬಿಳಿಯರ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಪಶ್ಚಿಮದತ್ತ ಸೆಳೆಯುವ ಕೆಲಸವನ್ನು ಎಡಚರು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇವೆಲ್ಲದರ ಹಿನ್ನೆಲೆಯಲ್ಲಿಯೇ ಭಾರತೀಯ ಮೌಲ್ಯವನ್ನು ಪ್ರತಿನಿಧಿಸಿ ವೇದಕಾಲದ ಹೆಣ್ಣುಮಕ್ಕಳಂತೆ ಎಲ್ಲ ಚಟುವಟಿಕೆಗಳಲ್ಲೂ ಸಮಸಮವಾಗಿ ಬೆರೆತು ರಾಷ್ಟ್ರದ ಅಭ್ಯುದಯಕ್ಕೆ ಜೊತೆಯಾಗಬಲ್ಲ ಹಿಂದೂ ಸ್ತ್ರೀವಾದವೊಂದನ್ನು ಅಪ್ಪಿಕೊಳ್ಳಬೇಕಾದ ಕಾಲವಿದೆ. ಈ ವಾದವೊಂದೇ ಪರದೆಯ ಹಿಂದೆ. ವಿಚ್ಛೇದನದ ಹೆದರಿಕೆಯೊಳಗೆ, ಸಂಪ್ರದಾಯದ ಕಟ್ಟಳೆಯೊಳಗೆ ನರಳುತ್ತಿರುವ ಹೆಣ್ಣುಮಕ್ಕಳಿಗೆಲ್ಲ ಬೆಳಕಾಗಬಲ್ಲದು.

ಇತ್ತೀಚಿನ ದಿನಗಳಲ್ಲಿ ಮಹಿಳಾ ದಿನಾಚರಣೆಗಳು ಬಲು ವಿಜೃಂಭಣೆಯಿಂದ ನಡೆಯುತ್ತಿವೆ. ಮಹಿಳೆಯಾಗಿರುವುದು ಹೆಮ್ಮೆಯೆನ್ನುವ ಸಂಭ್ರಮ ಅದು. ಆಶ್ಚರ್ಯವೆಂದರೆ ಹಿಂದೆಂದಿಗಿಂತಲೂ ಹೆಚ್ಚು ಪುರುಷರು ಮಹಿಳಾ ದಿನಾಚರಣೆಯನ್ನು ಸಂಭ್ರಮಿಸುತ್ತಿರುವುದು! ಸಾಮಾಜಿಕ ಜಾಲ ತಾಣಗಳ ಒಂದು ಉಪಕಾರವೇ ಅದು. ಎಲ್ಲ ತಡೆಗೋಡೆಗಳನ್ನು ಕುಟ್ಟಿ ಪುಡಿ ಮಾಡುವಲ್ಲಿ ಮೊದಲ ಪ್ರೇರಣೆ ಅದರದ್ದೇ! ಕೊನೇಪಕ್ಷ ಅಂದು ಶುಭಾಶಯಗಳನ್ನು ಕೋರಿ ಒಂದಾದರೂ ಪೋಸ್ಟ್ ಹಾಕುವುದು ಘನತೆ ಎಂದು ಭಾವಿಸುವವರಿದ್ದಾರೆ. ಮಹಿಳಾವಾದಿಗಳಿಗೆ ಇದನ್ನು ಹೇಗೆ ಸ್ವೀಕರಿಸಬೇಕೆಂಬ ಅನುಮಾನ ಖಂಡಿತ ಇರಲಿಕ್ಕೆ ಸಾಕು.

1

ಆದರೆ ಮಹಿಳಾವಾದದ ನೆಪದಲ್ಲಿ ತನಗೇ ಗೊತ್ತಿಲ್ಲದಂತೆ ಪಶ್ಚಿಮದ ಚಿಂತನೆಗಳಿಗೆ ಹೆಣ್ಣು ಮಕ್ಕಳು ಶರಣಾಗುತ್ತಿರುವುದು ಆತಂಕಕಾರೀ ಬೆಳವಣಿಗೆ. ಭಾರತೀಯ ಮಹಿಳಾವಾದ ಅಥವಾ ಹಿಂದೂ ಮಹಿಳಾವಾದವನ್ನು ಬದಿಗೆ ಸರಿಸಿ ಪಶ್ಚಿಮದಿಂದ ಆಮದಿತ ಅವಕಾಶವಾದೀ, ಪ್ರಾಪಂಚಿಕ ಮಹಿಳಾವಾದಗಳು ಎಲ್ಲೆಡೆ ಆಚ್ಛಾದಿಸಿಕೊಂಡುಬಿಟ್ಟಿವೆ. ಪುರುಷ ಎಂಬ ಪ್ರತಿಯೊಂದನ್ನೂ ವಿರೋಧಿಸುವ ಭಾವನೆಗಳು ಬಲಗೊಳ್ಳತೊಡಗಿವೆ. ಮೈ ಚಾಯ್ಸ್ನ ಕಲ್ಪನೆಯ ತರುಣಿಯರು ಪಟ್ಟಣಗಳನ್ನು ತುಂಬಲಾರಂಭಿಸಿದ್ದಾರೆ. ಹಾಗೆ ನೋಡಿದರೆ ಮಹಿಳಾ ದಿನದ ಆಚರಣೆಯ ಮೂಲವಿರುವುದೇ ಕಮ್ಯುನಿಷ್ಟರ ಚಿಂತನೆಗಳಲ್ಲಿ. ವಿಶ್ವಸಂಸ್ಥೆ ಅಂಗೀಕರಿಸುವ ಮುನ್ನವೇ ಈ ದಿನವನ್ನು ಆಚರಿಸುತ್ತಿದ್ದವರು ಕಮ್ಯುನಿಷ್ಟರು. ಸಹಜವಾಗಿಯೇ ಪ್ರತಿಯೊಂದನ್ನು ಧಿಕ್ಕರಿಸಿ ಅಭ್ಯಾಸವಿದ್ದವರಿಗೆ ಸಾಮರಸ್ಯದ ಕಲ್ಪನೆಗಳು ಬಲು ದೂರ. ಅದಕ್ಕೇ ಭಯವಾಗುತ್ತಿರೋದು. ಗಂಡು ಹೆಣ್ಣಿನ ಸಾಮರಸ್ಯದ ಅರ್ಧನಾರೀಶ್ವರನ ಪೂಜೆ ಮಾಡುವ ದೇಶದಲ್ಲಿ ಕಂದಕ ಸೃಷ್ಟಿಯಾಗಿಸುವ ಎಲ್ಲ ಪ್ರಯತ್ನಗಳೂ ಬಲು ಜೋರಾಗಿಯೇ ನಡೆಯುತ್ತಿವೆ.

ಹಿಂದೂ ಮಹಿಳಾವಾದವೊಂದು ಈಗ ಜಗತ್ತನ್ನು ಆಳಬೇಕಿದೆ. ಭಾರತೀಯ ಚಿಂತನೆಗಳಲ್ಲಿನ ಸ್ತ್ರೀವಾದವನ್ನು ಹೆಕ್ಕಿ ಜಗತ್ತಿಗೆ ತೋರಬೇಕಿದೆ. ಹೊಸ ಪೀಳಿಗೆಯ ಹೆಣ್ಣುಮಕ್ಕಳು ಜಗತ್ತಿನೆದುರು ಮತ್ತೊಮ್ಮೆ ತಲೆ ಎತ್ತಿ ನಿಲ್ಲಬೇಕೆಂದರೆ ಅದಕ್ಕೆ ಅದಕ್ಕೆ ಹಿಂದು ಸ್ತ್ರೀವಾದವಷ್ಟೇ ದಾರಿಯಾಗಬಲ್ಲುದೇ ಹೊರತು ಆಮದಿತ ವಾದಗಳಲ್ಲ! ನನಗೆ ಗೊತ್ತು, ಪದೇ ಪದೇ ಹಿಂದೂ ಸ್ತ್ರೀವಾದ ಅಂತ ಹೇಳೋದು ಅನೇಕರಿಗೆ ಕಿರಿಕಿರಿ ಎನಿಸಬಹುದೇನೋ? ಆದರೆ ಹಿಂದೂಧರ್ಮದ ನೆರಳಲ್ಲಿ ಬೆಳೆದ ಮತ, ಪಂಥಗಳು ಮಾತ್ರವೇ ಮಾತೃಪ್ರಧಾನವಾದವು; ಉಳಿದೆಲ್ಲವೂ ಅದು ಕ್ರೈಸ್ತವಾಗಿರಲೀ, ಇಸ್ಲಾಂ ಇರಲಿ ಪಿತೃಪ್ರಧಾನವೇ. ಮಾತೃಪ್ರಧಾನವಾದ ಮತಗಳು ಸಾಮರಸ್ಯದಿಂದ, ಪ್ರೀತಿಯಿಂದ, ಹೊಂದಾಣಿಕೆಯಿಂದ ಬದುಕುವುದನ್ನು ಕಲಿಸುತ್ತದೆ. ಅಲ್ಲಿ ಆಕ್ರೋಶಕ್ಕಿಂತಲೂ ಪ್ರೇಮಕ್ಕೆ ಹೆಚ್ಚಿನ ಮೌಲ್ಯವಿದೆ. ಕದನಕ್ಕಿಂತಲೂ ವಾತ್ಸಲ್ಯದಿಂದ ಬರಸೆಳೆದಪ್ಪುವ ಕ್ರಿಯೆಗೆ ಗೌರವವಿದೆ. ಪಿತೃಪ್ರಧಾನ ಮತಗಳು ಶೌರ್ಯಕ್ಕೆ, ಕಿತ್ತಾಟಗಳಿಗೆ, ಪ್ರಭುತ್ವ ಸ್ಥಾಪನೆಗೆ ಹೆಚ್ಚಿನ ಬೆಲೆ ಕೊಡುತ್ತವೆ. ಮಾತೃಪ್ರಧಾನವಾದಾಗ ಅಲ್ಲಿ ಕತ್ತಿಹಿಡಿದು ಗೆಲ್ಲುವುದಕ್ಕಿಂತ ಪ್ರೀತಿಯಲ್ಲಿ ಸೋಲುವುದನ್ನು ವಿಶಿಷ್ಟವೆಂದೆಣಿಸಲಾಗುತ್ತದೆ. ಹೀಗಾಗಿಯೇ ಅಂತಹ ಮತಗಳು ವಿಜ್ಞಾನ, ಸಂಗೀತ, ಕಲೆ, ನೃತ್ಯಗಳಲ್ಲೆಲ್ಲ ವಿಶೇಷ ಸಾಧನೆ ಮಾಡಿದವು. ಯೋಗ, ಖಗೋಳ, ಭೂಗೋಳ, ಆಯುವರ್ೇದ, ಕೃಷಿ ಇವುಗಳೆಲ್ಲ ವಿಕಸನಗೊಂಡವು. ಪಿತೃಪ್ರಧಾನವಾದಲ್ಲಿ ಯುದ್ಧಕಲೆ ಬೆಳೆಯಿತು, ಕಠೋರವಾದ ಆಡಳಿತ ರೂಪುಗೊಂಡಿತು. ಸ್ತ್ರೀಯರು ಅವಗಣನೆಗೆ ತುತ್ತಾದರು.

3

ಸನಾತನ ಧರ್ಮದ ಸತ್ವವೇ ಮಾತೃಪ್ರಧಾನ ಚಿಂತನೆಯಾದ್ದರಿಂದ ಇಲ್ಲಿ ಎಂದಿಗೂ ಸ್ರೀಯರನ್ನು ಪುರುಷರಿಗಿಂತ ಕೆಳಗೆ ಕಾಣುವ, ಶೋಷಿಸುವ ಕಲ್ಪನೆಯೇ ಇರಲಿಲ್ಲ. ವೇದಕಾಲದಲ್ಲಿ ಸ್ತ್ರೀ ಶಿಕ್ಷಣಕ್ಕೆ ವಿಶೇಷ ಮಹತ್ವವಿತ್ತು. ವೇದಾಧ್ಯಯನಕ್ಕೆ ಹೆಣ್ಣುಮಕ್ಕಳು ಬಂದಾಗ ಅವರಿಗೂ ಉಪನಯನ ಮಾಡಿಸಿ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಮದುವೆಯಾಗದೇ ಜ್ಞಾನಾರ್ಜನೆಗೇ ಬದುಕು ಮುಡಿಪಿಟ್ಟವರನ್ನು ಬ್ರಹ್ಮವಾದಿನಿಯರೆಂದು ಕರೆಯಲಾಗುತ್ತಿತ್ತು. ಮದುವೆಯಾಗುವವರೆಗೆ ವೇದಾಧ್ಯಯನಕ್ಕೆ ಅವಕಾಶವೂ ಇತ್ತು. ಗಾಗರ್ಿ, ಮೈತ್ರೇಯಿಯರೆಲ್ಲ ಬಲು ಚಚರ್ಿತ ವೇದ ಕಾಲದ ಪಂಡಿತರು. ಮದುವೆಯ ವಿಚಾರದಲ್ಲೂ ಹೊರಗಿನ ಒತ್ತಡಗಳು ಅವಳಿಗಿರಲಿಲ್ಲ. ಸ್ವಯಂವರದ ಕಲ್ಪನೆ ಜಗತ್ತಿನಲ್ಲಿ ಮತ್ತೆಲ್ಲೂ ಸಿಗಲಾರದು. ಗಾಂಧರ್ವ ವಿವಾಹವೂ ಇದ್ದವು. ಇವೆಲ್ಲವೂ ಬದಲಾವಣೆಗೆ ಒಳಗಾಗಿದ್ದು ಪುರಾಣಗಳ ಕಾಲಕ್ಕೇ. ಬಹುಶಃ ಹೆಚ್ಚು ಸ್ವಾತಂತ್ರ್ಯ ಸ್ವೇಚ್ಛೆಯಾಯಿತೋ ಅಥವಾ ಕಠಿಣ ಹೊರಗಿನ ಕೆಲಸಗಳು ತನಗಿರಲಿ ಮತ್ತು ಸಾಮಾಜಿಕ ನಿಯಮಗಳನ್ನು ಮುಂದಿನ ಪೀಳಿಗೆಗೂ ಹರಿಸುವ ಬಲು ಸೂಕ್ಷ್ಮ ಕೆಲಸವನ್ನು ಹೆಣ್ಣು ಮಕ್ಕಳು ಮಾಡಲೆಂಬ ಅಘೋಷಿತ ಒಪ್ಪಂದವಾಯ್ತೋ ದೇವರೇ ಬಲ್ಲ. ಒಟ್ಟಿನಲ್ಲಿ ಸಾಗರದಷ್ಟು ಬದಲಾವಣೆ ಬಂತು. ಪುರಾಣಕಾಲದ ದೇವತೆಗಳ ಕಾಲ್ಬುಡದಲ್ಲಿ ಅವರ ಪತ್ನಿಯರು ಕಂಡು ಬಂದರು; ಶಿವನ ತೊಡೆಯ ಮೇಲೆ ಪಾರ್ವತಿ ಚಿಕ್ಕದಾಗಿ ಚಿತ್ರಿಸಲಾಯ್ತು. ಆದರೆ ಇವೆಲ್ಲವೂ ಸ್ತ್ರೀಯ ಜವಾಬ್ದಾರಿಯ ಸೂಕ್ಷ್ಮತೆಯನ್ನು ಅರಿಯುವಂತೆ ಮಾಡುವ ಪ್ರಯತ್ನವಾಗಿತ್ತಷ್ಟೇ. ಏಕೆಂದರೆ ಈ ಕಾಲಘಟ್ಟದಲ್ಲೂ ದೇವೀ ಮಹಾತ್ಮೆ ರಚನೆಯಾಯ್ತು. ಶಿವ ಆಂತರ್ಯವಾದರೆ ಎಲ್ಲ ಸೃಷ್ಟಿ ರಚನೆಯ ಮೂಲಸ್ರೋತ ಶಕ್ತಿಯೇ ಎಂಬುದನ್ನು ಜನ ಒಪ್ಪಿಕೊಂಡಿದ್ದರು. ಅರ್ಧನಾರೀಶ್ವರನೆಂಬ ಆಲೋಚನೆಯೇ ಪರಮಾದ್ಭುತವಾದುದು. ಇಂತಹುದನ್ನು ಸೆಮೆಟಿಕ್ ಮತಗಳು ಜೀಣರ್ಿಸಿಕೊಳ್ಳುವುದಿರಲಿ, ಆಲೋಚಿಸುವುದೂ ಅಸಾಧ್ಯವೇ. ಹಿಂದೂ ಧರ್ಮದಲ್ಲಿ ಹೆಂಡತಿಯನ್ನು ಸಹಧರ್ಮಚಾರಿಣೀ ಎಂಬ ಉಪಾಧಿಯಿಂದ ಕರೆಯುವುದು ಆ ಕಾರಣಕ್ಕಾಗಿಯೇ! ಆಕೆಯಿಲ್ಲದೇ ನಡೆಸಿದ ಯಾವ ಧರ್ಮಕಾರ್ಯವೂ ಪರಿಪೂರ್ಣವಾಗಲಾರದೆಂದೇ ನಮ್ಮ ನಂಬಿಕೆ. ಬೇರೆಲ್ಲ ಬಿಡಿ. ಹೋಮ ಕಾರ್ಯದಲ್ಲಿ ಅಗ್ನಿಗೆ ಆಹುತಿ ಸಮಪರ್ಿಸುವಾಗ ಸ್ವಾಹಾ ಎನ್ನುತ್ತಾರಲ್ಲ; ಆಕೆ ಯಾರು ಗೊತ್ತೇನು? ಅಗ್ನಿಯ ಪತ್ನಿ. ಆಕೆಯನ್ನು ಒಲಿಸಿಕೊಂಡ ನಂತರವೇ ಯಜ್ಞಕಾರ್ಯ ಸಂಪನ್ನಗೊಳ್ಳೋದು. ಇವೆಲ್ಲವೂ ಇದ್ದಿದ್ದು ನಿಜವಾದರೂ ಕಾಲಕ್ರಮದಲ್ಲಿ ಸ್ತ್ರೀ ಮೌಲ್ಯ ಕುಸಿಯುತ್ತ ಹೋಯಿತೆಂಬುದರಲ್ಲಿ ಹುರುಳಿಲ್ಲದೇ ಇಲ್ಲ. ಆಕೆ ಬರು ಬರುತ್ತ ಮನೆಯ ಕಾರ್ಯದಲ್ಲಿ ವಿಶೇಷವಾಗಿ ಬಂಧಿತಳಾದಳು. ಇಷ್ಟಾದಾಗ್ಯೂ ಆಕೆಯ ಜವಾಬ್ದಾರಿಯೇ ಅಧಿಕವಾಗಿತ್ತು. ಅಕ್ಕ ನಿವೇದಿತಾ ಹೇಳುವಂತೆ ‘ಜಗತ್ತಿನ ಮೂಲೆಮೂಲೆಯಲ್ಲೂ ಮನುಕುಲದ ನೈತಿಕ ಪ್ರಜ್ಞೆಯ ರಕ್ಷಣೆಯ ಹೊಣೆಯನ್ನು ನಿಭಾಯಿಸುತ್ತಿರೋದು ಸ್ತ್ರೀಯರೇ’

ಬುದ್ಧನ ಕಾಲದಲ್ಲಿ ತೀವ್ರವಾದ ಬದಲಾವಣೆ ಬಂತು. ಪುರಾಣ ಕಾಲದ ದೋಷಗಳೆನು ಇಣುಕಿದ್ದವೋ ಅದನ್ನೆಲ್ಲ ಸರಿಪಡಿಸುವ ಧಾವಂತದಲ್ಲಿದ್ದ ಬುದ್ದ. ಬ್ರಹ್ಮವಾದಿನಿಯರನ್ನು ರೂಪಿಸುವ ವೇದಕಾಲದ ಕಲ್ಪನೆ ಅವನಿಗೆ ನಿಸ್ಸಂಶಯವಾಗಿ ಇತ್ತು. ಮೇಲ್ನೋಟಕ್ಕೆ ಆತ ವೇದ ವಿರೋಧಿ ಎನಿಸಿದರೂ ಆತ ವಿರೋಧಿಸಿದ್ದೆಲ್ಲವೂ ಆನಂತರದ ದಿನಗಳಲ್ಲಿ ಇಣುಕಿದ ಕೆಡುಕುಗಳನ್ನೇ! ಆಮೂಲಾಗ್ರವಾಗಿ ವಿರೋಧಿಸುವಾಗ ಆಗುವ ಎಲ್ಲ ಸಮಸ್ಯೆಗಳೂ ಇಲ್ಲಿಯೂ ಆಯಿತು. ಸ್ತ್ರೀಯರು ಅಧ್ಯಯನಶೀಲರೂ, ಪುರೋಗಾಮಿಗಳೂ ಆದರು ನಿಜ ಆದರೆ ಪುರುಷರು ಕ್ಷಾತ್ರತೇಜದಿಂದ ದೂರವಾಗಿಬಿಟ್ಟರು. ಮುಂದಿನ ದಿನಗಳಲ್ಲಿ ಇದನ್ನು ಮತ್ತೆ ಸರಿದೂಗಿಸುವವೇಳೆಗೆ ಹೈರಾಣಾಯಿತು ಭಾರತ. ಆದರೆ ಅಶೋಕನ ಮಗಳು ಸಂಘಮಿತ್ರ ತನ್ನ ತಾನು ಅಧ್ಯಯನಕ್ಕೆ ಮತ್ತು ಧರ್ಮ ಕಾರ್ಯಕ್ಕೆ ಸಮಪರ್ಿಸಿಕೊಂಡಿದ್ದು; ಹಾಗೆಯೇ ಜೈನ ಪರಂಪರೆಯ ಕೋಸಂಬಿ ರಾಜ್ಯದ ರಾಜ ಕುವರಿ ಜಯಂತಿ ಅಧ್ಯಯನಶಿಲಳಾಗಿದ್ದು ಹಳೆಯ ಪರಂಪರೆಯ ಮುಂದುವರಿದ ಚಿನ್ಹೆಗಳಾಗಿದ್ದವು. ಒಟ್ಟಾರೆ ಮಾತೃಪ್ರಧಾನವಾದ ಹಿಂದೂ ಸಂಸ್ಕೃತಿ ತಮ್ಮ ಮೂಲ ಸೆಲೆಗೆ ಮರಳುವ ಎಲ್ಲ ಲಕ್ಷಣವನ್ನೂ ತೋರಿದ್ದವು.

4

ಮುಸಲ್ಮಾನರ ಆಕ್ರಮಣದೊಂದಿಗೆ ಸಮೀಕರಣವೆಲ್ಲ ಬದಲಾಯಿತು. ಗಂಡಸರ ಶ್ರೇಷ್ಠತೆಯ ಆಧಾರದ ಮೇಲೆಯೇ ಹುಟ್ಟಿದ ಪಂಥವದು. ಇಲ್ಲಿಗೆ ಬಂದೊಡನೆ ಮುಕ್ತವಾಗಿರುವ, ಬಹಿರಂಗ ಚಚರ್ೆಯಲ್ಲಿ ಭಾಗವಹಿಸುವ ಹೆಣ್ಣುಮಕ್ಕಳನ್ನು ಸಹಿಸಲಾಗಲಿಲ್ಲ ಅವರಿಗೆ. ಅಪಹರಣ, ಅತ್ಯಾಚಾರ, ಬಲವಂತದ ಮದುವೆ ಇವೆಲ್ಲವೂ ಎಗ್ಗಿಲ್ಲದೇ ನಡೆದು ಶಾಂತವಾಗಿದ್ದ ಸಮಾಜದಲ್ಲಿ ಬಿರುಗಾಳಿ ಎಬ್ಬಿಸಿದವು. ಮೌರ್ಯ ಸಾಮ್ರಾಜ್ಯದ ಅವನತಿಯ ನಂತರ ರಚನೆಯಾದ ಇಂದಿನ ದಿನ ಲಭ್ಯವಿರುವ ಮನುಸ್ಮೃತಿಯಲ್ಲಿ ಸ್ತ್ರೀಯರ ಕುರಿತಂತೆ ಒಂದಷ್ಟು ಕಠಿಣ ನುಡಿಗಳು ಇದ್ದವಾದರೂ ಸ್ತ್ರೀ ಸಂಬಂಧಿ ಕಠೋರವಾದ ಕಾನೂನುಗಳು ಬಂದಿದ್ದು ಮುಸಲ್ಮಾನರ ಆಕ್ರಮಣದ ನಂತರವೇ. ಸ್ವಯಂವರದ ಕಲ್ಪನೆಯಿದ್ದ ಈ ದೇಶದಲ್ಲಿ ಬಾಲ್ಯವಿವಾಹ ಶುರುವಾಯಿತು. ಪದರ್ಾ ಪದ್ಧತಿ ಜಾರಿಗೆ ಬಂತು. ವಿಚ್ಛೇದನಗಳೇ ಇಲ್ಲದ ದೇಶದಲ್ಲಿ ಇಸ್ಲಾಂನ ಬಳುವಳಿಯಾಗಿ ಅದೂ ಶುರುವಾಯ್ತು. ಕೊನೆಗೆ ಆಕ್ರಮಣಕಾರಿಗಳ ಕ್ರೌರ್ಯದಿಂದ ಬಚಾವಾಗಲು ಜೌಹರ್ ಆರಂಭವಾಯ್ತು. ದುಷ್ಟ ಕಂಗಳಿಂದ ಮಾನ ಕಾಪಾಡಿಕೊಳ್ಳಲು ಸತಿ ಪದ್ಧತಿ ವ್ಯಾಪಕವಾಗಿದ್ದೂ ಆನಂತರವೇ.

ಸಹಜವಾಗಿಯೇ ಹೆಣ್ಣುಮಕ್ಕಳನ್ನು ಕೂಡಿಹಾಕಿ ಉಳಿಸಿಕೊಳ್ಳುವ ಪರಂಪರೆ ಚಾಲೂ ಆಯ್ತು. ಗಂಡು ಮೇಲು ಎಂಬ ಭಾವನೆ ಬಲಿತಿದ್ದೂ ಆನಂತರವೇ. ಮುಂದೆ ಬಂದ ಕ್ರಿಶ್ಚಿಯನ್ನರು ಇದಕ್ಕೆ ಆಜ್ಯ ಹೊಯ್ದರಷ್ಟೇ. ಅವರು ಸ್ತ್ರೀಯರಿಗೆ ಸಮಾನತೆ ಕೊಡುವ ಮಾತಾಡಿದಾಗಲೆಲ್ಲ ಅದು ಹಿಂದೂ ಸ್ತ್ರೀಯರನ್ನು ಭಾರತೀಯ ಪರಂಪರೆಯಿಂದ ದೂರತಳ್ಳುವ ಪ್ರಯತ್ನವೇ ಆಗಿತ್ತು. ಅವರನ್ನು ಹೆಚ್ಚು ಹೆಚ್ಚು ಪಶ್ಚಿಮೀಕರಣಗೊಳಿಸಿ ಪಶ್ಚಿಮವನ್ನು ಆರಾಧಿಸುವಂತೆ ಮಾಡಿಬಿಟ್ಟರೆ ಆಳುವುದು ಸುಲಭವೆನ್ನುವ ಆಲೋಚನೆ ಇದ್ದೆ ಇತ್ತು. ಅದಕ್ಕೇ ತಮ್ಮ ದೇಶದಲ್ಲಿ ಹೆಂಗಸರನ್ನು ದೆವ್ವಗಳೆಂದು ಕರೆದು ಕೊಂದ ಜನ, ಸಮಾನವಾಗಿ ಚುನಾವಣೆಗೆ ಅವಕಾಶ ಕಲ್ಪಿಸಿಕೊಡದ ಜನ ಭಾರತದಲ್ಲಿ ಮಾತ್ರ ಸಮಾನತೆಯ ಮಾತುಗಳನ್ನಾಡಿ ಭಡಕಾಯಿಸುತ್ತಿದ್ದರು.

6

 

ಆದರೆ ಭಾರತ ಇದರಿಂದ ವಿಚಲಿತವಾಗಲಿಲ್ಲ. ಅದು ನಿಧಾನವಾಗಿಯಾದರೂ ಸ್ಪಷ್ಟವಾದ ಹೆಜ್ಜೆಗಳನ್ನಿಡುತ್ತಾ ಬಂತು. ಇಲ್ಲಿ ಇಂದಿರಾಗಾಂಧಿ ಪ್ರಧಾನಮಂತ್ರಿಯೇ ಆದರು. ಅನೇಕರು ರಾಜ್ಯದ ಚುಕ್ಕಾಣಿ ಹಿಡಿದರು. ತೊಟ್ಟಿಲು ತೂಗುವ ಕೈ ರಾಜ್ಯವಾಳಬಲ್ಲದೆಂಬುದಕ್ಕೆ ಉದಾಹರಣೆಯಾಗಿ ನಿಂತರು. ನರೇಂದ್ರ ಮೋದಿ ಬಂದಮೇಲಂತೂ ಕ್ಯಾಬಿನೆಟ್ನಲ್ಲಿ ಕೈಬಳೆಗಳದ್ದೇ ಕಲರವ. ರಕ್ಷಣಾ ಮಂತ್ರಿಯೂ ಮಹಿಳೆಯೇ ಆಗುವುದರ ಮೂಲಕ ತನ್ನ ಸಾಮಥ್ರ್ಯವನ್ನು ಜಗಜ್ಜಾಹೀರು ಮಾಡಿದರು. ಈಗ ಮಹಿಳಾ ಪೈಲಟ್ಗಳಿದ್ದಾರೆ, ಕದನಭೂಮಿಯಲ್ಲಿ ಕಾದಾಡುವ ಮಹಿಳೆಯರಿದ್ದಾರೆ. ಎಂಎನ್ಸಿ ಕಂಪನಿಗಳನ್ನು ಮುನ್ನಡೆಸುವ ಭಾರತೀಯ ಹೆಣ್ಣುಮಕ್ಕಳಿದ್ದಾರೆ. ಅಬ್ಬ! ಒಂದು ರೀತಿಯಲ್ಲಿ ಕ್ರಾಂತಿಯೇ ಆಗಿದೆ. ಆದರೂ ಎಲ್ಲವೂ ಸರಿ ಹೋಗಿಲ್ಲ. ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಹುಟ್ಟಿದರೆ ಬೇಸರಿಸುವ ಜನರಿದ್ದಾರೆ, ಅವರನ್ನು ಶಾಲೆಯಿಂದ ಬಿಡಿಸಿ ಬಾಲ್ಯದಲ್ಲೇ ಮದುವೆ ಮಾಡಿಸುವವರಿದ್ದಾರೆ. ಇತ್ತ ಅರಬ್ಬರು, ತುರ್ಕರು, ಮೊಘಲರಂತೆ ಹಿಂದೂ ಹೆಣ್ಣುಮಕ್ಕಳನ್ನು ನಯವಾಗಿ ಅಪಹರಿಸಿಕೊಂಡು ಭಯೋತ್ಪಾದಕರ ಪಾಳಯಕ್ಕೆ ಸೇರಿಸುವವರೂ ಇದ್ದಾರೆ. ಬಿಳಿಯರ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಪಶ್ಚಿಮದತ್ತ ಸೆಳೆಯುವ ಕೆಲಸವನ್ನು ಎಡಚರು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇವೆಲ್ಲದರ ಹಿನ್ನೆಲೆಯಲ್ಲಿಯೇ ಭಾರತೀಯ ಮೌಲ್ಯವನ್ನು ಪ್ರತಿನಿಧಿಸಿ ವೇದಕಾಲದ ಹೆಣ್ಣುಮಕ್ಕಳಂತೆ ಎಲ್ಲ ಚಟುವಟಿಕೆಗಳಲ್ಲೂ ಸಮಸಮವಾಗಿ ಬೆರೆತು ರಾಷ್ಟ್ರದ ಅಭ್ಯುದಯಕ್ಕೆ ಜೊತೆಯಾಗಬಲ್ಲ ಹಿಂದೂ ಸ್ತ್ರೀವಾದವೊಂದನ್ನು ಅಪ್ಪಿಕೊಳ್ಳಬೇಕಾದ ಕಾಲವಿದೆ. ಈ ವಾದವೊಂದೇ ಪರದೆಯ ಹಿಂದೆ. ವಿಚ್ಛೇದನದ ಹೆದರಿಕೆಯೊಳಗೆ, ಸಂಪ್ರದಾಯದ ಕಟ್ಟಳೆಯೊಳಗೆ ನರಳುತ್ತಿರುವ ಹೆಣ್ಣುಮಕ್ಕಳಿಗೆಲ್ಲ ಬೆಳಕಾಗಬಲ್ಲದು. ಆ ದಿಕ್ಕಿನತ್ತಲೇ ನಾವೀಗ ಹೊರಳಬೇಕಿದೆ.

ಮತ್ತೊಮ್ಮೆ ಮಹಿಳಾದಿನದ ಶುಭಾಶಯಗಳು.

Comments are closed.