ವಿಭಾಗಗಳು

ಸುದ್ದಿಪತ್ರ


 

23 ದಿನಗಳಲ್ಲಿ 150 ಕೋಟಿ ನುಂಗಿತು ಕಾಂಗ್ರೆಸ್ಸು!!

ಕಾಂಗ್ರೆಸ್ಸು ಚಡಪಡಿಸುತ್ತಿದೆ. ಅದಕ್ಕೆ ಹೇಗಾದರೂ ಮಾಡಿ 2019 ರ ಚುನಾವಣೆಯಲ್ಲಿ ಮೋದಿಯವರನ್ನು ಕೆಳಗಿಳಿಸಲೇಬೇಕಿದೆ. ಕೆಳಗಿಳಿಸಲು ಸಾಧ್ಯವಾಗದೇ ಇದ್ದರೆ ಕೊನೆಯ ಪಕ್ಷ ಮೋದಿಗಿರುವಂತ ಪೂರ್ಣ ಬಹು ಮತವನ್ನಾದರೂ ಕಸಿಯಬೇಕೆಂಬ ತುಡಿತವಿದೆ. ಅದಕ್ಕೆಂದೇ ಅವರೀಗ ಎಲ್ಲ ಪಕ್ಷಗಳನ್ನೂ ಒಗ್ಗೂಡಿಸುತ್ತಿದ್ದಾರೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿಲ್ಲ ಎಂದು ನಂಬಿಸಲು ಹರಸಾಹಸ ಮಾಡುತ್ತಿದ್ದಾರೆ. ಕೊನೆಗೆ ಅಧಿವೇಶನವೂ ನಡೆಯಲು ಬಿಡದೇ ಆಥರ್ಿಕ ಪ್ರಗತಿಯನ್ನು ತಡೆಗಟ್ಟಲು ಕೈಲಾದುದೆಲ್ಲವನ್ನೂ ಮಾಡುತ್ತಿದ್ದಾರೆ.

1

ಅಂತೂ ಬಜೆಟ್ ಅಧಿವೇಶನ ಹಳ್ಳ ಹಿಡಿಯಿತು. ಬಜೆಟ್ ಮಂಡನೆಯಾದ ನಂತರ ಅದರ ಸಾಧಕ ಬಾಧಕಗಳ, ಅದನ್ನು ಜಾರಿಗೆ ತರುವ ಸೂಕ್ಷ್ಮ ವಿಚಾರಗಳ ಕುರಿತಂತೆ ಸಾಕಷ್ಟು ಚಿಂತನ-ಮಂಥನಗಳು ನಡೆಯಬೇಕು. ಬಜೆಟ್ನಲ್ಲಿ ಹೇಳಿರುವಂತಹ ಅನೇಕ ಸಂಗತಿಗಳಿಗೆ ಹಣಕಾಸು ಅನುಮೋದನೆಯೂ ಆಗಬೇಕು. ಬಜೆಟ್ ದಿನ ಹಣಕಾಸು ಮಂತ್ರಿ ಅದನ್ನು ಬರಿ ಓದಿರುತ್ತಾರಷ್ಟೇ. ಆದರೆ, ಪ್ರಜ್ಞಾವಂತರೆನಿಸಿಕೊಂಡ ರಾಜ್ಯಸಭೆಯ ಸದಸ್ಯರು ಅದರಲ್ಲಿರುವ ಕೊರತೆಗಳ ಕುರಿತಂತೆ ಗಮನ ಸೆಳೆದು ಸರಿ ಪಡಿಸುವಲ್ಲಿ ಹಣಕಾಸು ಸಚಿವರಿಗೆ ಮಾರ್ಗದರ್ಶನ ಮಾಡಬೇಕು. ಆದರೆ, ದುರದೃಷ್ಟಕರ ಸಂಗತಿಯೆಂದರೆ ನರೇಂದ್ರಮೋದಿಯವರ ಸಕರ್ಾರದ ಮೊದಲನೇ ಅವಧಿಯ ಕೊನೆಯ ಬಜೆಟ್ ಮೇಲೆ ಚಚರ್ೆಯೇ ನಡೆಯಲಿಲ್ಲ. ಸತತ 23 ದಿನಗಳ ಕಾಲ ಪ್ರತಿಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ಸು ಈ ಅವಧಿಯುದ್ದಕ್ಕೂ ಗಲಾಟೆಯೆಬ್ಬಿಸಿ ಅಧಿವೇಶನ ಮಣ್ಣು ಪಾಲಾಗುವಂತೆ ನೋಡಿಕೊಂಡಿತು. ಇವರುಗಳನ್ನು ಪ್ರತಿನಿಧಿಯಾಗಿ ಕಳಿಸಿರುವಂತಹ ಅವರವರ ಕ್ಷೇತ್ರದ ಪ್ರಜೆಗಳಿಗೆ ಇದು ಸರಿಯಾಗಿ ಮಂಗಳಾರತಿ ಎತ್ತಿದಂತೆ! ನಾವು ನಾಯಕರುಗಳನ್ನು ಆರಿಸಿ ಕಳಿಸುವುದು ಇಂತಹ ಸಂದರ್ಭಗಳಲ್ಲಿ ತಮ್ಮ ಕ್ಷೇತ್ರದ ಕುರಿತಂತೆ ಪ್ರಶ್ನೆಯೆತ್ತಿ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಅವರು ಯಶಸ್ವಿಯಾಗಲಿ ಅಂತ. ಆದರೆ, ಕ್ಷೇತ್ರಕ್ಕಿಂತಲೂ ರಾಜಕೀಯ ಹೀತಾಸಕ್ತಿಗಳಿಗೆ ಹೆಚ್ಚಿನ ಪಾಲು ಬಲಿಯಾಗಿ ಕ್ಷೇತ್ರದ, ಅಲ್ಲಿನ ಜನತೆಯ ವಿಕಾಸವನ್ನು ಕಡೆಗಣಿಸುತ್ತಾರಲ್ಲ, ಇಂಥವರಿಗೆ ಏನೆನ್ನಬೇಕು?

ಕನರ್ಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥದ್ದೊಂದು ಬೇಜವಬ್ದಾರಿತನಕ್ಕೆ ಸಮರ್ಥ ಉದಾಹರಣೆ. ಆಂಧ್ರದ ಚಂದ್ರಬಾಬು ನಾಯ್ಡು ತನ್ನ ರಾಜ್ಯಕ್ಕೆ ವಿಶೇಷ ಸ್ಥಾನ ಕೊಡಲಿಲ್ಲವೆಂಬ ಕಾರಣಕ್ಕೆ ಎನ್ಡಿಎ ಪಾಳಯವನ್ನೇ ಬಿಟ್ಟುಬಂದರು! ಬಿಹಾರದ ನಿತೀಶ್ ಕುಮಾರ್ ತನ್ನ ರಾಜ್ಯಕ್ಕೆ ಅನುಕೂಲವಾಗುವುದಾದರೆ ಮೋದಿಯೊಂದಿಗೆ ಗೆಳೆತನ ಬೆಳೆಸಲು ಸಿದ್ಧವೆಂದರು. ಎಲ್ಲಾ ಬಿಡಿ. ಪಂಜಾಬಿನ ಅಮರೀಂದರ್ ಸಿಂಗ್ ಸ್ವತಃ ಕಾಂಗ್ರೆಸ್ಸಿಗನಾಗಿದ್ದರೂ ತನ್ನ ರಾಜ್ಯಕ್ಕೆ ಬೇಕಾಗುವ ಸವಲತ್ತುಗಳನ್ನು ಪಡೆಯುವಲ್ಲಿ ಪ್ರಧಾನ ಮಂತ್ರಿಯವರನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ. ಸಿದ್ದರಾಮಯ್ಯನವರು ಮಾತ್ರ ಆಲಸ್ಯವೋ ರಾಜಕೀಯ ಅನಿವಾರ್ಯತೆಯೋ ನೀತಿ ಆಯೋಗವನ್ನೂ ಬಹಿಷ್ಕರಿಸಿ ಉದ್ಧಟತನವನ್ನು ತೋರಿದ್ದರು! ಬಹುಶಃ ಹೈಕಮಾಂಡ್ನ ಆದೇಶವೂ ಇದ್ದಿರಬಹುದು. ಆದರೆ, ಹೈಕಮಾಂಡ್ ರಾಜ್ಯಕ್ಕಿಂತಲೂ ದೊಡ್ಡದ್ದೇ? ಈ ಪ್ರಶ್ನೆಯನ್ನು ಇಂದು ನಾವು ಪ್ರತಿಪಕ್ಷದ ಪ್ರತಿಯೊಬ್ಬ ಸದಸ್ಯನನ್ನೂ ಕೇಳಬೇಕಾಗಿದೆ. ಅಧಿವೇಶನಗಳನ್ನು ಈ ಹಿಂದೆಯೂ ಪ್ರತಿಪಕ್ಷಗಳು ಬಹಿಷ್ಕರಿಸಿವೆ. ಆದರೆ ಅದು ಪೂರಾ 23 ದಿನಗಳ ಕಾಲ ಅಲ್ಲ! ಒಂದು ವಿಚಾರವನ್ನು ತೆಗೆದುಕೊಂಡು ಮೂರ್ನಾಲ್ಕು ದಿನಗಳ ಕಾಲ ಸದನವನ್ನು ಜಗ್ಗಿದ ಮೇಲೆ ಮುಂದಿನ ವಿಚಾರಕ್ಕೆ ಹೊರಳೋದು ಎಲ್ಲೆಡೆಯೂ ನಡೆಯುವ ಸತ್ ಸಂಪ್ರದಾಯ. ಆದರೆ ಈ ಬಾರಿ ಕಾಂಗ್ರೆಸ್ಸು ಮತ್ತದರ ಮಿತ್ರ ಪಕ್ಷಗಳು ಈ ಎಲ್ಲ ಔದಾರ್ಯವನ್ನೂ ಮರೆತು ಮೋದಿಯವರ ಮೇಲಿನ ಆಕ್ರೋಶಕ್ಕಾಗಿ ದೇಶದ ಮೇಲೆ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ.

2

ಸುಮ್ಮನೆ ನಿಮ್ಮ ಮಾಹಿತಿಗಿರಲಿ ಎಂದು ಹೇಳುತ್ತೇನೆ. ಲೋಕಸಭೆಯಲ್ಲಿರುವ ಒಟ್ಟೂ ಸಂಸದರ ಸಂಖ್ಯೆ 545. ಪ್ರಜ್ಞಾವಂತರೆನಿಸಿಕೊಂಡ ರಾಜ್ಯಸಭೆಯ ಸದಸ್ಯರು 250. ಒಟ್ಟಾರೆ ಸಂಸದರ ಸಂಖ್ಯೆ 795 ಆಗುತ್ತದೆ. ಸಂಸದರಿಗೆ ಬರಿಯ 50,000 ರೂಪಾಯಿ ಸಂಬಳವೆಂದು ಲೆಕ್ಕ ಹಾಕಿದರೂ ದಿನಕ್ಕೆ ಸುಮಾರು 2000 ರೂಪಾಯಿ ಆಯ್ತು. ಈ ಸಂಸದರಿಗೆ ಕ್ಷೇತ್ರದಲ್ಲಿ ಕಾರ್ಯಲಯ ನಿರ್ವಹಿಸಲು ಮತ್ತು ಕ್ಷೇತ್ರದಲ್ಲಿ ಅಡ್ಡಾಡಲೆಂದು ಹೆಚ್ಚು-ಕಡಿಮೆ ಪ್ರತಿ ದಿನ 3000 ರೂಪಾಯಿ ಕೊಡಲಾಗುತ್ತದೆ. ಇನ್ನು ಅಧಿವೇಶನಕ್ಕೆ ಹಾಜರಾಗಿರುವುದರಿಂದ ದಿನಕ್ಕೆ 2000 ರೂಪಾಯಿ ಭತ್ಯೆ ದಕ್ಕುತ್ತದೆ. ಒಟ್ಟಾರೆ ಒಬ್ಬ ಸಂಸದನ ಒಂದು ದಿನದ ಖಚರ್ು 7000 ರೂಪಾಯಿ. ಹೀಗೆ ರಾಜ್ಯ ಸಭೆ ಮತ್ತು ಲೋಕಸಭೆಗೆ ಸೇರಿದ ಎಲ್ಲ ಸಂಸದರ ಒಟ್ಟೂ ಖರ್ಚನ್ನು ಲೆಕ್ಕ ಹಾಕಿದರೆ ಹತ್ತಿರ ಹತ್ತಿರ ದಿನಕ್ಕೆ 55 ಲಕ್ಷ ರೂಪಾಯಿ ಆಗುತ್ತದೆ! ಅಧಿವೇಶನವನ್ನು ನಿರ್ವಹಿಸಲು ಒಂದು ದಿನಕ್ಕೆ ಹಿಡಿಯುವ ಖಚರ್ು ಆರು ಕೋಟಿ ರೂಪಾಯಿ ಎಂಬುದು ಅಧಿಕೃತ ಮಾಹಿತಿ. ಇದಕ್ಕೆ ಸಾಂಸದರ ಖರ್ಚನ್ನು ಸೇರಿಸಿದರೆ ದಿನವೊಂದಕ್ಕೆ ಆರೂವರೆ ಕೋಟಿ ವೃಥಾ ಖಚರ್ು. 23 ದಿನಗಳಿಂದ ಗದ್ದಲ ನಡೆಸಿದ ಕಾಂಗ್ರೆಸ್ಸು ಅಧಿವೇಶನ ನಡೆಯಲು ಬಿಡದೇ ದೇಶದ ಬೊಕ್ಕಸಕ್ಕೆ ಮಾಡಿದ ಒಟ್ಟಾರೆ ನಷ್ಟ 150 ಕೋಟಿ ರೂಪಾಯಿ!

ಬರಿ ಕನರ್ಾಟಕ ಒಂದನ್ನೇ ಗಣನೆಗೆ ತೆಗೆದುಕೊಂಡು ಈ 150 ಕೋಟಿಯನ್ನು ಹಂಚಲು ಸಾಧ್ಯವಾಗಿದ್ದರೆ ಏನೆಲ್ಲಾ ಆಗಬಹುದಿತ್ತು ಅಂತ ಹಾಗೇ ಯೋಚಿಸಿ. ಮುಚ್ಚಿಹೋಗುತ್ತಿರುವ ಕನ್ನಡ ಮಾಧ್ಯಮ ಶಾಲೆಯನ್ನು ಮತ್ತೆ ಕಣ್ಣುಕುಕ್ಕುವಂತೆ ಮಾಡಬೇಕಾದರೆ ಒಂದು ಶಾಲೆಗೆ 50 ಲಕ್ಷ ರೂಪಾಯಿ ಅನುದಾನವಾದರೂ ಸಾಕು. ಅಂದರೆ 300 ಕನ್ನಡ ಮಾಧ್ಯಮ ಶಾಲೆಗಳಿಗೆ ಜೀವತುಂಬಬಹುದಾಗಿದ್ದಷ್ಟು ಹಣವನ್ನು 23 ದಿನಗಳಲ್ಲಿಯೇ ನುಂಗಿಬಿಟ್ಟಿತು ಕಾಂಗ್ರೆಸ್ಸು! ನಮ್ಮೂರಿನ ಆಸ್ಪತ್ರೆಯನ್ನು ಮೇಲ್ದಜರ್ೆಗೇರಿಸಲು ಒಂದು ಕೋಟಿ ರೂಪಾಯಿ ಅನುದಾನ ಬೇಕೆನ್ನುವುದಾದರೆ ಕಾಂಗ್ರೆಸ್ಸು ವ್ಯರ್ಥ ಮಾಡಿದ 150 ಕೋಟಿ ರೂಪಾಯಿಯಲ್ಲಿ ಕನರ್ಾಟಕದ 150 ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದು ನಿಂತಿರುತ್ತಿದ್ದವು! ಯುನಿವಸರ್ಿಟಿಯೊಂದಕ್ಕೆ ಹತ್ತು ಕೋಟಿ ರೂಪಾಯಿ ಅನುದಾನ ಕೊಡುವುದಾದರೂ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 15 ವರ್ಷಗಳ ಕಾಲ ರಾಜ್ಯದ ಬೊಕ್ಕಸದಿಂದ ಹಣ ಬರಿಸುವುದೇ ಬೇಡವಾಗಿತ್ತು. ಎಲ್ಲಾ ಬಿಡಿ. ಮೊನ್ನೆ ತಾನೆ ಸಿದ್ದರಾಮಯ್ಯನವರು ರೈತರ ಸಾಲ 50,000 ರೂಪಾಯಿವರೆಗೂ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದ್ದರಲ್ಲಾ; ಅದಕ್ಕೆ ಬೇಕಾದಷ್ಟು ಹಣವನ್ನು ನೀಡದೇ ಅತ್ತ ರೈತರಿಗೆ ಸಾಲ ಮನ್ನಾ ಆಗದ ಮತ್ತು ಹೊಸ ಸಾಲವೂ ಹುಟ್ಟದ ತ್ರಿಶಂಕು ಸಾಲದ ಸ್ಥಿತಿಯನ್ನು ತಂದಿಟ್ಟರಲ್ಲ, ಅದರ ಬದಲು ಈ 150 ಕೋಟಿಯನ್ನು ಸುಮ್ಮನೆ ಹೊತ್ತುಕೊಂಡು ಬಂದಿದ್ದರೂ ಸಾಕಿತ್ತು. 50,000 ರೂಪಾಯಿಯಂತೆ 30 ಸಾವಿರಕ್ಕೂ ಹೆಚ್ಚು ರೈತರ ಸಾಲಮನ್ನಾ ಮಾಡಬಹುದಿತ್ತು.

3

ಕಾಂಗ್ರೆಸ್ಸು ಚಡಪಡಿಸುತ್ತಿದೆ. ಅದಕ್ಕೆ ಹೇಗಾದರೂ ಮಾಡಿ 2019 ರ ಚುನಾವಣೆಯಲ್ಲಿ ಮೋದಿಯವರನ್ನು ಕೆಳಗಿಳಿಸಲೇಬೇಕಿದೆ. ಕೆಳಗಿಳಿಸಲು ಸಾಧ್ಯವಾಗದೇ ಇದ್ದರೆ ಕೊನೆಯ ಪಕ್ಷ ಮೋದಿಗಿರುವಂತ ಪೂರ್ಣ ಬಹು ಮತವನ್ನಾದರೂ ಕಸಿಯಬೇಕೆಂಬ ತುಡಿತವಿದೆ. ಅದಕ್ಕೆಂದೇ ಅವರೀಗ ಎಲ್ಲ ಪಕ್ಷಗಳನ್ನೂ ಒಗ್ಗೂಡಿಸುತ್ತಿದ್ದಾರೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿಲ್ಲ ಎಂದು ನಂಬಿಸಲು ಹರಸಾಹಸ ಮಾಡುತ್ತಿದ್ದಾರೆ. ಕೊನೆಗೆ ಅಧಿವೇಶನವೂ ನಡೆಯಲು ಬಿಡದೇ ಆಥರ್ಿಕ ಪ್ರಗತಿಯನ್ನು ತಡೆಗಟ್ಟಲು ಕೈಲಾದುದೆಲ್ಲವನ್ನೂ ಮಾಡುತ್ತಿದ್ದಾರೆ. ಆದರೆ, ಅವರಂದುಕೊಂಡಿದ್ದು ನಡೆಯುತ್ತಿಲ್ಲಾ ಎನ್ನುವುದೇ ದೇಶದ ಪಾಲಿಗೆ ಸಂತಸದ ಸಂಗತಿ. ಇನ್ನೂ ಹೆಚ್ಚಿನ ಆನಂದದ ವಿಷಯವೆಂದರೆ ಎನ್ಡಿಎಗೆ ಸೇರಿದ ಸಾಂಸದರು ಈ 23 ದಿನಗಳ ಕಾಲ ಅಧಿವೇಶನ ನಡೆಯದೇ ಇದ್ದುದರಿಂದ ಬೊಕ್ಕಸಕ್ಕಾಗುವ ಸ್ವಲ್ಪ ನಷ್ಟವನ್ನಾದರೂ ತಪ್ಪಿಸಲು ತಾವು ತೆಗೆದುಕೊಳ್ಳುತ್ತಿದ್ದ ಸಂಬಳವನ್ನೂ ಮತ್ತು ಭತ್ಯೆಯನ್ನೂ ಸಕರ್ಾರಕ್ಕೆ ಹಿಂದಿರುಗಿಸಿದ್ದಾರೆ. ಮೆಚ್ಚಬೇಕಾದ ಸಂಗತಿಯೇ.
ಆದರೆ, ನಮಗೀಗ ಒಂದು ಮಹತ್ವದ ಕೆಲಸವಿದೆ. ಅಧಿವೇಶನವನ್ನು ಹಾಳುಗೈದು ನಮ್ಮ ತೆರಿಗೆಯ ಹಣವನ್ನು ಪೋಲುಮಾಡಿದವರಿಗೆ ಸರಿಯಾದ ಉತ್ತರ ಕೊಡುವ ಸಂದರ್ಭ ಈಗ ಬಂದಿದೆ. ನಮ್ಮ ಕೈಲಿರುವ ಅಸ್ತ್ರ ಅದೊಂದೇ. ಅದನ್ನುಳಿದು ಸಕರ್ಾರದ ಮೇಲೆ ಒತ್ತಡವನ್ನು ಹೇರಿ ನಾವೊಂದಷ್ಟು ಹೊಸ ಕಾನೂನಿಗೆ ಮನಸ್ಸು ಮಾಡಲು ಪ್ರೇರೇಪಿಸಬೇಕಿದೆ. ಅಧಿವೇಶನವನ್ನು ಹಾಳುಗೆಡವಲು ಯಾರು ಪ್ರಯತ್ನಿಸುತ್ತಾರೋ ಅವರನ್ನು ಸದನದಿಂದ ಅಮಾನತು ಮಾಡುವ ಶಿಕ್ಷೆ ಕೊಡಬೇಕಿದೆ ಮತ್ತು ಯಾರಿಂದ ಅಧಿವೇಶನ ಮುಂದೂಡಲ್ಪಡುತ್ತದೆಯೋ ಅಂಥವರೆಲ್ಲರ ಮೇಲೂ ಅಧಿವೇಶನದ ಒಂದು ದಿನದ ಖಚರ್ಾಗಿರುವ ಆರು ಕೋಟಿ ರೂಪಾಯಿಯ ದಂಡವನ್ನು ಹಾಕಬೇಕಿದೆ. ಯಾರು ಅಧಿವೇಶನವನ್ನು ಹಾಳು ಮಾಡಿದ್ದಾರೋ ಅಂಥವರ ಚಿತ್ರವನ್ನು ಅವರ ಕ್ಷೇತ್ರದ ಹೆಸರನ್ನು ಟಿವಿಯ ಪರದೆಗಳಲ್ಲಿ ಬರುವಂತೆ ಮಾಡಿ ಅವರು ಬೊಕ್ಕಸಕ್ಕೆ ಮಾಡಿರುವಂಥ ನಷ್ಟದ ವಿವರಣೆ ಆಯಾ ಕ್ಷೇತ್ರದ ಜನರಿಗೆ ತಿಳಿಯುವಂತೆ ಮಾಡಬೇಕಿದೆ. ಪ್ರತಿಭಟನೆ ಮಾಡಲೇಬೇಕೆಂದಿದ್ದರೆ ಅದಕ್ಕೊಂದು ಪ್ರತ್ಯೇಕ ಸ್ಥಳ ಮತ್ತು ಸಮಯವನ್ನು ನಿಗದಿಪಡಿಸುವುದು ಮೇಲು. ಎಲ್ಲಕ್ಕೂ ಹೆಚ್ಚಾಗಿ ಎಷ್ಟು ಹೊತ್ತು ಅಧಿವೇಶನವನ್ನು ತಡೆ ಹಿಡಿದಿರುತ್ತಾರೋ ಅಷ್ಟೂ ಹೊತ್ತು ರಾತ್ರಿ ಪ್ರತಿಯೊಬ್ಬರೂ ಅಧಿವೇಶನದಲ್ಲಿ ಕುಳಿತುಕೊಳ್ಳಲೇಬೇಕೆಂಬ ಕಠಿಣ ನಿಯಮವನ್ನು ಜಾರಿಗೆ ತರಬೇಕಿದೆ. ಅಧಿವೇಶನದ ಹೊತ್ತಲ್ಲಿ ಪ್ರತಿನಿಧಿಗಳಿಗೆ ಹಾಜರಾತಿ ಕಡ್ಡಾಯ ಮಾಡಬೇಕಲ್ಲದೇ ಹೇಗೆ ಕಾಪರ್ೋರೇಟ್ ಕಂಪೆನಿಗಳು ಭಾಗವಹಿಸುವಿಕೆಯನ್ನು ಲೆಕ್ಕ ಹಾಕುವುದೋ ಹಾಗೆಯೇ ಸಮರ್ಥ ತಂತ್ರಜ್ಞಾನ ಬಳಸಿ ಪ್ರತಿಯೊಬ್ಬ ಪ್ರತಿನಿಧಿಯ ಕಾರ್ಯಕ್ಷಮತೆಯನ್ನು ಲೆಕ್ಕ ಹಾಕಬೇಕಿದೆ ಮತ್ತು ಅದನ್ನು ಅಧಿವೇಶನದ ನಂತರ ಆಯಾ ಕ್ಷೇತ್ರದ ಜನತೆಗೆ ತಿಳಿಯುವಂತೆ ಮಾಡಬೇಕಿದೆ. ಆಗ ನೋಡಿ ಪ್ರತಿನಿಧಿಗಳೆನಿಸಿಕೊಂಡವರೆಲ್ಲಾ ನೆಟ್ಟಗಾಗುತ್ತಾರೆ.

ಅಂದಹಾಗೆ. ಇನ್ನು ಕೆಲವೇ ದಿನಗಳಲ್ಲಿ ಕನರ್ಾಟಕದ ಚುನಾವಣೆ ಇದೆ. ಮತ-ಮತಗಳ ತಾಕಲಾಟಕ್ಕೆ ಮಾರುಹೋಗಬೇಡಿ. ಸೀರೆ, ಕುಕ್ಕರು, ಸೈಕಲ್ಲು, ಕಾರು ಇವುಗಳಿಗೆ ಕೊಚ್ಚಿ ಹೋಗದಿರಿ. ಹಣ-ಹೆಂಡಗಳಿಗೆ ಬಾಯ್ಬಿಡದಿರಿ. ಮೋಹದ ಮಾತುಗಳಿಗೂ ಮರುಳಾಗದಿರಿ. ಈ ಬಾರಿ ವಿಕಾಸಕ್ಕಷ್ಟೇ ಮತ. ಐದು ವರ್ಷಗಳಲ್ಲಿ ಮಾಡಿದ್ದೇನೆಂದು ಕೇಳಿ ತೃಪ್ತಿಯೆನಿಸದಿದ್ದರೆ ಮುಲಾಜಿಲ್ಲದೇ ಕಿತ್ತು ಬಿಸಾಡಿ. ಮತದಾನದ ಅಸ್ತ್ರವನ್ನು ಸಮರ್ಥವಾಗಿ ಬಳಸುವ ಹೊತ್ತು ಇದು. ಜಾಗೃತರಾಗೋಣ.

Comments are closed.