ವಿಭಾಗಗಳು

ಸುದ್ದಿಪತ್ರ


 

ದಕ್ಷಿಣದ ಯಾತ್ರೆಗೆಂದು ಬಂದ ಸ್ವಾಮೀಜಿ ಭಾರತದ ಒಟ್ಟಾರೆ ಸ್ಥಿತಿಗತಿಗಳನ್ನು ಕಂಡು ನೊಂದರು. ಬೆಂದು ಹೋದರು. ಸಮುದ್ರಕ್ಕೆ ಜಿಗಿದು ಬಂಡೆಯ ಮೇಲೂ ಕುಳಿತರು. ತಾಯಿ ಭಾರತಿಯ ವೈಭವದ ಕನಸನ್ನು ಕಂಡು ಅದೆಷ್ಟು ಕಣ್ಣೀರಿಟ್ಟರೋ ದೇವರೇ ಬಲ್ಲ. ಆಗಲೇ ಸ್ವಾಮಿಜಿಗೆ ಪಶ್ಚಿಮ ದಿಕ್ಕಿನಲ್ಲೊಂದು ಹೊಳಪು ಕಂಡಿತು. ಸ್ವಾಮೀಜಿ ತಮ್ಮ ಅದಾಗಲೇ ಒಳಗಿಂದೊಳಗೇ ಕ್ಷೀಣಪ್ರಾಣವಾಗಿದ್ದ ದೇಹವನ್ನು ಅಮೇರಿಕಾಗೆ ಹೊತ್ತೊಯ್ಯಲು ಸಜ್ಜಾಗಿದ್ದು. ಅದೊಂದು ಇಚ್ಛಾಶಕ್ತಿ ವೈಭವದ ದರ್ಶನವಷ್ಟೇ.

ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡಿ 115 ವರ್ಷಗಳೇ ಕಳೆದುಹೋದವು. ಅದೊಂದು ಅಪೂರ್ವವಾದ ಚೇತನವಾಗಿತ್ತು ಎಂದರೆ ಬಹುಶಃ ಕ್ಲೀಶೆಯಾದೀತು. ಅವರಿಲ್ಲದೇ ಹೋಗಿದ್ದರೆ ಇಂದಿನ ಭಾರತ ಹೇಗಿದ್ದಿರಬಹುದೆಂದು ಊಹಿಸಿಕೊಳ್ಳುವುದೂ ಕಷ್ಟ. ಅನೇಕ ದಿಕ್ಕುಗಳಲ್ಲಿ ರಾಷ್ಟ್ರದ ಕೈಂಕರ್ಯವನ್ನು ನೆರವೇರಿಸಿದ ಪುಣ್ಯಾತ್ಮ ಆತ. ಧರ್ಮದ ವಿಚಾರಕ್ಕೆ ಬಂದರೆ ಕ್ರಿಶ್ಚಿಯನ್ ಮಿಷನರಿಗಳು ವಿವೇಕಾನಂದರ ಹೆಸರನ್ನೆತ್ತಿದ್ದರೆ ಇಂದಿಗೂ ಉರಿದು ಬೀಳುತ್ತಾರೆ. ಏಕೆಂದರೆ ಆತ ಬರಿ ಭೌತಿಕವಾಗಿ ಕ್ರಿಶ್ಚಿಯನ್ನರನ್ನು ಝಾಡಿಸಲಿಲ್ಲ. ಬದಲಿಗೆ ಕ್ರಿಸ್ತಾನುಯಾಯಿಗಳನ್ನು ಮಾನಸಿಕವಾದ ಪರಿವರ್ತನೆಗೆ ಒಳಪಡಿಸಿದರು. ದೇಶದ ವಿಚಾರಕ್ಕೆ ಬಂದರಂತೂ ಸ್ವಾಮೀಜಿ ಹೊಸದೊಂದು ಕ್ರಾಂತಿಯನ್ನೇ ಮಾಡಿಬಿಟ್ಟರು. ಧರ್ಮ ಮಾರ್ಗದಲ್ಲಿ ನಡೆಯುತ್ತೇನೆಂದು ನಂಬಿ ಅರಿವಿಲ್ಲದಂತೆ ತಮಸ್ಸಿಗೆ ಜೋತು ಬಿದ್ದಿದ್ದ ಭಾರತೀಯರನ್ನು ಇತರರ ಸೇವೆಯೇ ಧರ್ಮ ಮಾರ್ಗವೆಂದು ಒಪ್ಪಿಸಿದ ವಿವೇಕಾನಂದರು ಹೊಸದೊಂದು ಶಕ್ತಿ ಚೈತನ್ಯವನ್ನು ರಾಷ್ಟ್ರಕ್ಕೇ ತುಂಬಿಬಿಟ್ಟರು. ಬಹುಶಃ ಅವರು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಫಲ ಕೊಡುತ್ತಿದೆ. ಬ್ರಿಟೀಷರ ವಿರುದ್ಧದ ಆಂದೋಲನಕ್ಕೂ ಸ್ವಾಮೀಜಿಯವರ ಕೊಡುಗೆ ಅಪರಂಪಾರ. ಮೂವತ್ತೊಂಭತ್ತೂವರೆ ವರ್ಷ ಮಾತ್ರ ಬದುಕಿದ ಒಬ್ಬ ತ್ಯಾಗಿ ಏನೆಲ್ಲ ಸಾಧಿಸಬಹುದೆಂಬುದಕ್ಕೆ ವಿವೇಕಾನಂದರು ಜೀವಂತ ಉದಾಹರಣೆ. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಅಕ್ಕ ನಿವೇದಿತಾ ಹೇಳುವಂತೆ ರಾಮಕೃಷ್ಣ ಪರಮಹಂಸರು 5000 ವರ್ಷಗಳ ಹಿಂದಿನ ಭಾರತದ ಪ್ರತಿನಿಧಿಯಾದರೆ ಸ್ವಾಮಿ ವಿವೇಕಾನಂದರು ಭವಿಷ್ಯದ 1500 ವರ್ಷಗಳ ಭಾರತದ ಪ್ರತಿನಿಧಿ. ಆದರೂ ಒಂದು ಪ್ರಶ್ನೆ ಮಾತ್ರ ಹಾಗೆಯೇ ಉಳಿದುಬಿಡುತ್ತದೆ. ಸ್ವಾಮೀಜಿ ಅಷ್ಟು ಚಿಕ್ಕ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದ್ದಾದರೂ ಏಕೆ?!

2

ವಿವೇಕಾನಂದರ ಸಾವಿಗೆ ಅವರ ಬ್ರಹ್ಮಚರ್ಯವೇ ಕಾರಣವಾ? ಕಠಿಣ ಬ್ರಹ್ಮಚಾರಿಗಳೆನಿಸಿಕೊಂಡವರೆಲ್ಲ ಬಲುಬೇಗ ದೇಹತ್ಯಾಗ

ಮಾಡಿಬಿಡುತ್ತಾರಾ? ಅಂತ ಅನೇಕರು ಪ್ರಶ್ನಿಸುತ್ತಾರೆ. ಆದರೆ ಎಂದಿಗೂ ಸ್ವಾಮಿ ವಿವೇಕಾನಂದರು ಮಾಡಿರುವ ತೀವ್ರತರವಾದ ಕೆಲಸವನ್ನು ಗುರುತಿಸುವುದೇ ಇಲ್ಲ. ಐದು ಮುಕ್ಕಾಲು ಅಡಿಯಷ್ಟು ಎತ್ತರ ಇದ್ದ 170 ರಿಂದ 220 ಪೌಂಡ್ಗಳ ನಡುವೆ ತೂಗುತ್ತಿದ್ದ ಚೌಕಭುಜ, ಅಗಲವಾದ ಎದೆ, ಭೀಮಕಾಯವನ್ನು ಹೊಂದಿದ್ದ, ಎಲ್ಲ ಆಟಗಳಿಗೂ ಒಗ್ಗಬಹುದಾದ ಬಲವಾದ ಮಾಂಸಖಂಡಗಳುಳ್ಳ ಬಾಹುಗಳನ್ನು ಪಡೆದಿದ್ದ. ಬಲವಾದ ದವಡೆಯುಳ್ಳ ಗೋಧಿ ಬಣ್ಣದ ಇರಿಯುವ ಕಂಗಳು ಮತ್ತು ಕಮಲದ ಎಸಳುಗಳಂತ ಕಣ್ ರೆಪ್ಪೆಯನ್ನು ಹೊಂದಿದ್ದ ಸ್ವಾಮಿ ವಿವೇಕಾನಂದ ನರೇಂದ್ರನಾಗಿದ್ದಾಗ ಬಲು ಬಲಿಷ್ಠನೇ ಆಗಿದ್ದ. ಅವರ ತಾಯಿಯ ಮಾತನ್ನೇ ಒಪ್ಪಬೇಕೆನ್ನುವುದಾದರೆ ರೋಗಗಳಿಗೀಡಾಗಿ ಸತ್ತು ಶವಸಂಸ್ಕಾರವೂ ಮಾಡಲು ಗತಿಯಿಲ್ಲದ 40 ಕ್ಕೂ ಹೆಚ್ಚು ಶವಗಳಿಗೆ ಮುಕ್ತಿಕಾಣಿಸಿದ್ದವ ಈ ಪುಣ್ಯಾತ್ಮ. ಮಲಗಿದೊಡನೆ ನಿದ್ದೆ ಮಾಡುತ್ತಿದ್ದ ಬೆಳಗಿನ ಜಾವ ಬಲುಬೇಗ ಹಾಸಿಗೆ ಬಿಟ್ಟೇಳುತ್ತಿದ್ದ. ಊಟಕ್ಕೆ ಕುಳಿತರೆ ಆತ ಜೀಣರ್ಿಸಿಕೊಳ್ಳದ ವಸ್ತುವೇ ಇರಲಿಲ್ಲ. ರಾಮಕೃಷ್ಣರ ಬಳಿಗೆ ಹೋಗುತ್ತಿದ್ದಾಗ ದಪ್ಪ ರೊಟ್ಟಿ ವಿಶೇಷ ಬಗೆಯ ಸಾರುಗಳನ್ನು ಮಾಡಿ ಅವರಿಗೆ ಬಡಿಸಬೇಕಿತ್ತಂತೆ. ಯೌವ್ವನ ಕಾಲದಲ್ಲಿ ಒಮ್ಮೆ ಮಲೇರಿಯಾದಿಂದ ಕಾಲೇಜಿಗೆ ಹೋಗುವುದನ್ನು ತಪ್ಪಿಸಿಕೊಂಡದ್ದು ಬಿಟ್ಟರೆ ದೀರ್ಘಕಾಲದ ಅನಾರೋಗ್ಯ ನರೇಂದ್ರನನ್ನು ಕಾಡಿದ್ದೇ ಇಲ್ಲ. ಮೊದಲ ಬಾರಿಗೆ ತಲೆನೋವು ಕಾಣಿಸಿಕೊಂಡದ್ದು ತಂದೆ ವಿಶ್ವನಾಥ ದತ್ತ ಅಕಾಲ ಮೃತ್ಯುವಿಗೆ ಒಳಗಾದಾಗ. ಆಗ ಶುರುವಾಗಿದ್ದು ಮೈಗ್ರೇನ್. ಈ ಸಹಿಸಲಾಗದ ತಲೆನೋವು ಮುಂದೆ ನರೇಂದ್ರ ಜಗದ್ವಿಖ್ಯಾತನಾಗಿ ಮರಳಿ ಬಂದ ನಂತರವೂ ಕಾಡುತ್ತಲಿತ್ತು. ಇಡಿಯ ಮನೆಯ ಜವಾಬ್ದಾರಿಯನ್ನು ತಲೆಯ ಮೇಲೆ ಹೊತ್ತ ಈ ತರುಣ ಸಹಜವಾಗಿಯೇ ಜರ್ಝರಿತನಾಗಿದ್ದ. ರಾಮಕೃಷ್ಣರ ದೇಹತ್ಯಾಗವಾದ ನಂತರವಂತೂ ಹೊಣೆಗಾರಿಕೆ ಹೆಚ್ಚಿತು. ಮನೆ ಬಿಟ್ಟು ಬಂದ ತರುಣರನ್ನು ಅಧ್ಯಾತ್ಮ ಮಾರ್ಗದಿಂದ ವಿಮುಖವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸ್ವತಃ ರಾಮಕೃಷ್ಣರೇ ವಗರ್ಾಯಿಸಿದ್ದರು. ಆದರೆ ಅಷ್ಟೂ ಜನರನ್ನು ಸಲಹಬಲ್ಲಷ್ಟು ಭೌತಿಕ ಸಂಪತ್ತು ಯಾರ ಬಳಿಯೂ ಇರಲಿಲ್ಲ. ಒಂದೆಡೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ. ಮತ್ತೊಂದೆಡೆ ಸಾಧನೆಯಲ್ಲಿ ಕಿಂಚಿತ್ತೂ ಕೊರತೆಯಾಗದಂತೆ ಮಾರ್ಗದರ್ಶನ ಮಾಡಬೇಕಾದ ಸವಾಲು. ಇವು ಸ್ವಾಮಿಜಿಯೇ ಹೇಳಿಕೊಳ್ಳುವಂತೆ ಬಾರಾನಗರ್ನಲ್ಲಿ ಇರುವಾಗ ಊಟಕ್ಕೂ ಗತಿಯಿರಲಿಲ್ಲ. ಅಕ್ಕಿ, ಜೊತೆಗೆ ಒಂದಷ್ಟು ಬೇವಿನ ಸೊಪ್ಪು. ಬೆಳಿಗ್ಗೆ 4 ಗಂಟೆಗೆ ಧ್ಯಾನಕ್ಕೆ ಕುಳಿತರೆಂದರೆ ಅನೇಕ ಬಾರಿ ಸಂಜೆಯಾದುದ್ದೇ ತಿಳಿಯುತ್ತಿರಲಿಲ್ಲ. ಬೌದ್ಧಿಕ ಸ್ತರದಲ್ಲಿ ಸೋದರ ಸಂನ್ಯಾಸಿಗಳನ್ನು ಉನ್ನತ ಮಟ್ಟದಲ್ಲಿರಸಬೇಕಾದ ಹೊಣೆಗಾರಿಕೆಯೂ ಸ್ವಾಮೀಜಿಯದ್ದೇ ಆಗಿತ್ತು. ಹೀಗಾಗಿ ಅಧ್ಯಯನ, ಅಧ್ಯಾಪನ ಇವುಗಳಲ್ಲೆಲ್ಲಾ ಅವರು ಸದಾ ಎಚ್ಚರದಿಂದಿರಬೇಕಿತ್ತು. ಈ ಹೊತ್ತಿನಲ್ಲೇ ಅವರಿಗೆ ಅಮರಿಕೊಂಡ ಕಾಯಿಲೆ ಜ್ವರ. ಊಟಕ್ಕೇ ಗತಿಯಿಲ್ಲದವರಿಗೆ ಜ್ವರ ಬಂತೆಂದರೆ ಸ್ಥಿತಿ ಹೇಗಿದ್ದಿರಬಹುದು ಊಹಿಸಿ! ತೀವ್ರತರವಾಗಿ ಅನಾರೋಗ್ಯಕ್ಕೆ ತುತ್ತಾದ ಸ್ವಾಮೀಜಿಯನ್ನು ಕಂಡು ಸೋದರ ಸನ್ಯಾಸಿ ಪ್ರೇಮಾನಂದರು ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಆಗ ತರುಣ ಸಂನ್ಯಾಸಿ ಏನೆಂದು ಹೇಳಿದ್ದ ಗೊತ್ತೇ ‘ಅಳಬೇಡ; ಈಗಲೇ ನಾನು ಸಾಯುವುದಿಲ್ಲ. ಬಹಳ ಕೆಲಸ ಬಾಕಿ ಇದೆ. ಮುಗಿಸಿಯೇ ಸಾಯೋದು’ ಅಂತ. ನಾವೆಲ್ಲ ಅಂದುಕೊಂಡಂತೆ ಸ್ವಾಮೀಜಿ ಮುವತ್ತೊಂಭತ್ತು ವರ್ಷಕ್ಕೆ ತೀರಿಕೊಂಡಿದ್ದಲ್ಲ, ಬದಲಿಗೆ ಇಚ್ಛಾಮರಣಿಯಾಗಿ ತಾವೇ ದೇಹವನ್ನು ತ್ಯಾಗ ಮಾಡಿದರು. ಬಾರಾನಗರ್ನ ಹೊತ್ತಿನಲ್ಲಿ ಅಮರಿಕೊಂಡಿದ್ದ ಜ್ವರ ಸ್ವಾಮೀಜಿಯವರನ್ನು ಕೊನೆಯವರೆಗೂ ಕಾಡಿದೆ. ಅದರೊಟ್ಟಿಗೆ ಅದೇ ಹೊತ್ತಲ್ಲಿ ಅವರಿಗೆ ಆಮಶಂಕೆ ಶುರುವಾಯ್ತು. ಪರೀಕ್ಷೆ ಮಾಡಿದ ವೈದ್ಯರು ರೋಗಕ್ಕೆ ಗುರುತಿಸಿದ ಕಾರಣವೇನು ಗೊತ್ತೇ? ಮೀನು-ಮಾಂಸ ತಿನ್ನುವ ಅಭ್ಯಾಸವಿದ್ದ ಸ್ವಾಮಿ ವಿವೇಕಾನಂದರು ಅವೆಲ್ಲವನ್ನು ತ್ಯಾಗ ಮಾಡಿ ಅತ್ಯಂತ ಕಠಿಣವಾದ ಆಹಾರ ಪದ್ಧತಿಗೆ ಸಾಧನೆಯ ನೆಪದಲ್ಲಿ ತಮ್ಮ ದೇಹವನ್ನು ಒಗ್ಗಿಸಿಕೊಂಡಿದ್ದರು. ಕೆಲವು ಅಯೋಗ್ಯರಿಗೆ ವಿವೇಕಾನಂದರಲ್ಲಿ ತಿಂಡಿಪೋತ ಕಾಣುತ್ತಾನೆ. ಸಾಧನೆಯ ಹೊತ್ತಲ್ಲಿ ಬುದ್ಧ ಮಧ್ಯಮ ಮಾರ್ಗವನ್ನು ಬೋಧಿಸಿದಾಗಲೂ ಅನೇಕರು ಬುದ್ಧನ ಕುರಿತಂತೆ ಹೀಗೇ ಹೇಳಿದ್ದರು. ಅಲ್ಲಿರುವಾಗಲೇ ಸ್ವಾಮೀಜಿಗೆ ಉರಿ ಮೂತ್ರ ಸಮಸ್ಯೆ ಶುರುವಾಗಿತ್ತು. ಟಾನ್ಸಿಲೈಟೀಸ್ ಮತ್ತು ಅಜೀರ್ಣ ರೋಗ ಹೊಸದಾಗಿ ಸೇರ್ಪಡೆಯಾಗಿತ್ತು. ಜೀವನದ್ದುದ್ದಕ್ಕೂ ಸಮಸ್ಯೆಯಾಗಿ ಕಾಡಿದ್ದ ಕಿಬ್ಬೊಟ್ಟೆ ನೋವೂ ಕೂಡ ಇದೇ ಹೊತ್ತಲ್ಲಿ ಆರಂಭಗೊಂಡಿದ್ದು. ನೆನಪಿಡಿ. ಇವಿಷ್ಟೂ ಕಾಯಿಲೆಗಳಿಂದ ಸ್ವಾಮಿಜಿ ಬಳಲುತ್ತಿದ್ದಾಗ ಅವರಿನ್ನೂ ಚಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ಕಾಲಿಟ್ಟಿರಲಿಲ್ಲ!

ಇಂಥ ಸವಾಲಿನ ದೇಹವನ್ನು ಹೊತ್ತುಕೊಂಡು ಪರಿವ್ರಾಜಕರಾಗಿ ಯಾತ್ರೆಯನ್ನು ಆರಂಭಿಸಿದ ಸ್ವಾಮೀಜಿ ದಾರಿಯುದ್ದಕ್ಕೂ ಸಮಸ್ಯೆಗಳನ್ನೆದುರಿಸಿದರು. ಆದರೆ ಎಲ್ಲಿಯೂ ಅದು ಇತರರಿಗೆ ಬಾಧೆಯಾಗದಂತೆ ನೋಡಿಕೊಂಡರು. ಅವರು ತಿರುಗಾಟಕ್ಕೆ ಹೊರಟಾಗಿನ ದಾಖಲೆಗಳನ್ನು ನೀವೇನಾದರೂ ಓದಿದರೆ ಸ್ವಾಮೀಜಿಯ ದೇಹ ಅದಾಗಲೇ ಇಷ್ಟು ಜರ್ಝರಿತವಾಗಿತ್ತೆನ್ನುವುದನ್ನು ಒಪ್ಪಲಾರಿರಿ. ಈ ಯಾತ್ರಯೆ ಹೊತ್ತಲ್ಲೇ ಸ್ವಾಮೀಜಿಗೆ ಬೆನ್ನಹುರಿಯ ಆಳದ ನೋವು ಶುರುವಾಗಿದ್ದು. ಹೃಷೀಕೇಶದಲ್ಲಿ ಮಲೇರಿಯಾದಿಂದ ಬಳಲಿದ ಸ್ವಾಮೀಜಿ ಉಳಿಯುವುದೇ ಅನುಮಾನವೆಂದು ಜೊತೆಗಾರರು ಕಣ್ಣೀರಿಟ್ಟಾಗಿತ್ತು. ಅಲ್ಲಿ ಸ್ವಾಮೀಜಿಗೆ ಆರೋಗ್ಯ ತಪ್ಪಿದುದರ ಲಾಭವೇನು ಗೊತ್ತೇ? ಮುಂದೆ ವಿಶ್ವವಿಖ್ಯಾತ ವಿವೇಕಾನಂದ ತನ್ನ ಶಿಷ್ಯನಿಗೆ ಆದೇಶ ಕೊಟ್ಟು ಸಾಧುಗಳ ಆರೋಗ್ಯವನ್ನು ನೋಡಿಕೊಳ್ಳಲೆಂದೇ ಆಸ್ಪತ್ರೆಯೊಂದನ್ನು ತೆರೆಯಲು ಪ್ರೇರೇಪಿಸಿದರು. ಇಂದಿಗೂ ಹರಿದ್ವಾರದ ಕನ್ಖಲ್ನಲ್ಲಿ ರಾಮಕೃಷ್ಣ ಮಿಷನ್ ಕಟ್ಟಿರುವಂತಹ ಆಸ್ಪತ್ರೆ ಸಾಧುಗಳಿಗೆ ಉಚಿತ ಮತ್ತು ಪ್ರೇಮಪೂರ್ಣ ಚಿಕಿತ್ಸೆಯನ್ನು ನೀಡುತ್ತಿದೆ. ನಮಗೆ ರೋಗ ಬಂದರೆ ವೈದ್ಯರಿಗೆ ಹಣವಾಗಬಹುದು. ಸ್ವಾಮೀಜಿಯ ಆರೋಗ್ಯ ಹಾಳಾಗಿದ್ದರಿಂದ ಜಗತ್ತಿಗೇ ಒಳಿತಾಯ್ತು.

3

ದಕ್ಷಿಣದ ಯಾತ್ರೆಗೆಂದು ಬಂದ ಸ್ವಾಮೀಜಿ ಭಾರತದ ಒಟ್ಟಾರೆ ಸ್ಥಿತಿಗತಿಗಳನ್ನು ಕಂಡು ನೊಂದರು. ಬೆಂದು ಹೋದರು. ಸಮುದ್ರಕ್ಕೆ ಜಿಗಿದು ಬಂಡೆಯ ಮೇಲೂ ಕುಳಿತರು. ತಾಯಿ ಭಾರತಿಯ ವೈಭವದ ಕನಸನ್ನು ಕಂಡು ಅದೆಷ್ಟು ಕಣ್ಣೀರಿಟ್ಟರೋ ದೇವರೇ ಬಲ್ಲ. ಆಗಲೇ ಸ್ವಾಮಿಜಿಗೆ ಪಶ್ಚಿಮ ದಿಕ್ಕಿನಲ್ಲೊಂದು ಹೊಳಪು ಕಂಡಿತು. ಸ್ವಾಮೀಜಿ ತಮ್ಮ ಅದಾಗಲೇ ಒಳಗಿಂದೊಳಗೇ ಕ್ಷೀಣಪ್ರಾಣವಾಗಿದ್ದ ದೇಹವನ್ನು ಅಮೇರಿಕಾಗೆ ಹೊತ್ತೊಯ್ಯಲು ಸಜ್ಜಾಗಿದ್ದು. ಅದೊಂದು ಇಚ್ಛಾಶಕ್ತಿ ವೈಭವದ ದರ್ಶನವಷ್ಟೇ. ಅಮೇರಿಕಾದ ಯಾತ್ರೆಯಲ್ಲಿ ವಿವೇಕಾನಂದರನ್ನು ಕಂಡವರ್ಯಾರಿಗೂ ಅವರೊಳಗೆ ಈ ಬಗೆಯ ಸದಾ ಕಾಡುವ ಅನಾರೋಗ್ಯದ ಲಕ್ಷಣಗಳಿವೆ ಎನಿಸುತ್ತಿರಲಿಲ್ಲ. ವಿದೇಶದಲ್ಲಿ ನಿರಂತರ ವೇದಾಂತ ಪ್ರಚಾರ, ಭಾರತದ ಕುರಿತಂತೆ ಇರುವ ತಪ್ಪು ಕಲ್ಪನೆಗಳನ್ನು ಓಡಿಸುವ ಪ್ರಯತ್ನ, ಮಿಷನರಿಗಳ ಕುತಂತ್ರವನ್ನು ಎದುರಿಸುವಿಕೆ, ಭಾರತದ ಅಭಿವೃದ್ಧಿಗಾಗಿ ಹಣ ಸಂಗ್ರಹ ಇವೆಲ್ಲವೂ ಪುರಸೊತ್ತಿಲ್ಲದಂತೆ ನಡೆಯುತ್ತಿತ್ತು. ಮುಂದೊಮ್ಮೆ ಢಾಕಾದಲ್ಲಿ ಭಕ್ತನೊಬ್ಬ ಸ್ವಾಮೀಜಿಯನ್ನು ‘ಈ ವಯಸ್ಸಿಗೇ ನಿಮ್ಮ ಆರೋಗ್ಯ ಹದಗೆಡಲು ಕಾರಣವೇನು?’ ಎಂದು ಪ್ರಶ್ನಿಸಿದಾಗ, ಸ್ವಾಮೀಜಿ ಹೇಳಿದ್ದೇನು ಗೊತ್ತೇ? ‘ಪಶ್ಚಿಮದಲ್ಲಿ ಕೆಲಸ ಮಾಡುವಾಗ ನನಗೊಂದು ದೇಹವಿತ್ತು ಎಂಬುದನ್ನೂ ನಾನು ಮರೆತುಬಿಟ್ಟಿದ್ದೆ. ಅದಕ್ಕೀಗ ಪ್ರತಿಫಲ ಉಣ್ಣುತ್ತಿದ್ದೇನೆ’ ಅಂತ. 1896 ರಲ್ಲಿ ವಿದೇಶದ ಮಿತ್ರರೊಬ್ಬರ ಮನೆಯಲ್ಲಿ ಕುಳಿತಿದ್ದಾಗ ಮಾತನಾಡುತ್ತಲೇ ಇದ್ದ ಸ್ವಾಮೀಜಿ ಇದ್ದಕ್ಕಿದ್ದಂತೆ ಮುಖ ಕಿವುಚಿಕೊಂಡರು. ಅವರ ಕೈ ಎದೆಯ ಮೇಲಿತ್ತು. ಸ್ವಲ್ಪ ಹೊತ್ತು ವಿಪರೀತವಾದ ನೋವು ಕಾಡುತ್ತಿದೆ ಎಂಬಂತಿತ್ತು ಅವರ ಮುಖಭಾವ. ಸುಧಾರಿಸಿಕೊಂಡು ಸಹಜ ಭಾವಕ್ಕೆ ಮರಳಿದಾಗ ಜೊತೆಗಿದ್ದವರು ಅಚ್ಚರಿಯಿಂದ ‘ಏನಾಯ್ತು?’ ಎಂದರು. ತಕ್ಷಣ ಸ್ವಾಮೀಜಿ ‘ಹೃದಯದ ನೋವು. ನಮ್ಮ ತಂದೆ ಕೂಡ ಹೀಗೇ ತೀರಿಕೊಂಡಿದ್ದು. ನಮ್ಮ ರಕ್ತದಲ್ಲಿ ಅದು ಹರಿಯುತ್ತಿದೆ’ ಎಂದರು. ಇದು ಅವರ ಮೊದಲ ಹೃದಯಾಘಾತ!

ಮರಳಿ ಬಂದರಲ್ಲಾ ಸ್ವಾಮೀಜಿ ಭಾರತಕ್ಕೆ ಅಧಿಕೃತ ದಾಖಲೆಗಳನ್ನು ನಂಬುವುದಾದರೆ ಅವರ ಮೊದಲ ಸಕ್ಕರೆ ಕಾಯಿಲೆಯ ರೋಗ ಗುರುತಿಸಲ್ಪಟ್ಟಿದ್ದೇ ಆಗ. ಒಮ್ಮೆ ಈ ರೋಗ ಬಂತೆಂದರೆ ಅದರೊಟ್ಟಿಗೆ ಇನ್ನೊಂದಷ್ಟು ರೋಗಗಳನ್ನು ಎಳೆದು ತರುತ್ತದೆ ಎಂಬುದನ್ನು ಬಿಡಿಸಿ ವಿವರಿಸಬೇಕಿಲ್ಲ. ಕೊಲೊಂಬೋದಿಂದ ಆಲ್ಮೋರಾಕ್ಕೆ ಕಠಿಣ ಯಾತ್ರೆಯನ್ನು ಮಾಡಿದ ಸ್ವಾಮೀಜಿ ಬಂಗಾಳಕ್ಕೆ ಬಂದೊಡನೆ ಸೋದರ ಸಂನ್ಯಾಸಿಗಳಿಗೆ ಹೇಳಿದ್ದೇನು ಗೊತ್ತಾ? ‘6 ತಿಂಗಳಾದರೂ ವಿಶ್ರಾಂತಿ ಪಡೆಯಿದಿದ್ದರೆ ಈ ದೇಹ ಮುಗಿದೇ ಹೊಗುತ್ತದೆ’ ಅಂತ. ಹಾಗಂತ ಪುಣ್ಯಾತ್ಮ 6 ತಿಂಗಳು ಸುಮ್ಮನಿರಲಿಲ್ಲ. ಸೋದರ ಸಂನ್ಯಾಸಿಗಳಿಗೆ ಪ್ರೇರಣೆ ಕೊಡುತ್ತಾ, ವಿದೇಶದಿಂದ ಬಂದ ಶಿಷ್ಯರಿಗೆ ಶಕ್ತಿ ತುಂಬತ್ತಾ, ಇತರರ ಸೇವೆಗೆ ಅವರನ್ನು ಪ್ರಚೋದಿಸಿದರು. ಪ್ಲೇಗ್ ಮಾರಿ ಬಂಗಾಳವನ್ನು ಆವರಿಸಿಕೊಂಡಿದ್ದಾಗ ಅದರಿಂದ ಜನರನ್ನು ಪಾರು ಮಾಡಲೋಸುಗ ತಮ್ಮೆಲ್ಲಾ ಪ್ರಯತ್ನವನ್ನು ಹಾಕಿದ್ದರು. ಸೋದರ ಸಂನ್ಯಾಸಿಗಳು ಸೇವಾ ಕಾರ್ಯಕ್ಕಿಂತ ಧ್ಯಾನ-ಜಪಗಳಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದಾಗ ಕೋಪಿಸಿಕೊಳ್ಳುತ್ತಿದ್ದರು. ತಮ್ಮ ಶಿಷ್ಯರಿಗೇ ಈ ಜವಾಬ್ದಾರಿಯನ್ನು ಹಂಚಿ ಹೆಚ್ಚಿನ ಕೆಲಸವನ್ನು ಅಪೇಕ್ಷಿಸುತ್ತಿದ್ದರು. ದೇಹಾರೋಗ್ಯ ಪೂತರ್ಿ ಹದಗೆಟ್ಟಾಗ ವಿದೇಶಕ್ಕೆ ಹೋದರೆ ಸರಿಯಾದೀತೇನೋ ಎಂದು ಭಾವಿಸುತ್ತಿದ್ದ ಸ್ವಾಮೀಜಿ ಆರೋಗ್ಯ ಸ್ವಲ್ಪವಾದರೂ ಸುಧಾರಿಸಿದೊಡನೆ ‘ಕೆಲಸ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ಹೊಸ ಉತ್ಸಾಹ ತುಂಬಿಕೊಂಡಿದ್ದೇನೆ. ಸಾಯಲೇಬೇಕಿದ್ದರೆ ಆಲಸ್ಯದಿಂದೇಕೆ ಸಾಯಬೇಕು? ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದೇ ಲೇಸು’ ಎಂದು ಮತ್ತೆ ಕೆಲಸಕ್ಕೆ ಧುಮುಕಿಬಿಡುತ್ತಿದ್ದರು. ‘ನಾನು ಸತ್ತರೂ ನನ್ನ ಎಲುಬುಗಳು ಮಹತ್ತರವಾದುದನ್ನೇ ಸಾಧಿಸುತ್ತವೆ’ ಎಂದು ಉದ್ಘೋಷಿಸುತ್ತಿದ್ದರು. ಈ ಹೊತ್ತಿನಲ್ಲೇ ಅವರಿಗೆ ಅಸ್ತಮಾ ತೀವ್ರವಾಗಿತ್ತು. ಅಮರನಾಥದ ಕಠಿಣ ಯಾತ್ರೆಯನ್ನು ಸಹಿಸಲಾಗದ ಚಳಿಯನ್ನು ಅನುಭವಿಸುತ್ತಾ ಮುಗಿಸಿದ ಸ್ವಾಮೀಜಿ ಅಲ್ಲಿಂದ ಬರುವಾಗ ಕಣ್ಣಿನ ದೋಷವನ್ನು ಹೊತ್ತು ತಂದಿದ್ದರು. ಅವರ ಬಲಗಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿ ಕೆಂಪಾದ ಚುಕ್ಕೆಯಾಗಿತ್ತು. ಕಾಲ ಕ್ರಮದಲ್ಲಿ ಬಲಗಣ್ಣಿನ ದೃಷ್ಟಿಯೇ ಮಂದವಾಗುತ್ತಾ ಹೋಯ್ತು. ಆತ ಅದಕ್ಕೂ ಕಣ್ಣೀರಿಡಲಿಲ್ಲ. ‘ನಾನೀಗ ಒಕ್ಕಣ್ಣು ಶುಕ್ರಾಚಾರಿಯಾಗಿದ್ದೇನೆ’ ಎಂದು ತಮಾಷೆ ಮಾಡುತ್ತಿದ್ದರು. ತಾನು ಭುವಿಗೆ ಬಂದ ಕೆಲಸ ಮುಗಿದಿದೆ ಎಂದು ಅವರಿಗೆ ತೀವ್ರವಾಗಿ ಅನಿಸಲಾರಂಭಿಸಿತ್ತು. ಅವರೀಗ ಬಹುಪಾಲು ಸಮಯವನ್ನು ಜನರೊಂದಿಗೆ ಭೇಟಿ ಮಾಡುತ್ತ, ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತ ಕಾಲ ಕಳೆಯುತ್ತಿದ್ದರು. ದೇಹವೇ ಅವರಿಗೀಗ ಹೊರೆ. ಅದನ್ನು ಹೇಗಾದರೂ ಮಾಡಿ ಕಿತ್ತೆಸೆದರೆ ಸೂಕ್ಷ್ಮ ರೂಪದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವ ಬಗ್ಗೆ ಅವರಿಗೆ ವಿಶ್ವಾಸ ಬಲಿತಿತ್ತು. ಅದನ್ನು ಸೋದರ ಸನ್ಯಾಸಿಗಳ ಬಳಿ ಹೇಳಿಕೊಂಡಿದ್ದರು ಕೂಡ.

1

ಇತ್ತ ತನ್ನ ತಾಯಿ ಅನುಭವಿಸುತ್ತಿದ್ದ ಸಂಕಟಗಳು ಅವರ ಹೃದಯವನ್ನು ಚೂರಿಯಂತೆ ಇರಿಯುತ್ತಿದ್ದವು. ತೀರಿಕೊಳ್ಳುವ ಎರಡು ದಿನಕ್ಕೂ ಮುಂಚೆ ಕೋಟರ್ಿನಲ್ಲಿದ್ದ ಕುಟುಂಬದ ಎಲ್ಲ ವ್ಯಾಜ್ಯಗಳನ್ನು ಪರಿಹರಿಸಿ ತನ್ನ ತಾಯಿಗೆ ಬದುಕಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಟ್ಟು ಪಂಚಾಂಗದಲ್ಲಿ ಜುಲೈ ನಾಲ್ಕನ್ನೇ ಆರಿಸಿಕೊಂಡು ಬಯಸಿಯೇ ಪ್ರಾಣತ್ಯಾಗ ಮಾಡಿದರು ಸ್ವಾಮೀಜಿ.

ನಮಗೆಲ್ಲಾ ಬದುಕೇ ಭಾರ. ಆದರೆ ಸ್ವಾಮೀಜಿಯ ಕಾರ್ಯವ್ಯಾಪ್ತಿಗೆ ದೇಹ ಭಾರವೆನಿಸಿತು. ಅವರು ಅದನ್ನು ಹರಿದ ಬಟ್ಟೆ ಎಸೆಯುವಂತೆ ಎಸೆದು ಚೈತನ್ಯವಾಗಿ ಪ್ರತಿಯೊಬ್ಬರಲ್ಲೂ ಸೇರಿಕೊಂಡು ಮಹತ್ವದ ಕಾರ್ಯ ಮಾಡಿಸುತ್ತಿದ್ದಾರೆ. ನಾವಾದರೋ ನಮ್ಮ ಏಳ್ಗೆಗೆ ತಮ್ಮ ದೇಹವನ್ನೂ ಲೆಕ್ಕಿಸದೇ ದುಡಿದು ಅದನ್ನು ಜರ್ಝರಿತವಾಗಿಸಿಕೊಂಡ ಮಹಾತ್ಮನ ಔದಾರ್ಯವನ್ನು ಮರೆತು ಕುಳಿತಿದ್ದೇವೆ.

 

 

Comments are closed.