ವಿಭಾಗಗಳು

ಸುದ್ದಿಪತ್ರ


 

ಹೀಗೊಂದು ಎಕ್ಸಿಟ್ ಪೋಲ್ ಪುರಾಣ ಪ್ರಸಂಗ!

ರಾಮಾಯಣದ ಸೀನು ಮುಗಿದರೆ ಸ್ವಾತಂತ್ರ್ಯದ ಕಾಲಘಟ್ಟದ ಸೀನು ಶುರುವಾಗುತ್ತದೆ. ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದರು. ತಂದೆ ಮಗನಿಗೆ ಅಧಿಕಾರವನ್ನು ಹಸ್ತಾಂತರಿಸುವ ಕೆಟ್ಟ ಚಾಳಿ ಅಲ್ಲಿಂದಲೇ ಶುರುವಾಗಿದ್ದು; ರಾಮನ ಆಶೀವರ್ಾದದ ಬಲವಿತ್ತಲ್ಲ!

ಎಕ್ಸಿಟ್ಪೋಲುಗಳನ್ನು ನೋಡಿದ ನಂತರ ಹೊಸಯುಗದ ಪುರಾಣ ಕಥೆಯೊಂದು ಹೊಳೆಯಿತು. ಇದು ಅಪ್ಪಟ ಕಾಲ್ಪನಿಕ. ಆದರೆ, ಪ್ರಸ್ತುತ ಪರಿಸ್ಥಿತಿಗಳನ್ನು ಮುಂದಿಟ್ಟುಕೊಂಡು ಸಹಿಸಿಕೊಳ್ಳಿ!

2

ಸೀತೆಯನ್ನು ಮರಳಿ ತರಲೆಂದು ರಾಮ ವಾನರಸೇನೆಯ ಮೂಲಕ ರಾವಣನೊಂದಿಗೆ ಯುದ್ಧವನ್ನಂತೂ ಘೋಷಿಸಿಯಾಗಿದೆ. ರಾವಣ ಅಪಾರ ಬಲಶಾಲಿಯಾಗಿದ್ದು ತನಗೆ ದೇವಾನುದೇವತೆಗಳಿಂದ ಮರಣವಿಲ್ಲವೆಂದು ವರವನ್ನು ಪಡೆದುಕೊಂಡಿದ್ದ. ಅತ್ಯಂತ ಸಾಮಾನ್ಯನಾದ, ನಾರುಮಡಿಯುಟ್ಟ, ಸಮರ್ಥ ಸೇನೆಯೂ ಇಲ್ಲದ ವ್ಯಕ್ತಿಯಿಂದ ತಾನು ಕೊಲ್ಲಲ್ಪಡಲೆಂಬುದು ಆತನ ಬಯಕೆಯಾಗಿತ್ತು. ರಾಕ್ಷಸರೆಲ್ಲರೂ ಹೀಗೆ ಕೇಳಿಕೊಳ್ಳುತ್ತಿದ್ದುದು ಆ ರೀತಿಯ ಸಾವು ಅಸಾಧ್ಯವೆಂಬ ಕಾರಣಕ್ಕೇ. ರಾವಣನಂತಹ ರಾವಣನನ್ನು ಒಬ್ಬ ಸಾಮಾನ್ಯ ಮಾನವ ಕೊಲ್ಲುವುದುಂಟೇ! ಇದು ಹಿರಣ್ಯಕಶಿಪು ಹಗಲೂ ಅಲ್ಲದ, ರಾತ್ರಿಯೂ ಅಲ್ಲದ, ಮನೆಯೊಳಗೂ ಅಲ್ಲದ ಹೊರಗೂ ಅಲ್ಲದ, ಮನುಷ್ಯನೂ ಅಲ್ಲದ ಪ್ರಾಣಿಯೂ ಅಲ್ಲದ ಆಕೃತಿಯಿಂದ ಸಾವು ಬರಲೆಂದು ಪ್ರಾಥರ್ಿಸಿದಂತೆ. ಆದರೆ ವರಕೊಡುವ ಭಗವಂತನ ಬಳಿ ಎಲ್ಲಕ್ಕೂ ಪರಿಹಾರವಿದೆ. ರಾಮ-ರಾವಣರ ಯುದ್ಧದಲ್ಲಿ ರಾಮನನ್ನು ಎದುರಿಸಲೆಂದು ಬಂದಿದ್ದು ರಾವಣನ ಮಗ ಇಂದ್ರಜಿತು. ಇಂದ್ರಜಿತ್ ತನ್ನ ತಂದೆಯಂತಲ್ಲ. ಹೆಸರೇ ಹೇಳುವಂತೆ ಇಂದ್ರಿಯಗಳನ್ನು ಗೆದ್ದವನು ಆತ. ಶೂರ, ಸಮರ್ಥ. ಆದರೆ ತನ್ನ ತಂದೆಯ ಕಾಮವಿಕಾರದ ಕಾರಣಕ್ಕಾಗಿ ಈ ಯುದ್ಧಕ್ಕೆ ತಳ್ಳಲ್ಪಟ್ಟ. ಆತ ಈ ಯುದ್ಧದಲ್ಲಿ ತೀರಿಕೊಳ್ಳುವಾಗ ರಾಮ ಅವನೆದುರಿಗೆ ಬಂದು ನಿಂತೊಡನೆ ಇದೇ ಪ್ರಶ್ನೆಯನ್ನು ಮುಂದಿಟ್ಟ. ಯಾವ ದೋಷವೂ ಮಾಡದಿದ್ದ ತನ್ನನ್ನು ಭಗವಂತನಾದವನು ಕೊಂದಿದ್ದಾದರೂ ಏಕೆ? ತಂದೆಯ ನಂತರ ಈ ರಾಜ್ಯವನ್ನು ಭೋಗಿಸುವ ಮತ್ತು ಪ್ರಜೆಗಳನ್ನು ಪ್ರೀತಿಸುವ ಭಾಗ್ಯದಿಂದ ತನ್ನನ್ನು ವಂಚಿತನಾಗಿಸಿದ್ದೇಕೆ? ಎಂಬ ಪ್ರಶ್ನೆ ರಾಮನ ಮುಂದಿಟ್ಟ. ರಾಮ ನಿರುತ್ತರಿ. ಇಂದ್ರಜಿತ್ನ ಪ್ರಶ್ನೆಯಲ್ಲಿ ನಿಜವಾಗಿಯೂ ಸತ್ತ್ವವಿತ್ತು. ಆಗ ರಾಮ ಕಲಿಯುಗದಲ್ಲಿ ಭರತಖಂಡವನ್ನು ಆಳುವ ಭಾಗ್ಯ ನಿನಗೀಯುತ್ತೇನೆ ಎಂದುಬಿಟ್ಟ. ಹಾಗಂತ ಇಂದ್ರಜಿತ್ಗೆ ತೃಪ್ತಿಯಿಲ್ಲ. ತಾನು, ತನ್ನ ಪರಿವಾರದವರು ಲಂಕೆಯನ್ನು ಆಳುವ ಭಾಗ್ಯದಿಂದ ವಂಚಿತರಾದುದಕ್ಕೆ ಭರತಖಂಡವನ್ನು ಶಾಶ್ವತವಾಗಿ ಆಳುವ ಅಧಿಕಾರ ಕೊಡಿರೆಂದು ಬೇಡಿದ. ರಾಮ ಅದನ್ನೊಪ್ಪುವುದಾದರೂ ಹೇಗೆ? ಸಹಜವಾಗಿಯೇ ಇಂದ್ರಜಿತುವಿನ ಪರಿವಾರದ ಸೋಲಿಗೆ ಆತ ಆಯ್ಕೆಗಳನ್ನು ಮುಂದಿಟ್ಟ. ಇಂದ್ರಜಿತ್ ಆಸ್ಥೆಯಿಂದ ಕೇಳಿಕೊಂಡಿದ್ದೇನು ಗೊತ್ತೇ? ತನ್ನ ಸಂಪತ್ತಿಗೆ ಸಮನಲ್ಲದ, ಘನ ಪರಿವಾರದ ಹಿನ್ನೆಲೆಯಿಲ್ಲದ, ಮುಂದಿನ ಪೀಳಿಗೆಯ ಭಾಗ್ಯವಿಲ್ಲದ, ಸದಾ ಅನಾಸಕ್ತನಾಗಿರುವ ವ್ಯಕ್ತಿಯೊಬ್ಬನಿಂದ ನನ್ನ ಪರಿವಾರ ಸೋಲು ಕಾಣುವಂತಾಗಲಿ ಎಂದು! ರಾಮ ಮರುಮಾತಿಲ್ಲದೇ ತಥಾಸ್ತು ಎಂದ.

3

ರಾಮಾಯಣದ ಸೀನು ಮುಗಿದರೆ ಸ್ವಾತಂತ್ರ್ಯದ ಕಾಲಘಟ್ಟದ ಸೀನು ಶುರುವಾಗುತ್ತದೆ. ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದರು. ತಂದೆ ಮಗನಿಗೆ ಅಧಿಕಾರವನ್ನು ಹಸ್ತಾಂತರಿಸುವ ಕೆಟ್ಟ ಚಾಳಿ ಅಲ್ಲಿಂದಲೇ ಶುರುವಾಗಿದ್ದು; ರಾಮನ ಆಶೀವರ್ಾದದ ಬಲವಿತ್ತಲ್ಲ! ಸ್ವಾತಂತ್ರ್ಯದ ಹೊಸ್ತಿಲಲ್ಲೂ ರಾಮನ ಪರಮಭಕ್ತ ಮೋಹನ್ದಾಸ್ ಕರಮಚಂದ ಗಾಂಧಿ ಸರದಾರ್ ಪಟೇಲರನ್ನು ಪಕ್ಕಕ್ಕೆ ತಳ್ಳಿ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾಗುವಂತೆ ನೋಡಿಕೊಂಡರು. ಅದೇ ಆಧಾರದ ಮೇಲೆಯೇ ನೆಹರೂ ಭಾರತದ ಪ್ರಧಾನಿಯೂ ಆದರು. ಇಂದ್ರಜಿತುವಿನ ಆಸೆ ಫಲಿಸಿತು. ಆನಂತರ ಆ ಪರಿವಾರದ ಓಟಕ್ಕೆ ಎಂದೂ ಭಂಗವಾಗಲಿಲ್ಲ. ಆಗಾಗ ಸೋಲಿಸುವ ಶಕ್ತಿಗಳು ಕಂಡುಬರುತ್ತಿದ್ದವಾದರೂ ಅದ್ಯಾವುವೂ ಪರಿವಾರದ ಶಕ್ತಿಯನ್ನು ಕುಂದಿಸುವಲ್ಲಿ ಯಶಸ್ವಿಯಾಗಲಿಲ್ಲ. ಇನ್ನೇನು ರಾಮನ ಭಾರತ ಹಂತ-ಹಂತವಾಗಿ ನಾಶವಾಗುತ್ತಿದೆ ಎನಿಸಲಾರಂಭಿಸಿತೋ, ಧರ್ಮ ನಷ್ಟವಾಗುತ್ತಿದೆ ಎಂದು ಭಗವಂತನಿಗೂ ಅನಿಸಲಾರಂಭಿಸಿತೋ ಆಗ ಸಾಮಾನ್ಯ ಚಾಯ್ವಾಲಾ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಈ ಪರಿವಾರವನ್ನು ಎದುರಿಸಲು ದೇವತೆಗಳೆಲ್ಲಾ ಅಣಿಗೊಳಿಸಬೇಕಾಯ್ತು. ಇದು ಇಂದ್ರಜಿತು ಕೇಳಿಕೊಂಡ ವರದ ಮೊದಲನೇ ಅಂಶ! ಸಂಪತ್ತಿಲ್ಲದ ವ್ಯಕ್ತಿಯಾಗಬೇಕು ಎನ್ನುವುದು ಆತನ ಬೇಡಿಕೆ. ಕಲಿಯುಗದಲ್ಲಿ ಸಿರಿವಂತನಲ್ಲದವನೊಬ್ಬ ಚುನಾವಣೆಗೆ ನಿಂತು ಗೆಲ್ಲುವುದು ಅಸಾಧ್ಯವೇ ಸರಿ ಎಂಬುದು ಇಂದ್ರಜಿತುವಿನ ದೂರದೃಷ್ಟಿಯಾಗಿತ್ತು. ಆದರೆ, ಅದಕ್ಕೆ ಪಯರ್ಾಯವಾದ ವ್ಯವಸ್ಥೆಗೆ ಇಲ್ಲಿ ತಯಾರಿಯಿತ್ತು. ಇನ್ನು ಅವನ ಎರಡನೇ ಬಯಕೆ ಹಿಂದಿಲ್ಲದ-ಮುಂದಿಲ್ಲದ ವ್ಯಕ್ತಿ. ಅದೂ ಸರಿಯೇ. ಎಲ್ಲದ್ದಕ್ಕೂ ಗಾಡ್ಫಾದರ್ಗಳನ್ನು ಅರಸುವ ಕಲಿಯುಗದಲ್ಲಿ ಖ್ಯಾತಿವೆತ್ತ ತಂದೆಯ ಮಗನಲ್ಲದ ವ್ಯಕ್ತಿಯೊಬ್ಬ ತಮ್ಮ ಪರಿವಾರವನ್ನು ಕೆಣಕುವುದು ಸಾಧ್ಯವೇ ಇಲ್ಲವೆಂಬುದು ಇಂದ್ರಜಿತುವಿನ ಆಲೋಚನೆ. ಅಷ್ಟೇ ಅಲ್ಲ, ತನ್ನ ಸೋಲನ್ನು ಶಾಶ್ವತವಾಗಿಸದಿರುವಂತೆ ಆ ವ್ಯಕ್ತಿಯ ಭವಿಷ್ಯದ ಪೀಳಿಗೆಯೂ ಇಲ್ಲದಿರುವಂತೆ ನೋಡಿಕೊಳ್ಳುವ ಆತನ ಪ್ರಯತ್ನವನ್ನು ಭಗವಂತ ಪುರಸ್ಕರಿಸಿದ್ದ. ಆದರೆ ದೇವತೆಗಳು ಸಮರ್ಥ ಕಾರ್ಯಕರ್ತರ ಪಡೆಯ ಮೂಲಕ ಭಾರತದ ಭವಿಷ್ಯ ಭದ್ರವಾಗಿರಲು ಬೇಕಾದ ಎಲ್ಲ ಪ್ರಯತ್ನವನ್ನು ಮಾಡಿಬಿಟ್ಟಿದ್ದರು. ಇಂದ್ರಜಿತು ಕೇಳಿಕೊಂಡ ವರದ ಮೂರನೇ ಅಂಶವೂ ಕೂಡ ವಿಶಿಷ್ಟವೇ ಆಗಿತ್ತು. ಅನಾಸಕ್ತನಾಗಿರುವ ವ್ಯಕ್ತಿ ರಾಜಕೀಯಕ್ಕೆ ಸೂಕ್ತನಾಗುವುದಿಲ್ಲ. ಆತ ಕೇದಾರದ ಗುಹೆಯಲ್ಲಿ ತಪಸ್ಸು ಮಾಡಬಹುದೇ ಹೊರತು ಪರಿವಾರವನ್ನೆದುರಿಸುವ ಚಾಣಾಕ್ಷ ಬುದ್ಧಿಯನ್ನು ತೋರಲಾರ ಎಂಬುದು ಅವನಿಗೆ ಗೊತ್ತಿರದ ಸಂಗತಿಯಲ್ಲ. ಆದರೆ, ದೇವತೆಗಳು ಬಲು ಚಾಲಾಕು. ಬೌದ್ಧಿಕ ಸ್ತರದಲ್ಲಿಯೂ ಉನ್ನತಿಯನ್ನು ಹೊಂದಿದ್ದು, ಹೃದಯದಲ್ಲಿ ಭಗವಂತನ ಕುರಿತಂತೆ ಅಪಾರ ಭಕ್ತಿಯನ್ನು ಹೊಂದಿದ್ದ ವ್ಯಕ್ತಿಯ ಮೂಲಕವೇ ಈ ಪರಿವಾರದ ಸೋಲಿಗೆ ತಯಾರಿ ನಡೆಸಿಬಿಟ್ಟಿದ್ದರು!

ಕೊನೆಗೂ ಎಲ್ಲಾ ಧರ್ಮವಿರೋಧಿಗಳ ಅಂತ್ಯವಾಗುವಂತೆ ಇಂದ್ರಜಿತ್ನ ಪರಿವಾರವೂ ಕೂಡ ಕಲಿಯುಗದಲ್ಲಿ ಅಧಿಕಾರದ ಅಂತ್ಯವನ್ನು ಕಂಡಿತು ಎನ್ನುವಲ್ಲಿಗೆ ಎಕ್ಸಿಟ್ ಪೋಲ್ ಪುರಾಣ ಸಂಪನ್ನಗೊಂಡಿತು.

ಈ ಕಥೆಯನ್ನು ತ್ರಿಸಂಧ್ಯೆಯಲ್ಲೂ ಪಠಿಸುವವರು ರಾಷ್ಟ್ರಯಜ್ಞದಲ್ಲಿ ಭಾಗಿಯಾಗುವ ಗೌರವವನ್ನು ಪಡೆದುಕೊಳ್ಳುತ್ತಾರೆ. ಅವರ ಹಿಂದಿನ ಪೀಳಿಗೆಯ ಪಾಪಗಳು ನಾಶಗೊಳ್ಳುತ್ತವೆ, ಮುಂದಿನ ಪೀಳಿಗೆಗಳೆಲ್ಲವೂ ಶ್ರೇಷ್ಠವಾದ ಭಾರತದಲ್ಲಿ ಬದುಕು ಕಾಣುತ್ತವೆ.

4

ಅಕ್ಷರಶಃ ಕಾಲ್ಪನಿಕ ಕಥೆಯೇ ಆದರೂ 1947ರಿಂದ ಇಲ್ಲಿಯವರೆಗೂ ಭಾರತಕ್ಕಾದ ಅನ್ಯಾಯಗಳು, ಭಾರತ ಬೆಳೆಯಬಹುದಾಗಿದ್ದ ಪರಿ ಇವೆಲ್ಲವನ್ನೂ ಗಮನಿಸಿದರೆ ಹೀಗಿದ್ದರೂ ತಪ್ಪೇನಿಲ್ಲ ಎನಿಸಿಬಿಡುತ್ತದೆ. ಸಮರ್ಥರಾದ, ದೂರದೃಷ್ಟಿಯ ನಾಯಕರನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲೇ ನಾವು ಪಡೆದುಕೊಂಡುಬಿಟ್ಟಿದ್ದರೆ ಇಂದು ಭಾರತವಷ್ಟೇ ಅಲ್ಲ, ಜಗತ್ತೂ ಸುಂದರವಾಗಿರುತ್ತಿತ್ತು. ಏನು ಮಾಡೋದು, ರಾಮನ ವರ ಇಲ್ಲಿಯವರೆಗೂ ಕಾಡಿತಲ್ಲ!!

ಧರ್ಮ ಉಳಿಯಲಿ, ಮತ್ತೊಮ್ಮೆ ಭಾರತ ಗೆಲ್ಲಲಿ!

Comments are closed.