ವಿಭಾಗಗಳು

ಸುದ್ದಿಪತ್ರ


 

ಹೌಡಿಯಲ್ಲಿ ಮೋದಿ ಮೋಡಿ!

ಟ್ರಂಪ್ ಪ್ರಚಾರಕ್ಕೆಂದೇ ನಡೆದದ್ದೆಂಬುದರಲ್ಲಿ ಯಾರಿಗೂ ಅನುಮಾನವುಳಿಯಲು ಸಾಧ್ಯವೇ ಇಲ್ಲ. ಅದರಲ್ಲೂ ಟೆಕ್ಸಾಸ್ನ ಈ ಪ್ರದೇಶವನ್ನು ಪ್ರಚಾರಕ್ಕೆಂದು ಮೋದಿ ಆಯ್ದುಕೊಂಡಿರುವುದರಲ್ಲಿ ಅರ್ಥವಿದೆ.

ಅಮೇರಿಕಾದ ಅಧ್ಯಕ್ಷರ ಗೆಲುವಿಗೆ ಭಾರತದ ಪ್ರಧಾನಿ ಭಾಷಣ ಮಾಡಬೇಕು ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಬದಲಾದ ಭಾರತದ ಸ್ಥಾನಮಾನವನ್ನು ಸೂಚಿಸುತ್ತದೆ. ಹೌದು ನಾನು ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆಯೇ ಮಾತನಾಡುತ್ತಿದ್ದೇನೆ. 50 ಸಾವಿರ ಜನರೆದುರಿಗೆ ನರೇಂದ್ರಮೋದಿ ಅಮೇರಿಕಾದ ಅಧ್ಯಕ್ಷರನ್ನು ಪರಿಚಯಿಸಿಕೊಟ್ಟ ರೀತಿ ಹಾಗೆಯೇ ಇತ್ತು. ‘ಈ ಹಿಂದೆ ನೀವು ನನ್ನನ್ನು ನಿಮ್ಮ ಪರಿವಾರಕ್ಕೆ ಪರಿಚಯಿಸಿದ್ದೀರಿ. ನಾನೀಗ ನಿಮ್ಮನ್ನು ನನ್ನ ಪರಿವಾರಕ್ಕೆ ಪರಿಚಯಿಸುತ್ತಿದ್ದೇನೆ’ ಎಂದು ಮೋದಿ ನೆರೆದಿದ್ದ 50 ಸಾವಿರ ಮಂದಿಯತ್ತ ಕೈಬೀಸಿದಾಗ ಡೊನಾಲ್ಡ್ ಟ್ರಂಪ್ ದಂಗು ಬಡಿದಿದ್ದರು. ಸಭೆಯಲ್ಲಿದ್ದ ಪ್ರತಿಯೊಬ್ಬರೂ ಎದ್ದು ನಿಂತು ಮುಂದಿನ ಒಂದು ನಿಮಿಷಗಳ ಕಾಲ ಬೇರೆ ಯಾವ ಮಾತೂ ಕೇಳದಂತೆ ಜಯಘೋಷಗಳ ಸುರಿಮಳೆ ಸುರಿಸಿಬಿಟ್ಟರು. ಐ ಲವ್ ಇಂಡಿಯಾ, ಐ ಲವ್ ಹಿಂದೂ ಎಂದು ಈ ಹಿಂದೆ ಹೇಳಿದ್ದ ಟ್ರಂಪ್ ಈಗ ಅದೇ ಭಾರತೀಯರ ಪ್ರೇಮವನ್ನು ನೇರವಾಗಿ ಸವಿಯುವಂತೆ ನರೇಂದ್ರಮೋದಿ ಮಾಡಿಬಿಟ್ಟಿದ್ದರು!

2

ಅಮೇರಿಕಾದ ನೆಲದಲ್ಲಿ ಪೋಪ್ಗೆ ಬಿಟ್ಟರೆ ವ್ಯಕ್ತಿಯೊಬ್ಬನ ಮಾತುಗಳನ್ನು ಕೇಳಲು ಇಷ್ಟು ಜನ ಸೇರುವುದು ಅಸಾಧ್ಯ. ಈ ಹಿಂದೆ ಡೇವಿಡ್ ಕ್ಯಾಮರೂನ್ ಹೇಳಿದಂತೆ ಇಷ್ಟು ಜನರನ್ನು ಸೇರಿಸಲು ರಾಕ್ ಸ್ಟಾರ್ಗಳಿಗೂ ಸಾಧ್ಯವಿಲ್ಲ. ರಾಜಕೀಯ ನಾಯಕನೊಬ್ಬ ಇಷ್ಟು ಪ್ರೇಮವನ್ನು ಸಂಪಾದಿಸಿರುವುದು ಅಮೇರಿಕನ್ನರಿಗೆ ಗಾಬರಿ ಹುಟ್ಟಿಸಿರಲು ಸಾಕು. ಇಲ್ಲವಾದರೆ ವೇದಿಕೆಗೆ ಬಂದ ಸೆನೆಟರುಗಳೆಲ್ಲಾ ಸೇರಿದ್ದ ಜನಸ್ತೋಮವನ್ನು ಮೊಬೈಲ್ನ ಮೂಲಕ ಚಿತ್ರೀಕರಿಸಿಕೊಳ್ಳಲು ದುಂಬಾಲು ಬೀಳುತ್ತಿರಲಿಲ್ಲ. ಅಮೇರಿಕಾದ ನೆಲದ ಮೇಲೆ ವೈಭವದಿಂದ ನಡೆಯುತ್ತಿದ್ದ ಭಾರತೀಯ ಸಾಂಸ್ಕೃತಿಕ ಪ್ರದರ್ಶನಗಳು ಜಗತ್ತಿನ ಮೂಲೆ-ಮೂಲೆಯ ಟಿವಿ ಚಾನೆಲ್ಲುಗಳಲ್ಲಿ ನೇರಪ್ರಸಾರದ ಮೂಲಕ ಬಿತ್ತರಗೊಳ್ಳುತ್ತಿದ್ದುದು ಭಾರತದ ಕೀತರ್ಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದಂತಿತ್ತು. ಒಂದು ರಾಷ್ಟ್ರದ ಸಂಸ್ಕೃತಿ ಜಗತ್ತನ್ನು ಆಚ್ಛಾದಿಸಿಕೊಳ್ಳುವುದೆಂದರೆ ಹೀಗೆಯೇ. ಇಲ್ಲಿನ ಪರಂಪರೆಯನ್ನು ಹೀಗಳೆದು ಜಗತ್ತಿನ ವೇದಿಕೆಯ ಮೇಲೆ ಭಾರತೀಯರೆಂದು ಹೇಳಿಕೊಳ್ಳಲು ನಾಚುತ್ತಿದ್ದ ಈ ಹಿಂದಿನ ಅನೇಕ ಪ್ರಧಾನಿಗಳ ಪಾಪವನ್ನು ನರೇಂದ್ರಮೋದಿ ನೆನ್ನೆಯ ಕಾರ್ಯಕ್ರಮದಲ್ಲಿ ತೊಳೆದೇಬಿಟ್ಟರು. ಅವರ ಮಾತಿಗೂ ಮುನ್ನ ಜನ ಮೋದಿ ಮೋದಿ ಎಂದು ಅರಚುತ್ತಿದ್ದುದಂತೂ ಟ್ರಂಪನ್ನು ದಂಗುಬಡಿಸುವಂತಿತ್ತು. ಅಮೇರಿಕಾದ ಅಧ್ಯಕ್ಷನಾಗುವುದೆಂದರೆ ಜಗತ್ತಿನ ದೊಡ್ಡಣ್ಣನೆನಿಸಿಕೊಳ್ಳುವುದೆಂಬುದು ನಿಜವಾದರೂ ಭಾರತದ ಪ್ರಧಾನಿ ಅನುಭವಿಸುವ ಈ ಪರಿಯ ಪ್ರೇಮವನ್ನು ಅವರ್ಯಾರೂ ಊಹಿಸಲೂ ಸಾಧ್ಯವಿಲ್ಲ.

ಅಕ್ಷರಶಃ ಈ ಕಾರ್ಯಕ್ರಮ ಟ್ರಂಪ್ ಪ್ರಚಾರಕ್ಕೆಂದೇ ನಡೆದದ್ದೆಂಬುದರಲ್ಲಿ ಯಾರಿಗೂ ಅನುಮಾನವುಳಿಯಲು ಸಾಧ್ಯವೇ ಇಲ್ಲ. ಅದರಲ್ಲೂ ಟೆಕ್ಸಾಸ್ನ ಈ ಪ್ರದೇಶವನ್ನು ಪ್ರಚಾರಕ್ಕೆಂದು ಮೋದಿ ಆಯ್ದುಕೊಂಡಿರುವುದರಲ್ಲಿ ಅರ್ಥವಿದೆ. ಭಾರತೀಯರೇ ತುಂಬಿರುವ ಈ ಪ್ರದೇಶದಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಟ್ರಂಪ್ಗೆ ಕಡಿಮೆ ಮತಗಳು ಬಿದ್ದಿದ್ದವು. ಈಗ ಮೋದಿ ಭಾರತೀಯರನ್ನು ಒಗ್ಗೂಡಿಸಿಕೊಂಡು ಟ್ರಂಪ್ರನ್ನು ಭಾರತದ ಮಿತ್ರ ಎಂದು ಸಂಬೋಧಿಸಿರುವುದು ಅಮೇರಿಕಾದಲ್ಲಿರುವ ಭಾರತೀಯ ಮತದಾರರದಿಗೆ ಸ್ಪಷ್ಟ ಸಂದೇಶ. ತಮ್ಮ ಮಾತಿನ ನಡುವೆ ಮೋದಿ ಟ್ರಂಪ್ರನ್ನು ಮತ್ತೆ ಅಮೇರಿಕಾದ ನಾಯಕರಾಗಬಲ್ಲ ವ್ಯಕ್ತಿ ಎಂದು ಸೂಕ್ಷ್ಮವಾಗಿ ಉಲ್ಲೇಖಿಸಿದ್ದಂತೂ ಅವರ ಗೆಲುವಿಗೆ ಭಾರತೀಯರ ಪಾತ್ರದ ಮಹತ್ವವನ್ನು ಮನಗಾಣಿಸಿದಂತೆ!

3

ಹೀಗೆ ರಾಷ್ಟ್ರವೊಂದರ ಚುನಾವಣೆಯಲ್ಲಿ ಭಾರತದ ಪ್ರಧಾನಿ ಮೂಗು ತೂರಿಸಿದ್ದು ವಿದೇಶಾಂಗ ನೀತಿಗೆ ವಿರುದ್ಧವೆಂದು ಕಾಂಗ್ರೆಸ್ಸು ಬಂಬಡ ಬಜಾಯಿಸುತ್ತಿದೆ. ಆದರೆ ಬಹಳ ಜನರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಮೋದಿಯ ಗೆಲುವಿಗೆ ಟ್ರಂಪ್ರ ಪಾತ್ರ ಕೂಡ ಅಷ್ಟೇ ದೊಡ್ಡದ್ದಾಗಿದೆ. ಪುಲ್ವಾಮಾದಲ್ಲಿ ಪಾಕಿಸ್ತಾನ ದಾಳಿ ಮಾಡಿದಾಗ ಅಮೇರಿಕಾ ನಮ್ಮ ಬೆಂಬಲಕ್ಕೆ ನಿಂತು ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಭಾರತದ ಪರವಾದ ವಾದ ಅಂಗೀಕಾರವಾಗುವಂತೆ ಮಾಡಿದರಲ್ಲ ಅದರ ಋಣ ತೀರಿಸುವುದು ಸುಲಭವಿಲ್ಲ. ಅಷ್ಟೇ ಅಲ್ಲ, ಬಾಲಾಕೋಟ್ ಏರ್ಸ್ಟ್ರೈಕ್ನ ನಂತರ ಜಗತ್ತಿನಲ್ಲಿ ಭಾರತದ ವಿರುದ್ಧ ಯಾರೂ ಮಾತನಾಡದಂತಿರುವುದರಲ್ಲಿ ಅಮೇರಿಕಾದ ಪಾತ್ರ ನಿಸ್ಸಂಶಯವಾಗಿ ದೊಡ್ಡದ್ದು. ಆಟರ್ಿಕಲ್ 370ನ್ನು ಕಿತ್ತು ಬಿಸಾಡಿದಾಗಲೂ ಅದನ್ನು ಭಾರತದ ಆಂತರಿಕ ವಿಚಾರ ಎಂದಿತ್ತು ಅಮೆರಿಕಾ. ಕಾಶ್ಮೀರದ ಕುರಿತಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಹೇಳಿದಾಗ ಭಾರತದ ಪ್ರಧಾನಿ ಅದನ್ನು ಸೂಕ್ಷ್ಮವಾಗಿ ಆದರೆ ಚುರುಕಾಗಿಯೇ ತಿರಸ್ಕರಿಸಿದ್ದರು. ಟ್ರಂಪ್ ಆಗಲೂ ನಮ್ಮ ಪರವಾಗಿಯೇ ನಿಂತು ಪಾಕಿಸ್ತಾನಕ್ಕೆ ಸರಿಯಾದ ತಪರಾಕಿಯನ್ನೇ ಕೊಟ್ಟಿದ್ದರು. ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ಖಾನ್ ಅಮೇರಿಕಾಕ್ಕೆ ಹೋಗಿದ್ದಾಗ ಅವರಿಗೆ ಸಿಕ್ಕ ಗೌರವ ನೆನಪಿರಬೇಕಲ್ಲ. ಅದು ಭಾರತದ ಪರವಾಗಿ ದೊಡ್ಡಣ್ಣ ತೆಗೆದುಕೊಂಡ ಸ್ಪಷ್ಟ ನಿಲುವು. ಬರಲಿರುವ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಂಡಾಗಲೂ ಜಗತ್ತು ಮಾತನಾಡದೇ ಸುಮ್ಮನುಳಿಯುತ್ತದೆ. ಕಾದು ನೋಡಿ ಅಷ್ಟೇ!

ಟ್ರಂಪ್ ಭಾರತದೊಂದಿಗೆ ಎಷ್ಟು ಪೂರಕವಾಗಿ ನಿಂತಿದ್ದರೆಂದರೆ ಇರಾನ್ನೊಂದಿಗೆ ಅಮೇರಿಕಾದ ಸಂಬಂಧ ಹಳಸಿದಾಗಲೂ ಭಾರತಕ್ಕೆ ಇರಾನಿನ ಸಂಬಂಧ ಕಡಿದುಕೊಳ್ಳುವಂತೆ ತಾಕೀತು ಮಾಡಲಿಲ್ಲ. ಭಾರತದ ಚುನಾವಣೆಯ ಹೊತ್ತಲ್ಲಿ ಹಾಗೇನಾದರೂ ಇರಾನ್ನೊಂದಿಗಿನಿ ಬಾಂಧವ್ಯವನ್ನು ಕಳೆದುಕೊಳ್ಳುವ ಒತ್ತಡಕ್ಕೆ ಮೋದಿ ಸಿಲುಕಿದ್ದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಯದ್ವಾ-ತದ್ವಾ ಏರಿಬಿಡುತ್ತಿದ್ದವು. ಆಮೇಲೆ ಅದಕ್ಕೆ ಸರಿಯಾಗಿ ಉತ್ತರವನ್ನು ಕೊಡಲಾಗದೇ ಮೋದಿ ಸಕರ್ಾರಕ್ಕೆ ದೊಡ್ಡ ಹೊಡೆತವಾಗುತ್ತಿತ್ತು. ಟ್ರಂಪ್ ಹಾಗಾಗಲು ಬಿಡಲಿಲ್ಲ. ಈಗಲೂ ಹಾಗೆಯೇ. ಅಮೇರಿಕಾದ ಚುನಾವಣೆಯ ಹೊತ್ತಲ್ಲಿ ಚೀನಾದೊಂದಿಗೆ ಟ್ರಂಪ್ ವ್ಯಾಪಾರ ಸಮರಕ್ಕೆ ಬಿದ್ದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಆಥರ್ಿಕ ಸಂಕಟಕ್ಕೆ ಭಾರತ ಸಿಲುಕಿದೆ. ಆದರೆ ಅಮೇರಿಕಾದ ಸಾರ್ವಭೌಮತೆಯನ್ನು ಸಾಬೀತುಪಡಿಸಲು ಚುನಾವಣೆಯ ಹೊಸ್ತಿಲಲ್ಲಿ ಟ್ರಂಪ್ಗೆ ಈ ಕ್ರಮ ಅನಿವಾರ್ಯ. ಇದನ್ನರಿತ ಮೋದಿ ಕೂಡ ಆಥರ್ಿಕ ಸಂಕಷ್ಟಕ್ಕೆ ಯಾವ ಮಾತುಗಳನ್ನಾಡದೇ, ಆತುರದ ನಿರ್ಣಯವನ್ನೂ ಕೈಗೊಳ್ಳದೇ ಸಹಜವಾಗಿಯೇ ಇದ್ದಾರೆ. ಇವೆಲ್ಲವೂ ಬರಲಿರುವ ದಿನಗಳಲ್ಲಿ ಮಂಜಿನಂತೆ ಕರಗಿಬಿಡುತ್ತದೆಂಬುದು ಅವರಿಗೆ ಚೆನ್ನಾಗಿ ಗೊತ್ತು.

4

ಭಾರತಕ್ಕೆ ಇಷ್ಟು ಪೂರಕವಾಗಿರುವ ಟ್ರಂಪ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿರುವುದು ನಮ್ಮ ಅಗತ್ಯವೂ ಹೌದು. ಹೀಗಾಗಿಯೇ ಮೋದಿ ಈ ಸವಾಲನ್ನು ಸ್ವೀಕರಿಸಿರುವುದು. ಈಗ ಅಮೇರಿಕಾದ ಚುನಾವಣೆಯಲ್ಲಿ ಭಾರತೀಯ ಮತಗಳು ಗಣನೀಯ ಪ್ರಮಾಣದಲ್ಲಿ ಟ್ರಂಪ್ಗೆ ಬಿದ್ದವೆಂದು ಗೊತ್ತಾದರೆ ಆತ ಆ ಕಾರಣಕ್ಕೆ ಮರು ಆಯ್ಕೆಯಾದನೆಂದು ಅಮೇರಿಕಾಕ್ಕೆ ಅರಿವಾದರೆ ಅಲ್ಲಿ ಭಾರತೀಯರ ಗೌರವ ಎಷ್ಟು ಹೆಚ್ಚಾಗಬಹುದೆಂದು ಊಹಿಸಿ ನೋಡಿ. ಮೋದಿ ಅದೇ ಮೋಡಿಯನ್ನು ಹೌಡಿಯಲ್ಲಿ ಮಾಡಿದ್ದಾರೆ!!

Comments are closed.