ವಿಭಾಗಗಳು

ಸುದ್ದಿಪತ್ರ


 

Archive for November, 2008

ಅಮೆರಿಕನ್ನರಿಂದ ಪಾಠ ಕಲಿಯಲಿದು ಸಕಾಲ…

Friday, November 28th, 2008

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ. ಭಾರತದ ಹಿಂದಿನ ವೈಭವವನ್ನು […]

ಮುಂದೇನು ಮಾಡಬಹುದು?

Wednesday, November 19th, 2008

ಶ್ವೇತಾಳ ಸಮಸ್ಯೆಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ. ಬೇಸರದ ಸಂಗತಿಯೆಂದರೆ, ಹಾಗೆ ಸಧ್ಯಕ್ಕೆ ಹಣ ನೀಡು, ಮುಂದೆ ಹೀಗಾಗದಂತೆ ತಡೆಯಲು ಖಂಡಿತವಾಗಿಯೂ ಪ್ರಯತ್ನ ಪಡುವೆವು ಎಂದು ಹೇಳಿದ ನಂತರ ಆಕೆ ಕರೆ ಮಾಡಲೇ ಇಲ್ಲ. ಬಹಳ ನಿರಾಸೆಯಾಗಿರಬೇಕು. ಪ್ರತಿರೋಧ, ಹೋರಾಟಗಳು ತತ್ ಕ್ಷಣದ ಪ್ರಕ್ರಿಯೆ ಆಗಿಬಿಟ್ಟರೆ ಅದರಲ್ಲಿ ಜೋಶ್ ಏನೋ ಇರುವುದು.. ಆದರೆ ಅದು ದೀರ್ಘಕಾಲಿಕ ಪರಿಣಾಮ ಉಳಿಸುವುದು ಕಷ್ಟವೇ. ಈಗ ನಾನಂತೂ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಆದರೆ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಕೇವಲ ಒಬ್ಬ ಶಿಕ್ಷಕನ ವಿರುದ್ಧ ಹೋರಾಡಲೂ […]

ಶ್ವೇತಾಳಿಗೆ ಏನುತ್ತರಿಸಲಿ ಹೇಳಿ ಪ್ಲೀಸ್…

Thursday, November 13th, 2008

ಮೊನ್ನೆ ಮಧ್ಯಾಹ್ನ ಎರಡು ಗಂಟೆಗೆ ಬನಶಂಕರಿಯ ಡಿಪ್ಲೊಮಾ ಕಾಲೇಜೊಂದರಲ್ಲಿ ಓದುತ್ತಿರುವ ಶ್ವೇತಾ ಕರೆ ಮಾಡಿದ್ದಳು. ‘ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡೋದು ಹೇಗೆ ಸಾರ್?” ಎಂದಳು. ನಾನು ಎಂದಿನಂತೆ, “ಮೊದಲು ನಾವು ಶುದ್ಧವಾಗೋಣ. ನಮ್ಮ ಕೈಯಿಂದ ಅಚಾತುರ್ಯ ನಡೆಯದಿದ್ದರಾಯ್ತು” ಎಂದೆ. ಅದರರ್ಥ, ಲಂಚ ತೊಗೋಳೋದೂ ತಪ್ಪು, ಕೊಡೋದೂ ತಪ್ಪು. ಇಷ್ಟಾದ ಮೇಲೆ ಆ ಹುಡುಗಿ ಹೇಳಿದ ಘಟನೆ ನನ್ನನ್ನ ವಿಷಾದಕ್ಕೆ ನೂಕಿತು. ಅವತ್ತು ಬೆಳಗ್ಗೆ ಆಕೆಗೆ ಪ್ರ್ಯಾಕ್ಟಿಕಲ್ ಎಗ್ಸಾಮ್ ಇತ್ತಂತೆ. ಅದನ್ನು ‘ಟೈಮಿಂಗ್’ ಅಂತ ಕರೀತಾರೆ. ನಿಗದಿತ ಸಮಯದಲ್ಲಿ […]