ವಿಭಾಗಗಳು

ಸುದ್ದಿಪತ್ರ


 

Archive for January, 2008

ಮಗೂ, ಶ್ವೇತಕೇತೂ….

Sunday, January 20th, 2008

ಅಹಂಕಾರದಿಂದ ಬೀಗಿದ ಮಗ ಅಪ್ಪನೆದುರು ನಿಂತ. “ತಂದೆ, ನಾ ಎಲ್ಲ ಕಲಿತಿರುವೆ ನಿನಗಿಂತ ನಾ ತಿಳಿದವನೀಗ” ಎಂದ. ಅಪ್ಪ ನಕ್ಕ, “ಓಹೋ! ಯಾವುದನರಿತು ಮತ್ತೇನೂ ಕಲಿಯಬೇಕಿಲ್ಲವೋ ಅದನ್ನೂ…. ಅದನ್ನೂ ಅರಿತುಬಿಟ್ಟೆಯಾ!?” ಮಗ ತಬ್ಬಿಬ್ಬು. ಅಪ್ಪ ಕೇಳುತ್ತಲೇ ಹೋದ, ಯಾರು ನೀನು? ನೀನು ಯಾರು? ದೇಹ ನೀನಾದರೆ, ನಿನ್ನ ಶವ ನೀನಾ? ಮನವು ನೀನಾದರೆ, ಬುದ್ಧಿ ಯಾರದು? ಬುದ್ಧಿ ನೀನಾದರೆ, ಚೈತನ್ಯವದೆಲ್ಲಿ? ತಿಳಿಯಲಿರುವುದದೆಷ್ಟು? ಇದನರಿತರೆ ಉಳಿಯುವುದು ಇನ್ನೆಷ್ಟು!? ಮಗೂ ಶ್ವೇತಕೇತು, ನಿನ್ನನರಿ. ನಿನ್ನನರಿ, ನಿನ್ನನರಿ. ಅದಕ್ಕಾಗಿ ‘ನಿನ್ನ’ ಮರಿ!

ವಾಲ್ ಮಾರ್ಟ್ ಮತ್ತು ಇತಿಹಾಸದ ಪಾಠ…

Friday, January 11th, 2008

ಎಲ್ಲರಿಗೂ ನಮಸ್ತೇ. ವಿಕ್ರಮ್ ಹತ್ವಾರ್ ಅವರು ತಮ್ಮ ಕಮೆಂಟಿನಲ್ಲಿ ವಾಲ್ ಮಾರ್ಟ್ ಬಗ್ಗೆ ಮಾತನಾಡಿದ್ದರು. ಹೀಗೆ ವಾಲ್ ಮಾರ್ಟ್ ವಿಷಯ ಬಂದಾಗ ನಾನು ಹೇಳಲೇಬೇಕಾದ ಒಂದಷ್ಟಿದೆ. ಅದನ್ನೀಗ ಇಲ್ಲಿ ನಿಮ್ಮೆದುರಿಡುವೆ. ನಿಮ್ಮಲ್ಲಿ ಬಹುತೇಕರಿಗೆ ಶೂ ಕಂಪೆನಿಯ ಸೇಲ್ಸ್ ಮನ್ ಗಳಿಬ್ಬರು ಆಫ್ರಿಕಾಕ್ಕೆ ಹೋದ ಹಳೆಯ ಕಥೆ ಗೊತ್ತಿರಬಹುದು. ಹಾಗೆ ಹೋದ ಇಬ್ಬರಲ್ಲಿ ಒಬ್ಬ ವಾಪಸು ಬಂದು ಮ್ಯಾನೇಜರನ ಬಳಿ ದೂರಿದ. “ಅಲ್ಲಿನ ಜನರಿಗೆ ಶೂ ಅಂದರೇನೆಂದೇ ಗೊತ್ತಿಲ್ಲ, ಅಲ್ಲಿ ವ್ಯಾಪಾರ ಕಷ್ಟ!” ಸ್ವಲ್ಪ ಹೊತ್ತಿನಲ್ಲೇ ಮತ್ತೊಬ್ಬ ಏದುಸಿರು […]

ರಾಮಕೃಷ್ಣಾಶ್ರಮದಲ್ಲಿ ಪುಸ್ತಕ (ಪ್ರ)ದರ್ಶನ

Sunday, January 6th, 2008

ಸ್ವಾಮಿ ವಿವೇಕಾನಂದ! ಅದು ಬರಿಯ ಹೆಸರಲ್ಲ. ಅದೊಂದು ಶಕ್ತಿ. ಅಸೀಮ ಸ್ಫೂರ್ತಿ. ಅವರನ್ನು ಆಲಿಸುತ್ತ, ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ… ಅದು ರಾಷ್ಟ್ರ ಪ್ರೇಮದ ಮಾತಾಗಿರಲಿ, ಸಮಾಜ ಸೇವಾ ಕ್ಷೇತ್ರವಿರಲಿ, ಅಥವಾ ಸಾಹಿತ್ಯ ಕ್ಷೇತ್ರವೇ ಆಗಿರಲಿ… ಎಲ್ಲೆಲ್ಲೂ ಹೊಸ ಹುಮ್ಮಸ್ಸಿನ ಅಲೆ ಎಬ್ಬಿಸುತ್ತ ಉತ್ಕೃಷ್ಟತೆಯ ಪತಾಕೆ ಹಾರಿಸುತ್ತ ಮೆರೆಯುವ ಏಕೈಕ ಹೆಸರು, ಸ್ವಾಮಿ ವಿವೇಕಾನಂದ. ನಾವು ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ವಿವೇಕಾನಂದರ ಮಾತುಗಳು […]

ಅನುಭಾವ ಬಿಂದುಗಳು…

Wednesday, January 2nd, 2008

– 1 –  ಕಾಣದ ನಿನ್ನ ಅರಸಿ ಅರಸಿಯೇ ಬೇಸತ್ತೆ. ಊಹೂಂ…! ಇಲ್ಲಿಯೂ ದಕ್ಕಲಿಲ್ಲ ಅಲ್ಲೂ ದಕ್ಕಲಿಲ್ಲ. ಮಾಡಿಟ್ಟ ಅಡುಗೆಯ ಬಿಟ್ಟು ಭಿಕ್ಷಾಟನೆಗೆ ಹೋಗಿದ್ದೇ ತಪ್ಪಾಯಿತೇನೋ? – 2 – ಮಾತಿಗೆ ನಿಲುಕದವನು ಎನ್ನುತ್ತಲೇ ಮಾತಾಡುತ್ತಾರೆ ನಿನ್ನ ಬಗ್ಗೆ ರೇಜಿಗೆ ಹುಟ್ಟುವುಷ್ಟು ನಿನ್ನ ಕಂಡ ಮೇಲೆ ಮಾತಾಡಲು ಅವರಿಗೆ ಅದೆಲ್ಲಿ ಪುರುಸೊತ್ತು!? – 3 –  ಹೂವು ಚೆಂದ, ಸುಂದರ ಅನ್ನುತ್ತಲೇ ಉಳಿದೆವು, ದುಂಬಿ ಹೀರಿತು ಮಕರಂದ. ನಿನ್ನ ಬಗ್ಗೆ ಹೇಳಿದ್ದೇ ಬಂತು, ಅವ ಸವಿದ ನಿನ್ನಂದ! […]